Buy Gold
Sell Gold
Daily Savings
Round-Off
Digital Gold
Instant Loan
Credit Score
Nek Jewellery
ನಿಮ್ಮ ಆರ್ಥಿಕ ಗುರಿಗಳು, ಎಸ್.ಎಂ.ಎ.ಅರ್.ಟಿ (ಸ್ಮಾರ್ಟ್) ಗುರಿಗಳನ್ನು ಗೊತ್ತುಪಡಿಸುವುದು ಹಾಗೂ ತಲುಪುವುದು ಹಾಗೂ ಹೆಜ್ಜೆಹೆಜ್ಜೆಯಾಗಿ ಒಂದು ಒಳ್ಳೆ ತಂತ್ರವನ್ನು ರೂಪಿಸುವುದು ಹೇಗೆ ಎಂಬುವುದರ ಬಗ್ಗೆ ಎಲ್ಲವನ್ನೂ ತಿಳಿಯಿರಿ.
ನಿಮ್ಮ ಜೀವನದ ಗುರಿಗಳು ಯಾವುವು? ನಿಮಗೆ ಹೊಸ ಕಾರು ಬೇಕೇ? ನಿಮ್ಮ ಸ್ವಂತ ಮನೆ? ನಿಮ್ಮ ಮಕ್ಕಳು ಉತ್ತಮ ಕಾಲೇಜುಗಳಿಗೆ ಹೋಗಬೇಕೆಂಬ ಬಯಕೆಯೇ?
ಅಥವಾ ವಿಶ್ವ ಪರ್ಯಟನೆ? ನಿಮ್ಮ ವಯಸ್ಸು ಅಥವಾ ಗುರಿ ಏನೇ ಇರಲಿ, ಪ್ರಸ್ತುತ ನಮಗೆ ನಿಭಾಯಿಸಲು ಸಾಧ್ಯವಾಗದೇ ಇದ್ದ ವಿಷಯಗಳಿಗೆ ನಾವೆಲ್ಲರೂ ಹಣವನ್ನು ಉಳಿಸುವ ಪ್ರಯತ್ನ ಮಾಡಿದ್ದೇವೆ.
ಅಲ್ಲವೇ? ನಿಮ್ಮ ಗುರಿಗಳು ಅಥವಾ ಆದಾಯ ಏನೇ ಇದ್ದರೂ, ನಿಮ್ಮ ಆರ್ಥಿಕ ಭವಿಷ್ಯಕ್ಕಾಗಿ ಯೋಜನೆ ರೂಪಿಸುವುದೂ ಯಾವತ್ತಿದ್ದರೂ ಒಂದು ಉತ್ತಮ ವಿಚಾರ. ನಿಮ್ಮ ಪಯಣದಲ್ಲಿ ವಿಶ್ವದ ಅತೀ ಶ್ರೀಮಂತರಿಂದ ಆರ್ಥಿಕ ಸಲಹೆಗಳು ನಿಮಗೆ ಸಹಾಯ ಮಾಡುತ್ತವೆ.
ಯೋಜನೆ ಆರಂಭಿಸುವ ಮೊದಲು, ನೀವೊಂದು ಸ್ಪಷ್ಟ ಆರ್ಥಿಕ ಗುರಿಯೊಂದನ್ನು ಗೊತ್ತುಪಡಿಸಬೇಕು. ನಿಮಗೆ ಏನು ಬೇಕು? ಇದಕ್ಕಾಗಿ ಎಷ್ಟು ಸಮಯ ಹಿಡಿಯಬಹುದು?
ಅಲ್ಲಿ ತಲುಪಲು ಹೆಜ್ಜೆಗಳು ಯಾವುವು? ಪ್ರತೀ ಗುರಿಗೂ ನೀವು ಜಾಣ್ಮೆಯ ನಿಭಯಿಸಬಲ್ಲ ಯೋಜನೆಯನ್ನು ರೂಪಿಸಬೇಕು.
ಆದರೆ ಮೊದಲು ಮೂಲ ವಿಷಯಗಳಿಂದ ಆರಂಭಿಸೋಣ.
ಆರ್ಥಿಕ ಗುರಿಗಳು ಎಂದರೆ ನೀವು ಪಡೆಯಲು ಬಯಸುವ ಹಣಕಾಸು ಸಂಬಂಧೀ ಮಹತ್ವಾಕಾಂಕ್ಷೆಗಳಾಗಿವೆ ಉದಾಹರಣೆಗೆ ವಾರ್ಷಿಕವಾಗಿ ಆರು ಅಂಕಿಗಳ ಆದಾಯ ಸಂಪಾದಿಸುವುದು, ತಿಂಗಳಿಗೆ ರೂ 10,000 ಉಳಿಸುವುದು.
ಅಥವಾ ಇನ್ನೊಂದೆಡೆ, ಇವು ಆರ್ಥಿಕ ಉದ್ದೇಶಗಳೂ ಆಗಿರಬಹುದು, ಕಡಲತೀರದಲ್ಲಿ ಮನೆ ಖರೀದಿ ಅಥವಾ ಬಾಲಿಯಲ್ಲಿ ನಿಮ್ಮ ಕನಸಿನ ಪ್ರವಾಸಕ್ಕಾಗಿ ಹಣ ಸಂಗ್ರಹಣೆ ಹೀಗೇ.
ಮೂಲತಃ ನಿಮ್ಮ ಗುರಿಯನ್ನು ಒಂದು ಆರ್ಥಿಕ ಲಕ್ಷ್ಯವು ಪ್ರತಿನಿಧಿಸುತ್ತದೆ. ನೀವು ಎರಡು ರೀತಿಯ ಗುರಿಗಳನ್ನು ಸಾಧಿಸಬಹುದು:
ಅಲ್ಪಾವಧಿ ಗುರಿಗಳು : ಅಲ್ಪಾವಧಿ ಗುರಿಗಳು ಎಂದರೆ ನೀವು ಬರುವ ವರ್ಷದಲ್ಲಿ ಅಥವಾ ಅದಕ್ಕಿಂತಲೂ ಮೊದಲು ಸಾಧಿಸಲು ಬಯಸುವ ಗುರಿಗಳು.
ಅಲ್ಪಾವಧಿ ಗುರಿಗಳಿಗಾಗಿ ಕೆಲ ಉದಾಹರಣೆಗಳು ಇಲ್ಲಿವೆ:
ದೀರ್ಘಾವಧಿ ಗುರಿಗಳು : ದೀರ್ಘಾವಧಿ ಗುರಿಗಳಿಗಾಗಿ ಒಬ್ಬ ವ್ಯಕ್ತಿಗೆ ಒಂದು ಹೆಜ್ಜೆ ಹಿಂತೆಗೆದು ವಿಶಾಲವಾದ ಚಿತ್ರವನ್ನು ನೋಡಬೇಕಾಗುತ್ತದೆ.
ಇದರ ವ್ಯಾಪ್ತಿಯು ನೀವು ಮುಂದಿನ 2 ವರ್ಷಗಳಲ್ಲಿ ಸಾಧಿಸಬೇಕಾದ ಗುರಿಗಳಿಂದ ಹಿಡಿದು ನೀವು ಮುಂದಿನ 50 ವರ್ಷದಲ್ಲಿ ಸಾಧಿಸಲು ಬಯಸುವ ಗುರಿಗಳವರೆಗೆ ಇರುತ್ತದೆ.
ದೀರ್ಘಾವಧಿ ಗುರಿಗಳಿಗಾಗಿ ಕೆಲ ಉದಾಹರಣೆಗಳು ಇಲ್ಲಿವೆ:
ನೆನಪಿಡಿ, ಗುರಿ ಗೊತ್ತುಪಡಿಸುವಿಕೆಯ ವಿಷಯ ಬಂದಾಗ, ಅಲ್ಪಾವಧಿ ಹಾಗೂ ದೀರ್ಘಾವಧಿ ಗುರಿಗಳ ಮಿಶ್ರಣವನ್ನು ಹೊಂದಿರುವುದು ಎಂದಿಗೂ ಉತ್ತಮ.
30 ವರ್ಷ ನಂತರದ ಗುರಿಗಾಗಿ ಪ್ರತೀದಿನ ದುಡಿಯುವುದು ಕಷ್ಟವಾಗುತ್ತದೆ.
ಸರಿಯಲ್ಲವೇ? ಆದರೆ ನೀವು ವಾರದ, ಮಾಸಿಕ ಹಾಗೂ ದೀರ್ಘಾವಧಿ ಗುರಿಗಳನ್ನು ಒಳಗೊಂಡಿರುವ, ಚೆನ್ನಾಗಿ ಯೋಚಿಸಿ ರೂಪಿಸಿದ ತಂತ್ರವನ್ನು ಪಾಲಿಸುತ್ತಿದ್ದರೆ, ನೀವು ದಾರಿಯುದ್ದಕ್ಕೂ ಅದರ ಪ್ರತಿಫಲವನ್ನು ಅನುಭವಿಸುತ್ತಾ ಮುಂದೆ ಸಾಗುವ ಪ್ರೋತ್ಸಾಹನೆಯನ್ನೂ ಪಡೆಯುತ್ತಿರುತ್ತೀರಿ. ಅರ್ಥವಾಯಿತಲ್ಲವೇ?
ಆರ್ಥಿಕ ಗುರಿಗಳ ವಿಷಯ ಬಂದಾಗ ನೀವು ಜೀವನದಲ್ಲಿ ಸಾಧಿಸಬಯಸುವ ವಿಷಯಗಳನ್ನು ಬರೆದಿಟ್ಟುಕೊಳ್ಳಲು ಸ್ವಲ್ಪ ಸಮಯದವರೆಗೆ ಯೋಚಿಸಿ.
ನಿಮ್ಮ ಶಬ್ದಗಳಲ್ಲಿ ಜಿಪುಣತನವನ್ನು ಪ್ರದರ್ಶಿಸಬೇಡಿ! ದೊಡ್ಡದಾಗಿ ಆರಂಭಿಸಿ ಸಣ್ಣ ಗುರಿಗಳ ಕಡೆ ಸಾಗಿರಿ.
ಆರ್ಥಿಕ ತಂತ್ರವನ್ನು ರೂಪಿಸುವಾಗ ಎಸ್.ಎಂ.ಎ.ಅರ್.ಟಿ (ಸ್ಮಾರ್ಟ್) ಗುರಿಗಳ ಅಳವಡಿಕೆ ಒಂದು ಉತ್ತಮ ಅಡಿಪಾಯವಾಗುತ್ತದೆ.
ಇದು ಸ್ಪೆಸಿಫಿಕ್ (ನಿರ್ದಿಷ್ಟ), ಮೆಷರೆಬಲ್ (ಅಳೆಯಬಲ್ಲ), ಎಚೀವೆಬಲ್ (ಸಾಧಿಸಬಲ್ಲ), ರೆಲೆವೆಂಟ್ (ಸೂಕ್ತ) ಮತ್ತು ಟೈಮ್ ಬೌಂಡ್ (ಸಮಯಾನುಸಾರವಾದ) ಗುರಿಗಳು ಎಂದಾಗುತ್ತವೆ.
ನಿಮಗೆ ನೀವೇ ಈ ಕೆಲವು ಮುಖ್ಯವಾದ ಪ್ರಶ್ನೆಗಳನ್ನು ಕೇಳಿ ಇದನ್ನು ಸರಳವಾಗಿಸಬಹುದು.
ನಿಮಗೇನು ಬೇಕು ಎಂದೇ ತಿಳಿಯದಿದ್ದರೆ, ನೀವು ಬಯಸಿದ್ದನ್ನು ಪಡೆಯಲು ನಿಮ್ಮಿಂದ ಸಾಧ್ಯವಿಲ್ಲ. ನಿಮ್ಮ ಎಲ್ಲಾ ಬಯಕೆಗಳ ಪಟ್ಟಿ ಮಾಡಿ ಮೂಲ ಅಗತ್ಯಗಳು, - ಉದಾಹರೆಣೆಗೆ ಹೊಸ ಕಾರು, ಇದರಿಂದ ಹಿಡಿದು ನಿಜವಾದ ದೊಡ್ಡ ಖರ್ಚುಗಳಾದ ಐಷಾರಾಮಿ ಪ್ರವಾಸದ ಮನೆಯವರೆಗೆ. ನಿಮ್ಮ ಮನವಿಯನ್ನು ಆದಷ್ಟು ನಿರ್ದಿಷ್ಟವಾಗಿರಿಸಿ.
ಉದಾಹರಣೆಗೆ, ಅದೊಂದು ಕಾರಾಗಿದ್ದರೆ, ಬ್ರಾಂಡ್ ಹಾಗೂ ಮಾದರಿ ಗಮನದಲ್ಲಿರಲಿ. ನೀವು ವಿವಾಹಿತರಾಗಿದ್ದರೆ ನಿಮ್ಮ ಸಂಗಾತಿಯ ಜೊತೆಗೆ ಪಟ್ಟಿ ಮಾಡಿ ಹಾಗೂ ಜೊತೆಯಲ್ಲಿಯೇ ನಿಮ್ಮ ಗುರಿಗಳ ಸಾಧನೆಗಾಗಿ ಕೆಲಸ ಮಾಡಿ.
ನಿವೃತ್ತಿ ಉಳಿತಾಯವು ಎಲ್ಲರ ಪಟ್ಟಿಯಲ್ಲಿ ಸೇರಿರಬೇಕು; ನೀವು ಎಷ್ಟು ಬೇಗ ಆರಂಭಿಸುತ್ತೀರೋ, ನಿಮ್ಮ ಬೆಳವಣಿಗೆಯ ಅವಕಾಶ ಅಷ್ಟೇ ಹೆಚ್ಚಿರುತ್ತದೆ.
ಆರ್ಥಿಕ ಗುರಿಗಳನ್ನು ಗೊತ್ತುಪಡಿಸುವ ಈ ಯಾಂತ್ರಿಕ ಕ್ರಮ ಏಕಿಷ್ಟು ಮುಖ್ಯ ಎಂದು ನೀವು ಯೋಚಿಸುತ್ತಿರಬಹುದು. ಅದರ ಪರಿಚಯವಿಲ್ಲದೆಯೇ ನೀವು ಒಂದು ವಿಷಯದ ಬಗ್ಗೆ ಯೋಚಿಸುತ್ತಿರಬಹುದು.
ಅದು ಪ್ರತ್ಯಕ್ಷವಾಗಿರದ ಕಾರಣ, ನಿಮ್ಮ ಮನಸ್ಸಿನಲ್ಲಿ ನೀವದನ್ನು ಸರಿಯಾಗು ಗುರುತಿಸದೇ ಇರಬಹುದು.
ನೀವು ಆ ಯೋಚನೆಯನ್ನು ಸರಿಯಾದ ಶಬ್ದಗಳಲ್ಲಿ ಹಾಕಿ ವಿವರಿಸಲು ಪ್ರಯತ್ನಿಸಿದರೆ, ಅದ್ಭುತವೇ ನಡೆಯುತ್ತದೆ.
ಈ ಯೋಚನೆಗೆ ಈಗ ಒಂದು ದೇಹ, ಆಕಾರ, ರೂಪ ಹಾಗೂ ವಿಷಯವಿದೆ ನೀವು ಬರೆದ ಶಬ್ದದಿಂದಾಗಿ. ಈಗ ಇದು ಕೇವಲ ಕಲ್ಪನೆಯಲ್ಲ.
ಈಗ ಇದು ನಿಮ್ಮನ್ನು ಉತ್ತೇಜಿಸುವ ಒಂದು ಬಲವಾದ ಪ್ರತಿಕ್ರಿಯೆ ನೀಡುವಂತದ್ದಾಗಿದೆ.
ನೀವು ನಿಮ್ಮ ಕನಸನ್ನು ಬರೆದಿಟ್ಟುಕೊಂಡಾಗ ಅದು ಗುರಿಯಾಗುತ್ತದೆ. ನೀವು ಮನೆ ಖರೀದಿಸಬೇಕು ಎಂದುಕೊಳ್ಳೋಣ. ನೂವು ಹೆಚ್ಚಾಗಿ ಅದರ ಬಗ್ಗೆ ಕನಸು ಕಾಣುತ್ತಿರುತ್ತೀರಿ.
ಆದರೆ, ನೀವು ಅದನ್ನು ಬರೆಯಲು ಆರಂಭಿಸಿದಾಗ, ನಿಮ್ಮ ಮನಸ್ಸು ಕೇಳುತ್ತದೆ, “ಯಾವಾಗ, ಎಲ್ಲಿ, ಎಷ್ಟು ಚದರ ಅಡಿ, ಎಷ್ಟು ಕೋಣೆಗಳು?”
ಈ ಬರೆಯುವಿಕೆಯು ನಿಮ್ಮ ಗುರಿಯನ್ನು ಸ್ಪಷ್ಟೀಕರಿಸಿ ಅದರ ಪರಿಹಾರವನ್ನು ಯೋಚಿಸುವಂತೆ ಒತ್ತಾಯಿಸುತ್ತದೆ.
ನಿಮ್ಮ ಬಳಿ ಗುರಿಗಳ ಒಂದು ದೊಡ್ಡ ಪಟ್ಟಿಯಿದ್ದು, ಎಲ್ಲವನ್ನೂ ಒಮ್ಮೆಲೇ ಸಾಧಿಸುವುದು ಅಸಾಧ್ಯವಾಗಿರುತ್ತದೆ.
ಆರಂಭಿಸಲು, ಪ್ರಸ್ತುತವಾಗಿ ನಿಮಗೆ ಅತೀ ಮುಖ್ಯವಾಗಿರುವ ಅಲ್ಪ ಹಾಗೂ ದೀರ್ಘಾವಧಿ ಗುರಿಗಳಿಗೆ ಆದ್ಯತೆ ನೀಡಿ.
ವಿದೇಶ ಪ್ರವಾಸಕ್ಕಿಂತ ನಿಮ್ಮ ಮಗಳ ಮದುವೆ ನಿಮಗೆ ಹೆಚ್ಚು ಮುಖ್ಯವಾಗಿರುತ್ತದೆ. ಮನೆ ಖರೀದಿಯು ತೋಟದ ಖರೀದಿಗಿಂತ ಹೆಚ್ಚು ಮುಖ್ಯವಾಗಿರುತ್ತದೆ.
ಆದರೆ ನಿಮ್ಮ ಆದ್ಯತೆಯ ಪಟ್ಟಿಯಲ್ಲಿರದ ಗುರಿಗಳನ್ನು ನಿರ್ಲಕ್ಷಿಸಬೇಡಿ. ಅದರ ಬದಲು, ಅವುಗಳಿಗೆ ಹಿಂತಿರುಗುವ ಮೊದಲು ಆರು ತಿಂಗಳು ಅಥವಾ ಒಂದು ವರ್ಷ ಕಾಯಿರಿ.
ಆ ಸಮಯದೊಳಗೆ ನೀವು ನಿಮ್ಮ ಮೊದಲ ಕೆಲ ಗುರಿಗಳನ್ನು ಸಾಧಿಸಿದ್ದು ನಿಮ್ಮ ಆದಾಯದ ಏರಿಕೆಯೂ ಆಗಿರಬಹುದು, ಇದರಿಂದ ನೀವು ಇತರ ಗುರಿ ಸಾಧನೆಯತ್ತ ಸಾಗಬಹುದು.
ನಿಮ್ಮ ಆದ್ಯತೆಯ ಗುರಿಗಳನ್ನು ವಿಭಜಿಸಿ. ಒಂದು ತಕ್ಷಣವೇ ಸಾಧಿಸಬಲ್ಲ ಮತ್ತೊಂದು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳಬಲ್ಲ ಗುರಿಗಳಾಗಿ.
ನಂತರ ಪ್ರತಿಯೊಂದಕ್ಕೂ ಗಡುವನ್ನು ಗೊತ್ತುಪಡಿಸಿ, ಇದರಿಂದ ನೀವು ಪ್ರತೀ ತಿಂಗಳು ಎಷ್ಟು ಉಳಿತಾಯ ಮಾಡಬೇಕೆಂದು ನೀವು ಲೆಕ್ಕಹಾಕಬಹುದು.
ಪ್ರತೀ ಸಂದರ್ಭದಲ್ಲೂ, ಮಾಸಿಕವಾಗಿ ನೀವು ಉಳಿಸುವ ಹಣವನ್ನು, ನಿಮಗೆಷ್ಟು ಬೇಗನೇ ಅದು ಬೇಕಾಗುತ್ತದೆಯೋ, ಅದರ ಮೇಲೆ ನಿರ್ಧರಿಸಲಾಗುತ್ತದೆ.
ನಿಮಗೆ ಒಂದು ವರ್ಷದಲ್ಲಿ ಕಾರು ಬೇಕಾಗಿದ್ದರೆ, ನೀವು ಪ್ರತೀ ತಿಂಗಳು ಹೆಚ್ಚು ಉಳಿತಾಯ ಮಾಡಬೇಕಾಗುತ್ತದೆ; ನೀವು ಎರಡು ವರ್ಷ ಕಾಯಬಹುದಾದರೆ, ಕಡಿಮೆ ಉಳಿತಾಯ ಮಾಡಬಹುದು.
ಅದೊಂದು ಉನ್ನತ ಗುರಿಯಾಗಿದ್ದರೂ, ನಿಮ್ಮ ಮಕ್ಕಳಿಗಾಗಿ ಕಾಲೇಜು ಹಣವನ್ನು ನೀವು ಸಮಯದೊಂದಿಗೆ ವೃದ್ಧಿಸುತ್ತೀರಿ, ಆದರೆ ಅದನ್ನು ಮುಂದೆ ತಳ್ಳಬೇಡಿ ಏಕೆಂದರೆ ನಿಮ್ಮ ನಿರೀಕ್ಷೆಗೆ ಮೊದಲೆ ಅದು ನಿಮಗೆ ಬೇಕಾಗಬಹುದು.
ನಿಮ್ಮ ಗುರಿಗಳಿಗಾಗಿ ಮೈಲಿಗಲ್ಲನ್ನು ನಿಗದಿ ಪಡಿಸುವುದರಿಂದ, ವಿಶೇಷವಾಗಿ ಅದರ ಬೆಲೆ ಹೆಚ್ಚಿದ್ದರೆ, ಅದು ಹೆಚ್ಚು ನಿಭಾಯಿಸಬಲ್ಲ ಕಾರ್ಯದಂತೆ ಕಾಣುವುದು.
ಇದನ್ನು ಪರಿಗಣಿಸಿ; 10 ಲಕ್ಷ ಉಳಿಸುವುದು ಕಷ್ಟ ಎನಿಸಬಹುದು, ಆದರೆ ಪ್ರತೀ ತಿಂಗಳು 10 ಸಾವಿರ ಉಳಿಸುವುದು ಸಂಪೂರ್ಣವಾಗಿ ನಿಭಾಯಿಸಬಲ್ಲ ಗುರಿಯಾಗಿದೆ.
ಇಲ್ಲಿ ಮುಖ್ಯವೇನೆಂದರೆ ನಿಮಗೆ ಹೊಂದುವ ವಿಧಾನವನ್ನು ಗುರುತಿಸುವುದು.
ಪ್ರತೀ ಗುರಿಗೂ ನಿಮ್ಮ ಉತ್ತಮ ಊಹೆಯನ್ನು ಬರೆದಿಡಿ, ಅದನ್ನು ನೀವು ಯಾವಾಗ ತಲುಪಲು ಬಯಸುತ್ತೀರಿ, ಅದಕ್ಕಾಗಿ ನಿಮಗೆಷ್ಟು ಸಮಯಬೇಕಾಗಬಹುದು ಇದೆಲ್ಲವನ್ನೂ ಸೇರಿ.
10 ವರ್ಷದ ನಂತರ ಇರುವ ನಿಮ್ಮ ಮಗಳ ಮದುವೆಗಾಗಿ ಉಳಿತಾಯ ಮಾಡಲು ಬಯಸಿದರೆ, ಪ್ರಸ್ತುತ ದ್ರದಲ್ಲಿ ಮದುವೆಗೆ ಎಷ್ಟು ಖರ್ಚಾಗಬಹುದು ಎಂದು ಮೊದಲು ಲೆಕ್ಕಹಾಕಿ.
ನಂತರ ಹತ್ತು ವರ್ಷಗಳ ಹಣದುಬ್ಬರವನ್ನು ಪರಿಗಣಿಸಿ, ನಿಮ್ಮ ಲಕ್ಷಯವು ಭವಿಷ್ಯದಲ್ಲಿ ಎಷ್ಟು ಬೆಲೆಬಾಳಬಹುದು ಎಂದು ಈಗ ನಿಮಗೆ ತಿಳಿದಿದೆ.
ಇನ್ನೊಂದು ಉದಾಹರಣೆ - ಎರಡು ವರ್ಷ ನಿಮ್ಮ ಕಾರಿನ ನಗದು ಪಾವತಿಗಾಗಿ ನೀವು ಮಾಸಿಕವಾಗಿ ರೂ10000 ಅಥವಾ ರೂ 20000 ಬದಿಗಿಡುತ್ತೀರಿ.
ಸ್ವಲ್ಪ ವರ್ಷಗಳ ನಂತರ ಒಂದು ಹೊಸ ಮನೆಯ ಬೆಲೆಯೆಷ್ಟಿರಬಹುದು ಅಥವಾ ಒಂದು ಶತಮಾನ ಅಥವಾ ಅದಕ್ಕಿಂತಲೂ ಹೆಚ್ಚು ಸಮಯದ ನಂತರ ನಿಮ್ಮ ಮಕ್ಕಳ ಕಾಲೇಜು ಶುಲ್ಕ ಎಷ್ಟಾಗಬಹುದು ಎಂದು ಊಹಿಸುವುದು ಕಷ್ಟವಾಗಿರುತ್ತದೆ, ಆದ್ದರಿಂದಲೇ ಈಗಲೇ ನೀವು ಎಷ್ಟು ಉಳಿತಾಯ ಮಾಡಾಬಹುದು ಎಂದು ಲೆಕ್ಕಹಾಕಿ ಆರಂಭಿಸುವುದು ಉತ್ತಮ.
ಮೊದಮೊದಲು ನೀವು ಸಣ್ಣ ಮೊತ್ತವನ್ನಷ್ಟೇ ನೀಡಬಲ್ಲಿರಿ. ಆದರೆ, ನಿಮ್ಮ ಸಂಬಳ/ಭಡ್ತಿ/ಸಂಪಾದನೆ ವರ್ಷದಿಂದ ವರ್ಷಕ್ಕೆ ಏರಿಕೆಯಾದಾಗ, ನೀವು ನಿಮ್ಮ ಕೊಡುಗೆಯನ್ನು ಹೆಚ್ಚಿಸಬಹುದು. ನೀವು ಎಷ್ಟೇ ಸಂಗ್ರಹಿಸಿದ್ದರೂ ಸಮಯ ಬಂದಾಗ ಉಪಯೋಗಕ್ಕೆ ಬರುತ್ತದೆ.
ಉಳಿತಾಯಗಳನ್ನು ರೂಢಿಯಾಗಿ ಬೆಳೆಸುವುದು ಈಗ ಸುಲಭ ಹಾಗೂ ಬಹುಮಾನಕ್ಕೆ ಪಾತ್ರ ಹೇಗಾಗುತ್ತದೆ ಎಂದು ತಿಳಿಯಿರಿ.
ನಿಮ್ಮ ಆರ್ಥಿಕ ಗುರಿಗಳಿಗಾಗಿ ಗಡುವನ್ನು ನಿಗದಿ ಪಡಿಸುವುದು ಒಳ್ಳೆಯ ವಿಚಾರವಲ್ಲ ಎಂದು ನಿಮಗನಿಸಬಹುದು. ನಾನು ಮನೆಯನ್ನು ಯಾವಾಗ ಖರೀದಿಸುತ್ತೇನೆ ಹಾಗೂ ನನ್ನ ಮಗಳ ಮದುವೆ ಯಾವಾಗ ಎಂದು ನನಗೆ ಹೇಗೆ ತಿಳಿಯುತ್ತದೆ?
ಆದರೆ, ನೀವು ಅದರ ಬಗ್ಗೆ ಯೋಚಿಸದೇ ಇದ್ದರೆ, ಆರ್ಥಿಕವಾಗಿ ನೀವು ಅದಕ್ಕೆ ಸಿದ್ಧವಿರುವುದಿಲ್ಲ. ನೀವು ಆರ್ಥಿಕವಾಗಿ ಸಿದ್ಧರಿದ್ದರೆ, ನಿಮ್ಮ ಲಕ್ಷ್ಯ ಕೆಲ ಕಾರಣಗಳಿಂದ ಮುಂದೂಡಲ್ಪಟ್ಟರೂ ನೀವು ಚಿಂತೆಗೀಡಾಗಿವುದಿಲ್ಲ.
ನಿಮ್ಮ ಗುರಿಗಳನ್ನು ಪೂರೈಸಲು ಸಾಕಷ್ಟು ಹಣದೊಂದಿಗೆ ನೀವು ಆರ್ಥಿಕವಾಗಿ ಸಿದ್ಧರಾಗಿರುತ್ತೀರಿ.
ಗಡುವು ನಿಗದಿ ಪಡಿಸುವುದರಿಂದ, ನಿಮ್ಮ ಗುರಿಯನ್ನು ಸಾಧಿಸಲು ಮಾನಸಿಕವಾಗಿ ನಿಮಗೆ ಪ್ರೋತ್ಸಾಹನೆ ದೊರೆಯುತ್ತದೆ. ಇದರ ಜೊತೆ, ನೀವು ಗಡುವು ಗೊತ್ತು ಮಾಡಿದ ಕೂಡಲೇ ನಿಮ್ಮ ಮನಸ್ಸು ಇಳಿಯೆಣಿಕೆ ಆರಂಭಿಸುತ್ತದೆ.
ನೀವು ಎಷ್ಟು ವರ್ಷಗಳಲ್ಲಿ ನಿಮ್ಮ ಗುರಿಯನ್ನು ಸಾಧಿಸಲು ಬಯಸುತ್ತೀರಿ ಎಂದು ತಿಳಿಯದೆ ನೀವು ಒಂದು ಆರ್ಥಿಕ ತಂತ್ರವನ್ನು ರೂಪಿಸಲು ಸಾಧ್ಯವಿಲ್ಲ. ಒಪ್ಪುವುದಿಲ್ಲವೇ?
ಈಗ ನೀವು ನಿಮ್ಮ ಕನಸುಗಳನ್ನು ಬರೆದಿಟ್ಟುಕೊಂಡಿರುವ ಕಾರಣ, ಅವುಗಳನ್ನು ನನಸಾಗಿಸಲು ಒಂದು ಯೋಜನೆ ರೂಪಿಸುವ ಸಮಯ ಬಂದಿದೆ. ನಿಮ್ಮ ಪ್ರತೀ ಲಕ್ಷ್ಯದ ವೆಚ್ಚವೆಷ್ಟು ಎಂದು ತಿಳಿಯಲು ಸ್ವಲ್ಪ ಅಧ್ಯಯನ ಹಾಗೂ ಸರಳ ಗಣಿತ ಬೇಕಾಗುವುದು.
ನಿಮ್ಮ ಆದಾಯ ಹಾಗೂ ಖರ್ಚುಗಳನ್ನು ಆಧರಿಸಿ, ನೀವು ನಿಮ್ಮ ಪ್ರತೀ ಗುರಿಯನ್ನು ಯಾವಾಗ ಹಾಗೂ ಹೇಗೆ ಸಾಧಿಸುತ್ತೀರಿ ಎಂಬ ಒಂದು ಯೋಜನೆಯನ್ನು ರಚಿಸಬೇಕು.
ಈಗ ನಿಮ್ಮ ಪ್ರತೀ ಲಕ್ಷ್ಯಕ್ಕೂ ಎಷ್ಟು ಉಳಿಸಬೇಕು ಎಂದು ನಿಖರವಾಗಿ ನಿಮಗೆ ತಿಳಿದಿರುವುದರಿಂದ ನೀವು ನಿಮ್ಮ ಉಳಿತಾಯಗಳಿಗಾಗಿ ಬಜೆಟ್ ಅನ್ನು ತಯಾರಿಸಬೇಕು.
ವರ್ಷದಿಂದ ವರ್ಷಕ್ಕೆ ನೀವಿದನ್ನು ಮಾಡುತ್ತಾ ಬಂದರೆ, ನಿಮ್ಮ ಎಲ್ಲಾ ಆರ್ಥಿಕ ಆಕಾಂಕ್ಷೆಗಳು ವಾಸ್ತವಕ್ಕೆ ತಿರುಗುತ್ತವೆ.
ತಮ್ಮ ಗುರಿ ಸಾಧನೆಗಾಗಿ ಸಮಯ ಹಾಗೂ ಪ್ರಯತ್ನ ನೀಡುವ ಯಾವುದೇ ವ್ಯಕ್ತಿಯೂ ಸಾಲಮುಕ್ತ ಜೀವನ ನಡೆಸಬಹುದಾಗಿದೆ.
ನಿಮಗೆ ಬೇಕಾಗಿರುವುದು ನಿಷ್ಠೆ ಹಾಗೂ ಒಂದೊಳ್ಳೆಯ ತಂತ್ರ. ನಿಮ್ಮ ಆರ್ಥಿಕ ಗುರಿ ಗೊತ್ತುಪಡಿಕೆಯ ಪಯಣವನ್ನು ಆರಂಭಿಸಲು ಮೇಲೆ ನೀಡಿರುವ ಈ ಸಲಹೆಗಳನ್ನು ಬಳಸಿ.
ವೈಯಕ್ತಿಕ ಆರ್ಥಿಕತೆಗಾಗಿ ಒಂದು ಮಾರ್ಗದರ್ಶಿ ಬೇಕೇ? ಒಂದು ಯಶಸ್ವೀ ಹಾಗೂ ಆರ್ಥಿಕ ಭದ್ರತೆಯುಳ್ಳ ಭವಿಷ್ಯಕ್ಕಾಗಿ ಆರ್ಥಿಕ ಯೋಜನೆ ಏಕೆ ಅಗತ್ಯ ಎಂದು ನೋಡಿ.
ಈ ಜಾಣ ಆರ್ಥಿಕ ನಿರ್ವಹಣಾ ಸಲಹೆಗಳೊಂದಿಗೆ ನೀವು ನಿಮ್ಮ ಹಣಕಾಸಿನ ವ್ಯವಾಹಾರಗಳನ್ನು ಬೆಳೆಸಿರಿ.