Buy Gold
Sell Gold
Daily Savings
Digital Gold
Instant Loan
Round-Off
Nek Jewellery
ಉಳಿತಾಯ ಖಾತೆಯಲ್ಲಿ ನಿಮ್ಮ ಹಣವನ್ನು ಇಡುವುದರಿಂದ ಅದು ಹೇಗೆ ನಿಮ್ಮನ್ನು ಬಡವರನ್ನಾಗಿ ಮಾಡುತ್ತದೆ ಮತ್ತು ನಿಮ್ಮ ಬಳಿ ಇರುವ ಇತರ ಪರ್ಯಾಯಗಳೇನು ಎಂಬುದನ್ನು ಕಂಡುಕೊಳ್ಳಿ. ನಿಮ್ಮ ತಿಂಗಳ ಸಂಬಳವನ್ನು ಪಡೆಯುವುದು ಪ್ರಪಂಚದಲ್ಲಿಯೇ ಒಂದು ಬೆಸ್ಟ್ ಫೀಲಿಂಗ್. ಅಲ್ಲವೇ?
ನಮ್ಮ ಜೀವಿತಾವಧಿಯಲ್ಲಿ, ನಾವು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸಹಾಯ ಮಾಡುವ ಸಂಬಳದಂತಹ ಮೂಲಭೂತ ವಿಷಯಕ್ಕಾಗಿ, ನಾವು ವಾರಕ್ಕೆ 40-50 ಗಂಟೆಗಳಂತೆ, 30-40 ವರ್ಷಗಳ ಕಾಲ ಶ್ರಮಪಡುತ್ತೇವೆ.
ಹೇಗಾದರೂ ಬದುಕು ಕಟ್ಟಿಕೊಳ್ಳಬೇಕು. ನಾವು ಆ ಹಣವನ್ನು ನಮ್ಮ ಉಳಿತಾಯ ಖಾತೆಗೆ ಹಾಕುತ್ತೇವೆ. ಇದರಿಂದ ನಮಗೆ ಅಗತ್ಯವಿರುವಾಗ, ಸುಲಭವಾಗಿ ಹಣವು ನಮಗೆ ಲಭ್ಯವಾಗುತ್ತದೆ.
ಉಳಿತಾಯ ಖಾತೆಗಳು ವಾರ್ಷಿಕವಾಗಿ ಸುಮಾರು 2 ರಿಂದ 4% ಅನ್ನು ಪಾವತಿಸುತ್ತವೆ. ಇದು ಹೂಡಿಕೆಯ ಮೇಲಿನ ಅತ್ಯುತ್ತಮ ಲಾಭವಲ್ಲ, ಆದರೆ ಖಂಡಿತವಾಗಿಯೂ ಇದು ಶೂನ್ಯಕ್ಕಿಂತ ಉತ್ತಮವಾಗಿದೆ.
ಅದಕ್ಕೆ ಉತ್ತರ ಹಣದುಬ್ಬರ.
ದುರದೃಷ್ಟವಶಾತ್, ಭಾರತವು ವಿಶ್ವದ ಅತಿ ಹೆಚ್ಚು ಹಣದುಬ್ಬರ ದರವನ್ನು ಹೊಂದಿದೆ. ಆದರೆ ಚಿಂತಿಸಬೇಕಿಲ್ಲ! ನೀವು ಹಣದುಬ್ಬರವನ್ನು ಸೋಲಿಸಬಹುದು. ಈ 3 ಸರಳ ಹಂತಗಳನ್ನು ಇಲ್ಲಿ ಪರಿಶೀಲಿಸಿ.
ಪ್ರತಿಯೊಬ್ಬರೂ ಹಣದುಬ್ಬರದ ಬಗ್ಗೆ ಕಾಳಜಿ ಹೊಂದಿದ್ದಾರೆ. ಏಕೆಂದರೆ ಮೂಲಭೂತ ಅವಶ್ಯಕತೆಗಳ ವೆಚ್ಚಗಳು ವರ್ಷದಿಂದ ವರ್ಷಕ್ಕೆ ಏರುತ್ತಲೇ ಇವೆ.
ಇಂದಿನ ಮಾರುಕಟ್ಟೆಯಲ್ಲಿ ಹಣದುಬ್ಬರವು ಪ್ರಸ್ತುತ 6% ಅಥವಾ ಅದಕ್ಕಿಂತ ಹೆಚ್ಚಿದೆ. ಇದು ಮೆಟ್ರೋ ಪ್ರದೇಶಗಳಲ್ಲಿ ಗಣನೀಯವಾಗಿ ಹೆಚ್ಚಾಗಿದೆ.
ಇದರರ್ಥ ಬ್ಯಾಂಕ್ ಖಾತೆಯಲ್ಲಿನ ನಿಮ್ಮ ಹಣವು ಬೆಳೆಯುತ್ತಿಲ್ಲ, ಅದು ನಿಮ್ಮ ಸಂಪತ್ತನ್ನು ಸ್ವಲ್ಪ ಸ್ವಲ್ಪವೇ ಖಾಲಿ ಮಾಡುತ್ತದೆ.
ನೀವು ಕೆಲವು ಲೆಕ್ಕಾಚಾರಗಳನ್ನು ಮಾಡಿದರೆ, 10-15 ವರ್ಷಗಳ ಅವಧಿಯಲ್ಲಿ, ನಿಮ್ಮ ಕೊಳ್ಳುವ ಸಾಮರ್ಥ್ಯವು 20%-30% ರಷ್ಟು ಕಡಿಮೆಯಾಗುತ್ತದೆ ಎನ್ನುವುದನ್ನು ನೀವು ತಿಳಿದುಕೊಳ್ಳುತ್ತೀರಿ.
ಅಲ್ಲದೇ, ನಾವು ಹಿಂತಿರುಗಿ ನೋಡಿದರೆ, ಹಣದುಬ್ಬರದ ದರಗಳು ಯಾವಾಗಲೂ ಬ್ಯಾಂಕ್ ಖಾತೆಗಳಲ್ಲಿ ಜನರು ಗಳಿಸುವುದಕ್ಕಿಂತ ಹೆಚ್ಚಾಗಿರುತ್ತವೆ.
ಆದ್ದರಿಂದ ನಿಮ್ಮ ಉಳಿತಾಯಕ್ಕಿಂತಲೂ ವೆಚ್ಚಗಳು ಹೆಚ್ಚು ವೇಗವಾಗಿ ಏರುತ್ತಿರುವ ಕಾರಣ, ನಿಮ್ಮ ಉಳಿತಾಯ ಖಾತೆಯಲ್ಲಿರುವ ಹಣವು ಕಾಲಾನಂತರದಲ್ಲಿ ಸ್ವಲ್ಪ ಸ್ವಲ್ಪವೇ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತದೆ.
ಇದನ್ನು ಸಮರ್ಥವಾಗಿ ಎದುರಿಸಲು ಮತ್ತು ಹಣದುಬ್ಬರಕ್ಕೆ ಸಮನಾಗಿ ನಿಮ್ಮ ಹಣವನ್ನು ಬೆಳೆಸಲು, ಹೂಡಿಕೆ ಮಾಡಿ.
ಇತ್ತೀಚಿನ ವರ್ಷಗಳಲ್ಲಿ ನೀವು ನಿಮ್ಮನ್ನು ಗಮನಿಸಿರಬೇಕು. -
ಉಳಿತಾಯ ಖಾತೆಯ ಬಡ್ಡಿ ದರಗಳು ಸರಾಸರಿ 3.5% ಆಗಿದ್ದರೆ, ಭಾರತದಲ್ಲಿ ಹಣದುಬ್ಬರವು, ಸರಾಸರಿ 4.5% ಆಗಿದೆ.
ಆದ್ದರಿಂದ, ಒಂದುವೇಳೆ ನೀವು ನಿಮ್ಮ ಉಳಿತಾಯ ಖಾತೆಗೆ ₹ 100 ಅನ್ನು ಹಾಕಿದರೆ ಮತ್ತು 3.5% ವಾರ್ಷಿಕ ಬಡ್ಡಿಯನ್ನು ಪಡೆದರೆ, ನಿಮ್ಮ ಹೂಡಿಕೆಯು ಒಂದು ವರ್ಷದ ನಂತರ ₹ 103.5 ಮೌಲ್ಯದ್ದಾಗುತ್ತದೆ.
ಆದರೆ ಒಂದು ವರ್ಷದ ಹಿಂದೆ ₹ 100 ಇದ್ದ ವಸ್ತುಗಳು, ಈಗ ₹ 104.5 ರಷ್ಟಾಗಿದೆ. ಕ್ರಮೇಣ, ಮುಂದಿನ ವರ್ಷಗಳಲ್ಲಿ, ಈ ಅಂತರವು ಇನ್ನಷ್ಟು ದೊಡ್ಡದಾಗುತ್ತದೆ.
ಇದರರ್ಥ ನೀವು ಉಳಿತಾಯ ಖಾತೆಗೆ ಹಣವನ್ನು ಹಾಕಿದರೆ ಮತ್ತು 3.5% ಬಡ್ಡಿಯನ್ನು ಗಳಿಸಿದರೂ ಸಹ, ಒಂದು ವರ್ಷದ ಹಿಂದೆ ನೀವು ₹100 ಗೆ ಪಡೆದುಕೊಳ್ಳಬಹುದಾದ ಅದೇ ಸರಕು ಮತ್ತು ಸೇವೆಗಳನ್ನು ಖರೀದಿಸಲು, ನಿಮಗಿಂದು ಹೆಚ್ಚುವರಿ ₹1 ಬೇಕಾಗುತ್ತದೆ.
ಪರ್ಣಿಕಾ, ಶ್ರೇಯಾ ಮತ್ತು ಮುಸ್ಕಾನ್ ಮೂವರು ಗೆಳೆಯರು. 2020 ರಲ್ಲಿ, ಪ್ರತಿಯೊಬ್ಬರೂ ₹ 5 ಲಕ್ಷ ಪಡೆಯುತ್ತಾರೆ.
ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ, ವಿಶೇಷವಾಗಿ ಸಾಂಕ್ರಾಮಿಕ ಸಮಯದಲ್ಲಿ ಈ ಹಣವು ಅವಶ್ಯಕವಾಗಿದೆ. ಅದಕ್ಕಾಗಿ ಪ್ರತಿಯೊಬ್ಬರೂ ತಮ್ಮದೆಯಾದ ವಿಭಿನ್ನ ಉಪಾಯಗಳನ್ನು ಮಾಡುತ್ತಾರೆ.
ಹಣದುಬ್ಬರದ ಹೊರತಾಗಿಯು, ಓಪನ್ ಗವರ್ನಮೆಂಟ್ ಡೇಟಾ ಪ್ಲಾಟ್‌ಫಾರ್ಮ್‌ನ ಇತ್ತೀಚಿನ ಡೇಟಾ ಪ್ರಕಾರ, ನೆನಪಿನಲ್ಲಿಟ್ಟುಕೊಳ್ಳಲು ಕೆಲವು ಇತರ ಅಂಕಿಅಂಶಗಳಿವೆ.
ಹೌದು, ಒಮ್ಮೆ ನೀವು ನಿಮ್ಮ ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತವನ್ನು ಹೊಂದಿದರೆ, ನಿಮ್ಮ ಹಣವನ್ನು ಇರಿಸಲು ನಿಮ್ಮ ಕೈಯಲ್ಲಿ ಕೆಲವು ಆಯ್ಕೆಗಳಿರುತ್ತವೆ.
ಬುದ್ಧಿವಂತಿಕೆಯಿಂದ ಹೂಡಿಕೆ ಮಾಡುವ ಮೂಲಕ ನೀವು ಉಳಿದ ಹಣವನ್ನು ಹೆಚ್ಚಿಗೆ ಮಾಡಬೇಕು. ನಿಮಗಿಲ್ಲಿ ವಿವಿಧ ಹೂಡಿಕೆಯ ಆಯ್ಕೆಗಳು ಲಭ್ಯವಿವೆ, ಅವುಗಳೆಂದರೆ:
ನಿಮ್ಮ ಆದಾಯ ಮತ್ತು ವೆಚ್ಚಗಳು ನೀವು ಎಲ್ಲಿ, ಯಾವಾಗ ಮತ್ತು ಎಷ್ಟು ಹೂಡಿಕೆ ಮಾಡುತ್ತೀರಿ ಎಂಬುದನ್ನು ನಿರ್ಧರಿಸುತ್ತವೆ. ನಿಮ್ಮ ಕೆಲವು ಉಳಿತಾಯಗಳನ್ನು, ಉತ್ತಮ ಬಳಕೆಗಾಗಿ ಬಳಸಲು ಕೆಲವು ಉಪಾಯಗಳು ಇಲ್ಲಿವೆ:
ಚಿನ್ನವು ಮೌಲ್ಯಯುತವಾದ ಆಸ್ತಿಯಾಗಿದ್ದು ಅದು ತನ್ನ ಮೌಲ್ಯವನ್ನು ನಿರಂತರವಾಗಿ ಹೆಚ್ಚಿಸುತ್ತದೆ. ಇದು ಸುರಕ್ಷಿತ ಮತ್ತು ಭದ್ರತೆಯ ಹೂಡಿಕೆಯಾಗಿದೆ.
ಕಳೆದ ಐದು ವರ್ಷಗಳಲ್ಲಿ ಚಿನ್ನವು 20% ಕ್ಕಿಂತ ಹೆಚ್ಚು ವರ್ಷಾನುವರ್ಷ ಆದಾಯವನ್ನು ನೀಡಿದೆ. ಪೋರ್ಟ್‌ಫೋಲಿಯೊ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುವ ಉತ್ತಮ ಡೈವರ್ಸಿಫೈಯರ್ ಎಂದು ಚಿನ್ನವನ್ನು ಭಾವಿಸಲಾಗಿದೆ.
ಹೂಡಿಕೆ ತಜ್ಞರ ಪ್ರಕಾರ, ಚಿನ್ನದ ಹೂಡಿಕೆಯು ಒಬ್ಬ ವ್ಯಕ್ತಿಯ ಒಟ್ಟು ಹೂಡಿಕೆ ಬಂಡವಾಳದ 5% ರಿಂದ 10% ರಷ್ಟಿರಬೇಕು.
ಈಗ ಇಡೀ ಜಗತ್ತು ಡಿಜಿಟಲ್ ಆಗುತ್ತಿದ್ದಂತೆ, ಡಿಜಿಟಲ್ ಗೋಲ್ಡ್ ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿದೆ.
ನೀವು ಕೇಳುತ್ತೀರಿ, ಡಿಜಿಟಲ್ ಗೋಲ್ಡ್ ಎಂದರೇನು? ಇದು ಫಿಸಿಕಲ್ ಗೋಲ್ಡ್‌ನ ಸರಳ ಪರ್ಯಾಯವಾಗಿದೆ.
ಇದು ಎಕ್ಸಚೇಂಜ್ ರೇಟ್‌ನ ಬದಲಾವಣೆಗಳು ಮತ್ತು ವ್ಯತ್ಯಾಸಗಳಿಂದ ಮುಕ್ತವಾಗಿದೆ. ಮತ್ತು ಹೂಡಿಕೆದಾರರಿಗೆ ಫಿಸಿಕಲ್ ಗೋಲ್ಡ್ ಅನ್ನು ಮುಟ್ಟದೆಯೇ, ಪ್ರಪಂಚದಾದ್ಯಂತ ಸುಲಭವಾಗಿ ವ್ಯಾಪಾರ ಮಾಡಲು ಅನುಮತಿಸುತ್ತದೆ.
IOU ನಂತಹ ಬಾಂಡ್ ಒಂದು ಡೆಬ್ಟ್ ಸೆಕ್ಯೂರಿಟಿಯಾಗಿದೆ. ಸಾಲಗಾರರು ಬಾಂಡ್‌ಗಳನ್ನು ಹೂಡಿಕೆದಾರರಿಗೆ ಮಾರಾಟ ಮಾಡುತ್ತಾರೆ. ಅವರು ಒಂದು ನಿಗದಿತ ಅವಧಿಗೆ ಹಣವನ್ನು ಸಾಲವಾಗಿ ನೀಡಲು ಸಿದ್ಧರಾಗಿರುತ್ತಾರೆ.
ಅಪಾಯಗಳನ್ನು ತಪ್ಪಿಸುವ ವಿಷಯ ಬಂದಾಗ, ಬಾಂಡ್‌ಗಳು ಆಗಾಗ ಉತ್ತಮ ಪರ್ಯಾಯ ಮಾರ್ಗಗಳಾಗಿವೆ.
ನೀವು ಬಾಂಡ್ ಅನ್ನು ಖರೀದಿಸಿದಾಗ, ನೀವು ವಿತರಕರಿಗೆ ಹಣವನ್ನು ಸಾಲವಾಗಿ ನೀಡುತ್ತೀರಿ, ಅದು ಕಂಪನಿಯಾಗಿರಬಹುದು, ಮುನ್ಸಿಪಾಲಿಟಿಯಾಗಿರಬಹುದು ಅಥವಾ ಸರ್ಕಾರವಾಗಿರಬಹುದು.
ಇದಕ್ಕೆ ಬದಲಾಗಿ, ವಿತರಕರು ಬಾಂಡ್ ಅಸ್ತಿತ್ವದಲ್ಲಿ ಇರುವಷ್ಟು ಅವಧಿಗೆ, ನಿರ್ದಿಷ್ಟವಾದ ಬಡ್ಡಿದರವನ್ನು ಪಾವತಿಸಲು ಭರವಸೆ ನೀಡುತ್ತಾರೆ. ಅದರ ಜೊತೆಗೆ ಬಾಂಡ್‌ನ ಅಸಲು ಹಣವನ್ನು ಸಹ ಮರುಪಾವತಿಸುವುದಾಗಿ ಭರವಸೆ ನೀಡುತ್ತಾರೆ. ಇದನ್ನು ನಿಗದಿತ ಅವಧಿಯ ನಂತರ ಮೆಚ್ಯುರ್ ಆದಾಗ, ಮುಖಬೆಲೆ (Face value) ಅಥವಾ ಸಮಾನ ಮೌಲ್ಯ (Par Value)ಎಂದು ಕರೆಯಲಾಗುತ್ತದೆ. .
ಹೂಡಿಕೆಯ ಅವಧಿಯಲ್ಲಿ ನೀವು ಗಳಿಸಿದ ಬಡ್ಡಿ ಮತ್ತು ನಿಮ್ಮ ಅಸಲು ಮೊತ್ತವನ್ನು ನೀವು ಮರಳಿ ಪಡೆಯುತ್ತೀರಿ.
ಅಲ್ಪಾವಧಿ (ಶಾರ್ಟ್) ಮತ್ತು ಮಧ್ಯಮ ಅವಧಿಯ (ಮೀಡಿಯಂ-ಟರ್ಮ್) ಹೂಡಿಕೆಯ ವಿಷಯಕ್ಕೆ ಬಂದರೆ, ಬಾಂಡ್‌ಗಳು ಅತ್ಯುತ್ತಮ ದಾಖಲೆಯನ್ನು ಹೊಂದಿವೆ.
ಸರ್ಟಿಫಿಕೇಟ್ ಆಫ್ ಡೆಪಾಸಿಟ್ (CD) ಎಂಬುದು ಕಮರ್ಷಿಯಲ್ ಬ್ಯಾಂಕ್‌ಗಳು ನೀಡುವ ಒಂದು ರೀತಿಯ ಉಳಿತಾಯ ಖಾತೆಯಾಗಿದ್ದು, ಅದು ಸಾಂಪ್ರದಾಯಿಕ ಉಳಿತಾಯ ಖಾತೆಗಳಿಗಿಂತ ಗಮನಾರ್ಹವಾಗಿ ಹೆಚ್ಚಿನ ಬಡ್ಡಿದರಗಳನ್ನು ಪಾವತಿಸುವಾಗ, ನೀವು ಹೂಡಿಕೆ ಮಾಡುವ ಹಣಕ್ಕೆ ನಿಮ್ಮ ಆ್ಯಕ್ಸೆಸ್ ಅನ್ನು ನಿರ್ಬಂಧಿಸುತ್ತದೆ.
ಡೆಪಾಸಿಟ್ ಕಾಲಕಾಲಕ್ಕೆ ತನ್ನ ಮೌಲ್ಯದಲ್ಲಿ ಬೆಳೆಯುತ್ತದೆ, ಆದರೆ ಆ ಅವಧಿ (ಟರ್ಮ್) ಮುಗಿಯುವ ಮೊದಲೇ ತೆಗೆದುಹಾಕಿದರೆ, ಅದು ಶುಲ್ಕಗಳಿಗೆ ಒಳಪಡಬಹುದು.
ಇದು ಒಂದು ವಾರದಿಂದ ಒಂದು ವರ್ಷದವರೆಗೆ ಯಾವುದಾದರೂ ಆಗಿರಬಹುದು. ಕನಿಷ್ಠ ₹1ಲಕ್ಷ ಹೂಡಿಕೆಯ ಅಗತ್ಯವಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಇದನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಹೊಂದಿದೆ.
ಮ್ಯೂಚುಯಲ್ ಫಂಡ್ ಎನ್ನುವುದು ಅನೇಕ ಹೂಡಿಕೆದಾರರಿಂದ ಹಣವನ್ನು ಸಂಗ್ರಹಿಸುವ ಮತ್ತು ಷೇರುಗಳು, ಬಾಂಡ್‌ಗಳು ಹಾಗೂ ಅಲ್ಪಾವಧಿಯ ಸಾಲಗಳಲ್ಲಿ ಹೂಡಿಕೆ ಮಾಡುವ ಕಾರ್ಪೋರೇಷನ್ ಆಗಿದೆ.
ಮ್ಯೂಚುಯಲ್ ಫಂಡ್‌ನ ಪೋರ್ಟ್‌ಫೋಲಿಯೊವು, ಫಂಡ್‌ನ ಎಲ್ಲಾ ಹೊಲ್ಡಿಂಗ್‌ಗಳಿಂದ ಮಾಡಲ್ಪಟ್ಟಿದೆ. ಮ್ಯೂಚುವಲ್ ಫಂಡ್‌ಗಳನ್ನು ಹೂಡಿಕೆದಾರರು ಖರೀದಿಸುತ್ತಾರೆ.
ಪ್ರತಿಯೊಂದು ಷೇರು, ಫಂಡ್‌ನ ಮಾಲೀಕತ್ವ ಮತ್ತು ಆದಾಯದಲ್ಲಿನ ಹೂಡಿಕೆದಾರರ ಭಾಗವನ್ನು ಪ್ರತಿನಿಧಿಸುತ್ತದೆ.
ಮ್ಯೂಚುಯಲ್ ಫಂಡ್‌ಗಳಲ್ಲಿ, ವ್ಯವಸ್ಥಿತ ಹೂಡಿಕೆ ಯೋಜನೆಯನ್ನು (systematic Investment Plan) ಬಳಸಿಕೊಂಡು ಕ್ರಮೇಣ ಹೂಡಿಕೆ ಮಾಡುವುದು, ಈಕ್ವಿಟಿ ಪೋರ್ಟ್‌ಫೋಲಿಯೊವನ್ನು ಕ್ರಮೇಣ ಸ್ಥಾಪಿಸುವಾಗ, ಚಂಚಲತೆಯನ್ನು ಕಡಿಮೆ ಮಾಡುವ ಅದ್ಭುತ ವಿಧಾನವಾಗಿದೆ.
ವೈವಿಧ್ಯಮಯ ಮ್ಯೂಚುವಲ್ ಫಂಡ್‌ಗಳಲ್ಲಿ ಎಸ್‌ಐಪಿ ಹೂಡಿಕೆಗಳನ್ನು ಮಾಡಬೇಕು.
ಷೇರು ಮಾರುಕಟ್ಟೆಯಿಂದ ಭಯಪಡುವುದು ಸುಲಭ, ಆದ್ದರಿಂದ ಸಣ್ಣದರಿಂದ ಪ್ರಾರಂಭಿಸಿ. ಅಂತಹ ಸಂದರ್ಭದಲ್ಲಿ ಇಂಡೆಕ್ಸ್ ಫಂಡ್‌ಗಳು ಉತ್ತಮ ಆಯ್ಕೆಯಾಗಿವೆ.
ಅನುಭವಿ ಸ್ಟಾಕ್ ಪಿಕ್ಕರ್‌ಗಳಿಗೂ ಸಹ ಯಶಸ್ವಿ ಸ್ಟಾಕ್‌ಗಳನ್ನು ಆಯ್ಕೆ ಮಾಡುವುದು ತುಂಬಾ ಕಷ್ಟ, ಆದ್ದರಿಂದ ನೀವೇಕೆ ತಲೆಕೆಡಿಸಿಕೊಳುತ್ತೀರಿ?
ಮತ್ತೊಂದೆಡೆ, ಇಂಡೆಕ್ಸ್ ಫಂಡ್‌ಗಳು ಪ್ರಸ್ತುತ ಸ್ಟಾಕ್ ಮಾರುಕಟ್ಟೆಯಲ್ಲಿ ವಹಿವಾಟು ನಡೆಸುತ್ತಿರುವ ಎಲ್ಲಾ ದೊಡ್ಡ ಷೇರುಗಳನ್ನು ಸರಿಸುಮಾರು ಸಮಾನ ಪ್ರಮಾಣದಲ್ಲಿ ಖರೀದಿಸುತ್ತದೆ.
ಹೆಚ್ಚಿನ ಸಂಖ್ಯೆಯ ಷೇರುಗಳಲ್ಲಿ (200-500) ಹೂಡಿಕೆ ಮಾಡುವ ಮೂಲಕ ನಿಮ್ಮ ಪೋರ್ಟ್‌ಫೋಲಿಯೊವನ್ನು ವೈವಿಧ್ಯಗೊಳಿಸಲು ಇಂಡೆಕ್ಸ್ ಫಂಡ್‌ಗಳು ನಿಮ್ಮನ್ನು ಅನುಮತಿಸುತ್ತವೆ.
ಸ್ವಾಭಾವಿಕವಾಗಿ, ಕೆಲವರು ಏರುತ್ತಾರೆ, ಮತ್ತೇ ಕೆಲವರು ಬೀಳುತ್ತಾರೆ.
ಆದರೆ ಐತಿಹಾಸಿಕವಾಗಿ, ಮೊದಲನೆಯದು ಹಿಂದಿನ ಸಂಖ್ಯೆಯನ್ನು ಮೀರಿದೆ.
ಇದು ಹೆಚ್ಚು ನೇರವಾದ ಮತ್ತು ವೆಚ್ಚ-ಪರಿಣಾಮಕಾರಿ ಹೂಡಿಕೆ ವಿಧಾನವಾಗಿದೆ.
ಸ್ಟಾಕ್ ಎನ್ನುವುದು ಕಂಪನಿ ಮಾಲೀಕತ್ವದ ಒಂದು ಭಾಗವನ್ನು ಪ್ರತಿಬಿಂಬಿಸುವ ಒಂದು ರೀತಿಯ ಹೂಡಿಕೆಯಾಗಿದೆ.
ಕಾಲಕಾಲಕ್ಕೆ ಷೇರುಗಳ ಮೌಲ್ಯದಲ್ಲಿ ಹೆಚ್ಚಾಗುತ್ತದೆ ಎಂದು ನಂಬುವ ಹೂಡಿಕೆದಾರರಿಂದ ಷೇರುಗಳನ್ನು ಖರೀದಿಸಲಾಗುತ್ತದೆ.
ನೀವು ಒಂದು ಸಂಸ್ಥೆಯ ಷೇರುಗಳ ಪಾಲನ್ನು ಖರೀದಿಸಿದಾಗ, ನೀವು ಆ ಕಂಪನಿಯ ಸಣ್ಣ ಭಾಗವನ್ನು ಖರೀದಿಸುತ್ತೀರಿ.
ಹೂಡಿಕೆದಾರರು ಸಂಸ್ಥೆಗಳಲ್ಲಿ ಷೇರುಗಳನ್ನು ಖರೀದಿಸುತ್ತಾರೆ. ಷೇರುಗಳ ಮೌಲ್ಯದಲ್ಲಿ ಏರಿಕೆಯಾಗುತ್ತದೆ ಎಂದು ಅವರು ನಂಬುತ್ತಾರೆ. ಇದು ಸಂಭವಿಸಿದಲ್ಲಿ, ಕಂಪನಿಯ ಷೇರುಗಳ ಮೌಲ್ಯವೂ ಏರುತ್ತದೆ.
ಅದರ ನಂತರ, ಷೇರುಗಳನ್ನು ಲಾಭಕ್ಕಾಗಿ ಮಾರಾಟ ಮಾಡಬಹುದು.
ಹೂಡಿಕೆದಾರರು ಇತರ ಹೂಡಿಕೆಯ ಆಯ್ಕೆಗಳಿಗಿಂತ ಸ್ಟಾಕ್‌ಗಳನ್ನು ಆಯ್ಕೆಮಾಡಲು ಮುಖ್ಯ ಕಾರಣವೆಂದರೆ ಷೇರುಗಳು ದೊಡ್ಡ ಆದಾಯವನ್ನು ನೀಡುತ್ತವೆ.
ಭಾರತೀಯ ಷೇರು ಮಾರುಕಟ್ಟೆಗಳಲ್ಲಿ ಹೂಡಿಕೆಯು ಸುರಕ್ಷಿತವಾಗಿದೆ; ಅದೇನೇ ಇದ್ದರೂ, ಇತರ ಯಾವುದೇ ಹೂಡಿಕೆಯಂತೆ, ಸಂಪೂರ್ಣ ಅಧ್ಯಯನ ಮತ್ತು ಯೋಜನೆಯ ಅಗತ್ಯವಿದೆ.
ನೆನಪಿಡಿ - ಮೊದಲು ಹೂಡಿಕೆ ಮಾಡಿ, ನಂತರ ಖರ್ಚು ಮಾಡಿ, ಕೊನೆಯದಾಗಿ ಉಳಿತಾಯ ಮಾಡಿ . ಹೆಚ್ಚಿನ ಜನರು ಸ್ಯಾಲರಿ ಚೆಕ್ ಅನ್ನು ಸ್ವೀಕರಿಸಿದಾಗ, ಮೊದಲು ಖರ್ಚು ಮಾಡುತ್ತಾರೆ ಮತ್ತು ನಂತರ ಹೂಡಿಕೆ ಮಾಡುತ್ತಾರೆ.
ಹಣವನ್ನು ಮೊದಲು ಉಳಿತಾಯಕ್ಕೆ ತೆಗೆದಿಡುವುದು ಉತ್ತಮ ಉಪಾಯವಾಗಿದೆ (ಉದಾಹರಣೆಗೆ, ನಿಮ್ಮ ಸಂಬಳದ 25% ಭಾಗ ) ಮತ್ತು ಉಳಿದ ಹಣವನ್ನು ಖರ್ಚು ಮಾಡಿ.
ಇಲ್ಲಿ ಮುಖ್ಯವಾದುದು ಶಿಸ್ತು ಮತ್ತು ಸ್ಥಿರತೆ. ನಿಮಗೇನಾದರೂ ಸಂದೇಹವಿದ್ದರೆ, ಹಣಕಾಸು ಸಲಹೆಗಾರರನ್ನು ನೇಮಿಸಿಕೊಳ್ಳಿ.
ಉಳಿತಾಯ ಖಾತೆ ಅಥವಾ ನಿಮ್ಮ ಮನೆಯಲ್ಲಿ ಹಣವನ್ನು ಇಡಕೂಡದು ಎಂಬುದೇ ಮುಖ್ಯ ವಿಷಯ. ಎಲ್ಲಾ ಸಮಯದಲ್ಲೂ ಲಿಕ್ವಿಡ್ ಫಂಡ್‌ನಲ್ಲಿ ಹೂಡಿಕೆ ಮಾಡಿ.