Buy Gold
Sell Gold
Daily Savings
Digital Gold
Instant Loan
Round-Off
Nek Jewellery
ಉಳಿತಾಯವನ್ನು ಸರಳೀಕರಿಸಲಾಗಿದೆ! ಜಾರ್ ಆಪ್ ನೊಂದಿಗೆ ಪ್ರತಿದಿನದ ಉಳಿತಾಯ ಆರಂಭಿಸಿ ಹಾಗೂ ಪ್ರತಿದಿನ ನಿಮ್ಮ ಉಳಿತಾಯಗಳನ್ನು ದ್ವಿಗುಣಗೊಳಿಸುವ ಅವಕಾಶವನ್ನು ಪಡೆಯಿರಿ!
ಜಾರ್ ಒಂದು ಪ್ರತಿದಿನದ ಚಿನ್ನದ ಉಳಿತಾಯದ ಆಪ್ ಆಗಿದ್ದು, ನೀವು ಆನ್ಲೈನ್ ಹಣ ಖರ್ಚು ಮಾಡಿದ ಪ್ರತಿ ಬಾರಿಯೂ ಸಣ್ಣ ಮೊತ್ತದ ಹಣವನ್ನು ಉಳಿಸಿ, ಹಣದ ಉಳಿತಾಯವನ್ನು ಒಂದು ಮೋಜಿನ ಅಭ್ಯಾಸವನ್ನಾಗಿ ಮಾಡುತ್ತದೆ.
ಜಾರ್ ಆಪ್ ಒಂದು ಡಿಜಿಟಲ್ ಪಿಗ್ಗಿ ಬ್ಯಾಂಕ್ ಇದ್ದ ಹಾಗೇ. ಇದು ನಿಮ್ಮ ಮೊಬೈಲ್ ನ SMS ಫ಼ೋಲ್ಡರ್ ನಿಂದ ನಿಮ್ಮ ಖರ್ಚುಗಳನ್ನು ಗುರುತಿಸಿ ಇದನ್ನು ಹತ್ತಿರದ 10 ಕ್ಕೆ ರೌಂಡ್ ಆಫ್ ಮಾಡಿ ನಿಮ್ಮ ಪ್ರತೀ ಖರ್ಚಿಗೂ ಬಿಡಿ ಚಿಲ್ಲರೆಯನ್ನು ಉಂಟುಮಾಡುತ್ತದೆ. ಉದಾಹರಣೆಗೆ, ನೀವು ಆನ್ಲೈನ್ ಆಗಿ ಮೊಬೈಲ್ ರೀಚರ್ಜ್ ಗೆ ರೂ 98 ಖರ್ಚು ಮಾಡಿದ್ದರೆ, ಜಾರ್ ಆಪ್ ನಿಮ್ಮ ಮೊಬೈಲ್ ಫೋನಿನ SMS ಫ಼ೋಲ್ಡರ್ ನಿಂದ ರಿಚಾರ್ಜ್ ಖಚಿತತೆಯ ಮೆಸೇಜ್ ಅನ್ನು ಗುರುತಿಸಿ ಅದನ್ನು ಹತ್ತಿರದ 10 ಕ್ಕೆ ರೌಂಡ್ ಆಫ್ ಮಾಡುತ್ತದೆ ಅಂದರೆ ರೂ 100 ಹಾಗೂ ರೂ 2 ರ ಬಿಡಿ ಚಿಲ್ಲರೆಯನ್ನು (100-98) ನಿಮ್ಮ ಬ್ಯಾಂಕ್ ಖಾತೆಯಿಂದ( ನಿಮ್ಮ UPI ಐಡಿ ಗೆ ಎಟಾಚ್ ಆಗಿರುವ) ತೆಗೆದು ಸ್ವಯಂಚಾಲಿತವಾಗಿಯೇ ಡಿಜಿಟಲ್ ಗೋಲ್ಡ್ ನಲ್ಲಿ ಹೂಡಿಕೆ ಮಾಡುತ್ತದೆ.
ಜಾರ್ ಆಪ್ ಸ್ವಯಂಚಾಲಿತವಾಗಿಯೇ ನಿಮ್ಮ ಬಿಡಿ ಚಿಲ್ಲರೆಯನ್ನು 99.9% ಶುದ್ಧ ಚಿನ್ನದಲ್ಲಿ ಹೂಡಿಕೆ ಮಾಡುತ್ತದೆ, ಇದು ವಿಶ್ವ ದರ್ಜೆಯ ವಾಲ್ಟ್ ಗಳಲ್ಲಿ ಸಂಪೂರ್ಣವಾಗಿ ಭದ್ರವಾಗಿದ್ದು ಭಾರತದ ಟಾಪ್ ಬ್ಯಾಂಕ್ ಗಳಿಂದ ಇನ್ಶೂರ್ ಆಗಿದೆ.
ಜಾರ್, ಲಕ್ಷಲಕ್ಷ ಭಾರತೀಯರ ಹೂಡಿಕೆಗಳನ್ನು ಹಾಗೂ ಉಳಿತಾಯವನ್ನು ಸ್ವಯಂಚಾಲಿತವಾಗಿಸಲು UPI ಆಟೋಪೇ ಅನ್ನು ಬಳಸುವ ಭಾರತದ ಮೊದಲ ಹಾಗೂ ಏಕೈಕ ಆಪ್ ಆಗಿದೆ. NPCI ಹಾಗೂ ಭಾರತದ ದೊಡ್ಡ UPI ಸರ್ವಿಸ್ ಪ್ರೊವೈಡರ್ ಗಳ ಆಶೀರ್ವಾದದೊಂದಿಗೆ, ಜಾರ್ ಆಪ್, ಸೂಕ್ಷ್ಮ ಉಳಿತಾಯಗಳಿಗಾಗಿ ಸಂಪೂರ್ಣವಾಗಿ ಸ್ವಯಂಚಾಲಿತ ಪರಿಹಾರಗಳನ್ನೊಳಗೊಂಡಿದ್ದು, ಭಾರತದ ಬಹುತೇಕ ಸಾಮಾನ್ಯ ಜನತೆಗೆ ಹೂಡಿಕೆಯಲ್ಲಿ ಪ್ರಭುತ್ವವನ್ನು ನೀಡಿದೆ.
ಜಾರ್ ಆಪ್, ಬ್ಯಾಂಕ್ ಖಾತೆ ಹೊಂದಿರುವ ಪ್ರತೀ ಭಾರತೀಯನಿಗೂ ಪ್ರತಿ ದಿನ ರೂ 1 ರಿಂದ ಆರಂಭಿಸಿ ಒಂದು ಸ್ಥಿರ ಮೊತ್ತವನ್ನು ಉಳಿಸಿ ಅದನ್ನು ಚಿನ್ನದಲ್ಲಿ ಸ್ವಯಂ ಉಳಿತಾಯ ಮಾಡುವ, ಅತೀ ಹಳೆಯ ಪಿಗ್ಮಿ ಠೇವಣಿ ಸ್ಕೀಮ್ ಅನ್ನು ಕೂಡಾ ಡಿಜಿಟೈಜ್ ಮಾಡಿದೆ.