Buy Gold
Sell Gold
Daily Savings
Digital Gold
Instant Loan
Round-Off
Nek Jewellery
ನೀವೊಬ್ಬ ಹೊಸ ಹೂಡಿಕೆದಾರರಾಗಿ, ಹಣವನ್ನು ಕೂಡಿಸಿ, ಅದೇ ಹಣವನ್ನು ಒಂದು ಪ್ರಬಲ ಸಾಧನವಾಗಿ ಗರಿಷ್ಠಗೊಳಿಸಲು ನಿಮ್ಮ ಹಣದ ಹೂಡಿಕೆಗೆ ಉತ್ತಮ ಮಾರ್ಗಗಳನ್ನು ತಿಳಿಯಿರಿ.
ಈ ಗಾದೆ ಎಂದಿಗೂ ಹಳೆಯದಾಗದು ಎನ್ನುವುದು ನಮಗೆಲ್ಲರಿಗೂ ತಿಳಿದಿದೆ. ಏಕೆಂದರೆ ನಮ್ಮ ಜೀವನದಲ್ಲಿ ಹಣವು ತುಂಬಾ ಮೌಲ್ಯವನ್ನು ಹೊಂದಿದೆ - ಅದು ವಸ್ತುಗಳನ್ನು ಖರೀದಿಸುವುದಾಗಿರಲಿ, ಭವಿಷ್ಯಕ್ಕಾಗಿ ಉಳಿಸುವುದಾಗಿರಲಿ ಅಥವಾ ಜೀವನದಲ್ಲಿ ಕೆಲವು ಹಣಕಾಸಿನ ಗುರಿಗಳನ್ನು ಪೂರೈಸಲು ಹೂಡಿಕೆ ಮಾಡುವುದಾಗಿರಲಿ, ಎಲ್ಲದಕ್ಕೂ ಹಣ ಬೇಕೇಬೇಕು.
ಆದಾಗ್ಯೂ, ನಾವೆಲ್ಲರೂ ಉಳಿತಾಯದ ಪ್ರಾಮುಖ್ಯತೆಯನ್ನು ತಿಳಿದಿದ್ದರೂ, ನಮ್ಮಲ್ಲಿ ಅನೇಕರು ಈ ಅಭ್ಯಾಸವನ್ನು ರೂಢಿಸಿಕೊಳ್ಳಲು ಕಷ್ಟಪಡುತ್ತಾರೆ ಅಥವಾ ಉಳಿತಾಯವನ್ನು ಎಲ್ಲಿಂದ ಪ್ರಾರಂಭಿಸಬೇಕು ಎಂದು ತಿಳಿದಿರುವುದಿಲ್ಲ.
ನಮ್ಮಲ್ಲಿ ಹೆಚ್ಚಿನವರಂತೆ, ನೀವೂ ಸಹ ಯಾವುದೇ ಭಾವನೆಯಿಲ್ಲದೆ ಹಣದ ಉಳಿತಾಯವನ್ನು ಹೇಗೆ ಪ್ರಾರಂಭಿಸಬಹುದೆಂದು ಯೋಚಿಸುತ್ತಿದ್ದರೆ, ಈ 52- ವಾರಗಳ ಮನಿ-ಚಾಲೆಂಜ್ ಮೂಲಕ ನೀವು ಪ್ರಾರಂಭಿಸಬಹುದು.
ಈ ಮಾತಿನ ಕೊನೆಯಲ್ಲಿ, ನೀವು ಎರಡು ವಿಷಯಗಳನ್ನು ಗಮನಿಸಬಹುದು:
ಇದನ್ನು ಪ್ರಾರಂಭಿಸಲು, ನೀವು ಮಾಡಬೇಕಾಗಿರುವುದು ದಿನಕ್ಕೆ ₹2 ಉಳಿತಾಯ ಮಾಡುವುದು. ನೀವೇನು ಯೋಚಿಸುತ್ತಿದ್ದೀರಿ ಎಂದು ನಮಗೆ ತಗೊತ್ತು. ಉಳಿತಾಯವು ಕಷ್ಟವಲ್ಲವೇ? ಆ ನಂಬಿಕೆಯನ್ನು ಒಡೆದಿದ್ದಕ್ಕೆ ಕ್ಷಮಿಸಿ, ಆದರೆ ಉಳಿತಾಯ ಮಾಡುವುದು ತುಂಬಾ ಸುಲಭ!
1 ನೇ ದಿನದಂದು ₹2 ಉಳಿತಾಯ ಮಾಡಿ, ದಿನ 2 ನೇ ದಿನ ₹4 ಅನ್ನು ಉಳಿತಾಯ ಮಾಡಿ , ಮತ್ತು ಹೀಗೆ ಮುದುವರೆಯಿರಿ. ನೀವು 365 ನೇ ದಿನದ ಹೊತ್ತಿಗೆ, ನೀವು ₹1,32,860 ಉಳಿತಾಯದ ಮೊತ್ತವನ್ನು ತಲುಪಿರುತ್ತೀರಿ. ಹೀಗಾಗಿ ಇದು ಮುಂದಿನ ವರ್ಷದ ಆರಂಭದ ವೇಳೆಗೆ, ಹೆಚ್ಚಿನ ಹಣವನ್ನು ಉಳಿತಾಯ ಮಾಡಲು ನಿಮಗೆ ಅವಕಾಶ ನೀಡುತ್ತದೆ!
ಈ ಸಂಪೂರ್ಣ ಅಭ್ಯಾಸವು, ತಿಂಗಳಿಗೆ ಟೇಕ್-ಹೋಮ್ ಆದಾಯ ₹50,000 ಅಥವಾ ಅದಕ್ಕಿಂತ ಹೆಚ್ಚು ಇರುವ ವ್ಯಕ್ತಿಗಳಿಗೆ ಸೂಕ್ತವಾಗುತ್ತದೆ. ಆದರೆ, ಈ ವಿಧಾನದ ವಿಶೇಷತೆ ಏನೆಂದರೆ, ನಿಮ್ಮ ಗುರಿಯನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಹೊಂದಿಸಬಹುದು.
ಸರಿಯಾದ ಶಿಸ್ತಿನಿಂದ ನೀವು ಪ್ರತಿದಿನ ಉಳಿತಾಯವನ್ನು ಪ್ರಾರಂಭಿಸಬಹುದಾದ ಉತ್ತಮ ಮಾರ್ಗಗಳಲ್ಲಿ ಇದೂ ಒಂದು ಎಂದು ನಾವು ಕಂಡುಕೊಂಡಿದ್ದೇವೆ ಮತ್ತು ನೀವು ನಿಮ್ಮ ಹಣ ದ್ವಿಗುಣವಾಗುವುದನ್ನು ನೋಡಬಹುದು. ನೀವಿದನ್ನು ತಿಳಿಯುವ ಹೊತ್ತಿಗೆ, 2022 ರ ಕೊನೆಯಲ್ಲಿ ನೀವು ಸ್ವಲ್ಪ ಅದೃಷ್ಟವನ್ನು ಪಡೆದಿರುತ್ತೀರಿ!
ಸಂಪತ್ತನ್ನು ಹೆಚ್ಚಿಸುವ ಸಿಕ್ರೇಟ್ ಅನ್ನು ನೀವೀಗ ತಿಳಿದಿದ್ದೀರಿ. ಅದನ್ನು ಮತ್ತಷ್ಟು ಹೆಚ್ಚಿಸುವುದಕ್ಕಾಗಿ ನಿಮಗೆ ಸಹಾಯ ಮಾಡಲು, ಉಳಿತಾಯವನ್ನು ನೀವು ಹೇಗೆ ಅಚ್ಚುಕಟ್ಟಾಗಿ ಯೋಜಿಸಬಹುದು ಎಂಬುದು ಇಲ್ಲಿದೆ!
ನೀವು ನಿಮ್ಮ ಹಣವನ್ನು ನಿರಂತರವಾಗಿ ಬ್ಯಾಂಕ್‌ಗೆ ಸೇರಿಸುವವರೆಗೆ, ಈ ಅದ್ಭುತವಾದ ಚಿಕ್ಕ ಪ್ರಕ್ರಿಯೆಯು 'ವಿಶ್ವದ 8 ನೇ ಅದ್ಭುತ' ಎಂದು ಕೂಡ ಕರೆಯಲ್ಪಡುತ್ತದೆ.
ಡೆಪಾಸಿಟ್ ಮೇಲೆ ಗಳಿಸಿದ ಬಡ್ಡಿಯನ್ನು ಕಾಂಪೌಂಡ್ ಇಂಟರೆಸ್ಟ್ (ಚಕ್ರ ಬಡ್ಡಿ) ಎಂದು ಕರೆಯಲಾಗುತ್ತದೆ. ಏಕೆಂದರೆ ಇದು ಆರಂಭಿಕ ಅಸಲು ಮತ್ತು ಕಾಲಾನಂತರದಲ್ಲಿ ಸಂಗ್ರಹವಾದ ಬಡ್ಡಿ, ಎರಡನ್ನೂ ಅಂದಾಜಿಸುತ್ತದೆ.
ಚಕ್ರ ಬಡ್ಡಿಯನ್ನು ದೈನಂದಿನ, ಮಾಸಿಕ ಅಥವಾ ವಾರ್ಷಿಕ ಆಧಾರದ ಮೇಲೆ ಲೆಕ್ಕಾಚಾರ ಮಾಡಬಹುದು.
ಕಾಂಪೌಂಡಿಂಗ್ ಅವಧಿಗಳ ಸಂಖ್ಯೆಯು ಹೆಚ್ಚಾದಾಗ, ಚಕ್ರ ಬಡ್ಡಿಯೂ ಹೆಚ್ಚಾಗುತ್ತದೆ. ಇದನ್ನು ಬೆಟ್ಟದಿಂದ ಕೆಳಗೆ ಉರುಳುವ ಸ್ನೋಬಾಲ್ ಎಂದು ಯೋಚಿಸಿ.
ನೀವು ಸಾಧ್ಯವಾದಷ್ಟು ಬೇಗ ಉಳಿತಾಯ ಪ್ರಾರಂಭಿಸಿದರೆ ಮತ್ತು ಕಾಲಕಾಲಕ್ಕೆ ಅದಕ್ಕೆ ಹಣವನ್ನು ಕೂಡಿಸುತ್ತಿದ್ದರೆ ನಿಮ್ಮ ಹಣದ ಮೊತ್ತ ದೊಡ್ಡದಾಗುತ್ತದೆ.
ಈಗ, ನೀವು ಹಿಮದಿಂದ ಆವೃತವಾದ ಇಳಿಜಾರಿನುದ್ದಕ್ಕೂ ಸ್ನೋಬಾಲ್ ಅನ್ನು ಉರುಳಿಸಿದಂತೆ ಊಹಿಸಿ. ನೀವು ಈಗಾಗಲೇ ಸಂಗ್ರಹಿಸಿದ ಹಿಮವನ್ನು ಉಳಿಸಿಕೊಳ್ಳಲು ನಿಮಗೆ ಸಾಧ್ಯವಾಗುತ್ತದೆ ಮತ್ತು ನೀವಿನ್ನೂ ಹೆಚ್ಚಿನದನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ.
ಇದು ತನ್ನ ಪ್ರಯಾಣದ ಅಂತ್ಯವನ್ನು ಸಮೀಪಿಸುತ್ತಿರುವಂತೆ, ನಿಮ್ಮ ಸ್ನೋಬಾಲ್ ನೀವು ಪ್ರಾರಂಭಿಸಿದ ಸ್ನೋ ಅನ್ನು, ಮತ್ತು ಅದು ತೆಗೆದುಕೊಂಡ ಯಾವುದೇ ಹೆಚ್ಚಿನ ಸ್ನೋ ಅನ್ನು ಒಳಗೊಂಡಿರುತ್ತದೆ.
ಉದಾಹರಣೆಗೆ, ಬಡ್ಡಿ-ಮೇಲಿನ-ಬಡ್ಡಿಯ ಪರಿಣಾಮವು, ಕಾಲಾನಂತರದಲ್ಲಿ ಬೆಳೆಯುತ್ತಿರುವ ಲಾಭವನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ.
ಪರಿಣಾಮವಾಗಿ, ಆಗಾಗ ಹೆಚ್ಚಿನ ಮತ್ತು ದೊಡ್ಡ ಮೊತ್ತದ ಉಳಿತಾಯವು, ನಿಮಗೆ ಹೆಚ್ಚಿನ ಬಡ್ಡಿದರವನ್ನು ಗಳಿಸುತ್ತದೆ. "ಚಕ್ರ ಬಡ್ಡಿಯ ಅದ್ಭುತ" ಈ ವಿದ್ಯಮಾನಕ್ಕಿರುವ ಮತ್ತೊಂದು ಹೆಸರು.
ಚಕ್ರ ಬಡ್ಡಿಯು ನಿಮ್ಮ ಹಣಕಾಸಿನ ಸ್ವತ್ತುಗಳ ಬೆಳವಣಿಗೆಯನ್ನು ವೇಗಗೊಳಿಸುತ್ತದೆ. ನೀವು ಕಾಂಪೌಂಡಿಂಗ್ ತಂತ್ರವನ್ನು ಬಳಸಿದಾಗ, ನೀವು ಒಂದು ಅವಧಿಗೆ ಹಣದ ಮೇಲೆ ಬಡ್ಡಿಯನ್ನು ಗಳಿಸುತ್ತೀರಿ.
ಈ ಬಡ್ಡಿಯನ್ನು, ನೀವು ಖಾತೆಗೆ ಹಾಕುವ ಮೊತ್ತ ಮತ್ತು ಪ್ರತಿ ಕಾಂಪೌಂಡಿಂಗ್ ಅವಧಿಯ ಕೊನೆಯಲ್ಲಿರುವ ಆದಾಯಗಳ ಮೇಲೆ ಲೆಕ್ಕ ಹಾಕಲಾಗುತ್ತದೆ.
ಈ ಕಾರಣದಿಂದಾಗಿ, ಪ್ರಾಕ್ಟಿಕಲ್ ಆಗಿ ಒಂದು ವರ್ಷದಲ್ಲಿ 365 ದಿನಗಳನ್ನು ಉಳಿತಾಯ ಮಾಡುವ ಮೂಲಕ ನಿಮ್ಮ ಗುರಿಗಳನ್ನು ಸಾಧಿಸಲು ನೀವು ಹೆಚ್ಚು ಹಣವನ್ನು ಉಳಿಸಬೇಕಾಗಿಲ್ಲ.
ಬೆಳೆಯುತ್ತಿರುವ ಹಣಕಾಸಿನ ವಿಷಯಕ್ಕೆ ಬಂದರೆ, ಕಾಂಪೌಂಡಿಂಗ್ ಎನ್ನುವುದು ಶಕ್ತಿಶಾಲಿ ಸಾಧನವಾಗಿರಬಹುದು. ನಿಮ್ಮ ಉಳಿತಾಯದ ಸಾಮರ್ಥ್ಯವನ್ನು ಹೆಚ್ಚಿಸಲು, ನೀವು ಸಾಧ್ಯವಾದಷ್ಟು ಬೇಗ ಟೈಮ್-ಸೆನ್ಸಿಟಿವ್ ಇಂಟರೆಸ್ಟ್-ಬಿಯರಿಂಗ್ ಖಾತೆಯನ್ನು ತೆರೆಯಿರಿ.
ಜೀವನ ವೆಚ್ಚಗಳ ಹೆಚ್ಚಳ, ಹಣದುಬ್ಬರ ಮತ್ತು ಹಣದ ಕೊಳ್ಳುವ ಶಕ್ತಿಯಲ್ಲಿನ ಇಳಿಕೆ ಎಲ್ಲವನ್ನೂ ಈ ತಂತ್ರದೊಂದಿಗೆ ತಗ್ಗಿಸಬಹುದು.
ಚಕ್ರಬಡ್ಡಿಯ ಲಾಭವನ್ನು ಪಡೆದುಕೊಳ್ಳಲು, ಪ್ರತಿ ತಿಂಗಳು ಪೂರ್ವನಿರ್ಧರಿತ ಮೊತ್ತವನ್ನು ಹೂಡಿಕೆ ಮಾಡುವುದರ ಪ್ರಾಮುಖ್ಯತೆಯನ್ನು ನಾವು ಚರ್ಚಿಸಿದ್ದೇವೆ.
ಆದರೆ, ನಿಮ್ಮ ಹಣ ಮತ್ತಷ್ಟು ಬೆಳೆಯಲು ಅಷ್ಟೇ ಮುಖ್ಯವಾದ ಇತರ ಅಂಶಗಳು ಇಲ್ಲಿವೆ:
ನೂರು ರೂಪಾಯಿ ಅಥವಾ ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡುವುದಾಗಿರಲಿ, ಎಲ್ಲವೂ ಕಾಂಪೌಂಡಿಂಗ್‌ನ ಅದೇ ನಿಯಮಗಳನ್ನು ಅನುಸರಿಸುತ್ತವೆ. ಮತ್ತೊಂದೆಡೆ, ದೊಡ್ಡ ಮೊತ್ತವನ್ನು ಹೂಡಿಕೆ ಮಾಡುವುದರಿಂದ ಬಡ್ಡಿಯ ಗಳಿಕೆಯಲ್ಲಿ ಭಾರಿ ಏರಿಕೆಯಾಗಬಹುದು.
ಕಾಂಪೌಂಡಿಂಗ್‌ನ ಲಾಭ ಪಡೆಯಲು ನಿಮ್ಮ ಹೂಡಿಕೆಗಳನ್ನು ಹೆಚ್ಚಿಸಿ. ಆದಾಗ್ಯೂ, ನಿಮ್ಮ ಖರ್ಚುಗಳನ್ನು ಸೀಮಿತಗೊಳಿಸುವ ಮೂಲಕ ನಿಮ್ಮ ಉಳಿತಾಯವನ್ನು ನೀವು ಮತ್ತಷ್ಟು ಸುಧಾರಿಸಬಹುದು.
ಮಾಸಿಕ ಬಜೆಟ್ ಅನ್ನು ರಚಿಸುವ ಮೂಲಕ ಮತ್ತು ನೀವು ಹಣವನ್ನು ಎಲ್ಲೆಲ್ಲಿ ಉಳಿಸಬಹುದೆನ್ನುವುದನ್ನು ಗುರುತಿಸುವ ಮೂಲಕ ನೀವಿದನ್ನು ಮಾಡಬಹುದು.
ನೀವು ಎಚ್ಚರಿಕೆಯಿಂದ ಖರ್ಚು ಮಾಡಿದರೆ ನಿಮ್ಮ ಉಳಿತಾಯವನ್ನು ಸುಧಾರಿಸಬಹುದು ಮತ್ತು ಹೆಚ್ಚು ಹೂಡಿಕೆ ಮಾಡಬಹುದು. ಈ ರೀತಿಯಲ್ಲಿ ಹಣವನ್ನು ಹೆಚ್ಚಿಸುವ ಉತ್ತಮ ಅವಕಾಶವನ್ನು ನೀವು ಹೊಂದುವಿರಿ.
ಹೂಡಿಕೆಯ ವಿಷಯಕ್ಕೆ ಬಂದರೆ, ಅದರ ಆರಂಭವನ್ನು ಯಾವುದು ಮೀರಿಸುವುದಿಲ್ಲ. ನೀವು ಹಣ ಸಂಪಾದಿಸಲು ಪ್ರಾರಂಭಿಸಿದ ತಕ್ಷಣ ನೀವು ಹೂಡಿಕೆಯನ್ನು ಪ್ರಾರಂಭಿಸಬೇಕು.
ಆದಾಗ್ಯೂ, ನೀವು ಈಗಾಗಲೇ ಆ ಹಂತವನ್ನು ತಲುಪಿದ್ದರೆ,ನಿಮ್ಮ ಹೂಡಿಕೆಯನ್ನು ಪ್ರಾರಂಭಿಸುವ ಸಮಯ ಈಗಲೇ.
ನಿಮ್ಮ ಹಣಕಾಸಿನ ಗುರಿಗಳಿಗೆ ಹೊಂದುವ ಡಿಜಿಟಲ್ ಗೋಲ್ಡ್ ಅಥವಾ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿ. ಕಾಂಪೌಂಡಿಂಗ್‌ನ ಸಹಾಯದಿಂದ, ಭವಿಷ್ಯದಲ್ಲಿ ನಿಮ್ಮ ಹಣವನ್ನು ಹೆಚ್ಚಿಸಲು ಮತ್ತು ಅಭಿವೃದ್ಧಿ ಹೊಂದಲು ನೀವು ಸದೃಢವಾದ ಅಡಿಪಾಯವನ್ನು ನಿರ್ಮಿಸಬಹುದು.
ಹೂಡಿಕೆಯ ಮೇಲಿನ ನಿಮ್ಮ ಲಾಭವನ್ನು ಕಂಡುಹಿಡಿಯುವುದು ಹೇಗೆಂದು ನಿಮಗೆ ಖಚಿತವಿಲ್ಲದಿದ್ದರೆ, ಇಂಟರ್ನೆಟ್ ಕ್ಯಾಲ್ಕುಲೇಟರ್ ನಿಮಗೆ ಸಹಾಯ ಮಾಡಬಹುದು.
ಆನ್‌ಲೈನ್ ಹೂಡಿಕೆ ಕ್ಯಾಲ್ಕುಲೇಟರ್‌ಗಳನ್ನು ಕಂಡುಹಿಡಿಯುವುದು ಸುಲಭ. ಅದು ನಿಮ್ಮ ದೀರ್ಘಾವಧಿಯ ಗುರಿಗಳನ್ನು ತಲುಪಲು ನನೀವೀಗ ಏನನ್ನು ಉಳಿತಾಯ ಮಾಡಬೇಕು ಎಂಬುದನ್ನು ಅಂದಾಜು ಮಾಡುತ್ತದೆ.
ನೀವು ಆರೋಗ್ಯಕರ ಪೋರ್ಟ್‌ಫೋಲಿಯೊವನ್ನು ನಿರ್ಮಿಸಲು ಮತ್ತು ಸರಿಯಾದ ಸಮಯಕ್ಕೆ ನಿಮ್ಮ ಹಣಕಾಸಿನ ಗುರಿಗಳನ್ನು ತಲುಪಲು ಬಯಸಿದರೆ, ನಿಮಗೆ ಹೂಡಿಕೆಯಲ್ಲಿ ಶಿಸ್ತು ಅತ್ಯಗತ್ಯ.
ಆರಂಭಿಕ ಹೂಡಿಕೆಗಾಗಿ ದಿನಚರಿಯನ್ನು ಬೆಳೆಸಿಕೊಳ್ಳುವುದು, ನಿಮ್ಮನ್ನು ನಿಮ್ಮ ಗುರಿಯತ್ತ ಫೋಕಸ್ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ಎಸ್ಐಪಿ (SIP) ಪೇಮೆಂಟ್‌ಗಳನ್ನು ಬಿಟ್ಟುಬಿಡಬಾರದು.
ಪ್ರತಿ ತಿಂಗಳು ಸತತವಾಗಿ ಹೂಡಿಕೆ ಮಾಡುವದರಿಂದ, ನಿಮ್ಮ ಹಣವು ಹಾಗೆಯೇ ನಿಮ್ಮ ಹೂಡಿಕೆಯ ಶಿಸ್ತು ಸಹ ಬೆಳೆಯುತ್ತದೆ.
ನೀವು ಆರ್ಥಿಕವಾಗಿ ಯಶಸ್ವಿಯಾಗಲು ಬಯಸಿದರೆ, ನೀವು ಈ ಅಭ್ಯಾಸಗಳನ್ನು ಬೆಳೆಸಿಕೊಳ್ಳಲೇಬೇಕು.
ಅನೇಕ ಬಾರಿ, ಯುವ ಹೂಡಿಕೆದಾರರು ತ್ವರಿತ ಲಾಭವನ್ನುಂಟುಮಾಡುವ ಹೂಡಿಕೆಯ ಮಾರ್ಗಗಳನ್ನು ಹುಡುಕಲು ಉತ್ಸುಕರಾಗಿರುತ್ತಾರೆ.
ಆದಾಗ್ಯೂ, ತ್ವರಿತ ಹಣ ಗಳಿಸುವ ಈ ಧಾವಂತದಲ್ಲಿ, ಯುವ ಹೂಡಿಕೆದಾರರು ದುಬಾರಿ ಪ್ರಮಾದಗಳನ್ನು ಮಾಡಬಹುದು. ಈಗಾಗಲೇ ನಾವು ನೋಡಿದಂತೆ, ಕಾಂಪೌಂಡಿಂಗ್‌ನ ಸಾಮರ್ಥ್ಯವು ಕಾಲಾನಂತರದಲ್ಲಿ ದ್ವಿಗುಣಗೊಳ್ಳುತ್ತದೆ.
ಆದ್ದರಿಂದ ಹೂಡಿಕೆಯ ಮೇಲೆ ದೀರ್ಘಾವಧಿಯ ದೃಷ್ಟಿಕೋನದಿಂದ ನೋಡುವುದು ಪ್ರಯೋಜನಕಾರಿಯಾಗಿದೆ. ನಿಧಾನವಾಗಿ ಹೂಡಿಕೆ ಮಾಡುವುದರಿಂದ ಅದು ದೀರ್ಘಾವಧಿಯಲ್ಲಿ ನಿಮಗೆ ಉತ್ತಮ ಫಲ ನೀಡಬಹುದು.
ಕಾಂಪೌಂಡಿಂಗ್‌ನ ಪ್ರಯೋಜನಗಳನ್ನು ಪಡೆಯಲು ನೀವು ಫೈನಾನ್ಸಿಯಲ್ ಎಕ್ಸಪರ್ಟ್ ಆಗಿರಬೇಕು ಎನ್ನುವ ಅಗತ್ಯವಿಲ್ಲ. ಪ್ರತಿಯೊಬ್ಬ ಹೂಡಿಕೆದಾರರು ಈ ತತ್ವದ ಪ್ರಯೋಜನವನ್ನು ಪಡೆದುಕೊಳ್ಳಬಹುದು ಮತ್ತದನ್ನು ಸದುಪಯೋಗಪಡಿಸಿಕೊಳ್ಳಬಹುದು.
ಉಜ್ವಲ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು, ಈಗಲೇ ಹೂಡಕೆಯನ್ನು ಪ್ರಾರಂಭಿಸಿ.
ಶಿಸ್ತುಬದ್ಧ ನಿಯಮಿತ ಉಳಿತಾಯದೊಂದಿಗೆ, ನೀವು ಚಕ್ರಬಡ್ಡಿಯನ್ನು ನೀಡುವ ಆಸ್ತಿಗಳ ಮೇಲೆ ಹೂಡಿಕೆ ಮಾಡಲು ಸಾಧ್ಯವಾಗುತ್ತದೆ. ನೀವು ನಿವೃತ್ತಿ ಹೊಂದಲು ಪ್ಲ್ಯಾನ್ ಮಾಡುವ ಸಮಯದಲ್ಲಿ, ಈ ಹೂಡಿಕೆಯು ನಿಮಗೆ ದೊಡ್ಡ ಅದೃಷ್ಟವನ್ನು ನೀಡುತ್ತದೆ!