Playstore Icon
Download Jar App
Financial Education

ಮೊದಲಿನಿಂದ ನಿಮ್ಮ ಸ್ಯಾಲರಿ ಸ್ಲಿಪ್ ಅನ್ನು ತಿಳಿಯಲು ಮಾರ್ಗದರ್ಶಿ - ಜಾರ್ ಅಪ್ಲಿಕೇಶನ್

December 30, 2022

ನಿಮ್ಮ ಸ್ಯಾಲರಿ ಸ್ಲಿಪ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲದಕ್ಕೂ ಮಾರ್ಗದರ್ಶಿ - ಸ್ಯಾಲರಿ ಸ್ಲಿಪ್ ಎಂದರೇನು? ಅದರ ಘಟಕಗಳು ಯಾವುದು? ಮತ್ತು ಇನ್ನಷ್ಟು ತಿಳಿಯಿರಿ.

ನಿಮ್ಮ ಮೊದಲ ಸ್ಯಾಲರಿ ಸ್ಲಿಪ್ ಸಿಕ್ಕಿತಾ? ಅಥವಾ ನೀವದನ್ನು ಪ್ರತಿ ತಿಂಗಳು ಪಡೆಯುತ್ತೀರಿ, ಆದರೆ ಅದನ್ನು ಲೆಕ್ಕಾಚಾರ ಮಾಡಲು ಸಾಧ್ಯವಾಗುತ್ತಿಲ್ಲವೇ? ಚಿಂತಿಸಬೇಡಿ, ನೀವು ಖಂಡಿತವಾಗಿಯೂ ಒಬ್ಬಂಟಿಯಾಗಿಲ್ಲ.

ಗೊಂದಲಮಯ ಭಾಷೆ ಮತ್ತು ಅಂಕಿಅಂಶಗಳು, ಯಾರೊಬ್ಬರೂ ಪರಿಹರಿಸಲು ಬಯಸದ ಸಮಸ್ಯೆಗಳಿಗೆ ಅಭಿಮುಖವಾಗಿರುತ್ತವೆ. ಆದರೆ, ಮುಂದುವರೆಯುವ ಮೊದಲು, ಉಳಿತಾಯವನ್ನು ಅಭ್ಯಾಸವನ್ನಾಗಿ ಅಭಿವೃದ್ಧಿಪಡಿಸುವುದು ಈಗ ಮತ್ತಷ್ಟು ಸುಲಭ ಮತ್ತು ಪ್ರಶಸ್ತಾರ್ಹವಾಗಿದೆ ಎಂದು ನೀವು ತಿಳಿದುಕೊಳ್ಳಬೇಕೆಂದು ನಾವು ಬಯಸುತ್ತೇವೆ.

ವಿಶೇಷವಾಗಿ ನೀವು ಸಾಲಕ್ಕಾಗಿ ಅರ್ಜಿ ಸಲ್ಲಿಸುವಾಗ, ಹೊಸ ಕಂಪನಿಗೆ ಅರ್ಜಿ ಸಲ್ಲಿಸುವಾಗ ಅಥವಾ ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳುವಾಗ ಇದು ನಿಮ್ಮ ತಲೆಯನ್ನು ಕೆಡಿಸುತ್ತದೆ.

ಅನೇಕ ಉದ್ಯೋಗಿಗಳು ಇದೇ ಸಮಸ್ಯೆಯೊಂದಿಗೆ ಹೋರಾಡುತ್ತಾರೆ. ಮತ್ತು ನಾವು, ಜಾರ್‌ನಲ್ಲಿ ನಿಮಗಾಗಿ ಇಂತಹ ಎಲ್ಲ ಸಮಸ್ಯೆಯನ್ನು ತೊಡೆದುಹಾಕಲು ನಿಮ್ಮೊಂದಿಗಿದ್ದೇವೆ!

ಮೂಲಭೂತ ವಿಷಯಗಳೊಂದಿಗೆ ಪ್ರಾರಂಭಿಸೋಣ. ಸ್ಯಾಲರಿ ಸ್ಲಿಪ್ ಎಂದರೇನು?

ಎಂಪ್ಲಾಯೀ ಪೇಸ್ಲಿಪ್ ಎಂದೂ ಕರೆಯಲ್ಪಡುವ ಸ್ಯಾಲರಿ ಸ್ಲಿಪ್, ಉದ್ಯೋಗದಾತನು ತನ್ನ ಉದ್ಯೋಗಿಗಳಿಗೆ ನೀಡುವ ತಿಂಗಳ ಲೀಗಲ್ ಡಾಕ್ಯುಮೆಂಟ್‌ ಆಗಿದೆ.

ಇದು ಉದ್ಯೋಗಿಯ ವೇತನದ ಸಂಪೂರ್ಣ ಕಡಿತಗಳನ್ನು ಒಳಗೊಂಡಿದೆ. ಇದು ಒಂದು ನಿರ್ದಿಷ್ಟ ಅವಧಿಗೆ ಎಲ್ಲಾ ಸೇರ್ಪಡೆಗಳು (inclusions), ಹೊರಗಿಡುವಿಕೆಗಳು (exclusions), ಕಡಿತಗಳು (deductions) ಇತ್ಯಾದಿಗಳನ್ನು ಒಳಗೊಂಡಿರುತ್ತದೆ.

ಹೆಚ್ಚಾಗಿ ಎಲ್ಲಾ ಸಂಬಳ ಪಡೆಯುವ ಉದ್ಯೋಗಿಗಳು, ಸ್ಯಾಲರಿ ಸ್ಲಿಪ್ ಅನ್ನು ಪಡೆಯುತ್ತಾರೆ. ಅವರು ಈ ಡಾಕ್ಯುಮೆಂಟ್‌ನ ಸ್ಪಷ್ಟವಾದ ನಕಲನ್ನು ಸ್ವೀಕರಿಸಬಹುದು ಅಥವಾ ಅದನ್ನು ಪಿಡಿಎಫ್  ರೂಪದಲ್ಲಿ ಅವರಿಗೆ ಮೇಲ್ ಮಾಡಬಹುದು. ಈ ಪಿಡಿಎಫ್  ಅನ್ನು ಉದ್ಯೋಗಿಗಳು ನೋಡಬಹುದು ಅಥವಾ ಅವರು ಬಯಸಿದರೆ ಪ್ರಿಂಟ್ ಸಹ ಮಾಡಿಸಿಕೊಳ್ಳಬಹುದು.

ಆದರೆ ಈ ಸ್ಯಾಲರಿ ಸ್ಲಿಪ್ ಏಕೆ ಮುಖ್ಯ?

ವಿವರವಾದ ಕಡಿತಗಳೊಂದಿಗೆ ನಿಮ್ಮ ಸ್ಯಾಲರಿ ಸ್ಲಿಪ್ ಅನ್ನು ನೀಡಲು ಕಂಪನಿಗಳು ಕಾನೂನಾತ್ಮಕವಾಗಿ ಬದ್ಧವಾಗಿವೆ ಎಂದು ನಿಮಗೆ ತಿಳಿದಿದೆಯೇ? ಆದ್ದರಿಂದ ಸ್ಪಷ್ಟವಾಗಿ, ಈ ಪೇಸ್ಲಿಪ್‌ಗಳು ಕೆಲವು ನೈಜ ಪ್ರಾಮುಖ್ಯತೆಯನ್ನು ಹೊಂದಿವೆ. ಕಾರಣ ಇಲ್ಲಿದೆ:

  • ಉದ್ಯೋಗದ ಪುರಾವೆ (Proof of employment) : ಹೌದು, ಈ ಡಾಕ್ಯುಮೆಂಟ್ ಕಾನೂನಿನ ದೃಷ್ಟಿಯಲ್ಲಿ ಉದ್ಯೋಗದ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ. ನೀವು ವಿವಿಧ ಕಾಲೇಜುಗಳಲ್ಲಿ ವೀಸಾ ಅಥವಾ ಎಕ್ಸಿಕ್ಯೂಟಿವ್ ಪ್ರೋಗ್ರಾಮ್‌ಗೆ ಅರ್ಜಿ ಸಲ್ಲಿಸುತ್ತಿದ್ದರೆ, ನಿಮ್ಮ ಇತ್ತೀಚಿನ ಡ್ರಾ ಮಾಡಿದ ಸ್ಯಾಲರಿ ಮತ್ತು ನಿಮ್ಮ ಹುದ್ದೆಯ ಪುರಾವೆಯಾಗಿ ನಿಮ್ಮ ಪೇಸ್ಲಿಪ್‌ನ ಪ್ರತಿಗಳನ್ನು ನೀಡುವಂತೆ ಅವರು ನಿಮ್ಮನ್ನು ಕೇಳಬಹುದು.

  • ಆದಾಯ ತೆರಿಗೆ ಯೋಜನೆ (Income Tax Planning) : ನಿಮ್ಮ ಸಂಬಳವು ಹಲವಾರು ಅಂಶಗಳಿಂದ ಮಾಡಲ್ಪಟ್ಟಿದೆ. ಅವುಗಳೆಂದರೆ - ಮೂಲ ಆದಾಯ, HRA, ಸಾರಿಗೆ ಭತ್ಯೆ, ವೈದ್ಯಕೀಯ ಭತ್ಯೆ, ರಜೆ ಪ್ರಯಾಣ ಭತ್ಯೆ, ಇತ್ಯಾದಿ. ಮತ್ತು ಅವುಗಳಿಗೆ ವಿಭಿನ್ನವಾಗಿ ತೆರಿಗೆಯನ್ನು ವಿಧಿಸಲಾಗುತ್ತದೆ. ಆದ್ದರಿಂದ ಸ್ಯಾಲರಿ ಸ್ಲಿಪ್ ಅನ್ನು ಹೇಗೆ ಓದುವುದು ಮತ್ತು ಅದರ ಅಂಶಗಳನ್ನು ಹೇಗೆ ಅರ್ಥಮಾಡಿಕೊಳ್ಳುವುದು ಎಂದು ತಿಳಿಯುವುದು ತುಂಬಾ ಪ್ರಯೋಜನಕಾರಿಯಾಗಿದೆ. ಸಂಭವನೀಯ ತೆರಿಗೆ ವಿನಾಯಿತಿಗಳ ಲಾಭವನ್ನು ಪಡೆಯಲು ಇದು ನಿಜವಾಗಿಯೂ ನಿಮಗೆ ಸಹಾಯ ಮಾಡುತ್ತದೆ ಮತ್ತು ನಿಮ್ಮ ತೆರಿಗೆಗಳನ್ನು ಪರಿಣಾಮಕಾರಿಯಾಗಿ ಯೋಜಿಸಲು ನಿಮಗೆ ಸಾಧ್ಯವಾಗುತ್ತದೆ.

  • ಸಾಲ ಅಥವಾ ಕ್ರೆಡಿಟ್ ಕಾರ್ಡ್ ಪಡೆಯಲು (To get a loan or a credit card) : ನಿಮ್ಮ ಸಾಲವನ್ನು ಮರುಪಾವತಿಸುವ ನಿಮ್ಮ ಸಾಮರ್ಥ್ಯವನ್ನು ನಿರ್ಧರಿಸುವಲ್ಲಿ ನಿಮ್ಮ ಸ್ಯಾಲರಿ ಸ್ಲಿಪ್ ಪ್ರಮುಖ ಪಾತ್ರವಹಿಸುವುದರಿಂದ, ಬ್ಯಾಂಕ್‌ಗಳು ನಿಮ್ಮ ಸ್ಯಾಲರಿ ಪ್ಲೇಸ್ಲಿಪ್ ಅನ್ನು (ನಿಮ್ಮ ತಿಂಗಳ ಆದಾಯದ ಬಗ್ಗೆ ಎಲ್ಲಾ ಮಾಹಿತಿಯನ್ನು ಒಳಗೊಂಡಿರುವುದರಿಂದ) ಕೇಳುತ್ತವೆ. ಆದ್ದರಿಂದ, ಕ್ರೆಡಿಟ್ ಕಾರ್ಡ್, ಲೋನ್, ಅಡಮಾನ ಅಥವಾ ಇತರ ರೀತಿಯ ಸಾಲಕ್ಕೆ ಅರ್ಜಿ ಸಲ್ಲಿಸುವಾಗ ನಿಮ್ಮ ಸ್ಯಾಲರಿ ಸ್ಲಿಪ್ ಒಂದು ನಿರ್ಣಾಯಕ ದಾಖಲೆಯಾಗುತ್ತದೆ.

  • ಹೊಸ ಉದ್ಯೋಗವನ್ನು ಹುಡುಕಲು (For finding a new job) : ನೀವು ಉದ್ಯೋಗಗಳನ್ನು ಬದಲಾಯಿಸುವಾಗ, ಹಲವಾರು ಕಂಪನಿಗಳಲ್ಲಿ  ಉತ್ತಮ ಹುದ್ದೆಯನ್ನು ಬುದ್ಧಿವಂತಿಕೆಯಿಂದ ಆಯ್ಕೆ ಮಾಡಲು ಸ್ಯಾಲರಿ ಸ್ಲಿಪ್ ನಿಮಗೆ ಸಹಾಯ ಮಾಡುತ್ತದೆ. ಉದ್ಯೋಗಗಳನ್ನು ಬದಲಾಯಿಸುವಾಗ, ವೇತನದ ಹೆಚ್ಚಳಕ್ಕಾಗಿ ಇದು ಸಂಧಾನದ ಕಾರ್ಯನಿರ್ವಹಿಸುತ್ತದೆ. ವಾಸ್ತವವಾಗಿ, ಅನೇಕ ಕಂಪನಿಗಳು ಆನ್‌ಬೋರ್ಡಿಂಗ್ ಪ್ರಕ್ರಿಯೆಯಲ್ಲಿ, ನಿಮ್ಮ ಹಿಂದಿನ ಕಂಪನಿಯ ಸ್ಯಾಲರಿ ಸ್ಲಿಪ್ ಅನ್ನು ಲಗತ್ತಿಸಲು ನಿಮ್ಮನ್ನು ಕೇಳುತ್ತವೆ

  • ಉತ್ತಮ ತಿಳುವಳಿಕೆಗಾಗಿ (For a better understanding) : ನಿಮ್ಮ ಸ್ಯಾಲರಿ ಸ್ಲಿಪ್ ಒಂದು ರೀತಿಯಲ್ಲಿ ಕಡ್ಡಾಯ ಉಳಿತಾಯದ ಅಂಶಗಳನ್ನು ಒಳಗೊಂಡಿದೆ. ಉದಾಹರಣೆಗೆ ಇಪಿಎಫ್ ಮತ್ತು ಇಎಸ್‌ಐ . ಇವುಗಳಲ್ಲಿ ಕೆಲವು ಕಡ್ಡಾಯ ಉಳಿತಾಯಗಳಿಂದ ನೀವು ಹೊರಗುಳಿಯಲು ಬಯಸಿದರೆ ಅವನ್ನು ಆಯ್ಕೆ ಮಾಡಬಹುದು ಮತ್ತು ನಿಮ್ಮ ಹಣವನ್ನು ಹೆಚ್ಚಿನ ಲಾಭ ನೀಡುವ ಹೂಡಿಕೆಗಳಿಗೆ ಹಾಕಬಹುದು. ಆದ್ದರಿಂದ, ಸ್ಯಾಲರಿ ಸ್ಲಿಪ್ ಮತ್ತು ಅದರ ಘಟಕಗಳನ್ನು ಅರ್ಥಮಾಡಿಕೊಳ್ಳುವುದರಿಂದ, ಅವು ನೀವು ಕಂಡುಕೊಳ್ಳುವ ಹುದ್ದೆಗಳ ಲಾಭ ಪಡೆಯಲು ನಿಮಗೆ ಸಹಾಯ ಮಾಡುತ್ತವೆ.

ಈಗ ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗೆ ಬರೋಣ. ಆದರೆ ಇದು ಅನೇಕ ಜನರಿಗೆ ಅತ್ಯಂತ ಗೊಂದಲಮಯ ಘಟಕವಾಗಿದೆ. ಅದೇ ಸಿ.ಟಿ.ಸಿ (CTC) ಮತ್ತು ಇನ್-ಹ್ಯಾಂಡ್ ಸ್ಯಾಲರಿ (In-hand salary).

ಸಿ.ಟಿ.ಸಿ ಮತ್ತು ಇನ್-ಹ್ಯಾಂಡ್/ಗ್ರಾಸ್ ಸ್ಯಾಲರಿ ನಡುವಿನ ವ್ಯತ್ಯಾಸವೇನು?

ಕಂಪನಿಯು, ಉದ್ಯೋಗಿಗೆ ಪಾವತಿಸಿದ ಒಟ್ಟು ಮೊತ್ತವನ್ನು ಕಂಪನಿಯ ವೆಚ್ಚ (Cost To The Company - CTC) ಎಂದು ಉಲ್ಲೇಖಿಸಲಾಗುತ್ತದೆ.

ಇದು ಎಲ್ಲವನ್ನೂ ಒಳಗೊಳ್ಳುತ್ತದೆ. ಅಂದರೆ - ವಸತಿ ಬಾಡಿಗೆ ಭತ್ಯೆ (HRA), ಸಾರಿಗೆ ಭತ್ಯೆ, ಗ್ರಾಚ್ಯುಟಿ, ವೈದ್ಯಕೀಯ ವೆಚ್ಚಗಳು, ಉದ್ಯೋಗಿ ಭವಿಷ್ಯ ನಿಧಿ (EPF,) ಮತ್ತು  ಇತರ ಎಲ್ಲ ಭತ್ಯೆಗಳು.

ಇನ್-ಹ್ಯಾಂಡ್ ಸ್ಯಾಲರಿಯು , ಯಾವುದೇ ಕಡಿತಗಳ ಮೊದಲು ಉದ್ಯೋಗಿ ಪಡೆಯುವ ಮೊತ್ತವಾಗಿದೆ. ನೆಟ್ ಸ್ಯಾಲರಿಯು ಎಲ್ಲಾ ಕಡಿತಗಳನ್ನು ಮಾಡಿದ ನಂತರ ಉದ್ಯೋಗಿ ಪಡೆಯುವ ಮೊತ್ತವಾಗಿದೆ.

ಬೇರೆ ರೀತಿಯಲ್ಲಿ ಹೇಳುವುದಾದರೆ, ಇನ್-ಹ್ಯಾಂಡ್ ಸ್ಯಾಲರಿಯು ಕಂಪನಿಯು ಉದ್ಯೋಗಿಗೆ ನೀಡುವ ಮಾಸಿಕ ಸಂಬಳವಾಗಿದೆ. ಪಿಎಫ್ ಮತ್ತು ಗ್ರಾಚ್ಯುಟಿ ಇದರಲ್ಲಿ ಸೇರಿಲ್ಲ.

ವಿವರವಾಗಿ ತಿಳಿಯಿರಿ ಮತ್ತು ನಿಮ್ಮ ಗ್ರಾಸ್ ಸ್ಯಾಲರಿಯನ್ನು ಇಲ್ಲಿ ಲೆಕ್ಕಾಚಾರ ಮಾಡಲು ಕಲಿಯಿರಿ. ಅಂತಿಮವಾಗಿ, ನಾವು ನಿರ್ಣಾಯಕ ಘಟ್ಟವನ್ನು ತಲುಪಿದ್ದೇವೆ.

ಸ್ಯಾಲರಿ ಸ್ಲಿಪ್‌ನ ಅಂಶಗಳು.

ಪ್ರತಿ ಸ್ಯಾಲರಿ ಸ್ಲಿಪ್ ಕಂಪನಿಯ ಹೆಸರು, ಉದ್ಯೋಗಿಯ ಹೆಸರು, ಹುದ್ದೆ ಮತ್ತು ಉದ್ಯೋಗಿ ಕೋಡ್ ಅನ್ನು ಹೊಂದಿರುತ್ತದೆ.

ನಂತರದಲ್ಲಿ, ಆದಾಯ/ಗಳಿಕೆಗಳು ಮತ್ತು ಕಡಿತಗಳು ಬರುತ್ತವೆ. ಇದು ಸ್ಯಾಲರಿಯ ಎರಡು ಮುಖ್ಯ ವಿಧಗಳಾಗಿವೆ. ಇವುಗಳ ಅಡಿಯಲ್ಲಿ ಬರುವ ಎಲ್ಲದರ ಅರ್ಥ ಇಲ್ಲಿದೆ:

1. ಗಳಿಕೆ/ಆದಾಯ

ಮೂಲ ಪರಿಹಾರ (Basic Compensation) : ಇದು ನಿಮ್ಮ ಸ್ಯಾಲರಿಯ ಅತ್ಯಗತ್ಯ ಅಂಶವಾಗಿದೆ. ನಿಮ್ಮ ಒಟ್ಟು ವೇತನದ ಶೇಕಡ 35 ರಿಂದ  ಶೇಕಡ 40% ರಷ್ಟಿರುತ್ತದೆ. ವೇತನದ ಇತರ ಅಂಶಗಳನ್ನು ಲೆಕ್ಕಾಚಾರ ಮಾಡಲು ಇದು ಅಡಿಪಾಯದಂತೆ ಕಾರ್ಯನಿರ್ವಹಿಸುತ್ತದೆ.

ಕಿರಿಯ ಹಂತಗಳಲ್ಲಿ ಮೂಲಭೂತ ಕಾಳಜಿಯು ಹೆಚ್ಚಿರುತ್ತದೆ. ನೀವು ಕಂಪನಿಯಲ್ಲಿ ಪ್ರಗತಿಯನ್ನು ಸಾಧಿಸುತ್ತಿದ್ದಂತೆ, ನಿಮ್ಮ ಇತರ ಭತ್ಯೆಗಳು ಹೆಚ್ಚಾಗುತ್ತವೆ.

ತುಟ್ಟಿಭತ್ಯೆ (Dearness Allowance - DA): ಇದು ನಿಮ್ಮ ಮೂಲ ವೇತನದ ಶೇಕಡಾವಾರು ಭಾಗವಾಗಿದೆ. ಇದು ಹಣದುಬ್ಬರದ ಪರಿಣಾಮಗಳನ್ನು ಸರಿದೂಗಿಸಲು ನಿಮಗೆ ಸಹಾಯ ಮಾಡುತ್ತದೆ. ಇದು ಸಂಪೂರ್ಣವಾಗಿ ತೆರಿಗೆಗೆ ಒಳಪಟ್ಟಿರುತ್ತದೆ ಮತ್ತು ITR ಅನ್ನು ಸಲ್ಲಿಸುವಾಗ ಘೋಷಿಸಬೇಕಾಗುತ್ತದೆ.

ಮನೆ ಬಾಡಿಗೆ ಭತ್ಯೆ (House Rent Allowance - HRA): ಇದು ಜನರು ತಮ್ಮ ಮನೆ ಬಾಡಿಗೆಯನ್ನು ಪಾವತಿಸಲು ಸಹಾಯ ಮಾಡುವ ಭತ್ಯೆಯಾಗಿದೆ. HRA ಮೊತ್ತವು ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತದೆ. ಮತ್ತು ಮೂಲ ವೇತನದ ಶೇಕಡ 40 ರಿಂದ 50 ರಷ್ಟಿರುತ್ತದೆ. HRA ನಿಮಗೆ ತೆರಿಗೆಯಲ್ಲಿ ಹಣವನ್ನು ಉಳಿಸಲು ಸಹಾಯ ಮಾಡುತ್ತದೆ. ವಿನಾಯಿತಿಯು ಈ ಕೆಳಗಿನವುಗಳಲ್ಲಿ ಒಂದನ್ನಾದರೂ ಒಳಗೊಂಡಿರಬೇಕು:

  • ವೇತನದ 10% (ಬೇಸಿಕ್ + ಡಿಎ). ಕಳೆದು ಬಾಡಿಗೆಯನ್ನು ವರ್ಷಕ್ಕೊಮ್ಮೆ ಪಾವತಿಸಲಾಗುತ್ತದೆ.
  • ನಿಜವಾದ HRA ಅನ್ನು ಸ್ವೀಕರಿಸಲಾಗಿದೆ
  • ಸ್ಥಳವು (ಮುಂಬೈ, ಕೋಲ್ಕತ್ತಾ, ಚೆನ್ನೈ, ದೆಹಲಿ) ಆಗಿದ್ದರೆ 50% (ಬೇಸಿಕ್ + ಡಿಎ) ಮತ್ತು ಸ್ಥಳವು ಯಾವುದಾದರೂ ಬೇರೆ ನಗರವಾಗಿದ್ದರೆ 40% (ಬೇಸಿಕ್+ ಡಿಎ)

ಸಾಗಣೆ ಭತ್ಯೆ (Conveyance Allowance) : ಉದ್ಯೋಗದಾತನು ಉದ್ಯೋಗಿಗೆ ಕೆಲಸಕ್ಕೆ ಬರಲು ಮತ್ತು ಹೋಗಲು ಪಾವತಿಸುವ ಮೊತ್ತವನ್ನು ಸಾರಿಗೆ ಭತ್ಯೆ ಎಂದು ಕರೆಯಲಾಗುತ್ತದೆ. ಇದೊಂದು ರಿಯಾಯಿತಿ.

ಪರಿಣಾಮವಾಗಿ, ಇದು ಒಂದು ನಿರ್ದಿಷ್ಟ ಹಂತದವರೆಗೆ ತೆರಿಗೆ ಮುಕ್ತವಾಗಿರುತ್ತದೆ. ಸಾಗಣೆ ಭತ್ಯೆ ಕೂಡ, ತೆರಿಗೆಯಲ್ಲಿ ಹಣವನ್ನು ಉಳಿಸಲು ನಿಮಗೆ ಸಹಾಯ ಮಾಡಬಹುದು.

ವಿನಾಯಿತಿಯು ಈ ಕೆಳಗಿನವುಗಳಲ್ಲಿ ಒಂದನ್ನಾದರೂ ಒಳಗೊಂಡಿರಬೇಕು:

  • INR 1600 ರೂಗಳ ಮಾಸಿಕ ಆದಾಯ
  • ನಿಜವಾದ ಸಾಗಣೆ ಭತ್ಯೆಯನ್ನು ಸ್ವೀಕರಿಸಲಾಗಿದೆ

ಕಾರ್ಯಕ್ಷಮತೆ ಮತ್ತು ವಿಶೇಷ ಭತ್ಯೆಗಳು (Performance and special Allowances) : ಉದ್ಯೋಗಿಗಳನ್ನು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಪ್ರೇರೇಪಿಸಲು ಕಾರ್ಯಕ್ಷಮತೆ ಭತ್ಯೆ ಮತ್ತು ವಿಶೇಷ ಭತ್ಯೆಗಳನ್ನು ನೀಡಲಾಗುತ್ತದೆ. ಈ ಭತ್ಯೆಗೆ ಸಂಪೂರ್ಣವಾಗಿ ತೆರಿಗೆಯನ್ನು ವಿಧಿಸಲಾಗುತ್ತದೆ

ಇತರ ಭತ್ಯೆಗಳು (Other Allowances) : ಇದು ಬೇರಾವುದೇ ಕಾರಣವನ್ನು ಲೆಕ್ಕಿಸದೆ, ಉದ್ಯೋಗದಾತರ ಎಲ್ಲಾ ಹೆಚ್ಚುವರಿ ಭತ್ಯೆಗಳನ್ನು ಒಳಗೊಂಡಿರುತ್ತದೆ. ಅಂತಹ ಭತ್ಯೆಗಳನ್ನು ನಿರ್ದಿಷ್ಟ ಶೀರ್ಷಿಕೆಯಡಿಯಲ್ಲಿ ವರ್ಗೀಕರಿಸಬಹುದು ಅಥವಾ ಉದ್ಯೋಗದಾತರು ಇದಕ್ಕಾಗಿ "ಇತರ ಭತ್ಯೆಗಳು" ಎಂಬ ಗುಂಪು ಮಾಡಬಹುದು.

2. ಕಡಿತಗಳು

ಇಪಿಎಫ್-EPF (ಉದ್ಯೋಗಿಗಳ ಭವಿಷ್ಯ ನಿಧಿ-Employees Provident Fund): ಇದು ನಿಮ್ಮ ಪೇ ಚೆಕ್‌ನಿಂದ ಕಡ್ಡಾಯವಾಗಿ ಕಡಿತಗೊಳ್ಳುತ್ತದೆ ಮತ್ತು ನಿಮ್ಮ ನಿವೃತ್ತಿಗಾಗಿ, ನಿಧಿಯ ಸಂಗ್ರಹವಾಗಿದೆ. ಪೇಸ್ಲಿಪ್‌ನ ಈ ಅಂಶವು, ನಿಮ್ಮ ಬೇಸಿಕ್ ಸ್ಯಾಲರಿಯ ಕನಿಷ್ಠ 12% ಅನ್ನು ಪ್ರತಿನಿಧಿಸುತ್ತದೆ ಮತ್ತು ಅದನ್ನು EPF ಖಾತೆಗೆ ಡೆಪಾಸಿಟ್ ಮಾಡಲಾಗುತ್ತದೆ. ವಿಶೇಷವೆಂದರೆ, ಆದಾಯ ತೆರಿಗೆ ಕಾಯಿದೆ, ಸೆಕ್ಷನ್ 80C ಯ ಅಡಿಯಲ್ಲಿ, EPF ಗೆ ನಿಮ್ಮ ಸ್ಯಾಲರಿಯು ತೆರಿಗೆ-ಮುಕ್ತವಾಗಿರುತ್ತದೆ.

ವೃತ್ತಿಪರ ತೆರಿಗೆ (Professional Tax) : ಸಂಬಳ ಪಡೆಯುವ ಕೆಲಸಗಾರರು, ವೃತ್ತಿಪರರು ಮತ್ತು ವ್ಯಾಪಾರಿಗಳು ಸೇರಿದಂತೆ ಆದಾಯ ಹೊಂದಿರುವ ಎಲ್ಲಾ ವ್ಯಕ್ತಿಗಳ ಮೇಲೆ ಈ ತೆರಿಗೆಯನ್ನು ವಿಧಿಸಲಾಗುತ್ತದೆ. ಆದಾಗ್ಯೂ, ಕರ್ನಾಟಕ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು, ಗುಜರಾತ್, ಅಸ್ಸಾಂ, ಛತ್ತೀಸ್‌ಗಢ, ಕೇರಳ, ಮೇಘಾಲಯ, ಒರಿಸ್ಸಾ, ತ್ರಿಪುರ, ಜಾರ್ಖಂಡ್, ಬಿಹಾರ ಮತ್ತು ಮಧ್ಯಪ್ರದೇಶದ ಕೆಲವು ರಾಜ್ಯಗಳಲ್ಲಿ ಮಾತ್ರ ಇದನ್ನು ವಿಧಿಸಲಾಗುತ್ತದೆ. ಈ ಮೊತ್ತವನ್ನು ನಿಮ್ಮ ತೆರಿಗೆಗೆ ಒಳಪಡುವ ಆದಾಯದಿಂದ ತೆಗೆದುಕೊಳ್ಳಲಾಗುತ್ತದೆ ಮತ್ತು ಪ್ರತಿ ತಿಂಗಳು ಕೆಲವು ನೂರು ರೂಪಾಯಿಗಳವರೆಗೆ ಮಾತ್ರ ತೆಗೆದುಕೊಳ್ಳಲಾಗುತ್ತದೆ! ವ್ಯಕ್ತಿಯೊಬ್ಬರ ಟ್ಯಾಕ್ಸ್ ಬ್ರಾಕೆಟ್ ಪ್ರಕಾರ ಇದನ್ನು ನಿರ್ಧರಿಸಲಾಗುತ್ತದೆ.

ಮೂಲದಲ್ಲಿ ತೆರಿಗೆ ವಿನಾಯಿತಿ (Tax Deductible at Source - TDS) : TDS ಎಂಬುದು ಆದಾಯ-ತೆರಿಗೆ ಇಲಾಖೆಯ ಪರವಾಗಿ, ನಿಮ್ಮ ಉದ್ಯೋಗದಾತರಿಂದ ಕಡಿತಗೊಳಿಸಲಾಗುವ ತೆರಿಗೆಯ ಮೊತ್ತವಾಗಿದೆ. ಇದು ಉದ್ಯೋಗಿಯ ಗ್ರಾಸ್ ಟ್ಯಾಕ್ಸ್ ಬ್ರಾಕೆಟ್ ಪ್ರಕಾರ ನಿರ್ಧರಿಸಲ್ಪಡುತ್ತದೆ. ಈಕ್ವಿಟಿ ಮ್ಯೂಚುಯಲ್ ಫಂಡ್‌ಗಳು (ELSS), ಪಿಪಿಎಫ್ (PPF), ಎನ್.ಪಿ.ಎಸ್ (NPS), ಮತ್ತು ತೆರಿಗೆ ಉಳಿಸುವ FD ಗಳಂತಹ ಟ್ಯಾಕ್ಸ್-ಫ್ರೀ ಹೂಡಿಕೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಮತ್ತು ನಿಮ್ಮ ಉದ್ಯೋಗದಾತರಿಗೆ ಅಗತ್ಯವಾದ ಪೇಪರ್‌ಗಳನ್ನು ಒದಗಿಸುವ ಮೂಲಕ ಈ ವೆಚ್ಚವನ್ನು ಕಡಿಮೆ ಮಾಡಬಹುದು.

ನಿಮ್ಮ ಸ್ಯಾಲರಿ ಸ್ಲಿಪ್‌ಗೆ ನಿಮ್ಮ ಮಿನಿ-ಗೈಡ್ ಅನ್ನು ನೀವಿಲ್ಲಿ ಹೊಂದಿದ್ದೀರಿ. ಈಗ ನೀವು ಮುಂದಿನ ಸಲ ನಿಮ್ಮ ಎಂಪ್ಲಾಯೀ ಸ್ಯಾಲರಿ ಸ್ಲಿಪ್ ಅನ್ನು ಪಡೆದಾಗ, ನೀವೇನು ಮಾಡಬೇಕೆಂದು ನಿಮಗೆ ತಿಳಿದಿದೆ. ಅದನ್ನು ಓದಿ, ಅರ್ಥಮಾಡಿಕೊಳ್ಳಿ ಮತ್ತು ನೀವು ಎಲ್ಲಿಯಾದರೂ, ಯಾವುದಾದರೂ ತೆರಿಗೆಯನ್ನು ಉಳಿಸಬಹುದೇ ಎಂದು ಪರಿಶೀಲಿಸಿ.

ಈಗ, ನೀವು ಪೇಸ್ಲಿಪ್‌ನ ಎಲ್ಲಾ ಅಂಶಗಳನ್ನು ಅರ್ಥಮಾಡಿಕೊಂಡಂತೆ, ನಿಮ್ಮ ಉಳಿತಾಯ ಯೋಜನೆಗಳ ಬಗ್ಗೆಯೂ ನೀವು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು, ನಿಮಗಿದು ಸಹಾಯ ಮಾಡುತ್ತದೆಂದು ನಾವು ಭಾವಿಸುತ್ತೇವೆ. ಜಾರ್ ಅಪ್ಲಿಕೇಶನ್ ಅನ್ನು ಬಳಸಿ, ನೀವು ಖರ್ಚು ಮಾಡುವಾಗ ಯಾವಾಗಲೂ ಉಳಿಸಬಹುದು. ಇದು ಕೇವಲ ನಿಮಗೆ ಹಣವನ್ನು ಉಳಿಸಲು ಸಹಾಯ ಮಾಡುವುದಲ್ಲದೇ,  ಡಿಜಿಟಲ್ ಗೋಲ್ಡನಲ್ಲಿ ಹೂಡಿಕೆ ಮಾಡಲು ಸಹ ಸಹಾಯ ಮಾಡುತ್ತದೆ.

Subscribe to our newsletter
Thank you! Your submission has been received!
Oops! Something went wrong while submitting the form.