Playstore Icon
Download Jar App

ಈ ಸ್ಮಾರ್ಟ್ ಫೈನಾನ್ಶಿಯಲ್ ಮ್ಯಾನೇಜ್‌ಮೆಂಟ್ ಸಲಹೆಗಳೊಂದಿಗೆ ನಿಮ್ಮ ಹಣಕಾಸಿನ ವ್ಯವಹಾರಗಳನ್ನು ಹೆಚ್ಚಿಸಿ.

October 27, 2022

ನಮ್ಮಲ್ಲಿ ಹಲವರು ಹಣಕಾಸಿನ ನಿರ್ವಹಣೆ ಮಾಡಲು ಹೋರಾಡುತ್ತಾರೆ, ಅಲ್ಲವೇ? ಇದರ ಹೊರತಾಗಿಯೂ, ನಮ್ಮಲ್ಲಿ ಹೆಚ್ಚಿನವರು ಇತರರಿಂದ ಹಣಕಾಸಿನ ನೆರವು ಪಡೆಯುವುದರ ಬದಲು ಆನ್‌ಲೈನ್‌ನಲ್ಲಿ ಅದರ ಬಗ್ಗೆ ಓದಲು ಬಯಸುತ್ತಾರೆ. ಏಕೆಂದರೆ ಪರ್ಸನಲ್ ಫೈನಾನ್ಸ್ ಎನ್ನುವುದು ಅಂತಹ ನಿಷೇಧಿತ ವಿಷಯವಾಗಿದೆ.

ಆದರೆ ನೀವು ಇಂಟರ್ನೆಟ್ ಅನ್ನು ಹುಡುಕಿದರೆ ಮತ್ತು ಬಹಳಷ್ಟು ಹಣಕಾಸು ಸಂಬಂಧಿತ ಪುಸ್ತಕಗಳು ಹಾಗೂ ಬ್ಲಾಗ್‌ಗಳನ್ನು ಓದಿದರೆ, ನೀವು ಬಹಳಷ್ಟು ಪರ್ಸನಲ್ ಫೈನಾನ್ಸ್ ಅಡ್ವೈಸ್'ಗಳನ್ನು ನೋಡುತ್ತೀರಿ.

ಇದೊಂದು ದೊಡ್ಡ, ಬೆದರಿಸುವ ಮತ್ತು ಕಷ್ಟಕರವಾದ ವಿಷಯವಾಗಿ ಕಾಣಿಸಬಹುದು, ಆದರೆ ನಮ್ಮನ್ನು ನಂಬಿರಿ, ಇದು ನಿಜಕ್ಕೂ ಹಾಗಿಲ್ಲ. ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸಲು ಹಣಕಾಸಿನ ಸಾಕ್ಷರತೆಯು, ನಿಮಗೆ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು  ಈ 4 ವಿಧಾನಗಳ ಮೂಲಕ ಪರಿಶೀಲಿಸಿ.

ದುರದೃಷ್ಟವಶಾತ್, ಹೆಚ್ಚಿನ ಶಾಲೆಗಳು ಮತ್ತು ಕಾಲೇಜುಗಳಿಗೆ, ವಿದ್ಯಾರ್ಥಿಗಳು ಪರ್ಸನಲ್ ಫೈನಾನ್ಸ್ ಅನ್ನು ಓದಬೇಕೆನ್ನುವ ಅಗತ್ಯವಿಲ್ಲ.

ಮೂಲಭೂತ ಆರ್ಥಿಕ ಶಿಕ್ಷಣದ ಕೊರತೆಯಿಂದಾಗಿ, ಇಂದು ನಮ್ಮ ದೇಶದ ಅನೇಕ ಯುವ ವಯಸ್ಕರಿಗೆ ತಮ್ಮ ಹಣವನ್ನು ಹೇಗೆ ಮ್ಯಾನೇಜ್ ಮಾಡಬೇಕು, ಲೋನ್ ಹೇಗೆ ಪಡೆಯಬೇಕು ಅಥವಾ ಸಾಲದಿಂದ ಹೇಗೆ ಹೊರಗುಳಿಯಬೇಕು ಎನ್ನುವುದು ತಿಳಿದಿಲ್ಲ.

ಆದ್ದರಿಂದ ನೆನಪಿನಲ್ಲಿಡಿ - ಇದು ಸುಲಭವಲ್ಲ. ನೀವು ಈಗಾಗಲೇ ಅವುಗಳನ್ನು ಸರಿಯಾಗಿ ಮ್ಯಾನೇಜ್ ಮಾಡುತ್ತಿಲ್ಲವಾದರೆ, ಈ ಹೊಸ ಅಭ್ಯಾಸಗಳನ್ನು ಅಭಿವೃದ್ಧಿಪಡಿಸಲು ಅವುಗಳು ಸ್ವಲ್ಪ ಸಮಯ ತೆಗೆದುಕೊಳ್ಳುತ್ತವೆ. ಆದರೆ ಅವು ಖಂಡಿತವಾಗಿಯೂ ಫಲಪ್ರದವಾಗಿರುತ್ತವೆ.

ಬೆಸ್ಟ್ ಪಾರ್ಟ್ ಯಾವುದು ಎಂದು ನಿಮಗೆ ತಿಳಿದಿದೆಯೇ? ಇಂದಿನ ಸಮಯದಲ್ಲಿ, ಬಜೆಟ್‌ನಿಂದ ಹಿಡಿದು ನಿಮ್ಮ ಹೂಡಿಕೆಗಳನ್ನು ಸ್ವಯಂಚಾಲಿತಗೊಳಿಸುವವರೆಗೆ, ಎಲ್ಲದಕ್ಕೂ ನೀವು ಅಪ್ಲಿಕೇಶನ್‌ಗಳನ್ನು ಹೊಂದಿದ್ದೀರಿ.

ನಿಮ್ಮ ಅಮೂಲ್ಯ ಸಮಯವನ್ನು ಉಳಿಸಲು ಎಲ್ಲವನ್ನೂ ಸರಳಗೊಳಿಸಲಾಗಿದೆ ಮತ್ತು  ಸುಲಭಗೊಳಿಸಲಾಗಿದೆ.

ಆದಾಗ್ಯೂ, ನಿಮ್ಮ ಹಣದ ಮೇಲೆ ಹೆಚ್ಚಿನ ನಿಯಂತ್ರಣವನ್ನು ಹೊಂದಲು ಮತ್ತು ನೀವು ಉತ್ತಮ ಆರ್ಥಿಕ ಜೀವನವನ್ನು ಆನಂದಿಸಲು ಬಯಸುವುದಾದರೆ, ಇಲ್ಲಿ ನಿಮಗಾಗಿ ಕೆಲವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಸ್ಮಾರ್ಟ್ ಮನಿ ಮ್ಯಾನೇಜ್‌ಮೆಂಟ್ ಮತ್ತು ಫೈನಾನ್ಸಿಯಲ್ ಎಜುಕೇಶನ್ ಟಿಪ್ಸ್'ಗಳಿವೆ. 

1. ನೀವು ಸಂಪಾದಿಸುವುದಕ್ಕಿಂತ ಕಡಿಮೆ ಖರ್ಚು ಮಾಡಿ

ನೀವು ಸಂಪಾದಿಸುವುದಕ್ಕಿಂತ ಹೆಚ್ಚಿನದನ್ನು  ಖರ್ಚು ಮಾಡಿದರೆ, ನೀವು ಎಷ್ಟು ಪಾವತಿಸಿದರೂ ಅಥವಾ ಎಷ್ಟು ಕಡಿಮೆ ಪಾವತಿಸಿದರೂ ಪರವಾಗಿಲ್ಲ, ಅದರಿಂದ ಮುಂದೆ ಬರಲು ನಿಮಗೆ ಕಷ್ಟವಾಗಬಹುದು.

ಸ್ವಯಂ ನಿಯಂತ್ರಣವನ್ನು (self control) ಕಲಿಯಿರಿ. ಮತ್ತು ಈಗಾಗಲೇ ನೀವು ಹೊಂದಿರುವುದನ್ನು ಹೇಗೆ ಆಸ್ವಾದಿಸುವುದು ಎಂಬುದನ್ನು ಕಲಿಯಿರಿ. ಸಮಯೋಚಿತವಾದ ಖರ್ಚಿನ ಕಡಿತವು ನಿಮಗೆ ಬಹಳಷ್ಟು ಹಣವನ್ನು ಉಳಿಸಬಹುದು.

 

2. ಬಜೆಟ್ ಅನ್ನು ನಿರ್ವಹಿಸಿ

ನಿಮ್ಮ ಹಣವನ್ನು ಎಲ್ಲಿ ಖರ್ಚು ಮಾಡಲಾಗುತ್ತಿದೆ ಎಂಬುದನ್ನು ಬಜೆಟ್ ನಿಮಗೆ ತೋರಿಸುತ್ತದೆ. ನೀವು ಯಾವಾಗ ಪಾವತಿಸುತ್ತೀರಿ ಎಂಬುದರ ಆಧಾರದ ಮೇಲೆ ನೀವು ಸಾಪ್ತಾಹಿಕ, ಪಾಕ್ಷಿಕ ಅಥವಾ ಮಾಸಿಕ ಬಜೆಟ್ ಅನ್ನು ಆಯ್ಕೆ ಮಾಡಬಹುದು.

ನೀವು ಒಂದು ವರ್ಷದಲ್ಲಿ ಎಷ್ಟೇ ಹಣ ಸಂಪಾದಿಸಿದರೂ, ನಿಮಗೆ ಬಜೆಟ್ ಬೇಕು.

3. 50/30/20 ನಿಯಮವನ್ನು ಒಂದು ಮಾರ್ಗದರ್ಶಿಯಂತೆ ಬಳಸಿ

ನಿಮಗೆ ಬಜೆಟ್ ಮತ್ತು ಉಳಿತಾಯ ಮಾಡಲು ಸಮಸ್ಯೆ ಇದ್ದಲ್ಲಿ 50/30/20 ರ ನಿಯಮದ ಅಳವಡಿಸಿಕೆಯನ್ನು ಗಂಭೀರವಾಗಿ ಪರಿಗಣಿಸಿ. ನಿಮ್ಮ ಗಳಿಕೆಯನ್ನು ಈ ಕೆಳಗಿನಂತೆ ನಿಯೋಜಿಸುವುದು ವಸ್ತುನಿಷ್ಠವಾಗಿದೆ:

ನಿಮ್ಮ ಆದಾಯದ  ಶೇಕಡ 50 ಅನ್ನು ದಿನಸಿ, ವಸತಿ, ಇತರ ಉಪಯುಕ್ತತೆಗಳು ಮತ್ತು ಹೆಲ್ತ್ ಇನ್ಶೂರೆನ್ಸ್ ಅಗತ್ಯಗಳಿಗಾಗಿ ಮೀಸಲಿಡಿ.

ನಿಮ್ಮ ಆದಾಯದ  ಶೇಕಡ 30 ಅನ್ನು ಹೊರಗಡೆ ತಿನ್ನುವುದು, ಶಾಪಿಂಗ್ ಮಾಡುವುದು ಮತ್ತು ಇತರ ನಿಮ್ಮ ಹವ್ಯಾಸಗಳಿಗಾಗಿ ತೆಗೆದಿಡಿ.

ನಿಮ್ಮ ಆದಾಯದ  ಶೇಕಡ 20 ಅನ್ನು ತುರ್ತು ನಿಧಿ, ಕಾಲೇಜು ನಿಧಿ ಅಥವಾ ನಿವೃತ್ತಿ ಯೋಜನೆಯಂತಹ ಉಳಿತಾಯಕ್ಕೆ ಸೇರಿಸುವುದು.

4. ಋಣಭಾರವನ್ನು ತಪ್ಪಿಸಿ ಮತ್ತು ಕ್ರೆಡಿಟ್ ಮೇಲೆ ನೀವೇ ಶಿಕ್ಷಣ ಪಡೆಯಿರಿ

ಸಾಲಕ್ಕೆ ಸಿಲುಕಿಕೊಳ್ಳುವುದನ್ನು ತಪ್ಪಿಸಿ. ನೀವು ಯಾವುದೇ ಸಾಲಗಳನ್ನು ಹೊಂದಿದ್ದರೆ, ಅವುಗಳನ್ನು ಸಾಧ್ಯವಾದಷ್ಟು ಬೇಗ ತೆರವುಗೊಳಿಸಿ.

 ಕೆಲವು ಸಂದರ್ಭಗಳಲ್ಲಿ ಲೋನ್ ತೆಗೆದುಕೊಳ್ಳುವುದು ಅರ್ಥಪೂರ್ಣವೆನಿಸುತ್ತದೆ. ಮನೆ, ಕಾರನ್ನು ಖರೀದಿಸಲು ಅಥವಾ ನಿಮ್ಮ ವೈದ್ಯಕೀಯ ವೆಚ್ಚಗಳನ್ನು ನಿರ್ವಹಿಸಲು ನೀವಿದನ್ನು ಸರಿಯಾಗಿ ಬಳಸಿದರೆ, ಇದು ನಿಮಗೆ ನೆರವಾಗುತ್ತದೆ.

ಆದರೆ ಕ್ರೆಡಿಟ್ ಅನ್ನು ಅಜಾಗರೂಕತೆಯಿಂದ ಬಳಸಿದಾಗ, ನೀವು ಬಯಸಿದ ಭವಿಷ್ಯವನ್ನು ಕಸಿದುಕೊಳ್ಳುವ, ಸಾಲದ ರಾಶಿಗೆ ಕಾರಣವಾಗಬಹುದು. ಹಾಗಾಗಿ ಆತುರಪಡುವ ಅಗತ್ಯವಿಲ್ಲ.

ನೀವು ಏನೇ ಮಾಡಿದರೂ, ಕ್ರೆಡಿಟ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ನೀವು ಸಂಪೂರ್ಣ ತಿಳುವಳಿಕೆಯನ್ನು ಹೊಂದಿರುವಿರಿ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

5. ಉಳಿತಾಯ ತಂತ್ರವನ್ನು ಹೊಂದಿರಿ

ನಿಮ್ಮ ಉಳಿತಾಯವನ್ನು ಹೆಚ್ಚಿಸಲು ನೀವು ಬಯಸುವುದಾದರೆ ನಿಮ್ಮ ಸಂಬಳದ ಕನಿಷ್ಠ ಶೇಕಡ 5-10 ರಷ್ಟು ಹಣವನ್ನು ಉಳಿತಾಯಕ್ಕಾಗಿ ಮೀಸಲಿಡಿ.

6. ಹೂಡಿಕೆ

ಸೂಪರ್ ಮತ್ತು ಸೇವಿಂಗ್ ಅಕೌಂಟಿಗೆ ಕೊಡುಗೆ ನೀಡಿದ ನಂತರ ನಿಮ್ಮ ಬಳಿ ಹಣ ಉಳಿದಿದ್ದರೆ, ನೀವದನ್ನು ಬೇರೆ ಯಾವುದರಲ್ಲಾದರೂ ಹೂಡಿಕೆ ಮಾಡಲು  ಬಯಸಬಹುದು.

ಹೂಡಿಕೆಯ ವಿಷಯಕ್ಕೆ ಬಂದಾಗ, ಸಮಯ ಎನ್ನುವುದು ನಿರ್ಣಾಯಕವಾಗುತ್ತದೆ.

ಕಾಂಪೌಂಡ್ ಇಂಟರೆಸ್ಟ್ ಕಾಲಾನಂತರದಲ್ಲಿ ನಿಮ್ಮ ಹಣಕಾಸಿನ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಬದಲಾಯಿಸಬಹುದು. ಆದ್ದರಿಂದ ಇಂದೇ ಹೂಡಿಕೆಯನ್ನು ಪ್ರಾರಂಭಿಸಿ ಮತ್ತು ನಂತರದಲ್ಲಿ ಅದರ ಲಾಭವನ್ನು ಪಡೆದುಕೊಳ್ಳಿ.

ಆದ್ದರಿಂದ, ನಿಮಗಾಗಿ ಕೆಲಸ ಮಾಡಲು, ನಿಮ್ಮ ಹಣವನ್ನು ಹೂಡಿಕೆ ಮಾಡುವ ಸಮಯವಿದು.

7. ನೀವು ಯಾವುದರಲ್ಲಿ ಹೂಡಿಕೆ ಮಾಡುತ್ತಿದ್ದೀರಿ ಎಂದು ತಿಳಿಯಿರಿ

ನಿಮಗೆ ಪರಿಚಯವಿಲ್ಲದ ಹೂಡಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಬೇಡಿ. ಇಂದು ಹಲವಾರು ಹೂಡಿಕೆ ಸಾಧನಗಳಿವೆ. ಆದರೆ ಯಾವುದರಿಂದ ನೀವು ಹೆಚ್ಚು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂಬುದನ್ನು ಅರ್ಥಮಾಡಿಕೊಳ್ಳಿ.

ನಿಮಗೆ ಯಾವ ಹೂಡಿಕೆ ಆಯ್ಕೆಗಳು ಉತ್ತಮವೆಂದು ನಿರ್ಧರಿಸಲು, ಹಣಕಾಸು ಸಲಹೆಗಾರರು ನಿಮಗೆ ಸಹಾಯ ಮಾಡಬಹುದು. 

ಅಷ್ಟೇ ಅಲ್ಲ! ಓದಿ ಓದಿ ಓದಿ. ಹಣಕಾಸು ಮತ್ತು ಹಣಕಾಸಿನ ನಿರ್ವಹಣೆಯ ಬಗ್ಗೆ ನಿಮಗೆ ಎಷ್ಟು ಸಾಧ್ಯವೋ ಅಷ್ಟನ್ನು ನೀವೇ ತಿಳಿದುಕೊಳ್ಳಿ.

8. ನಿಮ್ಮ ಇನ್ಶೂರೆನ್ಸ್ ಪಾಲಿಸಿಯನ್ನು ಪರೀಕ್ಷಿಸಿ

ಸಾವು, ಅಪಘಾತ ಅಥವಾ ಕಾಯಿಲೆಯ ಸಂದರ್ಭದಲ್ಲಿ, ನಿಮ್ಮ ಕುಟುಂಬ ಮತ್ತು ಆದಾಯವನ್ನು ರಕ್ಷಿಸಲು ಸಾಕಾಗುವಷ್ಟು ಇನ್ಶೂರೆನ್ಸ್ ಹೊಂದಿರುವುದುದು ಬಹಳ ಮುಖ್ಯವಾಗಿದೆ.

9. ಉತ್ತಮ ದಾಖಲೆಗಳನ್ನು ಮೇಂಟೈನ್ ಮಾಡಿ

ನೀವು ಉತ್ತಮವಾಗಿ ಹಣಕಾಸಿಗೆ ಸಂಬಂಧಿಸಿದ ದಾಖಲೆಗಳನ್ನು  ನಿರ್ವಹಿಸದಿದ್ದರೆ, ನಿಮ್ಮ ಎಲ್ಲಾ ಅರ್ಹ ಇನ್‌ಕಮ್ ಟ್ಯಾಕ್ಸ್ ಡಿಡಕ್ಷನ್‌ಗಳನ್ನು ಮತ್ತು ಕ್ರೆಡಿಟ್‌ಗಳನ್ನು ಬಹುಶಃ ನೀವು ಕ್ಲೈಮ್ ಮಾಡಲಾಗುವುದಿಲ್ಲ.

ನಿಮ್ಮಷ್ಟಕ್ಕೆ ನೀವೇ ಒಂದು ವಿಧಾನವನ್ನು ರಚಿಸಿಕೊಳ್ಳಿ ಮತ್ತು ವರ್ಷವಿಡೀ ಅದಕ್ಕೆ ಬದ್ಧರಾಗಿರಿ. ನಿಮ್ಮ ತೆರಿಗೆಗಳನ್ನು ಸಲ್ಲಿಸುವ ಸಮಯ ಬಂದಾಗ ಇದು ಸಹಾಯಕ್ಕೆ ಬರುತ್ತದೆ.

10. ಹಣಕಾಸಿನ ನೆರವು ಪಡೆಯಿರಿ

ಸಮಯವನ್ನು ಸರಿಯಾಗಿ ನಿರ್ವಹಿಸದ ಅಥವಾ ತಮ್ಮ ಹಣಕಾಸನ್ನು ಸರಿಯಾಗಿ ನಿರ್ವಹಿಸುವಲ್ಲಿ ಕೊರತೆಯಿರುವ ಜನರಲ್ಲಿ ನೀವೂ ಒಬ್ಬರಾಗಿದ್ದೀರಾ?

ಅನೇಕ ಜನರು ಕೆಲಸ ಮತ್ತು ಕುಟುಂಬದಲ್ಲಿ ತೊಡಗಿಸಿಕೊಂಡಿರುವುದರಿಂದ, ಹೂಡಿಕೆಯ ಸಾಧ್ಯತೆಗಳೊಂದಿಗೆ ಉಳಿಯಲು ಮತ್ತು  ಅಪಾಯಗಳನ್ನು ಎದುರಿಸಲು ಕಷ್ಟವಾಗುತ್ತದೆ.

ಹಾಗಿದ್ದಲ್ಲಿ, ಹಣಕಾಸು ಸಲಹೆಗಾರರನ್ನು ಸಂಪರ್ಕಿಸಿ. ನಿಮ್ಮ ಗುರಿಗಳನ್ನು ಸಾಧಿಸಲು ಅವರು ನಿಮಗೆ ಸಹಾಯ ಮಾಡಬಹುದು.

11. ಸಂಘಟಿತರಾಗಿರಲು ವಿಭಿನ್ನ ಅಪ್ಲಿಕೇಶನ್‌ಗಳನ್ನು ಬಳಸಿ, ನಿಮ್ಮ ಬಜೆಟ್ ರಚಿಸಿ ಮತ್ತು ಹೂಡಿಕೆ ಮಾಡಿ

ನಾವು ನಿಮಗೆ ಮೊದಲೇ ಹೇಳಿದಂತೆ, ಹಣಕಾಸು ನಿರ್ವಹಣೆಗಾಗಿ ಮತ್ತು ಸಲಹೆ ನೀಡುವುದಕ್ಕಾಗಿ ನಿಮಗೆ ಸಹಾಯ ಮಾಡಲು ಇಂದು ಮಾರುಕಟ್ಟೆಯಲ್ಲಿ ವಿವಿಧ ಅಪ್ಲಿಕೇಶನ್‌ಗಳಿವೆ.

ಸಮಯವನ್ನು ಉಳಿಸಲು, ಅಚ್ಚುಕಟ್ಟಾಗಿ ಹೂಡಿಕೆ ಮಾಡಲು ಮತ್ತು ಉಳಿತಾಯವನ್ನು ಸುಲಭಗೊಳಿಸಲು ನೀವು ಖಂಡಿತವಾಗಿಯೂ ಅವುಗಳನ್ನು ಬಳಸಬೇಕು.

ನಿಮ್ಮ ಹಣವನ್ನು ಹೆಚ್ಚಿಸುವ ಕೀಲಿಯು ಮುಖ್ಯವಾಗಿದೆ, ನೀವದನ್ನು ಹೊಂದಿದ್ದೀರಿ. ಇಂದೇ ಜಾರ್ ಅಪ್ಲಿಕೇಶನ್‌ನೊಂದಿಗೆ ನಿಮ್ಮ ಉಳಿತಾಯ ಮತ್ತು ಹೂಡಿಕೆಯ ಪ್ರಯಾಣವನ್ನು, ನೀವೇಕೆ ಪ್ರಾರಂಭಿಸಬಾರದು?

Subscribe to our newsletter
Thank you! Your submission has been received!
Oops! Something went wrong while submitting the form.