Playstore Icon
Download Jar App
Personal Finance

ಉಳಿತಾಯ ಅಥವಾ ಹೂಡಿಕೆ: ನೀವು ಯಾವುದನ್ನು ಆಯ್ಕೆಮಾಡಬೇಕು?-ಜಾರ್

December 27, 2022

ಉಳಿತಾಯ ಅಥವಾ ಹೂಡಿಕೆ ಈ ಎರಡರಲ್ಲಿ ಯಾವುದು ಉತ್ತಮ ಎಂಬ ಜಿಜ್ಞಾಸೆ ನಮ್ಮೆಲ್ಲರನ್ನೂ ಕಾಡುತ್ತಲೇ ಇರುತ್ತದೆ. ಹೂಡಿಕೆಯಲ್ಲಿ ಅಪಾಯ ಸಾಧ್ಯತೆ ಇರುವುದರಿಂದ ಬಹುತೇಕರು ಅದರಿಂದ ಹಿಂಜರಿಯುವುದೇ ಹೆಚ್ಚು. ಹಾಗಂತ ಉಳಿತಾಯ ನಮ್ಮ ನಿರೀಕ್ಷೆಯಷ್ಟು ಆದಾಯವನ್ನು ತಂದುಕೊಡುವುದಿಲ್ಲ. ಹಾಗಾದರೆ ನಾವೆಲ್ಲ ಏನು ಮಾಡಬೇಕು ಎಂದು ತಿಳಿಯೋಣ .

ನಮ್ಮ ಬಾಲ್ಯಾವಸ್ಥೆಯಿಂದಲೂ ನಮ್ಮ ಪೋಷಕರು ನಮ್ಮಲ್ಲಿ ಉಳಿತಾಯ ಮಾಡುವ ಗುಣವನ್ನು ನೈಸರ್ಗಿಕವಾಗಿ ಬೆಳೆಸಿರುತ್ತಾರೆ. ಯಾಕೆಂದರೆ, ಉಳಿತಾಯವು ನಿಮ್ಮ ಆದಾಯದ ಗಣನೀಯ ಮೊತ್ತವನ್ನು ಉಳಿಸಿ, ನಿಮ್ಮನ್ನು ಯಾವುದಾದರೂ ಆರ್ಥಿಕ ಮುಗ್ಗಟ್ಟಿನಿಂದ ಪಾರು ಮಾಡಬಹುದು ಅಥವಾ ಭವಿಷ್ಯದ ಬಳಕೆಗೆ ಗಮನಾರ್ಹ ಸಂಪನ್ಮೂಲವಾಗಬಹುದು.

ಆದರೆ, ಇತ್ತೀಚಿನ ತಾತ್ವಿಕತೆಗಳ ಪ್ರಕಾರ, ನಾವು ಕೇವಲ ಹಣವನ್ನು ಉಳಿತಾಯ ಮಾಡುವುದರಿಂದ ನಾವು ಹಣವನ್ನು ಬಳಕೆ ಮಾಡುವ ವಿಧಾನ ಪರಿಣಾಮಕಾರಿಯಾಗುವುದಿಲ್ಲ. ಹೀಗಾಗಿ ಶ್ರೀಮಂತರಾಗಿರುವವರು ನೀಡಿರುವ 8 ಆರ್ಥಿಕ ಸಲಹೆಗಳತ್ತ ಒಮ್ಮೆ ಗಮನ ಕೊಡೋಣ.

ವಿಶೇಷವಾಗಿ ಕೇವಲ 10ರಿಂದ 20 ವರ್ಷಗಳ ಅವಧಿಯಲ್ಲಿ ನಿಮ್ಮ ಬ್ಯಾಂಕ್ ಖಾತೆಯಲ್ಲಿ 7ರಿಂದ 8 ಅಂಕಿ ಮೊತ್ತದ ಆದಾಯವು ಸಂಗ್ರಹಣೆಯಾಗಬೇಕಿದ್ದರೆ ನೀವು ಈ ಸಲಹೆಗಳತ್ತ ಗಮನ ಕೊಡಲೇಬೇಕು. ಇಲ್ಲೇ ಹೂಡಿಕೆಯು ಮಾಂತ್ರಿಕತೆಯನ್ನು ಸೃಷ್ಟಿಸುವುದು ಮತ್ತು ನಿಮ್ಮ ಸಂಪತ್ತನ್ನು ದುಪ್ಪಟ್ಟುಗೊಳಿಸುವುದು.

ಉತ್ತಮ ಬೆಳವಣಿಗೆಯೆಂದರೆ, ಕೊರೊನಾ ಸಾಂಕ್ರಾಮಿಕೋತ್ತರ ಅವಧಿಯಲ್ಲಿ ಶೇ. 70ರಷ್ಟು ಭಾರತೀಯರು ಒಂದೋ ಹಣವನ್ನು ಉಳಿತಾಯ ಮಾಡಿದ್ದಾರೆ ಅಥವಾ ಹಣವನ್ನು ಹೂಡಿಕೆ ಮಾಡಿದ್ದಾರೆ.

ಹೀಗಾಗಿ, ನೀವೇನಾದರೂ ಸ್ವತಂತ್ರವಾಗಿ ಆದಾಯ ಗಳಿಸುತ್ತಿದ್ದರೆ, ನೀವು ಎಲ್ಲ ಸಂದರ್ಭಗಳಲ್ಲೂ ಎದುರಿಸುತ್ತಿರುವ ಹಣವನ್ನು ಉಳಿತಾಯ ಮಾಡುವುದೋ ಅಥವಾ ಹೂಡಿಕೆ ಮಾಡುವುದೋ ಎಂಬ ಸಂದಿಗ್ಧತೆ ನಮಗೆ ಅರ್ಥವಾಗುತ್ತದೆ!

ಒಳ್ಳೆಯ ವಿಷಯವೇನು ಗೊತ್ತೆ? ಈ ಬ್ಲಾಗ್‍ನಲ್ಲಿ ನಾವು ಉಳಿತಾಯ ಮತ್ತು ಹೂಡಿಕೆ ಮಾಡಬಹುದಾದ ಹಲವಾರು ವಲಯಗಳನ್ನು ತೆರೆದಿಡುತ್ತಿದ್ದೇವೆ. ಪ್ರತಿಯೊಬ್ಬರಿಗೂ ಇದು ಹೇಗೆ ವಿಭಿನ್ನ ಲಕ್ಷಣ ಹೊಂದಿದೆ ಮತ್ತು ಅತಿ ಮುಖ್ಯವಾಗಿ ಉಳಿತಾಯ ಮತ್ತು ಹೂಡಿಕೆಗಳೆರಡೂ ಹೇಗೆ ನಮ್ಮ ಬದುಕಿನಲ್ಲಿ ಸಮಗ್ರ ಪಾತ್ರ ವಹಿಸುತ್ತವೆ ಎಂಬುದನ್ನು ನಿಮಗೆ ತಿಳಿಸಲಿದ್ದೇವೆ.

ಆದರೆ, ನಾವು ನಿಮಗೆ ಈ ಕುರಿತು ತಿಳಿಸುವ ಮುನ್ನ ಈ ಕೆಳಗಿನ ವಿಷಯಗಳನ್ನು ಅರ್ಥ ಮಾಡಿಕೊಳ್ಳಿ:

ಉಳಿತಾಯ ಮತ್ತು ಹೂಡಿಕೆ ನಡುವಿನ ವ್ಯತ್ಯಾಸವೇನು?

ಮುಖ ಮೌಲ್ಯವನ್ನು ಆಧರಿಸಿ ಹೇಳುವುದಾದರೆ ಉಳಿತಾಯ ಮತ್ತು ಹೂಡಿಕೆಗಳೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಹೀಗಿದ್ದೂ ಈ ಎರಡರ ನಡುವೆ ಪ್ರಮುಖ ವ್ಯತ್ಯಾಸವಿದ್ದು, ವಿವಿಧ ವಿಚಾರಗಳಲ್ಲಿ ಇವು ಹೇಗೆ ಒಂದಕ್ಕಿಂತ ಭಿನ್ನ ಮಾಧ್ಯಮ ದರ ಹೊಂದಿವೆ ಎಂಬುದನ್ನು ಬಯಲು ಮಾಡುತ್ತವೆ.

ಕಾಲಾವಧಿ: ಸಾಮಾನ್ಯವಾಗಿ ಉಳಿತಾಯವನ್ನು ಸಣ್ಣ ಹಣಕಾಸು ಅಗತ್ಯಗಳಾದ ಕಾರು ಖರೀದಿ, ಹೊಸ ಫೋನ್ ಖರೀದಿ, ಮನೆ ಖರೀದಿಗೆ ಠೇವಣಿ ಅಥವಾ ಅನಿರೀಕ್ಷಿತ ಅಗತ್ಯಗಳಿಗಾಗಿ ಮಾಡಲಾಗುತ್ತದೆ. ಹೀಗಾಗಿ ಈ ಉಳಿತಾಯವು ಸಾಂಕೇತಿಕವಾಗಿ ಅಲ್ಪಾವಧಿಯದಾಗಿದ್ದು, 2-3 ವರ್ಷದ ಕಾಲಾವಧಿಯನ್ನು ಹೊಂದಿರುತ್ತದೆ.

ಹೂಡಿಕೆಯೆಂದರೆ ದೀರ್ಘಾವಧಿಯ ಪರಿಶ್ರಮವಾಗಿದ್ದು, ನಮ್ಮ ಕನಸಿನ ಮನೆ ಖರೀದಿಸಲು ಹಣ ಕ್ರೋಡೀಕರಿಸುವುದು, ನಿಮ್ಮ ಮಕ್ಕಳ ಶಿಕ್ಷಣಕ್ಕಾಗಿ ಆದಾಯವನ್ನು ಕೂಡಿಡುವುದು ಅಥವಾ ಆರಾಮದಾಯಕ ನಿವೃತ್ತಿ ಬದುಕನ್ನು ಅನುಭವಿಸಲು ಸಾಕಷ್ಟು ಸಂಪತ್ತನ್ನು ಸಂಗ್ರಹಿಸಿಡುವ ಗುರಿಯನ್ನು ತಲುಪುವುದಾಗಿರುತ್ತದೆ. ಒಂದು ವೇಳೆ, ನೀವು 10 ವರ್ಷಗಳ ಅವಧಿಯಲ್ಲಿ ನಿಮ್ಮ ಜೀವನದ ಗುರಿಯನ್ನು ಮುಟ್ಟಲು ಹೆಚ್ಚುವರಿ ಆದಾಯವನ್ನು ಪಡೆಯಬೇಕಿದ್ದರೆ, ಸಮಯಕ್ಕೆ ಸರಿಯಾಗಿ ಅದನ್ನು ಸಾಕಾರವಾಗಿಸಿಕೊಳ್ಳಲು ನಿಮ್ಮ ಹಣವನ್ನು ಹೂಡಿಕೆ ಮಾಡುವುದು ಬುದ್ಧಿವಂತಿಕೆಯ ಲಕ್ಷಣವಾಗಿದೆ.

ಆಸಕ್ತಿ: ಮತ್ತೊಂದು ವ್ಯತ್ಯಾಸವೆಂದರೆ, ನೀವು ಉಳಿತಾಯ ಅಥವಾ ಹೂಡಿಕೆ ಮಾಡಿದರೆ ಮಾತ್ರ ಹಣವನ್ನು ಗಳಿಸಬಹುದಾಗಿದೆ. ನೀವು ಹಣವನ್ನು ಹೂಡಿಕೆ ಮಾಡಿದಾಗ, ಅದಕ್ಕೆ ಪ್ರತಿಯಾಗಿ ದೊಡ್ಡ ಲಾಭವನ್ನು ಬಯಸುತ್ತೀರಿ. ಅದೇ ನೀವು ಹಣವನ್ನು ಉಳಿತಾಯ ಮಾಡಿದಾಗ, ನಿಮ್ಮ ಹಣವನ್ನು ಸುರಕ್ಷಿತವಾಗಿಡಲು ಹಾಗೂ ಕೊಂಚ ಪ್ರಮಾಣದ ಲಾಭವನ್ನು ಹಿಂಪಡೆಯಲು ಮಾತ್ರ ಯೋಜನೆ ರೂಪಿಸಿರುತ್ತೀರಿ.

ಅಪಾಯಗಳು: ನೀವು ದೊಡ್ಡ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಿದ್ದಾಗ ಮಾರುಕಟ್ಟೆಯ ಚಂಚಲತೆಯ ಕಾರಣಕ್ಕೆ ಗಮನಾರ್ಹವಾದ ಅಪಾಯಕ್ಕೆ ಒಡ್ಡಿಕೊಂಡಿರುತ್ತೀರಿ. ಅದೇ ಉಳಿತಾಯದ ವಿಚಾರಕ್ಕೆ ಬಂದಾಗ, ನೀವು ಹಣವನ್ನು ವೈಯಕ್ತಿಕವಾಗಿ ಉಳಿತಾಯ ಮಾಡಿರುತ್ತೀರಿ ಅಥವಾ ಹಣವನ್ನು ಯಾವುದಾದರೂ ಹಣಕಾಸು ಸಂಸ್ಥೆಯಲ್ಲಿ ಹೂಡಿಕೆ ಮಾಡಿರುತ್ತೀರಿ ಅಥವಾ ಉಳಿತಾಯ ಖಾತೆಯಲ್ಲಿ ಜಮಾ ಮಾಡಿರುತ್ತೀರಿ. ಇದರಿಂದ ನಿಮ್ಮ ನಿಧಿಯು ನಷ್ಟಕ್ಕೊಳಗಾಗುವ ಸಾಧ್ಯತೆ ತೀರಾ ಕಡಿಮೆ ಇರುತ್ತದೆ.

ಈಗ ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಪ್ರತಿ ವರ್ಷವೂ ನಿಮ್ಮ ಹಿಂಪಾವತಿಯನ್ನು ದೊಡ್ಡದಾಗಿಸುವ ಮೂಲಕ ನೀವು ಯಶಸ್ವಿ ಹೂಡಿಕೆದಾರರಾಗಿ ಬೆಳೆಯಬಹುದಾಗಿದೆ. ಆದರೆ, ಒಂದು ವೇಳೆ ನೀವು ನಿಮ್ಮ ಬಳಿ ಅಲ್ಪಕಾಲದ ಉಳಿತಾಯದ ಹಣವನ್ನು ಹೊಂದಿರದಿದ್ದರೆ ದಿಢೀರನೆ ಹಣವನ್ನು ಹಿಂಪಡೆಯಲು ಒದ್ದಾಡಬೇಕಾದ ಸಂಭವವಿದೆ.

ಈ ಅಂಶವು ನಮ್ಮನ್ನು ಮುಂದಿನ ಅಂಶದತ್ತ ಕರೆದೊಯ್ಯುತ್ತದೆ:

ಉಳಿತಾಯ ಅತ್ಯವಶ್ಯಕ: 

ಉಳಿತಾಯದ ಹಣವನ್ನು ಕೊನೆಗೆ ಹೇಗೆ ಬಳಸಲಾಗುತ್ತದೆ ಎಂಬುದನ್ನು ಬದಿಗಿರಿಸಿ ನೋಡಿದರೆ, ಉಳಿತಾಯ ಅತ್ಯವಶ್ಯಕವಾಗಿದೆ. ನಿಮಗೆ ಯಾವಾಗ ಉದ್ಯೋಗ ನಷ್ಟ ಸಂಭವಿಸಬಹುದು ಅಥವಾ ವೈದ್ಯಕೀಯ ತುರ್ತು ಉದ್ಭವಿಸಬಹುದು ಎಂಬ ಸಂಗತಿ ನಿಮಗೆ ತಿಳಿದಿರಲು ಸಾಧ್ಯವೇ ಇಲ್ಲ.

ನೀವೇನಾದರೂ ಇಂತಹ ಪರಿಸ್ಥಿತಿಗೆ ಸಿಲುಕಿದರೆ, ಮತ್ತೆ ಸಹಜ ಸ್ಥಿತಿಗೆ ಮರಳಲು ನಿಮಗೆ ಹಣದ ಅಗತ್ಯ ಬೀಳುತ್ತದೆ. ಹೀಗಾಗಿ ಸಾಮಾನ್ಯವಾಗಿ 3ರಿಂದ 6 ತಿಂಗಳ ಕಾಲದ ವೆಚ್ಚವನ್ನು ಸರಿದೂಗಿಸುವ ಅನಿಶ್ಚಿತತೆ ನಿಧಿಯನ್ನು ತೆಗೆದಿರಿಸುವುದು ಉತ್ತಮ ಉಪಾಯವಾಗಿದೆ.

ಆದಾಯದಿಂದ ವೆಚ್ಚವನ್ನು ಕಳೆದಾಗ ನೀವು ಏನು ಉಳಿಸಲು ಸಾಧ್ಯವೋ ಅದೇ ಉಳಿತಾಯ. ಹೀಗೆ ಉಳಿತಾಯವಾದ ಹಣವನ್ನು ಅಲ್ಪಕಾಲೀನ ಹೂಡಿಕೆಗಳಾದ ಬ್ಯಾಂಕ್ ನಿಶ‍್ಚಿತ ಠೇವಣಿಗಳಿಗೆ ವಿಭಜಿಸಬೇಕಾಗುತ್ತದೆ.

ಹಣ ಉಳಿತಾಯ ಮಾಡುವುದೆಂದರೆ ನಿಮ್ಮ ಹುಂಡಿಯಲ್ಲಿ ಹಣ ಸುರಕ್ಷಿತವಾಗಿರುತ್ತದೆ ಎಂದು ಮಾತ್ರ ಆಗಿರುತ್ತದೆ. ಆದರೆ, ನಿಮ್ಮ ದೀರ್ಘಕಾಲೀನ ಗುರಿಗಳನ್ನು ತಲುಪಲು ನಿಮ್ಮ ಹಣವನ್ನು ಕೆಲಸದಲ್ಲಿ ತೊಡಗಿಸಿ ಅದನ್ನು ಬೆಳೆಯಲು ಬಿಡುವುದು ಅತ್ಯಂತ ಸುಂದರ ವಿಧಾನವಾಗಿದೆ.

ಯಾಕೆಂದರೆ:

ಹೂಡಿಕೆ ಅತ್ಯಂತ ಮುಖ್ಯ

ಹೂಡಿಕೆ ಮಾಡುವುದು ನಿಮ್ಮ ಗುರಿಯನ್ನು ಸಾಧಿಸಲು ಮತ್ತು ನಿಮ್ಮ ಭವಿಷ್ಯದ ಆರ್ಥಿಕತೆಯನ್ನು ಸುರಕ್ಷಿತಗೊಳಿಸಿಕೊಳ್ಳಲು ಅತ್ಯಂತ ತುರ್ತು.

ಬಹುತೇಕ ಆರ್ಥಿಕ ತಜ್ಞರು ನಿಮ್ಮ ವಾರ್ಷಿಕ ಗಳಿಕೆಯ ಶೇ. 10-15ರಷ್ಟನ್ನು ಹೂಡಿಕೆ ಮಾಡುವಂತೆ ಸಲಹೆ ನೀಡುತ್ತಾರೆ. ಲಾಭಗಳ ವಿಚಾರಕ್ಕೆ ಬಂದಾಗ ನೀವು ಈ ಕೆಳಗಿನವುಗಳನ್ನು ಅನುಭೋಗಿಸಬಹುದು:

ಹಣದುಬ್ಬರದ ವಿರುದ್ಧ ಹೋರಾಟ: ಕಾಲ ಸರಿದಂತೆ, ಹಣದುಬ್ಬರವು ನಿಮ್ಮ ಹಣದ ಖರೀದಿ ಸಾಮರ್ಥ್ಯವನ್ನು ತಿಂದು ಹಾಕುವ ಮೂಲಕ ಅದರ ಮೌಲ್ಯವನ್ನು ತಗ್ಗಿಸಿಬಿಡುತ್ತದೆ.

ಇದರಿಂದ ರಕ್ಷಣೆ ಪಡೆಯಲು ನಿಮ್ಮ ಹಣವನ್ನು ಸದೃಢವಾಗಿ ಹೂಡಿಕೆ ಮಾಡುವ ಮೂಲಕ ಹಣದುಬ್ಬರ ದರವನ್ನು ಸೋಲಿಸಬಹುದಾಗಿದೆ.

ನೀವು ನಿಮ್ಮ ಆರ್ಥಿಕ ಆದ್ಯತೆಗಳನ್ನು ಸಾಧಿಸುವುದನ್ನು ಖಾತ್ರಿಪಡಿಸಿಕೊಳ್ಳಿ: ನಿಮ್ಮ ವಿವಾಹಕ್ಕಾಗಿ ಉಳಿತಾಯ ಮಾಡುವುದು ಅಥವಾ ನಿಮ್ಮ ಮಕ್ಕಳ ಕಾಲೇಜು ಮನೆಪಾಠಕ್ಕಾಗಿ ಹಣ ಹೊಂದಿಸುವುದು ಅಥವಾ ನಿಮ್ಮ ಭವಿಷ್ಯಕ್ಕಾಗಿ ಸಿದ್ಧತೆ ನಡೆಸುವಂತಹ ಯಾವುದಾದರೂ ಆರ್ಥಿಕ ಗುರಿಗಳನ್ನು ಸಾಧಿಸಬೇಕಿದ್ದರೆ, ಹೂಡಿಕೆಯು ನಿಮಗೆ ನೆರವು ನೀಡುತ್ತದೆ.

ಉಳಿತಾಯ ಖಾತೆ ಅಥವಾ ನಿಶ‍್ಚಿತ ಠೇವಣಿಗಳಿಗೆ ಹೋಲಿಸಿದರೆ, ಮ್ಯೂಚುಯಲ್ ಫಂಡ್ಸ್‍ ಮತ್ತು ಈಕ್ವಿಟೀಸ್‍ನಂತಹ ಹೂಡಿಕೆ ಆಯ್ಕೆಗಳು ದೊಡ್ಡ ಮಟ್ಟದ ಹಿಂಪಾವತಿಯನ್ನು ಸೃಜಿಸುತ್ತವೆ.

ಈ ಕೆಳಗಿನ ತಖ್ತೆಯು ಹೇಗೆ ಹಲವಾರು ಆಯ್ಕೆಗಳಿಗೆ ವಿರುದ್ಧವಾಗಿ ಈ ಎರಡು ಆಯ್ಕೆಗಳು ಔಚಿತ್ಯಪೂರ್ಣ ಎಂಬುದನ್ನು ತೋರಿಸಿದೆ:


ಹಾಗಾದರೆ ಉಳಿತಾಯ ಉತ್ತಮವೊ, ಹೂಡಿಕೆ ಉತ್ತಮವೊ?

ಈ ಎರಡು ಆಯ್ಕೆಗಳಲ್ಲೂ ಹಲವಾರು ಲಾಭಗಳಿದ್ದು, ಎರಡರ ನಡುವೆಯೂ ಸಮತೋಲನ ಹೊಂದಿರುವುದು ಉತ್ತಮ ಮಾರ್ಗ.

ಮಾರುಕಟ್ಟೆಯ ಹೂಡಿಕೆ ಫಲಿತಾಂಶವನ್ನು ನೋಡಲು ಅಪಾರವಾದ ಸಹನೆ ಬೇಕಾಗುತ್ತದೆ. ಹಾಗೆಯೇ ನಿಮ್ಮ ಖಾತೆಗಳಲ್ಲಿ ದೀರ್ಘಕಾಲ ಹಣ ಉಳಿತಾಯ ಮಾಡಿದರೂ ಕನಿಷ್ಠ ಮಟ್ಟದ ಲಾಭವನ್ನು ಮಾತ್ರ ತರುತ್ತದೆ.

ನೀವೇನಾದರೂ ದೀರ್ಘಕಾಲೀನ ಆರ್ಥಿಕ ಯೋಜನೆ ಹೊಂದಿದ್ದರೆ (ಅಗತ್ಯವಾಗಿ ಹಲವಾರು ವರ್ಷಗಳು) ಮತ್ತು ತೀರಾ ಹತ್ತಿರದಲ್ಲೇ ಹಣದ ಅವಶ್ಯಕತೆ ಹೊಂದಿರದಿದ್ದರೆ ಹೂಡಿಕೆ ಮಾಡುವುದು ಉತ್ತಮ ಉಪಾಯವಾಗಿದೆ.

ಆದರೆ, ಅಲ್ಪಕಾಲದಲ್ಲೇ ನಿಮಗೆ ಹಣದ ಅವಶ್ಯಕತೆ ಇದ್ದರೆ, ಅದನ್ನು ತುರ್ತು ಮೀಸಲಾಗಿ ಇಡಲು ಉಳಿತಾಯ ಖಾತೆ ಸರಿಯಾದ ಆಯ್ಕೆಯಾಗಿದೆ.

ಮುಂದೆ ಹೋಗುವ ಮುನ್ನ 

ನಮ್ಮ ದೈನಂದಿನ ಬದುಕಿಗೆ ಎಷ್ಟು ಮುಖ್ಯ ಎಂಬುದರ ಮೇಲೆ ಉಳಿತಾಯ ಮತ್ತು ಹೂಡಿಕೆಗಳೆರಡೂ ಸಾಮ್ಯತೆಯನ್ನು ಹೊಂದಿವೆ. ನೀವು ಈ ಎರಡನ್ನೂ ಈವರೆಗೆ ಪ್ರಾರಂಭಿಸಿರದಿದ್ದರೆ ಇನ್ನೂ ಕಾಲ ಮಿಂಚಿಲ್ಲ.

ಹಣ ನಿರ್ವಹಣೆಗೆ ಸಂಬಂದಪಟ್ಟಂತೆ ಸರಿ ತಪ್ಪುಗಳಿಲ್ಲ. ಅದು ನೀವು ಸದ್ಯ ಎಲ್ಲಿದ್ದೀರ ಎಂಬುದರ ಮೇಲೆ ತೀರ್ಮಾನವಾಗುತ್ತದೆ. 

ಒಂದು ವೇಳೆ ನೀವು ಈ ಎರಡನ್ನೂ ಹೇಗೆ ಸರಿದೂಗಿಸುವುದು ಎಂಬ ಗೊಂದಲಕ್ಕೆ ಒಳಗಾಗಿದ್ದರೆ, ಅಲ್ಪಕಾಲೀನ ಉಳಿತಾಯ ಮತ್ತು ದೀರ್ಘಕಾಲೀನ ಹೂಡಿಕೆಗಳನ್ನು ವಿಭಜಿಸುವ ಸಾಮಾನ್ಯ ನಿಯಮವನ್ನು ಪಾಲಿಸಿ.

ದೀರ್ಘಾವಧಿಯ ಹಣದ ವಿಷಯಕ್ಕೆ ಬಂದರೆ, ಅಲ್ಪಾವಧಿಯ ಲಾಭವನ್ನು ನಗದು ಮಾಡುವುದಕ್ಕಿಂತ ಹೂಡಿಕೆ ಮಾಡುವುದು ಉತ್ತಮ ಆಯ್ಕೆಯಾಗಿರುತ್ತದೆ.

ಅಪಾಯವನ್ನು ಸಹಿಸಿಕೊಳ್ಳಬಲ್ಲ ಮಿತಿ ಮತ್ತು ವಿಭಿನ್ನ ಹೂಡಿಕೆ ಸಾಧ್ಯತೆಯನ್ನು ಆಧರಿಸಿ ಷೇರು ಮಾರುಕಟ್ಟೆಯಲ್ಲಿ ಲಭ್ಯವಿರುವ ಮ್ಯೂಚುಯಲ್ ಫಂಡ್‌ ಆಯ್ಕೆಯು ನೀವು ಹೂಡಿಕೆ ಮಾಡಲು ಪರ್ಯಾಯ ಆಯ್ಕೆಯಾಗಬಲ್ಲದು.

ಹೂಡಿಕೆಯ ಪ್ರಕ್ರಿಯೆಯು ಕ್ಲಿಷ್ಟವಾಗಿದ್ದರೂ, ಇದನ್ನು ಪ್ರಾರಂಭಿಸಲು ಕೆಲವು ಸರಳ ವಿಧಾನಗಳಿವೆ ಮತ್ತು ನಿಮ್ಮ ಭವಿಷ್ಯದ ಆರ್ಥಿಕತೆಗೆ ಉತ್ತಮ ಆಯ್ಕೆಯಾಗಿದೆ. ಹೂಡಿಕೆಯ ಬಗ್ಗೆ ಹೆಚ್ಚು ತಿಳಿಯಿರಿ ನಿಮ್ಮ ಭವಿಷ್ಯದ ಆರ್ಥಿಕತೆ ನಿರ್ವಹಣೆಗೆ ಅದೊಂದು ಉತ್ತಮ ಮಾರ್ಗವಾಗಬಹುದು.

ನೀವು ನಿಮ್ಮ ಆದಾಯ ಮತ್ತು ಒಟ್ಟಾರೆ ವೆಚ್ಚದ ವಿವರಗಳನ್ನು ಸಿದ್ಧಪಡಿಸಿಕೊಳ್ಳಿ. ಆಗ ನಿಮಗೆ ಯಾವುದು ಉತ್ತಮವಾಗಿ ಕೆಲಸ ಮಾಡಬಹುದು ಎಂಬುದನ್ನು ನೀವೇ ಕಂಡುಕೊಳ್ಳಲಿದ್ದೀರಿ.

ಖುಷಿಯಾಗಿ ಉಳಿತಾಯ, ಹೂಡಿಕೆ ಮಾಡಿ

Subscribe to our newsletter
Thank you! Your submission has been received!
Oops! Something went wrong while submitting the form.