Playstore Icon
Download Jar App
Investment

ಭಾರತೀಯರು ಶುಭದಿನದಂದು ಚಿನ್ನದಲ್ಲಿ ಹೂಡಿಕೆ ಏಕೆ ಮಾಡುತ್ತಾರೆ? - ಜಾರ್ ಆಪ್

December 30, 2022

ಚಿನ್ನವು ಸಾಮಾಜಿಕ ಹಾಗೂ ಭಾವನಾತ್ಮಕ ಮೌಲ್ಯಗಳೆರಡನ್ನೂ ಹೊಂದಿರುವ ಒಂದು ಹಿತ ನೀಡುವ ಧಾತುವಾಗಿದೆ. ಭಾರತೀಯರು ಶುಭದಿನದಂದು ಚಿನ್ನದಲ್ಲಿ ಹೂಡಿಕೆ ಏಕೆ ಮಾಡುತ್ತಾರೆ ಎಂದು ತಿಳಿಯಿರಿ.

ಚಿನ್ನದ ಉಪಸ್ಥಿತಿಯಿಲ್ಲದ ಒಂದು ಭಾರತೀಯ ವಿವಾಹವನ್ನು ನೀವು ಚಿತ್ರಿಸಬಲ್ಲಿರಾ? ಉತ್ತರವು ನೇರವಾದ ಇಲ್ಲ ಆಗಿದೆ, ಅಲ್ಲವೇ?

ಚಿನ್ನವು ಮದುವೆ ಸಮಾರಂಭಗಳಲ್ಲಿ ಮಾತ್ರವಲ್ಲ, ಆದರೆ ಅಕ್ಷಯ ತೃತೀಯ, ಧನ್ತೇರಸ್, ಕರ್ವಾಚೌತ್, ದೀಪಾವಳಿ, ಮಕರ ಸಂಕ್ರಾತಿ, ನವರಾತ್ರಿ ಮುಂತಾದ ಹಬ್ಬಗಳಲ್ಲೂ ಕೇಂದ್ರ ಬಿಂದುವಾಗಿರುತ್ತದೆ.

ಭಾರತೀಯರಾದ ನಮಗೆ, ಚಿನ್ನವು ಕೇವಲ ಒಂದು ಧಾತುವಲ್ಲ - ಬಲಿಷ್ಠ ಭಾವನಾತ್ಮಕ ಹಾಗೂ ಸಾಮಾಜಿಕ ಮೌಲ್ಯಗಳನ್ನು ಹೊಂದಿದ ಇದು ಒಂದು ‘ಹಿತ ನೀಡುವ’ ಧಾತುವಾಗಿದೆ.

ಚಿನ್ನಕ್ಕಾಗಿ ನಮ್ಮ ಹಂಬಲವು ಕಲಾತೀತವಾಗಿದ್ದು ಇದು ಪ್ರತೀ ಶುಭ ಸಮಾರಂಭದ ಒಂದು ಪ್ರಮುಖ ಅಂಗವಾಗಿದೆ. ನೀವು ಎಲ್ಲಿ ಹೋದರೂ ಚಿನ್ನವನ್ನು ಕಾಣುತ್ತೀರಿ - ಒಬ್ಬ ಚಾಲಕನ ಮದುವೆಯಿಂದ ಹಿಡಿದು ರಾಣಿಯ ಕಿರೀಟದ ವರೆಗೆ.

ಚಿನ್ನದ ಹುರುಪಿನಲ್ಲಿ ಏನೋ ಒಂದು ವಿಶೇಷತೆ ಇದೆ ಹಾಗೂ ಇದು ನಮ್ಮ ಆರಾಮ ಹಾಗೂ ಆರೈಕೆಯ ಅಗತ್ಯಗಳಿಗೆ ಸರಿಹೊಂದುತ್ತದೆ.

ಆದ್ದರಿಂದಲೇ, ಭಾರತವು ಇಂದು ವಿಶ್ವದಲ್ಲೇ ಅತೀ ದೊಡ್ಡ ಚಿನ್ನದ ಗ್ರಾಹಕನಾಗಿರುವುದರಲ್ಲಿ ಆಶ್ಚರ್ಯವಿಲ್ಲ.

ವಾಸ್ತವವಾಗಿ, ಶುಭ ದಿನಗಳನ್ನು ಚಿನ್ನದ ಉಡುಗೊರೆ ನೀಡುವುದನ್ನೂ ಒಂದು ಪ್ರಮುಖ ಅಂಶವಾಗಿ ಪರಿಗಣಿಸಲಾಗುತ್ತದೆ. ಮದುವೆ ಸಮಾರಂಭಗಳ ಹಾಗೆಯೇ, ಎಲ್ಲಿ ಕೇವಲ ಮದುವೆ ಸಂಪ್ರದಾಯದ ಸಮಯದಲ್ಲಿ ಉಡುಗೊರೆ ನೀಡುವುದಕ್ಕಾಗಿಯೇ ಸುಮಾರು 50% ಹೆಚ್ಚು ಚಿನ್ನಕ್ಕೆ ಬೇಡಿಕೆ ಹೊಂದಿರುವಂತೆ ಹೇಳಲಾಗಿದೆ.

ಭಾರತೀಯರಿಗೆ ಚಿನ್ನದ ಪ್ರತಿ ಇಷ್ಟು ಆಕರ್ಷಣೆ ಏಕೆ?

ಚಿನ್ನವನ್ನು ಅದೃಷ್ಟಕರ ಹಾಗೂ, ಧಾರ್ಮಿಕ ಸಂಪ್ರದಾಯಗಳಲ್ಲಿ ಬಳಸುವ ಕಾರಣ, ಪವಿತ್ರ ಧಾತು ಎಂದೂ ನಂಬಲಾಗುತ್ತದೆ. ಇದನ್ನು ದೇವರನ್ನು ಅಲಂಕರಿಸಲು ಉಪಯೋಗಿಸಲಾಗುತ್ತದೆ ಹೀಗಾಗಿ ಭಾರತೀಯ ಮಂದಿರಗಳು ವಿಶ್ವದ ಅತೀ ದೊಡ್ಡ ಚಿನ್ನದ ನಿಧಿಯಾಗಿದೆ.

ಚಿನ್ನದ ಒಂದು ಬಿಲ್ಲೆ ಅಥವಾ ಪೆಟ್ಟಿಗೆ ತುಂಬಾ ಚಿನ್ನದ ನಾಣ್ಯಗಳೂ ಎಂದಿಗೂ ನಿರುಪಯುಕ್ತವಾಗಿರುವುದಿಲ್ಲ. ಎಷ್ಟು ಹೆಚ್ಚು ಜನರು ಅದನ್ನು ಖರೀದಿಸಲು ಬಯಸುತ್ತಾರೆಯೋ ಅದರ ಮೌಲ್ಯವು ಅಷ್ಟೇ ಹೆಚ್ಚುತ್ತದೆ. ಈ ಆಕರ್ಷಕ ಧಾತುವು ತನ್ನ ಮಾಲೀಕರಿಗೆ ನಿಜವಾದ ನಿಧಿಯೇ ಆಗಿದೆ.

ಆಭರಣ ಉದ್ಯಮದಲ್ಲಿ ವಜ್ರ, ಪ್ಲಾಟಿನಂ, ಮುತ್ತುಗಳು ಹಾಗೂ ಕೃತಕ ಚಿನ್ನ ದಂತಹ ಹಲವು ಪರ್ಯಾಯ ಗಳು ಹೊರಹೊಮ್ಮಿದರೂ, ಚಿನ್ನವು ಅಗ್ರ ಸ್ಥಾನದಲ್ಲಿ ಮುಂದುವರಿದಿದೆ - ಇದು ನೆರೆಕರೆಯವರ ಈರ್ಷ್ಯೆ ಹಾಗೂ ಮಾಲೀಕನ ಹೆಮ್ಮೆ ಯ ಮೂಲವಾಗಿದೆ.

ಜನರು ಚಿನ್ನವನ್ನು ಶುಭದಿನದಂದು ಖರೀದಿಸಲು ಕಾರಣ :

  • ಪ್ರತಿಷ್ಠೆಯ ಸಂಕೇತ - ಭಾರತದಲ್ಲಿ, ಎಲ್ಲರಿಗೂ ತನ್ನ ಹಣ, ಚಿನ್ನವನ್ನು ಪ್ರದರ್ಶಿಸುವುದು ಇಷ್ಟವಾದ ಕಾರಣ, ಚಿನ್ನಾಭರಣವು ಪ್ರತಿಷ್ಠೆಯ ಸಂಕೇತವಾಗಿಬಿಟ್ಟಿದೆ. ನಾವಿದನ್ನು ಐಶ್ವರ್ಯ, ಸಾಮರ್ಥ್ಯ ಹಾಗೂ ಪ್ರತಿಷ್ಠೆಯೊಂದಿಗೆ ಸಂಬಂಧಿಸುತ್ತೇವೆ.
  • ಕುಟುಂಬದ ಕುಲಧನ: ಬಹುತೇಕ ಭಾರತೀಯ ಕುಟುಂಬಗಳಲ್ಲಿ ಚಿನ್ನವು ಒಂದು ಪ್ರಮುಖ ಕುಲಧನವಾಗಿದೆ. ಪೂರ್ವಾರ್ಜಿತ ಆಸ್ತಿಯಾಗಿ ಇದನ್ನು ಒಂದು ಪೀಳಿಗೆಯಿಂದ ಇನ್ನೊಂದಕ್ಕೆ ಹಸ್ತಾಂತರಿಸಲಾಗುತ್ತದೆ.

  • ಪೂಜ್ಯ ಹಾಗೂ ಸಮೃದ್ಧಿಯ ಸಂಕೇತ: ಹಿಂದು ಪುರಾಣಗಳ ಪ್ರಕಾರ, ಚಿನ್ನವನ್ನು ಪೂಜ್ಯ ಹಾಗೂ ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಇದು ಹೆಚ್ಚಿನ ಭಾವನಾತ್ಮಕ ಮೌಲ್ಯ ಹಾಗೂ ಇನ್ನೂ ಹೆಚ್ಚಿನ ಗ್ರಹಿಕೆಯ ಮೌಲ್ಯವನ್ನು ಹೊಂದಿದೆ. ಇದು ಜನರನ್ನು ಹತ್ತಿರ ತಂದು ಅವರ ನಡುವಿನ ಬಾಂಧವ್ಯವನ್ನು ಹೆಚ್ಚಿಸುತ್ತದೆ. ಚಿನ್ನವನ್ನು ಸಾಂಪ್ರದಾಯಿಕವಾಗಿ ಸಮೃದ್ಧಿಯ ದೇವತೆಯಾದ ದೇವಿ ಲಕ್ಷ್ಮಿ ಹಾಗೂ ಐಶ್ವರ್ಯ ದೇವತೆಯಾದ ಕುಬೇರರೊಂದಿಗೆ ಸಂಬಂಧಿಸಲಾಗಿದೆ. ಆದ್ದರಿಂದಲೇ, ಚಿನ್ನವನ್ನು ಖರೀದಿಸುವುದು ಮನೆಗೆ ದೇವರನ್ನು ಆಮಂತ್ರಿಸುವುದಕ್ಕೆ ಸಮಾನವಾಗಿದೆ.

  • ಒಳ್ಳೆಯ ಹೂಡಿಕೆ
  • : ಭಾರತೀಯರಿಗೆ, ಒಂದು ಹೂಡಿಕೆಯಾಗಿ, ಚಿನ್ನದ ಮೇಲಿರುವ ವಿಶ್ವಾಸಕ್ಕೆ ಸಾಟಿಯೇ ಇಲ್ಲ. ಇದರ ಪ್ರತ್ಯಕ್ಷತೆಯ ಕಾರಣ, ಇದನ್ನು ಸಾಂಪ್ರದಾಯಿಕವಾಗಿ ಒಂದು ಅತೀ ಸುರಕ್ಷಿತ ಹೂಡಿಕೆಯಾಗಿ ಪರಿಗಣಿಸಲಾಗುತ್ತದೆ( ಭೂಮಿ, ಸ್ವತ್ತು ಮತ್ತು ಮ್ಯೂಚುವಲ್ ಫಂಡ್ ಗಿಂತಲೂ) ಏಕೆಂದರೆ ಇದು ಹಣದುಬ್ಬರದ ಸಮಯದಲ್ಲಿ ಒಂದು ತಡೆಯಾಗಿ ವರ್ತಿಸುತ್ತದೆ. ರಾಜನೈತಿಕ ಹಾಗೂ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲೂ ಆರ್ಥಿಕ ಸಂರಕ್ಷಣೆ ನೀಡುವ ಇದು ಒಂದು ಅಮೂಲ್ಯ ಆಸ್ತಿಯಾಗಿದೆ. ಈ ಹಳದಿ ಧಾತು ಒಂದು ಉತ್ತಮವಾಗಿ ವೈವಿಧ್ಯೀಕರಿಸಿದ ಹೂಡಿಕೆ ಪೋರ್ಟ್ಫೋಲಿಯೋದ ಒಂದು ಭಾಗವಾಗಿದೆ- ಎಂದಿಗೂ ಒಂದು ದೀರ್ಘಾವಧಿ ಹೂಡಿಕೆಯಂತೆ ಕಾಣಲಾಗುತ್ತದೆ.

  • ಉಡುಗೊರೆ : ಚಿನ್ನದ ಉಡುಗೊರೆ ನೀಡುವುದನ್ನು ಭಾರತದಲ್ಲಿ ಶುಭ ಎಂದು ನಂಬಲಾಗಿದೆ. ಒಬ್ಬರಿಗೆ ಚಿನ್ನ ನೀಡುವುದರಿಂದ, ಅವರು ಅದನ್ನು ಬಳಸಬಲ್ಲರು ಮಾತ್ರವಲ್ಲದೆ ಆರ್ಥಿಕ ಅಸ್ಥಿರತೆಯ ಸಮಯದಲ್ಲೂ ಅದು ಅವರಿಗೆ ಉಪಯುಕ್ತವಾಗುತ್ತದೆ. ನಮ್ಮ ದೇಶದಲ್ಲಿ ಇದನ್ನು ಉನ್ನತ ಶ್ರೇಣಿಯ ಉಡುಗೊರೆ ಎನ್ನಲಾಗುತ್ತದೆ ಹಾಗೂ ಇದು ಅವರ ಪ್ರತಿಷ್ಠೆ ಹಾಗೂ ಭಾವನೆಯ ಶುದ್ಧತೆಯನ್ನು ಪ್ರದರ್ಶಿಸುತ್ತದೆ.

  • ಧಾರ್ಮಿಕ ಅರ್ಥ: ಚಿನ್ನವು ಭಾರತದ ಪ್ರತಿಯೊಂದು ಧಾರ್ಮಿಕ ಸಮಾರಂಭಗಳಲ್ಲಿಯ ಪ್ರಮುಖ ಭಾಗವಾಗಿದೆ, ಧರ್ಮ ಯಾವುದೇ ಆಗಿರಲಿ. ಭಕ್ತಾದಿಗಳು, ಚಿನ್ನದ ಬೆಲೆ ಎಷ್ಟೇ ಏರಿದರೂ, ಅದನ್ನು ದೇವಸ್ಥಾನಗಳಿಗೆ ದಾನ ನೀಡುವಾಗ ಸ್ವಲ್ಪವೂ ಹಿಂಜರಿಯುವುದಿಲ್ಲ.

  • ದ್ರವ್ಯತೆ : ಅದರ ದ್ರವ್ಯತೆಯಿಂದಾಗಿ ಚಿನ್ನವು ಒಂದು ಜನಪ್ರಿಯ ಹೂಡಿಕೆ ಹಾಗೂ ಉಳಿತಾಯದ ಆಯ್ಕೆಯಾಗಿದೆ. ಚಿನ್ನವು, ಷೇರುಗಳು, ಬಾಂಡ್ ಗಳು, ರಿಯಲ್ ಎಸ್ಟೇಟ್ ಹಾಗೂ ಇತರ ಆರ್ಥಿಕ ಸ್ವತ್ತುಗಳಿಗಿಂತ ವಿಭಿನ್ನವಾಗಿದೆ ಏಕೆಂದರೆ ಇದನ್ನು ಶೀಘ್ರವಾಗಿ ನಗದು ಆಗಿ ಪರಿವರ್ತಿಸಬಹುದು, ಆದ್ದರಿಂದ ಇದು ಎಲ್ಲಾ ಸಾಮಾಜಿಕ ಹಾಗೂ ಆರ್ಥಿಕ ಹಿನ್ನಲೆಯ ಜನರ ಮಧ್ಯೆ ಇದೊಂದು ಜನಪ್ರಿಯ ಆರ್ಥಿಕ ಆಸ್ತಿಯಾಗಿದೆ. 

ಚಿನ್ನವು ಒಂದು ಸರಳ ಹೂಡಿಕೆಯಾಗಿದೆ - ಎಲ್ಲಾ ಆರ್ಥಿಕ ವರ್ಗದ ಜನರಿಂದ ಬಳಸಲ್ಪಡುತ್ತದೆ. ಕೇವಲ ಒಂದು ಗ್ರಾಂ ಚಿನ್ನದ ಖರೀದಿಯೊಂದಿಗೆ, ಒಬ್ಬರು ಸಾವಿರಾರು ರೂಪಾಯಿಗಳನ್ನು ಉಳಿಸಬಹುದು! ಬೇರೆ ಯಾವ ಉಳಿತಾಯದ ಸಾಧನವು ಈ ರೀತಿಯ ಹೊಂದಾಣಿಕೆಯನ್ನು ನೀಡುವುದಿಲ್ಲ.

ಇಂದು ಚಿನ್ನವನ್ನು ಖರೀದಿಸುವುದು ಹಾಗೂ ಉಡುಗೊರೆ ನೀಡುವುದು ಎಂದಿಗಿಂತಲೂ ಸರಳವಾಗಿದೆ- ಮಾರುಕಟ್ಟೆಯಲ್ಲಿ ಇಷ್ಟೊಂದು ಆಯ್ಕೆಗಳು ಲಭ್ಯವಿರುವ ಕಾರಣ. ಅತೀ ಸರಳ, ಸುರಕ್ಷಿತ ಹಾಗೂ ಅನುಕೂಲಕರ ಆಯ್ಕೆಯಾಗಿದೆ ಡಿಜಿಟಲ್ ಗೋಲ್ಡ್. ನೀವು ಚಿನ್ನ ಖರೀದಿಸಲು ಮನೆಯಿಂದ ಹೊರಬರಬೇಕೆಂದೂ ಇಲ್ಲ. ಇದನ್ನು ಖರೀದಿಸಿ, ಉಡುಗೊರೆ ನೀಡಿ, ಹೂಡಿಕೆ ಮಾಡಿ - ಜಾರ್ ಆಪ್ ನೊಂದಿಗೆ ಕ್ಷಣಗಳಲ್ಲಿ.

ಚಿನ್ನದಲ್ಲಿ ಹೂಡಿಕೆ ಮಾಡುವಾಗ ಡಿಜಿಟಲ್ ಜಾಣ್ಮೆಯ ಆಯ್ಕೆ ಏಕೆ ಎಂಬ ಕಾರಣಗಳನ್ನು ಹಾಗೂ ಅದರ ಲಾಭಗಳ ಬಗ್ಗೆ ಅರಿತುಕೊಳ್ಳಿ.

ಕ್ಷಣಗಳಲ್ಲಿ ಚಿನ್ನವನ್ನು ಖರೀದಿಸಿ. ನಿಮ್ಮ ಪ್ರೀತಿಪಾತ್ರರಿಗೆ ಕಳಿಸಿ. ನಮ್ಮ ಸಮಾಜದಲ್ಲಿ ಬೇರೂರಿರುವ ಹಾಗೂ ಅನಿಯಮಿತ ರಿಟರ್ನ್ ಗಳನ್ನು ನೀಡುವ ಈ ಮೋಡಿ ಮಾಡುವ ಧಾತುವಿನ ಮೇಲೆ ಹೂಡಿಕೆ ಮಾಡಿ.

ಜಾರ್ ಆಪ್ ನೊಂದಿಗೆ ಡಿಜಿಟಲ್ ಗೋಲ್ಡ್ ನಲ್ಲಿ ಹೂಡಿಕೆ ಮಾಡುವುದು ಗೊಂದಲ ರಹಿತ ಹೇಗೆ ಎಂದು ತಿಳಿಯಿರಿ ಹಾಗೂ ಜಾರ್ ಆಪ್ ಅನ್ನು ಡೌನ್ಲೋಡ್ ಮಾಡಿ ಇಂದೇ ನಿಮ್ಮ ಹೂಡಿಕೆಯ ಪಯಣವನ್ನು ಆರಂಭಿಸಿ! 

Subscribe to our newsletter
Thank you! Your submission has been received!
Oops! Something went wrong while submitting the form.