Buy Gold
Sell Gold
Daily Savings
Round-Off
Digital Gold
Instant Loan
Nek Jewellery
ಬಜೆಟಿಂಗ್, ಸ್ವತಃ ಅಡಿಗೆ ಮಾಡುವುದು ಅಥವಾ ಸರಿಯಾದ ಕೊಡುಗೆಗಳನ್ನು ಹುಡುಕುವುದರಿಂದ ನೀವು ಎಷ್ಟು ಹಣ ಉಳಿಸಬಹುದು ಎಂದು ನಿಮಗೆ ತಿಳಿದಿದೆಯೇ? ತಿಳಿಯಲು ನಮ್ಮೊಂದಿಗೆ ಬನ್ನಿ.
ನೀವು 21 ಅಥವಾ ಆರಂಭಿಕ ಇಪತ್ತರ ವಯಸ್ಸಿನಲ್ಲಿದ್ದು ಹಾಗೂ ‘ವಯಸ್ಕ’ರಂತೆ ಇರಲು ಆರಂಭಿಸಿದ್ದರೆ, ನಿಮ್ಮ ಬಳಿ ಸಮಯವೇನೋ ಇರುತ್ತದೆ ಆದರೆ ಅಷ್ಟೇನೂ ಹಣವಿರುವುದಿಲ್ಲ, ಅಲ್ಲವೇ?
ನಿಮ್ಮ ಬಳಿ ಜವಾಬ್ದಾರಿಗಳಿವೆ, ಆದರೂ ನಿಮಗೆ ಪ್ರವಾಸ ಮಾಡಲು, ನಿಮಗೆ ಮುಖ್ಯವಾದದ್ದನು ನಿರ್ಧರಿಸಲು, ಬಾಳಸಂಗಾತಿಯನ್ನು ಆಯ್ಕೆ ಮಾಡಲು(ಮಾಡದೇ ಇರಲು), ಹಾಗೂ ಎಲ್ಲಿ ವಾಸಿಸಬೇಕು ಎಂದು ನಿರ್ಧರಿಸಲು ಸಮಯವಿದೆ.
ನೀವು ಆರೋಗ್ಯಕರ ಆರ್ಥಿಕ ಅಭ್ಯಾಸಗಳನ್ನು ಬೆಳೆಸಿದರೆ ಎಳೆ ವಯಸ್ಸಿನಲ್ಲೇ ನಿಮ್ಮ ಆರ್ಥಿಕತೆಯ ನಿಯಂತ್ರಣವನ್ನೂ ಪಡೆಯಬಹುದು. ವಿಶ್ವಾಸವಿಡಿ, ನೀವಂದುಕೊಂಡದ್ದಕ್ಕಿಂತ ಇದು ತುಂಬಾ ಸರಳವಾಗಿದೆ!
ಈ ಆರಂಭಿಕ ವರ್ಷಗಳು ನಿಮ್ಮ ಅಡಿಪಾಯವಾಗಿರುತ್ತದೆ ಹಾಗೂ ನೀವು ಈಗಲೇ ಆರ್ಥಿಕ ಕೌಶಲ್ಯತೆಗಳಲ್ಲಿ ಪರಿಣತಿ ಪಡೆದರೆ, ನೀವು ನಿಮ್ಮ 30ರಲ್ಲಿ, 40ರಲ್ಲಿ, 50ರಲ್ಲಿ ಹಾಗೂ ಅದಕ್ಕಿಂತ ಮುಂದೆಗೂ ನಿಮಗೆ ನೀವೇ ಧನ್ಯವಾದಗಳನ್ನು ಅರ್ಪಿಸುವಿರಿ.
ನಿಮ್ಮ ಹಣವು ಬೆಳೆಯಲು ದೀರ್ಘಕಾಲ ತೆಗೆದುಕೊಳ್ಳುತ್ತದೆ, ಆದರೆ ನೀವು ಅದನ್ನು ಈಗಲೆ ಪಕ್ಕಕ್ಕಿಡಲು ಆರಂಭಿಸಿದರೆ, ನಿಮ್ಮ ನಿವೃತ್ತಿಯ ಸಮಯದಲ್ಲಿ ಇದು ನಿಮ್ಮ ಮೇಲೆ ದೊಡ್ಡ ಪರಿಣಾಮವನ್ನು ಬೀರುತ್ತದೆ.
ಈಗ ನೀವು ನಿಮ್ಮ ಹಣಕಾಸನ್ನು ನಿಯಂತ್ರಿಸಲು ನಿರ್ಧರಿಸಿದ್ದೀರಿ, ಆದರೆ ಎಲ್ಲಿ ಹಾಗೂ ಹೇಗೆ ಆರಂಭಿಸಬೇಕು ಎಂಬ ಅಸಮಂಜಸದಲ್ಲಿರುವಿರಾ?
ನೀವು ಯುವಕರಾಗಿದ್ದರೆ ನೀವು ಅನುಸರಿಸಬೇಕಾದ, ಈ ರೀತಿಯ 7 ಆರ್ಥಿಕ ಸಲಹೆಗಳೊಂದಿಗೆ ನಿಮಗೆ ಮಾರ್ಗದರ್ಶನ ನೀಡಲು ಜಾರ್ ನಲ್ಲಿ ನಾವು ನಿಮ್ಮೊಂದಿಗೆ ಇದ್ದೇವೆ.
1.ನಿಮ್ಮ ಹಣವನ್ನು ನಿರ್ವಹಿಸಲು ಕಲಿಯಿರಿ (Learn to manage your money)
ನಿಮ್ಮ ಹಣವನ್ನು ನಿರ್ವಹಿಸುವುದು ರಾಕೇಟ್ ವಿಜ್ಞಾನವೇನಲ್ಲ ಹಾಗೂ ನೀವು ಅದರಲ್ಲಿ ತಜ್ಞರಾಗಬೇಕೆಂದೂ ಇಲ್ಲ. ನೀವು ಕೇವಲ ಸಮರ್ಪಣೆಯನ್ನು ಹೊಂದಿರಬೇಕು.
ಮೊದಲ ಹೆಜ್ಜೆಯು, ಸಹಜವಾಗಿಯೇ, ಉಳಿತಾಯ ಮಾಡುವುದು ಆಗಿದೆ. ಒಂದು ಉಳಿತಾಯ ಖಾತೆಯನ್ನು ತೆರೆಯಿರಿ. ಇದು ಆರ್ಥಿಕ ಸ್ವಾತಂತ್ರ್ಯ ಹೊಂದುವ ದಿಕ್ಕಿನಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ.
ಆರ್ಥಿಕ ಗುರಿಗಳನ್ನು ಗೊತ್ತುಮಾಡಿ ಹಾಗೂ ಅದನ್ನು ತಲುಪುವ ವಿಧಾನಗಳನ್ನು ಹುಡುಕಿ. ಪ್ರಸ್ತುತ, ನಿಮ್ಮ ಮನಸ್ಸಿನಲ್ಲಿ ಯಾವುದೇ ದೊಡ್ಡ ಗುರಿ ಇಲ್ಲ, ಒಂದು ತುರ್ತು ನಿಧಿಯನ್ನು ರಚಿಸಿ ಅದರಲ್ಲಿ ಹಣ ಹಾಕಲು ಆರಂಭಿಸಿ. ಅದು ಯಾವಾಗ ಬೇಕಾಗುವುದೆಂದು ನಿಮಗೆ ತಿಳಿಯದು.
ನಿಮ್ಮ ಸಂಬಳ ದೊರೆತ ತಕ್ಷಣ, ಅದನ್ನು ವಿವಿಧ ರೀತಿಗಳಲ್ಲಿ ವರ್ಗೀಕರಿಸಿ ಹಾಗೂ ಕನಿಷ್ಠ ಅದರ 10% ಅನ್ನಾದರೂ ಉಳಿತಾಯವಾಗಿ ಪಕ್ಕಕ್ಕೆ ಇಡಿ.
ನೀವು ದೊಡ್ಡ ಪಾಲುಗಳನ್ನೂ ಮಾಡಬಹುದು; ಎಷ್ಟು ದೊಡ್ಡದೋ ಅಷ್ಟು ಒಳ್ಳೆಯದು. ಆದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಲ್ಲ, ಅಲ್ಲಿ ನಿಮಗೆ ಯಾವುದೇ ರಿಟರ್ನ್ಸ್ ದೊರೆಯುವುದಿಲ್ಲ, ಆದರೆ ದ್ರವರೂಪದ ಹೂಡಿಕೆಗಳಂತಹ ಡಿಜಿಟಲ್ ಗೋಲ್ಡ್, ಮ್ಯೂಚುವಲ್ ಫಂಡ್ ಗಳು, ಎಫ್ ಡಿ ಇತ್ಯಾದಿ, ಇಂತಹ ಸಾಧನಗಳಲ್ಲಿ ದೀರ್ಘಕಾಲದ ವರೆಗೆ ಹೂಡಿಕೆ ಮಾಡಿ ಹಾಗೂ ಕಂಪೌಂಡಿಂಗ್ ನ ಜಾದೂ ನೋಡಿ.
ನೀವು ಒಂದು ಬಜೆಟ್ ಅನ್ನು ರಚಿಸಿ ನಿಮ್ಮ ವೆಚ್ಚಗಳ ಹಾಗೂ ಉಳಿತಾಯಗಳ ಲೆಕ್ಕವಿಡಬೇಕು. ಪ್ರತೀ ಖರ್ಚನ್ನು ಬರೆದಿಟ್ಟುಕೊಳ್ಳುವ ಅಭ್ಯಾಸವನ್ನು ಬೆಳೆಸಿ.
ಆರಂಭದಲ್ಲಿ ಹಣದ ನಿರ್ವಹಣೆ ನಿಮಗೆ ಕಠಿಣ ಎನಿಸಬಹುದು, ಆದರೆ ನೀವು ಎಷ್ಟು ಬೇಗೆ ನಿಮ್ಮ ಹಣಕಾಸನ್ನು ವ್ಯವಸ್ಥಿತವಾಗಿ ಇಡಲು ಆರಂಭಿಸುತ್ತೀರೋ, ನಿಮ್ಮ ಭವಿಷ್ಯ ಅಷ್ಟೇ ಉತ್ತಮವಾಗಿರುತ್ತದೆ.
ನಿಮ್ಮ ಭವಿಷ್ಯವು ನೀವು ಹೇಗೆ ಹಣ ಉಳಿಸುತ್ತೀರಿ ಅಥವಾ ನಿಮ್ಮ ಬಳಿ ಎಷ್ಟು ಹೆಚ್ಚುವರಿ ನಿಧಿ ಇದೆ, ಇದನ್ನು ಅವಲಂಬಿಸಿದೆ. ಈ ಹಣವು ನಿಮ್ಮನ್ನು ಆರ್ಥಿಕವಾಗಿ ಸ್ವತಂತ್ರಗೊಳಿಸಬಲ್ಲದು.
ಹಣದ ಹೂಡಿಕೆಯು ಹೆಚ್ಚುವರಿ ನಿಧಿ ಅಥವಾ ಉಳಿತಾಯವನ್ನು ವೃದ್ಧಿಸಲು ಹಾಗೂ ಹಣದುಬ್ಬರದ ವಿರುದ್ಧ ಹೋರಾಡಲು ಒಂದು ಉತ್ತಮ ಮಾರ್ಗವಾಗಿದೆ.
ನೀವು ಎಷ್ಟು ಬೇಗ ಹೂಡಿಕೆ ಆರಂಭಿಸುತ್ತೀರೋ, ಅಷ್ಟು ಉತ್ತಮ. ಹೂಡಿಕೆಯು, ನೀವು ಈಗ ಎಲ್ಲಿ ಇದ್ದೀರಿ ಹಾಗೂ ನೀವು ಎಲ್ಲಿ ಇರಲು ಬಯಸುತ್ತೀರಿ ಎಂಬುದರ ನಡುವಿನ ಸೆತುವೆಯಾಗಿದೆ. ಹೌದು.
ಆದ್ದರಿಂದ,ಎಳೆ ವಯಸ್ಸಿನಿಂದಲೇ ಒಂದು ಹೂಡಿಕೆಯ ಸಂಪುಟವನ್ನು ರಚಿಸುವುದು ಸ್ವತಃ ಒಂದು ದೊಡ್ಡ ಸಾಧನೆಯಾಗಿದೆ. ಎಷ್ಟೇ ಆದರೂ, ಹಣಕಾಸಿನ ಸಂಗ್ರಹಣೆಯ ದಿಕ್ಕಿನಲ್ಲಿ ಇದು ನಿಮ್ಮ ಮೊದಲ ಹೆಜ್ಜೆಯಾಗಿದೆ.
ಸಂಪುಟ ಅಥವಾ ಪೋರ್ಟ್ಫೋಲಿಯೋ ಅನ್ನು ರಚಿಸುವುದೆಂದರೆ ನಿಮ್ಮ ಹೂಡಿಕೆಗಳನ್ನು ಇಕ್ವಿಟೀ ಗಳು, ಸಾಲಗಳು, ಮತ್ತು ನಗದು ಹೀಗೆ ಸ್ವತ್ತುಗಳ ವರ್ಗಗಳ ಮಧ್ಯೆ ನಿಮ್ಮ ಹೂಡಿಕೆಗಳನ್ನು ಹರಡುವುದು. ಇದನ್ನು ಆಸ್ತಿ ಹಂಚಿಕೆ ಎಂದು ಕರೆಯಲಾಗುತ್ತದೆ.
ಆದರ್ಶಪ್ರಾಯವಾಗಿ, ನಿಮ್ಮ ಹೂಡಿಕೆಯ ದಿಗಂತವು ಸುಮಾರು 10-15 ವರ್ಷಗಳಾಗಿರಬೇಕು. ಒಮ್ಮೆ ನಿಮ್ಮ ಪೋರ್ಟ್ಫೋಲಿಯೋದ ರಚನೆಯಾದ ಮೇಲೆ, ನೀವು ಕೇವಲ 6 ತಿಂಗಳಿಗೊಮ್ಮೆ ಅದಕ್ಕೆ ಪುನಃ ಭೇಟಿ ನೀಡಿ ಮರುಸಮತೋಲನ ಮಾಡುತ್ತಿರಿ ಹಾಗೂ ಏರುಪೇರುಗಳನ್ನು ಮತ್ತು ಮಾರುಕಟ್ಟೆಯ ಚಲನೆಯನ್ನು ಅರಿತು, ನಿಮ್ಮ ಪೋರ್ಟ್ಫೋಲಿಯೋ ಅನ್ನು ಅಪಾಯಗಳಿಂದ ದೂರವಿಡಿ.
ಹಣದುಬ್ಬರದಿಂದಾಗಿ ಎಲ್ಲವೂ ವರ್ಷಕಳೆದಂತೆ ದುಬಾರಿಯಾಗುತ್ತದೆ. ನೀವು ಹೂಡಿಕೆ ಮಾಡದಿದ್ದರೆ ಹಣದುಬ್ಬರದ ಅಂತರವನ್ನು ಹೋಗಲಾಡಿಸಲು ನೀವು ನಿಮ್ಮ ಹಣವನ್ನು ಖರ್ಚು ಮಾಡುವುದಿಲ್ಲ. ಹೀಗೆ ಮಾಡದಿದ್ದರೆ, ನೀವು ಬಯಸಿದಂತೆ ನಿವೃತ್ತಿ ಪಡೆಯಲು ಸಾಧವಾಗುವುದಿಲ್ಲ.
ನಿಮ್ಮ ಅಪಾಯದ ಸಾಮರ್ಥ್ಯವನ್ನು ಅರಿತು ನಿಮ್ಮ ಅಗತ್ಯಗಳಿಗೆ ಹೊಂದುವ ಸಾಧನದಲ್ಲಿ ಹೂಡಿಕೆ ಮಾಡಿ.
ಒಮ್ಮೆ ನೀವು ಉಳಿತಾಯ ಮಾಡಲು ಹಾಗೂ ನಿಮ್ಮ ಬಜೆಟ್ ಅನ್ನು ನಿರ್ವಹಿಸಲು ಆರಂಭಿಸಿದಾಗ, ನೀವು ಏನನ್ನು ಹೊಂದಿದ್ದೀರಿ ಹಾಗೂ ಏನನ್ನು ಎರವಲು ಪಡೆದಿದ್ದೀರಿ ಎಂದು ನಿಮಗೆ ಅರಿವಾಗುತ್ತದೆ.
ನಿಮ್ಮ ಖರ್ಚುಗಳನ್ನು ಸ್ಥಿರ ಅಥವಾ ಅಸ್ಥಿರ, ಅಗತ್ಯಗಳು ಅಥವಾ ಬೇಕುಗಳು, ತಪ್ಪಿಸಲಾಗದ ಅಥವಾ ತಪ್ಪಿಸಬಹುದಾದ ಹೀಗೇ ವಿಂಗಡಿಸಿ. ಈ ರೀತಿ ನಿಮ್ಮ ಬಳಿ ಒಂದು ಸಂಪೂರ್ಣ ಪಟ್ಟಿ ಇರುತ್ತದೆ. ಒಂದು ಶ್ರೇಣಿಯನ್ನು ರಚಿಸಿ ಅದಕ್ಕೆ ಆದ್ಯತೆ ನೀಡಿ.
ಇದರ ಅರಿವು ನಿಮಗೆ ಎಷ್ಟು ಬೇಗ ಆಗುತ್ತದೆಯೋ, ಅಷ್ಟೇ ಉತ್ತಮವಾಗಿ ನಿಮ್ಮ ಅನಗತ್ಯ ಖರ್ಚುಗಳನ್ನು ನೀವು ಹತೋಟಿಗೆ ತರಬಹುದು.
ಬೋನಸ್ ಸಲಹೆ : ನೀವು ಇನ್ನೂ ಅಡುಗೆ ಮಾಡಲು ಕಲಿತಿಲ್ಲವಾದರೆ ಬೇಗನೇ ಕಲಿಯಿರಿ. ನೀವೇ ಅಡುಗೆ ಮಾಡಿದರೆ ಸಾಕಷ್ಟು ಹಣವನ್ನು ಉಳಿಸಬಹುದು ಹಾಗೂ ಇದು ಸ್ವಾದಿಷ್ಟ ಮತ್ತು ಆರೋಗ್ಯಕರವಾಗಿಯೂ ಇರುತ್ತದೆ.
ನೀವು ಮನೆಯಿಂದ ದೂರವಿದ್ದರೆ ಫ್ಲ್ಯಾಟ್ಮೇಟ್ ಗಳೊಂದಿಗೆ ವಾಸಿಸಿ. ಇದು ಹಲವು ಖರ್ಚುಗಳ ವಿಭಾಜನೆ ಮಾಡುತ್ತದೆ.
ನಿಮ್ಮ ನಗರದಲ್ಲಿ ಅದರ ಅಗತ್ಯವಿಲ್ಲದಿದ್ದರೆ ಕಾರು ಖರೀದಿಸಬೇಡಿ. ಪ್ರಯಾಣಿಸಲು ದ್ವಿಚಕ್ರ ವಾಹನ ಅಥವಾ ಸಾರ್ವಜನಿಕ ಸಾರಿಗೆಯನ್ನು ಬಳಸಿ.
ಕ್ರೆಡಿಟ್ ಕಾರ್ಡ್ ಅತ್ಯಂತ ದುಬಾರಿ ವಿಧದ ಸಾಲವಾಗಿದೆ ಎಂದು ನಿಮಗೆ ತಿಳಿದಿದೆಯೆ? ಅದನ್ನು ನಿರಂತರವಾಗಿ ಬಳಸಿದರೆ ನಿಮಗೆ ಅರಿವಾಗುವ ಮೊದಲೇ ನೀವೊಂದು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರಿತ್ತೀರಿ.
ತುರ್ತು ಪರಿಸ್ಥಿತಿಗಳಲ್ಲಿ ಮಾತ್ರ ಕ್ರೆಡಿಟ್ ಕಾರ್ಡ್ ಅನ್ನು ಬಳಸುವ ರೂಢಿಯನ್ನು ಬೆಳೆಸಿ.
ನೀವು ಹಲವು ಆರ್ಥಿಕ ಗುರಿಗಳ ಬಗ್ಗೆ ಯೋಚಿಸಬಹುದು. ಉದಾಹರಣೆಗೆ ಕಾರು, ಹೊಸ ಸ್ಮಾರ್ಟ್ಫೋನ್ ಅಥವಾ ಉನ್ನತ ಶಿಕ್ಷಣ. ಈ ಎಲ್ಲಾ ಸಂದರ್ಭಗಳಿಗೂ ನಿಮಗೆ ಹಣ ಬೇಕಾಗುತ್ತದೆ.
ಆದರೆ ಅದು ಎಲ್ಲಿಂದ ಬರಬೇಕು? ಅಲ್ಲ, ಸಾಲದಿಂದಲ್ಲ. ಉಳಿತಾಯವೇ ದಾರಿಯಾಗಿದೆ!
ನಿಮ್ಮ ಸಾಲದ ಪಾವತಿಯನ್ನು ನೀವು ಉತ್ತಮ ರೀತಿಯಲ್ಲಿ ರೂಪಿಸಿದರೆ ನೀವು ಸಾಲಬಾಧೆಯ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳಬಹುದು. ಕೇವಲ ಯಾರಿಗೆ ಎಷ್ಟು ನೀಡಬೇಕಾಗಿದೆ ಎಂದು ನಿಮಗೆ ತಿಳಿದಿರಬೇಕು.
ಅವರಿಗೆ ಪಾವತಿ ಮಾಡಲು ಸಮಯವನ್ನು ಮೀಸಲಿಡಿ. ನೀವು ಬಹಳಷ್ಟು ಸಾಲವನ್ನು ಹೊಂದಿದ್ದರೆ, ಅತೀ ದುಬಾರಿಯಾಗಿರುವುದನ್ನು ಮೊದಲು ಪಾವತಿಸಿ.
ಎಂದಿಗೂ ಸಾಲವನ್ನು ಕೊನೆಯ ಮಾರ್ಗವೆಂದು ತಿಳಿಯಿರಿ. ಆದಷ್ಟು ಖರೀದಿಗಳಿಗೆ ಡೌನ್ ಪೇಮೆಂಟ್ ಗಳನ್ನು ಮಾಡಿ. ಇದರ ಜೊತೆ, ನೀವು ವಯಕ್ತಿಕ ಸಾಲದಂತ ತೆರಿಗೆ ಸಮರ್ಥ ಸಾಲಗಳಿಂದ ದೂರವಿರಬೇಕು.
ನಿಮ್ಮ ಗುರಿಗಳನ್ನು ತಲುಪಲು ನೀವು ಒಂದು ದಾಖಲೆಯನ್ನು ಉಳಿಸಿ ಬೆಳೆಸಬಹುದು. ಇದರಿಂದ, ಸಾಲಬಾಧೆಯಿಂದ ದೂರ ಉಳಿಯಬಹುದು.
ನಿಮ್ಮ ಹಣದ ಬಗ್ಗೆ ಏನು ಮಾಡುವುದು ಎಂದು ಯೋಚಿಸುವ ಮೊದಲು ನೀವು ಎನನ್ನದರೂ ಸಂಪಾದಿಸಬೇಕು, ಅಲ್ಲವೇ?
ನಾವಿಲ್ಲಿ ಕೌಶಲ್ಯದ ಬಗ್ಗೆ ಮಾತನಾಡುವಾಗ ದೊಡ್ಡ ಚಿತ್ರಣವನ್ನು ನೋಡುತ್ತಿದ್ದೇವೆ. ನಾವು ಕೇವಲ ಒಂದು ನೌಕರಿಯ ಬಗ್ಗೆ ಅಲ್ಲ ನಿಮ್ಮ ಸಂಪೂರ್ಣ ವೃತ್ತಿಜೀವನದ ಬಗ್ಗೆ ಗಮನವಿಟ್ಟಿದ್ದೇವೆ.
ಆದರೆ ಇದನ್ನು ಒಪ್ಪಿಕೊಳ್ಳೋಣ, ನಿಮ್ಮ ಮೊದಲ ನೌಕರಿಯು ನಿಮ್ಮ ಕೊನೇಯದಾಗಲಾರದು ಹಾಗೂ ನೀವು ಅದನ್ನು ಇಷ್ಟಪಡದೆಯೂ ಇರಬಹುದು. ಆದರೆ, ನಿಮ್ಮ ಉತ್ತಮವನ್ನು ನೀಡುವ ಉತ್ಸಾಹ ನಿಮ್ಮಲ್ಲಿರಬೇಕು.
ಇಂದಿನ ಕಾಲದ ಪ್ರವೃತ್ತಿಗಳನ್ನು ಅರಿತು ಅದಕ್ಕೆ ಅನುಗುಣವಾದ ಕೌಶಲ್ಯವನ್ನು ನೀವು ವೃದ್ಧಿಸಿದರೆ, ಇಡೀ ವಿಶ್ವವೇ ನಿಮ್ಮ ಆಟದ ಮೈದಾನವಾಗುವುದು.
ನಿಮ್ಮ ಭವಿಷ್ಯದ ಸಂಪಾದನೆಗಳು ಹೆಚ್ಚುತ್ತವೆ ಹಾಗೂ ನೀವು ನಿಮ್ಮ ರೆಸ್ಯೂಮೆಯಲ್ಲಿ ಹೆಚ್ಚಿನ ಕೌಶಲ್ಯಗಳನ್ನು ಸೇರಿಸಿದರೆ ನಿಮಗೆ ಹೆಚ್ಚಿನ ಆದ್ಯತೆ ದೊರೆಯುತ್ತದೆ.
ನೀವು ನಿಮ್ಮ ಉದ್ಯೋಗದಾತನ ಮೇಜಿನ ಮೇಲೆ ಎಷ್ಟು ಲಾಭದಾಯಕ ಕೌಶಲ್ಯಗಳನ್ನು ತಂದಿಡುತ್ತೀರೋ, ಇತರ ನೌಕರರಿಗೆ ಹೋಲಿಸಿದರೆ ನಿಮ್ಮ ಆದ್ಯತೆ ಅಷ್ಟೇ ಹೆಚ್ಚುತ್ತದೆ, ಉದ್ಯಮದಲ್ಲಿ ನಿಮ್ಮ ಮೌಲ್ಯವೂ ಹೆಚ್ಚುತ್ತದೆ, ಇದರಿಂದ ನಿಮ್ಮ ಆದಾಯವನ್ನು ಚರ್ಚಿಸುವಾಗ ನಿಮ್ಮದೇ ಮೇಲುಗೈ ಇರುತ್ತದೆ.
ಒಂದು ಲಾಭದಾಯಕ ಕೌಶಲ್ಯವನ್ನು ಪಡೆದ ಮೇಲೆ, ಸಮಾಲೋಚನೆಯ ಪ್ರಾಮುಖ್ಯತೆಯನ್ನು ಕಲಿಯುವ ಸಮಯ ಬರುತ್ತದೆ.
ಸ್ಯಾಲರಿ.ಕಾಮ್ ನ ಸರ್ವೇ ಪ್ರಕಾರ, ಕೇವಲ 37% ಪ್ರತಿವಾದಿಗಳು ಯಾವಾಗಲೂ ಸಂಬಳವನ್ನು ಚರ್ಚಿಸುತ್ತಾರೆ ಹಾಗೂ ಒಂದು ಅದ್ಭುತ 18% ಎಂದಿಗೂ ಇಲ್ಲ.
ಇನ್ನು ಕೆಟ್ಟದೆಂದರೆ, ಅವರ ಸಾಮರ್ಥ್ಯ ವಿಮರ್ಶೆಯ ಸಂದರ್ಭದಲ್ಲಿ, 44% ಜನರು ಅವರು ಈ ವಿಷಯವನ್ನು ಎತ್ತಲೇ ಇಲ್ಲ ಎಂದರು.
ಹೆಚ್ಚು ಕೇಳದೇ ಇರಲು ಕಾರಣವೇನು? ಭಯ.
ನಮಗೆ ಅರ್ಥವಾಗುತ್ತದೆ : ಸಂಬಳದ ಸಮಾಲೋಚನೆಗಳು ಭಯಹುಟ್ಟಿಸಬಹುದು. ಆದರೆ ಅದಕ್ಕಿಂತ ಭಯಾನಕ ಏನು ಗೊತ್ತೇ? ಅದನ್ನು ಮಾಡದೇ ಇರುವುದು.
ಆದ್ದರಿಂದ ನೀವು ಪುರುಷರಾಗಿರಿ ಅಥವಾ ಮಹಿಳೆಯಾಗಿರಿ, ಇದು ನಿಮ್ಮ ಮೊದಲನೆಯ ಅಥವಾ ಐದನೇ ನೌಕರಿ ಇರಲಿ, ಸಮಾಲೋಚನೆ ನಡೆಸುವುದನ್ನು ಕಲಿಯುವ ಸಮಯ ಬಂದಾಗಿದೆ.
ಒಬ್ಬ ಜಾಣ ಶಾಪರ್ ಎಂದರೆ ಒಳ್ಳೆಯ ವ್ಯವಹಾರ ಅರಸುವವನು. ಒಮ್ಮೆ ನೀವು ವ್ಯವಹಾರ ಹುಡುಕುವ ಕಲೆಯಲ್ಲಿ ಕರಗತರಾದ ಮೇಲೆ, ನೀವು ಜಾಣ್ಮೆಯಿಂದ ಖರೀದಿಸುವ ಮೊದಲು ಆ ವಸ್ತುವಿನ ಅಗತ್ಯ ನಿಮಗಿದೆಯೇ ಎಂದು ತಿಳಿಯಿರಿ.
ಒಂದು ಉದ್ವೇಗಕ್ಕೊಳಗಾಗಿ ನೀವು ಖರೀದಿ ಮಾಡಬಾರದು. ಯಾವುದೇ ಆವಶ್ಯಕವಲ್ಲದ ವಸ್ತುವನ್ನು ಖರೀದಿಸುವ ಮೊದಲು 24 ಘಂಟೆಗಳ ಕಾಲ ಕಾಯಿರಿ. ಇದು ನಿಮಗೆ ನಿಜವಾಗಿಯೂ ಬೇಕಾಗಿದೆಯೋ ಅಥವಾ ಇದನ್ನು ನೀವು ಬಳಸುತ್ತೀರೋ ಎಂದು ಯೋಚಿಸಿ.
ಎಲ್ಲ ವಸ್ತುಗಳ ಮೇಲೆ ಕೊಡುಗೆಯಿದೆಯೇ ಎಂದು ನೋಡಿ - ಆಹಾರ, ಬಟ್ಟೆ, ಪೀಠೋಪಕರಣಗಳು ಹೀಗೇ. ನೀವು ಒಂದು ಒಳ್ಳೆ ವ್ಯವಹಾರವನ್ನು ಅರಸಿದರೆ ನೀವು ಸಾಕಷ್ಟು ಹಣವನ್ನು ಉಳಿಸುವಿರಿ.
ಖರೀದಿ ಮಾಡುವ ಮೊದಲು ನಿಮ್ಮದೊಂದು ಯೋಜನೆಯಿರಬೇಕು. ಹಣ ಉಳಿಸುವ ಒಂದು ಅತೀ ಸರಳ ವಿಧಾನವೆಂದರೆ ಒಂದು ಪಟ್ಟಿ ಮಾಡಿ ಅದನ್ನು ಪಾಲಿಸುವುದು.
ಇದೊಂದು ಸರಳ ಅಭ್ಯಾಸವಾಗಿದ್ದು ನಿಮ್ಮ ಪಯಣಕ್ಕಿಂತ ಮೊದಲು ಕೇವಲ ಕೆಲ ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
ನಿಮ್ಮ ಮುಂದೆ ಒಂದು ನಿರ್ದಿಷ್ಟ ಪಟ್ಟಿ ಇದ್ದರೆ, ನೀವು ನಿಮ್ಮ ಉದ್ವೇಗದ ಖರೀದಿಗಳನ್ನು ನಿಯಂತ್ರಿಸಿ ಸಮಯ ಹಾಗೂ ಹಣ ಈ ಎರಡನ್ನೂ ಉಳಿಸಬಹುದು.
ಕೊನೆಯಲ್ಲಿ, ಪ್ರಮುಖ ಹಣಕಾಸಿನ ನಿರ್ಧಾರಗಳನ್ನು ಮಾಡುವ ಮೊದಲು ನೀವು ತಜ್ಞರ ಸಲಹೆ ಪಡೆಯಿರಿ ಎಂದು ನಾವು ಶಿಫಾರಸು ಮಾಡುತ್ತೇವೆ.
ನೀವಿದರ ಅಭ್ಯಾಸ ಮಾಡಿದರೆ ಹಣವನ್ನು ನಿರ್ವಹಿಸುವುದು ಅಷ್ಟೇನೂ ಕಷ್ಟವಲ್ಲ. ನಿಮ್ಮ ದಿನಚರಿಯಲ್ಲಿ ಈ ಅಭ್ಯಾಸವನ್ನು ಅಳವಡಿಸಿಕೊಳ್ಳಿ.
ಮೇಲೆ ನೀಡಿರುವ ಸಲಹೆಗಳನ್ನು ಪಾಲಿಸಿ ನಿಮ್ಮ ಉಳಿತಾಯ ಹಾಗೂ ಹೂಡಿಕೆಯ ಪಯಣವನ್ನು ಆರಂಭಿಸಿ ಹಾಗೂ ನಿಮ್ಮ ನಿಧಿಯನ್ನು ವೃದ್ಧಿಸಿ. ನಿಮ್ಮ ಎಳೆ ವಯಸ್ಸಿನ ಲಾಭವನ್ನು ಪಡೆದು ನಿಮ್ಮನ್ನು ನೀವೇ ಒಂದು ಆಸ್ತಿಯನ್ನಾಗಿಸಿ.