Buy Gold
Sell Gold
Daily Savings
Digital Gold
Instant Loan
Round-Off
Nek Jewellery
ನಿಮ್ಮ ಮಕ್ಕಳ ಸಮಗ್ರ ಅಭಿವೃದ್ಧಿಗಾಗಿ ನೀವು ಮೊದಲಿನಿಂದಲೂ ಆರ್ಥಿಕ ಸಾಕ್ಷರತೆಯನ್ನು ಹೇಗೆ ಕಲಿಸಬಹುದು ಎಂಬುದನ್ನು ತಿಳಿಯಿರಿ. ನಾವು ಚಿಕ್ಕವರಿದ್ದಾಗ "ಹಣ ಮರದ ಮೇಲೆ ಬೆಳೆಯುವುದಿಲ್ಲ" ಎಂಬ ಮಾತನ್ನು ನಾವೆಲ್ಲರೂ ಕೇಳಿದ್ದೇವೆ. ಈ ಬುದ್ಧಿವಂತಿಕೆಯ ಮಾತುಗಳನ್ನು ನಮಗೆ ನಮ್ಮ ಪೋಷಕರು ಮತ್ತು ಶಿಕ್ಷಕರು ಕಲಿಸಿದರು. ಆದರೆ ಆರ್ಥಿಕ ಸಾಕ್ಷರತೆಯ ಬಗ್ಗೆ ನಮ್ಮ ಪಾಠ ಬಹುಶಃ ಅಲ್ಲಿಗೆ ಕೊನೆಗೊಂಡಿತು.
ಪೋಷಕರು ತಮ್ಮ ಮಕ್ಕಳಿಗೆ ಹಲವಾರು ವಿಷಯಗಳನ್ನು ಕಲಿಸುತ್ತಾರೆ, ಅದು ಹಂಚಿಕೊಳ್ಳುವುದಾಗಿರಬಹುದು, ಬೈಕು ಓಡಿಸುವುದಾಗಿರಬಹುದು, ಅಡುಗೆ ಮಾಡುವುದಾಗಿರಬಹುದು ಅಥವಾ ಡ್ರೈವಿಂಗ್ ಮಾಡುವುದಾಗಿರಬಹುದು. ಆದರೆ ಇವೆಲ್ಲದರ ಮಧ್ಯೆ ಅವರು ಪ್ರಮುಖ ಪಾಠವನ್ನೇ ಮರೆಯುತ್ತಿದ್ದಾರೆ. - ಅದೇ ಹಣದ ನಿರ್ವಹಣೆ (Managing Money).
ಹಣದ ವಿಷಯದಲ್ಲಿ ಅಜ್ಞಾನವು ಒಳ್ಳೆಯದಲ್ಲ ಮತ್ತು ನಿಮಗೆ ತಿಳಿಯದೇ ಇರುವ ವಿಷಯಗಳು ನಿಮ್ಮನ್ನು ನೋಯಿಸಬಹುದು.
ನಾವು ಶಾಲೆಯಲ್ಲಿ ಎಂದಿಗೂ ಹಣಕಾಸಿನ ಶಿಕ್ಷಣವನ್ನು ಪಡೆಯಲಿಲ್ಲ, ಬಹುಶಃ ಅದಕ್ಕಾಗಿಯೇ, ಮಗುವಿನ ಬೆಳವಣಿಗೆಯ ವರ್ಷಗಳಲ್ಲಿ ಆ ಶಿಕ್ಷಣವನ್ನು ಪಡೆಯುವುದು ಎಷ್ಟು ಮುಖ್ಯವೆಂದು ನಾವೆಂದಿಗೂ ಅರಿಯಲಿಲ್ಲ.
ಆದರೆ ಅವರು ನಮ್ಮಂತೆಯೇ ಹಣದ ಬಗ್ಗೆ ಹೆಚ್ಚು ತಿಳಿಯದಂತೆ ಬೆಳೆಯಲಿ ನಾವು ಬಯಸುವುದಿಲ್ಲ, ಅಲ್ಲವೇ? ಮಕ್ಕಳು ಚಿಕ್ಕಂದಿನಿಂದಲೇ ಹಣದ ಬಗ್ಗೆ ಕಲಿಯುವುದರಿಂದ ಪ್ರಯೋಜನ ಪಡೆಯುತ್ತಾರೆ ಎಂದು ಸಂಶೋಧನೆ ಹೇಳುತ್ತದೆ.
ಇದು ಅವರ ಸರ್ವಾಂಗೀಣ ಅಭಿವೃದ್ಧಿಗೂ ಸಹಕಾರಿಯಾಗಿದೆ.
ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಮತ್ತೊಂದು ಸಂಶೋಧನೆಯು ನಿಮ್ಮ ಮಗುವಿನ ಹಣಕಾಸಿನ ಅಭ್ಯಾಸಗಳು ಸಾಮಾನ್ಯವಾಗಿ 7 ನೇ ವಯಸ್ಸಿನಲ್ಲಿ ಶುರುವಾಗುತ್ತವೆ ಎಂದು ಹೇಳುತ್ತದೆ. ಇದು ಅಸಾಧಾರಣವಾಗಿ ಯಾವುದೇ ಮಾನದಂಡಗಳಿಂದ ನೋಡಿದರೂ ಚಿಕ್ಕ ವಯಸ್ಸು.
ಒಂದುವೇಳೆ ಇಂಗ್ಲಿಷ್‌ನಲ್ಲಿ ಸಂವಹನ ಮಾಡುವುದು ಇಂದಿನ ಪ್ರಪಂಚದಲ್ಲಿ ಒಂದು ಅವಶ್ಯಕ ಕೌಶಲ್ಯವಾಗಿದ್ದರೆ, ಆರ್ಥಿಕ ಸಾಕ್ಷರತೆಯೂ ಅಷ್ಟೇ ಅವಶ್ಯಕ ಕೌಶಲ್ಯವಾಗಿದೆ.
ನೀವು ನಿಮ್ಮ ಮಕ್ಕಳಿಗೆ ಆರ್ಥಿಕ ಸಾಕ್ಷರತೆಯನ್ನು ಉಡುಗೊರೆಯಾಗಿ ನೀಡಲು, ನೀವು ಪಾಲಿಸಬಹುದಾದ ಕೆಲವು ಉಪಾಯಗಳನ್ನು ನಾವು ನೀಡಿದ್ದೇವೆ :
ನಿಮ್ಮ ಮಕ್ಕಳಿಗೆ ಭತ್ಯೆ ಅಥವಾ ಪಾಕೆಟ್ ಮನಿಯನ್ನು ನೀಡುವುದು ಎಂದರೆ ಮಕ್ಕಳಿಗೆ ಹಣವನ್ನು ಮ್ಯಾನೇಜ್ ಮಾಡುವ ಮೊದಲ ಅನುಭವವನ್ನು ನೀಡುವ ಉತ್ತಮ ಮಾರ್ಗವಿದು.
ಅವರು ಸ್ಮಾರ್ಟ್ ಖರ್ಚು ಮತ್ತು ಉಳಿತಾಯದ ಪ್ರಯೋಜನಗಳನ್ನು ಕಲಿಯುತ್ತಾರೆ, ಹಾಗೆಯೇ ಅಜಾಗರುಕ ಖರ್ಚುಗಳಿಂದಾಗುವ ಅಪಾಯಗಳನ್ನು ತಿಳಿಯುತ್ತಾರೆ. ಅಪಾಯಗಳು ಮುಂದೆ ಜೀವನದಲ್ಲಿ ಆಗುವುದಕ್ಕಿಂತ ಈಗ ತುಂಬಾ ಕಡಿಮೆಯಾಗಿರುತ್ತವೆ.
ಮಕ್ಕಳು ತಮ್ಮ ಸ್ವಂತ ಹಣದಿಂದ ಖರೀದಿಸುವ ವಸ್ತುಗಳನ್ನು ಸಹ ಗೌರವಿಸುತ್ತಾರೆ.
ಎಷ್ಟು ಭತ್ಯೆ ನೀಡಬೇಕೆಂದು ನಿಮಗೆ ಖಚಿತವಿಲ್ಲದಿದ್ದರೆ, ಚಿಂತಿಸಬೇಡಿ. ಇದಕ್ಕೆ ಯಾವುದೇ ನಿರ್ದಿಷ್ಟವಾದ ಕಠಿಣ ಮತ್ತು ಅವಸರದ ನಿಯಮಗಳಿಲ್ಲ ಎಂಬುದನ್ನು ನೆನಪಿನಲ್ಲಿಡಿ. ಆದರೆ ಮಕ್ಕಳಿಗೆ ಆ ಭತ್ಯೆಯನ್ನು ಗಳಿಸಲು ಸಾಧ್ಯವಾಗುವಂತೆ ಮಾಡಲು ಪ್ರಯತ್ನಿಸಿ.
ಈ ರೀತಿಯಲ್ಲಿ, ಅವರು ಹಣವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಉತ್ತಮ ಜ್ಞಾನವನ್ನು ಪಡೆಯುತ್ತಾರೆ.
ಶುಚಿಗೊಳಿಸುವಿಕೆ, ಅವರ ಆಟಿಕೆಗಳನ್ನು ಆರ್ಗನೈಸ್ ಮಾಡುವುದು, ಬಟ್ಟೆ ಒಗೆಯುವುದು ಅಥವಾ ಕಿರಿಯ ಒಡಹುಟ್ಟಿದವರನ್ನು ನೋಡಿಕೊಳ್ಳುವುದು ಮುಂತಾದ ಮನೆಯ ಚಟುವಟಿಕೆಗಳ ಮೇಲೆ ಮಕ್ಕಳಿಗೆ ನೀಡುವ ಭತ್ಯೆಯನ್ನು ಆಧರಿಸಿ.
ನೀವು ಯಾವುದೇ ಮೊತ್ತವನ್ನು ಆರಿಸಿಕೊಂಡರೂ, ಅದು ನಿಮ್ಮ ಮನೆಯ ಬಜೆಟ್‌ನಲ್ಲಿ ರಿಕರಿಂಗ್ ಐಟಂ ಆಗುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಇದನ್ನು ನಿಮಗೆ ಮತ್ತು ನಿಮ್ಮ ಮಗುವಿಗೆ ವಿನ್-ಟು-ವಿನ್ ಸನ್ನಿವೇಶವನ್ನಾಗಿ ಮಾಡಿ.
ನಿಮ್ಮ ಮಕ್ಕಳು ಹಣಕಾಸಿನ ಬಗ್ಗೆ ಕಲಿಯುತ್ತಿರುವಾಗಲೇ ಹಣವೆನ್ನುವುದು ಎಲ್ಲಿಂದ ಬರುತ್ತದೆ ಎಂಬುದನ್ನು ಅರ್ಥಮಾಡಿಸಿ .
ಮಕ್ಕಳು, ಬೇರೆ ಎಲ್ಲಿಂದಲೋ ಹಣ ಬರುತ್ತದೆಂದು ತಿಳಿದುಕೊಳ್ಳುವ ಮೊದಲು, ಆ ಹಣ ಕೆಲಸದಿಂದ ಬರುತ್ತದೆ ಎಂದು ತಿಳಿದುಕೊಳ್ಳಬೇಕು.
ಮಕ್ಕಳಿಗೆ ತಾಯಿ - ತಂದೆಯ ನ್ಯಾಷನಲ್ ಬ್ಯಾಂಕ್‌ನಿಂದ ಹಣ ಬರುವುದಿಲ್ಲ ಎಂದು ಹೇಳಿ.
ಇದೊಂತರ ಮಕ್ಕಳು ನಂಬುವ ವಿಷಯವಾಗಿದೆ. ಏಕೆಂದರೆ ಅವರು ಏನನ್ನಾದರೂ ಖರೀದಿಸಲು ಬಯಸಿದಾಗ, ಅವರಿಗೆ ಭತ್ಯೆ ಅಥವಾ ಸ್ವಲ್ಪ ಹಣವನ್ನು ನಿಮ್ಮಿಂದ ಸಿಗುತ್ತದೆ.
ಅವರಿಗೆ ವಿವರಿಸಿ - “ನೀವು ಕೆಲಸ ಮಾಡಿದರೆ , ನಿಮಗೆ ಸಂಬಳ ಸಿಗುತ್ತದೆ. ನೀವು ಕೆಲಸ ಮಾಡದಿದ್ದರೆ, ನಿಮಗೆ ಸಂಬಳ ಸಿಗುವುದಿಲ್ಲ.
ಹಣದ ಬಗ್ಗೆ ಕಲಿಯಲು ಇದು ಅವರ ಮೊದಲ ಪಾಠವಾಗಲಿ.
ಹಣ ಎಲ್ಲಿಂದ ಬರುತ್ತದೆ ಎಂಬುದನ್ನು ನೀವು ಅವರಿಗೆ ಅರ್ಥಮಾಡಿಸಿದ ನಂತರ, ಹಣದ ಮೂಲ ತತ್ವಗಳ ಬಗ್ಗೆ ಅವರಿಗೆ ಕಲಿಸಿ - ಅವುಗಳೆಂದರೆ ಕೊಡುವುದು, ಉಳಿಸುವುದು ಮತ್ತು ಖರ್ಚು ಮಾಡುವುದು.
'ಕೊಡುವುದು' (Giving) ಮೂರು ತತ್ವಗಳಲ್ಲಿ ಅತ್ಯಂತ ಮೌಲ್ಯಯುತವಾದ ತತ್ವವಾಗಿದೆ. ಏಕೆಂದರೆ ಇದು ಚಿಕ್ಕ ವಯಸ್ಸಿನಲ್ಲೇ ಇತರರಿಗೆ ಸಹಾಯ ಮಾಡುವ ಮೌಲ್ಯವನ್ನು ಮಕ್ಕಳಿಗೆ ಕಲಿಸುತ್ತದೆ.
ಉಳಿತಾಯ ಮತ್ತು ಖರ್ಚಿನ ವಿಷಯಕ್ಕೆ ಬಂದರೆ, ನಿಮ್ಮ ಮಗುವಿಗೆ ನೀವು ನೀಡುವ ಹಣದಲ್ಲಿ ಸ್ವಲ್ಪ ಹಣವನ್ನು ಉಳಿತಾಯಕ್ಕಾಗಿ ಮತ್ತು ಸ್ವಲ್ಪ ಹಣವನ್ನು ಖರ್ಚು ಮಾಡುವುದಕ್ಕಾಗಿ ಮೀಸಲಿಡುವಂತೆ ಪ್ರೋತ್ಸಾಹಿಸಿ.
ಒಮ್ಮೆ ಖರ್ಚು ಮಾಡಿದ ನಂತರ ಹಣ ಕಳೆದು ಹೋಗುತ್ತದೆ ಎನ್ನುವುದನ್ನು ನಿಮ್ಮ ಮಕ್ಕಳಿಗೆ ಆಗಾಗ ನೆನಪಿಸಿ.
ಹೌದು, ನಿಮ್ಮ ಮಕ್ಕಳು ತಪ್ಪುಗಳನ್ನು ಮಾಡುತ್ತಾರೆ, ಆದರೆ ಅವರು ಅದನ್ನು ಮನೆಯಲ್ಲಿ, ನಿಮ್ಮ ರಕ್ಷಣೆಯಲ್ಲಿ ಮಾಡುವುದು ಉತ್ತಮ.
ನಿಮ್ಮ ಮಗುವಿಗೆ ಒಂದರ ಬದಲು ಮೂರು ಪಿಗ್ಗಿ ಬ್ಯಾಂಕ್‌ಗಳನ್ನು ನೀಡಿರಿ - ಒಂದನ್ನು ‘ಖರ್ಚು’, ಇನ್ನೊಂದನ್ನು ‘ಉಳಿತಾಯ ’ ಮತ್ತೊಂದನ್ನು ‘ಕೊಡು’ ಎಂದು ವರ್ಗಿಕರಿಸಿ. ಯಾವುದೇ ಸಮಯದಲ್ಲಿ ನಿಮ್ಮ ಮಗುವು ಭತ್ಯೆಯನ್ನಾಗಲಿ, ಕೆಲಸವನ್ನು ಮುಗಿಸಿದ್ದಕ್ಕಾಗಿ ಪಡೆದ ರಿವಾರ್ಡ್ ಆಗಲಿ ಅಥವಾ ಹುಟ್ಟುಹಬ್ಬದಲ್ಲಿ ಸ್ವೀಕರಿಸಿದ ಹಣವನ್ನಾಗಲಿ, ಅದನ್ನು ಮೂರು ಬ್ಯಾಂಕ್‌ಗಳ ನಡುವೆ ವಿಂಗಡಿಸಲು ನಿಮ್ಮ ಮಕ್ಕಳನ್ನು ಒತ್ತಾಯಿಸಿ.
ನೀವು ಅವರಿಗೆ ಪ್ರತಿ ಬಾರಿ ಹಣ ನೀಡಿದಾಗ, ಅವರು ಆ ಹಣವನ್ನು ಹೇಗೆ ಖರ್ಚು ಮಾಡಲು ಬಯಸುತ್ತಾರೆ ಎಂಬುದರ ಕುರಿತು ಅವರೊಂದಿಗೆ ಮಾತನಾಡಿ.
ನಿಮ್ಮ ಮಗುವಿನ ವಿಶ್ ಲಿಸ್ಟನ ಪಕ್ಕದಲ್ಲಿ ಪಿಗ್ಗಿ ಬ್ಯಾಂಕ್ ಅನ್ನು ಇರಿಸಿ. ಇದರಿಂದ ಅವರು ತಮ್ಮ ಖರ್ಚು ಮತ್ತು ಉಳಿತಾಯದ ಗುರಿಗಳ ಬಗ್ಗೆ ತಿಳಿಯುತ್ತಾರೆ.
ನಿಮ್ಮ ಮಕ್ಕಳು ತಮ್ಮ ಹಣವನ್ನು ಹೇಗೆ ವಿಭಜಿಸುತ್ತಾರೆ ಮತ್ತು ಆ ಹಣವನ್ನು ಅವರು ಏನು ಮಾಡುತ್ತಾರೆ ಎಂಬುದನ್ನು ಆಯ್ಕೆ ಮಾಡಲು ನಿಮ್ಮ ಮಗುವಿಗೆ ಅವಕಾಶ ನೀಡಿ. ಇದು ಶಿಕ್ಷಣದ ಕೀಲಿ ಕೈಯಾಗಿದೆ.
ಈ ಚಟುವಟಿಕೆಯು ಮಕ್ಕಳಿಗೆ ಕೇವಲ ಹಣಕಾಸಿನ ವಿಷಯಗಳಲ್ಲಿ ವಿಶ್ವಾಸವನ್ನು ತುಂಬುವುದಲ್ಲದೇ, ಅದರೊಂದಿಗೆ ಹಣದ ನಿರ್ವಹಣೆಯ ಕುರಿತು ತಮ್ಮ ಮಕ್ಕಳೊಂದಿಗೆ ಪ್ರಮುಖ ಸಂವಾದಗಳನ್ನು ನಡೆಸಲು ಪೋಷಕರಿಗೆ ಅವಕಾಶ ನೀಡುತ್ತದೆ.
ನಿಮ್ಮ ಮಕ್ಕಳನ್ನು ಶಾಪಿಂಗ್‌ಗೆ ಕರೆದುಕೊಂಡು ಹೋಗಿ ಮತ್ತು ನೀವು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಅವರೊಂದಿಗೆ ಚರ್ಚಿಸಿ.
ನೀವು ಎಷ್ಟು ಹಣವನ್ನು ಖರ್ಚು ಮಾಡಬೇಕು ಮತ್ತು ನೀವು ಅಂಗಡಿಗೆ ಬಂದಾಗ ನಿಮ್ಮ ಆದ್ಯತೆಗಳು ಏನಾಗಿರುತ್ತವೆ ಎನ್ನುವುದನ್ನು ನಿಮ್ಮ ಮಗುವಿಗೆ ತಿಳಿಸಿ.
ನೀವು ಕೆಲವು ವಸ್ತುಗಳಲ್ಲಿ ಒಂದು ವಸ್ತುವನ್ನು ಏಕೆ ಆರಿಸುತ್ತೀರಿ ಎಂಬುದನ್ನು ಮಕ್ಕಳಿಗೆ ತೋರಿಸಿ. ಹಾಗೂ ರಿಯಾಯಿತಿಗಳು ಮತ್ತು ಕೂಪನ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ವಿವರಿಸಿ. ಮಕ್ಕಳು ನಿಮ್ಮ ನಡವಳಿಕೆಯನ್ನು ಅನುಕರಿಸುತ್ತಾರೆ ಎಂಬುದನ್ನು ಸದಾ ನೆನಪಿನಲ್ಲಿಡಿ.
ನಿಮ್ಮ ಮಕ್ಕಳಿಗೆ ಸ್ವಂತಕ್ಕಾಗಿ ಖರ್ಚು ಮಾಡಲು ಸ್ವಲ್ಪ ಹಣವನ್ನು ನೀಡಿ. ಮಕ್ಕಳು ತಮಗೆ ಬೇಕಾದ ವಸ್ತುಗಳಿಗಾಗಿ ₹20 ಖರ್ಚು ಮಾಡಲು ಎಷ್ಟು ಉತ್ಸುಕರಾಗುತ್ತಾರೆ ಎಂಬುದನ್ನು ನೋಡಿ ನೀವು ಬೆಚ್ಚಿಬೀಳುತ್ತೀರಿ!
ಅವರು ಬಜೆಟ್‌ನ ಮಿತಿಯೊಳಗೆ ಖರ್ಚು ಮಾಡುವ ಗುಣವನ್ನು ಸಹ ಕಲಿಯುತ್ತಾರೆ.
ನಿಮ್ಮ ಮಗುವಿಗೆ ಪಾಠ ಕಲಿಸುವ ಅತ್ಯಂತ ಪರಿಣಾಮಕಾರಿ ವಿಧಾನವೆಂದರೆ, ನಿಮ್ಮ ಮಗುವು ಅದನ್ನು ಅರಿಯದೆಯೇ ಮಾಡುವುದು.
ಮೋನೋಪೋಲಿ ಅಥವಾ ಲೈಫ್‌ನಂತಹ ಹಣಕಾಸಿನ ಅಂಶಗಳನ್ನೊಳಗೊಂಡ ಆಟಗಳನ್ನು ಆಡಿ ಮತ್ತು ಆಟದ ಸಮಯದಲ್ಲಿ ನಿಮ್ಮ ಮಕ್ಕಳಿಗೆ ತಂತ್ರಗಾರಿಕೆ (Strategy) ಮಾಡಲು ಸಹಾಯ ಮಾಡಿ.
ಅವರಿಗೆ, ನೀವೆಲ್ಲರೂ ಕೇವಲ ಆಟವಾಡುತ್ತಿರುವಂತೆ ಕಾಣುತ್ತದೆ. ಆದರೆ ಇದು ನಿಮ್ಮ ಮಕ್ಕಳಿಗೆ ಬಜೆಟ್ ಮತ್ತು ಭವಿಷ್ಯದ ಯೋಜನೆಗಳ ಮಹತ್ವವನ್ನು ಕಲಿಸುತ್ತದೆ.
ಆಟಗಳು ಕಾರಣ ಮತ್ತು ಪರಿಣಾಮದ ಬಗ್ಗೆ ಕಲಿಸುತ್ತವೆ. ತಪ್ಪುಗಳನ್ನು ಹೇಗೆ ಮಾಡುವುದು ಮತ್ತು ಉತ್ತಮ ನಿರ್ಧಾರಗಳಿಗೆ ಬಹುಮಾನವನ್ನು ಹೇಗೆ ಪಡೆಯುವುದು ಎಂಬುದರ ಕುರಿತು ಆಟಗಳು ಮಕ್ಕಳಿಗೆ ಕಲಿಸುತ್ತವೆ.
ನಿಷೇಧಿತ ವಿಷಯವನ್ನು ಸಹ ಯಾವುದೇ ಬೆದರಿಕೆಯಿಲ್ಲದ ರೀತಿಯಲ್ಲಿ ಹೇಳಬಹುದು.
ರಜೆಯಲ್ಲಿ ಎಲ್ಲಿಗೆ ಹೋಗಬೇಕೆಂದು ಯೋಚಿಸುತ್ತಿರುವಿರಾ? ಹೊಸ ಉಪಕರಣಗಳನ್ನು ಖರೀದಿಸಲು ಪ್ಲ್ಯಾನ್ ಮಾಡುತ್ತಿದ್ದೀರಾ?ಅಂತಹ ಪ್ರಕ್ರಿಯೆಯಲ್ಲಿ ನಿಮ್ಮ ಮಕ್ಕಳನ್ನು ಸೇರಿಸಿಕೊಳ್ಳಿ ಮತ್ತು ರಿಸರ್ಚ್ ಪ್ರಕ್ರಿಯೆಯಲ್ಲಿ ಅವರನ್ನು ಸೇರಿಸಿಕೊಳ್ಳಿ.
ನೀವು ಮಕ್ಕಳಿಗೆ ನಿರ್ಧಾರವನ್ನು ತೆಗೆದುಕೊಳ್ಳುವ ಅಂಶಗಳನ್ನು ತೋರಿಸಬಹುದು ಮತ್ತು ಖರೀದಿ ಮಾಡುವ ಮೊದಲು ನಿಮ್ಮ ಆಯ್ಕೆಗಳನ್ನು ಸರಿದೂಗಿಸಲು ನಿಮಗೆ ಸಹಾಯ ಮಾಡುವಂತೆ ನಿಮ್ಮ ಮಕ್ಕಳನ್ನು ಕೇಳಬಹುದು.
ನಮ್ಮನ್ನು ನಂಬಿ, ಇಡೀ ಕುಟುಂಬದ ಒಳ್ಳೆಯ ನಿರ್ಧಾರಕ್ಕೆ ಕಾರಣವಾದ ರಿಸರ್ಚಿಗೆ ಕೊಡುಗೆ ನೀಡಲು ಮಕ್ಕಳು ಹೆಚ್ಚು ಸಂತೋಷಪಡುತ್ತಾರೆ.
ಹಣದ ಬಗೆಗಿನ ಈ ಚರ್ಚೆಗಳು ಅನೌಪಚಾರಿಕವಾಗಿರಬೇಕು ಮತ್ತು ಈ ಚರ್ಚೆಗಳು ಊಟದ ಮೇಜಿನ ಬಳಿಯೂ ನಡೆಯಬಹುದು.
ನಿಮ್ಮ ಮಕ್ಕಳು ಸಂಪೂರ್ಣವಾಗಿ ಭಾಗವಹಿಸಲು ತುಂಬಾ ಚಿಕ್ಕ ವಯಸ್ಸಿನವರಾಗಿದ್ದರೆ, ತೊಂದರೆಯಿಲ್ಲ. ಸಂಕೋಚ ಅಥವಾ ಒತ್ತಡವನ್ನು ಅನುಭವಿಸದೆ ಕುಟುಂಬವಾಗಿ ಹಣವನ್ನು ಚರ್ಚಿಸಲು ಹೆಚ್ಚು ಆರಾಮದಾಯಕವಾಗುವುದು ಕಲ್ಪನೆ.
ನೀವು ಮಾಡುವ ಖರ್ಚಿನ ಮೇಲೆ ನಿಗಾ ಇಡುವುದರ ಮಹತ್ವಕ್ಕೆ ಒತ್ತು ನೀಡಿ.
ನಿಮ್ಮ ಮಕ್ಕಳಿಗೆ ಅವರು ತಮ್ಮ ಹಣವನ್ನು ಎಲ್ಲಿ ಖರ್ಚು ಮಾಡುತ್ತಾರೆ ಎಂಬುದರ ಕುರಿತು ವಾರದ ದಾಖಲೆಗಳನ್ನು ಬರೆದಿಡಲು ಕಲಿಸಿ. ಮತ್ತು ತಿಂಗಳ ಕೊನೆಯಲ್ಲಿ ಅದನ್ನು ಪಟ್ಟಿ ಮಾಡಿ. ಇದು ನಿಸ್ಸಂದೇಹವಾಗಿ ಅವರ ಕಣ್ಣು ತೆರೆಸುತ್ತದೆ.
ವಯಸ್ಸಿನ ಹೊರತಾಗಿಯೂ, ನಿಮ್ಮ ಹಣ ಎಲ್ಲಿ ಖರ್ಚಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಉತ್ತಮ ಉಳಿತಾಯದ ಪ್ರಮುಖ ಅಂಶವಾಗಿದೆ.
ಅವರು ತಮ್ಮ ಹಣವನ್ನು ಹೇಗೆ ಖರ್ಚು ಮಾಡುತ್ತಾರೆ ಮತ್ತು ಅವರು ತಮ್ಮ ಅಭ್ಯಾಸಗಳನ್ನು ಬದಲಾಯಿಸಿದರೆ ಎಷ್ಟು ವೇಗವಾಗಿ ತಮ್ಮ ಉಳಿತಾಯದ ಗುರಿಯನ್ನು ಸಾಧಿಸಬಹುದು ಎಂಬುದನ್ನು ಪರಿಗಣಿಸಲು ಮಕ್ಕಳನ್ನು ಪ್ರೋತ್ಸಾಹಿಸಿ.
ಆದ್ಯತೆಗಳ ಪಟ್ಟಿಯನ್ನು ಮಾಡುವುದು ಅಥವಾ ಗುರಿಗಳನ್ನು ಸೆಟ್ ಮಾಡುವುದು ಆರ್ಥಿಕ ಸಾಕ್ಷರತೆಯ ಪ್ರಮುಖ ಅಂಶವಾಗಿದೆ.
ನಾವು ಬಯಸಿದ ಎಲ್ಲವನ್ನೂ ನಾವು ಒಂದೇ ಬಾರಿಗೆ ಪಡೆಯಲು ಸಾಧ್ಯವಿಲ್ಲ. ಆದರೆ ನಾವು ಮುಂದೆ ಸರಿಯಾಗಿ ಪ್ಲ್ಯಾನ್ ಮಾಡಿದರೆ, ಕಾಲಾನಂತರದಲ್ಲಿ ನಾವು ನಮ್ಮ ಗುರಿಗಳನ್ನು ತಲುಪಬಹುದು.
ಮಕ್ಕಳು ಕಲಿಯಲು ಇದೊಂದು ಅದ್ಭುತ ಪಾಠವಲ್ಲವೇ? ನಿಮ್ಮ ಮಕ್ಕಳೊಂದಿಗೆ ಕುಳಿತುಕೊಳ್ಳಿ ಮತ್ತು ಐದು ವಸ್ತುಗಳ ವಿಶ್ ಲಿಸ್ಟ್ ಮಾಡಲು ಅವರನ್ನು ಕೇಳಿ.
ನಂತರ ಅವುಗಳನ್ನು ಪ್ರಾಮುಖ್ಯತೆಯ ಆಧಾರದ ಮೇಲೆ ಗರಿಷ್ಟದಿಂದ ಕನಿಷ್ಠ ಪ್ರಾಮುಖ್ಯತೆಯ ವಸ್ತುಗಳಿಗೆ ರಾಂಕ್ ನೀಡಲು ಹೇಳಿ.
ನೀವು ಲಿಸ್ಟ್ ಅನ್ನು ಮಾಡಿದ ನಂತರ, ಅವರು ತಮ್ಮ ಬೇಕುಗಳನ್ನು ಹೇಗೆ ಪಡೆಯಬಹುದು ಎಂಬುದರ ಕುರಿತು ನಿಮ್ಮ ಮಗುವಿನೊಂದಿಗೆ ಮಾತನಾಡಿ.
ಆದ್ದರಿಂದ ನೋಡಿ, ನಿಮ್ಮ ಮಕ್ಕಳಿಗೆ ಹಣದ ಬಗ್ಗೆ ಕಲಿಸುವುದು ಅದು ಕಾಣುವಷ್ಟು ಕಷ್ಟವಲ್ಲ. ಇದಕ್ಕೆ ಬೇಕಾಗಿರುವುದು ಸ್ವಲ್ಪ ಮುಂಜಾಗ್ರತೆ, ತಾಳ್ಮೆ ಮತ್ತು ಕಲ್ಪನೆ.
ನಿಮ್ಮ ಮಕ್ಕಳೊಂದಿಗೆ ಸರಳವಾಗಿ ಹಣದ ಬಗ್ಗೆ ಚರ್ಚಿಸುವುದರಿಂದ, ಪ್ರಶ್ನೆಗಳನ್ನು ಕೇಳಲು ಮತ್ತು ಜೀವನ ಪರ್ಯಂತ ಕೌಶಲ್ಯಗಳನ್ನು ಪಡೆದುಕೊಳ್ಳಲು ಅವರನ್ನು ಪ್ರೋತ್ಸಾಹಿಸಬಹುದು.
ಹಣಕಾಸಿನ ಶಿಕ್ಷಣದ ಕಲ್ಪನೆಯು ಮಕ್ಕಳಿಗೆ ಎಂದೂ ಬೇಸರ ಮೂಡಿಸುವುದಿಲ್ಲ ಎನ್ನುವುದನ್ನು ಖಾತರಿಪಡಿಸಲು, ಹಣಕಾಸಿನ ರಸಪ್ರಶ್ನೆಗಳು ಮತ್ತು ಪಂದ್ಯಾವಳಿಗಳಲ್ಲಿ ಭಾಗವಹಿಸುವಂತೆ ನಿಮ್ಮ ಮಕ್ಕಳನ್ನು ಪ್ರೋತ್ಸಾಹಿಸಬಹುದು!
ನಿಮ್ಮ ವೈಯಕ್ತಿಕ ಹಣಕಾಸನ್ನು ಹೇಗೆ ನಿರ್ವಹಿಸುವುದು ಮತ್ತು ನಿಮ್ಮ ಮಾನಿಟರಿ ವ್ಯವಹಾರಗಳನ್ನು ಹೆಚ್ಚಿಸುವ ಕುರಿತು ನಾವು ನಿಮಗೆ ಸ್ಮಾರ್ಟ್ ಫೈನಾನ್ಸಿಯಲ್ ಮ್ಯಾನೇಜ್ಮೆಂಟ್ ಟಿಪ್ಸ್ ಅನ್ನು ನೀಡಿದ್ದೇವೆ.