Playstore Icon
Download Jar App
Savings

ಸ್ಥಿರತೆಯ ಶಕ್ತಿ! ನೀವು ಹೆಚ್ಚು ಖರ್ಚು ಮಾಡಿದಷ್ಟು, ನೀವು ಹೆಚ್ಚು ಉಳಿಸುತ್ತೀರಿ - ಜಾರ್ ಆ್ಯಪ್‌

December 30, 2022

ನೀವು ಜಾರ್ ಆ್ಯಪ್‌ ಅನ್ನು ಬಳಸುವ ಮೂಲಕ, ಸ್ವಯಂ-ಹೂಡಿಕೆ ಫೀಚರ್‌ನೊಂದಿಗೆ ನಿಮ್ಮ ಸ್ಥಿರ ಉಳಿತಾಯದ ಪ್ರಯಾಣವನ್ನು ಪ್ರಾರಂಭಿಸಬಹುದು. ಈಗ, ನೀವು ಹೆಚ್ಚು ಖರ್ಚು ಮಾಡಿದಷ್ಟು, ನೀವು ಹೆಚ್ಚು ಉಳಿಸಬಹುದು.

ನಾವೆಲ್ಲರೂ ಇದನ್ನು ಕೇಳಿದ್ದೇವೆ. ಹಾಗಾದರೆ ಬಹಳಷ್ಟು ಜನರು ಇನ್ನೂ ಸ್ಥಿರವಾಗಿರಲು ಏಕೆ ಕಷ್ಟಪಡುತ್ತಾರೆ? ನೀವು ಎಂದಾದರೂ ಇದರ ಬಗ್ಗೆ ಯೋಚಿಸಿದ್ದೀರಾ?

ಕಾರಣ ಸರಳವಾಗಿದೆ - ಸ್ಥಿರತೆ ವಿಷಯದ ಕಲ್ಪನೆಯು ನೋಡಲು ಸರಳ ಮತ್ತು ಆಕರ್ಷಕವಾಗಿ ಕಾಣುತ್ತದೆ. ಆದರೆ ನೀವದನ್ನು ನಿಮ್ಮ ದೈನಂದಿನ ಜೀವನದಲ್ಲಿ ಜಾರಿಗೆ ತರಲು ಪ್ರಯತ್ನಿಸಿದಾಗ, ಇದು ತಾಳ್ಮೆಯ ಪರೀಕ್ಷೆ ಎನ್ನುವುದನ್ನು ಸಾಬೀತುಪಡಿಸುತ್ತದೆ.

ಸ್ಥಿರತೆಯು ಹವ್ಯಾಸಗಳನ್ನು ಸೃಷ್ಟಿಸುತ್ತದೆ. ಈ ಹವ್ಯಾಸಗಳು ನಮ್ಮ ದಿನನಿತ್ಯದ ಕ್ರಿಯೆಗಳನ್ನು ರೂಪಿಸುತ್ತವೆ. ಆದರೆ ಹೊಸ ಹವ್ಯಾಸಗಳನ್ನು ನಿರ್ವಹಿಸುವುದು ಕಷ್ಟ. ಇದೊಂತರ ಜಿಮ್‌ಗೆ ಹೋಗುವ ಅಥವಾ ತೂಕ ಇಳಿಸಿಕೊಳ್ಳುವ ಹೊಸ ವರ್ಷದ ನಿರ್ಣಯದಂತೆ!

ನಮ್ಮ ಉತ್ಸಾಹದಿಂದ ಬಲೂನ್ ಉಬ್ಬಿಕೊಳ್ಳುವ ಮೊದಲು ನಾವು ಸ್ವಲ್ಪ ಸಮಯದವರೆಗೆ ಹೋಗುತ್ತಲೇ ಇರಬೇಕು. ಕೆಲವೊಮ್ಮೆ ನಾವು ನಮ್ಮ ಹಳೆಯ ಹವ್ಯಾಸಗಳಿಗೆ ಹಿಂತಿರುಗುವುದನ್ನು  ಬಿಟ್ಟುಬಿಡುತ್ತೇವೆ . ಏಕೆಂದರೆ ನಮ್ಮ ಹಳೆಯ ಹವ್ಯಾಸಗಳು ನಮ್ಮ ದೈನಂದಿನ ದಿನಚರಿಯಲ್ಲಿ ತುಂಬಾ ಆಳವಾಗಿ ಹುದುಗಿವೆ.

"ನಾನು ಚಿಕ್ಕದಾದರೂ ಸ್ಥಿರವಾದ ಹವ್ಯಾಸಗಳನ್ನು ಬೆಳೆಸಿಕೊಂಡಿದ್ದೇನೆ. ಅಂತಿಮವಾಗಿ ನಾನದನ್ನು ಪ್ರಾರಂಭಿಸಿದ ಮೇಲೆ, ಊಹಿಸಲಾಗದ ಫಲಿತಾಂಶಗಳಿಗೆ ಅದು ಕಾರಣವಾಯಿತು." - ಜೇಮ್ಸ್ ಕ್ಲಿಯರ್, ಹೆಚ್ಚು ಮಾರಾಟವಾದ ಪುಸ್ತಕ 'ಅಟಾಮಿಕ್ ಹ್ಯಾಬಿಟ್ಸ್' ನ ಲೇಖಕ ಹೇಳಿದ ಮಾತಿದು.

ಅವರು ಹೇಳಿದ್ದು ಸರಿ. ಸ್ಥಿರತೆ ಎಂದರೆ ನೀವು ಎಲ್ಲಿದ್ದೀರಿ ಮತ್ತು ನೀವು ಎಲ್ಲಿ ಇರಬೇಕೆಂದು ಬಯಸುತ್ತೀರಿ ಎಂಬುದರ ನಡುವಿನ ವ್ಯತ್ಯಾಸ. (ನಿಜವಾಗಿಯೂ)

ಹಣವನ್ನು ಉಳಿಸುವ ವಿಷಯಕ್ಕೆ ಬಂದಾಗಲೂ ಸಹ ಇದು ಅನ್ವಯಿಸುತ್ತದೆ.

ನೀವು ಎಷ್ಟು ಸಂಪಾದಿಸುತ್ತೀರಿ ಎಂಬುದು ಮುಖ್ಯವಲ್ಲ, ಆದರೆ ಹಣವನ್ನು ಉಳಿಸುವುದು ನಿಮ್ಮ ಮೊದಲ ಆದ್ಯತೆಯಾಗಿರಬೇಕು. ಯಾವಾಗಲೂ ಕೂಡ. ನೀವು ಸೀಮಿತ ಬಜೆಟ್‌ನೊಂದಿಗೆ ಕೆಲಸ ಮಾಡುವಾಗ ಇದು ಹೆಚ್ಚಿರುತ್ತದೆ.

ಆದರೆ ಅನೇಕರಿಗೆ ಇದು ಹೆದರಿಸುವ ಕೆಲಸದಂತೆ ತೋರುತ್ತದೆ,  ವಿಶೇಷವಾಗಿ ನೀವದನ್ನು ಪದೇ ಪದೇ ಮಾಡಬೇಕಾದಾಗ ಹೀಗನ್ನಿಸಬಹುದು. ಜನರಿಗೆ ಉಳಿತಾಯ ಮಾಡುವುದು ಸಾಧ್ಯವಾಗುತ್ತಿಲ್ಲ.

ವಾಸ್ತವದಲ್ಲಿ , ಅವರು ವಿರುದ್ಧವಾದುದನ್ನೇ ಮಾಡುತ್ತಾರೆ. ಅವರು ಗಳಿಸುವುದಕ್ಕಿಂತ ಹೆಚ್ಚು ಖರ್ಚು ಮಾಡುತ್ತಾರೆ. ಇದು ತಿಂಗಳ ಕೊನೆಯಲ್ಲಿ ನಿಮ್ಮ ಜೇಬನ್ನು ಖಾಲಿಯಾಗುವಂತೆ ಮಾಡುತ್ತದೆ. ಮತ್ತು ನೀವು ಪೇ-ಚೆಕ್‌ನಿಂದ ಪೇ-ಚೆಕ್‌ನಲ್ಲಿ ವಾಸಿಸುವ ಈ ಲೂಪ್‌ನಲ್ಲಿ, ಶಾಶ್ವತವಾಗಿ ಸಿಲುಕಿಕೊಳುತ್ತೀರಿ.

ಈ ನಿಯಮವನ್ನು ಮುರಿಯಿರಿ. ಇಂದೇ ಉಳಿಸಲು ಪ್ರಾರಂಭಿಸಿ. ನೀವು ಎಲ್ಲೋ ಪ್ರಾರಂಭಿಸಿದ್ದೀರಿ, ಅಲ್ಲವೇ?

ಆದರೆ ಇದು ಸಾಕಾಗುವುದಿಲ್ಲವೆಂದು ನಿಮಗೆ ತಿಳಿದಿದೆ. ನೀವು ಸಂದರ್ಭಾನುಸಾರ ಉಳಿಸಬಹುದು, ಆದರೆ ನಿಯಮಿತವಾಗಿ ಈ ಹವ್ಯಾಸವನ್ನು ನಿರ್ವಹಿಸುವುದು ದೊಡ್ಡ ಸವಾಲಾಗಿರಬಹುದು. ಉಳಿತಾಯದ ನಿಮ್ಮ ಪ್ರಯತ್ನಗಳಲ್ಲಿ ನೀವು ಸ್ಥಿರವಾಗಿರಬೇಕು. ಮತ್ತೆ, ಅದೇ ನಿಮ್ಮ ಯಶಸ್ಸಿನ ಕೀಲಿಕೈಯಾಗಿದೆ.

ಪ್ರತಿ ತಿಂಗಳು ಅಲ್ಲದಿದ್ದರೆ, ಪ್ರತಿದಿನ ₹10 ಉಳಿತಾಯದಂತಹ ಚಿಕ್ಕ ಮೊತ್ತದೊಂದಿಗೆ ಪ್ರಾರಂಭಿಸಿ. ಸರಳವಾಗಿ ಉಳಿಸಿ. ಇದು ಸಣ್ಣ ಪ್ರಮಾಣದಲ್ಲಿ ಕಾಣಿಸಬಹುದು, ಆದರೆ ನೀವು ಸ್ಥಿರವಾಗಿದ್ದರೆ, ಈ ಮೊತ್ತ ಬಹಳ ದೂರದವರೆಗೆ ಸಾಗುತ್ತದೆ.

ಇಲ್ಲಿ ಬೇಗ ಪ್ರಾರಂಭಿಸುವುದು ನಿಜವಾಗಿಯೂ ಮುಖ್ಯವಾಗುತ್ತದೆ. ಆದಷ್ಟು ಬೇಗ ಶುರು ಮಾಡಿ. ಇದು ನಿಮಗೆ ಕೆಲವು ಹೆಚ್ಚುವರಿ ವರ್ಷಗಳ ಕಾಂಪೌಂಡಿಂಗ್ ಅನ್ನು ಒದಗಿಸುತ್ತದೆ - ಮತ್ತು ದೊಡ್ಡ ಉಳಿತಾಯದ ಮೊತ್ತ, ಹೆಚ್ಚು ಕಾಂಪೌಂಡಿಂಗ್, ಇವುಗಳು ದೊಡ್ಡ ವ್ಯತ್ಯಾಸವನ್ನು ಮಾಡುತ್ತವೆ. ಕಾಲಾನಂತರದಲ್ಲಿ ನಿವೃತ್ತಿ ಖಾತೆಯನ್ನು ರಚಿಸಲು, ಇದು ನಿಮಗೆ ಸಹಾಯ ಮಾಡಬಹುದು. ಇದು ನಿಮ್ಮ ನಿವೃತ್ತಿ ಫಂಡ್‌ನ ಒಂದು ಪ್ರಮುಖ ಭಾಗವಾಗಬಹುದು.

ಪ್ರಾರಂಭ ಮಾಡಲು ನೀವು ಏನು ಮಾಡಬಹುದು ಎಂಬುದು ಇಲ್ಲಿದೆ:

ನೀವು ಏನನ್ನು ಉಳಿಸಬೇಕು ಎಂಬುದನ್ನು ನಿರ್ಧರಿಸಿ

ನೀವು ನಿಜವಾಗಿಯೂ ಆರ್ಥಿಕವಾಗಿ ಯಶಸ್ವಿಯಾಗಲು ಬಯಸಿದರೆ ನೀವು ಪ್ರತಿ ತಿಂಗಳು ಮೀಸಲಿಡಬೇಕಾದ ಹಣದ ಮೊತ್ತಕ್ಕೆ ಇರುವ ನಿಯಮವೇನು? ನಿಮ್ಮ ಆದಾಯದ ಶೇಕಡಾ10 ರಿಂದ - 15 ಭಾಗ.

ಸೈಡ್ ಬಿಸಿನೆಸ್ ಮತ್ತು ಫ್ರೀಲ್ಯಾನ್ಸ್ ಪ್ರಾಜೆಕ್ಟ್‌ಗಳಂತಹ ಎಲ್ಲಾ ಆದಾಯದ ಮೂಲಗಳಿಂದ ಪೇ-ಚೆಕ್‌ಗಳನ್ನು ಕೂಡಿಸಿ.

ಇದು ತುಂಬಾ ಮುಖ್ಯವಾಗಿದೆ - ತುರ್ತು ಪರಿಸ್ಥಿತಿ, ನಿವೃತ್ತಿ ಅಥವಾ ನಿಮ್ಮ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ಹಣಕಾಸಿನ ಸುರಕ್ಷತಾ ಜಾಲವನ್ನು ರಚಿಸುವುದು.

ನೀವು ಎಷ್ಟು ಹಣವನ್ನು ಉಳಿಸಬಹುದು ಎಂಬುದನ್ನು ಲೆಕ್ಕಾಚಾರ ಮಾಡಿ )

ನೀವು ಆರಂಭದಲ್ಲಿ ಉಳಿತಾಯದ ತಂತ್ರದೊಂದಿಗೆ ಪ್ರಾರಂಭಿಸಿದಾಗ, ನಿಮ್ಮ ಸಂಬಳದ ಶೇಕಡಾ 10 ರ ಪೂರ್ತಿ ಉದ್ದೇಶವನ್ನು ಪೂರೈಸುವುದು ಕಷ್ಟಕರವಾಗಿರುತ್ತದೆ. ಇದರರ್ಥ ನೀವು ಸಂಪೂರ್ಣವಾಗಿ ತ್ಯಜಿಸಬೇಕು ಎಂಬುದಲ್ಲ.

ಬದಲಾಗಿ, ನೀವು ನಿಭಾಯಿಸಬಲ್ಲ ಮೊತ್ತದೊಂದಿಗೆ ಪ್ರಾರಂಭಿಸಿ. ಮತ್ತು ನಿಮ್ಮ ಬಜೆಟ್ ಅನ್ನು ನೀವು ಕ್ರಮವಾಗಿ ಪಡೆದುಕೊಂಡಂತೆ ನಿಮ್ಮ ಗುರಿಯನ್ನು ತಲುಪಲು ನಿಮ್ಮ ಕೆಲಸವನ್ನು ಮಾಡಿ. ಮತ್ತು  ಹಣದ ಉಳಿತಾಯದೊಂದಿಗೆ ಹೆಚ್ಚು ಆರಾಮವಾಗಿರಿ.  

ಪ್ರತಿ ತಿಂಗಳು ನಿಮ್ಮ ಎಲ್ಲಾ ಬಿಲ್‌ಗಳು ಮತ್ತು ಇತರ ಅಗತ್ಯ ವೆಚ್ಚಗಳನ್ನು ಪಾವತಿಸಿದ ನಂತರ, ನಿಮ್ಮ ಬಜೆಟ್‌ನಲ್ಲಿ ನೀವು ಸಾಮಾನ್ಯವಾಗಿ ಎಷ್ಟು ಹಣವನ್ನು ಉಳಿಸಿಕೊಳ್ಳುತ್ತೀರಿ ಎಂಬುದನ್ನು ಗಮನಿಸಬೇಕು. ಇದಕ್ಕಾಗಿ ನೀವು ನಿಮ್ಮ ಬಜೆಟ್ ಅನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡುವ ಮೂಲಕ ಪ್ರಾರಂಭಿಸಿ.

ನೀವು ಉಳಿತಾಯ ಮಾಡುತ್ತೀರುವಿರಿ ಎಂದು ಖಚಿತಪಡಿಸಿಕೊಳ್ಳಿ

ನೀವು ಎಷ್ಟು ಉಳಿಸಬೇಕು ಎಂದು ಈಗ ನಿಮಗೆ ತಿಳಿದಿದೆ. ಮುಂದಿನ ಹಂತ ಏನೆಂದರೆ ಈ ಉಳಿತಾಯ ಪ್ರತಿ ತಿಂಗಳು ನಡೆಯುತ್ತದೆ ಎಂದು ಖಚಿತಪಡಿಸಿಕೊಳ್ಳುವುದು. ಮತ್ತೇಕೆ ತಡ, ನಿಮ್ಮ ಹಣಕಾಸಿನ ಗೋಲ್‌ಗಳನ್ನು ಸೆಟ್ ಮಾಡಿ.

ಇತರ ಯಾವುದೇ ಹಣಕಾಸಿನ ಬದ್ಧತೆಯಂತೆ, ನಿಮ್ಮ ಉಳಿತಾಯವನ್ನು ಸಹ ಗಂಭೀರವಾಗಿ ಪರಿಗಣಿಸಿ.ಈ ಉಳಿತಾಯ ಎನ್ನುವುದು ನಿಮ್ಮ ಮೊಬೈಲ್ ಕಂಪನಿಯವರಿಗೆ, ಯುಟಿಲಿಟಿ ಕಂಪನಿಗೆ ಮತ್ತು ಸಾಲ ನೀಡಿದವರಿಗೆ ನೀವು ಪಾವತಿಸಬೇಕಾದಂತೆಯೇ, ನಿಮಗೆ ನೀವೇ ನೀಡಬೇಕಾದ ಹಣವಾಗಿದೆ. 

ಉಳಿತಾಯವು ಪ್ರತಿ ತಿಂಗಳ ಬದ್ಧತೆಯಾಗಿದ್ದು, ನೀವದನ್ನು ಪೂರೈಸಲೇಬೇಕು ಎಂಬ ಮನೋಭಾವವನ್ನು ಹೊಂದಿದರೆ, ಸ್ಥಿರವಾಗಿ ಉಳಿತಾಯ ಮಾಡುವುದು ನಿಮಗೆ ಖಂಡಿತ ಸುಲಭವಾಗುತ್ತದೆ.

ನಿಮ್ಮ ಉಳಿತಾಯವನ್ನು ಸ್ವಯಂಚಾಲಿತಗೊಳಿಸಿ

ಸ್ಥಿರವಾಗಿರುವುದು ಮತ್ತು ಉಳಿತಾಯದ ಹವ್ಯಾಸಗಳನ್ನು ರೂಢಿಸಿಕೊಳ್ಳಲು ನೀವು ಕಷ್ಟಪಡುತ್ತಿದ್ದರೆ, ಆ ಉಳಿತಾಯದ ಪ್ರಕ್ರಿಯೆಯನ್ನು ಸ್ವಯಂಚಾಲಿತಗೊಳಿಸಿ. ಹೌದು. ನಿಮ್ಮ ಉಳಿತಾಯದ ಹವ್ಯಾಸವನ್ನು ರೂಡಿಸಿಕೊಳ್ಳುವ ಸರಳ ವಿಧಾನಗಳಲ್ಲಿ, ಉಳಿತಾಯವನ್ನು ಸ್ವಯಂಚಾಲಿತಗೊಳಿಸುವುದು ಸಹ ಒಂದಾಗಿದೆ.

ಜಾರ್ ಆ್ಯಪ್‌ನಂತಹ ಸ್ವಯಂಚಾಲಿತ ವ್ಯವಸ್ಥೆಯನ್ನು ಸರಳವಾಗಿ ನಿರ್ಮಿಸಿ ಮತ್ತು ನಿಮ್ಮ ಹಣವು ನಿಮ್ಮ ಸುತ್ತಲೂ ಓಡಾಡುವಂತೆ ನೋಡಿಕೊಳ್ಳಿ. ಇದು ನಿಮ್ಮ ಜೀವನಶೈಲಿಯನ್ನು ನಿಮ್ಮ 'ಟೇಕ್ ಹೋಮ್' ವೇತನಕ್ಕೆ ಸರಿಹೊಂದಿಸಲು  ನಿಮಗೆ ಸಹಾಯ ಮಾಡುತ್ತದೆ.

ಆದರೆ ಬ್ಯಾಂಕ್‌ನಲ್ಲಿರುವ ಹಣ ನಿಷ್ಪ್ರಯೋಜಕವಾಗಿದೆ. ಇದು ಬೆಳೆಯುವುದಿಲ್ಲ. ಹಣದುಬ್ಬರದಿಂದಾಗಿ ಅದರ ಮೌಲ್ಯವು ಕಾಲಾನಂತರದಲ್ಲಿ ಕಡಿಮೆಯಾಗುತ್ತದೆ. (ಇದರ ಬಗ್ಗೆ ಇಲ್ಲಿ ಇನ್ನಷ್ಟು ಆಳವಾಗಿ ಓದಿ.)

ಪರಿಹಾರವೇನು ? ಹೂಡಿಕೆ ಮಾಡಿ.

ಇದು ನಿಮ್ಮ 'ಕಪ್ ಆಫ್ ಟೀ' ಅಲ್ಲ ಎಂದು ಭಾವಿಸಬೇಡಿ. ಪ್ರತಿಯೊಬ್ಬರೂ ಸಹ ತಮ್ಮ ಹಣವನ್ನು ಹೂಡಿಕೆ ಮಾಡಬಹುದು ಮತ್ತು ಮಾಡಬೇಕು. ಹೂಡಿಕೆಯ ಬಗ್ಗೆ ನಿಮಗೆ ಯಾವುದೇ ಸುಳಿವು ಇಲ್ಲದಿದ್ದರೆ ಚಿಂತಿಸಬೇಡಿ.

ನಾವೆಲ್ಲರೂ ಎಲ್ಲಿಂದಲೋ ಪ್ರಾರಂಭಿಸುತ್ತೇವೆ. ನಿಮ್ಮ ರಿಸರ್ಚ್ ಅನ್ನು ಮಾಡಿ ಮತ್ತು ಬಹಳಷ್ಟು ಓದಿ. (ಹೆಚ್ಚಿನ ಸಲಹೆಗಳನ್ನು ಇಲ್ಲಿ ಪಡೆಯಿರಿ) ಡಿಜಿಟಲ್ ಗೋಲ್ಡ್‌ನಂತಹ ಸುರಕ್ಷಿತ ಅಸ್ಸೆಟ್‌ನೊಂದಿಗೆ ಪ್ರಾರಂಭಿಸಿ.

ನಿಮಗೆ ಸಹಾಯ ಮಾಡಲು ಜಾರ್ ಆ್ಯಪ್‌ ಮುಂದೆ ಬರುವ ಭಾಗ ಇಲ್ಲಿದೆ.

ಜಾರ್ ಎಂದರೇನು?

ಜಾರ್ ಎನ್ನುವುದು ದೈನಂದಿನ ಚಿನ್ನದ ಉಳಿತಾಯದ ಆ್ಯಪ್‌ ಆಗಿದ್ದು ಅದು ನಿಮಗೆ ಹಣವನ್ನು ಉಳಿತಾಯ ಮಾಡಲು ಅನುಮತಿಸುತ್ತದೆ. ಇದು ನಿಮ್ಮ ಆನ್‌ಲೈನ್ ವಹಿವಾಟಿನ ಚಿಕ್ಕ ಬದಲಾವಣೆಯನ್ನು, ಸ್ವಯಂಚಾಲಿತವಾಗಿ ಡಿಜಿಟಲ್ ಗೋಲ್ಡ್‌ನಲ್ಲಿ ಹೂಡಿಕೆ ಮಾಡುತ್ತದೆ.

ಉಳಿತಾಯ ಮಾಡಲು ಮತ್ತು ಹೂಡಿಕೆ ಮಾಡಲು ಸರಳ ಮತ್ತು ವೇಗವಾದ ಮಾರ್ಗವೇ ಜಾರ್ ಆ್ಯಪ್‌.

ಜಾರ್‌ನೊಂದಿಗೆ, ನೀವು 24K ಚಿನ್ನದೊಂದಿಗೆ ನಿಮ್ಮ ಸಂಪತ್ತನ್ನು ಅಭಿವೃದ್ಧಿಪಡಿಸಬಹುದು (ನಮ್ಮನ್ನು ನಂಬುವುದಿಲ್ಲವೇ? ಸರಿ, ನೀವೇ ಪರಿಶೀಲಿಸಿ). ಉತ್ತಮ ಚಿನ್ನದ ದರದಲ್ಲಿ ಡಿಜಿಟಲ್ ಗೋಲ್ಡ್ ಅನ್ನು ಖರೀದಿಸಿ ಮತ್ತು ಮಾರಾಟ ಮಾಡಿ. ಇದು ಕೇವಲ ₹1 ರಿಂದ ಪ್ರಾರಂಭವಾಗುತ್ತದೆ.

ಡಿಜಿಟಲ್ ಗೋಲ್ಡ್‌ನಲ್ಲಿ ಸಣ್ಣ ಮೊತ್ತವನ್ನು ಹೂಡಿಕೆ ಮಾಡಿ, ಸ್ವಯಂ ಹೂಡಿಕೆ ಮಾಡುವ ಮೂಲಕ ಉಳಿತಾಯದ ಹವ್ಯಾಸವನ್ನು ಬೆಳೆಸಿ. ನೀವು ಬಯಸಿದಾಗ ನಿಮ್ಮ ಇ-ವ್ಯಾಲೆಟ್‌ಗಳಿಗೆ ಅದನ್ನು ರಿಡೀಮ್ ಮಾಡಬಹುದು ಅಥವಾ ವಿದ್ ಡ್ರಾ ಮಾಡಿಕೊಳ್ಳಬಹುದು.

ನೀವು ಜೊಮಾಟೊದಿಂದ ರೈಸ್‌ಬೌಲ್‌ನಂತಹ ಏನನ್ನಾದರೂ ಆರ್ಡರ್ ಮಾಡುತ್ತೀರಿ ಎಂದು ಭಾವಿಸೋಣ. ಇದು ನಿಮಗೆ ₹ 324 ಬೆಲೆಯದ್ದಾಗಿದೆ. ಮತ್ತು ನೀವದನ್ನು PayTM ಮೂಲಕ ಪಾವತಿ ಮಾಡುತ್ತೀರಿ.

ಈಗ ಜಾರ್ ಆ ಮೊತ್ತವನ್ನು ಹತ್ತಿರದ ₹10 ಕ್ಕೆ ಬದಲಾಯಿಸುತ್ತದೆ. ಅಂದರೆ 330 ರೂಗಳನ್ನಾಗಿಸುತ್ತದೆ. ಮತ್ತು ವ್ಯತ್ಯಾಸದ (330-324)  ಮೊತ್ತ ₹6 ಅನ್ನು, ನೇರವಾಗಿ ಡಿಜಿಟಲ್ ಗೋಲ್ಡ್‌ನಲ್ಲಿ ಹೂಡಿಕೆ ಮಾಡುತ್ತದೆ. ಇದು ಕೂಲ್ ಐಡಿಯಾ ಅಲ್ಲವೇ? ಇದು ನಿಮಗೆ ಸಣ್ಣ ಮೊತ್ತದಂತೆ ತೋರಬಹುದು, ಆದರೆ ಇದು ದೀರ್ಘಾವಧಿಯಲ್ಲಿ ಉಳಿಯುತ್ತದೆ.

ನೀವು ಹೆಚ್ಚು ಖರ್ಚು ಮಾಡಿದಷ್ಟು , ನೀವು ಹೆಚ್ಚು ಉಳಿಸುತ್ತೀರಿ. ನಿಮ್ಮ ಜೇಬನ್ನು ಎಲ್ಲಿಯೂ ಸುಡದೆ.

ನಮ್ಮ ಪ್ರೀಮಿಯಂ ಡಿಜಿಟಲ್ ಗೋಲ್ಡ್‌ನ ಹೂಡಿಕೆ ಯೋಜನೆಗಳು ಮತ್ತು ಕೊಡುಗೆಗಳೊಂದಿಗೆ (ಅತ್ಯುತ್ತಮ ಚಿನ್ನದ ದರಗಳಲ್ಲಿ) ನೀವು ಜಾರ್‌ನಲ್ಲಿ ಮೈಕ್ರೋ-ಸೇವಿಂಗ್ಸ್ ಮಾಡಬಹುದು. 100% ಸುರಕ್ಷಿತ ಮತ್ತು ಲಿಕ್ವಿಡ್ ಕೊಡುಗೆಗಳು, ಪ್ರತಿ ವಹಿವಾಟಿನ ಜೊತೆಗೆ 24 ಕ್ಯಾರಟ್ ಚಿನ್ನವನ್ನು ಸ್ವಯಂಚಾಲಿತವಾಗಿ ಖರೀದಿಸುವಂತೆ ನಿಮ್ಮನ್ನು ಅನುಮತಿಸುತ್ತವೆ.

ಜಾರ್‌ನೊಂದಿಗೆ, ನಿಮ್ಮ ಹಣಕಾಸಿನ ಸಂಪೂರ್ಣ ನಿಯಂತ್ರಣವನ್ನು ನೀವು ಹೊಂದಿರುತ್ತೀರಿ. ಅಂದರೆ ನೀವು ಮಧ್ಯದಲ್ಲಿ ನಿಲ್ಲಿಸಬಹುದು, ಮರುಪ್ರಾರಂಭಿಸಬಹುದು ಅಥವಾ ಸುಲಭವಾಗಿ ಒಂದು ಬಟನ್‌ನ ಕ್ಲಿಕ್‌ನಲ್ಲಿ  ಹಣ ಅಥವಾ ಚಿನ್ನವನ್ನು ವಿದ್ ಡ್ರಾ ಮಾಡಿಕೊಳ್ಳಬಹುದು.

ನೀವು ಸ್ವಯಂ ಪಾವತಿಯನ್ನು ಸೆಟ್ ಮಾಡಬಹುದು ಅಥವಾ ನೀವೇ ಸ್ವತಃ ಕೈಯಿಂದ ಹೂಡಿಕೆ ಮಾಡಲು ಆಯ್ಕೆ ಮಾಡಬಹುದು. ಆದರೆ ಇಷ್ಟೇ ಅಲ್ಲ, ಆಟಗಳನ್ನು ಆಡಲು ಮತ್ತು ನಿಮ್ಮ ಉಳಿತಾಯವನ್ನು ದ್ವಿಗುಣಗೊಳಿಸಲು ನೀವು ಅವಕಾಶವನ್ನು ಪಡೆಯುತ್ತೀರಿ.

ವ್ಹೀಲ್ ಸ್ಪಿನ್ ಮಾಡಿ - ಜಾರ್‌ನಲ್ಲಿನ ಪ್ರತಿಯೊಂದು ವಹಿವಾಟಿನ ಮೇಲೂ ಹಣವನ್ನು ಉಳಿಸಿ. ಪ್ರತಿ ವಹಿವಾಟು ಸಹ, ಜಾರ್ ಆ್ಯಪ್‌ನ ಸೇವಿಂಗ್ಸ್ ವ್ಹೀಲ್‌ನಲ್ಲಿ, ಸ್ಪಿನ್ ಮಾಡುವ ಅವಕಾಶವನ್ನು ಗೆಲ್ಲುತ್ತದೆ. ಜಾರ್‌ನಲ್ಲಿ ನಿಮ್ಮ ಉಳಿತಾಯವನ್ನು ದ್ವಿಗುಣಗೊಳಿಸುವ ಅವಕಾಶವನ್ನು ಪಡೆಯಿರಿ ಅಥವಾ ಆಟಗಳನ್ನು ಆಡುವ ಮೂಲಕ ಅತ್ಯಾಕರ್ಷಕ ಕ್ಯಾಶ್-ಬ್ಯಾಕ್ ಗೆಲ್ಲುವ ಅವಕಾಶವನ್ನು ಪಡೆಯಿರಿ.

ಭವಿಷ್ಯಕ್ಕಾಗಿ ನೀವು ಹೊಂದಿರುವ ಪ್ರತಿಯೊಂದು ಫೈನಾನ್ಸಿಯಲ್ ಗೋಲ್‌ಗಾಗಿ ಜಾರ್ ಅನ್ನು ರಚಿಸಿ.

ಜಾರ್‌ನೊಂದಿಗೆ, ನಿಮ್ಮ ಫೈನಾನ್ಸಿಯಲ್ ಗೋಲ್‌ಗಳನ್ನು ಸಾಧಿಸಲು, ನೀವು ಕಸ್ಟಮ್ 'ಜಾರ್‌ಗಳನ್ನು' ರಚಿಸಬಹುದು:

  • ನಿಮ್ಮ ಮದುವೆಗಾಗಿ ಚಿನ್ನವನ್ನು ಖರೀದಿಸಿ
  • ಪೋಷಕರ ವಾರ್ಷಿಕೋತ್ಸವಕ್ಕಾಗಿ ಉಡುಗೊರೆಯನ್ನು ಖರೀದಿಸಲು ಹಣವನ್ನು ಉಳಿಸಿ
  • ನಿಮ್ಮ ಮುಂದಿನ ಸೋಲೋ ಟ್ರಿಪ್ ಅಥವಾ ಫ್ಯಾಮಿಲಿ ಟ್ರಿಪ್‌ಗಾಗಿ ಹಣವನ್ನು ಉಳಿಸಿ
  • ಮಕ್ಕಳ ಶಿಕ್ಷಣಕ್ಕೆ ಫೈನಾನ್ಸಿಯಲ್ ಪ್ಲ್ಯಾನ್ ಅನ್ನು ರಚಿಸಿ.
  • ನಿಮ್ಮ ವ್ಯಾಪಾರವನ್ನು ಪ್ರಾರಂಭಿಸಲು ಅಥವಾ ನೆಚ್ಚಿನ ಷೇರುಗಳಲ್ಲಿ ಹೂಡಿಕೆ ಮಾಡಲು ಫೈನಾನ್ಸಿಯಲ್ ಪ್ಲ್ಯಾನ್ ಮಾಡಿ
  • ಉತ್ತಮ ಹಣದ ನಿಯಂತ್ರಣ ಮತ್ತು ಆರ್ಥಿಕ ನಿಯಂತ್ರಣಕ್ಕಾಗಿ ಹಣವನ್ನು ಉಳಿತಾಯ ಮಾಡಿ.
  • ಸುರಕ್ಷಿತ ಭವಿಷ್ಯಕ್ಕಾಗಿ ಡಿಜಿಟಲ್ ಗೋಲ್ಡ್ ಖರೀದಿಸಿ
  • ನಿಮ್ಮ ಕನಸಿನ ಕಾರ್, ಮನೆ, ಫೋನ್ ಅಥವಾ ಲ್ಯಾಪ್‌ಟಾಪ್ ಖರೀದಿಸಲು ಪರ್ಸನಲ್ ಫೈನಾನ್ಸಿಯಲ್ ಪ್ಲ್ಯಾನ್ ಮಾಡಿ
  • ತುರ್ತು ಹಣದ ಅವಶ್ಯಕತೆಗಳಿಗಾಗಿ ಫೈನಾನ್ಸಿಯಲ್ ಪ್ಲ್ಯಾನ್ ಮಾಡಿ

ಜಿಜ್ಞಾಸೆಯೇ ? ಇಲ್ಲಿ ಇನ್ನಷ್ಟು ಕಂಡುಕೊಳ್ಳಿ.

ಸ್ಥಿರತೆಯ ಹಾದಿ ಸುಲಭವಾಗಿರುವುದಿಲ್ಲ. ಈ ದಾರಿಯಲ್ಲಿ ಅನೇಕ ಗೊಂದಲಗಳು ಸಾಲುಗಟ್ಟಿರುತ್ತವೆ.

ಆ ಗೊಂದಲಗಳನ್ನು ನಿವಾರಿಸಲು ಮತ್ತು ಉಳಿತಾಯದ ಪ್ರಯಾಣವನ್ನು ಸುಗಮಗೊಳಿಸಲು ಜಾರ್ ನಿಮಗೆ ಸಹಾಯ ಮಾಡಲಿ. ಇಂದೇ ಉಳಿತಾಯ ಪ್ರಾರಂಭಿಸಿ. ಇಂದೇ ಜಾರ್ ಆ್ಯಪ್‌ ಅನ್ನು ಡೌನ್‌ಲೋಡ್ ಮಾಡಿ.

Subscribe to our newsletter
Thank you! Your submission has been received!
Oops! Something went wrong while submitting the form.