Playstore Icon
Download Jar App
Savings

ನೀವಿನ್ನೂ ಬಜೆಟ್ ಅನ್ನು ಅನುಸರಿಸಿಲ್ಲವೆ? ಹಾಗಾದರೆ ಈ ಬಜೆಟ್ ಗೈಡ್ ನಿಮಗೆ ಮುಖ್ಯ ಆರಂಭ ನೀಡುತ್ತದೆ

December 28, 2022

ಹಣವನ್ನು ಅರ್ಥ ಮಾಡಿಕೊಳ್ಳುವ 6 ಹಂತದ ಮಾರ್ಗಗಳನ್ನಿಲ್ಲಿ ಸೂಚಿಸಲಾಗಿದೆ. ನೀವು ಈ ಸಲಹೆಗಳನ್ನು ಅಳವಡಿಸಿಕೊಂಡು ಕಟ್ಟುನಿಟ್ಟಾಗಿ ವೈಯಕ್ತಿಕ ಬಜೆಟ್ ಅನ್ನು ಪಾಲಿಸಬಹುದಾಗಿದೆ.

ಕೆಲವೊಮ್ಮೆ ಹಾಗೆ ರೂಪಿಸಿಕೊಂಡ ಬಜೆಟ್ ಅನ್ನು ಅನುಸರಿಸುವುದು ಕಷ್ಟಕರ ಸಂಗತಿಯಾಗಿರುತ್ತದೆ ಎಂಬುದೂ ನಮಗೂ ತಿಳಿದಿದೆ.

ಈ ಎಲ್ಲ ಕಾರಣಗಳಿಗಾಗಿ ನೀವು ಬಜೆಟ್  ರೂಪಿಸುವುದನ್ನು ದ್ವೇಷಿಸುವುದಕ್ಕೂ ಸಾಕು. ಆದರೆ, ಅದನ್ನು ಕಡಿಮೆ ಪ್ರಮಾಣದಲ್ಲಿ ದ್ವೇಷಿಸಲು ಸಾಧ್ಯವಾಗುವಂಥ ಮಾರ್ಗವೊಂದಿದೆ!

ನಿಮಗೆ ನಂಬಲಾಗುತ್ತಿಲ್ಲವೆ? ವೈಯಕ್ತಿಕ ಬಜೆಟ್  ರೂಪಿಸಿಕೊಂಡು ಅದಕ್ಕೆ ಬದ್ಧವಾಗಿರಲು ಮತ್ತು ಅದನ್ನು ಕಷ್ಟಕಾಲಕ್ಕೂ ಉಳಿಸಿಕೊಳ್ಳಲು ಇಲ್ಲಿ 6 ಹಂತದ ಸಲಹೆಗಳನ್ನು ನೀಡಲಾಗಿದೆ.

1. ನಿಮ್ಮ ಮಾಸಿಕ ಆದಾಯದ ಮೇಲೆ ಕಣ್ಣಿಡಿ

ಮೊದಲನೆಯದಾಗಿ, ನೀವು ಪ್ರತಿ ತಿಂಗಳು ಎಷ್ಟು ಖರ್ಚು ಮಾಡುವ ಸಾಮರ್ಥ್ಯ ಹೊಂದಿದ್ದೀರಿ ಎಂಬ ಬಗ್ಗೆ ನೈಜ ಪರಿಶೀಲನೆ ಮಾಡಿ.

ಅದು ಯಾಕೆಂದರೆ, ನಿಮ್ಮ ಮಾಸಿಕ ಖರ್ಚನ್ನು ಲೆಕ್ಕ ಮಾಡದಿದ್ದರೆ ಬಜೆಟ್  ರೂಪಿಸುವುದು ವ್ಯರ್ಥ ಕಸರತ್ತಾಗುತ್ತದೆ.

ಅಲ್ಲದೆ, ನಿಮ್ಮ ವಾರ್ಷಿಕ ಸಂಬಳವನ್ನು 12 ತಿಂಗಳಿಂದ ವಿಭಾಗಿಸಿ, ಅದನ್ನು ಖರ್ಚು ಮಾಡುವುದು ನಿಜಕ್ಕೂ ವಿವೇಚನಾಯುತ ಕ್ರಮವಲ್ಲ.

ಯಾಕೆಂದರೆ, ಹೀಗೆ ವೈಯಕ್ತಿಕ ಬಜೆಟ್  ಪಟ್ಟಿ ಯೋಜನೆಯನ್ನು ರೂಪಿಸುವುದರಿಂದ ಅದು ನಿಮ್ಮ ಅನಿರೀಕ್ಷಿತ ದಂತ ತುರ್ತು ಚಿಕಿತ್ಸೆ ಅಥವಾ ರಜಾ ದಿನಗಳಲ್ಲಿ ಮೊದಲ ವಿಮಾನವನ್ನೇ ಏರಲು ಬೇಕಾಗುವ ಹಣವನ್ನು ಉಳಿಸುವುದಿಲ್ಲ.

ಹೀಗಾಗಿ, ನೀವು ಹೇಗೆ ವ್ಯಯಿಸುತ್ತೀರಿ, ಯಾವುದರ ಮೇಲೆ ವ್ಯಯಿಸುತ್ತೀರಿ ಮತ್ತು ಎಲ್ಲಿ ವ್ಯಯಿಸುತ್ತೀರಿ ಎಂಬ ಯೋಜನೆಯನ್ನು ರೂಪಿಸಲೇ ನಿಮ್ಮ ಗಮನವನ್ನು ಕೇಂದ್ರೀಕರಿಸಲು ಸಮಯ ವ್ಯರ್ಥ ಮಾಡುವ ಬದಲು, ಸರಳವಾದ ಖರ್ಚಿನ ಯೋಜನೆಯನ್ನು ರೂಪಿಸಿಕೊಳ್ಳಿ.

2. ನಿಮ್ಮ ಬಯಕೆ ಮತ್ತು ಅವಶ್ಯಕತೆಗಳನ್ನು ವಿಶ್ಲೇಷಿಸಿ

ನಿಮ್ಮ ಹಣಕಾಸು ಅಗತ್ಯಗಳು ವೆಚ್ಚಗಳನ್ನು ಅವಲಂಬಿಸಿದ್ದು, ನಿಮ್ಮ ಜೀವನ ಸರಾಗವಾಗಿ ನಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಇವೆಲ್ಲವೂ ಸರ್ವೇಸಾಮಾನ್ಯ ಮತ್ತು ಅನಿವಾರ್ಯ ವೆಚ್ಚಗಳಾಗಿದ್ದು, ನಿಮ್ಮ ಸಂಬಳದ ಬಹುಪಾಲನ್ನು ಕಬಳಿಸಿಬಿಡುತ್ತವೆ. ಉದಾಹರಣೆಗೆ, ಬಾಡಿಗೆ, ವಿಮೆ, ಬಳಕೆಯ ಬಿಲ್‍ಗಳು, ಸಾರಿಗೆ ಮತ್ತು ಆಹಾರ ವೆಚ್ಚಗಳು.

ನೀವು ನಿಮ್ಮ ಅಗತ್ಯಗಳನ್ನು ನಿರ್ಧರಿಸಿಕೊಳ್ಳಬೇಕಿದ್ದರೆ ಮೊದಲು ನೀವು ನಿಮ್ಮ ವೆಚ್ಚದ ಮಾದರಿಯನ್ನು ಪರೀಕ್ಷಿಸಿಕೊಳ್ಳಬೇಕು.

ಇದಕ್ಕಿರುವ ಚಾಣಾಕ್ಷ ಮಾರ್ಗವೆಂದರೆ, ಹಿಂದಿನ ಎರಡು ತಿಂಗಳ ಬ್ಯಾಂಕ್‍ ಮತ್ತು ಕ್ರೆಡಿಟ್ ಕಾರ್ಡ್‍ನ ವರದಿಯನ್ನು ವಿಶ್ಲೇಷಿಸುವುದು ಮತ್ತು ನೀವು ಯಾವ ದಿನಾಂಕದಂದು ನಿಮ್ಮ ಬಿಲ್‍ಗಳನ್ನು ಪಾವತಿಸಿದ್ದೀರಿ ಎಂಬುದನ್ನು ಗೊತ್ತು ಮಾಡಿಕೊಳ್ಳುವುದು.

ಈ ಅಭ್ಯಾಸವನ್ನು ರೂಢಿಸಿಕೊಳ್ಳುವುದರಿಂದ ನಿಮ್ಮ ಖಾತೆಯಿಂದ ಯಾವಾಗ ಹಣ ನಿರ್ಗಮಿಸುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಈ ಮಾರ್ಗದಿಂದ ನೀವು ನಿಮ್ಮ ವೆಚ್ಚದ ಹವ್ಯಾಸವನ್ನೂ ಪತ್ತೆ ಹಚ್ಚಿಕೊಳ್ಳಬಹುದಾಗಿದೆ. ಉದಾಹರಣೆಗೆ, ನೀವೆಷ್ಟು ಬಾರಿ ಔತಣಕ್ಕೆ ಆರ್ಡರ್ ಮಾಡಿದ್ದೀರಿ ಮತ್ತು ಅದಕ್ಕಾಗಿ ಪ್ರತಿ ಬಾರಿಯೂ ಎಷ್ಟು ವ್ಯಯಿಸಿದ್ದೀರಿ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.

3. ನಿಮ್ಮ ಬಯಕೆಗಳ ಮೇಲೆ ಪ್ರಹಾರ ನಡೆಸಿ: 

ನಿಮ್ಮ ಬದುಕನ್ನು ಮತ್ತಷ್ಟು ಆರಾಮದಾಯಕಗೊಳಿಸಲು ಕಾಣಿಕೆ ನೀಡುವ ವೆಚ್ಚಗಳನ್ನು ಬಯಕೆಗಳೆಂದು ವರ್ಗೀಕರಿಸಬಹುದು.

ಕೆಲವೊಂದು ಸಾಮಗ್ರಿಗಳು ಇಲ್ಲದಿದ್ದರೂ ಕೆಲಸ ಮಾಡಲು ಸಾಧ‍್ಯವಿದ್ದರೂ ಅದರ ಉಪಸ್ಥಿತಿಯಿಂದ ಬದುಕು ಹರ್ಷದಾಯಕವಾಗುವ ಸಾಧ‍್ಯತೆ ಇರುತ್ತದೆ.

ಉದಾಹರಣೆಗೆ, ಆಹಾರ ಅನಿವಾರ್ಯವಾದರೂ, ವಾರದಲ್ಲಿ ಎರಡು ಬಾರಿ ಔತಣಕೂಟಗಳಿಗೆ ಹೋಗುವುದು ಹೆಚ್ಚೂಕಮ್ಮಿ ಬಯಕೆಯೇ ಆಗಿದೆ.

ನಿಮ್ಮ ಬಯಕೆಯನ್ನು ನಿರ್ಧರಿಸಬೇಕಿದ್ದರೆ, ನೀವು ನಿಮ್ಮ ಅಗತ್ಯಗಳನ್ನು ನಿಮ್ಮ ಮಾಸಿಕ ಆದಾಯದಿಂದ ಕಳೆಯಬೇಕು. ಆಗ ಉಳಿಯುವ ಮೊತ್ತವನ್ನು ನೀವು ಸಡಿಲವಾಗಿ ವ್ಯಯಿಸಬಹುದು.

ಹೀಗಾಗಿ, ಮಾಸಿಕ ಆದಾಯ-ನಿಶ‍್ಚಿತ ವೆಚ್ಚಗಳು=ಹೆಚ್ಚುವರಿ ಹಣವಾಗಿದ್ದು, ನೀವದನ್ನು ನಿಮ್ಮ ಬಯಕೆಗೆ ತಕ್ಕಂತೆ ವ್ಯಯಿಸಬಹುದು.

4. ಉಳಿತಾಯ ಮಾಡುವುದನ್ನು ಮರೆಯದಿರಿ: 

ನೀವು ನಿಮ್ಮ ಬಜೆಟ್ ದಲ್ಲಿ ಉಳಿತಾಯವನ್ನೂ ವರ್ಗೀಕರಿಸುವ ಮೂಲಕ ಅನಗತ್ಯ ವೆಚ್ಚವನ್ನು ತಪ್ಪಿಸಿ ಮತ್ತು ಅವುಗಳ ಮೇಲೆ ನಿಗಾ ವಹಿಸಿ!

ನೀವು ವೆಚ್ಚ ಮಾಡುವ ಹಣಕ್ಕೆ ನೀವು ಯಾವಾಗಲೂ ಹೊಣೆಗಾರರಾಗಿರಿ. ಯಾಕೆಂದರೆ, ಅದು ಮುಂದೆ ವೆಚ್ಚದ ಮೇಲೆ ನಿಗಾ ಇಡಲು ನೆರವು ನೀಡುತ್ತದೆ.

ಈ ಅಭ್ಯಾಸವು ನಿಮ್ಮ ಹಣದ ಮೇಲೆ ನಿಗಾ ಇಡಲು ಮತ್ತು ಉಳಿತಾಯವನ್ನು ನಿಯಂತ್ರಿಸಲು ನೆರವು ನೀಡುತ್ತದೆ.

ಬಜೆಟ್  ಯೋಜನೆಯ ಪ್ರಾಮುಖ್ಯತೆಯನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ. ಯಾಕೆಂದರೆ, ನಿಮ್ಮ ವೆಚ್ಚಗಳ ಮೇಲೆ ನಿಗಾ ವಹಿಸುವುದರಿಂದ ಅದು ಅಲ್ಪಕಾಲೀನ ಮತ್ತು ದೀರ್ಘಕಾಲೀನ ಅವಧಿಗಳೆರಡಲ್ಲೂ ಸಹಾಯ ಮಾಡುತ್ತದೆ.

ನಿಮ್ಮ ಉಳಿತಾಯವನ್ನು ಶೇಖರಿಸಿಡುವ ಒಂದು ಚಾಣಾಕ್ಷ ಮಾರ್ಗವೆಂದರೆ, ಹೆಚ್ಚುವರಿ ಬ್ಯಾಂಕ್ ಖಾತೆಯನ್ನು ಹೊಂದಿರುವುದು. ಅಲ್ಲಿ ನೀವು ನಿಮಗೆ ಸಂಬಳವಾಗುತ್ತಿದ್ದಂತೆಯೇ ಸಂಬಳ ಮೊತ್ತದ ಶೇ. 10ರಷ್ಟನ್ನು ಆ ಖಾತೆಯಲ್ಲಿ ಉಳಿತಾಯ ಮಾಡಬಹುದು.

ಮೊದಲ ಖಾತೆಯನ್ನು ನಿಮ್ಮ ವೆಚ್ಚಗಳು ಹಾಗೂ ಚಂಚಲತೆಯ ಮೇಲೆ ನಿಗಾ ವಹಿಸಲು ಬಳಸಿ. ಈ ಮೂಲಕ ಇಲ್ಲಿಯವರೆಗೆ ನೀವು ಅನುಭವಿಸಿದ ಬಜೆಟ್  ಸಮಸ್ಯೆಗೆ ನೀವು ಒಂದು ಸರಳವಾದ ಪರಿಹಾರವನ್ನು ಕಂಡುಕೊಂಡಿರುತ್ತೀರಿ.

5. ಸಣ್ಣ ವೆಚ್ಚದ ಮೇಲೂ ನಿಗಾ ವಹಿಸಿ: 

ನಿಮ್ಮ ಬಜೆಟ್ ವು ನಿಮಗೆ ಸತ್ಯವನ್ನು ಹೇಳದಿದ್ದರೆ, ನೀವದಕ್ಕೆ ಬದ್ಧರಾಗಿರಲು ಸಾಧ್ಯವಿಲ್ಲ! ನೀವೊಂದು ವೇಳೆ ರೂ. 100 ಮೊತ್ತದ ತಿಂಡಿಗೆ ಆದೇಶಿಸಿದರೆ, ಅದನ್ನು ನಿಮ್ಮ ವೆಚ್ಚದ ಪಟ್ಟಿಯಲ್ಲಿ ನಮೂದಿಸಿ.

ನೀವು ಈ ವಾರಾಂತ್ಯದಲ್ಲೇನಾದರೂ ರಾತ್ರಿ ಸಿನಿಮಾ ನೋಡಲು ಹೋಗುತ್ತಿದ್ದೀರಾ? ಹಾಗಾದರೆ ಟಿಕೆಟ್ ವೆಚ್ಚ ರೂ. 250 ಅನ್ನೂ ನಮೂದಿಸಿ.

ವರ್ಷವೊಂದರಲ್ಲಿ ಹಲವು ಸಾವಿರ ರೂಪಾಯಿಗಳು ಅನಗತ್ಯ ವೆಚ್ಚಗಳಿಗೆ ಪೋಲಾಗುವ ಸಾಧ‍್ಯತೆಯಿದೆ ಮತ್ತು ಹಲವಾರು ಬಾರಿ ನಿಮಗದು ತಿಳಿಯುವುದೇ ಇಲ್ಲ.

ನಿಯಮಿತ ಬಜೆಟ್ ಕ್ಕೆ ಬದ್ಧವಾಗಿರಬೇಕಾದರೆ, ಪ್ರತಿ ವೆಚ್ಚಗಳನ್ನು ಸ್ವೀಕರಿಸುವುದು ಮತ್ತು ದಾಖಲಿಸುವುದು ಅತ್ಯಂತ ಪರಿಣಾಮಕಾರಿ ಕ್ರಮವಾಗಿದೆ.

ಆದರೆ, ನೀವು ಬೀರು ಮತ್ತು ಬರ್ಗರ್ ಮೇಲೆ ವ್ಯಯಿಸುವ ದುಡ್ಡನ್ನು ಸ್ವಯಂ ಆಗಿ ಪತ್ತೆ ಹಚ್ಚುತ್ತೇನೆ ಎಂದು ಹೊರಡುವುದು ತೆರಿಗೆದಾಯವಾಗಿದ್ದು, ಮುಕ್ತವಾಗಿ ಹೇಳುವುದಾದರೆ, ಅದೊಂದು ಮೂರ್ಖತನ.

ನಿಮ್ಮ ಖಾತೆಯಿಂದ ಪ್ರತಿ ಬಾರಿಯೂ ಕಡಿತವಾಗುವ ಮೊತ್ತದ ಮೇಲೆ ಸ್ವಯಂ ನಿಗಾ ವಹಿಸಲು ಹೊರಟರೆ, ನಿಮ್ಮ ಜೇಬಿನಿಂದ ಎಷ್ಟು ಮೊತ್ತ ನಿರ್ಗಮಿಸುತ್ತಿದೆ ಎಂದು ಗಾಬರಿಗೊಳಗಾಗುವ ಸಾಧ್ಯತೆ ಇದೆ.

ಆದರೆ, ನೀವು ಪ್ರತಿ ಬಾರಿಯೂ ವ್ಯಯಿಸುವ ಹಣದಲ್ಲಿ ಉಳಿತಾಯ ಮಾಡುವ ಆ್ಯಪ್ ದೊರೆತರೆ? ಅದೃಷ್ಟವಶಾತ್ ತಂತ್ರಜ್ಞಾನ ಸುಧಾರಿಸಿರುವುದರಿಂದ ಅದೂ ಕೂಡಾ ಸಾಧ್ಯವಾಗಿದೆ.

ನಿಮ್ಮ ದೈನಂದಿನ ವೆಚ್ಚವನ್ನು ರೌಂಡ್ ಆಫ್‍ ಮಾಡಲು ನೆರವು ನೀಡುವ ಆ್ಯಪ್ ಜಾರ್ ಆಗಿದ್ದು, ಈ ಉಳಿತಾಯದಲ್ಲಿ ನೀವು ಮಾಡಬಹುದಾದ ಅತ್ಯುತ್ತಮ ಹೂಡಿಕೆಯೆಂದರೆ, ಶೇ. 100ರಷ್ಟು ಸುರಕ್ಷಿತ ಡಿಜಿಟಲ್ ಬಂಗಾರ.

ಉಳಿತಾಯ ಮತ್ತು ಹೂಡಿಕೆ ಜಗತ್ತುಗಳೆರಡಕ್ಕೂ ಇದು ಅತ್ಯುತ್ತಮ ಆಯ್ಕೆಯಲ್ಲವಾದರೆ, ಮತ್ತೇನಾಗಲು ಸಾಧ್ಯ?

6. ನಿಮ್ಮ ಬಜೆಟ್ ಅನ್ನು ನಿಯಮಿತವಾಗಿ ಸುಧಾರಿಸಿಕೊಳ್ಳಿ:

 

ಪ್ರತಿ ನಿತ್ಯವೂ ಬದಲಾಗುತ್ತಿರುವ ಜೀವನಶೈಲಿಯ ಯುಗದಲ್ಲಿ ನಿಮ್ಮ ಬಜೆಟ್  ಮಾತ್ರ ಸ್ಥಿರವಾಗಿರಲು ಸಾಧ್ಯವಿಲ್ಲ. ಕಾಲ ಸರಿದಂತೆ, ಕೆಲವು ನಿರ್ದಿಷ್ಟ ಘಟನೆಗಳು ನಿಮ್ಮ ಜೀವನ ಶೈಲಿಯನ್ನು ಬದಲಾಯಿಸಬಹುದು. ಆಗ ನಿಮ್ಮ ಬಜೆಟ್  ಕೂಡಾ ಬದಲಾಗಬೇಕು ಮತ್ತು ಅದಕ್ಕೆ ಬದ್ಧವಾಗಿರಬೇಕು.

ಉದಾಹರಣೆಗೆ, ನೀವೇನಾದರೂ ಗೃಹ ಸಾಲ ಪಡೆಯಬೇಕು ಅಥವಾ ಸಂಸಾರವನ್ನು ಶುರು ಮಾಡಬೇಕು  ಎಂದುಕೊಂಡಿದ್ದರೆ, ಅಂತಹ ಮೈಲುಗಲ್ಲಿಗಾಗಿ ನಿಮ್ಮ ಬಜೆಟ್ ದಲ್ಲಿ ಸ್ಥಳಾವಕಾಶವಿರಬೇಕು.

ಅದೇ ರೀತಿ, ನಿಮ್ಮ ಚಾಲ್ತಿಯಲ್ಲಿರುವ ಬಜೆಟ್  ಯೋಜನೆಯಿಂದ ಪೂರ್ಣಗೊಂಡ ಮಾಸಿಕ ಕಂತು ಅಥವಾ ಈ ಹಿಂದೆ ಪಡೆದಿದ್ದ ವಿದ್ಯಾರ್ಥಿ ಸಾಲದ ಮರುಪಾವತಿಯಂತಹ ನಿರ್ದಿಷ್ಟ ವೆಚ್ಚಗಳು ಕೊನೆಯಾಗುವ ಸಾಧ‍್ಯತೆ ಇರುತ್ತದೆ.

ದಿನದ ಕೊನೆಗೆ, ಯಾವುದು ಮುಖ್ಯ ಸಂಗತಿಯೆಂದರೆ, ನಿಮ್ಮ ಬಜೆಟ್  ಯೋಜನೆ ನಿಮ್ಮ ಅಗತ್ಯಗಳನ್ನು ಇನ್ನೂ ಪೂರೈಸುತ್ತಿವೆಯೆ ಎಂಬುದನ್ನು ನಿರಂತರವಾಗಿ ಪರಾಮರ್ಶಿಸುವುದು ಮತ್ತು ನಿಮ್ಮ ಬಜೆಟ್  ಯೋಜನೆಗೆ ಮರುಭೇಟಿ ನೀಡುವುದು.

ಪ್ರತಿ 2-3 ತಿಂಗಳಿಗೊಮ್ಮೆ ನಿಮ್ಮ ಬಜೆಟ್  ಪಟ್ಟಿಯನ್ನು ಪರಿಶೀಲಿಸುತ್ತಿರಿ. ಇದರಿಂದ ನಿಮ್ಮ ವೆಚ್ಚ ಮತ್ತು ಆದಾಯ ಎಲ್ಲಿದೆ ಎಂಬುದನ್ನು ಲೆಕ್ಕ ಮಾಡಬಹುದಾಗಿದೆ.

ನಮ್ಮ ಕೊನೆ ಮಾತು

ನಾವೀಗ ಉಳಿತಾಯ ಮತ್ತು ಬಜೆಟ್ ಕುರಿತು ಚಿನ್ನದಂಥ ವಿವೇಚನೆಯನ್ನು ಹಂಚಿಕೊಂಡಿದ್ದೇವೆ. ಇದೀಗ ನೀವು ಅದನ್ನು ಬಳಸುವ ಮತ್ತು ಪರೀಕ್ಷಿಸುವ ಪ್ರಯತ್ನ ಮಾಡಬೇಕಷ್ಟೆ.

ಕಾಲ ಕಳೆದಂತೆ, ನೀವು ನಿಮ್ಮದೇ ಆದ ಬಜೆಟ್  ವಿಧಾನದ ಸೂತ್ರವನ್ನು ರೂಪಿಸಿಕೊಳ್ಳುತ್ತೀರಿ ಮತ್ತು ವಿಷಯವು ಮತ್ತಷ್ಟು ಸುಲಭವಾಗಿ ಬದಲಾಗುತ್ತದೆ.

ನಿಮ್ಮ ಹಣವನ್ನು ಉಳಿತಾಯ ಮಾಡಲು ಪ್ರಯೋಗಶೀಲರಾಗಿರಿ ಮತ್ತು ಹೊಸ ಮಾರ್ಗಗಳನ್ನು ಹುಡುಕುತ್ತಲೇ ಇರಿ.

ನಿಮ್ಮ ಹಣ ಎಲ್ಲಿ ವೆಚ್ಚವಾಗುತ್ತಿದೆ ಎಂಬುದನ್ನು ಖಚಿತವಾಗಿ ಅರಿತುಕೊಳ್ಳಲು ಅದಕ್ಕೆ ನೆರವು ನೀಡುವ ವೈಯಕ್ತಿಕ ಬಜೆಟ್  ಆ್ಯಪ್‍ ಅನ್ನು ಅಳವಡಿಸಿಕೊಳ್ಳಿ.

ನಿಮ್ಮ ವೆಚ್ಚದ ಬಗ್ಗೆ ಸದಾ ಜಾಗೃತರಾಗಿರಿ ಮತ್ತು ಹೊಣೆಗಾರರಾಗಿರಿ.

ಇದು ನೀವು ಸುಸ್ಥಿರ ವ್ಯವಸ್ಥೆಯೊಂದನ್ನು ರೂಪಿಸಿಕೊಂಡು ಹಣವನ್ನು ಉಳಿತಾಯ ಮಾಡಲು ಮಾತ್ರವಲ್ಲದೆ, ಅದನ್ನು ಆನಂದಿಸಲು ಸುಲಭವಾಗಿ ನೆರವು ನೀಡುತ್ತದೆ. 

Subscribe to our newsletter
Thank you! Your submission has been received!
Oops! Something went wrong while submitting the form.