Playstore Icon
Download Jar App

ಜಾರ್ ಆಪ್ ಅನ್ನು ಬಳಸುವುದು ಹೇಗೆ?

October 27, 2022

ನಿಮ್ಮ ಆನ್ಲೈನ್ ವಿನಿಮಯಗಳಿಂದ ದೊರೆಯುವ ಬಿಡಿ ಚಿಲ್ಲರೆಯನ್ನು ಡಿಜಿಟಲ್ ಗೋಲ್ಡ್ ಆಗಿ ಹೂಡಿಕೆ ಮಾಡುವ ಒಂದು ಸ್ವಯಂಚಾಲಿತ ಇನ್ವೆಸ್ಟ್ಮೆಂಟ್ ಆಪ್. ಈ ರೀತಿ ನೀವು ನಿಮ್ಮ ಹಣವನ್ನು ಬೆಳೆಸುತ್ತೀರಿ.

ಜಾರ್ ಆಪ್ ಎಂದರೇನು?

ಜಾರ್ ಒಂದು ಸ್ವಯಂಚಾಲಿತ ಇನ್ವೆಸ್ಟ್ಮೆಂಟ್ ಆಪ್ ಆಗಿದ್ದು, ಇದು ನಿಮ್ಮ ಉಳಿಸಿದ ಹಣವನ್ನು ಡಿಜಿಟಲ್ ಗೋಲ್ಡ್ ನಲ್ಲಿ ಹೂಡಿಕೆ ಮಾಡುತ್ತದೆ.

ಇದು ನಿಮ್ಮ ಆನ್ಲೈನ್ ವಿನಿಮಯಗಳಿಂದ ದೊರೆಯುವ ಬಿಡಿ ಚಿಲ್ಲರೆಯನ್ನು ಡಿಜಿಟಲ್ ಗೋಲ್ಡ್ ಆಗಿ ಹೂಡಿಕೆ ಮಾಡುತ್ತದೆ, ಸ್ವಯಂಚಾಲಿತವಾಗಿ.

ಜಾರ್, ಪ್ರತಿದಿನ ಹಣವನ್ನು ಉಳಿಸಿ ಅದನ್ನು ಡಿಜಿಟಲ್ ಗೋಲ್ಡ್ ನಲ್ಲಿ ಹೂಡಿಕೆ ಮಾಡಲು ಒಂದು ನೂತನ ಪರಿಹಾರವನ್ನು ಕಂಡುಹಿಡಿದ, ಮೊದಲ ಮೇಡ್ ಇನ್ ಇಂಡಿಯಾ ಆಪ್ ಆಗಿದೆ.

ಜಾರ್, ಉಳಿತಾಯ ಹಾಗೂ ಹೂಡಿಕೆ ಮಾಡುವ ಅತೀ ಸರಳ ಹಾಗೂ ಅತೀ ಶೀಘ್ರ ಉಪಾಯವಾಗಿದೆ.

ಜಾರ್ ಜೊತೆ, ನೀವು ನಿಮ್ಮ ಹಣವನ್ನು 24 ಕ್ಯಾರೆಟ್ ಚಿನ್ನದೊಂದಿಗೆ ವೃದ್ಧಿಸಬಹುದು.

ನೀವು ಡಿಜಿಟಲ್ ಗೋಲ್ಡ್ ನ ಖರೀದಿ ಹಾಗೂ ಮಾರಾಟವನ್ನು, ಉತ್ತಮ ಚಿನ್ನದ ಬೆಲೆಗಳೊಂದಿಗೆ ಮಾಡಬಹುದು, ಕೇವಲ ₹1 ರಿಂದ ಆರಂಭಿಸಿ.

ಸಣ್ಣ ಮೊತ್ತಗಳನ್ನು ಡಿಜಿಟಲ್ ಗೋಲ್ಡ್ ನ ಇನ್ವೆಸ್ಟ್ಮೆಂಟ್ ಜೊತೆ ಸ್ವಯಂಚಾಲಿತವಾಗಿ ಹೂಡಿಕೆ ಮಾಡುವುದರೊಂದಿಗೆ ಉಳಿತಾಯದ ಅಭ್ಯಾಸವನ್ನು ಬೆಳೆಸಿರಿ. ಇದನ್ನು ನೀವು ಯಾವಾಗ ಬೇಕಾದರೂ ನಿಮ್ಮ ಇ-ವಾಲೆಟ್ ಗಳಲ್ಲಿ ಹಿಂದೆ ಪಡೆಯಬಹುದು ಅಥವಾ ಬಿಡಿಸಿಕೊಳ್ಳಬಹುದು.

ಜಾರ್ ನೊಂದಿಗೆ ನೀವು ಕೇವಲ 4 ಸರಳ ಹಂತಗಳಲ್ಲಿ ನಿಮ್ಮ ಉಳಿತಾಯಗಳನ್ನು ಡಿಜಿಟಲ್ ಗೋಲ್ಡ್ ನಲ್ಲಿ ಹೂಡಿಕೆ ಮಾಡಬಹುದು.

  1. ನಿಮ್ಮ ಮೊಬೈಲ್ ಸಂಖ್ಯೆಯೊಂದಿಗೆ ಲಾಗಿನ್ ಮಾಡಿ ಹಾಗೂ ನಿಮ್ಮ ಜಾರ್ ಖಾತೆಯನ್ನು ತೆರೆಯಿರಿ.
  2. ನಿಮ್ಮ ಫೋನ್ ಪೇ, ಗೂಗಲ್ ಪೇ ಅಥವಾ ಪೇಟಿಎಂ ಖಾತೆಯಿಂದ UPI ಆಟೋಪೇ ಅನ್ನು ಸೆಟಪ್ ಮಾಡಿ.
  3. ಇನ್ನು ಜಾರ್ ಅನ್ನು, ಉತ್ತಮ ಚಿನ್ನದ ಬೆಲೆಯೊಂದಿಗೆ, ಪ್ರತಿದಿನ ನಿಮ್ಮ ಹಣವನ್ನು ನಿಮಗಾಗಿ ಉಳಿಸುವಂತೆ ಮಾಡಿ.
  4. ನಿಮ್ಮ ಜಾರ್ ಖಾತೆಯಲ್ಲಿ ಸಂಗ್ರಹವಾದ ಚಿನ್ನವನ್ನು ತಕ್ಷಣ ಮಾರಾಟ ಮಾಡಲು, ‘ವಿದ್ಡ್ರಾ ಫ಼ಂಡ್ಸ್’ ಆಯ್ಕೆ ಮೇಲೆ ಕ್ಲಿಕ್ ಮಾಡಿ ಹಾಗೂ ಈ ಹಣವನ್ನು ನೇರವಾಗಿ ನಿಮ್ಮ ಇ-ವಾಲೆಟ್ ನಲ್ಲಿ ಪಡೆಯಿರಿ. ನಿಮಗಾಗಿ ಭಾರೀ ಉಳಿತಾಯವನ್ನು ಖಚಿತಪಡಿಸಲು, ಜಾರ್ ನಿಮಗೆ ಚಿನ್ನದ ಅತ್ಯುತ್ತಮ ಬೆಲೆಯನ್ನು ನೀಡುತ್ತದೆ.

ಈ ರೀತಿಯ ಮೊದಲ ಮೇಡ್ ಇನ್ ಇಂಡಿಯಾ ಆಪ್. NPCI ಹಾಗೂ ಭಾರತದ ಶ್ರೇಷ್ಠ UPI ಸರ್ವಿಸ್ ಪ್ರೋವೈಡರ್ ಗಳ ಬೆಂಬಲ ಪಡೆದ ನಾವು, ಚಿನ್ನದಲ್ಲಿ ಹೂಡಿಕೆ ಮಾಡುವಂತಹ ನೂತನ ಸಾಧನವನ್ನು ಕಂಡುಹಿಡಿಯುವಲ್ಲಿ ಭಾರತದಲ್ಲೇ ಮೊದಲಿಗರಾಗಿದ್ದೇವೆ.

ಜಾರ್ ನೊಂದಿಗೆ ನೀವು ಚಕ್ರವನ್ನು ತಿರುಗಿಸಿ ಉಳಿತಾಯವನ್ನು ದ್ವಿಗುಣಗೊಳಿಸಬಹುದು.

ಜಾರ್ ನ ಪ್ರತೀ ವಿನಿಮಯದ ಜೊತೆ ನೀವು ಹಣ ಉಳಿತಾಯದ ಅಭ್ಯಾಸವನ್ನು ಬೆಳೆಸಿಕೊಳ್ಳಬಹುದು. ಜಾರ್ ಆಪ್ ನಲ್ಲಿ ಪ್ರತೀ ವಿನಿಮಯದೊಂದಿಗೆ ನಿಮಗೆ ಚಕ್ರ ತಿರಿಗಿಸುವ ಒಂದು ಅವಕಾಶ ದೊರೆಯುತ್ತದೆ. ಜಾರ್ ನೊಂದಿಗೆ, ನಿಮ್ಮ ಉಳಿತಾಯಗಳನ್ನು ಡಬಲ್ ಮಾಡುವ ಅಥವಾ ಆಟಗಳನ್ನು ಆಡಿ ಆಕರ್ಷಕ ಕ್ಯಾಷ್ ಬ್ಯಾಕ್ ಅನ್ನು ಪಡೆಯುವ ಅವಕಾಶ ನಿಮಗೆ ದೊರೆಯುತ್ತದೆ. ಹೀಗಾಗಿ, ಹೆಚ್ಚು ಉಳಿಸಲು ಹೆಚ್ಚು ಖರ್ಚು ಮಾಡಿ, ಹಾಗೂ ಹೆಚ್ಚು ಹಣವನ್ನು ಗೆಲ್ಲಿರಿ.

ಜಾರ್ ನೊಂದಿಗೆ ನೀವು ಯಾವುದರ ಮೇಲೆ ಹೂಡಿಕೆ ಮಾಡಬಹುದು?

ನಮ್ಮ ಪ್ರೀಮಿಯಂ ಡಿಜಿಟಲ್ ಗೋಲ್ಡ್ ಇನ್ವೆಸ್ಟ್ಮೆಂಟ್ ಯೋಜನೆಗಳು ಹಾಗೂ ಕೊಡುಗೆಗಳ(ಚಿನ್ನದ ಅತ್ಯುತ್ತಮ ಬೆಲೆಗಳಲ್ಲಿ) ಜೊತೆ, ನೀವು ಜಾರ್ ನಲ್ಲಿ ಮೈಕ್ರೋ ಸೇವಿಂಗ್ಸ್ ಅಥವಾ ಸೂಕ್ಷ್ಮ ಉಳಿತಾಯಗಳನ್ನು ಮಾಡಬಹುದು. 

100% ಭದ್ರ ಹಾಗೂ ದ್ರವ್ಯತೆಯ ಕೊಡುಗೆಗಳು ನಿಮಗೆ ಪ್ರತೀ ವಿನಿಮಯದ ಜೊತೆ ಸ್ವಯಂ ಆಗಿಯೇ 24 ಕ್ಯಾರೆಟ್ ಚಿನ್ನ ಖರೀದಿಸುವ ಅನುಮತಿ ನೀಡುತ್ತವೆ. 

ಜಾರ್ ನೊಂದಿಗೆ, ನಿಮ್ಮ ಹಣಕಾಸಿನ ಸಂಪೂರ್ಣ ನಿಯಂತ್ರಣ ನಿಮ್ಮ ಕೈಯ್ಯಲ್ಲೇ ಇರುತ್ತದೆ, ನೀವು ನಿಲ್ಲಿಸಬಹುದು, ಪುನಃ ಆರಂಭಿಸಬಹುದು ಅಥವಾ ಸುಲಭವಾಗಿ, ಒಂದು ಬಟನ್ ಕ್ಲಿಕ್ ನಿಂದಲೇ, ಚಿನ್ನ ಅಥವಾ ಹಣವನ್ನು ಹಿಂದೆ ಪಡೆಯಬಹುದು.

ಡಿಜಿಟಲ್ ಗೋಲ್ಡ್ ಎಂದರೆ ಏನು ಎಂದು ನೀವು ಕೇಳಬಹುದು.

ಡಿಜಿಟಲ್ ಗೋಲ್ಡ್ ನೈಜ ಚಿನ್ನವೇ ಆಗಿದ್ದು, ಸ್ಥಳ ಉಳಿಸಲು ಹಾಗೂ ಭದ್ರತೆಗಾಗಿ ಇದನ್ನು ವರ್ಚುವಲ್ ಆಗಿ ಸಂಗ್ರಹಿಸಿ ಇಡಲಾಗುತ್ತದೆ. ಇದನ್ನು ಒಂದೇ ಕ್ಲಿಕ್ ನಲ್ಲಿ ಭೌತಿಕ ಚಿನ್ನವಾಗಿ ಬದಲಾಯಿಸಬಹುದು. ಡಿಜಿಟಲ್ ಗೋಲ್ಡ್ : ಲಾಭ, ಅಪಾಯಗಳು ಹಾಗೂ ತೆರಿಗೆಗಳು; ಇದರ ಬಗ್ಗೆ ಹೆಚ್ಚು ಓದಿರಿ.

ಭವಿಷ್ಯಕ್ಕಾಗಿ ನೀವು ಹೊಂದಿರುವ ಪ್ರತಿಯೊಂದು ಗುರಿಗೂ ನೀವು ಒಂದು ಜಾರ್ ಅನ್ನು ರಚಿಸಬಹುದು.

ಜಾರ್ ನೊಂದಿಗೆ, ನಿಮ್ಮ ಆರ್ಥಿಕ ಗುರಿಗಳನ್ನು ತಲುಪಲು ನೀವು ಕಸ್ಟಮ್ ‘ಜಾರ್ಸ್’ ಅನ್ನು ರಚಿಸಬಹುದು, ಉದಾಹರಣೆಗೆ;

  1. ನಿಮ್ಮ ಮದುವೆಗಾಗಿ ಚಿನ್ನ ಖರೀದಿಸಲು.
  2. ನಿಮ್ಮ ಹೆತ್ತವರ ವಾರ್ಷಿಕೋತ್ಸವದ ಉಡುಗೊರೆ ಖರೀದಿಗಾಗಿ ಹಣ ಉಳಿಸಲು.
  3. ನಿಮ್ಮ ಮುಂದಿನ ಒಂಟಿ ಅಥವಾ ಪರಿವಾರ ಪ್ರವಾಸಕ್ಕಾಗಿ ಹಣ ಉಳಿಸಲು.
  4. ನಿಮ್ಮ ಮಗುವಿನ ಶಿಕ್ಷಣಕ್ಕಾಗಿ ಆರ್ಥಿಕ ಯೋಜನೆ ರೂಪಿಸಲು.
  5. ಉದ್ಯಮ ಆರಂಭಿಸಲು ಅಥವಾ ನಿಮ್ಮ ನೆಚ್ಚಿನ ಷೇರುಗಳಲ್ಲಿ ಹೂಡಿಕೆ ಮಾಡಲು ಆರ್ಥಿಕ ಯೋಜನೆ ರೂಪಿಸಲು.
  6. ಹೆಚ್ಚಿನ ಆರ್ಥಿಕತೆ ಹಾಗೂ ಹಣಕಾಸಿನ ನಿಯಂತ್ರಣಕ್ಕಾಗಿ.
  7. ಭದ್ರ ಭವಿಷ್ಯಕ್ಕಾಗಿ ಡಿಜಿಟಲ್ ಗೋಲ್ಡ್ ಖರೀದಿಸಲು.
  8. ನಿಮ್ಮ ಕನಸಿನ ಕಾರು, ಮನೆ, ಫೋನ್ ಅಥವಾ ಲ್ಯಾಪ್ ಟಾಪ್ ಖರೀದಿಗಾಗಿ ಹಣಕಾಸನ್ನು ನಿಯೋಜಿಸಲು.
  9. ತುರ್ತು ಹಣದ ಅಗತ್ಯಗಳಿಗಾಗಿ. 

ಜಾರ್ ಅನ್ನು ನಿಮ್ಮ ಉಳಿತಾಯ ಹಾಗೂ ಚಿನ್ನ ಹೂಡಿಕೆಯ ತಜ್ಞನನ್ನಾಗಿ ಮಾಡಿ!

ಜಾರ್ ಆಪ್ ನಲ್ಲಿ ಉಳಿತಾಯದ ಪ್ರಕಾರಗಳು:

  1. ಹತ್ತಿರದ 10 ಕ್ಕೆ ರೌಂಡ್-ಆಫ್ (ಪೂರ್ವನಿಯೋಜಿತ) : ಜಾರ್, ನಿಮ್ಮ ವಿನಿಮಯಗಳನ್ನು ಹತ್ತಿರದ 10 ಕ್ಕೆ ರೌಂಡ್- ಆಫ್ ಮಾಡುತ್ತದೆ. ಉದಾಹರಣೆಗೆ : ನೀವು ರೂ 27 ರ ವಿನಿಮಯ ಮಾಡಿದರೆ, ಜಾರ್ ಅದನ್ನು ಹತ್ತಿರದ  10 ಕ್ಕೆ ರೌಂಡ್ ಆಫ್ ಮಾಡುತ್ತದೆ ಅಂದರೆ, ರೂ 30, ಹಾಗೂ ಈ ರೂ 3 ರ ವ್ಯತ್ಯಾಸವನ್ನು ಸ್ವಯಂಚಾಲಿತವಾಗಿ ಡಿಜಿಟಲ್ ಗೋಲ್ಡ್ ನಲ್ಲಿ ಹೂಡಿಕೆ ಮಾಡಲಾಗುತ್ತದೆ. 
  2. ಹತ್ತಿರದ 5 ಕ್ಕೆ ರೌಂಡ್-ಆಫ್ : ಜಾರ್, ನಿಮ್ಮ ವಿನಿಮಯಗಳನ್ನು ಹತ್ತಿರದ 5 ಕ್ಕೆ ರೌಂಡ್- ಆಫ್ ಮಾಡುತ್ತದೆ. ಉದಾಹರಣೆಗೆ : ನೀವು ರೂ 22 ರ ವಿನಿಮಯ ಮಾಡಿದರೆ, ಜಾರ್ ಅದನ್ನು ಹತ್ತಿರದ 5 ಕ್ಕೆ ರೌಂಡ್ ಆಫ್ ಮಾಡುತ್ತದೆ ಅಂದರೆ, ರೂ 25, ಹಾಗೂ ಈ ರೂ 3 ರ ವ್ಯತ್ಯಾಸವನ್ನು ಸ್ವಯಂಚಾಲಿತವಾಗಿ ಡಿಜಿಟಲ್ ಗೋಲ್ಡ್ ನಲ್ಲಿ ಹೂಡಿಕೆ ಮಾಡಲಾಗುತ್ತದೆ. 
  3. ರೂ 1 ರಿಂದ ರೂ.500 ರ ವರೆಗೆ ಪ್ರತಿದಿನದ ಸ್ಥಿರ ಉಳಿತಾಯದ ಮೊತ್ತ : ಜಾರ್, ನೀವು ಪೂರ್ವನಿಗದಿತ ಮಾಡಿರುವಂತೆಯೇ, ರೂ 500 ರ ಗಡಿ ತಲುಪುವ ತನಕ ನಿಮ್ಮ ವಿನಿಮಯಗಳನ್ನು ಹತ್ತಿರದ 10 or 5 ಕ್ಕೆ ರೌಂಡ್ ಆಫ್ ಮಾಡುತ್ತಿರುತ್ತದೆ ಹಾಗೂ ಇದಕ್ಕಾಗಿಯೇ, ಜಾರ್ ಆಪ್ ಗೆ ರೂ 500 ವರೆಗಿನ ಸ್ವ ಪಾವತಿಯ ಅನುಮತಿ ಬೇಕಾಗಿರುತ್ತದೆ.

ನನ್ನ ಜಾರ್ ಖಾತೆಯನ್ನು ತೆರೆಯಲು ಏನೆಲ್ಲಾ ಬೇಕಾಗುತ್ತದೆ?

  1. ಒಂದು ಮಾನ್ಯ ಸಂಪರ್ಕ ಸಂಖ್ಯೆ
  2. ಫೋನ್ ಪೇ, ಗೂಗಲ್ ಪೇ, ಪೇಟಿಎಂ ಅಥವಾ ಭಾರತದ ಯಾವುದೇ UPI ಸರ್ವಿಸ್ ಪ್ರೊವೈಡರ್ ನೊಂದಿಗಿನ UPI ಖಾತೆ.

ಜಾರ್ ಆಪ್ ನಲ್ಲಿ ನೋಂದಾಯಿಸಲು ಕೆವೈಸಿ ಅಗತ್ಯವಿದೆಯೇ?

ಇಲ್ಲ, ಸಧ್ಯಕ್ಕೆ ಜಾರ್ ಆಪ್ ನಲ್ಲಿ ನೋಂದಾಯಿಸಲು ಕೆವೈಸಿ ಯ ಅಗತ್ಯವಿಲ್ಲ.

ಜಾರ್ ಆಪ್ ನ ಡಿಜಿಟಲ್ ಗೋಲ್ಡ್ ನಲ್ಲಿ ಯಾರೆಲ್ಲಾ ಹೂಡಿಕೆ ಮಾಡಬಹುದು?

18 ವರ್ಷ ಮೇಲ್ಪಟ್ಟ, ಬ್ಯಾಂಕ್ ಖಾತೆಯನ್ನು ಹೊಂದಿರುವ ಯಾವುದೇ ವ್ಯಕ್ತಿಯು ಜಾರ್ ನೊಂದಿಗೆ ಹೂಡಿಕೆ ಮಾಡಿ ಪ್ರತಿದಿನ ಹಣ ಉಳಿತಾಯ ಮಾಡಬಹುದು.

ನಾನು ಯಾವಾಗ ವಿದ್ ಡ್ರಾ ಮಾಡಬಹುದು?

ನೀವು ಎಲ್ಲಿ ಬೇಕಾದರೂ, ಯಾವಾಗ ಬೇಕಾದರೂ ತಮ್ಮ ಹಣವನ್ನು ಹಿಂದೆ ಪಡೆಯಬಹುದು. ಜಾರ್ ನಲ್ಲಿ ಕನಿಷ್ಠ ಲಾಕ್ ಇನ್ ಅವಧಿ ಎನ್ನುವುದಿಲ್ಲ.

ಯಾವುದೇ ನಿರ್ದಿಷ್ಟ ಪ್ರಶ್ನೆಗಾಗಿ Jar's FAQ page ಅನ್ನು ನೋಡಿ.

Subscribe to our newsletter
Thank you! Your submission has been received!
Oops! Something went wrong while submitting the form.