Playstore Icon
Download Jar App
Financial Education

ಸಾಲದ ಬಲೆ ನಿಮ್ಮ ಆರ್ಥಿಕತೆಯ ಸಾವಿನ ಬಲೆಯಾಗಿದೆಯೇ? ಇದನ್ನು ತಪ್ಪಿಸುವುದು ಹೇಗೆ?

December 28, 2022

ಆರ್ಥಿಕ ಒದ್ದಾಟದಲ್ಲಿ ಸಿಲುಕಿದ್ದೀರಾ? ಹೊರಬರುವ ದಾರಿ ತಿಳಿಯುತ್ತಿಲ್ಲವೇ? ನಿಮ್ಮನ್ನು ನೀವು ಇದರಿಂದ ಹೊರಗೆಳೆದುಕೊಳ್ಳಲು ಈ ಪರಿಹಾರಗಳನ್ನು ಓದಿರಿ.

ಸಾಲ ಬಲೆಯ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳಲು ಈ ಸಣ್ಣ ಕಥೆಯಿಂದ ಆರಂಭಿಸೋಣ. ನಿಮ್ಮ ಆದಾಯ ರೂ.10,000 ಇದ್ದು ಇದು ನಿಮ್ಮ ಬೇಡಿಕೆಗಳನ್ನು ಪೂರೈಸಲು ಸಾಕಾಗುತ್ತಿಲ್ಲ ಎಂದುಕೊಳ್ಳೋಣ.

ನಿಮಗೊಂದು ಆಕರ್ಷಕ ಫೋನ್ ಅಥವಾ ಐಫೋನ್ ಖರೀದಿಸಬೇಕಾಗಿದೆ ಎಂದು ಭಾವಿಸಿ. ಇಂತಹ ಸಂದರ್ಭಗಳಲ್ಲಿ, ನೀವು ಸಾಲದ ಮೊರೆ ಹೋಗುತ್ತೀರಿ.

ನೀವು ಬ್ಯಾಂಕಿನಿಂದ ರೂ 5,000 ದ ಮಾಸಿಕ ಇಎಂಐ ಅನ್ನು ಪಡೆಯುತ್ತೀರಿ. ನಂತರ ಬರುವ ತಿಂಗಳಿನಲ್ಲಿ ನಿಮಗೆ ಮತ್ತೆ ರೂ.10,000 ಸಿಗುತ್ತದೆ, ಆದರೆ ಇದರ ಅರ್ಧ ಭಾಗವು ನಿಮ್ಮ ಸಾಲ ಪೂರ್ತಿಗಾಗಿ ಬಳಕೆಯಾಗುತ್ತದೆ ಹಾಗೂ ಉಳಿದ ಭಾಗ ನಿಮಗೆ ಸಾಕಾಗದೇ ಇದ್ದ ಕಾರಣ, ನೀವು ಮತ್ತೆ ಸಾಲಕ್ಕಾಗಿ ಅರ್ಜಿ ಸಲ್ಲಿಸುತ್ತೀರಿ.

ಹೀಗೇ, ಈ ಚಕ್ರವು ಆರಂಭವಾಗುತ್ತದೆ. ಋಣವನ್ನು ಸರಿಯಾದ ಸಮಯದಲ್ಲಿ ತೀರಿಸದೇ ಇದ್ದರೆ ಅದು  ನಿಮ್ಮನ್ನು ಸಾಲಕ್ಕೆ ತಳ್ಳುತ್ತದೆ.

ನೀವು ಹಿಂದಿನ ಸಾಲಗಳನ್ನು ತೀರಿಸಲು ವಿಫಲರಾಗಿದ್ದು ಹೊಸ ಸಾಲಗಳನ್ನು ಪಡೆಯುತ್ತಾ ಹೋದರೆ, ನೀವು ಈ ಬಲೆಯಲ್ಲಿ ಇನ್ನಷ್ಟು ಸುತ್ತುತ್ತಾ ಹೋಗುತ್ತೀರಿ - ಇದನ್ನು ಸಾಲ ಬಲೆ ಎಂದು ಕರೆಯಲಾಗುತ್ತದೆ.

ಉಳಿತಾಯ ಹಾಗೂ ಹೂಡಿಕೆ ತಂತ್ರಗಳನ್ನು ಹೊಂದಿರುವ ಜೊತೆಗೆ ಆರ್ಥಿಕವಾಗಿ ಸಮರ್ಥರಾಗಲು ಬೇಕಾಗಿರುವ ಇನ್ನೊಂದು ಪ್ರಮುಖ ಮಾನದಂಡವೆಂದರೆ ಸಾಲದ ತಂತ್ರ.

ಸಾಲದ ತಂತ್ರವು ನಿಮ್ಮನ್ನು ಸಾಲಗಳಿಂದ ಹೊರಬರಲು, ನಿಮ್ಮ ಹಣಕಾಸಿನ ನಿರ್ವಹಣೆ ಮಾಡಲು ಹಾಗೂ ಒಂದು ಆರ್ಥಿಕವಾಗಿ ಆರೋಗ್ಯಕರವಾದ ಜೀವನ ನಡೆಸಲು ಸಹಾಯ ಮಾಡುತ್ತದೆ.

ನೀವು ಸಾಲದ ಪೆಡಂಭೂತದ ಬೇಡಿಯಲ್ಲಿ ಸಿಲುಕುವ ಬಗ್ಗೆ ಚಿಂತಿಸಬೇಕಾಗುವುದಿಲ್ಲ. ಆದರೆ ಮೊದಲಿಗೆ, ಸಾಲ ಬಲೆ ಏನು ಎಂಬುವುದನ್ನು ನಾವು ಅರ್ಥಮಾಡಿಕೊಳ್ಳೋಣ.

ಸಾಲ ಬಲೆಯನ್ನು ಅರ್ಥಮಾಡಿಕೊಳ್ಳುವುದು

ನೀವು ನಿಮ್ಮ ಹಿಂದಿನ ಸಾಲಗಳನ್ನು ತೀರಿಸುವುದಕ್ಕಾಗಿ ಅತಿಯಾದ ಸಾಲ ಮಾಡಿದರೆ ಸಾಲ ಬಲೆ ಉಂಟಾಗುತ್ತದೆ.

ಒಮ್ಮೆ  ಈ ಸಾಲವು ನಿಮ್ಮ ನಿಯಂತ್ರಣವನ್ನು ಮೀರಿ ಸುರುಳಿಯಾಗುತ್ತಾ ಹೋಗಿ ನಿಮ್ಮ ಪಾವತಿಯ ಸಾಮರ್ಥ್ಯದಿಂದ ಹೊರಬಿದ್ದರೆ, ಈ ಸಂದರ್ಭದಲ್ಲಿ ನೀವು ಸಾಲಬಲೆಗೆ ಬೀಳುತ್ತೀರಿ.

ನಾವು ಅದರ ಅಳತೆ ಮಾಡುವುದು ಹೇಗೆ? ಸಾಲಬಲೆಯನ್ನು ಸೂಚಿಸುವ ಕೆಲವು ಮಾರ್ಗಗಳಿವೆ.

  1. ಇಎಂಐ (EMI)-ಸಂಬಳ ಅನುಪಾತ (EMI-Salary Ratio): ಇದಕ್ಕಾಗಿ ಒಂದು ಉದಾಹರಣೆಯನ್ನು ನೋಡೋಣ, ನಿಮ್ಮ ಇಎಂಐ ₹10,000 ಆಗಿದೆ ಹಾಗೂ ನಿಮ್ಮ ಕೈಗೆ ಬರುವ ಸಂಬಳ ₹ 20,000 ಆಗಿದೆ ನಿಮ್ಮ ಇಎಂಐ ಅನುಪಾತವು 0.5 ಆಗಿದೆ. ಆರ್ಥಿಕ ತಜ್ಞರ ಪ್ರಕಾರ ಈ ಅನುಪಾತವು 0.3 ರ ಒಳಗಡೆ ಇರಬೇಕು.
  2. ಸಾಲ-ಆಸ್ತಿ ಅನುಪಾತ (Loan-Asset Ratio) : ನಿಮ್ಮ ಸಾಲದ ಬಾಕಿಯು ₹25 ಲಕ್ಷ ಇದೆ ಹಾಗೂ ನೀವು ₹10 ಲಕ್ಷದ ಸಾಲ ಪಡೆದರೆ,ನಿಮ್ಮ ಸಾಲ-ಆಸ್ತಿ ಅನುಪಾತವು 2.5 ಆಗುತ್ತದೆ. ತಜ್ಞರ ಪ್ರಕಾರ ಈ ಅನುಪಾತವನ್ನು 0.5 ಕ್ಕಿಂತ ಕಡಿಮೆ ಇಡಬೇಕಾಗಿದೆ.

ಇಂತಹ ಸಂದರ್ಭದಲ್ಲಿ, ನಿಮ್ಮ ಆಸ್ತಿಯನ್ನು  ಬೆಳೆಸಲು ನೀವು ನಿಮ್ಮ ಆದಾಯವನ್ನು ಹೆಚ್ಚಿಸಲು ಪರ್ಯಾಯವನ್ನು ಹುಡುಕಬೇಕಾಗುತ್ತದೆ ಅಥವಾ ನಿಮ್ಮ ಸಾಲದ ಮೊತ್ತವನ್ನು ಕಡಿಮೆಮಾಡಬೇಕಾಗುತ್ತದೆ ಇಲ್ಲವಾದಲ್ಲಿ ನೀವು ಈ ಸಾಲ ಬಲೆಯ ಸುಳಿಗೆ ಎಳೆಯಲ್ಪಡುತ್ತೀರಿ.

ಸಾಲ ಬಲೆ ಹೇಗೆ ಕೆಲಸ ಮಾಡುತ್ತದೆ? 

ನೀವು ಸಾಲ ನೀಡುವವರಿಂದ ಸಾಲ ಪಡೆಯುವ ಹಂತದಲ್ಲಿ, ಎರಡು ಅಂಶಗಳು ಗಣನೆಗೆ ಬರುತ್ತವೆ - ಮೊದಲಿನದು ಮೂಲ ಸಾಲದ ಮೊತ್ತ(ನಿಮಗೆ ಸಿಗುವಂತಹ ಮೊತ್ತ), ಎರಡನೆಯದು ಬಡ್ಡಿ(ಸಾಲದ ಮೂಲ ಮೊತ್ತದ ಮೇಲೆ ಬ್ಯಾಂಕ್ ವಿಧಿಸುವ ಮೊತ್ತ).

ನಿಮ್ಮ ಮೂಲಮೊತ್ತವು ಕಡಿಮೆಯಾಗಲು ಆರಂಭಿಸಿದಾಗ ನಿಮ್ಮ ಸಾಲ ತೀರಿಸುವ ಸಾಮರ್ಥ್ಯವು ಹೆಚ್ಚಾಗುತ್ತದೆ. ಆದರೂ, ಇಲ್ಲೊಂದು ಅಡಚಣೆಯಿದೆ.

ನೀವು ಸಾಲವನ್ನು ನಿಯಮಿತವಾಗಿ ಮರುಪಾವತಿಸುವ ಪ್ರತೀಸಲವೂ, ನೀವು ಮೂಲ ಮೊತ್ತ ಹಾಗೂ ಬಡ್ಡಿ ಎರಡರ ಕಂತನ್ನೂ ಕಟ್ಟುತ್ತಿರುತ್ತೀರಿ.

ಇದರ ಆಧಾರವು ಹೆಚ್ಚಿನ ಸಾಲಗಳು ಹೊಂದಿರುವ ಕ್ರಮೇಣ ತೀರಿಕೆಯ ರಚನೆಯಾಗಿದೆ.

ಇದು ಸೂಚಿಸುವುದೇನೆಂದರೆ, ನಿಮ್ಮ ಸಾಲವು ಸ್ಥಿರ ಕಂತುಗಳ ಒಂದು ಸರಣಿಯಲ್ಲಿ ಪಾವತಿ ಆಗತಕ್ಕದ್ದು, ಹಾಗೂ ನೀವು ನಿಮ್ಮ ಸಾಲದ ಪ್ರತಿ ಪಾವತಿಸುವ ಪ್ರತೀ ಕಂತು ಮೂಲಮೊತ್ತ ಹಾಗೂ ಬಡ್ಡಿ ಎರಡಕ್ಕೂ ಅನ್ವಯಿಸುತ್ತದೆ.

ನೀವು ಕಂತನ್ನು ಪಾವತಿ ಮಾಡಲು ಆಗದೆ ಇರುವ ಸಂದರ್ಭದಲ್ಲಿ, ನೀವು ಬಹುತೇಕವಾಗಿ ಬಾಧ್ಯತೆಯ ಬಲೆ ಸಿಲುಕುತ್ತೀರಿ. ಹೇಗೆ?

ಮೂಲ ಮೊತ್ತವು ಕಡಿಮೆಯಾಗುವುದಿಲ್ಲ, ಬಡ್ಡಿಯು ಬೆಳೆಯುತ್ತಾ ಹೋಗುತ್ತದೆ, ಹಾಗೂ ಇದರಿಂದ ನಿಮ್ಮ ಸಾಲವನ್ನು ನಿಭಾಯಿಸಲು ನಿಮಗೆ ಕಷ್ಟವಾಗುತ್ತದೆ.

ಸಾಲದ ಬಲೆಗೆ ಕಾರಣವೇನು?

ನಿಮ್ಮನ್ನು ಸುಳಿಗೆ ಸಿಲುಕಿಸುವ ಕಾರಣಗಳು ಇಲ್ಲಿವೆ. ಇವುಗಳಲ್ಲಿ ಯವುದಾದರೂ ಅಂಶ ನಿಮಗೆ ಪರಿಚಿತ ಎನಿಸಿದರೆ, ನಿಮ್ಮ ಖರ್ಚುಗಳನ್ನು ನಿಯಂತ್ರಿಸುವ ಸಮಯ ಬಂದಾಗಿದೆ.

  • ನೀವು ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿಯನ್ನು ಒಮ್ಮೆ ಅಥವಾ ಒಂದಕ್ಕಿಂತ್ತಲೂ ಹೆಚ್ಚು ಸಲ ಮುಗಿಸಿದ್ದೀರಿ.
  • ನಿಮ್ಮ ಸ್ಥಿರ ವೆಚ್ಚಗಳು ನಿಮ್ಮ ಆದಾಯದ 70% ಕ್ಕಿಂತಲೂ ಹೆಚ್ಚಾಗಿವೆ
  • ನಿಮಗೆ ಉಳಿತಾಯಕ್ಕಾಗಿ ಹಣವನ್ನು ಬದಿಗಿಡಲು ಸಾಧ್ಯವಾಗುತ್ತಿಲ್ಲ
  • ನಿಮ್ಮ ಬಳಿ ಹಲವು ಸಾಲಗಳಿವೆ
  • ನಿಮ್ಮ ಇಎಂಐ(EMI) ಪಾವತಿಗಳು ನಿಮ್ಮ ಆದಾಯದ 50% ಕ್ಕಿಂತಲೂ ಹೆಚ್ಚಾಗಿವೆ.
  • ನಿಮ್ಮ ಸಾಲದ ಅರ್ಜಿಯು ತಿರಸ್ಕೃತಗೊಂಡಿದೆ.

  1. ನೀವು ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿಯನ್ನು ಮುಗಿಸಿದ್ದೀರಿ(You have exhausted your credit card limit): ನಿಮ್ಮ ಕ್ರೆಡಿಟ್ ಕಾರ್ಡ್ ನಿಂದ ಎಡ ಹಾಗೂ ಬಲ ಸ್ವೈಪ್ ಮಾಡಿ ಬಯಸಿದ್ದನ್ನು ಖರೀದಿಸುವುದು ತುಂಬಾ ಸುಲಭ. ಸ್ವಲ್ಪ ಸಮಯದ ವರೆಗೆ ಅದರ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕೆ ಇಲ್ಲ. ಎಂದಾದರೂ, ನೀವು ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿಯನ್ನು ಮುಗಿಸಿದರೆ, ನೀವು ಆರ್ಥಿಕವಾಗಿ  ಬಲಿಷ್ಠವಾಗಿಲ್ಲ ಹಾಗೂ ನಿಮ್ಮ ಹಣಕಾಸಿನ ಬಗ್ಗೆ ನೀವು ಪುನಃ  ಯೋಚಿಸಬೇಕಾಗಿದೆ ಎಂದು ನಿಮಗೆ ಅರಿವು ಮೂಡಬೇಕು. ನೀವು ಸಾಲಬಲೆಗೆ ಬಿದ್ದಿರಬಹುದು - ಎಚ್ಚರಿಕೆ!
  2. ನಿಮ್ಮ ಇಎಂಐ ನಿಮ್ಮ ಆದಾಯದ 50% ಅನ್ನು ಮೀರುತ್ತದೆ(Your EMIs exceed 50% of your income):ಹಣ ಹಾಗೂ ಸಾಲಗಳು ಸುಲಭವಾಗಿ ದೊರೆಯುವುದರಿಂದ ಹೆಚ್ಚಿನ ಜನರು ಅತಿಯಾದ ಖರ್ಚುಗಳನ್ನು ಮಾಡುತ್ತಾರೆ. ಅವರು ಆಕರ್ಷಕ ಸೇಲ್ ಗಳಿಗೆ, ಭಾರೀ ರಿಯಾಯಿತಿಗಳಿಗೆ ಹಾಗೂ ಕೊಡುಗೆಗಳಿಗೆ ಮಾರು ಹೋಗಿ ಇಎಂಐ ಸಹಾಯದಿಂದ ದುಬಾರಿ ವಸ್ತುಗಳನ್ನು ಖರೀದಿಸುತ್ತೀರಿ. ನೀವು ಹೀಗೇ ನೋಡಿದಾಗ ಈ ಇಎಂಐಗಳು ಹೆಚ್ಚು ಮೊತ್ತದ ಹಾಗೆ ಕಾಣದು ಆದರೆ ಒಟ್ಟುಗೂಡಿಸಿದಾಗ ಇದೊಂದು ಗಣನೀಯ ಮೊತ್ತವಾಗುತ್ತದೆ ಹಾಗೂ ನಿಮಗೆ ಅಗತ್ಯವಿರುವ ವಸ್ತುಗಳ ಮೇಲೆ ಖರ್ಚು ಮಾಡಲು ಕಡಿಮೆ ಹಣವಿರುವಂತೆ ಮಾಡುತ್ತದೆ. ನಿಮ್ಮ ಇಎಂಐ ನಿಮ್ಮ ಆದಾಯಾದ 50% ತಲುಪುತ್ತಿದೆ ಎಂದು ನೀವು ನೋಡಿದಾಗ, ಅದೊಂದು ಕೆಂಪು ಧ್ವಜವಾಗಿದೆ- ನೀವು ಸಾಲಬಲೆಯ ಬಲಿಯಾಗಿದೀರಿ ಎಂಬ ಎಚ್ಚರಿಕೆಯ ಘಂಟೆಯಾಗಿದೆ.
  3. ನಿಮ್ಮ ಸ್ಥಿರ ಖರ್ಚುಗಳು ನಿಮ್ಮ ಆದಾಯದ 70% ಅನ್ನು ಮೀರಿದೆ(Your fixed expenses are more than 70% of your income) : ಇಎಂಐ ಪ್ರಮುಖ ಆರ್ಥಿಕ ಬದ್ಧತೆಯೇನೂ ಅಲ್ಲ; ನೀವು ಮಾಸಿಕವಾಗಿ ಇತರ ಕೆಲ ಸ್ಥಿರ ವೆಚ್ಚಗಳನ್ನು  ನಿಭಾಯಿಸಬೇಕಾಗಿರುತ್ತದೆ. ಅಂದರೆ ಶಾಲಾ ಶುಲ್ಕ, ಗ್ಯಾಸ್ ಅಥವಾ ವಿದ್ಯುತ್ ಬಿಲ್, ಬಾಡಿಗೆ ಇತ್ಯಾದಿ. ಒಂದು ಪರಿಪೂರ್ಣ ಜಗತ್ತಿನಲ್ಲಿ, ಅಗತ್ಯಗಳ ಮೇಲೆ ನೀವು ಖರ್ಚು ಮಾಡುವ ಸ್ಥಿರ ಮೊತ್ತವು ನಿಮ್ಮ ಆದಾಯದ ಅರ್ಧಕ್ಕಿಂತ ಹೆಚ್ಚಿರಬಾರದು; ಅದು ನಿಮ್ಮ ಆದಾಯದ 70% ಅನ್ನೂ ಮೀರಿದೆ ಎಂದರೆ, ಇದೊಂದು ಕೆಂಪು ಧ್ವಜವಾಗಿದ್ದು, ನೀವು ನಿಧಾನವಾಗಿ ಸಾಲ ಬಲೆ ಅಥವಾ ಸುಳಿಗೆ ಸಿಲುಕುತ್ತಿದ್ದೀರಿ ಎಂದು ಅರ್ಥ. ತಜ್ಞರು ಹೇಳುವುದೇನೆಂದರೆ ವಿವಿಧ ವೆಚ್ಚಗಳಿಗೆ ನೀವು ನಿಮ್ಮ ಆದಾಯದ 30% ನಷ್ಟೇ ಖರ್ಚುಮಾಡಬೇಕು ಹಾಗೂ ನಿಮ್ಮ ಆರ್ಥಿಕ ಗುರಿಗಳನ್ನು ತಲುಪಬೇಕು.
  4. ನಿಮ್ಮ ಬಳಿ ಹಲವಾರು ಸಾಲಗಳಿವೆ(You have too many loans) : ನೀವು ಹಲವು ಕಡೆಯಿಂದ ಸಾಲವನ್ನು ಪಡೆದಿದ್ದು, ತಿಂಗಳಿನ ವಿವಿಧ ದಿನಗಳಲ್ಲಿ ಅದರ ಪಾವತಿ ಮಾಡುತ್ತಿದ್ದರೆ, ಇದು ಅತ್ಯಂತ ಆಯಾಸಕರವಾಗುತ್ತದೆ. ಅಷ್ಟೇ ಅಲ್ಲದೆ, ಇದರಲ್ಲಿ ಪಾವತಿ ತಪ್ಪಿ ಹೋಗುವ ಅಪಾಯವೂ ಇರುತ್ತದೆ. ಇದರ ಜೊತೆ, ಹಲವು ಸಾಲಗಳನ್ನು ತೀರಿಸುವುದರಿಂದ ನೀವು ಹೆಚ್ಚು ಹಣವನ್ನು ಕಳೆದುಕೊಳ್ಳುತ್ತೀರಿ.
  5. ಉಳಿತಾಯಕ್ಕಾಗಿ ಹಣವನ್ನು ಬದಿಗಿಡಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲ(You cannot afford to put aside money for savings) : ನೀವು ಪ್ರತೀ ತಿಂಗಳು ಹಣವನ್ನು ಉಳಿಸಲು ಸಾಧ್ಯವಾಗದೇ ಇರಲು ಕಾರಣ ನಿಮ್ಮ ಭಾರೀ ಸಾಲದ ಚಕ್ರವಾಗಿರಬಹುದು. ನಿಮ್ಮ ಸಾಲ ಹಾಗೂ ಸ್ಥಿರ ಖರ್ಚುಗಳ ಮಧ್ಯೆ ಸಮತೋಲನವಿರಬೇಕು. ಇದು ನೀವು ಸಾಲಕ್ಕೆ ಸಿಲುಕುವ ಮತ್ತೊಂದು ಸಂಕೇತವಾಗಿರಬಹುದು.
  6. ನಿಮ್ಮ ಸಾಲದ ಅರ್ಜಿ ತಿರಸ್ಕೃತಗೊಂಡಿದೆ(Your loan application is rejected) : ನಿಮ್ಮ ಸಾಲದ ಅರ್ಜಿಯು ತಿರಸ್ಕೃತವಾಗಿದ್ದರೆ, ಇದು ಅಂತಿಮ ಕೆಂಪು ಧ್ವಜವಾಗುತ್ತದೆ ನೀವು ಸಾಲ ಬಲೆಗೆ ಬಿದ್ದಿದ್ದೀರಿ ಹಾಗೂ ಆದಷ್ಟು ಬೇಗ ಇದರಿಂದ ಹೊರಬರಬೇಕೆಂದು ನೀವು ಅರಿತುಕೊಳ್ಳಲು. ನೀವು ಸಾಲಕ್ಕೆ ಅರ್ಜಿ ಸಲ್ಲಿಸಿದಾಗ, ನೀವು ಆ ಸಾಲಕ್ಕೆ ಅರ್ಹರೇ ಇಲ್ಲವೇ ಎಂದು ತಿಳಿಯಲು ಹಣಕಾಸು ಸಂಸ್ಥೆಗಳು ಹಾಗೂ ಬ್ಯಾಂಕ್ ಗಳು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸುತ್ತವೆ.ಅವರು ನಿಮ್ಮ CIBIL ಸ್ಕೋರ್ ಅನ್ನು ಪರಿಶೀಲಿಸುತ್ತಾರೆ ಹಾಗೂ ನೀವು ಈಗಾಗಲೇ ಒಂದಡಿ ಸಾಲದಲ್ಲಿ ಮುಳುಗಿದ್ದು ಇನ್ನೊಂದು ಸಾಲದ ಜವಾಬ್ದಾರಿಯನ್ನು ಹೊರಲು ಅಸಮರ್ಥರಾಗಿದ್ದರೆ, ನಿಮಗೆ ಮತ್ತಷ್ಟು ಸಾಲವನ್ನು ನೀಡಲಾಗುವುದಿಲ್ಲ. ಅವರು ಹಾಗೆ ಮಾಡಿದರೂ, ಅದರ ಬಡ್ಡಿ ದರ ಇನ್ನೂ ಹೆಚ್ಚಿದ್ದು, ಇದು ನಿಮ್ಮನ್ನು ನಿಧಾನವಾಗಿ, ಹಿಂತಿರುಗಲು ಸಾಧ್ಯವಾಗದಂತಹ, ಸಾಲದ ಸುಳಿಗೆ ತಳ್ಳುತ್ತದೆ. 

ಸಾಲ ಬಲೆಯಿಂದ ಹೊರಬರುವುದು ಹೇಗೆ?

  1. ಅದನ್ನು ವ್ಯಾಖ್ಯಾನಿಸುವ ಸಮಸ್ಯೆಯನ್ನು ಸ್ವೀಕರಿಸಿ(Acknowledge the problem that defines it) : ನಿಮ್ಮನ್ನು ಕೆಟ್ಟ ಸಾಲದ ಪರಿಸ್ಥಿತಿಯಿಂದ ಹೊರಬರಲು ಸಹಾಯ ಮಾಡುವ ಕೆಲವು ಮಾರ್ಗಗಳು ಇಲ್ಲಿವೆ, ನೀವು ಇದಕ್ಕೆ ಸಿಲುಕ್ಕಿದ್ದಲ್ಲಿ:

ಇದನ್ನು ಸುಧಾರಿಸಲು ನೀವೇನು ಮಾಡಬಹುದು?

  • ಎಲ್ಲಕ್ಕಿಂತ ಮೊದಲು ನಿಮಗೆ ಸಾಲಬಾಧೆಯಿದೆ ಎಂದು ನೀವು ಒಪ್ಪಿಕೊಳ್ಳಬೇಕಾಗಿದೆ.
  • ನಿಮ್ಮನ್ನು ಸಾಲಬಲೆಗೆ ಸಿಲುಕಿಸುತ್ತಿರುವ ಕಾರಣಗಳನ್ನು ಹಾಗೂ ಕ್ಷೇತ್ರಗಳನ್ನು ವಿಷ್ಲೇಶಿಸಿ ನಿರ್ಧರಿಸಿ.
  • ಈ ಕ್ಷೇತ್ರಗಳನ್ನು ನಿಯಂತ್ರಿಸಲು ಯೋಜನೆಯನ್ನು ರೂಪಿಸಿ
  • ಒಂದು ಬಜೆಟ್ ಅನ್ನು  ಯೋಜಿಸಿ ನಿಮ್ಮ ಅಗತ್ಯಗಳನ್ನು ಹಾಗೂ ಖರ್ಚುಗಳನ್ನು ಗುರುತಿಸಿ.

  1. ಒಂದು ಬಜೆಟ್ ಅನ್ನು ರೂಪಿಸಿ ನಿಮ್ಮ ಅಗತ್ಯಗಳಿಗೆ ಆದ್ಯತೆ ನೀಡಿ (Make a budget and prioritise your needs) : ಒಮ್ಮೆ ಕೂಲಂಕುಷವಾಗಿ ನೀವು ನಿಮ್ಮ ಬಜೆಟ್ ಹಾಗೂ ಸಾಲದ ಪರಿಸ್ಥಿತಿಯನ್ನು ವಿಶ್ಲೇಷಿಸಿದ ನಂತರ ನೀವು ಅತೀ ಮುಖ್ಯವಾದ, ಅಷ್ಟು ಮುಖ್ಯವಲ್ಲದ ಹಾಗೂ ಅನಗತ್ಯ ಖರ್ಚುಗಳನ್ನು ಗುರುತಿಸಬಹುದು.

  • ಒಂದು ಆದ್ಯತೆ ಪಟ್ಟಿಯನ್ನು ತಯಾರಿಸಿ
  • ಸಾಲವನ್ನು ಮರುಪಾವತಿಸುವುದು ನಿಮ್ಮ ಮೊದಲ ಆದ್ಯತೆಯಾಗಿರಬೇಕು ಹಾಗೂ ಇದನ್ನು ಮಾಡುವುದರಿಂದ ನಿಮ್ಮ ಆರ್ಥಿಕ ಸ್ಥಿತಿಯ ಮೇಲೆ ಶಾಶ್ವತ ಸಕಾರಾತ್ಮಕ ಪರಿಣಾಮವಾಗುವುದು.
  • ನೀವು ಪುನಃ ಆರ್ಥಿಕವಾಗಿ ಆರೋಗ್ಯಕರ ಹಾಗೂ ಸಮರ್ಥರಾಗುವವರೆಗೆ ನಿಮ್ಮ ಅನಗತ್ಯ ಹಾಗೂ ಅಷ್ಟು ಮುಖ್ಯವಲ್ಲದ ಖರ್ಚುಗಳನ್ನು ಕಡಿಮೆ ಮಾಡಿ.

3.ಸಾಲ ಬಲವರ್ಧನೆ ಸಾಲದ ಆಯ್ಕೆ ಮಾಡಿ(You can choose for a debt consolidation loan) : ನೀವು ತಿಂಗಳಿನ ವಿವಿಧ ಸಮಯಗಳಲ್ಲಿ ವಿವಿಧ ಸಾಲಗಳನ್ನು ತೀರಿಸುತ್ತಾ ಹೋದರೆ, ನೀವು ಒಂದು ಕಡಿಮೆ ಬಡ್ಡಿದರದ ಸಾಲ ಅಥವಾ ಸಾಲ ಬಲವರ್ಧನೆ ಸಾಲವನ್ನು ಪಡೆದು ನಿಮ್ಮ ಸಾಲವನ್ನು ಒಟ್ಟುಗೂಡಿಸಲು ಪ್ರಯತ್ನಿಸಬಹುದು. ಒಮ್ಮೆ ನೀವು ಇದನ್ನು ಪಡೆದ ನಂತರ ನೀವು ಪ್ರತೀ ಕೇವಲ ಒಂದು ಸಾಲವನ್ನು ಪಾವತಿಸುವ ಬಗ್ಗೆ ಯೋಚಿಸಬಹುದು.

ಇದು ನಿಮಗೆ ಸಹಾಯ ಮಾಡುತ್ತದೆ :

  • ಬಡ್ಡಿಯ ಮೇಲೆ ಹಣ ಉಳಿಸಲು
  • ಸರಿಯಾದ ಸಮಯದಲ್ಲಿ ಸೂಕ್ತ ಇಎಂಐ ಪಾವತಿ ಮಾಡಲು
  • ಶೀಘ್ರವಾಗಿ ಸಾಲ ತೀರಿಸಲು
  • ನಿಮ್ಮ ಆರ್ಥಿಕ ಸಾಮರ್ಥ್ಯವನ್ನು ಪುನಃ ಪಡೆಯಲು

4. ನಿಮ್ಮ ಪಾವತಿಗಳನ್ನು ಸ್ವಯಂಚಾಲಿತವಾಗಿಸಲು(Automate the payments) : ಒಬ್ಬ ಸಾಲಗಾರನಾಗಿ, ಇಎಂಐ ಮೂಲಕ ನಿಮ್ಮ ಸಾಲವನ್ನು ಸಮಯದಲ್ಲಿ ಪಾವತಿಸುವುದು ನಿಮ್ಮ ಕರ್ತವ್ಯವಾಗುತ್ತದೆ, ಇದು ನಿಮ್ಮ ಸಾಲಕೊಡುವವರ ಪ್ರತಿ ನಿಮಗಿರುವ ಬಾಧ್ಯತೆಯಾಗಿರುತ್ತದೆ. ನಿಮ್ಮ ಮರುಪಾವತಿಯಲ್ಲಿ ನೀವು ಸ್ಥಿರವಾಗಿರುವಿರಿ ಎಂದು ಖಚಿತಪಡಿಸಲು ನೀವು ನಿಮ್ಮ ಪಾವತಿಗಳನ್ನು ಸ್ವಯಂಚಾಲಿತವಾಗಿಸಬಹುದು. ಇದಕ್ಕಾಗಿ ಬ್ಯಾಂಕಿನಿಂದ ECS ಆದೇಶಗಳನ್ನು ಸೆಟ್ ಅಪ್ ಮಾಡಿಸುವುದರಿಂದ ಹಲವು ಪ್ರಾಯೋಜನಗಳಿವೆ:

  • ನಿಯಮಿತ ಸಮಯದಲ್ಲಿ ಪಾವತಿ ಮಾಡಬಹುದು
  • ಕ್ರೆಡಿಟ್ ಸ್ಕೋರ್ ಅನ್ನು ಸುಧಾರಿಸುತ್ತದೆ
  • ಸಮಯದಲ್ಲಿ ಸಾಲ ತೀರಿಸುವುದರಿಂದ, ನಿಮ್ಮ ಬಡ್ಡಿಯ, ಹಾಗೂ ಇದರ ಜೊತೆ ದಂಡ ಹಾಗೂ ತಡ ಶುಲ್ಕಗಳ, ಉಳಿತಾಯವೂ ಆಗುವ ಕಾರಣ, ಅದು ಶೀಘ್ರವಾಗಿ ಕಡಿಮೆಯಾಗುತ್ತದೆ.

5. ಹೆಚ್ಚು ಸಾಲ ಪಡೆಯುವುದನ್ನು ತಪ್ಪಿಸಿ(Avoid taking on more debt) : ನೀವು ನಿಮ್ಮ ಸಾಮರ್ಥ್ಯದ ತನಕ ಸಾಲವನ್ನು ಈಗಾಗಲೇ ಪಡೆದಿದ್ದರೆ ಇನ್ನೂ ಪಡೆಯುವುದನ್ನು ನಿಲ್ಲಿಸಬೇಕು. 40% ಕ್ಕಿಂತ ಕಡಿಮೆ ಅನುಪಾತದ ಪಾಲನೆ ಮಾಡುವುದು ನಿಮ್ಮ ನಿಯಮವಾಗಿರಬೇಕು. ಇದನ್ನು ನೀವು ಪಾಲಿಸದಿದ್ದರೆ, ನೀವು ನಿಮ್ಮ ಆರ್ಥಿಕತೆ ಮೇಲೆ ಒತ್ತಡವನ್ನು ಹೇರುತ್ತೀರಿ. ನಿಮ್ಮ ಎಲ್ಲಾ ಹಣವನ್ನು ಕಳೆದುಕೊಳ್ಳಲು ಕಾರಣವಾಗಬಲ್ಲ ಆರ್ಥಿಕ ದುರಂತವನ್ನು ನೀವು ತಪ್ಪಿಸಬಹುದು.

6. ನಿಮ್ಮ ಆದಾಯವನ್ನು ಹೆಚ್ಚಿಸುವ ವಿಧಾನಗಳನ್ನು ಹುಡುಕಿ(Look for ways to increase your income) : ಸಾಲದಿಂದ ಹೊರಬರಲು ಇರುವ ಏಕೈಕ ಔಪಚಾರಿಕ ಉಪಾಯವೆಂದರೆ ಹೆಚ್ಚು ಆದಾಯವನ್ನು ಸಂಗ್ರಹಿಸುವುದು. ಹೆಚ್ಚು ಆದಾಯದಿಂದ ಆರ್ಥಿಕ ಭದ್ರತೆಯು ಹೆಚ್ಚಿ ನಿಮ್ಮ ಸಾಲವು ಶೀಘ್ರವಾಗಿ ಹಾಗೂ ಸರಳವಾಗಿ ತೀರುತ್ತದೆ. ನೀವು ಫ್ರೀಲ್ಯಾನ್ಸಿಂಗ್ ಕೆಲಸಗಳನ್ನು ಮಾಡಬಹುದು ಅಥವಾ ನಿಮ್ಮ ಕೌಶಲ್ಯ, ಜ್ಞಾನ ಹಾಗೂ ಅನುಭವಕ್ಕೆ ಸರಿಹೊಂದುವ ಎರಡನೇ ನೌಕರಿಯನ್ನೂ ಪಡೆಯಬಹುದು.

7.ಮೊದಲಿಗೆ ದುಬಾರಿ ಸಾಲಗಳನ್ನು ತೀರಿಸಿ(Pay off the expensive loans first) : ನೀವು ಸಾಲ ಬಲವರ್ಧನೆ ಮಾಡಿಸದಿದ್ದರೆ, ನಿಮ್ಮ ಸಾಲಗಳನ್ನು ಪ್ರತ್ಯೇಕವಾಗಿಯೂ ತೀರಿಸುವ ಗೊಂದಲಕ್ಕೆ ಕೈಹಾಕಬಹುದು (ಒಂದು ಸಮಯದಲ್ಲಿ ಒಂದೇ ಸಾಲವನ್ನು ನಿಭಾಯಿಸಲು ಮರೆಯಬೇಡಿ) ರೂಪಿಸಿ, ವಿಶ್ಲೇಷಿಸಿ ಅತ್ಯಂತ ಭಾರೀ ಮೊತ್ತದ ಸಾಲವನ್ನು ಮೊದಲು ಪಾವತಿಸಿ.

8. ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಅಗ್ಗಾಗ್ಗೆ ಪರಿಶೀಲಿಸುತ್ತಿರಿ(Check your credit score frequently) : ಒಬ್ಬ ಒಳ್ಳೆ ಸಾಲಗಾರನ ಗುರುತೇನು? ಕ್ರೆಡಿಟ್ ಸ್ಕೋರ್. ನಿಮ್ಮ ಕ್ರೆಡಿಟ್ ಸ್ಕೋರ್ 750 ಕ್ಕಿಂತ ಹೆಚ್ಚಿದ್ದರೆ, ಅಭಿನಂದನೆಗಳು! ನೀವು ಉನ್ನತ  ಸಾಲ ನೀಡುವಂತವರು ಅರಸುತ್ತಿರುವ ಪ್ರೀಮಿಯಂ ಜನರಲ್ಲಿ ಒಬ್ಬರಾಗಿದ್ದೀರಿ. ನಿಮಗೆ ಉತ್ತಮ ಬಡ್ಡಿ ದರ, ಉತ್ತಮ ಸಾಲ ತಂಡ ಹಾಗೂ ಒಂದು ಆರೋಗ್ಯಕರ ಆರ್ಥಿಕ ಭವಿಷ್ಯ ದೊರೆಯುತ್ತದೆ. ನೀವು ಎಂದಿಗೂ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಗಮನವಿಟ್ಟಿರಬೇಕು. ನೀವು ಒಂದು ಸಾಲದ ಖಾತೆಯ ಮೇಲೆ ಪ್ರತೀ 3 ತಿಂಗಳುಗಳಿಗೊಮ್ಮೆ ಕ್ರೆಡಿಟ್ ವರದಿಯನ್ನು ಕೇಳಿ ಪಡೆಯಬಹುದು. ಅದರಲ್ಲಿ ದಾಖಲೆಗಳು ಸರಿಯಾಗಿ ತುಂಬಿಸಲಾಗಿದೆಯೇ ಎಂದು ಪರಿಶೀಲಿಸಬಹುದು.

9. ವೃತ್ತಿಪರ ನೆರವನ್ನು ಪಡೆಯಿರಿ(Get help professionally) : ಕೆಲವೊಮ್ಮೆ ನಿಮ್ಮಷ್ಟಕ್ಕೇ ಒಂದು ಸಾಲ ಬಲೆಯಿಂದ ಹೊರಬರುವುದು ಕಷ್ಟಕರವೆನಿಸಬಹುದು ಎಂದು ನಮಗೆ ಅರ್ಥವಾಗುತ್ತದೆ. ಆದರೆ ಚಿಂತಿಸಬೇಡಿ ನಿಮ್ಮ ಜೀವನವನ್ನು ಸರಳವಾಗಿಸಲು ವೃತ್ತಿಪರರು ಇದ್ದಾರೆ. ನಿಮಗೆ ಯಾವತ್ತಾದರೂ ಆರ್ಥಿಕವಾಗಿ ಕಳೆದುಹೋದ ಹಾಗೆ ಅನಿಸಿದರೆ, ಆರ್ಥಿಕ ತಜ್ಞರನ್ನು ಸಮಾಲೋಚಿಸುವುದು ಉತ್ತಮ ನಿರ್ಧಾರವಾಗಿರುತ್ತದೆ. ನಿಮಗೆ ಸಮಾಲೋಚನೆ ಒದಗಿಸಿ, ನಿಮ್ಮ ಬಜೆಟ್ ಅನ್ನು ನಿಮಗೆ ಅರ್ಥಮಾಡಿಸಿ ನಿಮ್ಮನ್ನು ಅತೀಯಾಗಿ ಖರ್ಚು ಮಾಡದಂತೆ ತಡೆಯುವ ಕೆಲ ಆರ್ಥಿಕ ತಜ್ಞರು ಇದ್ದಾರೆ. ಕೆಲ ವೃತ್ತಿಪರರು ನಿಮಗೆ ಸಾಲ ನೀಡಿದವರ ಜೊತೆ ನಿಮ್ಮ ಪರವಾಗಿ ಒಪ್ಪಂದ ಮಾಡಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಸಾಲದ ನಿಯಮಗಳನ್ನು ಬದಲಾಯಿಸುವಂತಹ ಸಹಾಯವನ್ನೂ ಮಾಡುತ್ತಾರೆ.

ಸಾಲ ಬಲವರ್ಧನೆ - ನಿಮ್ಮ ಸಾಲಬಲೆಯಿಂದ ಹೊರಬರಲು ಒಂದು ಜಾಣ್ಮೆಯ ಉಪಾಯ!

ನಿಮ್ಮ ಆರ್ಥಿಕ ಆರೋಗ್ಯವನ್ನು ಎ+ ಆಗಿರಿಸಲು ನಾವು ನಿಮಗಾಗಿ ಉತ್ತಮ ಮಾರ್ಗವನ್ನು ಒದಗಿಸುತ್ತೇವೆ. ನೀವು ಹಲವಾರು ಅಧಿಕ ಬಡ್ಡಿ ಇರುವ ಸಾಲಗಳನ್ನು ಹಾಗೂ ಭಾರೀ ಕ್ರೆಡಿಟ್ ಕಾರ್ಡ್ ಬಾಕಿಗಳನ್ನು ಹೊತ್ತು ತಿರುಗುತ್ತಿದ್ದರೆ, ನೀವು ನಿಧಾನವಾಗಿ ಒಂದು ಆರ್ಥಿಕ ಗೊಂದಲವನ್ನು ಸೃಷ್ಟಿಸುತ್ತಿದ್ದೀರಿ.

ನೀವು ಈ ಗಾದೆಯನ್ನು ಕೇಳಿದ್ದೀರಾ, ‘ಹಲವು ಅಡಿಗೆಯವರು ಸೇರಿ ಸಾರನ್ನು ಕೆಡಿಸಿದರು’ ಎಂದು? ಅಂತೆಯೇ, ಸಾಲಮುಕ್ತವಾಗಲು ಒಂದು ಜಾಣ್ಮೆಯ ಉಪಾಯವೆಂದರೆ ಕಡಿಮೆ ಬಡ್ಡಿಯಿರುವ ವಯಕ್ತಿಕ ಸಾಲವನ್ನು ಪಡೆಯುವುದು.

ಈ ವಯಕ್ತಿಕ ಸಾಲವು ನಿಮ್ಮ ಎಲ್ಲಾ ಬಾಕಿಗಳನ್ನು ತೀರಿಸಿ ನಿಮ್ಮ ಬಹು ಪಾವತಿಗಳನ್ನು ನಿಮ್ಮ ಬಲವರ್ಧನೆಯ ವಯಕ್ತಿಕ ಸಾಲಕ್ಕಾಗಿ ಮಾಡುವ ಏಕೈಕ ಮಾಸಿಕ ಪಾವತಿಯಾಗಿ ಬದಲಾಯಿಸುತ್ತದೆ.

ಸಾಲ ಬಲವರ್ಧನೆ ಸಾಲ ತೆಗೆದುಕೊಳ್ಳುವುದು ಒಳ್ಳೆಯ ನಿರ್ಧಾರ ಏಕೆ ಆಗಿದೆ?

  • ಸಾಲ ಬಲವರ್ಧನೆ ಸಾಲವು ಕಡಿಮೆ ಬಡ್ಡಿ ದರವನ್ನು ಹೊಂದಿದ್ದು, ನಿಮ್ಮ ಮಾಸಿಕ ಪಾವತಿಯನ್ನು ಕಡಿಮೆ ಮಾಡಿ ಬೇಗನೇ ಸಾಲ ತೀರಿಸಲು ಸಹಾಯ ಮಾಡುತ್ತದೆ.
  • ಇದು ನಿಮಗೆ ಹೆಚ್ಚಿನ ಅರ್ಥಿಕ ಸ್ವಾತಂತ್ರ್ಯವನ್ನು ನೀಡಿ ನಿಮ್ಮ ಮಾಸಿಕ ಖರ್ಚುಗಳನ್ನು ಸೂಕ್ತವಾಗಿ ನಿಭಾಯಿಸುವಂತೆ ಮಾಡುತ್ತದೆ.
  • ಹಲವಾರು ಸಾಲದ ಇಎಂಐ ಗಳ ಬದಲು ನೀವು ಒಂದೇ ಮಾಸಿಕೆ ಪಾವತಿ ಮಾಡಬೇಕಾಗಿರುವುದರಿಂದ, ನಿಮ್ಮ ಪಾವತಿಗಳು ಕೈತಪ್ಪುವ ಸಂಭಾವನೆಗಳನ್ನು ಇಲ್ಲವಾಗಿಸಿ, ತಡ ಶುಲ್ಕ ಹಾಗೂ ಹೆಚ್ಚಿನ ಬಡ್ಡಿ ದರವನ್ನು ತಪ್ಪಿಸುತ್ತದೆ.
  • ಇದು ಸಮಯಕ್ಕೆ ಸರಿಯಾದ ಪಾವತಿಗಳನ್ನು ಖಚಿತಪಡಿಸಿ, ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಸುಧಾರಿಸಿ ಭವಿಷ್ಯದ ಸಾಲಗಳಿಗಾಗಿ ನಿಮ್ಮ ಸಾಲದ ಅರ್ಹತೆಯನ್ನು ಹೆಚ್ಚಿಸುತ್ತದೆ.

Subscribe to our newsletter
Thank you! Your submission has been received!
Oops! Something went wrong while submitting the form.