Buy Gold
Sell Gold
Daily Savings
Round-Off
Digital Gold
Instant Loan
Nek Jewellery
ಇದರ ಬೆಳೆಯುತ್ತಿರುವ ಜನಪ್ರಿಯತೆಯೊಂದಿಗೆ, ಡಿಜಿಟಲ್ ಗೋಲ್ಡ್ ನ ಬಗ್ಗೆ ಹಲವು ಮಿಥ್ಯಗಳೂ ಹರಿದಾಡುತ್ತಿವೆ. ನಾವಿಂದು ಇಂತಹ ಕೆಲವು ತಪ್ಪು ಅಭಿಪ್ರಾಯಗಳನ್ನು ಹೊರಹಾಕೋಣ.
ಚಿನ್ನವು ಒಂದು ಸದಾ ಹಸಿರಾದ ಹೂಡಿಕೆಯ ಆಯ್ಕೆ ಎಂದು ನಮ್ಮೆಲ್ಲರಿಗೂ ತಿಳಿದಿದೆ. ಇದು ದೇಶದ ಅತೀ ಜನಪ್ರಿಯ ಆಸ್ತಿಯಾಗಿ ಮುಂದುವರಿದಿದೆ.
ಇಂದು, ಈ ಹಳದಿ ಧಾತುವನ್ನು ಅದರ ಭೌತಿಕ ರೂಪದಲ್ಲಿ(ಆಭರಣ, ನಾಣ್ಯಗಳು ಅಥವಾ ಬಿಲ್ಲೆಗಳು) ಖರೀದಿಸದೆಯೇ ಅದರ ಮೇಲೆ ಹೂಡಿಕೆ ಮಾಡುವ ಹಲವು ದಾರಿಗಳಿವೆ.
ಡಿಜಿಟಲ್ ಕ್ರಾಂತಿಯು ತಲೆಯೆತ್ತಿದ ನಂತರ, ಇತ್ತೀಚಿನ ವರ್ಷಗಳಲ್ಲಿ ಅದು ಚಿನ್ನದ ಮಾರುಕಟ್ಟೆಗೂ ಹರಡಿದೆ, ಹಾಗೂ ನಮಗೆ ಪರಿಚಯಿಸಿದೆ ಡಿಜಿಟಲ್ ಗೋಲ್ಡ್. ಭಾರತದಲ್ಲಿ ಒಂದು ಹೆಚ್ಚು ಕಡಿಮೆ ನೂತನ ಪರಿಕಲ್ಪನೆ, ಆದರೆ ನೋಡಲೇ ಬೇಕಾದ್ದಂತದ್ದು.
ಡಿಜಿಟಲ್ ಗೋಲ್ಡ್, ಆನ್ಲೈನ್ ವಾಹಿನಿಗಳ ಮೂಲಕ ಚಿನ್ನವನ್ನು ಖರೀದಿಸುವ ಆಧುನಿಕ ಯುಗದ ವಿಧಾನವಾಗಿದೆ. ಚಿನ್ನ ಖರೀದಿಸಲು ಬಯಸುವವರಿಗೆ ಇದೊಂದು ಹೆಚ್ಚು ಅನುಕೂಲಕರ ಹಾಗೂ ಕಡಿಮೆ ಬೆಲೆಯ ಪರ್ಯಾಯ ಮಾರ್ಗವಾಗಿದೆ.
ನೀವು ಖರೀದಿಸುವ ಪ್ರತೀ ಗ್ರಾಮ್ ಚಿನ್ನಕ್ಕೂ, ಔಗ್ಮೊಂಟ್। ಎಂ ಎಂ ಟಿ ಸಿ - ಪಿ ಎ ಎಂ ಪ್। ಸೇಫ್ಗೋಲ್ಡ್ ಎಂಬ ಭಾರತದ ಮೂರು ಗೋಲ್ಡ್ ಬ್ಯಾಂಕ್ ಗಳಲ್ಲಿ ಒಂದರ ಲಾಕರ್ ನಲ್ಲಿ, ನಿಮ್ಮ ಹೆಸರಿನ 24ಕೆ ನೈಜ ಚಿನ್ನ ಸಂಗ್ರಹಣೆಯಾಗಿರುತ್ತದೆ.
ಆಪ್ ನ ಒಂದೇ ಬಟನ್ ಕ್ಲಿಕ್ ಮೂಲಕ ಹೂಡಿಕೆದಾರರು ಚಿನ್ನದ ಮಾರಾಟ ಅಥವಾ ಭೌತಿಕ ಚಿನ್ನದ ಹೋಮ್ ಡೆಲಿವರಿಯನ್ನೂ ಮಾಡಿಕೊಳ್ಳಬಹುದು. ಇದರ ಜೊತೆ, ಡಿಜಿಟಲ್ ಗೋಲ್ಡ್ ಕೊಳ್ಳಲು ಕನಿಷ್ಟ ಮಿತಿ ಎಂಬುವುದು ಇಲ್ಲ. ನೀವು ₹1 ರಿಂದಲೂ ಆರಂಭಿಸಬಹುದು. ಅದ್ಭುತವಲ್ಲವೇ?
ಆದರೆ ಇದರ ಏರುತ್ತಿರುವ ಜನಪ್ರಿಯತೆಯೊಂದಿಗೆ, ಹೂಡಿಕೆದಾರರ ಮಧ್ಯೆ ಮಿಥ್ಯ ಹಾಗೂ ತಪ್ಪು ಅಭಿಪ್ರಾಯಗಳ ಮಹಾಪೂರವೇ ಹರಿದಾಡುತ್ತಿದೆ. ಇದರಿಂದಾಗಿ, ಅವರು ಅವರ ಇನ್ವೆಸ್ಟ್ಮೆಂಟ್ ಪೋರ್ಟ್ಫೋಲಿಯೋದಲ್ಲಿ ಇಂತಹ ಬೆಲೆಬಾಳುವ ಹೂಡಿಕೆಯ ಅವಕಾಶದಿಂದ ವಂಚಿತರಾಗುತ್ತಾರೆ.
ಹೀಗಾಗಿ ನಾವು ಡಿಜಿಟಲ್ ಗೋಲ್ಡ್ ಬಗ್ಗೆ ಇರುವ ಕೆಲವು ಸಾಮಾನ್ಯ ಮಿಥ್ಯಗಳನ್ನು ಬಯಲು ಮಾಡೋಣ:
ಅಲ್ಲವೇ ಅಲ್ಲ! ಡಿಜಿಟಲ್ ಗೋಲ್ಡ್ ನಲ್ಲಿ ಹೂಡಿಕೆ ಮಾಡುವಲ್ಲಿ ಉತ್ತಮ ವಿಷಯವೇನೆಂದರೆ ಜಾರ್ ಆಪ್ ಮೂಲಕ ನೀವಿದನ್ನು ₹1 ರಷ್ಟು ಕಡಿಮೆ ಬೆಲೆಗೂ ಖರೀದಿಸಬಹುದು.
ಹೌದು, ಇದು ನಿಜ! ಚಿನ್ನವು ಬಜೆಟ್ ಸ್ನೇಹಿಯಾಗಿದ್ದು, ನೀವಿದನ್ನು ಕಡಿಮೆ ಬೆಲೆಗೆ ಖರೀದಿಸಬಹುದು. ಈ ಹಿಂದೆ ಅಸಾಧ್ಯವಾಗಿದ್ದ ಈ ಅಮೂಲ್ಯ ಧಾತು ಈಗ ಎಲ್ಲರಿಗೂ ವ್ಯಾಪಕವಾಗಿ ಲಭ್ಯವಿದೆ. ನಾವಿದನ್ನು ಮೆಚ್ಚಿದ್ದೇವೆ!
ಪ್ರತೀ ಹೂಡಿಕೆಯಲ್ಲಿಯೂ ಅಪಾಯಗಳು ಹಾಗೂ ಸಾಧಕ-ಬಾಧಕಗಳು ಇದ್ದೇ ಇರುತ್ತವೆ. ಚಿನ್ನಕ್ಕೂ ಹಾಗೆಯೇ.
ವಾಸ್ತವದಲ್ಲಿ, ಅತೀ ಚಂಚಲ ಹೂಡಿಕೆಗಳಾದ ಷೇರುಗಳು ಹಾಗೂ ಈಕ್ವಿಟೀಗಳಿಗೆ ಹೋಲಿಸಿದರೆ, ಚಿನ್ನದಲ್ಲಿ ಅಪಾಯದ ಪ್ರಮಾಣವು ಕಡಿಮೆ ಇರುತ್ತದೆ. ಚಿನ್ನವು ಒಂದು ಆಕರ್ಷಕ ಹೂಡಿಕೆಯಾಗಿದೆ, ಹೆಚ್ಚು ಬೇಡಿಕೆಯಲ್ಲಿರುವ ಒಂದು ಬೆಲೆಬಾಳುವ ನೈಸರ್ಗಿಕ ಸಂಪನ್ಮೂಲವಾಗಿದೆ.
ಹಣದುಬ್ಬರ ಹಾಗೂ ಅಪಾಯಕಾರಿ ಹೂಡಿಕೆಗಳ ವಿರುದ್ಧ ಇದೊಂದು ಉತ್ತಮ ತಡೆಗೋಡೆಯಾಗಿದೆ.
ಹೌದು! ನಿಮ್ಮ ಚಿನ್ನದ ಬ್ಯಾಲೆನ್ಸ್ 0.5 ಗ್ರಾಂ ತಲುಪಿದಾಗ, ನೀವದನ್ನು ಭೌತಿಕ ಚಿನ್ನವಾಗಿ ಬದಲಾಯಿಸಬಹುದು - ನಾಣ್ಯ ಅಥವಾ ಆಭರಣವಾಗಿ.
ಜಾರ್ ಆಪ್ ಮೂಲಕ ನಿಮ್ಮ ಉಳಿತಾಯಗಳನ್ನು ವಿದ್ ಡ್ರಾ ಮಾಡಲು ಅಥವಾ ಡಿಜಿಟಲ್ ಗೋಲ್ಡ್ ಆಗಿ ಪರಿವರ್ತಿಸಿ ನಿಮ್ಮ ಮನೆಬಾಗಿಲಿಗೆ ಅದನ್ನು ಡೆಲಿವರಿ ಮಾಡಿಸಲು ಕಾಯಬೇಡಿ.
ಸತ್ಯವು ಇದಕ್ಕೆ ವಿರುದ್ಧವಾಗಿದೆ. ಚಿನ್ನದ ಹೂಡಿಕೆಗಳು ಉತ್ತಮವಾಗಿ ಯೋಚಿಸಲಾದ ಯೋಜನೆಗಳಾಗಿದ್ದು ಒಳ್ಳೆ ಪಾವತಿಗಳನ್ನು ನೀಡುತ್ತದೆ.
ನಿಜವಾಗಿಯೂ. ಚಿನ್ನವನ್ನು ಬೀಳುತ್ತಿರುವ ಷೇರುಗಳ ವಿರುದ್ಧ ತಡೆಗೋಡೆಯಾಗಿ ಹಾಗೂ ಹೂಡಿಕೆಯ ಪರ್ಯಾಯವಾಗಿಯೂ ಉಪಯೋಗಿಸಬಹುದು.
ಆರ್ಥಿಕ ಕುಸಿತ ಹಾಗೂ ಹಿನ್ನಡೆಗಳಿಂದಲೂ ಇದು ಸಂರಕ್ಷಿಸುತ್ತದೆ. ಕಳೆದ 92 ವರ್ಷಗಳಿಂದ ಚಿನ್ನದ ಬೆಲೆಯೇರಿಕೆ ಆಗುತ್ತಿದೆ.
ಭಾರತದಲ್ಲಿ ಸಾಂಸ್ಕೃತಿಕ ಮಹತ್ವ ಹೊಂದಿರುವುದನ್ನು ಹೊರತುಪಡಿಸಿ, ಚಿನ್ನಕ್ಕೆ ಆಂತರಿಕ ಮೌಲ್ಯವೂ ಇದೆ ಹಾಗೂ ಒಳ್ಳೆಯ ರಿಟರ್ನ್ ಗಳೊಂದಿಗೆ ಒಂದು ಉತ್ತಮ ಆಸ್ತಿಯಾಗಿದೆ.
ಚಿನ್ನದಷ್ಟು ಮರು ಮಾರಾಟ ದರವಿಲ್ಲದ ವಜ್ರ ಅಥವಾ ಪ್ಲಾಟಿನಂ ಗೆ ಹೋಲಿಸಿದರೆ, ಚಿನ್ನವು ಎಂದುಗೂ ಒಂದು ಬಲಿಷ್ಠ ಹೂಡಿಕೆ ಆಯ್ಕೆಯಾಗಿದೆ. ಇದನ್ನು ಆರಿಸಿ!
ಇಲ್ಲ. ಚಿನ್ನದ ಖರೀದಿಯು ಅತೀ ಸರಳ ಹಾಗೂ ಅನುಕೂಲಕರವಾಗಿದೆ. ನಿಮಗೆ ಕೇವಲ ನಿಮ್ಮ ಫೋನ್, ಜಾರ್ ಆಪ್, ಅಂತರ್ಜಾಲ ಸಂಪರ್ಕ ಹಾಗೂ ಬ್ಯಾಂಕ್ ಅಥವಾ UPI ಖಾತೆ, ಕೇವಲ ಇವುಗಳ ಅಗತ್ಯವಿದೆ.
ಆಹಾ! ತಕ್ಷಣವೇ ಚಿನ್ನ ನಿಮ್ಮ ಕಡೆಗೆ ಬರುತ್ತದೆ. ಜಾರ್ ಆಪ್ ನಲ್ಲಿ, KYC ಇಲ್ಲದೆ ನೀವು 30 ಗ್ರಾಮ್ ಗಳ ವರೆಗಿನ ಚಿನ್ನವನ್ನು ಖರೀದಿಸಬಹುದು.
ನಿಮ್ಮ ವ್ಯವಹಾರ ರೂ 2 ಲಕ್ಷ ಮೀರಿದರೆ ಮಾತ್ರ, ನೀವು ನಿಮ್ಮ PAN ಕಾರ್ಡ್ ಮಾಹಿತಿಯನ್ನು ನೀಡಬೇಕಾಗುತ್ತದೆ.
ಜಾರ್ ಪಾರದರ್ಶಕತೆಯಲ್ಲಿ ವಿಶ್ವಾಸವಿಡುತ್ತದೆ. ನೀವು ಜಾರ್ ಆಪ್ ನಲ್ಲಿ ಹೂಡಿಕೆ ಮಾಡುವಾಗ ನೀವು ಕೇವಲ ಶುದ್ಧ ಚಿನ್ನದೊಂದಿಗೆ ವ್ಯವಹಾರ ನಡೆಸುತ್ತೀರಿ ಅಂದರೆ 24 ಕ್ಯಾರಟ್. ನೀವು ವೆಚ್ಚ ಮಾಡಿದ ಹಣವನ್ನು ಕೇವಲ ಚಿನ್ನದಲ್ಲಿ ಹೂಡಿಕೆ ಮಾಡಲಾಗುತ್ತದೆ.
ಖರೀದಿಯ ಸಮಯದಲ್ಲಿ ನೀವು ಕೇವಲ 3% GST ಪಾವತಿಸಬೇಕಾಗಿದೆ. ಯಾವುದೇ ಅಡಗಿದ ಶುಲ್ಕ ಅಥವ ಸಂಗ್ರಹಣೆಯ ಶುಲ್ಕಗಳಿಲ್ಲ.
ಎಲ್ಲಾ ಡಿಜಿಟಲ್ ಗೋಲ್ಡ್ ಅನ್ನು ಹೈ ಸೆಕ್ಯೂರಿಟಿ ವಾಲ್ಟ್ ಗಳಲ್ಲಿ ಇಡಲಾಗುತ್ತದೆ, ಉಚಿತ ಹಾಗೂ ಸುರಕ್ಷಿತವಾಗಿ.
ಜಾರ್ ನಲ್ಲಿ, ಡಿಜಿಟಲ್ ಗೋಲ್ಡ್ ಗೆ 99.5% 24 ಕ್ಯಾರಟ್ ಶುದ್ಧತೆಯ ಬೆಂಬಲವಿದೆ. ನೀವು ಡಿಜಿಟಲ್ ಗೋಲ್ಡ್ ಅನ್ನು ಖರೀದಿಸಿದಾಗ, ನೀವು ಪ್ರತಿಷ್ಠಿತ ಕಂಪನಿಗಳಾದ ಔಗ್ಮೊಂಟ್ ಗೋಲ್ಡ್ ಲಿ, ಡಿಜಿಟಲ್ ಗೋಲ್ಡ್ ಇಂಡಿಯಾ ಪ್ರೈ.ಲಿ., ಮತ್ತು ಎಂ ಎಂ ಟಿ ಸಿ - ಪಿ ಎ ಎಂ ಪ್ ಇಂಡಿಯಾ ಪ್ರೈ. ಲಿ. ಗಳಿಂದ ಚಿನ್ನವನ್ನು ಪಡೆಯುವ ಮಾಧ್ಯಸ್ಥರಿಂದ ಅದನ್ನು ಖರೀದಿಸುತ್ತೀರಿ.
ಕುತೂಹಲವೇ? ಡಿಜಿಟಲ್ ಗೋಲ್ಡ್ ಬಗ್ಗೆ ಹಾಗೂ ಡಿಜಿಟಲ್ ಗೋಲ್ಡ್ ಭೌತಿಕ ಚಿನ್ನಕ್ಕಿಂತ ಉತ್ತಮ ಹೇಗೆ ಎನ್ನುವುದರ ಬಗ್ಗೆ ಹೆಚ್ಚು ಓದಿರಿ.
ಇನ್ನೂ ಕುತೂಹಲವೇ? ನಮ್ಮ ಪದೇ ಪದೇ ಕೇಳಲಾದ ಪ್ರಶ್ನೆಗಳು(FAQ) ಮತ್ತು ಜಾರ್ ಅನ್ನು ನೋಡಿ.
ನಾವು ಈ ಅಂಶಗಳನ್ನು ಸ್ಪಷ್ಟಪಡಿಸಿದ ನಂತರ, ಡಿಜಿಟಲ್ ಗೋಲ್ಡ್ ಒಂದು ಉತ್ತಮ ಹೂಡಿಕೆ ಹೇಗೆ ಎಂದು ಮನವರಿಕೆಯಾಯಿತಲ್ಲವೇ?ಇದರಿಂದ ವಂಚಿತರಾಗಬೇಡಿ.
ವಾಸ್ತವದಲ್ಲಿ, ಜಾರ್ ಒಂದು ಡಿಜಿಟಲ್ ಇನ್ವೆಸ್ಟ್ಮೆಂಟ್ ಆಪ್ ಗಿಂತಲು ಹೆಚ್ಚಿನದ್ದಾಗಿದೆ. ಇದೊಂದು ಸ್ವಯಂಚಾಲಿತ ಹೂಡಿಕೆಯ ವೇದಿಕೆಯೂ ಆಗಿದ್ದು, ನಿಮ್ಮ ಜೇಬಿಕೆ ಕತ್ತರಿ ಹಾಕದೆ ನಿಮಗೆ ಹಣ ಉಳಿಸಲು ಸಹಾಯ ಮಾಡುತ್ತದೆ.
ಈ ಕೂಡಲೇ ಜಾರ್ ಆಪ್ ಮೂಲಕ ಡಿಜಿಟಲ್ ಗೋಲ್ಡ್ ನಲ್ಲಿ ಹೂಡಿಕೆ ಆರಂಭಿಸಿ!