ಡಿಜಿಟಲ್ ಗೋಲ್ಡ್ ಎಂದರೇನು? ಪ್ರಯೋಜನಗಳು, ಅಪಾಯಗಳು ಮತ್ತು ತೆರಿಗೆ. ಹಂತ-ಹಂತವಾದ ಮಾರ್ಗದರ್ಶನ

Author Team Jar
Date Apr 21, 2023
Read Time Calculating...
ಡಿಜಿಟಲ್ ಗೋಲ್ಡ್ ಎಂದರೇನು? ಪ್ರಯೋಜನಗಳು, ಅಪಾಯಗಳು ಮತ್ತು ತೆರಿಗೆ. ಹಂತ-ಹಂತವಾದ ಮಾರ್ಗದರ್ಶನ

ತಜ್ಞರ ಸಲಹೆಯೊಂದಿಗೆ ಡಿಜಿಟಲ್ ಗೋಲ್ಡ್‌ನ ಹೂಡಿಕೆಗೆ ವ್ಯಾಪಕವಾದ ಮಾರ್ಗದರ್ಶನ. ಸ್ಮಾರ್ಟ್ ಹೂಡಿಕೆದಾರರಿಗೆ, ಡಿಜಿಟಲ್ ಗೋಲ್ಡ್ ಬಗೆಗಿನ ಎಲ್ಲ ಮಿಥ್ಯಗಳನ್ನು ಮತ್ತು ಗೊಂದಲಗಳನ್ನು ನಿವಾರಿಸುವುದು.

ಡಿಜಿಟಲ್ ಗೋಲ್ಡ್ ಎಂದರೇನು? ಅದರ ಪ್ರತಿಯೊಂದು ಅಂಶದ ಬಗ್ಗೆ

ಡಿಜಿಟಲ್ ಗೋಲ್ಡ್ ಎನ್ನುವುದು ಆನ್‌ಲೈನ್ ಚಾನೆಲ್‌ಗಳ ಮೂಲಕ ಚಿನ್ನವನ್ನು ಖರೀದಿಸುವ ಹೊಸ ಯುಗದ ಆವೃತ್ತಿಯಾಗಿದೆ.

ಚಿನ್ನವನ್ನು ಖರೀದಿಸಲು ಬಯಸುವವರಿಗೆ ಇದು ಹೆಚ್ಚು ಅನುಕೂಲಕರ ಮತ್ತು ಚಿನ್ನವು ಕಡಿಮೆ ವೆಚ್ಚದ ಪರ್ಯಾಯವಾಗಿದೆ.

ನೀವು ಖರೀದಿಸುವ ಪ್ರತಿ ಗ್ರಾಂ ಚಿನ್ನಕ್ಕೆ, ಭಾರತದ ಮೂರು ಚಿನ್ನದ ಬ್ಯಾಂಕ್‌ಗಳ ಪೈಕಿ ಒಂದು ಬ್ಯಾಂಕ್‌ನ ಲಾಕರ್‌ನಲ್ಲಿ, ನಿಮ್ಮ ಹೆಸರಿನಲ್ಲಿ ನಿಜವಾದ 24k ಚಿನ್ನವನ್ನು ಸಂಗ್ರಹಿಸಿಡಲಾಗುತ್ತದೆ. - ಆಗ್‌ಮಾಂಟ್ | MMTC - PAMP | ಸೇಫ್ ಗೋಲ್ಡ್.

ಅಪ್ಲಿಕೇಶನ್‌ನಲ್ಲಿರುವ ಬಟನ್‌ನ ಕ್ಲಿಕ್‌ನೊಂದಿಗೆ, ಹೂಡಿಕೆದಾರರು ಸುಲಭವಾಗಿಯೇ ಖರೀದಿಸಬಹುದು, ಮಾರಾಟ ಮಾಡಬಹುದು ಅಥವಾ ಭೌತಿಕ ಚಿನ್ನವನ್ನು (Physical Gold)ಮನೆಗೆ ತಲುಪಿಸಲು ಆರ್ಡರ್ ಮಾಡಬಹುದು. ಅಲ್ಲದೆ, ಡಿಜಿಟಲ್ ಗೋಲ್ಡ್ ಅನ್ನು ಖರೀದಿಸಲು ಯಾವುದೇ ಕನಿಷ್ಠ ಮಿತಿ ಇಲ್ಲ. ನೀವು ಕೇವಲ ₹1 ರಿಂದ ಪ್ರಾರಂಭಿಸಬಹುದು.

ಈ ಲೇಖನದಲ್ಲಿ, ಇಂದಿನ ಹೊಸಯುಗದ ಹಳದಿ ಲೋಹವಾಗಿರುವ ಚಿನ್ನದ ಬಗ್ಗೆ  ನಾವು ವಿವರವಾಗಿ ನೋಡೋಣ.

ಡಿಜಿಟಲ್ ಗೋಲ್ಡ್ ಇನ್ವೆಸ್ಟ್'ಮೆಂಟ್ ಹೇಗೆ ಕೆಲಸ ಮಾಡುತ್ತದೆ?

ಇದನ್ನೊಮ್ಮೆ ಊಹಿಸಿ, ನೀವು ಆಭರಣದ ಅಂಗಡಿಗೆ ಹೋಗಿ, ಅಂಗಡಿಯವರು ಹೇಳಿದ ಅದೇ ಬೆಲೆಗೆ ಆಭರಣವನ್ನು ಖರೀದಿಸುತ್ತೀರಿ. 

ಖರೀದಿಸಿದ ಚಿನ್ನದ ಪ್ರಮಾಣ ಮತ್ತು ಗುಣಮಟ್ಟದ ಬಗ್ಗೆ ನೀವು ಖಚಿತರಾಗಿರುವುದಿಲ್ಲ ಮತ್ತು ಮೇಕಿಂಗ್ ಶುಲ್ಕಗಳಿಗೆ ಹೆಚ್ಚುವರಿ ಹಣವನ್ನು ಪಾವತಿಸಬೇಕಾಗುತ್ತದೆ.

ನೀವು ಖರೀದಿಸಿದ ಆ ಚಿನ್ನವನ್ನು ಮರಳಿ ಮನೆಗೆ ತೆಗೆದುಕೊಂಡು ಹೋಗುತ್ತೀರಿ. ಅದನ್ನು ನಿಮ್ಮ ಲಾಕರ್‌ನಲ್ಲಿ ಸುರಕ್ಷಿತವಾಗಿ ಇಡುತ್ತೀರಿ. ಇಲ್ಲಿಯವರೆಗೆ ಓದಿದ್ದು ಚೆನ್ನಾಗಿದೆ. ಅಲ್ಲವೇ?

ಈಗ ಈ ಕೆಳಗಿನ ಎರಡು ಸನ್ನಿವೇಶಗಳು ಸಂಭವಿಸಬಹುದು:

  • ನೀವಿರುವ ಸ್ಥಳದಲ್ಲಿ ದರೋಡೆಯಾಗಬಹುದು ಹಾಗೂ ನೀವು ಹೊಂದಿರುವ ಎಲ್ಲಾ ಚಿನ್ನವನ್ನು ನೀವು ಕಳೆದುಕೊಳ್ಳಬಹುದು ಅಥವಾ

  • ನಿಮ್ಮ ಚಿನ್ನ ಸುರಕ್ಷಿತವಾಗಿದ್ದರೂ ಸಹ, ನೀವು 10 ವರ್ಷಗಳ ನಂತರ ಅದನ್ನು ಬಳಸಿದಾಗ, ಆಭರಣದ ಡಿಸೈನ್ ಹಳೆಯದಾಗಬಹುದು, ಪಾಲಿಶ್ ಮಾಡಬೇಕಾಗಬಹುದು, ಇದರ ಪರಿಣಾಮವಾಗಿ, ಚಿನ್ನಕ್ಕಾಗಿ ನೀವು ಈಗಾಗಲೇ ಹೂಡಿಕೆ ಮಾಡಿದ್ದಕ್ಕಿಂತ, ಮತ್ತಷ್ಟು ಹೆಚ್ಚು ಖರ್ಚು ಮಾಡುತ್ತೀರಿ.

ಈಗ, ಇದನ್ನು ಊಹಿಸಿ.

ನೀವು ಅದೇ ಪ್ರಮಾಣದ ಚಿನ್ನವನ್ನು ಆನ್‌ಲೈನ್‌ನಲ್ಲಿ ಖರೀದಿಸುತ್ತೀರಿ, ಇದು  ನಿಮಗೆ 24k ಚಿನ್ನದ ಖಾತರಿ ನೀಡುತ್ತದೆ. ಈ ನಿಮ್ಮ ಚಿನ್ನವನ್ನು, ಮಾರಾಟಗಾರರಿಂದ ಇನ್ಶೂರೆನ್ಸ್ ಮಾಡಲಾದ ಛಾವಣಿಗಳಲ್ಲಿ ಸುರಕ್ಷಿತವಾಗಿ ಸಂಗ್ರಹಿಸಿಡಲಾಗುತ್ತದೆ.

ಇಂದು ನೀವು ₹1 ಕ್ಕಿಂತ ಕಡಿಮೆ ಹೂಡಿಕೆ ಮಾಡಬಹುದು ಮತ್ತು ಭವಿಷ್ಯದಲ್ಲಿ, ನೀವದನ್ನು ಮಾರುಕಟ್ಟೆ ಬೆಲೆಗೆ ಮಾರಾಟ ಮಾಡಬಹುದು ಅಥವಾ ಭೌತಿಕ ರೂಪದಲ್ಲಿ ನಿಮ್ಮ ಮನೆ ಬಾಗಿಲಿಗೆ ಕೊಂಡೊಯ್ಯಬಹುದು.

ಇದೆಲ್ಲವನ್ನು ಕೇವಲ ನಿಮ್ಮ ಸ್ಮಾರ್ಟ್‌ಫೋನ್ ಬಳಸಿ ಮಾಡಬಹುದು!

ನಿಜವಾಗಿಯೂ ಇದು ತುಂಬಾ ಚೆನ್ನಾಗಿದೆ,  ಅಲ್ಲವೇ? ಆದರೆ ಇಲ್ಲೊಂದು ಕ್ಯಾಚ್ ಇದೆ. ಆ ಚಿನ್ನವನ್ನು, ನೀವು ನಿಮ್ಮ ಕೈಯಲ್ಲಿ ಹಿಡಿದು, ಸಾರ್ವಜನಿಕವಾಗಿ ತೋರಿಸಲು  ಸಾಧ್ಯವಾಗುವುದಿಲ್ಲ.

ಯಂಗ್ ಇಂಡಿಯನ್ಸ್‌ಗಳಲ್ಲಿ, ಡಿಜಿಟಲ್ ಗೋಲ್ಡ್‌ನ  ಏರಿಕೆಯ ಜನಪ್ರಿಯತೆಯು, ಅದನ್ನು ಸಣ್ಣ ಪ್ರಮಾಣದಲ್ಲಿ ಖರೀದಿಸುವ ಅವಕಾಶಕ್ಕೆ, ವಿತರಣೆ ಮಾಡುವ ಸುಲಭ ಆಕ್ಸೆಸ್ ಮತ್ತು ಲಿಕ್ವಿಡಿಟಿ ಆಯ್ಕೆಗಳಿಗೆ ಹೆಚ್ಚು ಸಲ್ಲುತ್ತದೆ.

ನೀವು ಯಾವುದೇ ಅಪ್ಲಿಕೇಶನ್‌ನಿಂದ ಡಿಜಿಟಲ್ ಗೋಲ್ಡ್ ಅನ್ನು ಮಧ್ಯವರ್ತಿಗಳಿಂದ ನೀವು ಖರೀದಿಸುತ್ತಿರಿ. ಅದು ನಿಮಗೆ ಆಗ್‌ಮಾಂಟ್ ಗೋಲ್ಡ್ ಲಿಮಿಟೆಡ್ , ಡಿಜಿಟಲ್ ಗೋಲ್ಡ್ ಇಂಡಿಯಾ ಪ್ರೈವೇಟ್‌, ಲಿಮಿಟೆಡ್ - ಸೇಫ್ ಗೋಲ್ಡ್, ಮತ್ತು MMTC-PAMP ಇಂಡಿಯಾ ಪ್ರೈ. ಲಿಮಿಟೆಡ್ ನಂತಹ ಪ್ರತಿಷ್ಠಿತ ಕಂಪನಿಗಳಿಂದ ಆ ಚಿನ್ನವನ್ನು ಆಕ್ಸೆಸ್ ಮಾಡಲು ಸಹಾಯ ಮಾಡುತ್ತದೆ. 

ನಿಮ್ಮ ಡಿಜಿಟಲ್ ಗೋಲ್ಡ್ ಹೊಲ್ಡಿಂಗ್ ಸುರಕ್ಷತೆಗೆ ಮಧ್ಯವರ್ತಿಗಳು ಜವಾಬ್ದಾರರಾಗಿರುವುದರಿಂದ, ಹೂಡಿಕೆ ಶುಲ್ಕವಾಗಿ ನಿಮಗೆ ಸಣ್ಣ ಶೇಕಡಾವಾರು ಮೊತ್ತವನ್ನು ವಿಧಿಸುತ್ತಾರೆ.

ಒಂದುವೇಳೆ ನಿಮ್ಮ ಸ್ಮಾರ್ಟ್ ಫೋನ್ ಕಳೆದುಹೋದರೆ, ನಿಮ್ಮ ಚಿನ್ನ ಕಾಣೆಯಾಗುತ್ತದೆಯೇ?

ಇಲ್ಲ! ಷೇರು ಮಾರುಕಟ್ಟೆಯ ಷೇರುಗಳಂತೆ ಡಿಜಿಟಲ್ ಚಿನ್ನವೂ ಸಹ ನಿಮ್ಮ ಹೆಸರಿನಲ್ಲಿ ರಿಜಿಸ್ಟರ್ ಆಗಿರುತ್ತದೆ.

ಸ್ವತಂತ್ರ ಟ್ರಸ್ಟಿಯಿಂದ ಇನ್ಶೂರೆನ್ಸ್ ಮಾಡಲಾದ ಮತ್ತು ಪರಿಶೀಲಿಸಲಾದ ಛಾವಣಿಗಳಲ್ಲಿ ಚಿನ್ನವನ್ನು ಸುರಕ್ಷಿತವಾಗಿ ಸಂಗ್ರಹಿಸಿಡಲಾಗುತ್ತದೆ.

ನೀವು ಚಿನ್ನವನ್ನು ಖರೀದಿಸಲು ಬಳಸಿದ ಅಪ್ಲಿಕೇಶನ್ ಕಣ್ಮರೆಯಾಗಿದ್ದರೂ ಸಹ, ಇದು ನಿಮ್ಮ ಚಿನ್ನದ ಸುರಕ್ಷತೆಯನ್ನು ಖಚಿತಪಡಿಸುತ್ತದೆ!

ಡಿಜಿಟಲ್ ಗೋಲ್ಡ್ ಅನ್ನು ಎಲ್ಲಿ ಖರೀದಿಸಬೇಕು?

ಯಾವುದೇ ನೋಂದಾಯಿತ ಅಪ್ಲಿಕೇಶನ್‌ಗಳು ಮತ್ತು ಮಧ್ಯವರ್ತಿಗಳಿಂದ ಡಿಜಿಟಲ್ ಗೋಲ್ಡ್‌ ಅನ್ನು ಖರೀದಿಸಬಹುದು.

ಡಿಜಿಟಲ್ ಗೋಲ್ಡ್ ಅನ್ನು ಜಾರ್ ಆ್ಯಪ್‌ನಿಂದ ₹1 ರಂತೆ ಖರೀದಿಸಬಹುದು.

NPCI ಮತ್ತು ಮಾರುಕಟ್ಟೆಯಲ್ಲಿನ ಅತ್ಯುತ್ತಮ UPI ಸೇವಾ ಪೂರೈಕೆದಾರರಿಂದ ಬೆಂಬಲಿಸಲ್ಪಟ್ಟ ಈ ಜಾರ್ ಅಪ್ಲಿಕೇಶನ್, ಜನಪ್ರಿಯ ಆಸ್ತಿಯತ್ತ ನಿಮ್ಮ ಉಳಿತಾಯವನ್ನು ಸ್ವಯಂಚಾಲಿತವಾಗಿ ಹೂಡಿಕೆ ಮಾಡಿಸುತ್ತದೆ. ಆದ್ದರಿಂದ ಡಿಜಿಟಲ್ ಗೋಲ್ಡ್ ನಿಮ್ಮಲ್ಲಿ ಪ್ರತಿದಿನ ಉಳಿತಾಯದ ಅಭ್ಯಾಸವನ್ನು ಉತ್ತೇಜಿಸುತ್ತದೆ. ಜಾರ್ ಅಪ್ಲಿಕೇಶನ್ ಅನ್ನು ಹೇಗೆ ಬಳಸುವುದು ಎಂದು ತಿಳಿಯಿರಿ.

ಡಿಜಿಟಲ್ ಗೋಲ್ಡ್ ಅನ್ನು ಕೆವೈಸಿ (KYC) ಇಲ್ಲದೆ ಖರೀದಿಸಬಹುದು. ಆದರೆ ಅದನ್ನು ಯಾವ  ಪ್ಲಾಟ್‌ಫಾರ್ಮ್ ಮೂಲಕ ಖರೀದಿಸುತ್ತೇವೆ ಎನ್ನುವುದನ್ನು ಆಧರಿಸಿ, ನಿರ್ದಿಷ್ಟ ಮೊತ್ತದವರೆಗೆ ಮಾತ್ರ ಖರೀದಿಸಬಹುದು.

ಕೆಲವು ಜನಪ್ರಿಯ ಆ್ಯಪ್‌ಗಳಲ್ಲಿ ಯಾವುದೇ ಕೆವೈಸಿ (KYC) ಅಗತ್ಯವಿಲ್ಲದೇ ₹50,000 ಮೌಲ್ಯದ ಚಿನ್ನವನ್ನು ಖರೀದಿಸಬಹುದು.

ಜಾರ್ ಅಪ್ಲಿಕೇಶನ್‌ನಲ್ಲಿ, ನೀವು ಕೆವೈಸಿ (KYC) ಇಲ್ಲದೆಯೇ30 ಗ್ರಾಂ ಡಿಜಿಟಲ್ ಗೋಲ್ಡ್ ಅನ್ನು ಖರೀದಿಸಬಹುದು.

ಡಿಜಿಟಲ್ ಗೋಲ್ಡ್‌ನಲ್ಲಿ ಹೂಡಿಕೆಯ ಪ್ರಯೋಜನಗಳು

  • ಡಿಜಿಟಲ್ ಗೋಲ್ಡ್ ಅನ್ನು ಟ್ರ್ಯಾಕ್ ಮಾಡುವುದು ಸುಲಭ ಮತ್ತು ದಿನದ ಯಾವುದೇ ಸಮಯದಲ್ಲಿ ಆಕ್ಸೆಸ್ ಮಾಡಬಹುದು.

  • ಇದು ಹೈ ಲಿಕ್ವಿಡಿಟಿ ನೀಡುತ್ತದೆ ಮತ್ತು. ಡಿಜಿಟಲ್ ಗೋಲ್ಡ್ ಅನ್ನು ಮಾರುಕಟ್ಟೆ ದರದಲ್ಲಿ, ದಿನದ ಯಾವುದೇ ಸಮಯದಲ್ಲಿ ಖರೀದಿಸಬಹುದು ಮತ್ತು ಮಾರಾಟ ಮಾಡಬಹುದು

  • ದೇಶಾದ್ಯಂತ ಲಾಕ್‌ಡೌನ್‌ಗಳಿಂದ ಮತ್ತು ಆಭರಣ ಅಂಗಡಿಗಳನ್ನು ಮುಚ್ಚಲಾಗಿರುವುದರಿಂದ, ಡಿಜಿಟಲ್ ಗೋಲ್ಡ್ ಟ್ರೇಡರ್ ಆಗಿರುವ ಆಗ್‌ಮಾಂಟ್ ಗೋಲ್ಡ್ ಲಿಮಿಟೆಡ್, ಅಂತಹ ಲಾಕ್‌ಡೌನ್ ಅವಧಿಯಲ್ಲಿ ತನ್ನ ವ್ಯವಹಾರಗಳು 40-50% ರಷ್ಟು ಹೆಚ್ಚಾಗಿರುವುದನ್ನು ನೋಡಿವೆ. ಅನೇಕ ಜನರು ಡಿಜಿಟಲ್ ಗೋಲ್ಡ್‌ನತ್ತ ಸಾಗುತ್ತಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ

  • ಚಿನ್ನವನ್ನು ಹಣದುಬ್ಬರದ ವಿರುದ್ಧದ ಬೌಂಡರಿ ಎಂದು ಹೇಳಲಾಗುತ್ತದೆ ಮತ್ತು ಸಾಲಗಳಿಗೆ ಮುಖ್ಯ ಆಧಾರವಾಗಿ ಚಿನ್ನವನ್ನು ಬಳಸಬಹುದು

  • ಕಳೆದ 92 ವರ್ಷಗಳಿಂದ ಚಿನ್ನದ ದರ ಹೆಚ್ಚುತ್ತಲೇ ಇದೆ. ಭಾರತದಲ್ಲಿ ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಹೊಂದಿರುವುದರ ಹೊರತಾಗಿ, ಚಿನ್ನವು ಸ್ವಾಭಾವಿಕ ಮೌಲ್ಯವನ್ನು ಸಹ ಹೊಂದಿದೆ ಮತ್ತು ಚಿನ್ನ ಎನ್ನುವುದು ಉತ್ತಮ ಆದಾಯದೊಂದಿಗೆ, ಉತ್ತಮ ಆಸ್ತಿಯಾಗಿದೆ.

ಡಿಜಿಟಲ್ ಗೋಲ್ಡ್‌ನಲ್ಲಿ ಹೂಡಿಕೆ ಮಾಡುವುದರಿಂದ ಆಗುವ ಅನಾನುಕೂಲಗಳು.

  • ಇದು ನಿಮಗಾಗಿ ಯಾವುದೇ ಜಡ ಆದಾಯವನ್ನು ತರುವುದಿಲ್ಲ. ಅಂದರೆ, ನಿಮ್ಮ ಹೂಡಿಕೆಯ ಮೇಲೆ ನೀವು ಯಾವುದೇ ಬಡ್ಡಿಯನ್ನು ಪಡೆಯುವುದಿಲ್ಲ.

  • ಆತಂಕದ ಇನ್ನೊಂದು ಅಂಶವೆಂದರೆ ಡಿಜಿಟಲ್ ಗೋಲ್ಡ್ ಎನ್ನುವುದು ಎಸ್‌ಬಿಐ (SBI) ಅಥವಾ ಸೆಬಿಯ ನಿಯಮಗಳ ಅಡಿಯಲ್ಲಿ ಬರುವುದಿಲ್ಲ

  • ಅನೇಕ ಪಾರ್ಟ್ನರ್ ಪ್ಲಾಟ್‌ಫಾರ್ಮ್‌ಗಳಿಗೆ, ಚಿನ್ನದ ಮೇಲಿನ ಹೂಡಿಕೆಯ ಗರಿಷ್ಠ ಮೊತ್ತದ ಮಿತಿ 2 ಲಕ್ಷ  ರೂಗಳು. ಇದು  ಕೆಲವು ಹೂಡಿಕೆದಾರರಿಗೆ ತಡೆ ಒಡ್ಡಬಹುದು

  • ಡಿಜಿಟಲ್ ಗೋಲ್ಡ್‌ನ ವಿತರಣೆಯ ಸಮಯದಲ್ಲಿ, ಹೋಲ್ಡಿಂಗ್ ಕಂಪನಿಗಳು ನಿಮ್ಮ ಚಿನ್ನವನ್ನು ಹಿಡಿದಿಟ್ಟುಕೊಳ್ಳಲು ನಿಮಗೆ ಸಣ್ಣ ನಿರ್ವಹಣಾ ಶುಲ್ಕವನ್ನು ವಿಧಿಸುತ್ತವೆ

ಸುಲಭವಾದ ಲಿಕ್ವಿಡಿಟಿ, ಸುರಕ್ಷತೆ ಮತ್ತು ವಿತರಣಾ ಆಯ್ಕೆಗಳನ್ನು ಪರಿಗಣಿಸಿ, ಡಿಜಿಟಲ್ ಗೋಲ್ಡ್‌ನಲ್ಲಿ ಹೂಡಿಕೆ ಮಾಡುವ ಅನಾನುಕೂಲತೆಯು ಸಹ ಅಷ್ಟೇನು ಕೆಟ್ಟದ್ದೆoದು ಅನಿಸುವುದಿಲ್ಲ.

ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವಂತೆಯೇ, ಡಿಜಿಟಲ್ ಗೋಲ್ಡ್ ಅನ್ನು ಸುಲಭವಾಗಿ ಹೂಡಿಕೆ ಮಾಡಬಹುದು. ಡಿಜಿಟಲ್ ಗೋಲ್ಡ್‌ನಲ್ಲಿ ಹೂಡಿಕೆ ಮಾಡಲು, ಕೆಳಗೆ ತಿಳಿಸಲಾದ ಹಂತಗಳನ್ನು ಅನುಸರಿಸಬಹುದು.

  • ಚಿನ್ನದ ಹೂಡಿಕೆಗಳನ್ನು ಸುಗಮಗೊಳಿಸುವ ಜಾರ್, ಅಮೆಜಾನ್, ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್, ಪೇಟಿಎಂ ಮುಂತಾದ ಯಾವುದೇ ಪ್ಲಾಟ್‌ಫಾರ್ಮ್‌ ಅನ್ನು ಆಯ್ಕೆ ಮಾಡಿ.

  • 'ಗೋಲ್ಡ್ ಲಾಕರ್/ವಾಲ್ಟ್' ಆಯ್ಕೆಯನ್ನು ಸೆಲೆಕ್ಟ್ ಮಾಡಿ.

  • ಡಿಜಿಟಲ್ ಗೋಲ್ಡ್‌ನಲ್ಲಿ ನೀವು ಹೂಡಿಕೆ ಮಾಡಲು ಬಯಸುವ ಮೊತ್ತವನ್ನು ನಮೂದಿಸಿ. ಡಿಜಿಟಲ್ ಗೋಲ್ಡ್‌ನ ಬೆಲೆಯು ಮಾರುಕಟ್ಟೆಯ ಏರಿಳಿತಗಳ ಮೇಲೆ ಅವಲಂಬಿತವಾಗಿದೆ. ಆದ್ದರಿಂದ ನೀವದನ್ನು ಅದನ್ನು ಮಧ್ಯವರ್ತಿ ಹೇಳುವ ದರಕ್ಕೆ ಖರೀದಿಸಬಹುದು ಅಥವಾ ತೂಕದ ಆಧಾರದ ಮೇಲೆ ಡಿಜಿಟಲ್ ಗೋಲ್ಡ್‌ ಅನ್ನು ಖರೀದಿಸಬಹುದು.

  • ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ ಸರಳವಾಗಿ ನಿಮ್ಮ ವ್ಯಾಲೆಟ್‌ನಿಂದ ಪಾವತಿ ಮಾಡಿ.

  • ಮುಂದೆ, ಕ್ರೆಡಿಟ್ ಮಾಡಿದ ಚಿನ್ನದ ಮೊತ್ತವನ್ನು ತಕ್ಷಣವೇ ಅಪ್ಡೇಟ್ ಮಾಡಲಾಗುತ್ತದೆ. ಮತ್ತು ನಿಮ್ಮ ಡಿಜಿಟಲ್ ಗೋಲ್ಡ್ ಅನ್ನು 100% ಇನ್ಶೂರೆನ್ಸ್ ಮಾಡಿದ ವಾಲ್ಟ್‌ನಲ್ಲಿ ಸಂಗ್ರಹಿಸಲಾಗುತ್ತದೆ.

  • ಡಿಜಿಟಲ್ ಗೋಲ್ಡ್ ಅನ್ನು ತಕ್ಷಣವೇ ಮಾರಾಟ ಮಾಡಬಹುದು ಅಥವಾ ಖರೀದಿಸಬಹುದು. ಹೂಡಿಕೆದಾರರು ತಮ್ಮ ಡಿಜಿಟಲ್ ಗೋಲ್ಡ್ ಅನ್ನು ಗಟ್ಟಿ ಅಥವಾ ನಾಣ್ಯಗಳ ರೂಪದಲ್ಲಿ ತಮ್ಮ ಭರವಸೆಗೆ ಪಡೆಯಬಹುದು. ಅನೇಕ ಡಿಜಿಟಲ್ ಗೋಲ್ಡ್‌ನ ಮಧ್ಯವರ್ತಿಗಳು ಚಿನ್ನದ ವಿತರಣೆಗೆ ಮಿತಿಯನ್ನು ಹೊಂದಿದ್ದಾರೆ ಮತ್ತು ಅದಕ್ಕಾಗಿ ವಿತರಣಾ ಶುಲ್ಕವನ್ನು ವಿಧಿಸುತ್ತಾರೆ.

ಡಿಜಿಟಲ್ ಗೋಲ್ಡ್ ಮತ್ತು ಫಿಸಿಕಲ್ ಚಿನ್ನದ ಗೋಲ್ಡ್ ಮೇಲಿನ ತೆರಿಗೆ:

ಫಿಸಿಕಲ್ ಗೋಲ್ಡ್‌ನ ಮಾರಾಟದಿಂದ ಬರುವ ಬಂಡವಾಳ ಲಾಭಗಳು, ಅಲ್ಪಾವಧಿಯ ಅಥವಾ ದೀರ್ಘಾವಧಿಯ ಬಂಡವಾಳ ಲಾಭಗಳ ಆಧಾರದ ಮೇಲೆ ತೆರಿಗೆಗೆ ಒಳಪಡುತ್ತವೆ.

ನೀವು ಖರೀದಿಸಿದ ದಿನಾಂಕದಿಂದ ಮೂರು ವರ್ಷಗಳೊಳಗೆ ನಿಮ್ಮ ಚಿನ್ನದ ಸ್ವತ್ತುಗಳನ್ನು (ಚಿನ್ನದ ಆಭರಣಗಳು, ಡಿಜಿಟಲ್ ಗೋಲ್ಡ್‌ ಅಥವಾ ನಾಣ್ಯಗಳಾಗಿರಬಹುದು) ಮಾರಾಟ ಮಾಡಿದರೆ, ಆ ಮಾರಾಟದಿಂದ ಬರುವ ಯಾವುದೇ ಆದಾಯವನ್ನು ಅಲ್ಪಾವಧಿಯ ಬಂಡವಾಳ ಲಾಭಗಳು (STCG) ಎಂದು ಪರಿಗಣಿಸಲಾಗುತ್ತದೆ.

ಡಿಜಿಟಲ್ ಗೋಲ್ಡ್‌ನ ಹೂಡಿಕೆ ಮತ್ತು ಫಿಸಿಕಲ್ ಗೋಲ್ಡ್‌ನ ಹೂಡಿಕೆಯ ಮೇಲೆ ತೆರಿಗೆ ಹೇಗೆ ಕೆಲಸ ಮಾಡುತ್ತದೆ ಎಂಬುದರ ಕುರಿತು ವಿವರವಾದ ಮಾರ್ಗದರ್ಶನವನ್ನು ಓದಿ.

ಡಿಜಿಟಲ್ ಗೋಲ್ಡ್ ಅನ್ನು ಯಾರು ಖರೀದಿಸಬೇಕು

ಚಿನ್ನವನ್ನು  ನೇರವಾಗಿ ಖರೀದಿಸಲು ಸಾಧ್ಯವಾಗದ ಅಥವಾ ಚಿನ್ನದ ಮೇಲೆ ಒಂದೇ ಸಲಕ್ಕೆ ದೊಡ್ಡ ಮೊತ್ತವನ್ನು ಹೂಡಿಕೆ ಮಾಡಲು ಸಾಧ್ಯವಾಗದ ಯಾರಾದರೂ ಡಿಜಿಟಲ್ ಗೋಲ್ಡ್‌ನ ಮೊರೆ ಹೋಗಬಹುದು.

ಡಿಜಿಟಲ್ ಗೋಲ್ಡ್ 99.9%, 24 ಕ್ಯಾರಟ್ ಶುದ್ಧತೆಯಿಂದ ಕೂಡಿದ್ದು ಮತ್ತು ಜಾರ್ ಆಪ್ ಮೂಲಕ ₹1 ಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದು ಅಂದರೆ ಅದನ್ನು ಸುರಕ್ಷಿತ ಸ್ಥಳದಲ್ಲಿ ಸಂಗ್ರಹಿಸುವ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ.

ನಿಮಗೆ ಬೇಕಿರುವುದು ಕೇವಲ ನಿಮ್ಮ ಫೋನ್‌ನಲ್ಲಿ ಒಂದು ಜಾರ್ ಅಪ್ಲಿಕೇಶನ್ ಅಷ್ಟೇ! ಮತ್ತು ನೀವು ಸಿದ್ಧರಾಗಿದ್ದೀರಿ. ನೀವು ಜಾರ್‌ನಲ್ಲಿರುವ ನಿಮ್ಮ ಹಣವನ್ನು ಸ್ವಯಂ-ಹೂಡಿಕೆ ಮಾಡಬಹುದು. ಇನ್ನಷ್ಟು ತಿಳಿಯಲು ಜಾರ್‌ನ FAQ ಗಳನ್ನು ಪರಿಶೀಲಿಸಿ.

ಡಿಜಿಟಲ್ ಗೋಲ್ಡ್‌ ಅನ್ನು ಖರೀದಿಸಲು ಸಹಾಯ ಮಾಡುವ ವಿವಿಧ ಮಧ್ಯವರ್ತಿಗಳಿಂದ ಸಹ ನೀವು ಡಿಜಿಟಲ್ ಗೋಲ್ಡ್‌ ಅನ್ನು ಖರೀದಿಸಬಹುದು.

ಡಿಜಿಟಲ್ ಗೋಲ್ಡ್ ಅನ್ನು ಮಾರುಕಟ್ಟೆ ದರದಲ್ಲಿ ತಕ್ಷಣವೇ ಖರೀದಿಸಬಹುದು ಮತ್ತು ಮಾರಾಟ ಮಾಡಬಹುದು. ಅಂದರೆ ವಿವಿಧ ಆಭರಣ ಅಂಗಡಿಗಳಿಗೆ ಭೇಟಿ ನೀಡಿ, ಮೇಕಿಂಗ್ ಚಾರ್ಜ್‌ಗಳಲ್ಲಿ ರಿಯಾಯಿತಿಗಳನ್ನು ಕೇಳುವ ಪ್ರಸಂಗಗಳಿಲ್ಲ!

 ಹೂಡಿಕೆದಾರರು, ಸೆಬಿ (SEBI) ಹಾಗೂ ಆರ್‌ಬಿಐ (RBI) ನಿಂದ ನಿಯಂತ್ರಿಸಲ್ಪಡುವ ಗೋಲ್ಡ್ ಬಾಂಡ್‌ಗಳು ಮತ್ತು ಗೋಲ್ಡ್ ಇಟಿಎಫ್‌ (ETF) ಗಳಂತಹ, ಡಿಜಿಟಲ್ ಗೋಲ್ಡ್‌ನ ಇತರ ರೂಪಗಳಲ್ಲಿ ಹೂಡಿಕೆ ಮಾಡಬಹುದು.

SGB ​​ಗಳಿಗೆ ಹೋಲಿಸಿದರೆ, ಡಿಜಿಟಲ್ ಗೋಲ್ಡ್‌ ಎನ್ನುವುದು ರಿಡಂಪ್ಷನ್ ಫ್ಲೆಕ್ಸಿಬ್ಲಿಟಿಯ ಕಾರಣದಿಂದಾಗಿ ಅಲ್ಪಾವಧಿಯ ಹೂಡಿಕೆದಾರರಿಗೆ, ಇದೊಂದು ಹೂಡಿಕೆಯ ಲಾಭದಾಯಕ ಆಯ್ಕೆಯಾಗಿ ತೋರುತ್ತದೆ.

ಡಿಜಿಟಲ್ ಗೋಲ್ಡ್, SGB ಗಳಿಗಿಂತ ಭಿನ್ನವಾಗಿದೆ. ಅದರಲ್ಲಿ ಹೂಡಿಕೆ ಮಾಡಲು ಬಳಸಿದ, ಪ್ಲಾಟ್‌ಫಾರ್ಮ್‌ನ ಮೂಲಕ ತಕ್ಷಣವೇ ಚಿನ್ನವನ್ನು ಖರೀದಿಸಬಹುದು ಮತ್ತು ಮಾರಾಟ ಮಾಡಬಹುದು.

ಆದಾಗ್ಯೂ, SGB ಗಳು 8 ವರ್ಷಗಳ ಅವಧಿಯನ್ನು ಹೊಂದಿರುತ್ತವೆ. ಆದರೆ ಇಶ್ಯೂ ಮಾಡಿದ ದಿನಾಂಕ ಕಳೆದು, ಐದನೇ ವರ್ಷದ ನಂತರವೇ ಅದರ ಎನ್‌ಕ್ಯಾಶ್‌ಮೆಂಟ್/ರಿಡೆಂಪ್ಷನ್ ಅನ್ನು ಅನುಮತಿಸಲಾಗುತ್ತದೆ.

ಮ್ಯೂಚುವಲ್ ಫಂಡ್‌ಗಳು ಮತ್ತು ಇಟಿಎಫ್‌ಗಳ ವಿಷಯಕ್ಕೆ ಬಂದರೆ, ವೆಚ್ಚದ ಅನುಪಾತ ಮತ್ತು ಇತರ ಸಂಬಂಧಿತ ಶುಲ್ಕಗಳು ಸೇರಿದಂತೆ, ಹೆಚ್ಚಿನ ವೆಚ್ಚಗಳನ್ನು ಫಂಡ್ ಮ್ಯಾನೇಜಿಂಗ್ ಕಂಪನಿಗಳಿಗೆ ಪಾವತಿಸಬೇಕಾಗುತ್ತದೆ.

ಕೊನೆಯಲ್ಲಿ, ಹೂಡಿಕೆ ಪರಿಸರ ವ್ಯವಸ್ಥೆಯಲ್ಲಿ, ಸುಲಭವಾದ ಆಯ್ಕೆಗಳೊಂದಿಗೆ ಹೂಡಿಕೆ ಪ್ರಾರಂಭಿಸಲು ಬಯಸುವ ಎಲ್ಲರಿಗೂ, ಡಿಜಿಟಲ್ ಗೋಲ್ಡ್ ಅತ್ಯುತ್ತಮ ಆಯ್ಕೆಯಾಗಿದೆ.

ಡಿಜಿಟಲ್ ಗೋಲ್ಡ್‌ನ ಬಗ್ಗೆಯಿರುವ ಉತ್ತಮ ವಿಷಯವೆಂದರೆ ಅದರೊಂದಿಗೆ ಬರುವ ಫ್ಲೆಕ್ಸಿಬ್ಲಿಟಿಗಳು.

ದಿನದ ಯಾವುದೇ ಸಮಯದಲ್ಲಿ ಸುಲಭ ಮಾರಾಟ ಮತ್ತು ಖರೀದಿಯ ಜೊತೆಗೆ ಸುಲಭವಾದ ವಿತರಣೆಯು, ಭವಿಷ್ಯದ ಬಳಕೆಗಾಗಿ ಚಿನ್ನವನ್ನು ಉಳಿತಾಯ ಮಾಡಬಯಸುವ ಜನರಿಗೆ ಉತ್ತಮ ಆಯ್ಕೆಯಾಗಿದೆ.

ಡಿಜಿಟಲ್ ಗೋಲ್ಡ್ ಅನ್ನು ಖರೀದಿಸಲು ಹಲವು ಸುಲಭ ಮಾರ್ಗಗಳಿವೆ. ಅವುಗಳಲ್ಲಿ ಒಂದು ಜಾರ್ ಅಪ್ಲಿಕೇಶನ್ ಆಗಿದ್ದು ಅದು ಹಳದಿ ಲೋಹದ (ಚಿನ್ನ) ಮೇಲೆ ಸುಲಭ ರೀತಿಯಲ್ಲಿ ಸ್ವಯಂ ಹೂಡಿಕೆ ಮಾಡಲು ನಿಮ್ಮನ್ನು ಅನುಮತಿಸುತ್ತದೆ.

ನೀವು ಮಾಡುವ ವಹಿವಾಟುಗಳನ್ನು ಪ್ರತಿದಿನ ಉಳಿಸಲು ಸಹಾಯ ಮಾಡುವ ಮೂಲಕ ನಿಮ್ಮ ಹಣಕಾಸಿನ ಗುರಿಗಳನ್ನು ಸಾಧಿಸಲು, ಜಾರ್ ಆಪ್ ನಿಮಗೆ ಸಹಾಯ ಮಾಡಬಹುದು.

ಜಾರ್ ಅಪ್ಲಿಕೇಶನ್, ಸ್ವಯಂಚಾಲಿತವಾಗಿ ನಿಮ್ಮ ಉಳಿತಾಯವನ್ನು ಡಿಜಿಟಲ್ ಗೋಲ್ಡ್‌ಗೆ ಹೂಡಿಕೆ ಮಾಡುತ್ತದೆ ಮತ್ತು ಇದು ನಿಮ್ಮ ಸುರಕ್ಷಿತ ಭವಿಷ್ಯಕ್ಕಾಗಿ ಡಿಜಿಟಲ್ ಗೋಲ್ಡ್‌ ಅನ್ನು ಸಂಗ್ರಹಿಸಲು ನಿಮಗೆ ಸಹಾಯ ಮಾಡುತ್ತದೆ.

Team Jar

Author

Team Jar

The Jar Team is a dedicated collective of financial content specialists, editors, and investment experts. We are committed to delivering high-impact insights, market updates, and comprehensive guides on micro-savings, digital gold, and the evolving landscape of personal finance. Through clear, data-driven content, we help you navigate Change Jar’s suite of automated savings tools and investment features. Our mission is to provide you with reliable, actionable intelligence that empowers you to build lasting wealth, effortlessly and securely.

download-nudge

Save Money In Digital Gold

Join 4 Cr+ Indians on Jar, India’s Most Trusted Savings App.

Download App Now