ಐಟಿಆರ್ ರಿಫಂಡ್ ನಿಮಗೂ ಸಿಕ್ತಾ? ನೀವು ಈ ಹಣವನ್ನು ಬುದ್ಧಿವಂತಿಕೆಯಿಂದ ವಿನಿಯೋಗ ಮಾಡಬಹುದಾದ 5 ಮಾರ್ಗಗಳು ಇಲ್ಲಿವೆ!

Author Team Jar
Date Apr 21, 2023
Read Time Calculating...
ಐಟಿಆರ್ ರಿಫಂಡ್ ನಿಮಗೂ ಸಿಕ್ತಾ? ನೀವು ಈ ಹಣವನ್ನು ಬುದ್ಧಿವಂತಿಕೆಯಿಂದ ವಿನಿಯೋಗ ಮಾಡಬಹುದಾದ 5 ಮಾರ್ಗಗಳು ಇಲ್ಲಿವೆ!

ಇನ್ಕಮ್ ಟ್ಯಾಕ್ಸ್ ನವರ ಕಡೆಯಿಂದ ನೀವು ಕಟ್ಟಿದ ತೆರಿಗೆ ಹಣ ರಿಫಂಡ್ ರೂಪದಲ್ಲಿ ವಾಪಸ್ ನಿಮ್ಮ ಕೈ ಸೇರಿದ ಸಂದರ್ಭದಲ್ಲಿ ನಿಮಗಾಗುವ ಖುಷಿಗೆ ಪಾರವೇ ಇರುವುದಿಲ್ಲ. ಅಲ್ಲವೇ?

? ನಿಮ್ಮ ವಾರ್ಷಿಕ ಐಟಿಆರ್  ಸಲ್ಲಿಕೆಯಲ್ಲಿ ಎಲ್ಲಾ ಟಿಡಿಎಸ್ ಕಡಿತಗೊಳಿಸಿದ ಹಣವನ್ನು ಸ್ವೀಕರಿಸಲಾಗುತ್ತಿದೆ!

 

ನಿಮ್ಮ ಆದಾಯ ತೆರಿಗೆ ರಿಫಂಡ್  2021 ರಿಂದ  ಸ್ವೀಕರಿಸಿದ್ದರೆ, ನಿಮ್ಮ ಹಣವು ನಿಮಗಾಗಿ ಉಪಯೋಗಿಸುಕೊಳ್ಳುವ  5 ಮಾರ್ಗಗಳಿವೆ. ಮತ್ತು, ನೀವು ಇನ್ನೂ ಆನ್‌ಲೈನ್‌ನಲ್ಲಿ ITR ಅನ್ನು ಹೇಗೆ ಸಲ್ಲಿಸಬೇಕು ಎಂದು ಯೋಚಿಸುತ್ತಿದ್ದರೆ, ಇದನ್ನು ಓದಿ.

ಉಳಿತಾಯದ ರೂಪದಲ್ಲಿ ಸಂಗ್ರಹಿಸಿ

ಆರೋಗ್ಯಕರವಾದ ರೀತಿಯಲ್ಲಿ ಆಹಾರ ಸೇವನೆ ಮಾಡಿದರೆ ಮನುಷ್ಯ ಹೆಚ್ಚು ಕಾಲ ಖುಷಿಯಾಗಿ ಬದುಕುತ್ತಾನೆ. ಅದೇ ರೀತಿ ಹಣದ ಉಳಿತಾಯ ಕೂಡ.

ಸಾಮಾನ್ಯವಾಗಿ ಒಮ್ಮೆಲೇ ಹೆಚ್ಚು ಹಣ ಅಕೌಂಟ್ ಗೆ ಬಂದರೆ, ಪಾರ್ಟಿ ಮಾಡುವ ಜೊತೆಗೆ ಶಾಪಿಂಗ್ ಕೂಡ ಮಾಡೋಣ ಅನಿಸುತ್ತದೆ. ಆದರೆ ಇಲ್ಲಿ ನೀವು ಸ್ವಲ್ಪ ಬುದ್ಧಿವಂತಿಕೆ ಉಪಯೋಗಿಸಿ, ಕೇವಲ ನಿಮಗೆ ಅವಶ್ಯಕತೆ ಇರುವುದನ್ನು ಮಾತ್ರ ಕೊಂಡುಕೊಂಡು ಉಳಿದಂತಹ ಹಣವನ್ನು ಉಳಿತಾಯದ ರೂಪದಲ್ಲಿ ಸಂಗ್ರಹಿಸಿ. 

ಇದಕ್ಕಾಗಿ ನೀವು ಒಂದು ಕೆಲಸವನ್ನು ಮಾಡಬಹುದು. ಅದೇನೆಂದರೆ ನೀವು ದಿನ ಬಳಕೆಗಾಗಿ ಉಪಯೋಗಿಸದೆ ಇರುವಂತಹ ನಿಮ್ಮ ಬ್ಯಾಂಕ್ ಅಕೌಂಟ್ ಗೆ ರಿಫಂಡ್ ಹಣವನ್ನು ಪೂರ್ತಿ ವರ್ಗಾಯಿಸಿ. 

ಆಗ ಈ ಹಣ ಆಗಾಗ ನಿಮ್ಮ ಕಣ್ಣಿಗೆ ಬೀಳುವುದಿಲ್ಲ ಮತ್ತು ಅಷ್ಟಾಗಿ ಜ್ಞಾಪಕಕ್ಕೆ ಕೂಡ ಬರುವುದಿಲ್ಲ. ಮುಂಬರುವ ದಿನಗಳಲ್ಲಿ ಇದರಿಂದ ನಿಮಗೆ ಸಾಕಷ್ಟು ಉಪಯೋಗವಾಗುತ್ತದೆ.

ತುರ್ತು ಪರಿಸ್ಥಿತಿಗೆ ಹಣ ಎತ್ತಿಡಿ

ಮನುಷ್ಯನಿಗೆ ತನ್ನ ಜೀವನದಲ್ಲಿ ತುರ್ತು ಪರಿಸ್ಥಿತಿ ಎನ್ನುವುದು ಯಾವುದೇ ಸಂದರ್ಭದಲ್ಲಿ ಹಾಗೂ ಯಾವುದೇ ರೂಪದಲ್ಲಿ ಬೇಕಾದರೂ ಎದುರಾಗಬಹುದು. ಅದು ಆರೋಗ್ಯದ ಸಮಸ್ಯೆ ಆಗಿರಬಹುದು ಅಥವಾ ಕೈಯಲ್ಲಿರುವ ಕೆಲಸವೇ ಹೋಗಬಹುದು ಇತ್ಯಾದಿ ಏನು ಬೇಕಾದರೂ ಆಗಬಹುದು.

 ಇಂತಹ ಸಮಯದಲ್ಲಿ ಬೇರೆಯವರನ್ನು ನಂಬಿಕೊಂಡು ಕೂರುವುದಕ್ಕೆ ಆಗುವುದಿಲ್ಲ. ಅಲ್ಪ ಸ್ವಲ್ಪ ಹಣ ನಮ್ಮ ಕೈಯಲ್ಲಿದ್ದರೆ, ಎದುರಾಗಿರುವ ಕ್ಲಿಷ್ಟಕರ ಸಂದರ್ಭವನ್ನು ಧೈರ್ಯದಿಂದ ಎದುರಿಸಬಹುದು.

 ಅದಕ್ಕಾಗಿಯೇ ರಿಫಂಡ್ ಹಣವನ್ನು ಇಂತಹ ಸಂದರ್ಭದಲ್ಲಿ ವಿನಿಯೋಗಿಸಲು ಬಳಸಬಹುದು. ತುರ್ತು ಸಂದರ್ಭದಲ್ಲಿ ನಮ್ಮ ಹಣ ನಮ್ಮ ಕೈಯಲ್ಲಿ ಇಲ್ಲದೆ ಹೋದರೆ, ವಿಪರೀತ ಬಡ್ಡಿ ಕೊಟ್ಟು ಬೇರೆಯವರಿಂದ ಹಣ ಸಾಲ ತಂದು ಮತ್ತಷ್ಟು ತೊಂದರೆಗೆ ಸಿಲುಕುವ ಸಾಧ್ಯತೆ ಇರುತ್ತದೆ, ಎಚ್ಚರ!

ಸಾಲ ತೀರಿಸಲು ಉಪಯೋಗಿಸಿ

ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಎಂದು ತಿಳಿದವರು ಹೇಳುತ್ತಾರೆ. ಆದರೆ ಕೆಲವರು ಇದನ್ನು ಅಲ್ಲಗಳೆದು ತಮ್ಮ ಖರ್ಚು ವೆಚ್ಚಕ್ಕೆ ಕಡಿವಾಣ ಹಾಕಿಕೊಳ್ಳಲಾಗದೆ ಇರುವ ಹಣವನ್ನು ಖರ್ಚು ಮಾಡಿ ಹೊರಗಡೆಯಿಂದ ಸಾಲ ತಂದು ಜೀವನದಲ್ಲಿ ನೆಮ್ಮದಿ ಇಲ್ಲದಂತೆ ಬದುಕುತ್ತಾರೆ.

 ಕೆಲವರು ಜೀವನದಲ್ಲಿ ಅಕಸ್ಮಾತ್ ಆಗಿ ಎದುರಾಗುವ ಪರಿಸ್ಥಿತಿಗಳಲ್ಲಿ ಕೂಡ ಸಾಲ ಮಾಡಿರುತ್ತಾರೆ. ಇಎಂಐ ರೂಪದಲ್ಲಿ, ಉಳಿದಿರುವ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮೂಲಕ ಸಾಲಕ್ಕೆ ಕಟ್ಟು ಬಿದ್ದಿರುತ್ತಾರೆ.

ಒಂದು ವೇಳೆ ನೀವು ಸಹ ಇಂತಹ ಒಂದು ಪರಿಸ್ಥಿತಿಯಲ್ಲಿ ದಿನ ಕಳೆಯುತ್ತಿದ್ದರೆ, ನಿಮ್ಮ ಇನ್ಕಮ್ ಟ್ಯಾಕ್ಸ್ ರಿಫಂಡ್ ಮೊತ್ತವನ್ನು ಈ ಸಮಯದಲ್ಲಿ ಬಳಸಿಕೊಳ್ಳಬಹುದು ಹಾಗೂ ಸಾಲ ತೀರಿಸಿ ನೆಮ್ಮದಿಯಿಂದ ಜೀವನ ಸಾಗಿಸಬಹುದು.

ಏಕೆಂದರೆ, ನೀವು 2% ಬಡ್ಡಿಯನ್ನು ನೀಡುವ ನಿಧಿಯಲ್ಲಿ ರೂ.30,000 ಹೂಡಿಕೆ ಮಾಡಿದರೆ ಮತ್ತು ರೂ.27,000 ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ಅನ್ನು 18% ಬಡ್ಡಿಗೆ ವಿಧಿಸಿದರೆ ಅದು ಅರ್ಥವಾಗುವುದಿಲ್ಲ.

ಇಲ್ಲೂ ಸಹ ನೀವು ನಿಮ್ಮ ಬುದ್ಧಿವಂತಿಕೆಯನ್ನು ಉಪಯೋಗಿಸಬೇಕು. ನೀವು ಪಾವತಿ ಮಾಡುವ ಹಣಕ್ಕಿಂತ ನಿಮಗೆ ಹಣದ ಮೇಲೆ ಬರುವ ಆದಾಯ ಅಥವಾ ಬಡ್ಡಿ ಹೆಚ್ಚಿರುವಂತೆ ನೋಡಿಕೊಳ್ಳಿ.

ಒಂದು ವೇಳೆ ನೀವು ಹಲವು ಕಡೆ ಸಾಲ ಮಾಡಿದ್ದರೆ, ಯಾವುದರಿಂದ ನಿಮಗೆ ಹೆಚ್ಚು ಬಡ್ಡಿ ಕಟ್ಟುವಂತೆ ಇರುತ್ತದೆ ಅದನ್ನು ಮೊದಲು ತೀರಿಸಲು ಮುಂದಾಗಿ. 

ಏಕೆಂದರೆ ಇವುಗಳಲ್ಲಿ ನಿಮಗೆ ತೆರಿಗೆಗೆ ಸಂಬಂಧ ಪಟ್ಟಂತೆ ಯಾವುದೇ ಅನುಕೂಲಗಳಿರುವುದಿಲ್ಲ. ಬದಲಿಗೆ ನಿಮ್ಮ ಕೈಯಿಂದ ಹೆಚ್ಚು ಹಣ ಹೊರ ಹೋಗುತ್ತಿರುತ್ತದೆ. ಹಾಗಾಗಿ ಮೊದಲ ಪ್ರಾಶಸ್ತ್ಯ ನೀವು ಇವುಗಳಿಗೆ ಕೊಡಬೇಕಾಗಿ ಬರುತ್ತದೆ.

ನಿಮಗಾಗಿ ಒಂದು ಇನ್ಸೂರೆನ್ಸ್ ಪಾಲಿಸಿ ಮಾಡಿಸಿಕೊಳ್ಳಿ

ಪ್ರತಿಯೊಬ್ಬರೂ ಇನ್ಸೂರೆನ್ಸ್ ಪಾಲಿಸಿ ಮಾಡಿಸಿಕೊಳ್ಳಲು ಮುಗಿಬೀಳುತ್ತಾರೆ. ಏಕೆಂದರೆ ಅದರಿಂದ ಭವಿಷ್ಯದಲ್ಲಿ ಸಾಕಷ್ಟು ಉಪಯೋಗವಿದೆ ಎಂದು ಗೊತ್ತು. ಒಂದು ವೇಳೆ ನೀವು 20 ವರ್ಷ ವಯಸ್ಸಿನವರಾಗಿದ್ದರೆ, ನೀವು ಈ ಬಗ್ಗೆ ಈವರೆಗೂ ಆಲೋಚನೆ ಮಾಡದೆ ಇರಬಹುದು. 

ಆದರೂ ಕೂಡ ಇದರಲ್ಲಿ ಹಣ ತೊಡಗಿಸುವುದು ನೀವು ಜೀವನದಲ್ಲಿ ತೆಗೆದುಕೊಳ್ಳುವ ಅತ್ಯಂತ ಒಳ್ಳೆಯ ನಿರ್ಧಾರವಾಗುತ್ತದೆ. ಏಕೆಂದರೆ ಮೊದಲಿನಿಂದ ಕೊನೆಯವರೆಗೂ ನಿಮ್ಮ ಹಾಗೂ ನಿಮ್ಮ ಕುಟುಂಬದವರನ್ನು ಯಾವುದೇ ತುರ್ತು ಸಂದರ್ಭಗಳಲ್ಲಿ ಇನ್ಶೂರೆನ್ಸ್ ಹಣ ರಕ್ಷಣೆ ಮಾಡುತ್ತದೆ ಮತ್ತು ನಿಮ್ಮ ನೆರವಿಗೆ ಬರುತ್ತದೆ.

ಒಂದು ವೇಳೆ ನೀವು ಈಗಾಗಲೇ ಮದುವೆ ಆಗಿದ್ದರೆ, ಇನ್ಸೂರೆನ್ಸ್ ಪಾಲಿಸಿ ಮಾಡಿಸಲು ಹಿಂದೆ ಮುಂದೆ ನೋಡಬೇಡಿ. ನಿಮ್ಮ ಪ್ರೀತಿ ಪಾತ್ರರನ್ನು ಜೀವನದ ಯಾವುದೇ ಕಠಿಣ ಸಂದರ್ಭಗಳಲ್ಲಿ ರಕ್ಷಿಸಲು ಇದೊಂದು ಒಳ್ಳೆಯ ದಾರಿ.

ನೀವು ಈಗಾಗಲೇ ಸ್ವಲ್ಪ ಹೆಚ್ಚಿನ ರಿಫಂಡ್ ಮೊತ್ತವನ್ನು ಪಡೆದುಕೊಂಡಿದ್ದರೆ, ಒಮ್ಮೆ ಪಾವತಿ ಮಾಡುವ ಹಾಗೆ ಇನ್ಸೂರೆನ್ಸ್ ಪಾಲಿಸಿಯಲ್ಲಿ ಹಣ ತೊಡಗಿಸಬಹುದು.

ಇಂತಹ ಪಾಲಿಸಿಗಳಲ್ಲಿ ನೀವು ಒಮ್ಮೆ ಹಣ ತೊಡಗಿಸಿದರೆ, ನಿಮ್ಮ ವಯಸ್ಸು 60 ವರ್ಷ ಆಗುವವರೆಗೆ ಇದು ರಕ್ಷಣೆ ಒದಗಿಸುತ್ತದೆ.

ನಿಮ್ಮ ಕುಟುಂಬದವರಿಗಾಗಿ ನಿಮ್ಮ ಇನ್ಕಮ್ ಟ್ಯಾಕ್ಸ್ ರಿಫಂಡ್ ಮೊತ್ತವನ್ನು ಆಗಾಗ ತೊಡಗಿಸುವ ಪಾಲಿಸಿಗಳಲ್ಲಿ ಕೂಡ ನೀವು ಮನಸ್ಸು ಮಾಡಬಹುದು. ಏಕೆಂದರೆ ಇದು ನಿಮಗೆ ಅಷ್ಟು ಹೊರೆ ಅನಿಸುವುದಿಲ್ಲ ಮತ್ತು ಆಗಾಗ ಪಾವತಿ ಮಾಡುವ ಅವಕಾಶ ಇರುತ್ತದೆ.

ನಿವೃತ್ತಿಯ ನಂತರದ ಜೀವನಕ್ಕಾಗಿ ಉಳಿಸಿ

ನಿವೃತ್ತಿಯ ನಂತರದಲ್ಲಿ ನಿಮ್ಮ ಜೀವನ ಸುಖಮಯವಾಗಿ ಸಾಗಬೇಕು ಎಂದರೆ, ನಿಮ್ಮ ಖರ್ಚು-ವೆಚ್ಚಗಳಿಗೆ ಯಾವುದೇ ತೊಂದರೆ ಆಗಬಾರದು ಎಂದರೆ, ನೀವು ಈಗಿನಿಂದಲೇ ಅಲ್ಪ ಸ್ವಲ್ಪ ಹಣವನ್ನು ಕೂಡಿಡಬೇಕು.

ಪ್ರತಿ ವರ್ಷ ಬರುವ ಇನ್ಕಮ್ ಟ್ಯಾಕ್ಸ್ ರಿಫಂಡ್ ಮೊತ್ತವನ್ನು ಯಾವುದಾದರೂ ಉಪಯುಕ್ತ ಸ್ಕೀಮ್ ನಲ್ಲಿ ತೊಡಗಿಸಿ ನಿಮಗೆ ವಯಸ್ಸಾದ ಕಾಲದಲ್ಲಿ ಅನುಕೂಲಕ್ಕೆ ಬರುವಂತೆ ಮಾಡಿಕೊಳ್ಳಬಹುದು.

ಈಗ ನೀವು ಇದರ ಬಗ್ಗೆ ಆಲೋಚನೆ ಮಾಡಲು ಹಿಂದೆ ಮುಂದೆ ನೋಡಬಹುದು. ಆದರೆ 60 ವರ್ಷದ ನಂತರದ ಸಮಯದಲ್ಲಿ ನಿಮಗೆ ಇದು ಸಾಕಷ್ಟು ಹೆಮ್ಮೆಯ ವಿಷಯ ಎನಿಸುತ್ತದೆ.

ಬುದ್ಧಿವಂತಿಕೆಯಿಂದ ಜೀವನದಲ್ಲಿ ಹಣ ಹೇಗೆ ವಿನಿಯೋಗಿಸಬೇಕು ಎನ್ನುವ ಪ್ರಶ್ನೆಗೆ ಇದು ಸರಿಯಾದ ಉತ್ತರ ಅಲ್ಲವೇ?

ಮುನ್ನಡೆಯುವ ಮುನ್ನ  

ಇಷ್ಟೆಲ್ಲ ಹಣವನ್ನು ಉಳಿತಾಯ ಮತ್ತು ಹೂಡಿಕೆಗೆ ನೀಡುವ ಮನಸ್ಥಿತಿಯಲ್ಲಿಲ್ಲವೇ? ನಂತರ ಅದನ್ನು ಹಲವಾರು ರೀತಿಯಲ್ಲಿ ಖರ್ಚು ಮಾಡಲು ಆಯ್ಕೆಮಾಡಿ.

ಖರ್ಚು ಮಾಡಿದ್ದಕ್ಕೆ ಪ್ರತಿಯಾಗಿ ಡಿಜಿಟಲ್ ಗೋಲ್ಡ್ ಅನ್ನು ಪಡೆದರೆ ಖರ್ಚು ಕೆಟ್ಟದು ಎಂದು ಯಾರು ಹೇಳುತ್ತಾರೆ ! ಜಾರ್‌ನಲ್ಲಿ, ನಾವು ಅದನ್ನು ಮಾಡುತ್ತೇವೆ.

ಆದ್ದರಿಂದ, ಜಾರ್ ಅಪ್ಲಿಕೇಶನ್‌ನ ಮೂಲಕ ಚಿಲ್ಲರೆ ಹಣವನ್ನು ಸರಿಯಾಗಿ ವಿನಿಯೋಗಿಸಿ,  ಅದು ನಿಮ್ಮ ದೈನಂದಿನ ವೆಚ್ಚವನ್ನು ಪೂರ್ಣಗೊಳಿಸುತ್ತದೆ ಮತ್ತು ಅದನ್ನು ಡಿಜಿಟಲ್ ಗೋಲ್ಡ್ ನಲ್ಲಿ ಹೂಡಿಕೆ ಮಾಡುತ್ತದೆ . 

Team Jar

Author

Team Jar

ChangeJar is a platform that helps you save money and invest in gold.

download-nudge

Save Money In Digital Gold

Join 4 Cr+ Indians on Jar, India’s Most Trusted Savings App.

Download App Now