ಜಾರ್ ಆಪ್ ಎಂದರೇನು?

Author Team Jar
Date Apr 21, 2023
Read Time Calculating...
ಜಾರ್ ಆಪ್ ಎಂದರೇನು?

ಉಳಿತಾಯವನ್ನು ಸರಳೀಕರಿಸಲಾಗಿದೆ! ಜಾರ್ ಆಪ್ ನೊಂದಿಗೆ ಪ್ರತಿದಿನದ ಉಳಿತಾಯ ಆರಂಭಿಸಿ ಹಾಗೂ ಪ್ರತಿದಿನ ನಿಮ್ಮ ಉಳಿತಾಯಗಳನ್ನು ದ್ವಿಗುಣಗೊಳಿಸುವ ಅವಕಾಶವನ್ನು ಪಡೆಯಿರಿ!

ಜಾರ್ ಒಂದು ಪ್ರತಿದಿನದ ಚಿನ್ನದ ಉಳಿತಾಯದ ಆಪ್ ಆಗಿದ್ದು, ನೀವು ಆನ್ಲೈನ್ ಹಣ ಖರ್ಚು ಮಾಡಿದ ಪ್ರತಿ ಬಾರಿಯೂ ಸಣ್ಣ ಮೊತ್ತದ ಹಣವನ್ನು ಉಳಿಸಿ,  ಹಣದ ಉಳಿತಾಯವನ್ನು ಒಂದು ಮೋಜಿನ ಅಭ್ಯಾಸವನ್ನಾಗಿ ಮಾಡುತ್ತದೆ.

ಜಾರ್ ಆಪ್ ಒಂದು ಡಿಜಿಟಲ್ ಪಿಗ್ಗಿ ಬ್ಯಾಂಕ್ ಇದ್ದ ಹಾಗೇ. ಇದು ನಿಮ್ಮ ಮೊಬೈಲ್ ನ SMS ಫ಼ೋಲ್ಡರ್ ನಿಂದ ನಿಮ್ಮ ಖರ್ಚುಗಳನ್ನು ಗುರುತಿಸಿ ಇದನ್ನು ಹತ್ತಿರದ 10 ಕ್ಕೆ ರೌಂಡ್ ಆಫ್ ಮಾಡಿ ನಿಮ್ಮ ಪ್ರತೀ ಖರ್ಚಿಗೂ ಬಿಡಿ ಚಿಲ್ಲರೆಯನ್ನು ಉಂಟುಮಾಡುತ್ತದೆ. ಉದಾಹರಣೆಗೆ, ನೀವು ಆನ್ಲೈನ್ ಆಗಿ ಮೊಬೈಲ್ ರೀಚರ್ಜ್ ಗೆ ರೂ 98 ಖರ್ಚು ಮಾಡಿದ್ದರೆ, ಜಾರ್ ಆಪ್ ನಿಮ್ಮ ಮೊಬೈಲ್ ಫೋನಿನ SMS ಫ಼ೋಲ್ಡರ್ ನಿಂದ ರಿಚಾರ್ಜ್ ಖಚಿತತೆಯ ಮೆಸೇಜ್ ಅನ್ನು ಗುರುತಿಸಿ ಅದನ್ನು ಹತ್ತಿರದ 10 ಕ್ಕೆ ರೌಂಡ್ ಆಫ್ ಮಾಡುತ್ತದೆ ಅಂದರೆ ರೂ 100 ಹಾಗೂ ರೂ 2 ರ ಬಿಡಿ ಚಿಲ್ಲರೆಯನ್ನು  (100-98) ನಿಮ್ಮ ಬ್ಯಾಂಕ್ ಖಾತೆಯಿಂದ( ನಿಮ್ಮ UPI ಐಡಿ ಗೆ ಎಟಾಚ್ ಆಗಿರುವ) ತೆಗೆದು ಸ್ವಯಂಚಾಲಿತವಾಗಿಯೇ ಡಿಜಿಟಲ್ ಗೋಲ್ಡ್ ನಲ್ಲಿ ಹೂಡಿಕೆ ಮಾಡುತ್ತದೆ. 

ಜಾರ್ ಆಪ್ ಸ್ವಯಂಚಾಲಿತವಾಗಿಯೇ ನಿಮ್ಮ ಬಿಡಿ ಚಿಲ್ಲರೆಯನ್ನು 99.9% ಶುದ್ಧ ಚಿನ್ನದಲ್ಲಿ ಹೂಡಿಕೆ ಮಾಡುತ್ತದೆ, ಇದು ವಿಶ್ವ ದರ್ಜೆಯ ವಾಲ್ಟ್ ಗಳಲ್ಲಿ ಸಂಪೂರ್ಣವಾಗಿ ಭದ್ರವಾಗಿದ್ದು ಭಾರತದ ಟಾಪ್ ಬ್ಯಾಂಕ್ ಗಳಿಂದ ಇನ್ಶೂರ್ ಆಗಿದೆ.

ಜಾರ್, ಲಕ್ಷಲಕ್ಷ ಭಾರತೀಯರ ಹೂಡಿಕೆಗಳನ್ನು ಹಾಗೂ ಉಳಿತಾಯವನ್ನು ಸ್ವಯಂಚಾಲಿತವಾಗಿಸಲು  UPI ಆಟೋಪೇ ಅನ್ನು ಬಳಸುವ ಭಾರತದ ಮೊದಲ ಹಾಗೂ ಏಕೈಕ ಆಪ್ ಆಗಿದೆ. NPCI ಹಾಗೂ ಭಾರತದ ದೊಡ್ಡ  UPI ಸರ್ವಿಸ್ ಪ್ರೊವೈಡರ್ ಗಳ ಆಶೀರ್ವಾದದೊಂದಿಗೆ, ಜಾರ್ ಆಪ್, ಸೂಕ್ಷ್ಮ ಉಳಿತಾಯಗಳಿಗಾಗಿ ಸಂಪೂರ್ಣವಾಗಿ ಸ್ವಯಂಚಾಲಿತ ಪರಿಹಾರಗಳನ್ನೊಳಗೊಂಡಿದ್ದು, ಭಾರತದ ಬಹುತೇಕ ಸಾಮಾನ್ಯ ಜನತೆಗೆ ಹೂಡಿಕೆಯಲ್ಲಿ ಪ್ರಭುತ್ವವನ್ನು ನೀಡಿದೆ.

ಜಾರ್ ಆಪ್ ನ ಈ ವೈಶಿಷ್ಟ್ಯತೆಗಳಿಂದಾಗಿ ಬಳಕೆದಾರರು ಇದನ್ನು ಇಷ್ಟಪಡುತ್ತಾರೆ:

  • ನೀವು ಜಾರ್ ಆಪ್ ಅನ್ನು 45 ಸೆಕೆಂಡುಗಳ ಒಳಗಡೆಯೇ ಇನ್ಸ್ಟಾಲ್ ಮಾಡಬಹುದು. ಇದು ಕಾಗದರಹಿತ ಪ್ರಕ್ರಿಯೆಯಾಗಿದ್ದು, ನೀವು ಜಾರ್ ಆಪ್ ನೊಂದಿಗೆ ಹಣ ಉಳಿತಾಯವನ್ನು ಪ್ರಾರಂಭಿಸಲು ನಿಮಗೆ ಯಾವುದೇ KYC ಅಗತ್ಯವಿಲ್ಲ.
  • ನೀವು ಬಯಸಿದಾಗಲೆಲ್ಲಾ ನಿಮ್ಮ ಚಿನ್ನವನ್ನು ಮಾರಾಟ ಮಾಡಬಹುದು ಹಾಗೂ ನಿಮ್ಮ ಮನೆಯಿಂದಲೇ ನಿಮ್ಮ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ವಿದ್ಡ್ರಾ ಮಾಡಬಹುದು. ಕನಿಷ್ಠ ಲಾಕ್ ಅವಧಿ ಇಲ್ಲ.
  • ನೀವು ಗೇಮ್ ಗಳನ್ನು ಆಡಿ ನಿಮ್ಮ ಉಳಿತಾಯಗಳನ್ನು ದುಪ್ಪಟ್ಟುಗೊಳಿಸುವ ಅವಕಾಶವನ್ನು ಉಚಿತವಾಗಿ ಪಡೆಯಬಹುದು.
  • ಜಾರ್ ಆಪ್ ನಿಮ್ಮ ಉಳಿತಾಯಗಳನ್ನು ಸ್ವಯಂಚಾಲಿತ ಮಾಡಿ ನಿಮಗೆ ಪ್ರತಿದಿನ ಉಳಿತಾಯದ ಶಿಸ್ತನ್ನು ನೀಡುತ್ತದೆ.
  • SEBI ಒಪ್ಪಿದ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ಯಾವುದೇ ಭಾರತೀಯ ವ್ಯಕ್ತಿಯು ಜಾರ್ ನಲ್ಲಿ ಹೂಡಿಕೆ ಮಾಡಬಹುದು.
  • ಭೌತಿಕ ಚಿನ್ನದ ಹಾಗೆ, ನೀವು ಕಳವು ಅಥವಾ ದುಬಾರಿ ಲಾಕರ್ ಶುಲ್ಕದ ಬಗ್ಗೆ ಚಿಂತಿಸಬೇಕಾಗಿಲ್ಲ. ನಿಮ್ಮ ಚಿನ್ನವು ಬ್ಯಾಂಕ್ ಗ್ರೇಡ್ ನ ವಿಶ್ವದರ್ಜೆಯ ಲಾಕರ್ ಗಳಲ್ಲಿ ಸಂಗ್ರಹವಾಗಿರುತ್ತದೆ, ಉಚಿತವಾಗಿ.

ಜಾರ್ ಆಪ್, ಬ್ಯಾಂಕ್ ಖಾತೆ ಹೊಂದಿರುವ ಪ್ರತೀ ಭಾರತೀಯನಿಗೂ ಪ್ರತಿ ದಿನ ರೂ 1 ರಿಂದ ಆರಂಭಿಸಿ ಒಂದು ಸ್ಥಿರ ಮೊತ್ತವನ್ನು ಉಳಿಸಿ ಅದನ್ನು ಚಿನ್ನದಲ್ಲಿ ಸ್ವಯಂ ಉಳಿತಾಯ ಮಾಡುವ, ಅತೀ ಹಳೆಯ ಪಿಗ್ಮಿ ಠೇವಣಿ ಸ್ಕೀಮ್ ಅನ್ನು ಕೂಡಾ ಡಿಜಿಟೈಜ್ ಮಾಡಿದೆ.

Team Jar

Author

Team Jar

ChangeJar is a platform that helps you save money and invest in gold.

download-nudge

Save Money In Digital Gold

Join 4 Cr+ Indians on Jar, India’s Most Trusted Savings App.

Download App Now