ಆರ್ಥಿಕ ಸಾಕ್ಷರತೆಯು ನಿಮಗೆ ಆರ್ಥಿಕ ಸ್ವಾತಂತ್ರ್ಯ ಹೊಂದಲು ಸಹಾಯ ಮಾಡುವ 4 ವಿಧಗಳು

Author Team Jar
Date Apr 21, 2023
Read Time Calculating...
ಆರ್ಥಿಕ ಸಾಕ್ಷರತೆಯು ನಿಮಗೆ ಆರ್ಥಿಕ ಸ್ವಾತಂತ್ರ್ಯ ಹೊಂದಲು ಸಹಾಯ ಮಾಡುವ 4 ವಿಧಗಳು

ಆರ್ಥಿಕ ಸ್ವಾತಂತ್ರ್ಯವನ್ನು ಎಲ್ಲರೂ ಅರಸುತ್ತಾರೆ ಆದರೆ ಅದನ್ನು ಹೊಂದುವವರು ಮಾತ್ರ ಕೆಲವೇ ಕೆಲವರು. ಏಕೆ? ಇದಕ್ಕಿರುವ ಏಕೈಕ ಕಾರಣವೆಂದರೆ ಯಾರು ಆರ್ಥಿಕವಾಗಿ ಸ್ವತಂತ್ರರಾಗಿರುತ್ತಾರೆಯೋ ಅವರು ಆರ್ಥಿಕವಾಗಿ ಸಾಕ್ಷರರೂ ಆಗಿರುತ್ತಾರೆ.

ಒಂದು ಅನಿರೀಕ್ಷಿತ ಲಾಪ್ಟಾಪ್ ಅಥವಾ ಫೋನ್ ರಿಪೇರಿಯ ಬಿಲ್ ಅನ್ನು ಕಂಡಾಗ ನಮ್ಮ ಹೊಟ್ಟೆಯಲ್ಲಿ ಆಗುವ ಆ ಕುಸಿತದ ಭಾವನೆಯನ್ನು ನಾವೆಲ್ಲರೂ ಅನುಭವಿಸಿದ್ದೇವೆ. ಅಲ್ಲವೇ? ಇದನ್ನು ನಾವು ಹೇಗೆ ಪಾವತಿಸಬೇಕೆಂಬ ಚಿಂತೆಯನ್ನು ನಾವು ಮಾಡುತ್ತೇವೆ.

ಆದರೆ ಈ ಲಾಪ್ಟಾಪ್ ಅಥವಾ ಫೋನ್ ರಿಪೇರಿ ಸಣ್ಣ ತೊಡಕು ಮಾತ್ರವಾಗಿದ್ದರೆ? ಚಿಂತೆಗೀಡಾಗುವ ಬದಲು, ಹಿಂಜರಿಕೆಯಿಲ್ಲದೆಯೇ ನೀವು ಬಿಲ್ ಅನ್ನು ಪಾವತಿಸಿ ಒಂದು ವಾರದ ನಂತರ ಅದನ್ನು ಸಂಪೂರ್ಣವಾಗಿ ಮರೆತೇ ಬಿಟ್ಟರೆ!

ಈ ಹೊಡೆತವು ನಿಮ್ಮ ಆರ್ಥಿಕ ಸ್ಥಿತಿ ಮೇಲೆ ಎಷ್ಟು ಸಣ್ಣದಾಗಿರುತ್ತದೆಂದರೆ ಇದು ಒಂದು ತುರ್ತು ಪರಿಸ್ಥಿತಿಯಾಗದೆ ಒಂದು ಸಣ್ಣಪುಟ್ಟ ಅಡೆತಡೆ ಮಾತ್ರವಾಗುವುದು.

ಅದೇ ಆರ್ಥಿಕ ಸ್ವಾತಂತ್ರ್ಯ.

ಆರ್ಥಿಕ ಸ್ವಾತಂತ್ರ್ಯವು ಮೂಲತಃ ಒಂದು ಹಣಕಾಸಿನ ಹಂತವಾಗಿದ್ದು, ಇದರಲ್ಲಿ ನಿಮ್ಮ ಬಳಿ ನಿಮ್ಮ ಎಲ್ಲಾ ವೆಚ್ಚಗಳನ್ನು ಕವರ್ ಮಾಡುವಷ್ಟು ಹಣವಿರುತ್ತದೆ. ನೀವು ಜೀವನ ನಡೆಸಲು ದುಡಿಯಬೇಕಾಗಿಲ್ಲ ಅಥವಾ ಜೀವನದ ಖರ್ಚುಗಳನ್ನು ಭರಿಸಲು ನಿಮಗೆ ಸಕ್ರೀಯ ಆದಾಯ ಮೂಲದ ಆವಶ್ಯಕತೆ ಇರುವುದಿಲ್ಲ. 

ನೀವು ಚೆನ್ನಾಗಿ ತಯಾರಾಗಿರುವ ಕಾರಣ ಅನಿರೀಕ್ಷಿತ ಘಟನೆಗಳ ಆರ್ಥಿಕ ಪರಿಣಾಮಗಳು ನಿಮ್ಮನ್ನು ಅನಾವಶ್ಯಕವಾಗಿ ಚಿಂತೆಗೀಡು ಮಾಡುವುದಿಲ್ಲ.

ಪ್ರತೀ ಘಂಟೆ, ನೀವು ಹಣಕ್ಕಾಗಿ ದುಡಿಯುವ ಬದಲಾಗಿ , ನಿಮ್ಮ ಬಳಿ ಇರುವ ಹಣವು ಹೆಚ್ಚು ಹಣ ಸಂಪಾದಿಸಿದರೆ!

ಆರ್ಥಿಕ ಕಾಳಜಿಯಿಂದ ನಿರ್ಬಂಧಕ್ಕೊಳಗಾಗದೆಯೇ ನಿಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳಲು ನೀವು ಸ್ವತಂತ್ರರಾಗಿರುತ್ತೀರಿ, ಹಾಗೂ ನಿಮ್ಮ ಹಣ ನಿಮಗಾಗಿ ಕೆಲಸ ಮಾಡುತ್ತದೆ, ನಿಮ್ಮ ವಿರುದ್ಧವಲ್ಲ. ಇದು ನಾವೆಲ್ಲರೂ ಕಾಣುವ ಕನಸು, ಅಲ್ಲವೇ?

ಒಮ್ಮೆ ನೀವು ಆರ್ಥಿಕ ಸ್ವಾತಂತ್ರ್ಯವನ್ನು ಪಡೆದ ನಂತರ, ನೀವು ನಿಮ್ಮ ಒಲವಿರುವ ವಿಷಯಗಳ ಬೆನ್ನು ಹತ್ತಬಹುದು - ಸಂಗೀತ, ಕ್ರೀಡೆ, ಕಲೆ, ವಿಶ್ವ ಭ್ರಮಣೆ, ಇತ್ಯಾದಿ.

ಇದರರ್ಥ ಅಸಾಧಾರಣ ಶ್ರೀಮಂತರಾಗಿರುವುದು ಅಥವಾ ಐಷಾರಾಮದ ಜೀವನ ನಡೆಸುವುದಲ್ಲ ಆದರೆ ಸಾಕಷ್ಟು ಹಣವನ್ನು ಹೊಂದಿರುವುದು ಎಂದು.

ಆದಾಗ್ಯೂ, ಇದನ್ನೆಲ್ಲಾ ನೀವು ಆರ್ಥಿಕ ಸಾಕ್ಷರತೆ ಹೊಂದಿದ್ದರೆ ಮಾತ್ರ ಪಡೆಯಬಹುದು, ಆದರೆ ದುರಾದೃಷ್ಟವೆಂಬಂತೆ ಇದೇ ನಮ್ಮ ದೇಶದ ದೊಡ್ಡ ಸಮಸ್ಯೆಯಾಗಿದೆ.

ಒಳ್ಳೆಯ ಆರ್ಥಿಕ ನಿರ್ವಹಣೆ ನಮ್ಮ ಜೀವನಶೈಲಿಯನ್ನು ಬದಲಿಸಬಹುದು ಹಾಗೂ ನಮ್ಮ ಭವಿಷ್ಯ ಎಷ್ಟು ಭದ್ರವಾಗಿದೆ ಎಂದು ನಿರ್ಧರಿಸಬಹುದು, ಆದರೆ ಹೆಚ್ಚಿನ ಜನರಿಗೆ ಇದರ ಬಗ್ಗೆ ತಿಳಿದಿಲ್ಲ. 

ಆರ್ಥಿಕ ಶಿಕ್ಷಣದ ರಾಷ್ಟ್ರೀಯ ಕೇಂದ್ರವು 2019 ರಲ್ಲಿ ನಡೆಸಿದ ಒಂದು ಜನಾಭಿಪ್ರಾಯ ಸಂಗ್ರಹಣೆಯ ಪ್ರಕಾರ, 80% ಭಾರತೀಯರು ಸಾಕ್ಷರರಾಗಿದ್ದಾರೆ ಆದರೆ ಇದರಲ್ಲಿ ಕೇವಲ 27% ಜನರು ಆರ್ಥಿಕ ಸಾಕ್ಷರತೆಯನ್ನು ಹೊಂದಿದ್ದಾರೆ. 

ಒಬ್ಬ ವ್ಯಕ್ತಿಯು  ಸಂಪಾದನೆ ಆರಂಭಿಸುವ ಹಾಗೂ ಅವನೂ ಹೂಡಿಕೆ ಆರಂಭಿಸುವ ವಯಸ್ಸಿನ ನಡುವೆ ಸರಾಸರಿ 10 ವರ್ಷದ ಅಂತರವಿದೆ. ಈಗ ಈ ಅಂಕಿಯು ಆಘಾತಕಾರಿಯಾಗಿದೆ!

ಆರ್ಥಿಕ ಆಘಾತದ ಬಗ್ಗೆ ಹೆಚ್ಚಿನ ಒತ್ತಡಕ್ಕೊಳಗಾಗದೆ ಜೀವನದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಹೇಗೆ ಎಂದು ಎಲ್ಲರಿಗೂ ತಿಳಿದಿರಬೇಕು.

ಅದರಿಂದ ನಿಯಂತ್ರಣಕ್ಕೊಳಗಾಗುವ ಬದಲು, ನೀವು ಆರ್ಥಿಕವಾಗಿ ಸ್ವತಂತ್ರರಾಗಿ ನಿಮ್ಮ ಹಣಕಾಸನ್ನು ನಿಯಂತ್ರಿಸಬೇಕಾಗಿದೆ.

ಇಂದು, ಕೋವಿಡ್ - 19 ಎಂಬ ಪಿಡುಗು ವಿಶ್ವದಾದ್ಯಂತ ಕೋಟಿಗಟ್ಟಲೆ ಜನರ ಜೀವನವನ್ನು ಅಸ್ಥವ್ಯಸ್ಥ ಮಾಡಿರುವಾಗ, ಇದು ಅಗಣಿತ ವ್ಯಕ್ತಿಗಳನ್ನು ಆರ್ಥಿಕ ವಿನಾಶದ ಕಡೆ ದೂಡಿದೆ. 

ಇದು ನಮಗೆ ಕಲಿಸಿರುವ ಹಲವು ಪಾಠಗಳಲ್ಲಿ ಆರ್ಥಿಕವಾಗಿ ಸಿದ್ಧವಾಗಿರುವುದು ಅತೀ ಮುಖ್ಯವಾದದ್ದು ಎನ್ನುವುದಕ್ಕೆ ಸಂಶಯವೇ ಇಲ್ಲ.

ಆದರೆ ಆರ್ಥಿಕ ಸ್ವಾತಂತ್ರ್ಯದ ನಿಖರವಾದ ಅರ್ಥವೇನು?

ಆರ್ಥಿಕ ಸ್ವಾತಂತ್ರ್ಯ, ಸರಳ ಶಬ್ದಗಳಲ್ಲಿ, ಒಬ್ಬರ ಸಂಪನ್ಮೂಲಗಳ ಹಾಗೂ ಆದಾಯದ ನಿರ್ವಹಣೆಗಾಗಿ ಅರಿವುಳ್ಳ ಆರ್ಥಿಕ ನಿರ್ಧಾರಗಳನ್ನು ಕೈಗೊಳ್ಳುವ ಸಾಮರ್ಥ್ಯವಾಗಿದೆ.

ಮುಖ್ಯವಾಗಿ, ಇದು ಬಲಿಷ್ಠ ಆರ್ಥಿಕ ತಂತ್ರ ರೂಪಿಸುವ ಸಾಮರ್ಥ್ಯವಾಗಿದೆ. ಇದು ಜೀವನದ ಒಂದು ಮೂಲಭೂತ ಕೌಶಲ್ಯವಾಗಿದ್ದು, ನಿಮ್ಮ ವಯಕ್ತಿಕ ಆನಂದದ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ.

ಆದ್ದರಿಂದಲೇ, ವಾಸ್ತವದಲ್ಲಿ ಆರಂಭದಿಂದಲೇ ಉತ್ತಮ ಆರ್ಥಿಕ ನಿರ್ಧಾರ ಮಾಡುವುದನ್ನು ಕಲಿಯುವ ಸಲುವಾಗಿ ಇದನ್ನು ಶಾಲಾ ಕಾಲೇಜುಗಳಲ್ಲಿ ಕಲಿಸುವ ಅಗತ್ಯವಿದೆ.

ವಯಕ್ತಿಕ ಆರ್ಥಿಕತೆ ಹಾಗೂ ಪ್ರಮುಖ ಹಣದ ಕೌಶಲ್ಯತೆಯನ್ನು ಎಳೆ ವಯಸ್ಸಿನಲ್ಲೇ ಕಲಿಯುವುದರಿಂದ ಇದನ್ನು ನಿಜಜೀವನದಲ್ಲಿ ಅಳವಡಿಸಿ ಅಭ್ಯಾಸ ಮಾಡುವ ಹೆಚ್ಚಿನ ಸಾಧ್ಯತೆಗಳಿರುತ್ತವೆ - ಉದಾಹರಣೆಗೆ ಬಜೆಟಿಂಗ್, ನಿಯಮಿತ ಉಳಿತಾಯ, ಹೂಡಿಕೆ, ಹಾಗೂ ಜಾಣ್ಮೆಯಿಂದ ಖರ್ಚು ಮಾಡುವುದು.

ನಾವೊಂದು ಆರೋಗ್ಯಕರ ಆರ್ಥಿಕ ತಂತ್ರವನ್ನು ಪಾಲಿಸಲು ಸಾಧ್ಯವಾಗದೇ ಇರುವ ಸಂದರ್ಭದಲ್ಲಿ, ತಜ್ಞರಿಂದ ಸಲಹೆಯನ್ನು ಪಡೆಯುವುದು ಮುಖ್ಯವಾಗುತ್ತದೆ.

ಇಂತಹ ಸಮಯದಲ್ಲಿ ಆರ್ಥಿಕ ನಿಯೋಜಕ, ಆರ್ಥಿಕ ಯೋಜನೆಯ ವೆಬ್ಸೈಟ್ ಗಳು ಮತ್ತು ಅಪ್ಲಿಕೇಷನ್ ಗಳು, ಸಹಾಯ ಮಾಡುತ್ತವೆ. ಇಂಟರ್ನೆಟ್ ನಿಂದಾಗಿ, ಇಂದು ನಮಗೆ ಎಲ್ಲಾ ಮಾಹಿತಿಗಳಿಗೆ ತಕ್ಷಣ ಪ್ರವೇಶ ದೊರೆಯುತ್ತದೆ.

ಒಂದು ಸರಳ ಗೂಗಲ್ ಸರ್ಚ್ ನಿಂದ ಆರ್ಥಿಕ ಯೋಜನೆಯ ಪ್ರಮುಖ ಘಟಕಗಳು, ಆರ್ಥಿಕ ಯೋಜನೆಗಳ ಮೂಲಗಳು, ಹಾಗೂ ಸಾವಿರಾರು ಆರ್ಥಿಕ ನಿಯೋಜಕಗಳಿಗೆ ಪ್ರವೇಶ, ಇಂತಹ ಹಲವಾರು ವಿಷಯವಸ್ತುಗಳು ದೊರೆಯುತ್ತವೆ.

ನೀವು ಕೂಡಾ ಆರ್ಥಿಕ ಸ್ವಾತಂತ್ರ್ಯದ ಕಡೆಗೆ ನಿಮ್ಮ ಪ್ರಯಾಣವನ್ನು ಬೆಳೆಸಲು ವೃದ್ಧಿಸಬೇಕಾದ ಕೆಲ ಅಭ್ಯಾಸಗಳ ಬಗ್ಗೆ ತಿಳಿದಿರಬೇಕು.

1. ನಿಮ್ಮ ಸಾಲಗಳನ್ನು ತೀರಿಸಿ

ನೀವು ಸಾಲ ಮಾಡಿದ್ದರೆ, ಬಡ್ಡಿ ದರಗಳು ನಿಮ್ಮ ಬಾಕಿಯನ್ನು, ನೀವು ತೀರಿಸುವುದ್ದಕ್ಕಿಂತಲೂ ಹೆಚ್ಚು ವೇಗವಾಗಿ, ಬೆಳೆಸುತ್ತದೆ.

ಇದರಿಂದ ನೀವು ನಿಯಂತ್ರಣ ಕಳೆದುಕೊಳ್ಳಬಹುದು, ಹಾಗೂ ಹಣದೊಂದಿಗಿನ ನಿಮ್ಮ ಸಂಬಂಧ ಇನ್ನೂ ಜಟಿಲವಾಗಬಹುದು.

ಸಾಲ ಮುಕ್ತ ಜೀವನಕ್ಕಾಗಿ ಪ್ರಯತ್ನ ಪಡುವುದರಿಂದ ನಿಮ್ಮ ಸಾಮರ್ಥ್ಯ ನಿಮಗೆ ಪುನಃ ದೊರೆಯುತ್ತದೆ, ಹಾಗೂ ನಿಮ್ಮನ್ನು ಆರ್ಥಿಕ ಸ್ವಾತಂತ್ರ್ಯದ ಹಾದಿಯಲ್ಲಿ ಮುನ್ನಡೆಸುತ್ತದೆ.

2. ನಿಮ್ಮ ಹಣವನ್ನು ನಿರ್ವಹಿಸಲು ಕಲಿಯಿರಿ

ನಿಮ್ಮ ಹಣಕ್ಕಾಗಿ ಒಂದು ಸರಿಯಾದ ಯೋಜನೆಯಿಲ್ಲದಿದ್ದರೆ, ನೀವು ಮುಂದೆ ಸಾಗಲು ಸಾಧ್ಯವಿಲ್ಲ. ಇದು ಕಷ್ಟವಾಗಿರಬಹುದು ಎಂದು ನಮಗೆ ಅರ್ಥವಾಗುತ್ತದೆ, ಆದರೆ ಪೇಚೆಕ್ ನಿಂದ ಪೇಚೆಕ್ ವರೆಗೆ ಬದುಕುವುದನ್ನು ನಿಲ್ಲಿಸಿ.

ಒಂದು ತುರ್ತು ನಿಧಿಯನ್ನು ರಚಿಸುವುದು ಆರ್ಥಿಕ ಸ್ವಾತಂತ್ರ್ಯದ ಕಡೆಗೆ ನಿಮ್ಮ ಒಂದು ಪ್ರಮುಖ ಹೆಜ್ಜೆಯಾಗುತ್ತದೆ.

ತುರ್ತು ನಿಧಿ ಇದ್ದರೆ, ಜೀವನವು ನಿಮ್ಮ ಕಡೆಗೆ ಎಸೆಯುವ ಅನಿರೀಕ್ಷಿತ ಅವಘಡಗಳನ್ನು ನೀವು ನಿರ್ವಹಿಸಬಹುದು.

3. ತಕ್ಷಣ ಬಿಕ್ಕಟ್ಟನ್ನು ಮೀರಿ ನೋಡಿ

ಒಮ್ಮೆ ನೀವು ಸಾಲ ಮುಕ್ತರಾಗಿ ನಿಮ್ಮ ತುರ್ತು ನಿಧಿಯನ್ನು ಸಿದ್ಧಪಡಿಸುತ್ತಿದ್ದರೆ, ನಿಮ್ಮ ದೈನಂದಿನದ ಖರ್ಚುಗಳಿಂದ ಹೊರಬಂದು ತುರ್ತು ಅಲ್ಲದ ವೆಚ್ಚಗಳಿಗೆ ಉದಾಹರಣೆಗೆ ನಿವೃತ್ತಿ, ಮಕ್ಕಳ ಶಿಕ್ಷಣ, ಅಡವು ಅಥವಾ ಪ್ರವಾಸಗಳಿಗಾಗಿ ಉಳಿತಾಯ ಮಾಡಲು ಆರಂಭಿಸಿ.

ಇದಕ್ಕಾಗಿ ಸ್ವಲ್ಪ ಯೋಚನೆಯ ಅಗತ್ಯವಿರಬಹುದು, ಆದರೆ ಕುಳಿತು ನಿಮ್ಮ ಆದಾಯವನ್ನು ಒಂದೇ ಸಮಯದಲ್ಲಿ ವಿಭಜಿಸುವುದು ಹೇಗೆ ಎಂದು ಲೆಕ್ಕ ಹಾಕುವುದು ಅತ್ಯಗತ್ಯವಾಗಿದೆ.

ನಿಮ್ಮ ಉಳಿತಾಯದ ಗುರಿಗಳನ್ನು ತಲುಪುವ ಜೊತೆ ಜೊತೆಗೆ ನಿಮ್ಮ ಬಿಲ್ ಪಾವತಿಗಳನ್ನೂ ನಿರ್ವಹಿಸಿದರೆ ನೀವು ಆರ್ಥಿಕ ಸ್ವಾತಂತ್ರ್ಯದ ಹಾದಿಯಲ್ಲಿ ಮುನ್ನಡೆಯಬಹುದು.

ನೀವು ಹೂಡಿಕೆಯ ಆಯ್ಕೆಗಳ ಬಗ್ಗೆಯೂ ತಿಳಿದಿರಬೇಕು.

4. ಸಕ್ರೀಯವಾಗಿ ನಿಮ್ಮ ಹಣಕಾಸಿನ ಆರೈಕೆ ಮಾಡಿ

ಸರಿಯಾದ ಆರ್ಥಿಕ ನಿರ್ಧಾರವನ್ನು ತೆಗೆದುಕೊಳ್ಳುವುದು ಮೊದಲ ಹೆಜ್ಜೆಯಾಗಿದ್ದರೂ, ನಿಮ್ಮ ಹಣದ ನಿರ್ವಹಣೆಗಾಗಿ ಪಣವನ್ನು ತೊಟ್ಟು ಜೀವನಪೂರ್ತಿ ಅದನ್ನು ಪಾಲಿಸುವುದು ಅತ್ಯಗತ್ಯವಾಗುತ್ತದೆ.

ನಿಮ್ಮ ಆರ್ಥಿಕ ಗುರಿಗಳನ್ನು ತಲುಪಲು ನೀವು ಅದರ ಕಡೆ ಪುನಃ ಪುನಃ ಹೋಗಬೇಕಾಗುತ್ತದೆ, ಹಾಗೂ ಇದು ನಿಮಗೆ ಆರ್ಥಿಕ ಸ್ಥಿರತೆಯನ್ನು ಹೊಂದುವುದಕ್ಕೆ ಉತ್ತಮ ಅವಕಾಶವನ್ನು ಕಲ್ಪಿಸುತ್ತದೆ.

ನಿಮ್ಮ ಹೂಡಿಕೆಗಳನ್ನು ನೀವು ಸ್ವಯಂಚಾಲನೆ ಮೇಲೆ ಹಾಕಿದರೆ ಅದು ಮೌಲ್ಯಯುತವಾಗುವುದಿಲ್ಲ. ನೀವು ನಿಮ್ಮ ಹಣವನ್ನು ನಿಯಮಿತವಾಗಿ ಪರಿಶೀಲಿಸುತ್ತಾ ಅದರ ಎಲ್ಲಾ ಅಂಶಗಳನ್ನು ಪರಿಗಣಿಸಿ ನಾವು ಬದಲಾಗುತ್ತಿರುವ ಸಮಯದೊಂದಿಗೆ ಯಾವ ಬದಲಾವಣೆಗಳನ್ನು ಮಾಡಬೇಕು ಎಂದು ಅರಿತಿರಬೇಕು. 

ಆರ್ಥಿಕ ಸ್ವಾತಂತ್ರ್ಯವು ಎಲ್ಲರಿಗೂ ವಿಭಿನ್ನವಾಗಿದ್ದು ನಿಮ್ಮ ಸಂದರ್ಭಗಳಿಗನುಗುಣವಾಗಿ ಸಮಯ ತೆಗೆದುಕೊಳ್ಳುತ್ತದೆ. ಇದು ಕೇವಲ ಗುರಿ ಗೊತ್ತುಮಾಡುವುದು ಅಥವಾ ಖರ್ಚು ಕಡಿಮೆ ಮಾಡುವ ಮಾತಲ್ಲ, ಆದರೆ ಹಣದೊಂದಿಗೆ ಒಂದು ಆರೋಗ್ಯಕರ ಸಂಬಂಧವನ್ನು ಹೊಂದುವ ವಿಷಯವಾಗಿದೆ.

ಆದರೆ ಒಮ್ಮೆ ನೀವು ಇದನ್ನು ಪಡೆದ ನಂತರ, ನಿಮ್ಮ ಭವಿಷ್ಯವು ಭದ್ರವಾಗಿದೆ ಎಂದು ಅರಿತು ಬಯಸಿದ್ದನ್ನು ಮಾಡಲು ಸಾಧ್ಯವಾಗುತ್ತದೆ.

ಒಂದು ಪುಟ್ಟ ಹೆಜ್ಜೆಯೊಂದಿಗೆ ನೀವು ಇದನ್ನು ಹೇಗೆ ಆರಂಭಿಸಬಹುದು ಎಂದು ತಿಳಿದಿರುವಿರಾ? ಜಾರ್ ಆಪ್ ನಲ್ಲಿ ಹೂಡಿಕೆ ಆರಂಭಿಸುವ ಮೂಲಕ, ಒಂದು ಸ್ವಯಂಚಾಲಿತ ಪ್ರತಿದಿನ ಉಳಿತಾಯದ ಆಪ್, ಇದು ನಿಮ್ಮ ಜೇಬಿಗೆ ಕತ್ತರಿಯನ್ನೂ ಹಾಕುವುದಿಲ್ಲ.

ನಿಮ್ಮ ಹಣವು ಸ್ವಯಂಚಾಲಿತವಾಗಿಯೇ ಡಿಜಿಟಲ್ ಗೋಲ್ಡ್ ನಲ್ಲಿ ಹೂಡಿಕೆಯಾಗುತ್ತದೆ ಅದರ ಸಣ್ಣ ಹೂಡಿಕೆ ಯೋಜನೆಗಳ ಜೊತೆ, ಇದು ನಿಮ್ಮ ಹೂಡಿಕೆ ಪೋರ್ಟ್ಫೋಲಿಯೋದಲ್ಲಿ ಇರಲೇ ಬೇಕಾದದ್ದು ಎಂದು ಎಲ್ಲರಿಗೂ ತಿಳಿದಿದೆ.

ಜಾರ್ ಆಪ್ ಹೇಗೆ ಕಾರ್ಯನಿರ್ವಹಿಸುತ್ತದೆ ಹೇಗೆ ಒಂದೇ ಸಮಯದಲ್ಲಿ ಇದು ನಿಮ್ಮ ಹಣವನ್ನು ಉಳಿಸಿ ಅದನ್ನು ಡಿಜಿಟಲ್ ಗೋಲ್ಡ್ ನಲ್ಲಿ ಹೂಡಿಕೆ ಮಾಡುತ್ತದೆ ಎನ್ನುವ ಬಗ್ಗೆ ಹೆಚ್ಚು ಓದಿ. ಈ ರೀತಿ ನಿಮ್ಮ ಹಣದ ಉಳಿತಾಯ ಮಾತ್ರ ಆಗುವುದಲ್ಲದೆ ಅದು ಬೆಳೆಯುತ್ತದೆ ಕೂಡಾ. 

Team Jar

Author

Team Jar

The Jar Team is a dedicated collective of financial content specialists, editors, and investment experts. We are committed to delivering high-impact insights, market updates, and comprehensive guides on micro-savings, digital gold, and the evolving landscape of personal finance. Through clear, data-driven content, we help you navigate Change Jar’s suite of automated savings tools and investment features. Our mission is to provide you with reliable, actionable intelligence that empowers you to build lasting wealth, effortlessly and securely.

download-nudge

Save Money In Digital Gold

Join 4 Cr+ Indians on Jar, India’s Most Trusted Savings App.

Download App Now