Buy Gold
Sell Gold
Daily Savings
Digital Gold
Instant Loan
Round-Off
Nek Jewellery
ಮಹಿಳೆಯಾಗಿ, ಈ 7 ಆರ್ಥಿಕ ಸಲಹೆಗಳೊಂದಿಗೆ, ಆರ್ಥಿಕ ಸ್ವಾತಂತ್ರ್ಯದತ್ತ ನಿಮ್ಮ ಪ್ರಯಾಣವನ್ನು ಸುಗಮಗೊಳಿಸಿ. ಅದಕ್ಕಾಗಿ ಆರ್ಥಿಕ ಪ್ರಾಮುಖ್ಯತೆಯನ್ನು ಮತ್ತು ಅದರ ಮಾರ್ಗಗಳನ್ನು ಅರ್ಥಮಾಡಿಕೊಳ್ಳಿ.
ನೀವು ಮನೆಯಲ್ಲಿಯೇ ಇರುವ ತಾಯಿಯಾಗಿದ್ದರೂ ಪರವಾಗಿಲ್ಲ ಅಥವಾ ಕೆಲಸ ಮಾಡುವ ವೃತ್ತಿಪರರಾಗಿದ್ದರೂ ಪರವಾಗಿಲ್ಲ. - ಮುಖ್ಯವಾದ ವಿಷಯವೇನೆಂದರೆ, ನೀವು ಆರ್ಥಿಕವಾಗಿ ಸ್ವತಂತ್ರರಾಗಿರಬೇಕು.
ಇನ್ನು ಮುಂದೆ ಇದೊಂದು ಆಯ್ಕೆಯಾಗಿ ಮಾತ್ರ ಉಳಿಯುವುದಿಲ್ಲ. ಅಂದರೆ ಆರ್ಥಿಕ ಸ್ವಾತಂತ್ರ್ಯ ಎನ್ನುವುದು ಈಗ ಎಲ್ಲರಿಗೂ ಮೂಲಭೂತ ಅವಶ್ಯಕತೆಯಾಗಿದೆ.
ನಿಮ್ಮ ಪ್ರೀತಿಪಾತ್ರರನ್ನು ನೋಡಿಕೊಳ್ಳಲು ನೀವೊಂದು ಉತ್ತಮ ಸ್ಥಾನದಲ್ಲಿರುತ್ತೀರಿ. ಮತ್ತು ನಿಮ್ಮ ಹಣಕಾಸು ಸರಿಯಾದ ಕ್ರಮದಲ್ಲಿದ್ದರೆ, ನಿಮ್ಮ ಆಕಾಂಕ್ಷೆಗಳನ್ನು ಅನುಸರಿಸಿ.
ಆದಾಗ್ಯೂ, ಈ ಜ್ಞಾನದ ಹೊರತಾಗಿಯೂ, ಹೂಡಿಕೆ ಅಥವಾ ವೈಯಕ್ತಿಕ ಹಣಕಾಸು ಯೋಜನೆಯ ವಿಷಯಕ್ಕೆ ಬಂದಾಗ, ಹೆಚ್ಚಿನ ಮಹಿಳೆಯರು ತಮ್ಮ ಆರ್ಥಿಕ ಉದ್ದೇಶಗಳನ್ನು ನಿರ್ವಹಿಸಲು ತಮ್ಮ ಗಂಡ ಅಥವಾ ತಂದೆಯ ಮೇಲೆ ಅವಲಂಬಿತರಾಗಿರುವುದನ್ನು ನಾವು ನೋಡುತ್ತೇವೆ.
ಆದ್ದರಿಂದ ನಾವು ಮೊದಲು ಅರ್ಥಮಾಡಿಕೊಳ್ಳೋಣ.
ಸರಿ, ಮಹಿಳೆಯರೇಕೆ ಸ್ವತಂತ್ರರಾಗಬಾರದು? ಪ್ರತಿಯೊಬ್ಬ ವಯಸ್ಕ ವ್ಯಕ್ತಿಯು ಆರ್ಥಿಕವಾಗಿ ಸ್ವತಂತ್ರರಾಗಿರಬೇಕು, ಏಕೆಂದರೆ ಅವರು ಸ್ವತಃ ತಮ್ಮ ಮೇಲೆ ಮಾತ್ರವೇ ಅವಲಂಬಿತರಾಗಬಹುದು.
ಮಹಿಳೆಯರಿಗೆ ಇದು ಹೆಚ್ಚು ಮುಖ್ಯವಾಗಿದೆ, ಏಕೆಂದರೆ:
ಪುರುಷರು ಮತ್ತು ಮಹಿಳೆಯರ ನಡುವೆ ಆದಾಯದ ವ್ಯತ್ಯಾಸವಿದೆ ಎಂದು ನಮಗೆ ತಿಳಿದಿದೆ. ಮಹಿಳೆಯರು ತಮ್ಮ ಪುರುಷ ಸಹೋದ್ಯೋಗಿಗಳಿಗಿಂತ ಕಡಿಮೆ ಆದಾಯವನ್ನು ಗಳಿಸುತ್ತಾರೆ.
ಆದ್ದರಿಂದ, ಅವರ ಗಳಿಕೆಯು ಸಾಮಾನ್ಯವಾಗಿ ಪುರುಷರಿಗಿಂತ ಕಡಿಮೆಯಿರುತ್ತದೆ. ಅದು ನಂತರದ ವರ್ಷಗಳಲ್ಲಿ ಉಳಿತಾಯವನ್ನು ಕಡಿಮೆ ಮಾಡುತ್ತದೆ.
ಕ್ವಾರ್ಟ್ಜ್ ವರದಿಯ ಪ್ರಕಾರ, ಸುಮಾರು 70% ಭಾರತೀಯ ಮಹಿಳೆಯರು ಕೌಟುಂಬಿಕ ಕಾರಣಗಳಿಗಾಗಿ ತಮ್ಮ ಉದ್ಯೋಗವನ್ನು ತೊರೆದವರು, ಮತ್ತೇ ಅದೇ ಉದ್ಯೋಗಕ್ಕೆ ಮರಳಲು ಕಷ್ಟಪಡುತ್ತಿದ್ದಾರೆ.
ಹಣಕಾಸು ಸಂಬಂಧಿತ ಜ್ಞಾನದ ಕೊರತೆಯಿಂದಾಗಿ, ಮಹಿಳೆಯರಿಗೆ ಹಣಕಾಸು-ಉತ್ಪನ್ನಗಳ ಬಗ್ಗೆ ಕಡಿಮೆ ಅರಿವಿದೆ. ಅವರು ಹಣಕಾಸಿನ ಉದ್ಯೋಗಕ್ಕೆ ಕಾರಣವಾಗುವ ಕೋರ್ಸ್‌ಗಳನ್ನು ಮುಂದುವರೆಸುವ ಸಾಧ್ಯತೆ ಕಡಿಮೆಯಿರುತ್ತದೆ.
ಮಹಿಳೆಯ ಜೀವಿತಾವಧಿಯು ಸಾಮಾನ್ಯವಾಗಿ ಪುರುಷನಿಗಿಂತ 8% ಹೆಚ್ಚಾಗಿದೆ.
ಮಹಿಳೆಯ ಜೀವನದ ಕೆಲವು ಸಂದರ್ಭಗಳಲ್ಲಿ, ಹೆಚ್ಚಿನ ಮಹಿಳೆಯರು ತಮ್ಮ ಸ್ವಂತ ಹಣಕಾಸು ನಿರ್ವಹಣೆ ಮಾಡುವುದನ್ನು ಬಿಟ್ಟು ಬಿಡುತ್ತಾರೆ. ವಿಶೇಷವಾಗಿ, ತಮ್ಮ ಪುರುಷ ಸಂಗಾತಿ ತೀರಿಕೊಂಡ ನಂತರ.
ಹಾಗಾದರೆ ಇದಕ್ಕೆ ಪರಿಹಾರವೇನು?
ಮನಿ ಮ್ಯಾನೇಜಮೆಂಟ್ ಮತ್ತು ಇನ್‌ವೆಸ್ಟಮೆಂಟ್ ಬಗ್ಗೆ ಅಧ್ಯಯನ ಮಾಡಲು ಸ್ವಲ್ಪ ಸಮಯ ತೆಗೆದುಕೊಳ್ಳಿ.
ಮಹಿಳೆಯರು, ಸರಾಸರಿಯಾಗಿ, ನಿವೃತ್ತಿ ಹೂಡಿಕೆಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಡಿಮೆ ಆಸಕ್ತಿ ತೋರುತ್ತಾರೆ. ಮತ್ತು ಪುರುಷರಿಗಿಂತ ಕಡಿಮೆ ಮಟ್ಟದ ಆರ್ಥಿಕ ಸಾಕ್ಷರತೆಯನ್ನು ಹೊಂದಿರುತ್ತಾರೆ - ಎಲ್ಲದಕ್ಕೂ ಕಾರಣ, ಮಹಿಳೆಯರು ತಮ್ಮ ಮೇಲೆ ತಾವು ವಿಶ್ವಾಸ ಹೊಂದಿಲ್ಲ.
ನೀವು ಸಹ ಹೀಗೆ ಮಾಡದವರಲ್ಲಿ ಒಬ್ಬರಾಗಿದ್ದರೆ, ನಿಮ್ಮಷ್ಟಕ್ಕೆ ನೀವೇ ಶಿಕ್ಷಣ ಪಡೆದುಕೊಳ್ಳುವ ಮೂಲಕ ನಿಮ್ಮ ಆತಂಕವನ್ನು ನಿವಾರಿಸಲು, ನೀವು ಮುಂದೆ ಹೆಜ್ಜೆಯಿಡಬಹುದು.
ಪುಸ್ತಕಗಳು ಮತ್ತು ಲೇಖನಗಳನ್ನು ಓದಿ, ಇಂಟರ್‌ನೆಟ್‌ನಲ್ಲಿ ರಿಸರ್ಚ್ ಮಾಡಿ ಮತ್ತು ನಿಮ್ಮ ಬ್ಯಾಂಕಿಂಗ್ ಸಂಸ್ಥೆ ಅಥವಾ ಸ್ಥಳೀಯ ಎನ್‌ಜಿಒಗಳ ಮೂಲಕ, ಲಭ್ಯವಿರುವ ಫ್ರೀ ಎಜುಕೇಷನಲ್ ಟೂಲ್‌ಗಳ ಬಗ್ಗೆ ಕೇಳಿ.
ನಿಮ್ಮ ವೈಯಕ್ತಿಕ ಹಣಕಾಸು ಸಂಬಂಧಿತ ಜ್ಞಾನವನ್ನು ಸುಧಾರಿಸಲು, ಸೋಷಿಯಲ್ ಮೀಡಿಯಾಗಳಲ್ಲಿ ಸೇರಬಹುದು. ಇದಕ್ಕಾಗಿ ಸಂಬಂಧಿತ ಗುಂಪುಗಳನ್ನು ಅಥವಾ ಜನರನ್ನು ನೀವು ಫಾಲೋ ಮಾಡಬಹುದು.
ಕಲಿಯುವಾಗ ನೀವು ವಿಪರೀತ ಗೊಂದಲಕ್ಕೊಳಗಾದರೆ , ಪ್ರೊಫೆಷನಲ್ ಸಹಾಯವನ್ನು ಪಡೆಯಿರಿ.
ಹೆಚ್ಚಿನ ಮಹಿಳೆಯರು ವಿಷಯಗಳನ್ನು ತಮ್ಮ ಕೈಗೆತ್ತಿಕೊಳ್ಳುತ್ತಿದ್ದರೆ, ಮತ್ತೆ ಕೆಲ ಮಹಿಳೆಯರು ಹಣದ ವಿಷಯ ಬಂದಾಗ, ಪುರುಷರಷ್ಟು ವಿಶ್ವಾಸವನ್ನು ತಾವು ಹೊಂದಿರುವುದಿಲ್ಲ.
ಮಹಿಳೆಯರು ಆಗಾಗ ಜೀವನವನ್ನು ಬದಲಾಯಿಸುವ ಬಿಕ್ಕಟ್ಟುಗಳನ್ನು ಎದುರಿಸುತ್ತಾರೆ. ಅದಕ್ಕಾಗಿ ಅವರು ಸಿದ್ಧರಿರುವುದಿಲ್ಲ. ಇದನ್ನು ನೀವು ಒಪ್ಪುತ್ತೀರಾ? ಬದಲಾವಣೆಯು ಅನಿವಾರ್ಯ ಎಂದು ನಿಮಗೆ ತಿಳಿದಿದ್ದರೂ, ಸಮಯಕ್ಕಿಂತ ಮುಂಚಿತವಾಗಿ ಅದಕ್ಕಾಗಿ ಸಿದ್ಧರಿರುವುದು ಹೆಚ್ಚು ಮುಖ್ಯವಾಗಿದೆ.
ಮದುವೆಯಾದ ನಂತರ ಮತ್ತೊಂದು ಕಡೆ ಸ್ಥಳಾಂತರಗೊಳ್ಳುವುದು, ಕುಟುಂಬವನ್ನು ಪ್ರಾರಂಭಿಸುವುದು, ಕೆಲಸದಿಂದ ವಿರಾಮ ತೆಗೆದುಕೊಳ್ಳಲು ನಿರ್ಧರಿಸುವುದು, ಮಗುವನ್ನು ದತ್ತು ಪಡೆಯುವುದು, ಒಂಟಿ ತಾಯಿಯಾಗಿರಲು ನಿರ್ಧಾರ ಮಾಡುವುದು, ವಿಚ್ಛೇದನ ಅಥವಾ ವೃತ್ತಿಯನ್ನು ಬಿಡುವಂತಹ ಜೀವನದ ವಿಭಿನ್ನ ಸನ್ನಿವೇಶಗಳಿಗೆ, ಮುಂಚಿತವಾಗಿಯೇ ಪ್ಲ್ಯಾನ್ ಮಾಡಿ.
ಸದಾ ಬೆಂಬಲ ನೀಡುವ ಪತಿ ಅಥವಾ ಕುಟುಂಬದೊಂದಿಗೂ ಸಹ, ಹಣಕಾಸು ಕಷ್ಟವಾಗಬಹುದು. ಆದ್ದರಿಂದ ನೀವು ಯಶಸ್ವಿಯಾಗಲು, ನಿಮಗೆ ಫೂಲ್‌ಫ್ರೂಫ್ ಪ್ಲ್ಯಾನ್ ಮತ್ತು ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯದ ಅಗತ್ಯವಿದೆ.
ಹಣವನ್ನು ಉಳಿತಾಯ ಮಾಡುವುದು ಉತ್ತಮವಾಗಿದೆ. ಆದರೆ ದೀರ್ಘಾವಧಿಯವರೆಗೆ ಸಂಪತ್ತನ್ನು ಸಂಗ್ರಹಿಸಿಡುವುದು, ಯಾವಾಗಲೂ ಅತ್ಯುತ್ತಮ ಆಯ್ಕೆಯಾಗಿರುವುದಿಲ್ಲ.
ಹಣದುಬ್ಬರದಿಂದಾಗಿ ನಿಮ್ಮ ಉಳಿತಾಯದ ಮೌಲ್ಯವು ದಿರ್ಘಾವಧಿಯಲ್ಲಿ ಕುಸಿಯಬಹುದು.
ವಸ್ತುಗಳು ಹೆಚ್ಚು ದುಬಾರಿಯಾದರೆ ಮತ್ತು ನಿಮ್ಮ ಆದಾಯವು ಹಣದುಬ್ಬರಕ್ಕೆ ಅನುಗುಣವಾಗಿರದಿದ್ದರೆ, ನೀವು ಕೊಂಡುಕೊಳ್ಳುವ ಸಾಮರ್ಥ್ಯದ ನಷ್ಟವನ್ನು ಅನುಭವಿಸುವಿರಿ.
ಹೂಡಿಕೆಗಳು ಹಣದುಬ್ಬರವನ್ನು ತಡೆಯಲು ಸಹಾಯ ಮಾಡುತ್ತದೆ. ಸ್ಥಿರವಾದ ಆದಾಯವನ್ನು ಒದಗಿಸುವುದರ ಜೊತೆಜೊತೆಗೆ, ಉಳಿತಾಯವು ಸಹ ಹೆಚ್ಚಾಗುವುದನ್ನು ಅವರು ಖಾತರಿಪಡಿಸುತ್ತಾರೆ.
ಅನೇಕ ಮಹಿಳೆಯರು ಈ ಕಾನ್ಸೆಪ್ಟ್ ಬಗ್ಗೆ ತಿಳಿದಿದ್ದಾರೆ. ಆದರೆ ಇದರ ಸಂಪೂರ್ಣ ಶ್ರೇಣಿಯ, ಪೊಟೆನ್ಷಿಯಲ್ ಡಿವಿಡೆಂಡ್‌ಗಳ ಬಗ್ಗೆ ಅವರಿಗೆ ಯಾವುದೇ ಕಲ್ಪನೆಗಳಿಲ್ಲ.
ಇನ್ನೂ ಕೆಲವರು ಸರಿಯಾಗಿ ಹೂಡಿಕೆ ಮಾಡುವ ತಮ್ಮ ಸಾಮರ್ಥ್ಯದ ಬಗ್ಗೆ ಖಚಿತರಾಗಿಲ್ಲ.
ನೆನಪಿಡಿ, ಹೂಡಿಕೆಯ ವಿಷಯಕ್ಕೆ ಬಂದಾಗ, ಮಹಿಳೆಯರು ಪುರುಷರಂತೆ ಪರಿಣಾಮಕಾರಿಗಳು ಮತ್ತು ಅವರ ಪೋರ್ಟ್‌ಫೋಲಿಯೊಗಳು ಹೆಚ್ಚಾಗಿ ಯಶಸ್ವಿಯಾಗುತ್ತವೆ. ಆದ್ದರಿಂದ ಹೂಡಿಕೆಯತ್ತ ಈಗಲೇ ಮುಖ ಮಾಡಿ!
ಬಜೆಟ್ ಅನ್ನು ರಚಿಸುವುದು, ಉತ್ತಮ ಆರ್ಥಿಕ ಕಾರ್ಯತಂತ್ರದ ಆರಂಭಿಕ ಹಂತವಾಗಿದೆ.
ಹಿಂದೆ ಕೆಲಸ ಮಾಡುವ ಮೂಲಕ ನಿಮಗೆ ಬಿಲ್‌ಗಳು, ದಿನಸಿಗಳು, ಶಾಲಾ ಶುಲ್ಕಗಳು, ಬಾಡಿಗೆ ಮತ್ತು ಇತರ ವೆಚ್ಚಗಳಿಗೆ ಎಷ್ಟು ಬೇಕಾಗುತ್ತದೆ ಎಂದು ಲೆಕ್ಕ ಹಾಕಿ.
ಇಂತಿಷ್ಟು ಇತರೆ ಸಣ್ಣ ಸಣ್ಣ ಬಿಟ್‌ಗಳನ್ನು ಸೇರಿಸಿ. ಮಾಸಿಕ ವೆಚ್ಚದ ಶೀಟ್ ಒಂದನ್ನು ರಚಿಸಿ ಮತ್ತು ಅದಕ್ಕೆ ಬದ್ಧರಾಗಿರಿ.
ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ, ತುರ್ತು ನಿಧಿ, ಪ್ರಯಾಣ ನಿಧಿ, ಉಳಿತಾಯ ಇತ್ಯಾದಿಗಳಿಗೆ ನಿಮ್ಮ ಉಳಿದ ಹಣವನ್ನು ಮೀಸಲಿಡಿ.
ಒಂದು ನಿರ್ದಿಷ್ಟ ಅವಧಿಗೆ ನಿಮ್ಮ ಖರ್ಚುಗಳನ್ನು ಪ್ಲ್ಯಾನ್ ಮಾಡಿ ಮತ್ತು ನೀವು ನಿಮ್ಮ ಬಜೆಟ್ ಅನ್ನು ಮೀರಿ ಹೋಗುತ್ತಿದ್ದೀರಾ ಎಂಬುದನ್ನು ಗಮನದಲ್ಲಿರಿಸಿಕೊಳ್ಳಿ.
ಪ್ರತಿದಿನ ಈ ನಿಯಮಗಳನ್ನು ಅನುಸರಿಸುವ ಮೂಲಕ ಮತ್ತದನ್ನು ಅತ್ಯುತ್ತಮವಾಗಿಸಲು, ತಿಂಗಳ ಕೊನೆಯಲ್ಲಿ ಅಗತ್ಯ ಹೊಂದಾಣಿಕೆಗಳನ್ನು ಮಾಡುವ ಮೂಲಕ ನೀವು 15% ವರೆಗೆ ಉಳಿಸಬಹುದು.
ತಿಂಗಳ ಬಜೆಟ್ ಅನ್ನು ರಚಿಸುವಾಗ, ಉಳಿತಾಯಕ್ಕಾಗಿ ನಿಗದಿತ ಮೊತ್ತವನ್ನು ಮೀಸಲಿಡಿ.
ಹೆಚ್ಚಿನ ಹಣಕಾಸು ಗುರುಗಳು 3 ರಿಂದ 6 ತಿಂಗಳ ಮೌಲ್ಯದ, ಎಮರ್ಜೆನ್ಸಿ ಫಂಡ್ ಅನ್ನು ರಚಿಸಲು ಶಿಫಾರಸ್ಸು ಮಾಡುತ್ತಾರೆ.
ಆರೋಗ್ಯದ ಬಿಕ್ಕಟ್ಟು, ಉದ್ಯೋಗ ನಷ್ಟ ಅಥವಾ ಕುಟುಂಬದ ತುರ್ತು ಪರಿಸ್ಥಿತಿಗಳಂತಹ ಅತ್ಯಂತ ಕಷ್ಟಕರ ಸಂದರ್ಭಗಳಲ್ಲಿ ಇಂತಹ ನಿಧಿಗಳು ಕೈಗೆಟುಕುವಂತೆ ಸೂಕ್ತವಾಗಿ ಸಿಗುತ್ತವೆ.
ಕ್ರೆಡಿಟ್ ನಿರ್ಮಾಣ ಎನ್ನುವುದು ನಿಮ್ಮ ಹಣಕಾಸಿನ ಪರಿಸ್ಥಿತಿ ಮತ್ತು ಕ್ರೆಡಿಟ್ ಸ್ಕೋರ್ ಅನ್ನು ಸುಧಾರಿಸುವ ಮತ್ತೊಂದು ತಂತ್ರವಾಗಿದೆ.
ನಿಮ್ಮ ಕ್ರೆಡಿಟ್ ಕಾರ್ಡ್ ಮೊತ್ತವನ್ನು ತಿಂಗಳ ಆಧಾರದ ಮೇಲೆ ಪಾವತಿಸುವ ಮೂಲಕ ನೀವು ಪ್ರಾರಂಭಿಸಬಹುದು.
ನಿಮ್ಮ ಕುಟುಂಬಕ್ಕೆ ಹಣಕಾಸಿನ ನೆರವು ಅಗತ್ಯವಿದ್ದರೆ, ನೀವು ಸಹಾಯ ಮಾಡಲು ಎಲ್ಲವನ್ನೂ ಮಾಡುತ್ತೀರಿ. ಅಲ್ಲವೇ? ಇದು ನಿಮ್ಮ ನಿವೃತ್ತಿ ಉಳಿತಾಯಕ್ಕೆ ಸಂಬಂಧಿಸಿದ್ದು ಎಂದಾದರೂ ಸಹ.
ನಿಮ್ಮ ದೀರ್ಘಾವಧಿಯ ಹೂಡಿಕೆಗಳನ್ನು ನೀವು ಶೀಘ್ರದಲ್ಲೇ ಪ್ರಾರಂಭಿಸಲು ನಿರೀಕ್ಷಿಸುತ್ತಿದ್ದರೆ, ನೀವು ನಂತರ ಹೆಚ್ಚಿನ ಹಣವನ್ನು ಹೂಡಿಕೆ ಮಾಡಬೇಕಾಗುತ್ತದೆ.
ನೀವು ಬೇಗನೆ ಹಿಂತೆಗೆದುಕೊಂಡರೆ, ಕಾಂಪೌಂಡಿಂಗ್ ನ ಎಲ್ಲಾ ಪ್ರಯೋಜನಗಳನ್ನು ನೀವು ಕಳೆದುಕೊಳ್ಳುತ್ತೀರಿ. ಖಂಡಿತವಾಗಿಯೂ, ನೀವದನ್ನು ಬಯಸುವುದಿಲ್ಲ.
ನಿಮ್ಮ ನಿವೃತ್ತಿ ಉಳಿತಾಯದಲ್ಲಿ ಮುಳುಗುವ ಬದಲು, ಪ್ರತ್ಯೇಕ ನಿಧಿಯನ್ನು ಮೀಸಲಿಡಿ. ತುರ್ತು ಪರಿಸ್ಥಿತಿಗಳಿಗಾಗಿ ನಿಮ್ಮ ದೀರ್ಘಾವಧಿಯ ಸ್ವತ್ತುಗಳನ್ನು ಮುಟ್ಟದಿರಿ.
ನಾವು ಮೊದಲೇ ಹೇಳಿದಂತೆ, ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಮಹಿಳೆಯರು ಪುರುಷರಿಗಿಂತ ಸರಾಸರಿ 6 ರಿಂದ 8 ವರ್ಷ ಹೆಚ್ಚು ಬದುಕುತ್ತಾರೆ.
ಆದರೆ ಸಾಮಾನ್ಯವಾಗಿ ಅವರು ತಮ್ಮ ಹಣವನ್ನು ಹೆಚ್ಚುಕಾಲ ಉಳಿಸಿಕೊಳ್ಳುವುದಿಲ್ಲ. ಏಕೆಂದರೆ ಅವರು ಪುರುಷರಿಗಿಂತ ಕಡಿಮೆ ಉಳಿತಾಯ ಮಾಡುತ್ತಾರೆ.
ಆದ್ದರಿಂದ ಹೆಚ್ಚು ಆನಂದದಾಯಕ ನಿವೃತ್ತಿಗಾಗಿ, ನಿಮ್ಮ ನಂತರದ ವರ್ಷಗಳಲ್ಲಿ ಹೂಡಿಕೆ ಮಾಡುವುದು ಮುಖ್ಯವಾಗುತ್ತದೆ. ಸರಿ ತಾನೇ? ನಿಮ್ಮ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವಂತಹ ಪ್ಲ್ಯಾನ್ ಅನ್ನು ಆಯ್ಕೆ ಮಾಡಿ.
ಯಾರನ್ನೂ ನಂಬಬೇಡಿ, ನಿಮ್ಮ ಮಕ್ಕಳನ್ನು ಸಹ ನಂಬಬೇಡಿ. ಒಂದುವೇಳೆ ನಿಮ್ಮ ಮಕ್ಕಳು ಸಹಾಯ ಮಾಡಿದರೆ ಅದು ಅದ್ಭುತವೇ. ಆದರೆ ಅವರು ಹಾಗೆ ಮಾಡದಿದ್ದ ಪಕ್ಷದಲ್ಲಿ, ನೀವು ಪ್ಲ್ಯಾನ್ ಬಿ ಅನ್ನು ಹೊಂದಿರುವಿರಾ ಎಂದು ಖಚಿತಪಡಿಸಿಕೊಳ್ಳಿ.
ತಕ್ಷಣವೇ ನಿಮ್ಮ ಮನೆ ಅಥವಾ ಬೆಲೆಬಾಳುವ ಆಸ್ತಿಯನ್ನು ನಿಮ್ಮ ಮಕ್ಕಳಿಗೆ ನೀಡಬೇಡಿ; ಅವುಗಳನ್ನು ನಿಮ್ಮ ಇಚ್ಛೆಯಂತೆ ನೀವು ಯಾವಾಗಲೂ ಅವರಿಗೆ ಬಿಟ್ಟುಕೊಡಬಹುದು ಎಂಬುದನ್ನು ನೆನಪಿಡಿ.
ನಿವೃತ್ತಿಗಾಗಿ ಗೂಡಿನ ನಿರ್ಮಾಣ ಪ್ರಾರಂಭಿಸಲು ತಿಂಗಳ ಆದಾಯ ಯೋಜನೆಯಲ್ಲಿ ಹೂಡಿಕೆ ಮಾಡಿ.
ಇದು ಮುಂದಿನ 40 ವರ್ಷಗಳವರೆಗೆ ನೀವು ತಿಂಗಳ ಆದಾಯವನ್ನು ಹೊಂದಿದ್ದೀರಿ ಮತ್ತು ನೀವು ಆರ್ಥಿಕವಾಗಿ ಸುರಕ್ಷಿತವಾಗಿರುತ್ತೀರಿ ಎನ್ನುವುದನ್ನು ಖಚಿತಪಡಿಸುತ್ತದೆ.
ಮಹಿಳೆಯರು, ಅವರು ಕುಟುಂಬದ ದುಡಿಯುವ ಏಕೈಕ ವ್ಯಕ್ತಿಯಾಗಿರಲಿ ಅಥವಾ ಅವರ ಸಂಗಾತಿಯೊಂದಿಗೆ ವಾಸಿಸುತ್ತಿರಲಿ, ಆದರೆ ಆರ್ಥಿಕ ಯೋಜನೆಯಲ್ಲಿ ಮಹಿಳೆಯರು ಸಹ ಸಕ್ರಿಯವಾಗಿ ಭಾಗವಹಿಸಬೇಕು.
ಸಾಂಪ್ರದಾಯಿಕ ಚಿಂತನೆಗೆ ವಿರುದ್ಧವಾಗಿ, ಮಹಿಳೆಯರು ವೈಯಕ್ತಿಕ ಹಣಕಾಸು ಯೋಜನೆಯಲ್ಲಿ ಅದ್ಭುತವಾಗಿರುತ್ತಾರೆ.
ನಮ್ಮನ್ನು ನಂಬುವುದಿಲ್ಲವೇ? ನಿಮ್ಮ ಕುಟುಂಬದ ಖರ್ಚಿಗೆ, ನಿಮ್ಮ ತಾಯಿ ಬಜೆಟ್ ಮಾಡುವುದನ್ನು ನೀವು ನೋಡಿದ್ದೀರಾ? ಎಲ್ಲಾ ಖರ್ಚುಗಳನ್ನು ನಿರ್ವಹಿಸುವುದು - ಅದು ದೊಡ್ಡದಾಗಿರಲಿ ಅಥವಾ ಚಿಕ್ಕದಾಗಿರಲಿ.
ಯೋಜನೆ ಮತ್ತು ನಿಖರತೆ ತುಂಬಾ ಚೆನ್ನಾಗಿದೆ. ಹಣಕಾಸಿನ ಒತ್ತಡದಿಂದ ಮುಕ್ತವಾದ ಜೀವನವನ್ನು ನಡೆಸಲು, ಸಾಧ್ಯವಾದಷ್ಟು ಬೇಗ ಹಣಕಾಸಿನ ಸಲಹೆಗಳನ್ನು ಕಾರ್ಯಗತಗೊಳಿಸಲು ಪ್ರಾರಂಭಿಸಿ.