ಆನ್ಲೈನ್ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವುದು ಹೇಗೆ – ಜಾರ್ ಆಪ್

Author Team Jar
Date Apr 21, 2023
Read Time Calculating...
ಆನ್ಲೈನ್ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವುದು ಹೇಗೆ – ಜಾರ್ ಆಪ್

ಆದಾಯ ತೆರಿಗೆಯ ಇ-ಫೈಲಿಂಗ್ ಎಂದರೆ, ಹೆಸರೇ ಸೂಚಿಸುವ ಹಾಗೆ, ಆದಾಯ ತೆರಿಗೆ ಇಲಾಖೆಯ ಪೋರ್ಟಲ್ ಬಳಸಿ ವಿದ್ಯುನ್ಮಾನವಾಗಿ ಆದಾಯ ತೆರಿಗೆ ರಿಟರ್ನ್ ಅನ್ನು ಫೈಲ್ ಮಾಡುವುದಾಗಿದೆ. ಈಗ ಇದು ಮೊದಲಿನ ಹಾಗೆ ಸುದೀರ್ಘ ಹಾಗೂ ಗೊಂದಲಮಯವಾಗಿ ಉಳಿದಿಲ್ಲ.

ಉದ್ದ ಸಾಲುಗಳು ಹಾಗೂ ತೆರಿಗೆ ಫೈಲ್ ಮಾಡುವ ಕೊನೆಯ ದಿನ ತಪ್ಪಿಹೋಗುವ ಒತ್ತಡ ಈಗ ಸಮಸ್ಯೆಗಳೇ ಅಲ್ಲ. ಆನ್ಲೈನ್ ಫೈಲಿಂಗ್ ಅಲ್ಪಾವಧಿಯ ಸೂಚನೆಯೊಂದಿಗೆ ನಿಮ್ಮ ಮನೆ ಅಥವಾ ಕಛೇರಿಯಿಂದಲೇ ರಿಟರ್ನ್ ಫೈಲ್ ಮಾಡುವ ಸೌಲಭ್ಯವನ್ನು ಒದಗಿಸುತ್ತದೆ. 

ನಾವೀಗ ಇದರಿಂದ ಆರಂಭಿಸೋಣ;

ಆದಾಯ ತೆರಿಗೆ ರಿಟರ್ನ್ ಅನ್ನು ಯಾರು ಫೈಲ್ ಮಾಡಬೇಕು?

ಭಾರತದಲ್ಲಿ, ಸಂಪಾದಿಸುವ ಅಥವಾ ಆದಾಯ ಪಡೆಯುವ ಪ್ರತಿ ವ್ಯಕ್ತಿಗೂ ಆದಾಯ ತೆರಿಗೆ ಅನ್ವಯಿಸುತ್ತದೆ.( ನೀವು ಭಾರತದ ಶಾಶ್ವತ ನಿವಾಸಿ ಅಥವಾ ಅನಿವಾಸಿ(NRI) ಆಗಿದ್ದರೆ ಕೂಡಾ.)

ಆದರೆ ಚಿಂತಿಸಬೇಕಾಗಿಲ್ಲ, ನೀವು:

  1. 60 ವರ್ಷಕ್ಕಿಂತ ಕೆಳಪಟ್ಟವರಾಗಿದ್ದು ನಿಮ್ಮ ವಾರ್ಷಿಕ ಆದಾಯವು ₹ 2,50,000 ಕ್ಕಿಂತ ಕಡಿಮೆ ಇದ್ದರೆ.
  2. 60 to 80 ವರ್ಷದ ಮಧ್ಯದವರಾಗಿದ್ದು (ಹಿರಿಯ ನಾಗರಿಕರು) ಹಾಗೂ ನಿಮ್ಮ ವಾರ್ಷಿಕ ಆದಾಯವು ₹3,00,000. ಕ್ಕಿಂತ ಕಡಿಮೆ ಇದ್ದರೆ. 

      3) 80 ವರ್ಷ ಮೇಲ್ಪಟ್ಟವರಾಗಿದ್ದು ನಿಮ್ಮ ವಾರ್ಷಿಕ ಆದಾಯವು ₹5,00,000. ಕ್ಕಿಂತ ಕಡಿಮೆ ಇದ್ದರೆ. 

ನೀವು ಆದಾಯ ತೆರಿಗೆ ರಿಟರ್ನ್ ಅನ್ನು ಏಕೆ ಫೈಲ್ ಮಾಡಬೇಕು?

ನೀವು ಸರಿಯಾದ ಸಮಯದಲ್ಲಿ ಆದಾಯ ತೆರಿಗೆ ರಿಟರ್ನ್ ಅನ್ನು ಫೈಲ್ ಮಾಡಲು ಹಲವಾರು ಕಾರಣಗಳಿವೆ :

  1. ದಂಡವನ್ನು ತಪ್ಪಿಸಲು

ಎಲ್ಲಾ ಅರ್ಹ ಭಾರತೀಯರು, ಪ್ರತೀ ಆರ್ಥಿಕ ವರ್ಷದಲ್ಲೂ, ತೆರಿಗೆ ಪಾವತಿಸತಕ್ಕದ್ದು. ಇಲ್ಲವಾದರೆ ರೂ. 50,000 ವರೆಗಿನ ದಂಡವನ್ನು ವಿಧಿಸಲಾಗಬಹುದು.

  1. ನಿಮ್ಮ ತೆರಿಗೆಗಳ ಮೇಲೆ ಮರುಪಾವತಿಯ ಮನವಿಯನ್ನು ಮಾಡಲು

ಅವನು ಅಥವಾ ಅವಳು ಸರಕಾರಕ್ಕೆ ಹೆಚ್ಚುವರಿ ಪಾವತಿ ಮಾಡಿದ್ದರೆ ತೆರಿಗೆದಾರನಿಗೆ ಮರುಪಾವತಿ ದೊರೆಯುತ್ತದೆ. ತೆರಿಗೆ ಆದಾಯ ರಿಟರ್ನ್ ಫೈಲ್ ಮಾಡುವುದರಿಂದ, ನೀವು ಪಾವತಿಸಿದ ಹೆಚ್ಚುವರಿ ತೆರಿಗೆಗಾಗಿ ನಿಮಗೆ ಮರುಪಾವತಿ ದೊರೆಯುತ್ತದೆ.

  1. ಆದಾಯದ ಸಾಕ್ಷಿ ಹಾಗೂ ವಿಳಾಸ

ಸರಕಾರವು ನಿಮ್ಮ ಆದಾಯ ತೆರಿಗೆ ರಿಟರ್ನ್ ಅನ್ನು, ನಿಮ್ಮ ವಿಳಾಸ ಹಾಗೂ ಆದಾಯದ ಪರಿಶೀಲನೆಗೆ ಬಳಸುವ ದಾಖಲಾತಿಗಳಲ್ಲಿ ಒಂದಾಗಿ, ಸ್ವೀಕರಿಸುತ್ತದೆ. ಇದರಿಂದ, ಇಂತಹ ಒಂದು ಅಗತ್ಯ ಬಿದ್ದಾಗವೆಲ್ಲಾ ಇದು ಉಪಯುಕ್ತವಾಗಿ ಪರಿಣಮಿಸುತ್ತದೆ. ಇ- ಫೈಲಿಂಗ್ ಸೈಟ್, ಒಂದು ಅನುಕೂಲಕರವಾದ ಸ್ಥಳದಲ್ಲೇ ನಿಮ್ಮ ಎಲ್ಲಾ ಆರ್ಥಿಕ ವ್ಯವಹಾರಗಳನ್ನು ಟ್ರ್ಯಾಕ್ ಮಾಡುವುದಕ್ಕಾಗಿ ಅನುಮತಿ ನೀಡುತ್ತದೆ. ಇದು ಸುರಕ್ಷಿತ ಹಾಗೂ ಹೆಚ್ಚು ಹೊಂದಿಕೊಳ್ಳಬಲ್ಲದ್ದಾಗಿದೆ. ಯಾವುದೇ ಬ್ಯಾಂಕಿಂಗ್ ಅಥವಾ ಸಂಬಂಧಪಟ್ಟ ಉದ್ದೇಶಗಳಿಗೆ, ನೀವು ಆದಾಯದ ಸಾಕ್ಷಿಯಾಗಿ ಇ-ಫೈಲಿಂಗ್ ದಾಖಲೆಯನ್ನು ಬಳಸಬಹುದು.

4. ಸಾಲ ಪಡೆಯುವುದು ಸರಳವಾಗುತ್ತದೆ

ದೊಡ್ಡ ಬ್ಯಾಂಕ್ ಗಳು ಅಥವಾ ಸಾಲ ಸಂಸ್ಥೆಗಳು, ನೀವು ವಾಹನ ಸಾಲ(ದ್ವಿಚಕ್ರ ಅಥವಾ ನಾಲ್ಕು ಚಕ್ರ) ಅಥವಾ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಿದ್ದರೆ, ನಿಮ್ಮ ಆದಾಯ ತೆರಿಗೆ ರಿಟರ್ನ್ ನ ಪ್ರತಿಯನ್ನು ಕೇಳಬಹುದು, ಇದರಿಂದ ನಿಮ್ಮ ಸಾಲದ ಅರ್ಜಿಯು ಶೀಘ್ರವಾಗಿ ಸ್ವೀಕರವಾಗಲು ಸಹಾಯವಾಗುತ್ತದೆ.

 

5. ನಷ್ಟಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ

ನಿಮಗೆ ನಿಮ್ಮ ಹಿಂದಿನ ವರ್ಷದ ಉದ್ಯಮ ನಷ್ಟದಿಂದ ಚೇತರಿಸಬೇಕಾಗಿದೆಯೇ? ನೀವು ಒಮ್ಮೆ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಿದ ಮೇಲೆ ನೀವು ನಿಶ್ಚಿಂತರಾಗಬಹುದು.

6. ವೀಸಾಗಳು ಬೇಗನೇ ದೊರೆಯುತ್ತವೆ

ವೀಸಾಗೆ ಅರ್ಜಿ ಸಲ್ಲಿಸುವಾಗ, ಹೆಚ್ಚಿನ ರಾಯಭಾರಿ ಹಾಗೂ ದೂತಾವಾಸ ಕಛೇರಿಗಳು ನಿಮ್ಮ ಬಳಿ ಕಳೆದ ಎರಡು ವರ್ಷಗಳ ಆದಾಯ ತೆರಿಗೆ ರಿಟರ್ನ್ ಗಳನ್ನು ಸಲ್ಲಿಸಲು ಹೇಳಬಹುದು. ಒಂದು ಸುಗಮವಾದ ವಿಸಾ ಪ್ರಕ್ರಿಯೆಗಾಗಿ ನಿಮ್ಮ ತೆರಿಗೆ ರಿಟರ್ನ್ ದಾಖಲೆಗಳನ್ನು ಸಿದ್ಧವಾಗಿಡಿ. 

7. ಸ್ಟಾರ್ಟ್ ಅಪ್ ಗಳಿಗೆ ಬಂಡವಾಳ

ನಿಮಗೆ ವಿಸಿ ಗಳಿಂದ ಅಥವಾ ಏಂಜಲ್ ಹೂಡಿಕೆದಾರರಿಂದ ಹಣ ಸಂಗ್ರಹ ಮಾಡಬೇಕೇ? ನಿಮ್ಮ ಇಲ್ಲಿಯವರೆಗಿನ ಎಲ್ಲಾ ಆದಾಯ ತೆರಿಗೆ ರಿಟರ್ನ್ ಗಳು ಸರಿಯಾಗಿರಬೇಕು. ಹಲವು ಹೂಡಿಕೆದಾರರು ನಿಮ್ಮ ಉದ್ಯಮದ ಪ್ರಮಾಣ, ಲಾಭ ಹಾಗೂ ಇತರ ಖರ್ಚಿನ ಅಂಶಗಳನ್ನು ಅಳೆಯಲು ನಿಮ್ಮ ತೆರಿಗೆ ಆದಾಯ ರಿಟರ್ನ್ ಗಳನ್ನು ಪರಿಶೀಲಿಸಬಹುದು. 

ಆದಾಯ ತೆರಿಗೆ ರಿಟರ್ನ್ ಅನ್ನು ಆನ್ಲೈನ್ ಫೈಲ್ ಮಾಡುವ ಲಾಭವೇನು?

ನೀವು ನಿಮ್ಮ ಆದಾಯ ತೆರಿಗೆ ರಿಟರ್ನ್ ಅನ್ನು ಆನ್ಲೈನ್ ಅಥವಾ ಆಫ್ಲೈನ್ ಆಗಿ ಫೈಲ್ ಮಾಡಬಹುದು, ಆದರೆ ಇ-ಫೈಲಿಂಗ್ ಪ್ರಕ್ರಿಯೆಯು ಪತ್ರಗಳ ಮೂಲಕ ಫೈಲ್ ಮಾಡುವ ಪ್ರಕ್ರಿಯೆಗಿಂತ ಶೀಘ್ರ ಹಾಗೂ ಸರಳವಾಗಿದೆ. ಪತ್ರಗಳ ಮೂಲಕ  ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವ ಪ್ರಕ್ರಿಯೆ ಆಯಾಸಕರ ಹಾಗೂ ಸುದೀರ್ಘವಾಗಿತ್ತು.

ಇ- ಫೈಲಿಂಗ್ ತೆರಿಗೆದಾರರಿಗೆ ಒಂದು ದೊಡ್ಡ ವರವಾಗಿದೆ. ತೆರಿಗೆ ಮರುಪಾವತಿಗಳ ಪರಿಷ್ಕರಣೆಯೂ ಗಾನೀಯಾ ಅಗಿ ಶೀಘ್ರವಾಗಿದ್ದು, ಇದನ್ನು ಎಲ್ಲಿ ಬೇಕಾದರೂ ಯಾವ ಸಮಯದಲ್ಲಿ ಬೇಕಾದರೂ ಫೈಲ್ ಮಾಡಬಹುದು. 

ತೆರಿಗೆಗಳ ಆನ್ಲೈನ್ ಪಾವತಿಯಿಂದ ಆಗುವ ಕೆಲವು ಲಾಭಗಳನ್ನು ಇಲ್ಲಿ ನೀಡಲಾಗಿದೆ : 

  • ವ್ಯಕ್ತಿಯು ಎಲ್ಲಾ ರೀತಿಯ ಬ್ಯಾಂಕ್ ಸಾಲಗಳಿಗಾಗಿ ಅರ್ಜಿ ಸಲ್ಲಿಸಲು ಅರ್ಹನಾಗುತ್ತಾರೆ.
  • ಐಟಿ ರಿಟರ್ನ್ ಫೈಲ್ ಮಾಡುವುದರಿಂದ ಥರ್ಡ್ ಪಾರ್ಟೀ ಇನ್ಶೂರೆನ್ಸ್ ಕ್ಲೈಮ್ ಪರಿಷ್ಕರಣೆಯಲ್ಲಿ ಸಹಾಯವಾಗುತ್ತದೆ.
  • ಐಟಿ ರಿಟರ್ನ್ ಫೈಲ್ ಮಾಡುವುದರಿಂದ ವ್ಯಕ್ತಿಯು ಭಾರತದಿಂದ ಹೊರಗೆ ಹೋಗಲು ವೀಸಾಗೆ ಅರ್ಜಿ ಸಲ್ಲಿಸುವಾಗ, ಅವರ ವಲಸೆ ಪ್ರೊಫೈಲ್ ಗೆ ಪ್ರಾಮುಖ್ಯತೆ ದೊರೆಯುತ್ತದೆ.
  • ಎಲೈಸಿ/ಜಿಐಸಿ ಹಾಗೂ ಇತರ ಸರಕಾರದ ಏಜನ್ಸೀಗಳಿಂದ ಅಥವಾ ಸಾರ್ವಜನಿಕ/ಖಾಸಗಿ ವಿಭಾಗದ ಕಾರ್ಯ ಪೂರ್ತಿಯ ಉದ್ದೇಶಗಳಿಗಾಗಿ.
  • ಒಬ್ಬ ವ್ಯಕ್ತಿಯು, ಐಟಿ ರಿಟರ್ನ್ ಫೈಲ್ ಮಾಡಿದಾಗ, ಅವನಿಗೆ ಅಥವಾ ಅವಳಿಗೆ ಸುಲಭವಾಗಿ ಸ್ಟಾರ್ಟಪ್ ಹಣ ದೊರೆಯುತ್ತದೆ.
  • ಸರಕಾರದ ಟೆಂಡರ್ ಗಳಿಗೆ ಅರ್ಹರಾಗಲು ಹಾಗೂ ಸಮಿತಿಗಳಲ್ಲಿ ಭಾಗಿಯಾಗಲು.

ಐಟಿಆರ್(ITR) ಫೈಲ್ ಮಾಡಲು ನಿಮಗೆ ಯಾವ ದಾಖಲೆಗಳು ಬೇಕಾಗುತ್ತವೆ?

ನಿಮ್ಮ ಆದಾಯ ಚೀಟಿ, ಬ್ಯಾಂಕ್ ಉಳಿತಾಯ ಖಾತೆ ಪಾಸ್ ಬುಕ್, ಆಧಾರ್ ಕಾರ್ಡ್, ಮತ್ತು ಪಾನ್ ಕಾರ್ಡ್ ಅನ್ನು ಹೊರತುಪಡಿಸಿ ನಿಮಗೆ ನಿಮ್ಮ ಆದಾಯ ತೆರಿಗೆ ರಿಟರ್ನ್ ನ ಪ್ರಕ್ರಿಯೆಯನ್ನು ಆರಂಭಿಸಲು ನಿಮಗೆ ಈ ಕೆಳಗಿನ ಪತ್ರಗಳ ಅಗತ್ಯವಿರುತ್ತದೆ:

  1. ಫಾರ್ಮ್ 16 : ಈ ದಾಖಲೆಯು ನಿಮ್ಮ ಉದ್ಯೋಗದಾತರಿಂದ ನೀಡಲಾಗುತ್ತದೆ ಹಾಗೂ ಇದು ನಿಮ್ಮ ಆದಾಯ ಹಾಗೂ ಮೂಲದಿಂದ ಕಡಿತವಾದ ತೆರಿಗೆ(ಟಿಡಿಎಸ್) ನ ಮಾಹಿತಿಗಳನ್ನು ಒಳಗೊಂಡಿರುತ್ತದೆ.
  2. ಫಾರ್ಮ್ 16ಎ : ಈ ಫಾರ್ಮ್ ನಲ್ಲಿ ಫಿಕ್ಸ್ಡ್ ಅಥವಾ ಆವರ್ತಕ ಬ್ಯಾಂಕ್ ಠೇವಣಿಗಳ ಬಡ್ಡಿಯ ಮೇಲೆ ಕಡಿತವಾದ ಟಿಡಿಎಸ್ ಬಗ್ಗೆ ಮಾಹಿತಿ ಇರುತ್ತದೆ.
  3. ಫಾರ್ಮ್ 16ಬಿ : ನೀವೊಂದು ಆಸ್ತಿಯನ್ನು ಮಾರಾಟ ಮಾಡಿದಾಗ, ಖರೀದಿದಾರನಿಂದ ನೀವು ಪಡೆದ ಮೊತ್ತಕ್ಕೆ ಟಿಡಿಎಸ್ ಅನ್ವಯಿಸುತ್ತದೆ, ಹಾಗೂ ಅದರ ವಿವರಗಳು ಈ ಫಾರ್ಮ್ ನಲ್ಲಿರುತ್ತದೆ. 
  4. ಫಾರ್ಮ್ 16ಸಿ : ಈ ಫಾರ್ಮ್ ನಲ್ಲಿ ನಿಮ್ಮ ಬಾಡಿಗೆದಾರರು ನಿಮಗೆ ನೀಡುವ ಟಿಡಿಎಸ್ ನ ವಿವರಗಳು ದಾಖಲಾಗಿರುತ್ತವೆ.
  5. ಫಾರ್ಮ್ 26ಎ ಎಸ್ : ಇದು ನಿಮ್ಮ ಪಾನ್ ಸಂಖ್ಯೆಗಾಗಿ ನಿಮ್ಮ ಸಮಗ್ರ ತೆರಿಗೆ ಪ್ರಕಟಣೆ ಆಗಿದೆ. ನಿಮ್ಮ ಉದ್ಯೋಗದಾತರಿಂದ , ಬ್ಯಾಂಕ್, ಅಥವಾ ನಿಮಗೆ ಪಾವತಿ ಮಾಡಿದ ಪ್ರತಿಯೊಂದೂ ಘಟಕದಿಂದ ಬಂದ ಟಿಡಿಎಸ್ ಅನ್ನು ಒಳಗೊಂಡಿದೆ.

ಪಾವತಿಸಲಾದ ಮುಂಗಡ ತೆರಿಗೆಗಳು ಅಥವಾ ಸ್ವಯಂ ಮೌಲ್ಯಮಾಪನಾ ತೆರಿಗೆಗಳು, ಹಾಗೂ 80ಸಿ ಇಂದ 80ಯು ವರೆಗಿನ ವಿಭಾಗಗಳಲ್ಲಿ ನೀಡಲಾದ ಕಡಿತಗಳು ಉದಾಹರಣೆಗೆ ಲೈಫ್ ಇನ್ಶೂರೆನ್ಸ್ ಪಾಲಿಸಿಗಳು ಅಥವಾ ಟರ್ಮ್ ಯೋಜನೆಗಳಂತಹ ತೆರಿಗೆ ಉಳಿತಾಯ ಹೂಡಿಕೆಗಳ ಸಾಕ್ಷಿಗಳು, ಎಲ್ಲಾ ಇದರಲ್ಲಿರುತ್ತವೆ.

ನಾನು ಯಾವ ಐಟಿಆರ್(ITR) ಫ಼ಅರ್ಮ್ ಅನ್ನು ಫೈಲ್ ಮಾಡಬೇಕು?

ವ್ಯಕ್ತಿಗಳ ಹಾಗೂ ಆದಾಯ ಮೂಲದ ವಿವಿಧ ವರ್ಗಗಳಿಗೆ, ಏಳು ರೀತಿಯ ಐಟಿಆರ್ ಫಾರ್ಮ್ ಗಳಿವೆ. ನಿಮ್ಮ ಆದಾಯ ಉತ್ಪತ್ತಿಯ ವಿಧವನ್ನು ಅವಲಂಬಿಸಿ, ಆದಾಯ ತೆರಿಗೆ ಇಲಾಖೆಯು ಪ್ರತಿಯೊಬ್ಬ ತೆರಿಗೆದಾರನಿಗೂ ವಿಭಿನ್ನ ಫಾರ್ಮ್ ಗಳನ್ನು ನೀಡುತ್ತದೆ.

  1. ಐಟಿಆರ್(ITR)– 1: ಈ ಫಾರ್ಮ್ ಇರುವುದು ₹50 ಲಕ್ಷದ ವರೆಗಿನ ಒಟ್ಟು ಆದಾಯವಿರುವ ನಿವಾಸಿಗಳಿಗೆ ಮಾತ್ರ (ಎನ್ ಆರ್ ಐ, ಎಚ್ ಯು ಎಫ್ ಹಾಗೂ ಇತರ ಘಟಕಗಳಿಗಲ್ಲ). ಈ ಆದಾಯವು ಕೆಳಗೆ ನೀಡಿದ ವರ್ಗಗಳಿಂದ ಬರಬೇಕು:

  • ಸಂಬಳ/ಪಿಂಚಣಿಯಿಂದ ಆದಾಯ; ಅಥವಾ
  • ಒಂದು ಮನೆ ಆಸ್ತಿಯಿಂದ ಆದಾಯ
  • ಇತರ ಮೂಲಗಳಿಂದ ಆದಾಯ

  1. ಐಟಿಆರ್(ITR)–  2 : ಐಟಿಆರ್ – 1 ಅನ್ನು ಸಲ್ಲಿಸುವ ಅರ್ಹತೆಯಿಲ್ಲದ ಹಾಗೂ ಉದ್ಯಮ ಅಥವಾ ವೃತ್ತಿಯನ್ನು ಹೊರತುಪಡಿಸಿ ಆದಾಯ ಹೊಂದಿದ ವ್ಯಕ್ತಿಗಳು ಹಾಗೂ ಎಚ್ ಯು ಎಫ್ ಗಳು ಐಟಿಆರ್ 2 ಫಾರ್ಮ್ ಅನ್ನು ಬಳಸಬೇಕು.
  2. ಐಟಿಆರ್(ITR) – 3: ಈ ಫಾರ್ಮ್ ಇರುವುದು ಉದ್ಯಮ ಅಥವಾ ವೃತ್ತಿಯಿಂದ ಹಣ ಸಂಪಾದಿಸುವ ವ್ಯಕ್ತಿಗಳು ಹಾಗೂ ಎಚ್ ಯು ಎಫ್ ಗಳಿಗಾಗಿ.
  3. ಐಟಿಆರ್(ITR) – 4: ಈ ಫಾರ್ಮ್ ಎಲ್ಲಾ ನಿವಾಸಿಗಳಿಗೆ, ಎಚ್ ಯು ಎಫ್ ಗಳಿಗೆ ಹಾಗೂ ಸಂಸ್ಥೆಗಳಿಗೆ(ಎಲ್ ಎಲ್ ಪಿ ಗಳನ್ನು ಹೊರತುಪಡಿಸಿ) ಇದೆ ಯಾರ ಆದಾಯವು ರೂ 50 ಲಕ್ಷದ ವರೆಗೆ ಇರುವುದರ ಜೊತೆಗೆ ಈ ಕೆಳಗೆ ನೀಡಿದಂತಹ ವರ್ಗಗಳಿಂದಲೂ ಆದಾಯ ಬರುತ್ತದೆ : 
  • ವಿಭಾಗ 44ಎಡಿ ಅಥವಾ 44ಎಇ ಅಥವಾ 44ಎಡಿಎ ಅಡಿಯಲ್ಲಿ ಊಹೆಯ ಆಧಾರದ ಮೇಲೆ ಎಣಿಕೆ ಮಾಡಲಾದ ಉದ್ಯಮ ಅಥವಾ ವೃತ್ತಿ ಆದಾಯ.
  • ಸಂಬಳ/ಪಿಂಚಣಿಯಿಂದ ಆದಾಯ
  • ಒಂದು ಮನೆ ಆಸ್ತಿಯಿಂದ ಆದಾಯ
  • ಇತರ ಮೂಲಗಳಿಂದ ಆದಾಯ
  1. ಐಟಿಆರ್(ITR) –  5 : ವ್ಯಕ್ತಿಗಳು, ಎಚ್ ಯು ಎಫ್ ಗಳು, ಕಂಪನಿಗಳು, ಹಾಗೂ ಐಟಿಆರ್ 7 ಫಾರ್ಮ್ ಅನ್ನು ಫೈಲ್ ಮಾಡುವವರು ಐಟಿಆರ್ 5 ಅನ್ನು ತುಂಬಿಸಬೇಕಾಗಿಲ್ಲ.
  2. ಐಟಿಆರ್(ITR) – 6: ವಿಭಾಗ 11 ಅಡಿಯಲ್ಲಿ ವಿನಾಯಿತಿ ಕೋರುವವರನ್ನು ಹೊರತುಪಡಿಸಿ ಈ ಫಾರ್ಮ್ ಎಲ್ಲಾ ಕಂಪನಿಗಳು ಬಳಸಬಹುದು.
  3. ಐಟಿಆರ್(ITR)– 7: ಈ ಫಾರ್ಮ್ ಇರುವುದು, ವಿಭಾಗ 139(4ಎ), 139(4ಬಿ), 139(4ಸಿ), 139(4ಡಿ), 139(4ಇ), or 139(4ಎಫ್) (4ಎಫ್) ನ ಅಡಿಯಲ್ಲಿ ರಿಟರ್ನ್ ಫೈಲ್ ಮಾಡಬೇಕಾದ ವ್ಯಕ್ತಿಗಳು ಹಾಗೂ ಉದ್ಯಮಗಳಿಗೆ. ಧಾರ್ಮಿಕ ಹಾಗೂ ದೇಣಿಗೆಯ ಟ್ರಸ್ಟ್ ಗಳು, ರಾಜನೈತಿಕ ಸಂಸ್ಥೆಗಳು, ವೈಜ್ಞಾನಿಕ ಸಂಶೋಧನಾ ಸಂಘಗಳು, ವಿಶ್ವವಿದ್ಯಾನಿಲಯಗಳು, ಕಾಲೇಜ್ ಗಳು ಎಲ್ಲಾ ಇದರಲ್ಲಿ ಸೇರುತ್ತವೆ.

ಸಂಬಳ ಪಡೆಯುವ ನೌಕರರು ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವುದು ಹೇಗೆ?

ಕೊನೆಯಲ್ಲಿ, ಈಗ ನೀವು ಆದಾಯ ತೆರಿಗೆ ರಿಟರ್ನ್ ಅನ್ನು ಫೈಲ್ ಮಾಡುವ ವಿವಿಧ ಅಂಶಗಳಿಂದ ಪರಿಚಿತರಾಗಿರುವ ಕಾರಣ ಸಂಬಳ ಪಡೆಯುವ ನೌಕರರು ಐಟಿಆರ್ ಅನ್ನು ಆನ್ಲೈನ್ ಫೈಲ್ ಮಾಡುವುದು ಹೇಗೆ ಎಂದು ತಿಳಿಯೋಣ.ಕೇವಲ ಈ ನಿರ್ದೇಶನಗಳನ್ನು ಪಾಲಿಸಿ:

ಹೆಜ್ಜೆ 1: ಆದಾಯ ತೆರಿಗೆ ಇಲಾಖೆಯ ಇ- ಫೈಲಿಂಗ್ ಪೋರ್ಟಲ್ ಗೆ ಹೋಗಿ.

ಹೆಜ್ಜೆ 2 : ನಿಮ್ಮ ಬಳಕೆದಾರ ಐಡಿ (ಪಾನ್), ಪಾಸ್ವರ್ಡ್ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಪ್ರವೇಶವನ್ನು ಪಡೆಯಿರಿ. ನೀವು ನೋಂದಾಯಿತರಾಗಿರದೇ ಇದ್ದರೆ, ನೀವು ನಿಮ್ಮ ಪಾನ್ ಸಂಖ್ಯೆಯನ್ನು ಬಳಸಿ ಒಂದು ಖಾತೆಯನ್ನು ತೆರೆಯಬಹುದು. ಈ ಸಂಖ್ಯೆಯು ನಿಮ್ಮ ಬಳಕದಾರ ಐಡಿ ಆಗಿರುತ್ತದೆ.

ಹೆಜ್ಜೆ 3 : ಇ- ಫೈಲ್ ವಿಭಾಗದಲ್ಲಿ, ಡ್ರಾಪ್ ಡೌನ್ ಬಾಕ್ಸ್ ನಿಂದ ಸೂಕ್ತ ಮೌಲ್ಯಮಾಪನ ವರ್ಷವನ್ನು ಆಯ್ಕೆ ಮಾಡಿ ‘ಇಂಕಮ್ ಟ್ಯಾಕ್ಸ್ ರಿಟರ್ನ್’ ಮೇಲೆ ಕ್ಲಿಕ್ ಮಾಡಿ. ಈ ಹಂತದಲ್ಲಿ, ನೀವು ಸರಿಯಾದ ಆದಾಯ ತೆರಿಗೆ ರಿಟರ್ನ್ ಫಾರ್ಮ್(ಐಟಿಆರ್) ಅನ್ನು ಆಯ್ಕೆ ಮಾಡಿ ಡೌನ್ಲೋಡ್ ಮಾಡಬೇಕು. ಸಂಬಳ ಪಡೆಯುವ ನೌಕರರಿಗೆ . ITR-1, ITR-2, and ITR-3 ಆಯ್ಕೆಗಳಾಗಿವೆ.

ಹೆಜ್ಜೆ 4: ನೀವು ಒಂದು ರಿವೈಸ್ಡ್ ಅಥವಾ ಪರಿಷ್ಕೃತ ರಿಟರ್ನ್ ಅನ್ನು ಫೈಲ್ ಮಾಡುತ್ತಿಲ್ಲವಾದರೆ, ಫೈಲಿಂಗ್ ವಿಧವನ್ನು ‘ಒರಿಜಿನಲ್’ ಎಂದು ಆಯ್ಕೆ ಮಾಡಿ.

ಹೆಜ್ಜೆ 5: ಸಲ್ಲಿಕೆ ಮೋಡ್ ಅಲ್ಲಿ ‘ಆನ್ಲೈನ್ ತಯಾರಿಸಿ ಹಾಗೂ ಸಲ್ಲಿಸಿ’ ಎಂದು ಆಯ್ಕೆ ಮಾಡು ‘ಕಂಟಿನ್ಯೂ’ ಮೇಲೆ ಕ್ಲಿಕ್ ಮಾಡಿ.

ಹೆಜ್ಜೆ 6 : ನಿಮ್ಮ ಆದಾಯ, ಕಡಿತಗಳು, ವಿನಾಯಿತಿಗಳು, ಹೂಡಿಕೆಗಳು ಈ ಎಲ್ಲಾ ವಿವರಗಳನ್ನು ಹೊಂದಿರುವ ಸೂಕ್ತ ಮಾಹಿತಿಯೊಂದಿಗೆ ಫಾರ್ಮ್ ಅನ್ನು ತುಂಬಿಸಿ. ನಂತರ ನೀವು ಟಿಡಿಎಸ್, ಟಿಸಿಎಸ್ ಮತ್ತು ಮುಂಗಡ ತೆರಿಗೆಗಳ ಮೂಲಕ ಪಾವತಿಸಿದ ತೆರಿಗೆಗಳ ಮಾಹಿತಿಯನ್ನು ನಮೂದಿಸಬೇಕು. ಆದರೆ, ಈ ಎಲ್ಲಾ ಮಾಹಿತಿಗಳು ಸರಿಯಾಗಿವೆ ಎಂದು ಖಚಿತ ಪಡಿಸಿ.

ಹೆಜ್ಜೆ  7: ಎಣಿಕೆ ಮಾಡಿ ಪಾವತಿಸಬೇಕಾದ ತೆರಿಗೆಯನ್ನು ಪಾವತಿಸಿ. ನಂತರ, ನಿಮ್ಮ ತೆರಿಗೆ ರಿಟರ್ನ್ ನಲ್ಲಿ, ಚಲಾನ್ ಮಾಹಿತಿಯನ್ನು ಸೇರಿಸಿ.(ನೀವು ತೆರಿಗೆ ಹಣಕ್ಕೆ ಭಾದ್ಯವಲ್ಲದಿದ್ದರೆ, ಈ ಹೆಜ್ಜೆಯಾನ್ನು ಮಾಡಬೇಡಿ).

ಹೆಜ್ಜೆ 8: ನೀವು ಫಾರ್ಮ್ ನಲ್ಲಿ ನೀಡಿರುವ ಮಾಹಿತಿಗಳನ್ನು ಪುನರ್ಪರಿಶೀಲಿಸಿ. ‘ಸಬ್ಮಿಟ್’ ಅಥವಾ’ಸಲ್ಲಿಸಿ’ ಬಟನ್ ಅನ್ನು ಕ್ಲಿಕ್ ಮಾಡಿ. ಮುಗಿಯಿತು!

ಈ ರೀತಿ ಒಬ್ಬ ಸಂಬಳ ಪಡೆಯುವ ನೌಕರ ಐಟಿಆರ್ ಅನ್ನು ಆನ್ಲೈನ್ ಫೈಲ್ ಮಾಡಬಹುದು. ಈ ಕ್ಷಣದಲ್ಲಿ ನಿಮ್ಮ ಕಂಪ್ಯೂಟರ್ ತೆರೆಯ ಮೇಲೆ, ಇ -ಫೈಲಿಂಗ್ ಯಶಸ್ವಿಯಾಗಿತ್ತು ಎಂಬ ಸಂದೇಶ ಬರುತ್ತದೆ. ತದನಂತರ, ಒಂದು ಸ್ವೀಕೃತಿ ಫಾರ್ಮ್ ಉತ್ಪನ್ನವಾಗುತ್ತದೆ. 

ಈಗ ನೀವು ಈ ಕೆಳಗಿನ ವಿಧಾನಗಳಲ್ಲಿ ಒಂದರ ಮೂಲಕ ನಿಮ್ಮ ರಿಟರ್ನ್ ಅನ್ನು ಮಾನ್ಯ ಗೊಳಿಸಬೇಕು:

  • ಆಧಾರ್ ಒಟಿಪಿ
  • ಬ್ಯಾಂಕ್ ಖಾತೆ ಸಂಖ್ಯೆ
  • ಡಿಮ್ಯಾಟ್ ಸಂಖ್ಯೆ
  • ನೋಂದಾಯಿತ ಮೊಬೈಲ್ ಸಂಖ್ಯೆ
  • ನೆಟ್ ಬ್ಯಾಂಕಿಂಗ್
  • ಅಂಚೆ ಮೂಲಕ ಬೆಂಗಳೂರಿನ ಸೆಂಟ್ರಲೈಸ್ಡ್ ಪ್ರೊಸೆಸಿಂಗ್ ಸೆಂಟರ್ (ಸಿಪಿಸಿ) ಗೆ ಸ್ವೀಕೃತಿಯ ಭೌತಿಕ ಪ್ರತಿಯನ್ನು ಕಳಿಸುವುದು.

ನಾನು ನನ್ನ ತೆರಿಗೆ ರಿಟರ್ನ್ ಅನ್ನು ಯಾವಾಗ ಫೈಲ್ ಮಾಡಬೇಕು?

ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವ ಕೊನೆಯ ದಿನಾಂಕವು 31 ಜುಲೈ ಆಗಿದೆ.(ಯಾವ ವರ್ಷಕ್ಕಾಗಿ  ಫೈಲ್ ಮಾಡಬೇಕೋ ಆ ಆರ್ಥಿಕ ವರ್ಷದ ಕೊನೆಯಲ್ಲಿ). ಈ ಕೊನೆಯ ಅವಧಿಯನ್ನು ವಿಸ್ತರಿಸುವ ಅಧಿಕಾರ ಆದಾಯ ತೆರಿಗೆ ಇಲಾಖೆಗೆ ಇರುತ್ತದೆ.

ಇದರ ಪರಿಣಾಮವಾಗಿ, ಮಾರ್ಚ್ 31, 2021 ಗೆ ಕೊನೆಗೊಂಡ ಆರ್ಥಿಕ ವರ್ಷ 2020-21 ದ ಕೊನೆಯ ದಿನಾಂಕವನ್ನು, ಡಿಸೆಂಬರ್ 31, 2021 ವರೆಗೆ ವಿಸ್ತರಿಸಲಾಗಿದೆ.

ನಿಮ್ಮಿಂದ ಕೊನೆಯ ದಿನಾಂಕ ತಪ್ಪಿಹೋದರೆ ಅಥವಾ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವ ಕೊನೆಯ ದಿನಾಂಕದ ನಂತರ ನೀವಿದನ್ನು ಮಾಡಲು ಬಯಸಿದರೆ?

ನಿಮ್ಮಿಂದ ಕೊನೆಯ ದಿನಾಂಕ ತಪ್ಪಿಹೋದರೂ, ನೀವು ತಡಾವಾದ/ ಬಿಲೇಟೆಡ್ ರಿಟರ್ನ್ ಅನ್ನು ಫೈಲ್ ಮಾಡಬಹುದು. ಸೂಕ್ತ ಮೌಲ್ಯಮಾಪನಾ ವರ್ಷದ ಮೂರು ತಿಂಗಳ ಮೊದಲು, ನೀವಿದನ್ನು ಮಾಡಬಹುದು.

ಆರ್ಥಿಕ ವರ್ಷ 2020-21 ಕ್ಕಾಗಿ ಐಟಿಆರ್ ಫೈಲ್ ಮಾಡಲು ನಿಮ್ಮ ಬಳಿ ಡಿಸೆಂಬರ್ 31, 2021 ವರೆಗೆ ಸಮಯವಿದೆ ಇದನ್ನು ಮಾರ್ಚ್ 31, 2022 ವರೆಗೆ ವಿಸ್ತರಿಸಲಾಗಿದೆ.

ಈಗ ನೀವು ಐಟಿಆರ್ ಫೈಲ್ ಮಾಡಬೇಕೇ ಬೇಡವೇ ಎಂದು ತಿಳಿದ ಮೇಲೆ, ನೀವು ಪ್ರತೀ ವರ್ಷ ಕೊನೆಯ ದಿನಾಂಕಕ್ಕಿಂತ ಮೊದಲೇ ಇದನ್ನು ಮುಗಿಸಲು ಪ್ರಯತ್ನಿಸಬೇಕು. ( ಕಾನೂನು ಬಾಹಿರವಾಗಿರಬಾರದು ಅಲ್ಲವೇ)ನಿಮ್ಮ ಆದಾಯ ತೆರಿಗೆ ಫೈಲ್ ಗಳನ್ನು ಸ್ವಚ್ಚ ಹಾಗೂ ಬಲಿಷ್ಠವಾಗಿ ಮಾಡಿ ಇಡಿ.

ನಿಖರವಾದ ಆದಾಯ ತೆರಿಗೆ ರಿಟರ್ನ್ ಅನ್ನು ಫೈಲ್ ಮಾಡಿ; ಹಾಗೂ ನಿಮಗೆ ಸಹಾಯ ಬೇಕಾಗಿದ್ದರೆ, ಒಬ್ಬ ವೃತ್ತಿಪರರೊಂದಿಗೆ ಸಮಾಲೋಚಿಸಲು ಹಿಂಜರಿಯಬೇಡಿ. 

Team Jar

Author

Team Jar

ChangeJar is a platform that helps you save money and invest in gold.

download-nudge

Save Money In Digital Gold

Join 4 Cr+ Indians on Jar, India’s Most Trusted Savings App.

Download App Now