Playstore Icon
Download Jar App
Credit Cards

ಕ್ರೆಡಿಟ್ ಸ್ಕೋರ್ ಎಂದರೇನು? ಉತ್ತಮ ಕ್ರೆಡಿಟ್ ಸ್ಕೋರ್ ಅನ್ನು ಹೇಗೆ ನಿರ್ಮಿಸುವುದು? - ಜಾರ್ ಆ್ಯಪ್‌

December 30, 2022

ಉತ್ತಮ ಕ್ರೆಡಿಟ್ ಸ್ಕೋರ್ ಎಂದರೇನು? ಮಿನಿ ಕ್ರೆಡಿಟ್ ಸ್ಕೋರ್ ಮಾರ್ಗದರ್ಶಿ ಇದು ಉತ್ತಮ ಕ್ರೆಡಿಟ್ ಸ್ಕೋರ್ ಅನ್ನು ನಿರ್ಮಿಸುವುದರಿಂದ ಆಗುವ ಪ್ರಯೋಜನಗಳು ಮತ್ತು ಕ್ರೆಡಿಟ್ ಸ್ಕೋರ್ ನಿರ್ಮಿಸುವ ಮಾರ್ಗಗಳನ್ನು ಒಳಗೊಂಡಿದೆ.

ಉತ್ತರ ಏನೇ ಇರಲಿ, ಪ್ರತಿಯೊಬ್ಬರೂ ತಮ್ಮ ಕ್ರೆಡಿಟ್ ಸ್ಕೋರ್ ಮತ್ತು ಕ್ರೆಡಿಟ್ ವರದಿಯತ್ತ ಗಮನ ಹರಿಸುವುದು ಮುಖ್ಯ.

ಕ್ರೆಡಿಟ್ ವರದಿ ಏಕೆ, ನೀವು ಹೀಗೆ ಕೇಳುತ್ತೀರಿ. ಅಲ್ಲವೇ? ಒಳ್ಳೆಯದು. ಕ್ರೆಡಿಟ್ ಸ್ಕೋರ್ ಎನ್ನುವುದು, ನೀವು ಅಡಮಾನ, ಕ್ರೆಡಿಟ್ ಕಾರ್ಡ್ ಅಥವಾ ಸಾಲವನ್ನು ಸ್ವೀಕರಿಸಬಹುದೇ ಎಂಬುದರ ಬಗ್ಗೆ ಮಾತ್ರವಲ್ಲ.

ಇದು ನಿಮ್ಮ ಮೊಬೈಲ್ ಫೋನ್‌ನ ಈಎಮ್ಐ, ತಿಂಗಳ ವೆಹಿಕಲ್ ಇನ್ಶೂರೆನ್ಸ್ , ಬ್ಯಾಂಕ್ ಖಾತೆಗಳು ಮತ್ತು ಇತರ ಹಣಕಾಸು ವಹಿವಾಟುಗಳ ಮೇಲೂ ಪರಿಣಾಮ ಬೀರಬಹುದು.

ಸರಿಯಾದ ಕ್ರೆಡಿಟ್ ಸ್ಕೋರ್ ಮತ್ತು ಕ್ರೆಡಿಟ್ ರಿಪೋರ್ಟ್ ಎಂದರೇನು ಅಥವಾ ಅದನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಎಂಬುದರ ಕುರಿತು ನೀವು ಖಚಿತವಾಗಿಲ್ಲವೇ? ಚಿಂತಿಸಬೇಡಿ, ಜಾರ್ ನಿಮ್ಮನ್ನು ಕವರ್ ಮಾಡುತ್ತದೆ.

ಕ್ರೆಡಿಟ್ ಸ್ಕೋರ್ ಎಂದರೇನು?

ಕ್ರೆಡಿಟ್ ಸ್ಕೋರ್ ಎನ್ನುವುದು ಸಾಮಾನ್ಯವಾಗಿ 300 ರಿಂದ 900 ರವರೆಗಿನ ಮೂರು ಡಿಜಿಟ್‌ನ ಅಂಕಿ-ಅಂಶವಾಗಿದೆ. ಸ್ಕೋರ್, ನಿಮ್ಮ ಕ್ರೆಡಿಟ್ ರಿಪೋರ್ಟನಲ್ಲಿನ ಮಾಹಿತಿಯನ್ನು ಆಧರಿಸಿದೆ. ಉದಾಹರಣೆಗೆ ನಿಮ್ಮ ಪೇಮೆಂಟ್ ಹಿಸ್ಟರಿ, ನೀವು ನೀಡಬೇಕಾದ ಸಾಲದ ಮೊತ್ತ ಮತ್ತು ನೀವು ಕ್ರೆಡಿಟ್ ಹೊಂದಿದ ಸಮಯದ ಅವಧಿ.

ಬ್ಯಾಂಕ್‌ಗಳು, ಕ್ರೆಡಿಟ್ ಕಾರ್ಡ್ ಕಂಪನಿಗಳು, ಕಾರ್ ಡೀಲರ್‌ಶಿಪ್‌ಗಳಂತಹ ಸಂಭಾವ್ಯ ಲೆಂಡರ್‌ಗಳು ಮತ್ತು ಕ್ರೆಡಿಟರ್‌ಗಳು , ನಿಮಗೆ ಲೋನ್ ಅಥವಾ ಕ್ರೆಡಿಟ್ ಕಾರ್ಡ್‌ನಂತಹ ಕ್ರೆಡಿಟ್ ಅನ್ನು ಒದಗಿಸಬೇಕೇ ಅಥವಾ ಬೇಡವೇ ಎಂಬುದನ್ನು ಮೌಲ್ಯಮಾಪನ ಮಾಡುವಲ್ಲಿ, ಕ್ರೆಡಿಟ್ ಸ್ಕೋರ್‌ಗಳನ್ನು ಒಂದು ಮುಖ್ಯ ಅಂಶವೆಂದು ಪರಿಗಣಿಸುತ್ತಾರೆ.

ನೀವು ಎರವಲು ಪಡೆದ ಹಣದ, ಮರುಪಾವತಿಸುವ ಸಾಧ್ಯತೆಯನ್ನು ಅಂದಾಜಿಸಲು, ಅವರು ಬಳಸುವ ಹಲವು ಅಂಶಗಳಲ್ಲಿ ಕ್ರೆಡಿಟ್ ಸ್ಕೋರ್ ಸಹ ಒಂದಾಗಿದೆ. ಅವರು ವಿಭಿನ್ನ ದತ್ತಾಂಶವನ್ನು ವಿಶ್ಲೇಷಿಸುತ್ತಾರೆ.  ಉದಾಹರಣೆಗೆ - ನೀವು ಇತ್ತೀಚೆಗೆ ಎಷ್ಟು ಅಪ್ಲಿಕೇಶನ್‌ಗಳನ್ನು ಮಾಡಿದ್ದೀರಿ, ನೀವು ಎಷ್ಟು ಬಾಕಿ ಉಳಿಸಿಕೊಂಡಿದ್ದೀರಿ, ನೀವು ಯಾವ ಕ್ರೆಡಿಟ್ ಉತ್ಪನ್ನಗಳನ್ನು ಹೊಂದಿದ್ದೀರಿ ಮತ್ತು ನೀವು ಅವುಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಿದ್ದೀರಾ ಅಥವಾ ಇಲ್ಲವೇ ಎನ್ನುವುದನ್ನು ಪರಿಶೀಲಿಸುತ್ತಾರೆ.

ಇಕ್ವಿಫ್ಯಾಕ್ಸ್ (Equifax), ಸಿಬಿಲ್ ಟಿಎಮ್ (CIBILTM), ಎಕ್ಸ್‌ಪೀರಿಯನ್ ಟಿಎಮ್ (Experian TM), ಸಿಆರ್‌ಐಎಫ್ ಹೈ ಮಾರ್ಕ್ ಟಿಎಮ್ (CRIF High MarkTM), ಮತ್ತು ಇತರ ಕ್ರೆಡಿಟ್ ಬ್ಯೂರೋಗಳು, ಭಾರತದಲ್ಲಿ ಕ್ರೆಡಿಟ್ ಸ್ಕೋರ್‌ಗಳನ್ನು ಜನರೇಟ್ ಮಾಡುತ್ತವೆ.

ಈಗ, ಪ್ರತಿ ಕ್ರೆಡಿಟ್ ಏಜೆನ್ಸಿಯು ಕ್ರೆಡಿಟ್ ರೇಟಿಂಗ್‌ಗಳನ್ನು ಲೆಕ್ಕಾಚಾರ ಮಾಡಲು ವಿಭಿನ್ನ ಕ್ರಮಗಳನ್ನು ಬಳಸುವುದರಿಂದ, ಕ್ರೆಡಿಟ್ ಸ್ಕೋರ್‌ಗಳು ಪರಸ್ಪರ ಸ್ವಲ್ಪ ಭಿನ್ನವಾಗಿರಬಹುದು.

ಉತ್ತಮ ಕ್ರೆಡಿಟ್ ಸ್ಕೋರ್ ಎಂದರೇನು?

ಕ್ರೆಡಿಟ್ ಸ್ಕೋರ್ ಶ್ರೇಣಿ ವ್ಯವಸ್ಥೆಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ನಿಮಗಾಗಿ ಟೇಬಲ್ ಇಲ್ಲಿದೆ:

ಕ್ರೆಡಿಟ್ ಸ್ಕೋರ್ ಶ್ರೇಣಿ

  ಗ್ರೇಡ್

750 - 900

ಅತ್ಯುತ್ತಮವಾಗಿದೆ

700 - 749

ಉತ್ತಮವಾಗಿದೆ

650 - 699

ಸರಿಯಾಗಿದೆ

600 - 649

ಅನುಮಾನಾಸ್ಪದವಾಗಿದೆ

600 ಕ್ಕಿಂತ ಕೆಳಗೆ

ತಕ್ಷಣ ಕ್ರಮಕೈಗೊಳ್ಳುವ ಅಗತ್ಯವಿದೆ

 

ನೆನಪಿಡಿ, ಹೆಚ್ಚಿನ ಕ್ರೆಡಿಟ್ ಸ್ಕೋರ್‌ಗಳು ನೀವು ಉತ್ತಮ ಕ್ರೆಡಿಟ್ ಆ್ಯಕ್ಟಿವಿಟಿ ಇತಿಹಾಸವನ್ನು ಹೊಂದಿದ್ದೀರಿ ಎನ್ನುವುದನ್ನು ಸೂಚಿಸುತ್ತದೆ. ಇದು ಕ್ರೆಡಿಟ್ ರಿಕ್ವೆಸ್ಟ್ ಅನ್ನು ಪರಿಶೀಲಿಸುವಾಗ, ಸಂಭಾವ್ಯ ಲೆಂಡರ್‌ಗಳು ಮತ್ತು ಕ್ರೆಡಿಟರ್‌ಗಳಿಗೆ ಹೆಚ್ಚಿನ ವಿಶ್ವಾಸವನ್ನು ನೀಡುತ್ತದೆ.

ಉತ್ತಮ ಕ್ರೆಡಿಟ್ ಸ್ಕೋರ್ ಅನ್ನು ಹೇಗೆ ನಿರ್ಮಿಸುವುದು?

ಜವಾಬ್ದಾರಿಯುತ ಕ್ರೆಡಿಟ್ ಅಭ್ಯಾಸಗಳನ್ನು ರಚಿಸಲು - ಅಥವಾ ನಿರ್ವಹಿಸಲು - ನೀವು ಪ್ರಾರಂಭಿಸುವಾಗ, ನೀವು ಉತ್ತಮ ಕ್ರೆಡಿಟ್ ಸ್ಕೋರ್ ಅನ್ನು ಹೇಗೆ ನಿರ್ಮಿಸಬಹುದು ಎನ್ನುವುದನ್ನು ಇಲ್ಲಿ ತಿಳಿಯಿರಿ:

  • ಯಾವಾಗಲೂ ನಿಮ್ಮ ಬಿಲ್‌ಗಳನ್ನು ಸಮಯಕ್ಕೆ ಪಾವತಿಸಿ 

ಸಾಮಾನ್ಯವಾಗಿ ಕ್ರೆಡಿಟ್ ಸ್ಕೋರ್ ಅನ್ನು ಲೆಕ್ಕಾಚಾರ ಮಾಡುವಾಗ ಕ್ರೆಡಿಟ್ ಬ್ಯೂರೋಗಳು ಅಂಶೀಕರಿಸಿದ ಎಲ್ಲಾ ವಿಷಯಗಳಲ್ಲಿ, ಕ್ರೆಡಿಟ್ ಕಾರ್ಡ್ ಬಾಕಿಗಳ ನಿಯಮಿತ ಮತ್ತು ಸಮಯೋಚಿತ ಮರುಪಾವತಿ ಹಾಗೂ ಲೋನ್ ಈಎಮ್ಐಗಳು ಹೆಚ್ಚಿನ ತೂಕವನ್ನು ಪಡೆಯುತ್ತವೆ. ಆದ್ದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಉತ್ತಮವಾಗಿ ಕಾಪಾಡಿಕೊಳ್ಳಲು ನಿಮ್ಮ ಲೋನ್ ಮತ್ತು ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ಅನ್ನು ಸಮಯಕ್ಕೆ ಸರಿಯಾಗಿ ಪಾವತಿಸಿ. ಬಿಲ್‌ಗಳನ್ನು ಪಾವತಿಸುವಲ್ಲಿ ನೀವು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ತಕ್ಷಣವೇ ನಿಮ್ಮ ಲೆಂಡರ್‌ಗಳನ್ನು ಸಂಪರ್ಕಿಸಿ.

  • ಕಡಿಮೆ ಅವಧಿಯಲ್ಲಿ ಹೆಚ್ಚಿನ ಲೋನ್‌ಗಳು ಅಥವಾ ಕ್ರೆಡಿಟ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಬೇಡಿ

ನೀವು ಲೋನ್ ಅಥವಾ ಕ್ರೆಡಿಟ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದಾಗ, ನಿಮ್ಮ ಕ್ರೆಡಿಟ್ ಅರ್ಹತೆಯನ್ನು ನಿರ್ಣಯಿಸಲು ಲೆಂಡರ್‌ನು ನಿಮ್ಮ ಕ್ರೆಡಿಟ್ ವರದಿಯನ್ನು ಕ್ರೆಡಿಟ್ ಏಜೆನ್ಸಿಯಿಂದ ಪಡೆಯುತ್ತಾನೆ. ಪ್ರತಿ ಲೆಂಡರ್-ಪ್ರಾರಂಭಿಸಿದ ಕ್ರೆಡಿಟ್ ರಿಪೋರ್ಟ್ ಅನ್ನು ಕಠಿಣ ವಿಚಾರಣೆ ಎಂದು ಕರೆಯಲಾಗುತ್ತದೆ. ಇದು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಕೆಲವು ಪಾಯಿಂಟ್‌ಗಳಿಂದ ಕಡಿಮೆ ಮಾಡುತ್ತದೆ. ಸರಳವಾಗಿ ಹೇಳುವುದಾದರೆ, ಕಡಿಮೆ ಅವಧಿಯಲ್ಲಿ ಬಹಳಷ್ಟು ಲೋನ್ ಅಥವಾ ಕ್ರೆಡಿಟ್ ಕಾರ್ಡ್ ಅಪ್ಲಿಕೇಶನ್‌ಗಳನ್ನು ಮಾಡುವುದರಿಂದ ಅದು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ತೀವ್ರವಾಗಿ ಕಡಿಮೆ ಮಾಡುತ್ತದೆ.

  • ನಿಮ್ಮ ಕ್ರೆಡಿಟ್ ರಿಪೋರ್ಟ್ ಅನ್ನು ನಿಯಮಿತ ಆಧಾರದ ಮೇಲೆ ಪರಿಶೀಲಿಸಿ

ಕ್ರೆಡಿಟ್ ಬ್ಯೂರೋಗಳು ಸಾಮಾನ್ಯವಾಗಿ ಕ್ರೆಡಿಟ್ ಸ್ಕೋರ್‌ಗಳನ್ನು ಲೆಕ್ಕಾಚಾರ ಮಾಡಲು ಲೆಂಡರ್‌ಗಳು ಮತ್ತು ಕ್ರೆಡಿಟ್ ಕಾರ್ಡ್ ವಿತರಕರು ಒದಗಿಸಿದ ಮಾಹಿತಿಯನ್ನು ಬಳಸುತ್ತವೆ. ನೀಡಲಾಗಿರುವ ನಿಮ್ಮ ವೈಯಕ್ತಿಕ ಮಾಹಿತಿಯು ಸರಿಯಾಗಿದೆ ಮತ್ತು ಯಾವುದೇ ಖಾತೆಯ ಮಾಹಿತಿಯು ತಪ್ಪಾಗಿಲ್ಲ ಅಥವಾ ಅಪೂರ್ಣವಾಗಿಲ್ಲ ಎಂದು ಖಚಿತಪಡಿಸಿಕೊಳ್ಳಲು, ನಿಮ್ಮ ಕ್ರೆಡಿಟ್ ರಿಪೋರ್ಟಿನ ಉಚಿತ ನಕಲಿಗಾಗಿ ವಿನಂತಿಸಿಕೊಳ್ಳಿ. ಮತ್ತದನ್ನು ಪರಿಶೀಲಿಸಿ. ಆಗಾಗ ನಿಮ್ಮ ಕ್ರೆಡಿಟ್ ರಿಪೋರ್ಟ್ ಮೇಲೆ ನಿಗಾವಹಿಸಿ. ಆನ್‌ಲೈನ್ ಹಣಕಾಸು ಮಾರುಕಟ್ಟೆ ಸ್ಥಳಗಳಿಗೆ ಹೋಗುವ ಮೂಲಕ ನೀವು ನಿಮ್ಮ ಉಚಿತ ಕ್ರೆಡಿಟ್ ರಿಪೋರ್ಟಗಳು ಮತ್ತು ನಿಯಮಿತ ಅಪ್‌ಡೇಟ್‌ಗಳನ್ನು ಸಹ  ಪಡೆಯಬಹುದು.

  • ನಿಮ್ಮ ಸಾಲಗಳನ್ನು ಎಷ್ಟು ಸಾಧ್ಯವೋ ಅಷ್ಟು ಬೇಗ ತೀರಿಸಿ

ಇದು ಸಾಮಾನ್ಯ ಜ್ಞಾನ. ನಿಮ್ಮ ಎಲ್ಲಾ ಸಾಲಗಳನ್ನು ತೀರಿಸಿ. ಕ್ರೆಡಿಟ್ ಕಾರ್ಡ್ ಲಿಮಿಟ್‌ಗಿಂತ ಗಣನೀಯವಾಗಿ ಕಡಿಮೆಯಿರುವ, ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ಅನ್ನು ಕಾಪಾಡಿಕೊಳ್ಳಿ. ನಿಮ್ಮ ಕ್ರೆಡಿಟ್ ಲಿಮಿಟ್‌ಗಿಂತ ಹೆಚ್ಚಿನ ಮೊತ್ತವನ್ನು ನೀವು ಹೊಂದಿದ್ದರೆ ಅದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರಬಹುದು.

ಉತ್ತಮ ಕ್ರೆಡಿಟ್ ಸ್ಕೋರ್‌ನ ಪ್ರಯೋಜನಗಳೇನು?

ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವ ಕೆಲವು ಪ್ರಮುಖ ಪ್ರಯೋಜನಗಳು ಇಲ್ಲಿವೆ:

  • ಎಲ್ಲಾ ವಿಧದ ಲೋನ್‌ಗಳ ಮೇಲೆ ನೀವು ಕಡಿಮೆ ಬಡ್ಡಿದರಗಳನ್ನು ಪಡೆಯುತ್ತೀರಿ.

ಪ್ರತಿಯೊಬ್ಬರೂ ಉತ್ತಮ ಕ್ರೆಡಿಟ್ ಸ್ಕೋರ್‌ಗಾಗಿ ಶ್ರಮಿಸುತ್ತಾರೆ. ಏಕೆಂದರೆ ಇದರಿಂದ ಕಡಿಮೆ ಬಡ್ಡಿದರದ ಲೋನ್‌ಗಳನ್ನು ಪಡೆಯಬಹುದು. ಇದು ನಿಮ್ಮ ಸಾಲಗಳನ್ನು ತ್ವರಿತವಾಗಿ ಪಾವತಿಸಲು ಮತ್ತು ಹಣವನ್ನು ಉಳಿತಾಯ ಮಾಡಲು ಸಹಾಯ ಮಾಡುತ್ತದೆ. ಹೋಮ್ ಲೋನ್ ಅಥವಾ ಆಸ್ತಿಯ ಮೇಲಿನ ಲೋನ್‌ನಂತಹ ದೊಡ್ಡ ಲೋನ್‌ಗಳಲ್ಲಿ, ಸಣ್ಣ ಕಡಿತವೂ ಸಹ ಕಾಲಾನಂತರದಲ್ಲಿ ನಿಮಗೆ ಬಹಳಷ್ಟು ಹಣವನ್ನು ಉಳಿಸಬಹುದು.

  • ನಿಮ್ಮ ಲೋನ್ ಮತ್ತು ಕ್ರೆಡಿಟ್ ಕಾರ್ಡ್ ಅನುಮೋದನೆಯ ಅವಕಾಶಗಳನ್ನು ಸುಧಾರಿಸುತ್ತದೆ 

ನೀವು ಲೋನ್ ಅಥವಾ ಕ್ರೆಡಿಟ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದಾಗ, ಪ್ರತಿಯೊಬ್ಬ ಲೆಂಡರ್, ನಿಮ್ಮ ಕ್ರೆಡಿಟ್ ಸ್ಕೋರ್ ಮತ್ತು ರಿಪೋರ್ಟ್ ಅನ್ನು ಮೊದಲು ನೋಡುತ್ತಾನೆ. ಕಠಿಣ ವಿಚಾರಣೆಯ ನಂತರ, ನಿಮ್ಮ ಅರ್ಜಿಯನ್ನು ನಿರಾಕರಿಸಿದರೆ, ಅದರ ಪರಿಣಾಮವು ನಿಮ್ಮ ಕ್ರೆಡಿಟ್ ಸ್ಕೋರ್‌ಗೆ ಹಾನಿಕಾರಕವಾಗಬಹುದು. ಆದಾಗ್ಯೂ, ನೀವು ಉತ್ತಮವಾದ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ, ನಿಮ್ಮ ಕ್ರೆಡಿಟ್ ಪಡೆಯುವ ಸಾಧ್ಯತೆಗಳು ಉತ್ತಮವಾಗಿರುತ್ತವೆ. ಏಕೆಂದರೆ ಲೆಂಡರ್‌ಗಳು ನಿಮ್ಮ ಅರ್ಜಿಯನ್ನು ತಿರಸ್ಕರಿಸಲು ಅವರಿಗೆ ಯಾವುದೇ ಬಲವಾದ ಕಾರಣವನ್ನು ಇರುವುದಿಲ್ಲ.

  • ನಿಮ್ಮ ಕ್ರೆಡಿಟ್ ಲಿಮಿಟ್ ಅನ್ನು ಹೆಚ್ಚಿಸುತ್ತದೆ

ಅತ್ಯುತ್ತಮ ಕ್ರೆಡಿಟ್ ಸ್ಕೋರ್‌ನೊಂದಿಗೆ ನಿಮ್ಮ ಸಂಬಳವು ಸೇರಿದಾಗ, ನೀವು ಲೋನ್ ಅಥವಾ ಕ್ರೆಡಿಟ್ ಕಾರ್ಡ್ ಅನ್ನು ಪಡೆಯುತ್ತೀರೋ ಇಲ್ಲವೋ ಎಂಬುದನ್ನು ನಿರ್ಧಾರಿಸುವಲ್ಲಿ ಸಂಬಳವು ದೊಡ್ಡ ಅಂಶವಾಗುತ್ತದೆ. ಅಲ್ಲದೇ ಇದು ನಿಮ್ಮ ಕ್ರೆಡಿಟ್ ಕಾರ್ಡ್‌ಗಳಲ್ಲಿ ದೊಡ್ಡ ಲೋನ್ ಅಥವಾ ದೊಡ್ಡ ಕ್ರೆಡಿಟ್ ಲಿಮಿಟ್ ಅನ್ನು ಪಡೆಯಲು ನಿಮಗೆ ಸಹಾಯ ಮಾಡಬಹುದು.

ಈ ಎರಡು ಅಂಶಗಳನ್ನು ಪರಿಗಣಿಸುವ ಮೂಲಕ, ಲೆಂಡರ್‌ಗಳು ನಿಮ್ಮ ಕ್ರೆಡಿಟ್ ಅರ್ಹತೆಯನ್ನು ನಿರ್ಣಯಿಸುತ್ತಾರೆ ಮತ್ತು ನೀವೊಬ್ಬ ಜವಾಬ್ದಾರಿಯುತ ಸಾಲಗಾರ (barrower) ಎಂದು ನಂಬುತ್ತಾರೆ. ನೀವು ಕಡಿಮೆ ಕ್ರೆಡಿಟ್ ಸ್ಕೋರ್ ಅನ್ನು ಹೊಂದಿದ್ದರೆ, ನೀವು ಲೋನ್ ಅಥವಾ ಕ್ರೆಡಿಟ್ ಕಾರ್ಡ್ ಅನ್ನು ಸ್ವೀಕರಿಸಲು ಸಾಧ್ಯವಾಗುತ್ತದೆ, ಆದರೆ ಅದರ ಬಡ್ಡಿದರಗಳು ಮತ್ತು ಕ್ರೆಡಿಟ್ ಲಿಮಿಟ್ ಸ್ವಲ್ಪ ಹೆಚ್ಚಾಗಿರುತ್ತದೆ.

  • ನಿಮ್ಮ ಮಾತುಕತೆಯ ಶಕ್ತಿಯನ್ನು ಹೆಚ್ಚಿಸುತ್ತದೆ.

ನೀವು ಕಳಪೆ ಕ್ರೆಡಿಟ್ ಸ್ಕೋರ್ ಅನ್ನು ಹೊಂದಿರುವಾಗ, ನೀವು ಹೆಚ್ಚಿನ ಬಡ್ಡಿ ದರದೊಂದಿಗೆ ಲೋನ್ ಪಡೆಯುವ ಅವಕಾಶ ಹೆಚ್ಚಿರುತ್ತವೆ.  ಈ ಲೋನ್‌ಗಳ ಮರುಪಾವತಿಯು, ಭವಿಷ್ಯದಲ್ಲಿ ಕಷ್ಟಕರವಾಗಬಹುದು. ಕಡಿಮೆ ಬಡ್ಡಿದರವನ್ನು ವಿನಂತಿಸುವ ವಿಷಯಕ್ಕೆ ಬಂದಾಗ, ನೀವು ಸ್ವಲ್ಪ ಮಾತಾಡುವ ಶಕ್ತಿಯನ್ನು ಸಹ ಹೊಂದುವಿರಿ.

ಮತ್ತೊಂದೆಡೆ, ನೀವು ಅತ್ಯುತ್ತಮ ಕ್ರೆಡಿಟ್ ಸ್ಕೋರ್ ಅನ್ನು ಹೊಂದಿದ್ದರೆ, ಲೋನ್‌ಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳಿಗೆ ಅನುಮೋದನೆ ಪಡೆಯುವ ಉತ್ತಮ ಅವಕಾಶವನ್ನು ನೀವು ಹೊಂದುತ್ತೀರಿ. ವಿವಿಧ ಲೆಂಡರ್‌ಗಳ ಆಫರ್‌ಗಳನ್ನು ಹೋಲಿಸುವ ಮೂಲಕ, ನೀವು ಲೆಂಡರ್‌ಗಳಿಂದ ಅಗ್ಗದ ಬಡ್ಡಿದರಗಳನ್ನು ಮಾತಾಡಲು ಸಾಧ್ಯವಾಗುತ್ತದೆ.

ನಿಮ್ಮ ಕ್ರೆಡಿಟ್ ಸ್ಕೋರ್ ತಿಳಿಯುವುದು ಹೇಗೆ?

ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಕಂಡುಹಿಡಿಯುವುದು ಸರಳವಾಗಿದೆ. ನೀವು ಪ್ರತಿ ನಾಲ್ಕು ಕ್ರೆಡಿಟ್ ಬ್ಯೂರೋಗಳಿಂದ ವರ್ಷಕ್ಕೊಮ್ಮೆ ಉಚಿತ ಕ್ರೆಡಿಟ್ ರಿಪೋರ್ಟ್ ಅನ್ನು ಪಡೆಯಬಹುದು - ಆನ್‌ಲೈನ್‌ನಲ್ಲಿ ಪೂರ್ಣಗೊಳಿಸಬಹುದಾದ ತ್ವರಿತ ಮತ್ತು ಸುಲಭ ಪ್ರಕ್ರಿಯೆಯೊಂದಿಗೆ ಪಡೆಯಬಹುದಾಗಿದೆ.

ನಿಮ್ಮ ಮೂಲಭೂತ ಮಾಹಿತಿ ಮತ್ತು ನಿಮ್ಮ ಗುರುತಿನ ಮಾಹಿತಿಯನ್ನು ನಿಮ್ಮ  ಪ್ಯಾನ್ ಕಾರ್ಡ್, ಮತದಾರರ ಗುರುತಿನ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಜೊತೆಗೆ ನಮೂದಿಸಿ. ಅಲ್ಲಿಗೆ ನೀವು ಇದನ್ನು ಹೊಂದುತ್ತೀರಿ. ಅದೇ - ಕ್ರೆಡಿಟ್ ಸ್ಕೋರ್‌ನೊಂದಿಗೆ ನಿಮ್ಮ ಕ್ರೆಡಿಟ್ ರಿಪೋರ್ಟ್. ಇದು ನಿಮ್ಮ ಹಿಂದಿನ ಕ್ರೆಡಿಟ್ ಹಿಸ್ಟರಿ ಅನ್ನು ಹಾಗೂ ನೀವು ತೆಗೆದುಕೊಂಡ ಯಾವುದೇ ಸಾಲ ಮತ್ತು ಮರುಪಾವತಿಯನ್ನು ಸಹ ಬಹಿರಂಗಪಡಿಸುತ್ತದೆ.

ಕ್ರೆಡಿಟ್ ಸ್ಕೋರ್ ನಿಮ್ಮ ಕ್ರೆಡಿಟ್ ಬಳಕೆಯ ಮಾನದಂಡವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ನಿಮ್ಮನ್ನು ಮೌಲ್ಯಮಾಪನ ಮಾಡುವಾಗ, ಲೆಂಡರ್‌ಗಳಿಗೆ ಇದೊಂದು  ಮುಖ್ಯ ನಿರ್ಧರಿಸುವ ಅಂಶವಾಗಿದೆ. ತಮ್ಮ ಲೋನ್ ಅನ್ನು ತಿರಸ್ಕರಿಸುವವರೆಗೂ ಅನೇಕ ಜನರಿಗೆ ಇದರ ಬಗ್ಗೆ ತಿಳಿದಿರುವುದಿಲ್ಲ.

ಆದ್ದರಿಂದ ನಿಮ್ಮ ಹೊಸ ಕಾರು ಅಥವಾ ಮನೆಯನ್ನು ಖರೀದಿಸುವಾಗ ನಿರಾಸೆಗೊಳ್ಳುವ ಬದಲು ಅದನ್ನು ಕಾಪಾಡಿಕೊಳ್ಳುವುದು ಉತ್ತಮ. ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಸುಧಾರಿಸಲು ಮೊದಲ ಹೆಜ್ಜೆ ಇರಿಸಿ ಮತ್ತು ಆರೋಗ್ಯಕರ ಕ್ರೆಡಿಟ್ ಅಭ್ಯಾಸಗಳನ್ನು ಅಭಿವೃದ್ಧಿಪಡಿಸಿ. ನಿಮ್ಮ ಕ್ರೆಡಿಟ್ ಸ್ಕೋರ್ ಕ್ರಮೇಣ ಹೆಚ್ಚಾಗುವುದನ್ನು ಗಮನಿಸಿ.

Subscribe to our newsletter
Thank you! Your submission has been received!
Oops! Something went wrong while submitting the form.