Buy Gold
Sell Gold
Daily Savings
Digital Gold
Instant Loan
Round-Off
Nek Jewellery
ಕೊರೊನಾ ಆರಂಭವಾದಾಗಿನಿಂದ ಪ್ರತಿಯೊಬ್ಬರ ಜೀವನ ಶೈಲಿಯೇ ಬದಲಾಗಿ ಬಿಟ್ಟಿದೆ ಎನ್ನುವುದು ನಮಗೆಲ್ಲರಿಗೂ ತಿಳಿದೇ ಇದೆ. ಲಾಕ್‌ಡೌನ್, ವ್ಯಾಕ್ಸಿನೇಷನ್‌ನಿಂದಾಗಿ ಈಗಷ್ಟೇ ಚೇತರಿಸಿಕೊಳ್ಳಲು ಆರಂಭಿಸಿದ್ದೇವೆ. ಕೋವಿಡ್‌ನಿಂದಾಗಿ ಪ್ರತಿಯೊಬ್ಬರ ಪರಿಸ್ಥಿತಿಯು ಹದಗೆಟ್ಟಿತ್ತು ಎಂದೇ ಹೇಳಬಹುದು.
ಅಂತಹವರಲ್ಲಿ ದೆಹಲಿ ಮೂಲದ ಪ್ರಾಡಕ್ಟ್ ಡಿಸೈನರ್ 27ರ ತರುಣಿ ರಿದ್ಧಿ ಕೂಡಾ ಹೊರತೇನಲ್ಲ. ರಿದ್ಧಿಗೆ ಶಾಪಿಂಗ್ ಮಾಡುವುದು, ಪ್ರವಾಸ ಕೈಗೊಳ್ಳುವುದು, ಸ್ನೇಹಿತರ ಜೊತೆಗೂಡಿ ಪಾರ್ಟಿ ಮಾಡುವುದು ಎಂದರೆ ಇಷ್ಟ.
ಆದರೆ ಕೋವಿಡ್ ಎಂಬ ಸಾಂಕ್ರಾಮಿಕ ರೋಗದ ಅಟ್ಟಹಾಸ ಶುರುವಾದಾಗಿನಿಂದ ಇದಕ್ಕೆಲ್ಲಾ ಬ್ರೇಕ್ ಬಿದ್ದಿತ್ತು. ಒಮ್ಮೆ ಕೋವಿಡ್ ಪರಿಸ್ಥಿತಿ ಹತೋಟಿಗೆ ಬರಲಿ ಮತ್ತೆ ತನ್ನ ಹಿಂದಿನ ಜೀವನಶೈಲಿಯನ್ನು ಮುಂದುವರಿಸಬೇಕೆಂದು ಕಾಯುತ್ತಿದ್ದಾಳೆ.
ಹಾಗಾಗಿ ತನಗೆ ಅತಿ ಪ್ರಿಯವಾದ ಶಾಪಿಂಗ್ ಕೂಡಾ ಮಾಡದೇ ಎಷ್ಟೋ ತಿಂಗಳುಗಳೇ ಕಳೆದವು. ಅಷ್ಟೇ ಅಲ್ಲದೆ ತನ್ನ ಬಹು ನಿರೀಕ್ಷಿತ ಗೋವಾ ಟ್ರಿಪ್ ಕೂಡಾ ಮುಂದೂಡಬೇಕಾಯಿತು.
ಯಾವಾಗ ಕೋವಿಡ್‌ನ ಎರಡನೇ ಅಲೆ ಸ್ವಲ್ಪ ತಣ್ಣಗಾಯಿತೋ, ಕೋವಿಡ್ ಕೇಸ್‌ಗಳ ಸಂಖ್ಯೆ ಕಡಿಮೆಯಾಗಲು ಆರಂಭವಾಯಿತೋ, ರಿದ್ಧಿ ಶಾಪಿಂಗ್ ಮಾಡಲು ಆರಂಭಿಸಿದ್ದಾಳೆ, ಜೊತೆಗೆ ಗೋವಾ ಟ್ರಿಪ್ ಕೂಡಾ ಮುಗಿಸಿ ಬಂದಿದ್ದಾಳೆ. ಇಷ್ಟು ಸಮಯ ತಾನು ಖರ್ಚು ಮಾಡದೇ ಕೂಡಿಟ್ಟಿದ್ದ ಹಣವನ್ನೇಲ್ಲಾ ತನ್ನ ಎಂಜಾಯ್‌ಮೆಂಟ್‌ಗೆ ಹಾಗೂ ತಾನು ಕೋವಿಡ್‌ನಿಂದ ಮಿಸ್ ಮಾಡಿಕೊಂಡಿದ್ದ ಅನುಭವವನ್ನು ಮರಳಿ ಪಡೆಯಲು ಬಳಸಿಕೊಂಡಿದ್ದಾಳೆ.
ನೀವೂ ಒಂದು ವೇಳೆ ರಿದ್ಧಿಯನ್ನೇ ಹೋಲುತ್ತಿದ್ದೀರೆ? ನೀವೂ ರಿವೇಂಜ್ ಸ್ಪೆಂಡರ್ ಆಗಿರಬಹುದೇ?
ತಲೆಕೆಡಿಸಿಕೊಳ್ಳಬೇಡಿ, ರಿದ್ಧಿಯನ್ನು ಹೋಲುವವರು ನೀವು ಮಾತ್ರವಲ್ಲ, ಯಾವಾಗ ಕೋವಿಡ್ ಇಳಿಮುಖವಾಗುವುದೋ, ಫ್ಯಾಮಿಲಿ, ಫ್ರೆಂಡ್ಸ್ ಜೊತೆ ಪ್ರವಾಸ ಕೈಗೊಳ್ಳುತ್ತೇವೋ, ಶಾಪಿಂಗ್ ಹೋಗುತ್ತೇವೋ ಎಂದು ಹಣವನ್ನು ಖರ್ಚು ಮಾಡಲು ಕಾಯುವವರು ಇನ್ನೂ ಸಾಕಷ್ಟು ಮಂದಿ ಇದ್ದಾರೆ.
ಹಾಗಂತ ಲಾಕ್‌ಡೌನ್‌ನಿಂದ ಎಲ್ಲರಿಗೂ ಒಳ್ಳೆಯದಾಗಿದೆ ಎಂದು ಹೇಳುತ್ತಿಲ್ಲ. ಲಾಕ್‌ಡೌನ್ ನಿಂದಾಗಿ ಪ್ರತಿಯೊಬ್ಬರೂ ಸಾಕಷ್ಟು ಸಮಸ್ಯೆಯನ್ನು ಅನುಭವಿಸಿದ್ದಾರೆ. ತಮ್ಮ ಊರಿಗೆ ಹೋಗುವವರಿಗೆ ಒಂದು ರೀತಿಯ ಕಷ್ಟವಾದರೆ ಇನ್ನೂ ಸಾಕಷ್ಟು ಮಂದಿ ಕೆಲಸವನ್ನೇ ಕಳೆದುಕೊಂಡಿದ್ದಾರೆ.
ಸಾಮಾಜಿಕ ಕೆಲಸಗಳಲ್ಲಿ ತೊಡಗುವುದರಿಂದ ಹಿಡಿದು, ಫ್ಯಾಮಿಲಿ ಫಂಕ್ಷನ್, ಫ್ರೆಂಡ್ಸ್‌ಗಳನ್ನು ಭೇಟಿಯಾಗುವುದೂ ಕಷ್ಟವಾಗಿತ್ತು. ಈ ಸಿಂಪಲ್ ಟಾಸ್ಕ್ ಬಹುತೇಕರ ಮುಖದಲ್ಲಿ ನಗುವನ್ನು ತರುವುದಲ್ಲದೆ ನಮ್ಮನ್ನುಉಪಯುಕ್ತವಾಗಿಸುತ್ತದೆ.
ಕಳೆದ ಎರಡು ವರ್ಷಗಳಿಂದ ನಾವು ಲಾಕ್‌ಡೌನ್‌ನಲ್ಲಿದ್ದೇವು. ಮನೆಯಲ್ಲೇ ಬಂಧಿಯಾಗಿ ನಮ್ಮ ಪೈಜಾಮ ಹಾಗೂ ಗೆರೆಗೆರೆಯ ಟೀಶರ್ಟ್‌ನಲ್ಲೇ ಕಾಲಕಳೆಯುವಂತಾಗಿಬಿಟ್ಟಿದೆ. ಹಾಗಾಗಿ ನಮ್ಮ ಬೇಡಿಕೆ ಹಾಗೂ ಅಗತ್ಯತೆಗಳ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳುವುದು ಹಾಗೂ ನಮ್ಮಲ್ಲಿ ಸಾಧ್ಯವಾದಷ್ಟು ಉಳಿತಾಯವನ್ನು ಮಾಡುವುದು ನಮ್ಮ ಮುಂದಿರುವ ಪ್ರಾಥಮಿಕ ಗುರಿಯಾಗಿದೆ.
ಕೋವಿಡ್ ಇಳಿಮುಖವಾಗುತ್ತಿದೆ, ಜನ ಜೀವನ ಮತ್ತೆ ಹಿಂದಿನಂತೆ ಆಗಲು ಆರಂಭಿಸಿದೆ. ಹೀಗಿರುವಾಗ ಜನರು ಮತ್ತೆ ತಮ್ಮ ಪರ್ಸ್‌ಗಳನ್ನು ತೆರೆಯಲು ಪ್ರಾರಂಭಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ನಾವು ಏನನೆಲ್ಲಾ ಮಿಸ್ ಮಾಡಿಕೊಂಡಿದ್ದೇವೋ ಅವುಗಳನ್ನು ಮತ್ತೆ ಅನುಭವಿಸಲು ಕಾತುರರಾಗಿದ್ದಾರೆ.
ಹಾಗಾಗಿ ಕೋವಿಡ್ ಮೇಲೆ ಸೇಡು ತೀರಿಸಿಕೊಳ್ಳಲು ತಯಾರಾಗಿದ್ದೇವೆ. ಸಾಮಾನ್ಯವಾಗಿ ನಿಮ್ಮ ಬೆಸ್ಟ್ ಫ್ರೆಂಡ್‌ನ ಮದುವೆ ರಜೆ ಕೊಡದ ನಿಮ್ಮ ಮ್ಯಾನೇಜರ್ ಅಥವಾ ಮೆಟ್ರೋದಲ್ಲಿ ಮುಖಕ್ಕೆ ಮಾಸ್ಕ್ ಹಾಕದೆ ನಿಮ್ಮ ಮುಖದ ಮೇಲೆ ಕೆಮ್ಮಿದ ಅಂಕಲ್‌ನ ಮೇಲೆ ತೀರಿಸಿಕೊಳ್ಳುತ್ತಿದ್ದ ಕೋಪವನ್ನು ಇದೀಗ ಕೋವಿಡ್‌ನಿಂದಾಗಿ ಶಾಪಿಂಗ್ ಮಾಡುವುದು, ಹೊರಗಡೆ ಡಿನ್ನರ್‌ಗೆ ಹೋಗುವ ಮೂಲಕ ತೀರಿಸಿಕೊಳ್ಳಬೇಕಾಗಿದೆ.
ನಮ್ಮ ಸಂತೋಷ ಸೇಡಾಗಿ ಪರಿವರ್ತನೆಗೊಂಡರೆ ಹೇಗಿರುತ್ತೆ ಯೋಚಿಸಿ. ಕಾರ್ಮಿಕರು ರಜಾ ಮಾಡುವ ಮೂಲಕ ಸೇಡುತೀರಿಸಿಕೊಂಡರೆ, ಪ್ರವಾಸಿಗರು ಹಿಲ್‌ಸ್ಟೇಶನ್‌ಗಳಿಗೆ ಹೋಗುವ ಮೂಲಕ ಸೇಡುತೀರಿಸಿಕೊಳ್ಳಬೇಕಾಬಹುದು.
ಪ್ರತಿಕಾರದ ಖರ್ಚುಎಂದರೆ ಸುಲಭವಾಗಿ ಹೇಳುವುದಾದರೆ ನೀವು ಮಾಡಬೇಕೆಂದಿದ್ದ ಅಥವಾ ಕೊಳ್ಳಬೇಕೆಂದಿದ್ದದ್ದನ್ನು ಕೋವಿಡ್‌ನ ಕಾರಣದಿಂದಾಗಿ ಪೂರ್ಣಗೊಳಿಸಲು ಸಾಧ್ಯವಾಗದೇ ಇದ್ದದ್ದು ಎಂದರ್ಥ.
ನೀವು ಕೋವಿಡ್‌ನಿಂದಾಗಿ ಕಳೆದ ಎರಡು ವರ್ಷಗಳಿಂದ ಏನನೆಲ್ಲಾ ಮಿಸ್ ಮಾಡಿಕೊಂಡಿದ್ದೀರೋ ಅವುಗಳನ್ನು ಮರಳಿ ಪಡೆಯಲು, ಅನುಭವಿಸಲು ಈಗ ಸಿಕ್ಕಾ ಪಟ್ಟೆ ಖರ್ಚು ಮಾಡುವುದು. ಮುಗಿದ ನಂತರ ಮಾಡುವುದು. ಅದು ನಿಮ್ಮ ಬುನಿರೀಕ್ಷಿತ ಪ್ರವಾಸವೂ ಆಗಿರಬಹುದು. ಅಥವಾ ನೀವು ಖರೀದಿಸಬೇಕೆಂದಿದ್ದ ಫರ್ನೀಚರ್ ಕೂಡಾ ಆಗಿರಬಹುದು.
ಸಾಂಕ್ರಾಮಿಕ ರೋಗದಿಂದಾಗಿ ಪ್ರತಿಯೊಬ್ಬರೂ ತಮ್ಮ ಸಂತೋಷವನ್ನು ಕಳೆದುಕೊಂಡಿದ್ದಾರೆ. ಅತ್ಯಂತ ಕಠಿಣ ಸಮಯವನ್ನು ಎದುರಿಸಬೇಕಾಯಿತು. ಪ್ರತಿಯೊಬ್ಬರೂ ಆ ಕೆಟ್ಟ ಅನುಭವದಿಂದ ಹೊರಬರಲು ಬಯಸುತ್ತಿದ್ದಾರೆ..
ಈ ಸೇಡಿನ ನಾಟಕವು ಶುರುವಾಗಿದ್ದು ಚೀನಾದಲ್ಲಿ ಎಪ್ರಿಲ್ 7, 2020 ರಲ್ಲಿ. Guangzhou ನಲ್ಲಿನ Hermès flagship store ನಲ್ಲಿ. $2.7ಮಿಲಿಯನ್ ರೆಕಾರ್ಡ್ ಬ್ರೇಕಿಂಗ್ ಮಾರಾಟ ಮಾಡುವ ಮೂಲಕ. baofuxing xiaofei ಅಥವಾ "ಸೇಡು ತೀರಿಸಿಕೊಳ್ಳುವುದು" ಎಂದು ಕರೆಯಲ್ಪಡುವ ಇದೇ ರೀತಿಯ ವಿದ್ಯಮಾನವನ್ನು ಗುಸ್ಸಿ, ಪ್ರಾಡಾ, ಲೂಯಿ ವಿಟಾನ್ ಮತ್ತು ಎಸ್ಟೀ ಲಾಡರ್ ಅವರು ದಾಖಲಿಸಿದ್ದಾರೆ ಮತ್ತು ಇದು ಪ್ರಪಂಚದಾದ್ಯಂತ ಹರಡಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ.
ದೆಹಲಿಯಲ್ಲಿಯೂ ಸಹ, ಎಂಪೋರಿಯೊ ಮಾಲ್ ಎಲ್‌ವಿ ಶೋ ರೂಂನ ಹೊರಗೆ ಗುಸ್ಸಿ ಗ್ರಾಹಕರು 45 ನಿಮಿಷಗಳ ಕಾಲ ಸರತಿ ಸಾಲಿನಲ್ಲಿ ನಿಂತಿರುವುದು ಕಂಡುಬಂದಿತ್ತು. ಕೋವಿಡ್ ಪ್ರೋಟೋಕಾಲ್ ಉಲ್ಲಂಘನೆಯಿಂದಾಗಿ ಸರೋಜಿನಿ, ಲಜಪತ್ ಮತ್ತು ಗಫಾರ್ ಮಾರುಕಟ್ಟೆಗಳನ್ನು ಹಲವು ಬಾರಿ ತಿಂಗಳಾನುಗಟ್ಟಲೆ ಮುಚ್ಚಬೇಕಾಯಿತು.
2021 ರಲ್ಲಿ 'ಹೌ ಇಂಡಿಯಾ ಆನ್‌ಲೈನ್ ಶಾಪ್ಸ್' ಎಂಬ ಬೈನ್ ಸಹಯೋಗದೊಂದಿಗೆ ಫ್ಲಿಪ್‌ಕಾರ್ಟ್ ತಯಾರಿಸಿದ ವರದಿಯ ಪ್ರಕಾರ, ಭಾರತೀಯ ಇ-ಕಾಮರ್ಸ್ ವ್ಯವಹಾರವು 2021 ರಲ್ಲಿ 25% ರಷ್ಟು ಬೆಳೆದಿದೆ, ಆದರೆ ಯುರೋಮಾನಿಟರ್ ಇಂಟರ್‌ನ್ಯಾಶನಲ್ ಭಾರತದ ಐಷಾರಾಮಿ ಸರಕುಗಳ ಮಾರುಕಟ್ಟೆ ಮೌಲ್ಯವನ್ನು 2022 ರಲ್ಲಿ $8.5 ಶತಕೋಟಿ ಎಂದು ಅಂದಾಜಿಸಿದೆ. 2021 ರಲ್ಲಿ $6 ಬಿಲಿಯನ್ ಅಧಿಕವಾಗಿದೆ.
2020 ರಲ್ಲಿ, ಮಹಿಳಾ ಗ್ರಾಹಕರು ಪುರುಷರಿಗಿಂತ 1.5-2 ಪಟ್ಟು ವೇಗವಾಗಿ ಬೆಳೆದರು ಮತ್ತು 2ನೇ ಅಲೆಯು ಸಣ್ಣ ಪಟ್ಟಣಗಳು 80% ಹೊಸ ಗ್ರಾಹಕರನ್ನು ಪಡೆದಿದೆ. ಇನ್ನು ನಾವು ಪ್ರಯಾಣದ ವಿಷಯಕ್ಕೆ ಬಂದರೆ, ಕೋವಿಡ್ ನಂತರ, ಜನರು ಹಿಂದೆ ಮಾಡಿದ್ದಕ್ಕಿಂತ ಎರಡು ಪಟ್ಟು ಪ್ರಯಾಣಿಸಲು ಬಯಸುತ್ತಿದ್ದಾರೆ ಎಂದು FICCI ಮತ್ತು Thrillophillia ಸಮೀಕ್ಷೆಯ ವರದಿ ತಿಳಿಸುತ್ತಿದೆ.
ಇದಕ್ಕೆ ಉತ್ತರ ಇನ್ನೂ ಬೇಕೆಂಬ ಆಸೆ.
ಜನರು ಯಾರ ಹಾಗೂ ಯಾವುದರ ವಿರುದ್ಧ ಸೇಡು ತೀರಿಸಿಕೊಳ್ಳತ್ತಿದ್ದಾರೆ ಎಂದು ನೀವು ಭಾವಿಸಿದ್ದೀರಿ?. ಬಹುಶಃ ಲಾಕ್‌ಡೌನ್‌ನ ಮಿತಿಗಳೂ, ಕಟ್ಟುನಿಟ್ಟು ಹಾಗೂ ಬಲವಂತದ ಕಠಿಣ ಜೀವನದ ವಿರುದ್ಧವಾಗಿರಬಹುದು. ಉತ್ತಮವಾದುದನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎನ್ನುವ ಭಯದಿಂದ ಆಗಿರಬಹುದು.
ಕಳೆದ ಎರಡು ವರ್ಷಗಳಿಂದ ನಾವು ಮನೆಯೊಳಗೆ ಹೆಚ್ಚಿನ ಸಮಯವನ್ನು ಕಳೆದಿದ್ದೇವೆ. ಹಾಗಾಗಿ ಹೊರಗಿನ ಪ್ರಪಂಚದ ಅನುಭವವನ್ನು ಮಿಸ್ ಮಾಡಿಕೊಂಡಿದ್ದೇವೆ. ಅವುಗಳನ್ನು ಮರಳಿ ಪಡೆಯಲು ಸೇಡಿನ ಖರ್ಚು ಮಾಡುತ್ತಿದ್ದೇವೆ.
ಈ ರೀತಿ ಮನಸ್ಸಿಗೆ ಬಂದಂತೆ ಸಿಕ್ಕಾಪಟ್ಟೆ ಖರ್ಚು ಮಾಡುವುದರಿಂದ ಒಮ್ಮೆಗೆ ನಿಮ್ಮ ಮೂಡ್ ಸರಿಯಾಗಬಹುದು ಆದರೆ ಸಾಂಕ್ರಾಮಿಕದ ಕಾರಣದಿಂದ ಉಂಟಾಗಿರುವ ಹಣಕಾಸಿನ ಪರಿಸ್ಥಿತಿಯನ್ನು ಕಡೆಗಣಿಸುವಂತಿಲ್ಲ.
ಸಾಂಕ್ರಾಮಿಕವು ನಮ್ಮಲ್ಲಿ ಹಲವರಲ್ಲಿ ಭಯವನ್ನು ಮೂಡಿಸಿದೆ ಜೀವನವು ಬಹಳ ಸಣ್ಣದು. ಅದನ್ನು ಒಮ್ಮೆ ಮಾತ್ರ ಜೀವಿಸಬಹುದು ಹಾಗಾಗಿ ಅದನ್ನು ಸರಿಯಾಗಿ ಖುಷಿಯಿಂದ ಜೀವಿಸಬೇಕು ಎನ್ನುವ ಕಲ್ಪನೆಯನ್ನು ಹುಟ್ಟಿಸಿದೆ.
ಹಾಗಾಗಿ ಜನರಲ್ಲಿ ಶಾಪಿಂಗ್ ಮಾಡಬೇಕು, ಐಷಾರಾಮಿ ಜೀವನ ನಡೆಸಬೇಕು, ಪ್ರವಾಸ ಕೈಗೊಳ್ಳಬೇಕು, ಹೊರಗಡೆ ಪಾರ್ಟಿ ಮಾಡಬೇಕೆಂಬ ಹಂಬಲವನ್ನು ಹೆಚ್ಚಿಸಿದೆ.
ಈ ರೀತಿ ಸಿಕ್ಕಾಪಟ್ಟೆ ಖರ್ಚು ಮಾಡುವ ಪ್ರತಿಕ್ರಿಯೆಯನ್ನು ಮಾನಸಿಕ ಪರಿಕಲ್ಪನೆಗೆ ಸಂಬಂಧಿಸಿದ್ದು ಎಂದು ಮಿಂಟ್‌ನ ಒಂದು ಲೇಖನವು ತಿಳಿಸುತ್ತದೆ.
ಪ್ರತಿಕ್ರಿಯಾತ್ಮಕತೆಯು ಜನರನ್ನು ಯಾವದನ್ನಾದರೂ ತನ್ನಿಂದ ದೂರವಿರಿಸುವ ಅಥವಾ ನಿಷೇಧಿಸುವುದು ಮಾನಸಿಕ ಪ್ರತಿಕ್ರಿಯೆಯನ್ನು ಸೂಚಿಸುತ್ತದೆ.
ನಡವಳಿಕೆ ಅರ್ಥಶಾಸ್ತ್ರಜ್ಞ ಹಾಗೂ ಸಬ್‌ಲಿಮಿನಲ್ ಐಡಿಯಾಸ್‌ನ ನಿರ್ದೇಶಕರಾಗಿರುವ ಆಶ್ಲೇಷಾ ಸ್ವಾಮಿನಾಥನ್ ಹೇಳುವ ಪ್ರಕಾರ “ಲಾಕ್‌ಡೌನ್ ಸಮಯದಲ್ಲಿ ಜನರಿಗೆ ಐಷಾರಾಮಿ ಹಾಗೂ ಅನಿವಾರ್ಯವಲ್ಲದ ವಸ್ತುಗಳನ್ನು ಖರೀದಿಸಲು ಸಾಧ್ಯವಾಗಲಿಲ್ಲ. ಲಾಕ್‌ಡೌನ್‌ಗಿಂತಲೂ ಜನರಿಗೆ ಅನಿವಾರ್ಯವಲ್ಲದ ವಸ್ತುಗಳನ್ನು ನಿಯಮಿತವಾಗಿ ಖರೀದಿಸುತ್ತಿದ್ದರೆ, ಲಾಕ್‌ಡೌನ್ ಮುಗಿದ ನಂತರ ಅದಕ್ಕಾಗಿ ಇನ್ನಷ್ಟು ಹೆಚ್ಚು ಖರ್ಚು ಮಾಡುವ ಮಸ್ಥಿತಿ ಉಂಟಾಗುತ್ತದೆ .
ಇದು ನಿಮ್ಮ ಕಠಿಣ ಹಣಕಾಸಿನ ಪರಿಸ್ಥಿತಿಯ ಸಂದರ್ಭದಲ್ಲಿ ನಿಮ್ಮನ್ನು ಇಕ್ಕಟ್ಟಿಗೆ ಈಡಾಗಿಸಬಹುದು.
ಹಾಗಿದ್ದರೆ ನಿಮಗೆ ನೀವೇ ಈ ಪ್ರಶ್ನೆಗಳನ್ನು ಕೇಳಿಕೊಳ್ಳಿ
ಈ ಎಲ್ಲಾ ಪ್ರಶ್ನೆಗಳಲ್ಲಿ ಹೆಚ್ಚಿನ ಉತ್ತರ ಹೌದು ಎಂದಾದರೆ ನಿಮ್ಮ ಖರ್ಚು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದರ್ಥ. ಹಾಗಾಗಿ ನೀವು ಎಚ್ಚರಗೊಳ್ಳುವುದು ಅಗತ್ಯ.
*ನಿಮ್ಮ ಕ್ರೆಡಿಟ್ ಕಾರ್ಡ್‌ಬಿಲ್ ಹೆಚ್ಚುವುದು, ಕೈಯಲ್ಲಿ ಹಣ ಇಲ್ಲದಿರುವುದು, ನಿಮ್ಮ ತಿಂಗಳ ಬಜೆಟ್‌ಗಿಂತಲೂ ಅಧಿಕ ಖರ್ಚು ಮಾಡುವುದು ಇವೆಲ್ಲವೂ ನೀವು ಪ್ರತಿಕಾರದ ಖರ್ಚು ಮಾಡುತ್ತಿದ್ದೀರೆಂದೇ ಅರ್ಥ.
ನೀವು ಖರ್ಚು ಮಾಡುವಾಗ ನಿಮಗೆ ಆ ಕ್ಷಣಕ್ಕೆ ಸಮಾಧಾನವೆನಿಸಬಹುದು. ಆದರೆ ನಿಮ್ಮ ಉಳಿತಾಯವನ್ನೆಲ್ಲಾ ಖರ್ಚು ಮಾಡುವುದು ಒಳ್ಳೆಯದಲ್ಲ.
ನೀವು ನಿಮ್ಮ ಆದಾಯಕ್ಕಿಂತಲೂ ಅಧಿಕ ಖರ್ಚು ಮಾಡುವುದು ಮುಂದೆ ನಿಮಗೆ ಹಣಕಾಸಿನ ಸಮಸ್ಯೆಯನ್ನು ಉಂಟು ಮಾಡಬಹುದು.
ಇನ್ನೂ ಹಲವಾರು ಜನರು ಕೋವಿಡ್ ಲಾಕ್‌ಡೌನ್‌ನಿಂದ ಚೇತರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರಷ್ಟೇ. ಬಹಳಷ್ಟು ಜನರ ವೇತನ ಕಡಿತವಾಗಿದ್ದರೆ ಇನ್ನೂ ಕೆಲವರು ಕೆಲಸವನ್ನೇ ಕಳೆದುಕೊಂಡಿದ್ದಾರೆ.
ಇಂತಹ ಹಣಕಾಸಿನ ಸಮಸ್ಯೆಯ ಸಂದರ್ಭದಲ್ಲಿ ನೀವು ಸೇಡಿನ ಖರ್ಚುಮಾಡುತ್ತಿದ್ದರೆ ನಿಮಗೆ ಸಮಸ್ಯೆ ಉಂಟಾಗಬಹುದು. ಇದು ನಿಮ್ಮ ಹಣಕಾಸಿನ ಪರಿಸ್ಥಿತಿ ಜೊತೆಗೆ ನಿಮ್ಮ ಸಂಬಂಧಗಳ ನಡುವೆಯೂ ಸಮಸ್ಯೆಯನ್ನು ಉಂಟುಮಾಡಬಹುದು.
ಜಿದ್ದಿಗೆ ಬಿದ್ದು ಖರ್ಚು ಮಾಡುತ್ತಿದ್ದರೆ ಅದು ನಿಮ್ಮ ಉಳಿತಾಯ ಮಾಡುವ ಕ್ಷಮತೆಯನ್ನು ಕಡಿಮೆ ಮಾಡುತ್ತದೆ. ಹೀಗಿರುವಾಗ ನೀವು ನಿಮ್ಮ ಮಿತಿಮೀರುವ ಖರ್ಚಿನ ಬಿಲ್‌ನ್ನು ಪಾವತಿಸಲು ಸಾಲ ಮಾಡಬೇಕಾಗುತ್ತದೆ. ಇದು ನಿಮ್ಮ ಟೆನ್ಷನ್‌ನ್ನು ಹೆಚ್ಚಿಸುತ್ತದೆ.
ಪ್ರತಿಕಾರದ ಖರ್ಚಿನ ಪ್ರಮುಖ ಸಮಸ್ಯೆ ಎಂದರೆ ನಿಮ್ಮನ್ನು ಒತ್ತಾಯದ ವ್ಯಾಪಾರಿಗಳನ್ನಾಗಿ ಮಾಡುತ್ತದೆ. ಕೆಲವರು ತಮ್ಮ ಖರ್ಚುಗಳಿಗಾಗಿ ಇತರರಲ್ಲಿ ಸಾಲ ಪಡೆದರೆ ಇನ್ನೂ ಕೆಲವರು ಕ್ರೆಡಿಟ್ ಕಾರ್ಡ್ ಬಳಸುತ್ತಾರೆ, ಇನ್ನೂ ಕೆಲವರು ಪರ್ಸನಲ್ ಲೋನ್ ಪಡೆಯುತ್ತಾರೆ. ಅತಿಯಾದ ಖರ್ಚು ವ್ಯಕ್ತಿಯ ಹಣಕಾಸಿನ ಗುರಿಯನ್ನು ಹಾಳುಮಾಡುತ್ತದೆ ಜೊತೆಗೆ ಸಾಲದ ಬಲೆಗೆ ಸಿಲುಕಿಸುತ್ತದೆ.
ಪ್ರತಿಕಾರದ ಖರ್ಚು ವ್ಯಕ್ತಿಯ ಹಣಕಾಸಿನ ಗುರಿಯ ಜೊತೆ ರಾಜಿಮಾಡಿಕೊಳ್ಳುವಂತಹ ಪರಿಸ್ಥಿಗೆ ತಂದೊಡ್ಡುತ್ತದೆ ಎನ್ನುತ್ತಾರೆ ಫೈನಾನ್ಸಿಯಲ್ ಪ್ಲಾನರ್. ಜೊತೆಗೆ ಇದು ವ್ಯಕ್ತಿಯ ಹಣಕಾಸಿನ ಸ್ವಾತಂತ್ರ್ಯದ ಮೇಲೆ ಪ್ರಭಾವ ಬೀರುತ್ತದೆ.
ಅಗತ್ಯಕ್ಕಿಂತ ಹೆಚ್ಚಾಗಿ ಖರ್ಚು ಮಾಡಬೇಕೆಂಬ ಬಯಕೆಯನ್ನು ಕಂಟ್ರೋಲ್‌ನಲ್ಲಿಡಬೇಕಾದರೆ ಅದು ಎಲ್ಲಿಂದ ಬಂತು ಎನ್ನುವುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಇದೊಂದು ರೀತಿಯ ಭಾವನಾತ್ಮಕ ನಡವಳಿಕೆಯಾಗಿದೆ. ಇದು ಅನಿರೀಕ್ಷಿತ ಸನ್ನಿವೇಶಗಳಲ್ಲಿ ಜನರಲ್ಲಿ ಸುರಕ್ಷಿತ ಎನ್ನುವ ಭಾವನೆಯನ್ನು ಉಂಟು ಮಾಡುತ್ತದೆ. ಇದು ಜನರಲ್ಲಿ ಭಯವನ್ನು ಉಂಟುಮಾಡುತ್ತದೆ. ಇದು ಒಂದು ರೀತಿಯ ನಕಾರಾತ್ಮಕ ಭಾವನೆಯಾಗಿದೆ.
ಈ ಭಾವನಾತ್ಮಕ ಬೇಡಿಕೆಯು ನಿಮ್ಮ ಭವಿಷ್ಯದ ಹಣಕಾಸಿನ ಸ್ಥಿರತೆಯನ್ನು ಅಲ್ಲೋಲಕಲ್ಲೋಲಗೊಳಿಸುತ್ತದೆ. ತಿಂಗಳ ಉಳಿತಾಯದಲ್ಲಿ ನೀವು ಅಗತ್ಯಕ್ಕೆ ಬೇಕಾದಷ್ಟು ಖರ್ಚುಮಾಡುವುದು ಸಮಂಜಸವೇ. ಆದರೆ ಕಳೆದ ಎರಡು ವರ್ಷಗಳಿಂದ ಖರ್ಚು ಮಾಡದೇ ಇದ್ದದ್ದು ಹಾಗೂ ಅನುಭವಿಸದೇ ಇದ್ದುದ್ದಕ್ಕೆ ಈಗ ಖರ್ಚು ಮಾಡುವುದು ಎಷ್ಟರ ಮಟ್ಟಿಗೆ ಸರಿ ನೀವೇ ಹೇಳಿ.
ನೀವು ಯಾವುದೇ ವಸ್ತುವನ್ನು ಖರೀಸಲು ಯೋಚಿಸುವ ಮೊದಲು ನಿಮ್ಮನ್ನು ನೀವು ಪ್ರಶ್ನಿಸಿ. ನಿಮ್ಮಲ್ಲಿ ಆ ವಸ್ತು ಈಗಾಗಲೇ ಇದೆಯೇ? ಅಥವಾ ಆ ವಸ್ತುವನ್ನು ಎಷ್ಟು ಬಾರಿ ಬಳಸ ಬಲ್ಲಿರಿ ಎನ್ನುವುದನ್ನು ತಿಳಿಯಿರಿ.
ಅದರ ಬೆಲೆಯನ್ನು ಹೋಲಿಸಿ ನೋಡಿದ್ದೀರಾ? ನಿಮಗೆ ಸರಿಯಾದ ಬೆಲೆಗೆ ಸಿಗುತ್ತಿದೆಯೇ? ಆ ವಸ್ತು ನಿಮಗೆ ಈಗ ಅತ್ಯಗತ್ಯವೇ?
ಅದಕ್ಕೆ ಪರ್ಯಾಯವಾಗಿ ಯಾವುದಾದರು ಉತ್ತಮ ವಸ್ತು ಇದೆಯೇ? ಅದು ಖರೀದಿಸಲು ಯೋಗ್ಯವೇ? ನೀವು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರಕ್ಕೂ ಮುನ್ನ ಯೋಚಿಸಿ.
ಮೊದಲಿಗೆ ಬಜೆಟ್ ಮಾಡಿಕೊಳ್ಳಿ. ನೀವು ತಿಂಗಳ ಬಜೆಟ್ ಮಾಡಿಕೊಂಡರೆ ನೀವು ನಿಮ್ಮ ಖರ್ಚುಗಳನ್ನು ಅತೀ ಸುಲಭವಾಗಿ ಸರಿದೂಗಿಸಬಹುದು.
ಪ್ರತಿಯೊಂದು ವಿಷ್ಯಕ್ಕೂ ಇಂತಿಷ್ಟು ಹಣವನ್ನು ನಿಗದಿಮಾಡಿ ಇಟ್ಟುಕೊಂಡರೆ ನಿಮ್ಮ ಅನಗತ್ಯ ಖರ್ಚನ್ನು ಕಡಿಮೆ ಮಾಡಬಹುದು.
ಮುಖ್ಯವಾಗಿ ನೀವು ಎಲ್ಲಿ ಹೆಚ್ಚು ಖರ್ಚುಮಾಡುತ್ತಿದ್ದೀರಿ ಎನ್ನುವುದನ್ನು ಕಂಡಕೊಳ್ಳಬಹುದು. ನಮ್ಮ ಬಜೆಟ್‌ನಿಂದಾಗಿ ನಮ್ಮ ಖರ್ಚಿನ ಮೇಲೆ ಹತೋಟಿಯಿಟ್ಟುಕೊಳ್ಳಲು ಸಾಧ್ಯವಾಗುತ್ತದೆ.
ಇದು ಎಲ್ಲೆಲ್ಲಾ ನಾವು ಹಣವನ್ನು ಖರ್ಚು ಮಾಡಿದ್ದೇವೆ ಎನ್ನುವುದನ್ನು ತಿಳಿಸುತ್ತದೆ.
ನೀವು ಯಾವುದೇ ವಸ್ತುವನ್ನು ಖರೀದಿಸುವಾಗ ಯಾವ ವಸ್ತುವನ್ನು ನೀವು ಖರೀದಿಸಿದ್ದೀರಾ ಹಾಗೂ ಅದಕ್ಕೆ ಎಷ್ಟು ಖರ್ಚು ಮಾಡಿದ್ದೀರಿ ಎನ್ನುವುದನ್ನು ಬರೆದಿಟ್ಟುಕೊಳ್ಳಿ.
ಯಾವ ದಿನ ಅದನ್ನು ಖರೀದಿಸಿದ್ದೀರಾ, ಯಾವ ಕಾರಣಕ್ಕಾಗಿ ಖರೀದಿಸಿದ್ದೀರಾ, ಹಾಗೂ ಯಾವ ವೆಬ್‌ಸೈಟ್‌ನಲ್ಲಿ ಹೆಚ್ಚು ಖರ್ಚು ಮಾಡಿದ್ದೀರಿ ಎನ್ನುವುದು ತಿಳಿಯುತ್ತದೆ.
ನಾವು ನಮ್ಮ ವಾರದ ಖರ್ಚುಗಳನ್ನು ಲೆಕ್ಕ ಹಾಕುತ್ತಿದ್ದರೆ ಅದು ನಮ್ಮ ಮುಂದಿನ ದಿನಗಳಲ್ಲಿ ಖರ್ಚು ಮಾಡುವ ಬಯಕೆಯನ್ನು ಕಡಿಮೆ ಮಾಡಬಹುದು.
ಸ್ಮಾರ್ಟ್ ಫೋನ್‌ಗಳನ್ನು ಬಳಸುವುದರಿಂದ ಅದು ಅಟೋಮ್ಯಾಟಿಕ್ ಆಗಿ ನಮ್ಮ ಖರ್ಚಿನ ಬಗ್ಗೆ ಲೆಕ್ಕ ಇಟ್ಟುಕೊಳ್ಳುತ್ತದೆ. ಹಾಗಾಗಿ ನೀವು ಪ್ರತಿಯೊಂದನ್ನು ಬರೆದಿಟ್ಟುಕೊಳ್ಳಬೇಕೆಂದೇನಿಲ್ಲ, ಸ್ಮಾಟ್‌ಫೋನ್‌ನಲ್ಲೂ ಬಳಸಬಹುದು.
ಬಹಳಷ್ಟು ಕ್ರೆಡಿಟ್ ಕಾರ್ಡ್ ಕಂಪನಿಗಳು ನಿಮ್ಮ ಕ್ರೆಡಿಟ್ ಕಾರ್ಡ್ ಖರ್ಚು ವೆಚ್ಚಗಳ ಮೇಲೆ ಕಣ್ಣಿಟ್ಟಿರುತ್ತಾರೆ. ಹಾಗಾಗಿ ಯಾವ ಖರ್ಚು ಅನಗತ್ಯ ಹಾಗೂ ಯಾವುದನ್ನು ಕಡಿಮೆ ಮಾಡಬಹುದು ಎನ್ನುವುದನ್ನು ಗಮನಿಸುತ್ತಾ ಇರಿ.
ಸಾಂಕ್ರಾಮಿಕ ಪರಿಸ್ಥಿತಿಯಿಂದ ಹೊರಬರುತ್ತಿದ್ದಂತೆ ನೀವು ಮಾಲ್ ಅಥವಾ ಸೂಪರ್‌ಮಾರ್ಟ್‌ಗಳಿಗೆ ಭೇಟಿ ನೀಡುವಾಗ ಮೊದಲಿಗೆ ವಿಂಡೋ ಶಾಪಿಂಗ್ ಟ್ರೈ ಮಾಡಿ.
ಶಾಪಿಂಗ್‌ಗೆ ಹೋಗುವಾಗ ನಿಮ್ಮ ಕ್ರೆಡಿಟ್ ಕಾರ್ಡನ್ನು ಮನೆಯಲ್ಲೇ ಬಿಟ್ಟು ಸ್ವಲ್ಪ ಹಣವನ್ನು ಮಾತ್ರ ತೆಗೆದುಕೊಂಡು ಹೋಗಿ.
ನೀವು ವಿಂಡೋ ಶಾಪಿಂಗ್ ಮಾಡುವುದರಿಂದ ಅಥವಾ ಮನೆಯಲ್ಲೇ ಕೂತು ಆನ್‌ಲೈನ್ ಶಾಪಿಂಗ್ ಸೈಟ್‌ಗಳಲ್ಲಿ ನಿಮಗೆ ಬೇಕಾದ ವಸ್ತುಗಳನ್ನು ಹುಡುಕಾಡುವುದರಿಂದ ಅನಗತ್ಯ ಖರ್ಚಾಗುವುದನ್ನು ತಡೆಯಬಹುದು.
ಅನಗತ್ಯ ವಸ್ತುಗಳಿಗೆ ಖರ್ಚು ಮಾಡುವುದನ್ನು ತಪ್ಪಿಸಬಹುದು.
ಈಗಿನ ದಿನಗಳಲ್ಲಿ ಮೊಬೈಲ್ ಮೂಲಕವೂ ಆನ್‌ಲೈನ್ ಮೂಲಕ ಬಿಲ್ ಕಟ್ಟಬಹುದಾಗಿದೆ. ಹಾಗಾಗಿ ಒಂದು ವೇಳೆ ನೀವು ಒಬ್ಬಂಟಿಯಾಗಿ ಶಾಪಿಂಗ್‌ಗೆ ಹೋಗುತ್ತಿಲ್ಲವಾದರೆ ನಿಮ್ಮ ಮೊಬೈಲ್‌ನ್ನು ನಿಮ್ಮ ಫ್ಯಾಮಿಲಿ ಸದಸ್ಯರ ಕೈಗೆ ನೀಡಿ ಹೋಗುವುದು ಸೂಕ್ತ.
ಪ್ರತಿಯೊಂದು ವಸ್ತು ಖರೀದಿಸುವಾಗಲೂ ನಿಮಗೆ ನಿಮ್ಮ ಫೋನ್‌ನ ಅಗತ್ಯವಿರುತ್ತದೆ. ಹಾಗಾಗಿ ಮೊಬೈಲ್ ಮನೆಯಲ್ಲೇ ಬಿಟ್ಟು ಬಂದರೆ ಅದು ನಿಮ್ಮ ಅನಗತ್ಯ ಖರ್ಚನ್ನು ಕಡಿಮೆ ಮಾಡುವಲ್ಲಿ ಸಹಾಯವಾಗುತ್ತದೆ.
ನಿಮಗೆ ಅಗತ್ಯ ಎನ್ನುವುದಕ್ಕೋಸ್ಕರ ನಿಮ್ಮ ಉಳಿತಾಯವನ್ನು ಖರ್ಚು ಮಾಡದಿರಿ. ಕಳೆದ ವರ್ಷ ಪ್ರವಾಸ ಕೈಗೊಳ್ಳದೆ ಹಣ ಉಳಿಸಿದ್ದರೆ ಈ ವರ್ಷ ಸಾಂಕ್ರಾಮಿಕ ಪರಿಸ್ಥಿತಿ ಸುಧಾರಿಸಿದ ನಂತರ ಪ್ರವಾಸ ಕೈಗೊಳ್ಳಿ. ಆದರೆ ಕಳೆದ ವರ್ಷ ನೀವು ಮಿಸ್ ಮಾಡಿಕೊಂಡಿದ್ದೀರಿ ಎನ್ನುವುದಕ್ಕೋಸ್ಕರ ಈ ವರ್ಷದ ಪ್ರವಾಸದ ಖರ್ಚನ್ನು ದುಪ್ಪಟ್ಟು ಮಾಡಿಕೊಳ್ಳಬೇಡಿ.
ಒಂದು ವೇಳೆ ಹಾಗೆ ಮಾಡಿದ್ದೇ ಆದಲ್ಲಿ ನಿಮ್ಮ ಉಳಿತಾಯವೆಲ್ಲಾ ಖರ್ಚಾಗಿ ಹೋಗುತ್ತದೆ.
ತುರ್ತು ಪರಿಸ್ಥಿತಿಯ ಸಮಯದಲ್ಲಿ ಕೂಡಿಟ್ಟಿರುವ ಹಣ ಬಹಳ ಅಗತ್ಯ ಎನ್ನುವುದು ನಮಗೆಲ್ಲಾ ತಿಳಿದೇ ಇದೆ.
ನಿಮ್ಮ ಡೆಬಿಟ್ ಕಾರ್ಡ್‌ನ ಬಿಲ್ ಕಟ್ಟದೆ ಹಾಗೇ ಉಳಿದಿದ್ದರೆ , ಸಾಲದ ಮರುಪಾವತಿಗಾಗಿ ನೀವು ನಿಮ್ಮ ಬೆಲೆಬಾಳುವ ವಸ್ತುಗಳನ್ನು ಅಡವಾನವಾಗಿಡಬೇಕಾಗಬಹುದು.
ಶಾಪಿಂಗ್ ಮಾಡುವುದಕ್ಕಿಂತ ಹೆಚ್ಚಾಗಿ ನಿಮ್ಮ ಫ್ಯಾಮಿಲಿ ಹಾಗೂ ಸ್ನೇಹಿತರ ಜೊತೆ ಹರಟೆ ಹೊಡೆಯುವದಲ್ಲಿ ಸಮಯ ಕಳೆಯಿರಿ.
ವಸ್ತುಗಳನ್ನು ಖರೀದಿಸುವುದು ಅಥವಾ ಅನುಭವಿಸುವುದು ನಿಮ್ಮ ಜೀವನಕ್ಕೆ ನಿಜವಾದ ಮೌಲ್ಯವನ್ನು ನೀಡುತ್ತದೆ ಎಂದಾದರೆ ಅದು ಸ್ಮಾರ್ಟ್ ಶಾಪಿಂಗ್ . ಸಿಕ್ಕಾಪಟ್ಟೆ ಖರ್ಚು ಮಾಡುವುದಕ್ಕಿಂತ ಯಾವುದಕ್ಕೆ ಬೇಕೋ ಅಷ್ಟೇ ಖರ್ಚು ಮಾಡುವುದಲ್ಲಿ ಜೀವನ ಸುಖಕರವಾಗಿ ಸಾಗುವುದು.
ನೀವು ಸರಿಯಾಗಿ ಯೋಚಿಸಿ ಖರ್ಚು ಮಾಡಿದರೆ ಸಾಲಕ್ಕೆ ಒಳಗಾಗದೆ ನೀವು ನಿಮಗೆ ಬೇಕಾದ ವಸ್ತುಗಳನ್ನೆಲ್ಲಾ ಖರೀದಿಸಬಹುದು. ಜೊತೆಗೆ ಜೀವನದಲ್ಲಿನ ಕೆಲವು ಮಹತ್ತರ ಗುರಿಗಳಿಗಾಗಿ ಹಣದ ಉಳಿತಾಯವನ್ನೂ ಮಾಡುವುದು ಬಹಳ ಮುಖ್ಯ. ಆ ಸೂಕ್ಷ್ಮತೆಯನ್ನು ನೀವು ಅರಿಯದಿದ್ದರೆ ಹಣವನ್ನು ದುಂದುವೆಚ್ಚ ಮಾಡುತ್ತಿದ್ದೀರೆಂದೇ ಅರ್ಥ.
ನಿಮ್ಮ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್‌ಗೆ ಮಿತಿಯನ್ನು ಸೆಟ್ ಮಾಡಿಕೊಳ್ಳುವುದು ಈಗ ತುಂಬಾ ಸುಲಭ. ಕೆಲವರು ಕ್ರೆಡಿಟ್ ಕಾರ್ಡ್ ಇದೆಯೆಂದು ಸಿಕ್ಕಾ ಪಟ್ಟೆ ಖರ್ಚು ಮಾಡುತ್ತಾರೆ. ಅದಕ್ಕಾಗಿ ನಿಮ್ಮ ಕಾರ್ಡ್‌ನ ಮಿತಿಯನ್ನು ನಿಯಮಿತಗೊಳಿಸಿದರೆ ಅಧಿಕ ಖರ್ಚಾಗುವುದನ್ನು ತಡೆಯಬಹುದು.
ಪ್ರೀಪೇಯ್ಡ್ ಕಾರ್ಡ್‌ಗಳು ನಿಮ್ಮಿಂದ ಅನಗತ್ಯ ಖರ್ಚು ಮಾಡಿಸುತ್ತದೆ. ಇದು ನಿಮ್ಮ ಕೈಯಿಂದ ಶಾಪಿಂಗ್ ಮಾಡುವ ನಿರ್ಧಾರ ತೆಗೆದುಕೊಳ್ಳುವ ಅವಕಾಶವನ್ನು ಕಸಿದುಕೊಳ್ಳುತ್ತದೆ. ಮನಸ್ಸಿಗೆ ಬಂದದ್ದನ್ನೆಲ್ಲಾ ಖರೀದಿಸುವಂತೆ ಮಾಡುತ್ತದೆ.
ಲಾಕ್‌ಡೌನ್ ಸಂದರ್ಭದಲ್ಲಿ ಹಣಕಾಸಿನ ಪರಿಸ್ಥಿತಿಯನ್ನು ಸುಧಾರಿಸುವುದು ಬಹಳ ಕಷ್ಟ ಎಂದು ಬಹುತೇಕರು ಕಂಡುಕೊಂಡಿದ್ದಾರೆ.
ಒಂದುವೇಳೆ ನಿಮ್ಮಿಂದ ನಿಮ್ಮ ಅನಗತ್ಯ ಖರ್ಚುಗಳನ್ನು ಕಂಟ್ರೋಲ್‌ನಲ್ಲಿಡಲು ಸಾಧ್ಯವಾಗುತ್ತಿಲ್ಲವೆಂದಾದರೆ. ಫೈನಾನ್ಸಿಯಲ್ ಅಡ್ವೆಸರ್‌ಗಳು ನಿಮಗೆ ಸಹಾಯ ಮಾಡಬಲ್ಲರು.
ಲಾಕ್‌ಡೌನ್‌ನಿಂದ ಹೊರಗೆ ಬರುತ್ತಿದ್ದಂತೆ ನೀವು ನಿಮ್ಮ ಕಾರ್‌ನಲ್ಲಿ ಮಾರ್ಕೇಟ್ ಹೋಗಲು ಹಂಬಲಿಸುತ್ತಿರಬಹುದು. ಮಾರ್ಕೇಟ್ ತಲುಪುತ್ತಿದ್ದಂತೆ ನೀವು ಖರ್ಚು ಮಾಡಲು ಪ್ರಾರಂಭಿಸುತ್ತೀರಿ. ಇವುಗಳನ್ನೇ ನೀವು ಇಷ್ಟು ದಿನಗಳಿಂದ ಮಿಸ್ ಮಾಡಿಕೊಂಡಿದ್ದು. ಕಳೆದ ಲಾಕ್‌ಡೌನ್‌ನಿಂದ ಇದನ್ನೆಲ್ಲಾ ಮಿದ್ ಮಾಡಿಕೊಂಡಿದ್ದೇವು ಎನ್ನುವುದನ್ನು ಹೇಳಿಕೊಳ್ಳುತ್ತಾರೆ.
ಮೊದಲ ಕೆಲವು ದಿನಗಳು ಏನಾದರೂ ಬೇರೆ ಟ್ರೈ ಮಾಡಿ. ಉದಾಹರಣೆಗೆ ವಾಕಿಂಗ್, ಓಡುವುದು, ಸೈಕ್ಲಿಂಗ್ ನಂತಹ ದೈಹಿಕ ಚಟುವಟಿಕೆಗಳನ್ನು ಟ್ರೈ ಮಾಡಿ. ಸಮಯ ಕಳೆಯುತ್ತಿದ್ದಂತೆ ನಿಮ್ಮ ಹಂಬಲ ಕೂಡಾ ಕಡಿಮೆಯಾಗುತ್ತದೆ.
ಲಾಕ್‌ಡೌನ್ ಸಂದರ್ಭದಲ್ಲಿ ನೀವು ಬರೀ ಅಗತ್ಯದ ವಸ್ತುಗಳನ್ನು ಮಾತ್ರ ಖರೀದಿಸಿರುತ್ತೀರಾ. ಹಾಗಾಗಿ ನಿಮ್ಮ ದುಂದುವೆಚ್ಚ ಬಹಳಷ್ಟು ಮಟ್ಟಿಗೆ ಕಡಿಮೆಯಾಗಿರುತ್ತದೆ. ಜೊತೆಗೆ ಹಣದ ಉಳಿತಾಯವನ್ನೂ ಮಾಡಿರುತ್ತೀರಿ. ಇದರಿಂದ ನಿಮಗೆ ನಿಮ್ಮ ಅನಗತ್ಯ ಖರ್ಚು ವೆಚ್ಚಗಳ ಬಗ್ಗೆ ತಿಳಿದಿರುತ್ತದೆ.
ಇದು ನಿಮಗೆ ಹಣದ ಉಳಿತಾಯಕ್ಕೆ ಸಹಾಯಮಾಡುತ್ತದೆ. ಹಣವನ್ನು ಕ್ರಮಬದ್ಧವಾಗಿ ಹೂಡಿಕೆ ಮಾಡಲು ಕಲಿಯಿರಿ. ನಿಮ್ಮ ಅಕೌಂಟ್‌ನಲ್ಲಿ ಸಾಕಷ್ಟು ಹಣವಿದ್ದರೆ ಕೂಡಲೇ ಅದನ್ನು ಸೂಕ್ತವಾದುದರಲ್ಲಿ ಹೂಡಿಕೆ ಮಾಡಿ. ಇದರಿಂದ ನಿಮ್ಮ ಅಕೌಂಟ್‌ನಲ್ಲಿರುವ ದುಡ್ಡು ಒಳ್ಳೆಯ ಕೆಲಸಕ್ಕೆ ನಿಮ್ಮ ಉತ್ತಮ ಭವಿಷ್ಯಕ್ಕಾಗಿ ಹೂಡಿಕೆ ಮಾಡಿದಂತಾಗುತ್ತದೆ. ಹಾಗಾಗಿ ಅನಗತ್ಯ ಖರ್ಚು ಮಾಡಬೇಕೆಂಬ ಹಂಬಲವಿರುವುದಿಲ್ಲ.
ಯಾವುದೇ ವಸ್ತು ಇಷ್ಟವಾದಲ್ಲಿ ಅದನ್ನು ತಕ್ಷಣ ಖರೀದಿಸದಿದ್ದರೆ ಎಲ್ಲಿ ಕಳೆದುಕೊಂಡು ಬಿಡುತ್ತೇನೋ ಎನ್ನುವ ಭಯ ಹಲವರಲ್ಲಿ ಇರುತ್ತದೆ. ಆ ಕಾರಣಕ್ಕಾಗಿ ನೋಡಿದ್ದನ್ನು ತಕ್ಷಣ ಖರೀಸಬೇಕೆಂದು ಹಂಬಲಿಸುತ್ತಾರೆ. ಹೀಗೆ ಮಾಡುವುದರಿಂದ ನಿಮ್ಮ ಮಿತಿಮೀರಿದ ವಸ್ತುವನ್ನು ಖರೀಸಲು ನಿಮ್ಮ ಮನಸ್ಸು ಒತ್ತಾಯಿಸುತ್ತದೆ. ಹಾಗಾಗಿ (FOMO) ಭಯವನ್ನು ದೂರವಾಗಿಸಲು ಇಲ್ಲಿದೆ ಟಿಪ್ಸ್ . ಈ ಕೆಲವು ಟಿಪ್ಸ್‌ಗಳನ್ನು ನಿಮ್ಮಲ್ಲಿರುವ ಕಳೆದುಕೊಳ್ಳುತ್ತೇವೋ ಎನ್ನುವ ಭಯವನ್ನು ದೂರವಾಗಿಸಲು ಸಹಾಯ ಮಾಡಬಲ್ಲದು.
ಒಂದು ವೇಳೆ ನೀವು ಬಯಸುವ ವಸ್ತು ನಿಮ್ಮ ಬಜೆಟ್‌ಗಿಂತಲೂ ಅಧಿಕವಾಗಿದ್ದಲ್ಲಿ ಅದಕ್ಕೆ ಪರ್ಯಾಯವಾದ ಕಡಿಮೆ ಬೆಲೆಯ ವಸ್ತು ಸಿಗಬಲ್ಲದೆ ಎನ್ನುವುದನ್ನು ಯೋಚಿಸಿ. ಅಥವಾ ಸಾಮಾಜಿಕ ಜಾಲತಾಣದಲ್ಲಿ ಸಮಯ ಕಳೆಯುವುದನ್ನು ಕಡಿಮೆ ಮಾಡಿ. ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕಾಣಸಿಗುವ ಜಾಹೀರಾತುಗಳು ನಿಮ್ಮ ಕೊಳ್ಳುವ ಬಯಕೆಯನ್ನು ಇನ್ನಷ್ಟು ಹೆಚ್ಚಿಸಬಲ್ಲದು.. ಅದಕ್ಕಾಗಿ ಆದಷ್ಟು ಸಾಮಾಜಿಕ ಜಾಲತಾಣಗಳಿಂದ ದೂರ ಇರುವುದು ಒಳ್ಳೆಯದು.
ಈ ರೂಲ್ಸ್ ಬಹಳ ಸಿಂಪಲ್ ಆಗಿದೆ, ಒಂದು ವೇಳೆ ನಿಮಗೆ ಯಾವುದಾದರೂ ವಸ್ತು ಇಷ್ಟವಾದಲ್ಲಿ, ಅದನ್ನು ಕೊಳ್ಳಬೇಕೆಂಬ ಹಂಬಲ ಉಂಟಾದರೆ ತಕ್ಷಣ ಕೊಳ್ಳಬೇಡಿ. 30 ದಿನಗಳ ವರೆಗೆ ಕಾಯಿರಿ. 30 ದಿನಗಳ ನಂತರವೂ ನಿಮಗೆ ಆ ವಸ್ತು ಬೇಕೆಂದೆನಿಸಿದರೆ ನಂತರ ಖರೀದಿಸಿ. ಒಂದು ವೇಳೆ 30 ದಿನಗಳ ಒಳಗೆ ನಿಮಗೆ ಆ ವಸ್ತುವಿನ ಅಗತ್ಯವಿಲ್ಲವೆಂದೆನಿಸಿದರೆ ಅಥವಾ ಆ ವಸ್ತುವನ್ನು ಮರೆತು ಬಿಟ್ಟಿದ್ದರೆ, ಅದರ ಮೇಲಿನ ಮೋಹ ಕಡಿಮೆ ಯಾಗಿದ್ದರೆ ಆ ವಸ್ತುವನ್ನು ಖರೀದಿಸಬೇಡಿ, ಇದರಿಂದ ಅನಗತ್ಯ ಖರ್ಚು ಮಾಡುವುದನ್ನು ತಡೆಯಬಹುದು.
ಈ 30 ದಿನಗಳ ರೂಲ್ಸ್ ನಿಮ್ಮಲ್ಲಿ ಕಾಯುವುದರಲ್ಲಿರುವ ತೃಪ್ತಿ ಏನೆಂಬುವುದನ್ನು ತಿಳಿಸಿಕೊಡುತ್ತದೆ ಜೊತೆಗೆ ಹಣಕಾಸಿನ ನಿರ್ಧಾರವನ್ನು ತೆಗೆದುಕೊಳ್ಳು ಸಹಾಯ ಮಾಡುತ್ತದೆ.
ಆಗಾಗ ಖರ್ಚು ಮಾಡುವುದು ಸಾಮಾನ್ಯವಾದಾಗ ನಿಮ್ಮ ಹೆಚ್ಚುತ್ತಿರುವ ಖರ್ಚನ್ನು ಕಡಿಮೆ ಮಾಡಿಕೊಳ್ಳುವುದು ಕಷ್ಟ. ಹಾಗಾಗಿ ಖರ್ಚನ್ನು ಕಡಿಮೆ ಮಾಡಬೇಕಾದರೆ ಇಲ್ಲ ಎನ್ನುವುದನ್ನು ಮೊದಲು ಕಲಿಯಬೇಕು.
ಯಾವುದೇ ವಸ್ತುವಿನ ಮೇಲೆ ಖರ್ಚು ಮಾಡುವ ಮೊದಲು ಯಾವ ಸಾಮಾಜಿಕ ಚಟುವಟಿಕೆಗಳು ನಿಮಗೆ ಅಗತ್ಯ ಎನ್ನುವುದನ್ನು ತಿಳಿಯಿರಿ. ನಿಮ್ಮ ಬ್ಯಾಂಕ್ ಅಕೌಂಟ್ ಹಾಗೂ ನಿಮಗೆ ಬ್ರೇಕ್ ಬೇಕು ಎಂದಾಗ "ಇಲ್ಲ" ಎನ್ನುವುದನ್ನು ರೂಢಿಸಿಕೊಳ್ಳಿ.
ಬಹಳ ದಿನಗಳ ಕಾಲ ಖರ್ಚು ಮಾಡದೇ ಹಾಗೆಯೇ ಉಳಿತಾಯ ಮಾಡಿಕೊಂಡಿದ್ದರೆ ಖರ್ಚು ಮಾಡಬೇಕೆಂಬ ಬಯಕೆಯಾಗುವುದು ಸಹಜ.
ಪತ್ರಿಕಾರದ ಖರ್ಚು ಯಾವಲೂ ಕೆಟ್ಟದ್ದು ಎನ್ನಲಾಗುವುದಿಲ್ಲ. ಹಿಡಿತ ಕಳೆದುಕೊಂಡರೆ ನಿಮ್ಮ ಹಣಕಾಸಿ ಪರಿಸ್ಥಿತಿಯ ಮೇಲೆ ಪರಿಣಾಮ ಬೀರುವುದು ಖಂಡಿತ.
ನಿಮ್ಮ ಹಣವನ್ನು ಬೇಡದ ಅನಗತ್ಯ ಕೆಲಸಕ್ಕೆ ಖರ್ಚು ಮಾಡುವ ಬದಲು ಕೆಲವು ಒಳ್ಳೆ ವಿಚಾರಕ್ಕೆ ಖರ್ಚು ಮಾಡಿದರೆ ಸೂಕ್ತ. ಆದರೂ ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡುವುದು ಒಂಥರಾ ಖುಷಿ ಅಲ್ವಾ?.