Playstore Icon
Download Jar App
Digital Gold

ಚಿನ್ನವನ್ನು ಉಡುಗೊರೆಯಾಗಿ ನೀಡುತ್ತಿರುವಿರಾ? ಡಿಜಿಟಲ್‌ ಆಗುವುದು ಉತ್ತಮ ಆಯ್ಕೆಯಾಗಿದೆ: ಜಾರ್ ಆ್ಯಪ್‌

January 11, 2023

ಡಿಜಿಟಲ್ ಗೋಲ್ಡ್ - ನಿಮ್ಮ ಪ್ರೀತಿಪಾತ್ರರಿಗೆ ನೀಡಬಹುದಾದ ಅತ್ಯುತ್ತಮ ಕೊಡುಗೆ. ಅವರ ಹೂಡಿಕೆಯ ಪ್ರಯಾಣವನ್ನು ಪ್ರಾರಂಭಿಸಿ ಅಥವಾ ವಿಸ್ತರಿಸಿ- ಅವರ ಪೋರ್ಟ್‌ಫೋಲಿಯೊದಲ್ಲಿ ಚಿನ್ನವನ್ನು ಸೇರಿಸಿ.

ನೀವು ಈಗಲೂ ನಿಮ್ಮ ಸ್ನೇಹಿತರಿಗೆ ಮತ್ತು ಕುಟುಂಬಕ್ಕೆ ಹಣ, ತಂತ್ರಜ್ಞಾನ ಅಥವಾ ಫ್ಯಾಶನ್ ವಸ್ತುಗಳನ್ನು ಉಡುಗೊರೆಯಾಗಿ ನೀಡುತ್ತೀದ್ದೀರಾ? ಕಳೆದ ವರ್ಷ ನಿಮ್ಮ ಹುಟ್ಟುಹಬ್ಬಕ್ಕೆ ಅಥವಾ ದೀಪಾವಳಿಗೆ ನೀವು ಪಡೆದ ಉಡುಗೊರೆಗಳು ನಿಮಗೆ ನೆನಪಿವೆಯೇ? ಇಲ್ಲವೇ? ಏಕೆಂದರೆ ಆ ಉಡುಗೊರೆಯನ್ನು ಬಹುಶಃ ತಿಂದಿರುತ್ತೀರಿ ಅಥವಾ ಬಳಸಿರುತ್ತೀರಿ. ಸರಿ ತಾನೇ?

ಈ ಉಡುಗೊರೆಗಳ ಮೌಲ್ಯವು ಕಾಲಾನಂತರದಲ್ಲಿ ಕಡಿಮೆಯಾಗುತ್ತದೆ. ಅವುಗಳ ಸ್ಟೈಲ್ ಹಳೆಯದಾಗುತ್ತ ಹೋಗುತ್ತದೆ. ಅಥವಾ ದೀರ್ಘಕಾಲದ ಬಳಕೆಯ ನಂತರ ಅವುಗಳ ಮೌಲ್ಯವು ಕಳೆದು ಹೋಗುತ್ತದೆ. ಪ್ರೀತಿಯು ಬಾಳಿಕೆ ಬರುವಾಗ, ಉಡುಗೊರೆ ಮಾತ್ರ ಬಹಳ ಸಮಯದವರೆಗೆ ಉಳಿಯುವುದಿಲ್ಲ. 

ಹಾಗಾದರೆ ನಿಮ್ಮ ಪ್ರೀತಿಪಾತ್ರರಿಗೆ ಜೀವಿತಾವಧಿಯವರೆಗೆ ಉಳಿಯುವಂತಹದ್ದನ್ನು ಏಕೆ ನೀಡಬಾರದು? ನಿಮ್ಮ ಪ್ರೀತಿ-ಪಾತ್ರರ ದೀರ್ಘಾವಧಿಯ ಯೋಗಕ್ಷೇಮದ ಬಗ್ಗೆ ನೀವು ಎಷ್ಟು ಕಾಳಜಿ ವಹಿಸುತ್ತೀರಿ ಎಂಬುದನ್ನು ತೋರಿಸುವಂತದ್ದನ್ನು ನೀಡಿ.

ಅವರಿಗೆ ಸಂಪತ್ತನ್ನು ಉಡುಗೊರೆಯಾಗಿ ನೀಡಿ. ಹೌದು. ಅವರ ಪೋರ್ಟ್‌ಫೋಲಿಯೊದಲ್ಲಿ ಚಿನ್ನವನ್ನು ಸೇರಿಸುವ ಮೂಲಕ ಅವರ ಹೂಡಿಕೆಯ ಪ್ರಯಾಣವನ್ನು ಪ್ರಾರಂಭಿಸಿ ಅಥವಾ ವಿಸ್ತರಿಸಿ. ಇಂದಿನ ಡಿಜಿಟಲ್ ಯುಗದಲ್ಲಿ ಇದನ್ನು ತುಂಬಾ ಸುಲಭವಾಗಿ ಮಾಡಬಹುದು.

ನೀವು ಈಗ ಜಾರ್ ಆ್ಯಪ್‌ ಮೂಲಕ ಡಿಜಿಟಲ್ ಗೋಲ್ಡ್ ಅನ್ನು ಉಡುಗೊರೆಯಾಗಿ ನೀಡಬಹುದು.

ಪ್ರೀತಿ ಮತ್ತು ವಾತ್ಸಲ್ಯದ ಎಂತಹ ಸುಂದರ ಸಂಕೇತವಲ್ಲವೇ ಇದು? ಚಿನ್ನ ಎನ್ನುವುದು ನೀವು ಯಾರಿಗಾದರೂ ನೀಡಬಹುದಾದ ಅತ್ಯಮೂಲ್ಯ ಮತ್ತು ದೀರ್ಘಕಾಲ ಬಾಳಿಕೆ ಬರುವ ಉಡುಗೊರೆಗಳಲ್ಲಿ ಒಂದಾಗಿದೆ.

ಜನ್ಮದಿನಗಳು, ವಾರ್ಷಿಕೋತ್ಸವಗಳು, ಮದುವೆಗಳು, ಪ್ರೇಮಿಗಳು, ಬೇಬಿ ಶವರ್‌ಗಳು, ಹಬ್ಬಗಳು ಮತ್ತು ಇತರ ಸಂದರ್ಭಗಳಲ್ಲಿ ಚಿನ್ನದ ಉಡುಗೊರೆಯನ್ನು ಮೀರಿಸುವ ಉಡುಗೊರೆ ಮತ್ತೊಂದಿಲ್ಲ. 

ಡಿಜಿಟಲ್ ಗೋಲ್ಡ್ ಏಕೆ?

ರಸ್ತೆಯ ಸುರಕ್ಷಿತ ಬದಿಯಲ್ಲಿ ಉಳಿಯಲು.

ನೀವು ಕಾಳಜಿವಹಿಸುವವರಿಗೆ ಹಣವನ್ನು ನೀಡಲು ಡಿಜಿಟಲ್ ಗೋಲ್ಡ್ ಸರಳ ವಿಧಾನವಾಗಿದೆ. ಇದು ಚಿನ್ನವನ್ನು ಸಂಗ್ರಹಿಸುವ, ಆಭರಣದ ಸರಿಯಾದ  ವಿನ್ಯಾಸಗಳನ್ನು ಆಯ್ಕೆ ಮಾಡುವ ಮತ್ತು ಹಣದ ಅಗತ್ಯ ಬಿದ್ದಾಗ ಅದನ್ನು ಮಾರಾಟ ಮಾಡುವ ತಲೆನೋವಿನಿಂದ ನಿಮ್ಮ ಪ್ರೀತಿಪಾತ್ರರನ್ನು ದೂರವಿರಿಸುತ್ತದೆ.

ಚಿನ್ನವು ಯಾವಾಗಲೂ ಹೆಚ್ಚು ಮೆಚ್ಚುಗೆ ಪಡೆದ ಲೋಹವಾಗಿದೆ. ಮತ್ತು ಪರಿಸ್ಥಿತಿಗಳು ಕಠಿಣವಾದರೂ ಸಹ ಜನರು ಈಗಲೂ ಚಿನ್ನದತ್ತ ತಿರುಗಿ ನೋಡುತ್ತಾರೆ ಎಂದು ಇತ್ತೀಚಿನ ಘಟನೆಗಳು ತೋರಿಸಿವೆ.

ಫಿಸಿಕಲ್ ಗೋಲ್ಡ್‌ಗಿಂತ  ಡಿಜಿಟಲ್ ಗೋಲ್ಡ್‌ ಅನ್ನು ಉಡುಗೊರೆಯಾಗಿ ನೀಡುವುದು ಉತ್ತಮ ಆಯ್ಕೆಯಾಗಿದೆ. ಇದು ಚಿನ್ನದ ಪರಿಶುದ್ಧತೆ ಹಾಗೂ ನ್ಯಾಯಸಮ್ಮತತೆಯ ಸಮಸ್ಯೆಯೇ ಆಗಿರಲಿ ಅಥವಾ ಚಿನ್ನದ ಸಂಗ್ರಹಣೆ ಮತ್ತು ಸುರಕ್ಷತೆಯ ಸಮಸ್ಯೆಯೇ ಆಗಿರಲಿ,  ಫಿಸಿಕಲ್ ಗೋಲ್ಡ್‌ ನೀಡದ ಪರಿಹಾರಗಳನ್ನು ಡಿಜಿಟಲ್ ಗೋಲ್ಡ್‌ ಒದಗಿಸುತ್ತದೆ.

ಫಿಸಿಕಲ್ ಗೋಲ್ಡ್‌ಗಿಂತ ಡಿಜಿಟಲ್ ಗೋಲ್ಡ್‌ ಅನ್ನು ಉಡುಗೊರೆಯಾಗಿ ನೀಡುವುದು ಏಕೆ ಉತ್ತಮ:

  • ಅನುಕೂಲಕರ  - ಡಿಜಿಟಲ್ ಗೋಲ್ಡ್‌ನ ವಹಿವಾಟುಗಳು, ಫಿಸಿಕಲ್ ಗೋಲ್ಡ್‌ನ ಖರೀದಿಗಳಿಗಿಂತ ಭಿನ್ನವಾಗಿ, ಆನ್‌ಲೈನ್‌ನಲ್ಲಿ ನಡೆಯುತ್ತವೆ. ಮತ್ತು ಮಾರಾಟದ ಸಮಯದಲ್ಲಿ ಖರೀದಿದಾರರು ಅಥವಾ ಸ್ವೀಕರಿಸುವವರು ಭೌತಿಕವಾಗಿ ಇರಬೇಕಾದ ಅಗತ್ಯವಿಲ್ಲ. ಅವರು ಎಲ್ಲಿಂದಲಾದರೂ, ಯಾವುದೇ ಸಮಯದಲ್ಲಾದರೂ ಚಿನ್ನವನ್ನು ಖರೀದಿಸಬಹುದು ಅಥವಾ ಉಡುಗೊರೆಯಾಗಿ ನೀಡಬಹುದು.

  • ಸುರಕ್ಷತೆ - ನೀವು ಯಾರಿಗಾದರೂ ಫಿಸಿಕಲ್ ಗೋಲ್ಡ್ ಅನ್ನು ಉಡುಗೊರೆಯಾಗಿ ನೀಡಿದರೆ, ಕಳ್ಳತನ, ದರೋಡೆ ಮತ್ತು ಇನ್ನಿತರ ಹಲವಾರು ವಸ್ತುಗಳ ಅಪಾಯ ಯಾವಾಗಲೂ ಇರುತ್ತದೆ. ಡಿಜಿಟಲ್ ಗೋಲ್ಡ್ ಸುರಕ್ಷಿತವಾಗಿದೆ, ಭದ್ರವಾಗಿದೆ ಮತ್ತು ಅದನ್ನು ವಾಲ್ಟ್'ಗಳಲ್ಲಿ ಸಂಗ್ರಹಿಸಲಾಗಿದೆ. ಇದರಲ್ಲಿ ಕಳ್ಳತನದ ಅಪಾಯವಿರುವುದಿಲ್ಲ.

  • ಲಿಕ್ವಿಡಿಟಿ   - ಮತ್ತೊಮ್ಮೆ ಹೇಳುತ್ತೇವೆ, ಡಿಜಿಟಲ್ ಗೋಲ್ಡ್ ಅನ್ನು ಉಡುಗೊರೆಯಾಗಿ ನೀಡುವುದು ಒಂದು ಅದ್ಭುತ ಆಯ್ಕೆಯಾಗಿದೆ. ಏಕೆಂದರೆ ಅದು ಹೆಚ್ಚು ಲಿಕ್ವಿಡಿಟಿ ಹೊಂದಿದೆ ಮತ್ತು ಅವರು ಇದನ್ನು ತಮ್ಮ ತುರ್ತು ನಿಧಿಯ ಭಾಗವನ್ನಾಗಿ ಬಳಸಬಹುದು. ಅವುಗಳನ್ನು ಯಾವುದೇ ಸಮಯದಲ್ಲಿ ಎಕ್ಸ್ಚೇಂಜಸ್‌ಗಳಲ್ಲಿ ಮಾರಾಟ ಮಾಡಬಹುಡಾಗಿದೆ.

  • ಶುದ್ಧತೆ - ಚಿನ್ನವನ್ನು ಫಿಸಿಕಲ್ ರೂಪದಲ್ಲಿ ಖರೀದಿಸುವಾಗ ಅಥವಾ ಉಡುಗೊರೆಯಾಗಿ ನೀಡಿದಾಗ, ಅಶುದ್ಧ ಚಿನ್ನವನ್ನು ಪಡೆಯುವ ಅವಕಾಶವಿರುತ್ತದೆ. ಆದರೆ ಈಗ ಖರೀದಿದಾರರು ಅಥವಾ ಸ್ವೀಕರಿಸುವವರು ಚಿಂತಿಸಬೇಕಾಗಿಲ್ಲ. ಏಕೆಂದರೆ ಶುದ್ಧತೆಯನ್ನು ಕಾಪಾಡಿಕೊಳ್ಳುವುದು ಚಿನ್ನ ವಿತರಿಸುವವರ ಜವಾಬ್ದಾರಿಯಾಗಿದೆ. ಅಲ್ಲದೆ, ಜಾರ್‌ನ ಡಿಜಿಟಲ್ ಗೋಲ್ಡ್ 24K, 99.95% ರಷ್ಟು ಶುದ್ಧವಾಗಿದೆ.

  • ಹೊಲ್ಡಿಂಗ್ಸ್ ವೆಚ್ಚಗಳು - ನೀವು ಚಿನ್ನವನ್ನು ಉಡುಗೊರೆಯಾಗಿ ನೀಡಿದರೆ, ಆ ಚಿನ್ನವನ್ನು ಮನೆಯಲ್ಲಿಟ್ಟುಕೊಂಡಾಗ ಕಳ್ಳತನ, ದರೋಡೆ ಮತ್ತು ಹಗಲುದರೋಡೆ ಇತ್ಯಾದಿಗಳು ಅಪಾಯಗಳು ಸಂಭವಿಸಬಹುದಾಗಿವೆ. ಪರಿಣಾಮವಾಗಿ, ಮಾಲೀಕರು ಲಾಕರ್‌ಗೆ ಬಾಡಿಗೆಯನ್ನು ಪಾವತಿಸಬೇಕು ಮತ್ತು ಚಿನ್ನವನ್ನು ಸುರಕ್ಷಿತವಾಗಿರಿಸಲು, ಈ ಹಳದಿ ಲೋಹಕ್ಕೆ ಇನ್ಶೂರೆನ್ಸ್ ಮಾಡಿಸಲು ಪ್ರೀಮಿಯಂ ಅನ್ನು ಪಾವತಿಸಬೇಕು. ಮತ್ತೊಂದೆಡೆ, ಡಿಜಿಟಲ್ ಗೋಲ್ಡ್ ಅನ್ನು ಹೂಡಿಕೆ ಮಾಡುವುದು ಅಥವಾ ಉಡುಗೊರೆ ನೀಡುವುದು ಎಂದರೆ, ಹೂಡಿಕೆದಾರರಿಂದ ಚಿನ್ನವನ್ನು ಹಿಡಿದಿಟ್ಟುಕೊಳ್ಳುವ ಅಪಾಯ ಮತ್ತು ವೆಚ್ಚವನ್ನು, ಡಿಜಿಟಲ್ ಗೋಲ್ಡ್‌ನ ವಿತರಕರಿಗೆ ವರ್ಗಾಯಿಸುತ್ತದೆ.

  • ಹೂಡಿಕೆಯ ಸುಲಭತೆ - ಹೂಡಿಕೆದಾರರು ಡಿಜಿಟಲ್ ಗೋಲ್ಡ್ ಅನ್ನು ಫ್ರ್ಯಾಕ್ಷನ್‌ಗಳಲ್ಲಿ  ಹಿಡಿದಿಟ್ಟುಕೊಳ್ಳುವ ಆಯ್ಕೆಯನ್ನು ಹೊಂದಿರುತ್ತಾರೆ. ಉದಾಹರಣೆಗೆ ಎಮ್.ಎಮ್.ಟಿ.ಸಿ-ಪಿ.ಎ.ಎಮ್.ಪಿ ಡಿಜಿಟಲ್ ಗೋಲ್ಡ್‌ನಲ್ಲಿ (99.95 ಶುದ್ಧತೆ ಪ್ರಮಾಣೀಕೃತ ಚಿನ್ನ)  ₹ 1 ರಷ್ಟು ಸಣ್ಣ ಮೊತ್ತದೊಂದಿಗೆ ಹೂಡಿಕೆ ಮಾಡುವ ಸಾಮರ್ಥ್ಯ. ಚಿನ್ನವನ್ನು ಉಡುಗೊರೆಯಾಗಿ ನೀಡಲು ಮತ್ತು  ಮನೆಯಲ್ಲಿಯೇ ಕುಳಿತು, ಇರುವ ಸೌಕರ್ಯದಿಂದ ಇನ್ವೆಸ್ಟಮೆಂಟ್ ಮಾಡಲು ನೀವು ಜಾರ್ ಆ್ಯಪ್  ಅನ್ನು ಬಳಸಬಹುದು.

  • ನೀವು ಯಾವುದಕ್ಕೆ ಪಾವತಿಸುತ್ತೀರಿ : ಚಿನ್ನಾಭರಣಗಳನ್ನು ಖರೀದಿಸುವಾಗ, ನೀವು ಕೇವಲ ಚಿನ್ನದ ಬೆಲೆಯನ್ನಷ್ಟೇ  ಪಾವತಿಸುವುದಿಲ್ಲ, ಅದರೊಂದಿಗೆ ಆಭರಣದ ಮೇಕಿಂಗ್ ಶುಲ್ಕಗಳು ಮತ್ತು ಹೆಚ್ಚುವರಿ ತೆರಿಗೆಗಳನ್ನು ಸಹ ಪಾವತಿಸಬೇಕಾಗುತ್ತದೆ. ನಿಮ್ಮ ಆಭರಣದ ವಿನ್ಯಾಸದ ಆಧಾರದ ಮೇಲೆ ಆಭರಣಕಾರರು 7% ರಿಂದ 25% ವರೆಗೆ ಶುಲ್ಕವನ್ನು ವಿಧಿಸುತ್ತಾರೆ. ಡಿಜಿಟಲ್ ಗೋಲ್ಡ್‌ನೊಂದಿಗೆ, ನೀವು ಶುದ್ಧ ಚಿನ್ನವನ್ನು ಅಂದರೆ 24 ಕ್ಯಾರೆಟ್ ಚಿನ್ನವನ್ನು ಮಾತ್ರ ವ್ಯಾಪಾರ ಮಾಡುತ್ತೀರಿ. ನೀವು ಖರ್ಚು ಮಾಡುವ ಒಟ್ಟು ಮೊತ್ತವನ್ನು ಚಿನ್ನದ ಮೇಲೆ ಮಾತ್ರವೇ ಹೂಡಿಕೆ ಮಾಡಲಾಗುತ್ತದೆ. ಖರೀದಿ ಮಾಡುವ ಸಮಯದಲ್ಲಿ ನೀವು ಕೇವಲ 3% ಜಿ.ಎಸ್.ಟಿ ಅನ್ನು ಪಾವತಿಸಬೇಕಾಗುತ್ತದೆ.

ಆದ್ದರಿಂದ ನೀವು ನೋಡಿ, ಡಿಜಿಟಲ್ ಗೋಲ್ಡ್ ಭಾರತೀಯ ಪೋರ್ಟ್‌ಫೋಲಿಯೊಗಳಲ್ಲಿ ತನ್ನದೇ ಆದ ಗುರುತನ್ನು ಮೂಡಿಸುತ್ತಿದೆ ಮತ್ತು ಈಗ ಇದೊಂದು ಸೊಗಸಾದ ಉಡುಗೊರೆಯ ಪರ್ಯಾಯವಾಗಿದೆ.

ಸ್ವೀಕರಿಸುವವರು ಡಿಜಿಟಲ್ ಗೋಲ್ಡ್ ಅನ್ನು ಪಡೆಯುವುದು ಮಾತ್ರವಲ್ಲದೆ, ಅವರು ಸುರಕ್ಷಿತ ಆಸ್ತಿಯನ್ನು ಹೊಂದಿದ್ದು, ಅದು ದೀರ್ಘಾವಧಿಯ ಆದಾಯವನ್ನು ನೀಡುತ್ತದೆ. ಮತ್ತು ಸಂಪತ್ತನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಮತ್ತು ಏನೆಂದು ಊಹಿಸಿ? ಚಿನ್ನವನ್ನು ಉಡುಗೊರೆಯಾಗಿ ನೀಡುವುದು ಈಗ ಸುಲಭ ಮತ್ತು ತೊಂದರೆ-ಮುಕ್ತವಾಗಿದೆ.

ಜಾರ್ ಮೂಲಕ ಡಿಜಿಟಲ್ ಗೋಲ್ಡ್‌ನಲ್ಲಿ ಹೂಡಿಕೆ ಮಾಡಿ ಮತ್ತು ಡಿಜಿಟಲ್ ಗೋಲ್ಡ್ ಅನ್ನು ಉಡುಗೊರೆಯಾಗಿ ನೀಡಿ - ಡಿಜಿಟಲ್ ಗೋಲ್ಡ್ ಇನ್ವೆಸ್ಟಮೆಂಟ್ ಆ್ಯಪ್‌.

ನೀವು ನಿಮ್ಮ ಪ್ರೀತಿಪಾತ್ರರಿಗೆ ಯಾರೂ ನೀಡದ ಬೆಲೆಯಲ್ಲಿ ಉಡುಗೊರೆಯನ್ನು ಕಳುಹಿಸಬಹುದು. ಅಷ್ಟೇ ಅಲ್ಲದೇ, ಕೆಲವು ಸರಳ ಹಂತಗಳಲ್ಲಿ ನಿಮ್ಮ ಸ್ವಂತ ಮನೆಯಲ್ಲಿಯೇ ಇದ್ದುಕೊಂಡು, ನಿಮಗಾಗಿ ಚಿನ್ನವನ್ನು ಖರೀದಿಸಬಹುದು.

ಮೊದಲು ಇಲ್ಲಿ ಆ್ಯಪ್‌ ಡೌನ್‌ಲೋಡ್ ಮಾಡಿ. ಅದನ್ನು ಓಪನ್ ಮಾಡಿ. 'ಗಿಫ್ಟ್ ಗೋಲ್ಡ್' ಆಯ್ಕೆಯನ್ನು ಸೆಲೆಕ್ಟ್ ಮಾಡಿ. ನೀವು ಯಾರಿಗೆ ಚಿನ್ನವನ್ನು ಗಿಫ್ಟ್ ನೀಡಲು ಬಯಸುತ್ತಿರೋ ಅವರ ಕಾಂಟ್ಯಾಕ್ಟ್ ನಂಬರ್ ಮತ್ತು ನೀವು ಕಳುಹಿಸಲು ಬಯಸುವ ಚಿನ್ನದ ಮೊತ್ತವನ್ನು ಆಯ್ಕೆಮಾಡಿ. ನಂತರ ಅದನ್ನು ತಕ್ಷಣವೇ ಕಳುಹಿಸಿ! ಅತ್ಯಂತ ಸರಳವಾಗಿದೆ ಅಲ್ಲವೇ.

ಡಿಜಿಟಲ್ ಗೋಲ್ಡ್ ಮೂಲಕ ನಿಮ್ಮ ಪ್ರೀತಿಯ ಒಂದು ಭಾಗವನ್ನು ಅವರೊಂದಿಗೆ ಹಂಚಿಕೊಳ್ಳಿ. ಡಿಜಿಟಲ್ ಗೋಲ್ಡ್‌ನಲ್ಲಿ ಹೂಡಿಕೆ ಮಾಡುವ ಬಗ್ಗೆ ಎಲ್ಲವನ್ನೂ ತಿಳಿಯಲು ಈ ಡಿಜಿಟಲ್ ಗೋಲ್ಡ್ ಗೈಡ್ ಅನ್ನು ಪರಿಶೀಲಿಸಿ.

Subscribe to our newsletter
Thank you! Your submission has been received!
Oops! Something went wrong while submitting the form.