Buy Gold
Sell Gold
Daily Savings
Digital Gold
Instant Loan
Round-Off
Nek Jewellery
ಡಿಜಿಟಲ್ ಗೋಲ್ಡ್ ಖರೀದಿಸಬೇಕೇ? ಇದರ ಬಗ್ಗೆ ಪ್ರಶ್ನೆಗಳು ಮತ್ತು ಸಂಶಯಗಳಿವೆಯೇ? ಡಿಜಿಟಲ್ ಗೋಲ್ಡ್ ನ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳಿಗೆ ಜಾರ್ ನ ಉತ್ತರಗಳಿಗಾಗಿ ಮುಂದೆ ಓದಿ.
ಡಿಜಿಟಲ್ ಗೋಲ್ಡ್ ಖರೀದಿಸಬೇಕೇ? ಇದರ ಬಗ್ಗೆ ಪ್ರಶ್ನೆಗಳು ಮತ್ತು ಸಂಶಯಗಳಿವೆಯೇ? ಡಿಜಿಟಲ್ ಗೋಲ್ಡ್ ನ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳಿಗೆ ಜಾರ್ ನ ಉತ್ತರಗಳಿಗಾಗಿ ಮುಂದೆ ಓದಿ.
₹1 ರಲ್ಲಿ ಚಿನ್ನದ ಖರೀದಿ ಸಾಧ್ಯವೇ? ಸಾಧಾರಣ ಆಭರಣ ಅಂಗಡಿಗಳಲ್ಲಂತೂ ಸಾಧ್ಯವಿಲ್ಲ. ಆದರೆ ನೀವೀಗ ಚಿನ್ನವನ್ನು ಡಿಜಿಟಲ್ ರೂಪದಲ್ಲಿ ಖರೀದಿಸಬಹುದು, ₹1 ಯಷ್ಟು ಕಡಿಮೆ ಬೆಲೆಯಲ್ಲಿ. ರೋಚಕ, ಅಲ್ಲವೇ?
ಇತ್ತೀಚಿನ ವರ್ಷಗಳಲ್ಲಿ, ಚಿನ್ನದ ಮಾರುಕಟ್ಟೆಗೆ ಡಿಜಿಟಲ್ ಕ್ರಾಂತಿ ಹರಡಿರುವುದರಿಂದ, ಈ ರೀತಿಯ ಹೂಡಿಕೆಯನ್ನು ಪರಿಚಯಿಸಲಾಗಿದೆ - ಡಿಜಿಟಲ್ ಗೋಲ್ಡ್.
ಭಾರತದಲ್ಲಿ, ಡಿಜಿಟಲ್ ಗೋಲ್ಡ್ ಒಂದು ಹೊಸ ಪರಿಕಲ್ಪನೆಯಾಗಿದೆ. ಆದ್ದರಿಂದಲೇ, ಹಲವಾರು ಪ್ರಶ್ನೆಗಳು ಮತ್ತು ಸಂಶಯಗಳು ಗಾಳಿಯಲ್ಲಿ ಹರಿದಾಡುತ್ತಿವೆ.
ಜಾರ್ ನಲ್ಲಿ ನಾವು, ನೀವು ಡಿಜಿಟಲ್ ಗೋಲ್ಡ್ ಬಗ್ಗೆ ಪದೇ ಪದೇ ಕೇಳಿದ 8 ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಲು ನಿಮ್ಮೊಂದಿಗಿದ್ದೇವೆ;
ಡಿಜಿಟಲ್ ಗೋಲ್ಡ್ ಎಂದರೆ ಭೌತಿಕವಾಗಿ ಚಿನ್ನವನ್ನು ಮುಟ್ಟದೆಯೇ ಆನ್ಲೈನ್ ವಾಹಿನಿಗಳ ಮೂಲಕ ಚಿನ್ನವನ್ನು ಖರೀದಿಸುವ ಆಧುನಿಕ ವಿಧವಾಗಿದೆ.
ಆದ್ದರಿಂದ ನೀವು ಚಿನ್ನ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, ಇದು ಹೆಚ್ಚು ಅನುಕೂಲಕರ, ಸುರಕ್ಷಿತ ಹಾಗೂ ಕಡಿಮೆ ಬೆಲೆಯ ಆಯ್ಕೆಯಾಗಿದೆ.
ನೀವು ಖರೀದಿಸುವ ಪ್ರತಿಯೊಂದು ಗ್ರಾಮ್ ಚಿನ್ನಕ್ಕೂ, ಭಾರತದ ಮೂರು ಗೋಲ್ಡ್ ಬ್ಯಾಂಕ್ ಗಳಾದ ಔಗ್ಮಂಟ್, ಎಂ ಎಂ ಟಿ ಸಿ - ಪಿ ಎ ಎಂ ಪಿ ಮತ್ತು ಸೇಫ್ ಗೋಲ್ಡ್ ರಲ್ಲಿ ಒಂದರಲ್ಲಿ ನಿಮ್ಮ ಹೆಸರಿನ ಲಾಕರಿನಲ್ಲಿ 24 ಕೆ ಯ ನೈಜ ಚಿನ್ನವನ್ನು ಸುರಕ್ಷಿತವಾಗಿ ಇಡಲಾಗುತ್ತದೆ.
ಅಪ್ ಬಟನ್ ನ ಒಂದು ಕ್ಲಿಕ್ಕಿನಲ್ಲಿಯೇ, ನೀವು ಭೌತಿಕ ಚಿನ್ನವನ್ನು ಖರೀದಿಸಬಹುದು, ಮಾರಾಟ ಮಾಡಬಹುದು ಅಥವಾ ಹೋಮ್ ಡೆಲಿವರಿಯ ಮನವಿಯನ್ನು ಮಾಡಬಹುದು.
ಇಲ್ಲಿ ಉತ್ತಮ ವಿಷಯವೇನೆಂದರೆ, ಡಿಜಿಟಲ್ ಗೋಲ್ಡ್ ಗೆ ಕನಿಷ್ಟ ಖರೀದಿಯ ಮಿತಿಯಿಲ್ಲ. ನೀವು ₹1 ಯಷ್ಟು ಕಡಿಮೆ ಬೆಲೆಯಿಂದ ಆರಂಭಿಸಿ ಮೇಲೆ ಏರಬಹುದು.
ನೀವು ಡಿಜಿಟಲ್ ಗೋಲ್ಡ್ ಅನ್ನು ಯಾವುದೇ ನೋಂದಾಯಿತ ಆಪ್ ನಿಂದ ಅಥವಾ ಮಧ್ಯಸ್ಥರಿಂದ ಖರೀದಿಸಬಹುದು. ಇದಾಹರಣೆಗೆ ಪೇಟಿಎಂ, ಫೋನ್ ಪೇ, ಗೂಗಲ್ ಪೇ ಇತ್ಯಾದಿ. ಇದನ್ನು ಜಾರ್ ನಿಂದಲೂ ಖರೀದಿಸಬಹುದು ₹1 ರಷ್ಟು ಕಡಿಮೆ ಬೆಲೆಯಲ್ಲಿ.
ಎನ್ ಸಿ ಪಿ ಐ ಮತ್ತು ಮಾರುಕಟ್ಟೆಯ ಮುಂಚೂಣಿಯ ಯುಪಿಐ ಸರ್ವಿಸ್ ಪ್ರೊವೈಡರ್ ಗಳ ಬೆಂಬಲ ಹೊಂದಿರುವ ಜಾರ್ ಆಪ್, ನಿಮ್ಮ ಹಣವನ್ನು ಸ್ವಯಂಚಾಲಿತವಾಗಿಯೇ ಡಿಜಿಟಲ್ ಗೋಲ್ಡ್ ನಲ್ಲಿ ಹೂಡಿಕೆ ಮಾಡುತ್ತದೆ. ಇದರಿಂದ ನಿಮಗೆ ಪ್ರತಿದಿನ ಉಳಿತಾಯ ಮಾಡಲು ಪ್ರೋತ್ಸಾಹನೆ ದೊರೆಯುತ್ತದೆ. ಜಾರ್ ಆಪ್ ನ ಲಾಭವನ್ನು ಹೇಗೆ ಪಡೆದುಕೊಳ್ಳುವುದು ಎಂಬುವುದರ ಬಗ್ಗೆ ತಿಳಿಯಿರಿ.
ಕೆ ವೈ ಸಿ ಇಲ್ಲದೆಯೇ, ಡಿಜಿಟಲ್ ಗೋಲ್ಡ್ ಅನ್ನು ಖರೀದಿಸಬಹುದು, ಆದರೆ ಒಂದು ನಿರ್ದಿಷ್ಟ ಪ್ರಮಾಣದವರೆಗೆ ಮಾತ್ರ, ಇದು ವೇದಿಕೆಯನ್ನು ಅವಲಂಬಿಸಿದೆ.
ಕೆಲ ಜನಪ್ರಿಯ ಆಪ್ ಗಳು ನಿಮಗೆ ಕೆ ವೈ ಸಿ ಪ್ರಕ್ರಿಯೆಯಿಲ್ಲದೆಯೇ ₹50,000 ದಷ್ಟು ಚಿನ್ನವನ್ನು ಖರೀದಿಸುವ ಅನುಮತಿಯನ್ನು ನೀಡುತ್ತದೆ, ಜಾರ್ ನಂತೆಯೇ.
ಡಿಜಿಟಲ್ ಗೋಲ್ಡ್ ನಲ್ಲಿ ಹೂಡಿಕೆ ಮಾಡುವ ಅನೂಕೂಲಗಳು:
ಡಿಜಿಟಲ್ ಗೋಲ್ಡ್ ನಲ್ಲಿ ಹೂಡಿಕೆ ಮಾಡುವ ಅನಾನುಕೂಲಗಳು:
ಇದರ ಖರೀದಿಯ ಸರಳತೆ ಹಾಗೂ ಅನುಕೂಲಗಳಿಂದಾಗಿ ಇತರ ಹೂಡಿಕೆಗಳಿಗೆ ಹೋಲಿಸಿದಾಗ ಡಿಜಿಟಲ್ ಗೋಲ್ಡ್ ಉತ್ತಮ ಆಯ್ಕೆಯಾಗುತ್ತದೆ.
ಇದು ಒಂದು ಪಿಜಾ ಅಥವಾ ಒಂದು ಟಾಪ್ ಆರ್ಡರ್ ಮಾಡಿದಂತೆಯೇ ಆಗಿದೆ. ನಿಮಗೆ ಬೇಕಾಗಿರುವುದು ಇಷ್ಟೇ:
ಡಿಜಿಟಲ್ ಗೋಲ್ಡ್ ಒಂದು ಉತ್ತಮ ಹೂಡಿಕೆಯ ಆಯ್ಕೆ ಎನ್ನಲು ಹಲವಾರು ಕಾರಣಗಳಿವೆ.
ಇಲ್ಲ! ಸ್ಟಾಕ್ ಎಕ್ಸ್ಚೇಂಜ್ ನಲ್ಲಿರುವ ಸ್ಟಾಕ್ ನ ರೀತಿಯಲ್ಲೇ ಡಿಜಿಟಲ್ ಗೋಲ್ಡ್ ಅನ್ನು ನಿಮ್ಮ ಹೆಸರಿನಲ್ಲಿ ನೋಂದಾಯಿಸಲಾಗುತ್ತದೆ.
ಇದನ್ನು ವಾಲ್ಟ್ ನಲ್ಲಿ ಸುರಕ್ಷಿತವಾಗಿಡಲಾಗಿದ್ದು, ಇದರ ಥರ್ಡ್ ಪಾರ್ಟೀ ಟ್ರಸ್ಟೀ ಮೂಲಕ ಇನ್ಶೂರ್ ಮಾಡಲಾಗುತ್ತದೆ ಹಾಗೂ ನಿಗಾ ಇಡಲಾಗುತ್ತದೆ.
ಇದರರ್ಥ, ನಿಮ್ಮ ಆಪ್ ಇಲ್ಲದೇ ಇದ್ದರೂ ಅಥವಾ ನಿಮ್ಮ ಸ್ಮಾರ್ಟ್ಫೋನ್ ಕಳೆದುಹೋದರೂ ನಿಮ್ಮ ಚಿನ್ನ ಸುರಕ್ಷಿತವಾಗಿದೆ ಎಂದು ನೀವು ನಿಶ್ಚಿಂತೆಂಯಿಂದಿರಬಹುದು.
ಭೌತಿಕ ಚಿನ್ನವನ್ನು ಖರೀದಿಸಲು ಸಾಧ್ಯವಿಲ್ಲದವರಿಗೆ ಅಥವಾ ಈ ಹಳದಿ ಧಾತು ಮೇಲೆ ಒಂದೇ ಸಮಯದಲ್ಲಿ ದೊಡ್ಡ ಮೊತ್ತದ ಹೂಡಿಕೆ ಮಾಡಲು ಆಗದೇ ಇರುವವರಿಗೆ ಡಿಜಿಟಲ್ ಗೋಲ್ಡ್ ಒಂದು ಆಯ್ಕೆಯಾಗಿದೆ.
ಡಿಜಿಟಲ್ ಗೋಲ್ಡ್ ನ ಶುದ್ಧತೆ 99.9% ಇದ್ದು, ಜಾರ್ ಆಪ್ ಮೂಲಕ ನೀವಿದನ್ನು 1 ರಷ್ಟು ಕಡಿಮೆ ಬೆಲೆಗೂ ಖರೀದಿಸಬಹುದು, ಇದರಿಂದ ಇದನ್ನು ಸುರಕ್ಷಿತವಾಗಿ ಸಂಗ್ರಹಿಸಿಡುವ ಅಗತ್ಯ ಬೀಳುವುದಿಲ್ಲ.
ಆರಂಭಿಸಲು ನಿಮಗೆ ಬೇಕಾಗಿರುವುದು ಕೇವಲ ನಿಮ್ಮ ಫೋನ್ ಮತ್ತ್ ಜಾರ್ ಆಪ್. ಜಾತ್ ನಿಮಗೆ ಆಟೋ ಇನ್ವೆಸ್ಟಿಂಗ್ ಸೆಟ್ ಮಾಡಲು ಅನುಮತಿ ನೀಡುತ್ತದೆ.
ನೀವು ನಿಮ್ಮ ಚಿನ್ನದ ಖರೀದಿಯ ದಿನಾಂಕದಿಂದ ಮೂರು ವರ್ಷಗಳ ಒಳಗಾಗಿ ಮಾಡಿದ ಚಿನ್ನದ ಆಸ್ತಿಯ ಮಾರಾಟದಿಂದ ಬಂದ ಯಾವುದೇ ಸಂಪಾದನೆಯನ್ನು(ಚಿನ್ನದ ಆಭರಣ, ಡಿಜಿಟಲ್ ಗೋಲ್ಡ್ ಅಥವಾ ಕಾಯಿನ್ ಗಳನ್ನು ಸೇರಿಸಿ) ಶಾರ್ಟ್ ಟರ್ಮ್ ಕ್ಯಾಪಿಟಲ್ ಗೈನ್ಸ್ (STCG) ಅಥವಾ ಅಲ್ಪಾವಧಿ ಬಂಡವಾಳ ಲಾಭ ಎನ್ನಲಾಗುತ್ತದೆ.
ಇದನ್ನು ನಿಮ್ಮ ವಾರ್ಷಿಕ ಆದಾಯಕ್ಕೆ ಸೇರಿಸಲಾಗುತ್ತದೆ, ಹಾಗೂ ನಿಮ್ಮ ಆದಾಯ ಬರುವ ಅತೀ ಹೆಚ್ಚಿನ ತೆರಿಗೆ ಆವರಣದಲ್ಲಿ ಇದಕ್ಕೆ ನೀವು ತೆರಿಗೆಯನ್ನು ತೆರಬೇಕಾಗುತ್ತದೆ.
ಖರೀದಿಯ ಮೂರು ವರ್ಷ ಅಥವಾ ಅದಕ್ಕಿಂತಲೂ ಹೆಚ್ಚಿನ ಅವಧಿಯ ನಂತರ ನೀವು ನಿಮ್ಮ ಆಭರಣ, ಚಿನ್ನದ ನಾಣ್ಯಗಳು ಅಥವಾ ಡಿಜಿಟಲ್ ಗೋಲ್ಡ್ ನ ಮಾರಾಟದಿಂದ ಸಂಪಾದಿಸಿದರೆ , ಮತ್ತೊಂದೆಡೆ, ಇದನ್ನು (LTCG) ಅಥವಾ ದೀರ್ಘಾವಧಿ ಬಂಡವಾಳ ಲಾಭ ಎನ್ನಲಾಗುತ್ತದೆ.
ಇಂತಹ ದೀರ್ಘಾವಧಿ ಬಂಡವಾಳ ಲಾಭಗಳಿಗೆ 20% ತೆರಿಗೆಯನ್ನು ವಿಧಿಸಲಾಗುತ್ತದೆ, ಪ್ಲಸ್ ಹೆಚ್ಚುವರಿ ಹಾಗೂ ಶಿಕ್ಷಣ ಸೆಸ್, ಅನ್ವಯಿಸಿದಲ್ಲಿ.
ಚಿನ್ನವನ್ನು ಭವಿಷ್ಯದ ಬಳಕೆಗಾಗಿ ಚಿನ್ನವನ್ನು ಉಳಿಸಲು ಬಯಸುವವರಿಗಾಗಿ ಇದೊಂದು ಅದ್ಭುತ ಪರ್ಯಾಯವಾಗಿದೆ, ಡಿಲಿವರಿ ಕೂಡಾ ಸರಳ.
ಡಿಜಿಟಲ್ ಗೋಲ್ಡ್ ಖರೀದಿಸಲು ಹಲವಾರು ವಿಧಾನಗಳಿವೆ, ಇವುಗಳಲ್ಲಿ ಒಂದಾಗಿದೆ ಜಾರ್ ಆಪ್, ಇದು ನಿಮಗೆ ಈ ಹಳದಿ ಧಾತುವಿನ ಮೇಲೆ ಸ್ವಯಾಂಚಾಲಿತವಾಗಿಯೇ ಹೂಡಿಕೆ ಮಾಡುವ ಆಯ್ಕೆ ನೀಡುತ್ತದೆ.
ನಿಮ್ಮ ವ್ಯವಹಾರಗಳಿಂದ ಪ್ರತಿದಿನ ಹಣ ಉಳಿಸುವಂತೆ ಮಾಡುವುದರಿಂದ ಜಾರ್ ಆಪ್ ನಿಮ್ಮ ಆರ್ಥಿಕ ಗುರಿಗಳನ್ನು ತಲುಪುವಲ್ಲಿ ನಿಮಗೆ ಸಹಾಯ ಮಾಡುತ್ತದೆ.
ನೀವು ಆಟೋ ಪೇ ವೈಶಿಷ್ಟ್ಯ್ವನ್ನು ಸೆಟ್ ಮಾಡಬಹುದು ಅಥವಾ ನೀವಾಗಿಯೇ ಹೂಡಿಕೆ ಮಾಡಬಹುದು, ₹1 ಇಂದ ಆರಂಭಿಸಿ. ಈ ಆಪ್ ಅನ್ನು ಸೆಟಪ್ ಮಾಡಾಲು ಕೇವಲ 45 ಸೆಕೆಂಡುಗಳು ಹಿಡಿಯುತ್ತವೆ.
ಜಾರ್ ಆಪ್ ಸ್ವಯಂಚಾಲಿತವಾಗಿಯೇ ನಿಮ್ಮ ಬಿಡಿ ಚಿಲ್ಲರೆಗಳನ್ನು ಡಿಜಿಟಲ್ ಗೋಲ್ಡ್ ನಲ್ಲಿ ಹೂಡಿಕೆ ಮಾಡಿ, ನಿಮ್ಮ ಭವಿಷ್ಯಕ್ಕಾಗಿ ಒಂದು ಡಿಜಿಟಲ್ ಗೋಲ್ಡ್ ಪೋರ್ಟ್ಫೋಲಿಯೋ ಅನ್ನು ಬೆಳೆಸುತ್ತದೆ.
ಇಂದೇ ಜಾರ್ ಆಪ್ ನೊಂದಿಗೆ ನಿಮ್ಮ ದೈನಂದಿನ ಉಳಿತಾಯಗಳನ್ನು ಆರಂಭಿಸಿ ಹಾಗೂ ಅದನ್ನು ಡಿಜಿಟಲ್ ಗೋಲ್ಡ್ ಹೂಡಿಕೆಯೊಂದಿಗೆ ಬೆಳೆಯಲು ಬಿಡಿ.