Buy Gold
Sell Gold
Daily Savings
Round-Off
Digital Gold
Instant Loan
Nek Jewellery
ಡಿಜಿಟಲ್ ಗೋಲ್ಡ್ ಮತ್ತು ಫಿಸಿಕಲ್ ಗೋಲ್ಡ್ ನಡುವಿನ ವ್ಯತ್ಯಾಸವೇನು? ಡಿಜಿಟಲ್ ಗೋಲ್ಡನಲ್ಲಿ ಹೂಡಿಕೆ ಮಾಡುವುದು ಯೋಗ್ಯವೇ? ನೀವು ಡಿಜಿಟಲ್ ಗೋಲ್ಡ್ ಇನ್ವೆಸ್ಟ್‌ಮೆಂಟ್‌ನ ಕುರಿತು ನಿರ್ಧಾರ ತೆಗೆದುಕೊಳ್ಳಲು, ಎಲ್ಲವನ್ನೂ ತಿಳಿದುಕೊಳ್ಳಲು ಬಯಸುತ್ತೀರಿ.
ಡಿಜಿಟಲ್ ಗೋಲ್ಡ್ ಮತ್ತು ಫಿಸಿಕಲ್ ಗೋಲ್ಡ್ ನಡುವಿನ ವ್ಯತ್ಯಾಸವೇನು? ಡಿಜಿಟಲ್ ಗೋಲ್ಡನಲ್ಲಿ ಹೂಡಿಕೆ ಮಾಡುವುದು ಯೋಗ್ಯವೇ? ನೀವು ಡಿಜಿಟಲ್ ಗೋಲ್ಡ್ ಇನ್ವೆಸ್ಟ್‌ಮೆಂಟ್‌ನ ಕುರಿತು ನಿರ್ಧಾರ ತೆಗೆದುಕೊಳ್ಳಲು, ಎಲ್ಲವನ್ನೂ ತಿಳಿದುಕೊಳ್ಳಲು ಬಯಸುತ್ತೀರಿ.
ನಾವು ಭಾರತೀಯರು ಚಿನ್ನವನ್ನು ಪ್ರೀತಿಸುತ್ತೇವೆ, ಅಲ್ಲವೇ? ಅದು ಚಿನ್ನಾಭರಣವಾಗಲಿ, ಚಿನ್ನದ ನಾಣ್ಯಗಳಾಗಲಿ ಅಥವಾ ಬಿಸ್ಕತ್ತುಗಳಾಗಲಿ, ನಾವು ಚಿನ್ನವನ್ನು ವಿವಿಧ ರೂಪಗಳಲ್ಲಿ ಬಳಕೆ ಮಾಡುತ್ತೇವೆ.
ನಾವು ಚಿನ್ನವನ್ನು ಸಂಪತ್ತು ಮತ್ತು ಸಮೃದ್ಧಿಯ ಸಂಕೇತವಾಗಿ ಮಾತ್ರವಲ್ಲದೆ, ಹಣದುಬ್ಬರದ ಪರಿಣಾಮಗಳ ವಿರುದ್ಧದ ಹೂಡಿಕೆಯಾಗಿಯೂ ನೋಡುತ್ತೇವೆ.
ಈ ಅಮೂಲ್ಯವಾದ ಲೋಹದ ಮೇಲೆ ಹೂಡಿಕೆ ಮಾಡುವುದರಿಂದ, ಮ್ಯೂಚುಯಲ್ ಫಂಡ್‌ಗಳು ಮತ್ತು ಸ್ಟಾಕ್‌ಗಳಂತಹ ಇತರ ಹೆಚ್ಚಿನ ಅಪಾಯದ ಹೂಡಿಕೆಗಳ ಪರಿಣಾಮಗಳನ್ನು, ತಟಸ್ಥಗೊಳಿಸುವಲ್ಲಿ ಚಿನ್ನವು ಸಹಾಯ ಮಾಡುತ್ತದೆ.
ಈಗ ಇಡೀ ಜಗತ್ತು ಡಿಜಿಟಲ್ ಆಗುತ್ತಿದ್ದಂತೆ, ಡಿಜಿಟಲ್ ಗೋಲ್ಡ್ ಸಹ ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿದೆ.
ಆದರೆ ಈ ಜನಪ್ರಿಯತೆಯ ಹಿಂದಿನ ಕಾರಣವೇನು ಮತ್ತು ಇದು ನಮ್ಮ ಮನೆಯಲ್ಲಿರುವ ಭೌತಿಕ ಚಿನ್ನಕ್ಕಿಂತ ಹೇಗೆ ಭಿನ್ನವಾಗಿದೆ? ಜಾರ್ ನಿಮಗಾಗಿ ಸರಿಯಾದ ಮಾರ್ಗದರ್ಶಿಯನ್ನು ನೀಡುತ್ತಿದೆ:
What is Digital Gold?
ಡಿಜಿಟಲ್ ಗೋಲ್ಡ್ ಎಂದರೇನು?
ಡಿಜಿಟಲ್ ಗೋಲ್ಡ್ ಎನ್ನುವುದು ಫಿಸಿಕಲ್ ಗೋಲ್ಡಗೆ ಪರ್ಯಾಯವಾಗಿದೆ. ಇದು ಎಕ್ಸಚೇಂಜ್ ರೇಟ್‌ನ ಬದಲಾವಣೆಗಳು ಮತ್ತು ವೆರಿಯೇಷನ್‌ಗಳಿಂದ ಮುಕ್ತವಾಗಿದೆ. ಹಾಗೂ ಫಿಸಿಕಲ್ ಗೋಲ್ಡ್ ಅನ್ನು ಕೈಯಿಂದ ಮುಟ್ಟದೆಯೇ ಅದರ ಹೂಡಿಕೆದಾರರು ಪ್ರಪಂಚದಾದ್ಯಂತ ಸುಲಭವಾಗಿ ವ್ಯಾಪಾರ ನಡೆಸಲು, ಡಿಜಿಟಲ್ ಗೋಲ್ಡ್ ಅನುಮತಿಸುತ್ತದೆ.
ಭಾರತದಲ್ಲಿ, ನೀವು ಮಲ್ಟಿ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳ ಮೂಲಕ ಡಿಜಿಟಲ್ ಗೋಲ್ಡ್ ಅನ್ನು ಖರೀದಿಸಬಹುದು; ಆದಾಗ್ಯೂ, ಕೇವಲ 3 ಗೋಲ್ಡ್ ಕಂಪನಿಗಳು ನಿಮ್ಮ ಚಿನ್ನವನ್ನು ಇಟ್ಟುಕೊಳ್ಳುತ್ತವೆ, ಅವುಗಳೆಂದರೆ ಆಗ್ಮಾಂಟ್ ಗೋಲ್ಡ್ ಲಿಮಿಟೆಡ್, ಡಿಜಿಟಲ್ ಗೋಲ್ಡ್ ಇಂಡಿಯಾ ಪ್ರೈ. ಲಿಮಿಟೆಡ್ - ಸೇಫ್ ಗೋಲ್ಡ್, ಮತ್ತು MMTC-PAMP ಇಂಡಿಯಾ ಪ್ರೈ. ಲಿಮಿಟೆಡ್. ಇದು ಯಾವುದೇ ಹೆಚ್ಚುವರಿ ಸಂಗ್ರಹಣೆ ಮತ್ತು ಸಾಗಣೆ ವೆಚ್ಚಗಳ ಅಗತ್ಯವಿಲ್ಲದ ಆನ್‌ಲೈನ್‌ನಲ್ಲಿ ಚಿನ್ನವನ್ನು ಖರೀದಿಸಲು ಮತ್ತು ಹೂಡಿಕೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೇ ಇದೊಂದು ಸುರಕ್ಷಿತ, ಅನುಕೂಲಕರ ಮತ್ತು ವೆಚ್ಚ-ಪರಿಣಾಮಕಾರಿ ಮಾರ್ಗವಾಗಿದೆ. ಜಾರ್ ಜೊತೆಗೆ ಡಿಜಿಟಲ್ ಗೋಲ್ಡನಲ್ಲಿ ನೀವು ಹೇಗೆ ಹೂಡಿಕೆ ಮಾಡಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಡಿಜಿಟಲ್ ಗೋಲ್ಡ್ vs. ಟ್ರೆಡಿಷನಲ್ ಗೋಲ್ಡ್
Digital Gold vs. Traditional Gold
ಡಿಜಿಟಲ್ ಗೋಲ್ಡ್ ದೀರ್ಘಾವಧಿಯ ವೆಚ್ಚಗಳು ಮತ್ತು ಸ್ಟೋರೇಜ್ ಸಮಸ್ಯೆಗಳನ್ನು ತೊಡೆದುಹಾಕಲು ನಿಮಗೆ ಅನುಮತಿಸುತ್ತದೆ. ಈ ಸುರಕ್ಷಿತವು ನಿಮಗೆ ಉಚಿತವಾಗಿರುತ್ತದೆ ಅಥವಾ ಮುಖಬೆಲೆಯಲ್ಲಿ (face value) ಇನ್ಶೂರೆನ್ಸ್ ಮಾಡಲ್ಪಟ್ಟಿರುತ್ತದೆ.
ಡಿಜಿಟಲ್ ಗೋಲ್ಡ್ ಅನ್ನು ಎಲ್ಲಿಯಾದರೂ ಮತ್ತು ಯಾವಾಗ ಬೇಕಾದರೂ ಸುಲಭವಾಗಿ ಖರೀದಿಸಬಹುದು ಹಾಗೂ ಮಾರಾಟ ಮಾಡಬಹುದು. ಭವಿಷ್ಯದಲ್ಲಿ ಚಿನ್ನದ ಸಂಪೂರ್ಣ ರೀಸೇಲ್ ಮೌಲ್ಯವನ್ನು ಪಡೆಯಲು ನೀವು ಡೀಲರ್‌ಗಳನ್ನು ಭೇಟಿ ಮಾಡುವ ಅಗತ್ಯವಿಲ್ಲ ಅಥವಾ ಹಲವು ವರ್ಷಗಳವರೆಗೆ ಸುರಕ್ಷಿತ ಚಿನ್ನದ ಖರೀದಿ ಖಾತೆಯನ್ನು (gold purchase account) ಇಟ್ಟುಕೊಳ್ಳಬೇಕಾಗಿಲ್ಲ.
ಮತ್ತೊಂದೆಡೆ, ಡಿಜಿಟಲ್ ಗೋಲ್ಡ್ ಅನ್ನು ಆನ್‌ಲೈನ್‌ನಲ್ಲಿ ಯಾವುದೇ ಸಮಯದಲ್ಲಿ, ಎಲ್ಲಿಯಾದರೂ, ಕೆಲವೇ ಸರಳ ಹಂತಗಳಲ್ಲಿ ಖರೀದಿಸಬಹುದು ಮತ್ತು ಮಾರಾಟ ಮಾಡಬಹುದು. ಯಶಸ್ವಿ ಮಾರಾಟದ ನಂತರ, ಕೆಲವೇ ದಿನಗಳಲ್ಲಿ ಹಣವನ್ನು ನೇರವಾಗಿ ನಿಮ್ಮ ನೋಂದಾಯಿತ ವ್ಯಾಲೆಟ್ ಅಥವಾ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.
ಡಿಜಿಟಲ್ ಗೋಲ್ಡನೊಂದಿಗೆ , ನೀವು ಶುದ್ಧ ಚಿನ್ನವನ್ನು ಮಾತ್ರ ವ್ಯಾಪಾರ ಮಾಡುತ್ತೀರಿ. ಅಂದರೆ 24 ಕ್ಯಾರೆಟ್ ಚಿನ್ನ. ನೀವು ಖರ್ಚು ಮಾಡುವ ಒಟ್ಟು ಮೊತ್ತವನ್ನು ಚಿನ್ನದ ಮೇಲೆ ಮಾತ್ರ ಹೂಡಿಕೆ ಮಾಡಲಾಗುತ್ತದೆ. ಖರೀದಿ ಮಾಡುವ ಸಮಯದಲ್ಲಿ ನೀವು ಕೇವಲ 3% GST ಅನ್ನು ಪಾವತಿಸಬೇಕಾಗುತ್ತದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಫಿಸಿಕಲ್ ಗೋಲ್ಡ್ ಮತ್ತು ಡಿಜಿಟಲ್ ಗೋಲ್ಡ್ ನಡುವಿನ ವ್ಯತ್ಯಾಸವನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಮತ್ತು ಅದಕ್ಕನುಗುಣವಾಗಿ ನೀವು ಉತ್ತಮ ನಿರ್ಧಾರವನ್ನು ತೆಗೆದುಕೊಳ್ಳಲು ನಿಮಗೆ ಸಹಾಯ ಮಾಡುವ ಟೇಬಲ್ ಇಲ್ಲಿದೆ:
ಮಾನದಂಡಗಳು
ಫಿಸಿಕಲ್ ಗೋಲ್ಡ್
ಡಿಜಿಟಲ್ ಗೋಲ್ಡ್
ಅರ್ಥ
ಫಿಸಿಕಲ್ ರೂಪದಲ್ಲಿ, ಶುದ್ಧತೆ 99.5% ಇರಬಹುದು ಅಥವಾ ಇಲ್ಲದಿರಬಹುದು
24 ಕ್ಯಾರೆಟ್ ಶುದ್ಧ ಚಿನ್ನ
ಬೆಲೆ
ಪ್ರತಿದಿನ ಏರಿಳಿತವಾಗುತ್ತದೆ
ದೇಶಾದ್ಯಂತ ಏಕರೀತಿಯಾಗಿರುತ್ತದೆ
ವೆಚ್ಚ
ಚಿನ್ನದ ಒಟ್ಟು ಮೌಲ್ಯದ 25% ರಿಂದ 30% ರಷ್ಟನ್ನು ಮೇಕಿಂಗ್ ಶುಲ್ಕವೆಂದು ಪಾವತಿಸುವುದನ್ನು ಒಳಗೊಂಡಿರುತ್ತದೆ
ಪ್ರತಿ ಚಿನ್ನದ ಖರೀದಿಗೆ 3% GST ವಿಧಿಸಲಾಗುತ್ತದೆ
ಹೂಡಿಕೆ
ಕನಿಷ್ಠ 1 ಗ್ರಾಂ ಚಿನ್ನವನ್ನಾದರೂ ಖರೀದಿಸಬೇಕು
₹1 ರಿಂದ ಸೀಮಿತ ಆದಾಯದಿಂದಲೂ ಹೂಡಿಕೆ ಮಾಡಬಹುದು
ಸಂಗ್ರಹಣೆ & ಸುರಕ್ಷತೆ
ಲಾಕರ್‌ಗಳು ಮತ್ತು ವಾಲ್ಟಗಳಲ್ಲಿ ಇಡುವುದರಿಂದ, ಯಾವಾಗಲೂ ಕಳ್ಳತನದ ಮತ್ತು ನಷ್ಟದ ಅಪಾಯವಿರುತ್ತದೆ
ಮಾರಾಟಗಾರರಿಂದ ಸುರಕ್ಷಿತ ಲಾಕರ್‌ನಲ್ಲಿ ಹೂಡಿಕೆದಾರರ ಹೆಸರಿನೊಂದಿಗೆ ಸಂಗ್ರಹಿಸಲಾಗಿದೆ - ಯಾವುದೇ ಅಪಾಯವಿಲ್ಲ
ವ್ಯಾಪಾರ
ಆಭರಣದ ಅಂಗಡಿ ಅಥವಾ ಬ್ಯಾಂಕ್‌ಗೆ ಭೌತಿಕವಾಗಿ ಭೇಟಿ ನೀಡುವ ಅಗತ್ಯವಿದೆ; ಸಮಯ ತೆಗೆದುಕೊಳ್ಳುತ್ತದೆ ಮತ್ತು ಅನಾನುಕೂಲಕಾರಿಯಾಗಿದೆ
ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ಖರೀದಿಸಬಹುದು ಮತ್ತು ಮಾರಾಟ ಮಾಡಬಹುದು
ಲಿಕ್ವಿಡಿಟಿ
ಯಾವುದೇ ಬ್ಯಾಂಕ್ ಅಥವಾ ಆಭರಣಕಾರರಿಂದ ಫಿಸಿಕಲ್ ಗೋಲ್ಡ್ ಅನ್ನು ಸುಲಭವಾಗಿ ಖರೀದಿಸಬಹುದು. ಆದಾಗ್ಯೂ, ಅವುಗಳನ್ನು ಆಭರಣದ ಮೂಲಕ ವಿನಿಮಯ ಮಾಡಿಕೊಳ್ಳಬಹುದು
ಒಬ್ಬರು ಡಿಜಿಟಲ್ ಗೋಲ್ಡ್ ಅನ್ನು ನಾಣ್ಯಗಳಾಗಿ ಮತ್ತು ಚಿನ್ನದ ಗಟ್ಟಿಯಾಗಿ ಅಥವಾ ಹೂಡಿಕೆಯನ್ನು ನಗದು ಆಗಿ ರಿಡೀಮ್ ಮಾಡಬಹುದು
ಡಿಜಿಟಲ್ ಗೋಲ್ಡ್ ಎನ್ನುವುದು ನಿಮಗೆ ಸ್ಪಷ್ಟ ವಿಜೇತನಂತೆ ತೋರುತ್ತದೆಯಾದರೂ, ಇಲ್ಲಿ, ಇದು ನಿಜವಾಗಿಯೂ ನೀವು ಹೂಡಿಕೆಯಿಂದ ಏನನ್ನು ಬಯಸುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಡಿಜಿಟಲ್ ಮತ್ತು ಫಿಸಿಕಲ್ ಗೋಲ್ಡ್, ಎರಡೂ ಅವುಗಳ ಸಾಧಕ-ಬಾಧಕಗಳನ್ನು ಹೊಂದಿವೆ, ಆದರೆ ದಿನದ ಕೊನೆಯಲ್ಲಿ, ನೀವು ರಿಸರ್ಚ್ ಮಾಡಿ ಮತ್ತು ನಿಮ್ಮ ಪರಿಸ್ಥಿತಿಗೆ ಯಾವ ವಿಧಾನ ಉತ್ತಮವಾದದ್ದು ಎಂಬುದನ್ನು ಅರ್ಥಮಾಡಿಕೊಳ್ಳಿ.
ಡಿಜಿಟಲ್ ಗೋಲ್ಡ್ vs. ಫಿಸಿಕಲ್ ಗೋಲ್ಡ್: ಡಿಜಿಟಲ್ ಆಗಿ ಮುನ್ನಡೆಯುವುದು ಒಂದು ಸ್ಮಾರ್ಟರ್ ಹೂಡಿಕೆಯೇ?