Playstore Icon
Download Jar App

ಜಾರ್ ಆಪ್ ನೊಂದಿಗೆ ಈಗ ಪ್ರತಿದಿನ ಚಿನ್ನದಲ್ಲಿ ಹೂಡಿಕೆ ತೊಂದರೆ ಮುಕ್ತವಾಗಿದೆ. ಒಂದು ಹೂಡಿಕೆದಾರನ ಕೈಪಿಡಿ.

October 27, 2022

ಚಿನ್ನದ ಆಭರಣಗಳು ಕೇವಲ ಒಡವೆ ಅಲ್ಲ, ಆದರೆ ನಮ್ಮ ಆರ್ಥಿಕ ತೊಂದರೆಗಳ ಸಂದರ್ಭದಲ್ಲಿ ನಮ್ಮ ನೆರವಿಗೆ ಬರುವ ಸಾಧನ ಎಂದು ನಾವೆಲ್ಲರೂ ಒಪ್ಪುತ್ತೇವೆ. 

ಇದರ ಪರಿಣಾಮವಾಗಿ, ಹೂಡಿಕೆ ಹಾಗೂ ವ್ಯಾಪಾರದ ನಿಟ್ಟಿನಲ್ಲಿ ಚಿನ್ನದ ದಾಖಲೆಯೂ ಅತೀ ದೊಡ್ಡದಾಗಿದ್ದು, ಚಿನ್ನದ ಖರೀದಿಯನ್ನು ಮೊದಲಿನಿಂದಲೇ ಒಂದು ಆರ್ಥಿಕ ಸಂರಕ್ಷಣೆಯಾಗಿ ನೋಡಲಾಗಿದೆ. 

ಚಿನ್ನದ ಒಡೆತನ ಎರಡು ರೀತಿಯದ್ದಾಗಿದೆ  : ಕಾಗದ ಹಾಗೂ ಭೌತಿಕ. ಭೌತಿಕ ಚಿನ್ನವನ್ನು ಆಭರಣ, ನಾಣ್ಯ ಹಾಗೂ ಚಿನ್ನದ ಬಿಲ್ಲೆಗಳ ರೂಪದಲ್ಲಿ ಖರೀದಿಸಬಹುದು ಹಾಗೂ ಕಾಗದ ಚಿನ್ನವನ್ನು ಚಿನ್ನದ ವಿನಿಮಯದ ರೂಪದಲ್ಲಿ ಖರೀದಿಸಬಹುದು ಉದಾಹರಣೆಗೆ ಟ್ರೇಡೆಡ್ ಫಂಡ್ ಗಳು (ETF) ಮತ್ತು ಸಾವರಿನ್ ಗೋಲ್ಡ್ ಬಾಂಡ್ ಗಳು (SGB). ಇದರ ಜೊತೆ ಗೋಲ್ಡ್ ಮ್ಯೂಚುವಲ್ ಫಂಡ್ ಗಳು ಹಾಗೂ ಡಿಜಿಟಲ್ ಗೋಲ್ಡ್ ಕೂಡಾ ಇವೆ.

ಡಿಜಿಟಲ್ ಗೋಲ್ಡ್ - ಲಾಭಗಳು, ಅಪಾಯಗಳು ಮತ್ತು ತೆರಿಗೆಗಳು, ಇನ್ಫೋಗ್ರಾಫಿಕ್ ನೊಂದಿಗೆ” ಇದರ ಬಗ್ಗೆ ಎಲ್ಲವನ್ನೂ ತಿಳಿಯಲು ನಮ್ಮ ಅಂಕಣವನ್ನು ನೋಡಿ.    

ನಿಮ್ಮ ಎಲ್ಲಾ ಚಿನ್ನದ ಹೂಡಿಕೆಗಳಿಗಾಗಿ ಇಲ್ಲಿದೆ ಒಂದು ಆರಂಭಿಕ ಕೈಪಿಡಿ : 

1. ಆಭರಣ

ಚಿನ್ನವು ಅತ್ಯಂತ ಬೆಲೆಬಾಳುತ್ತದೆ. ಆದರೆ ಅದನ್ನು ಆಭರಣವಾಗಿ ಧರಿಸುವುದರಿಂದ ಸುರಕ್ಷತೆ, ದುಬಾರಿ ಬೆಲೆ ಹಾಗೂ ಓಲ್ಡ್ ಡಿಸೈನ್ ನಂತಹ ಸಮಸ್ಯೆಗಳು ಎದುರಾಗುತ್ತವೆ.

ಇದರ ಜೊತೆ ಡೆಲಿವರಿ ಹಾಗೂ ತಯಾರಿಕಾ ಶುಲ್ಕ ಸೇರಿ ಅದು ಇನ್ನೂ ದುಬಾರಿಯಾಗುತ್ತದೆ. ಚಿನ್ನದ ಆಭರಣಗಳ ತಯಾರಿಕೆಯ ವೆಚ್ಚವು, ಸಾಮಾನ್ಯವಾಗಿ ಚಿನ್ನದ ಬೆಲೆಯ 7% and 12% ಇರುತ್ತದೆ (ಆಕರ್ಷಕ ಮಾದರಿಗಳಿಗೆ 25% ಕೂಡಾ ತಲುಪಬಹುದು), ಹಾಗೂ ಬೆಲೆಯನ್ನು ಹಿಂಪಡೆಯಲೂ ಅಸಾಧ್ಯವಾಗಿರುತ್ತದೆ.

ಹಾಗೂ ಖಂಡಿತವಾಗಿಯೂ, ಇದರ ಸುರಕ್ಷತೆಯ ವಿಷಯಗಳನ್ನು ಮರೆಯಬಾರದು. 

2. ಚಿನ್ನದ ನಾಣ್ಯಗಳು

ಆಭರಣ ವ್ಯಾಪಾರಿಗಳು, ಬ್ಯಾಂಕ್ ಗಳು, ಬ್ಯಾಂಕೇತರ ಫೈನಾನ್ಸ್ ಕಂಪನಿಗಳು, ಹಾಗೂ ಇಂದು ಇ- ಕಾಮರ್ಸ್ ಸೈಟ್ ಗಳು ಕೂಡಾ ಚಿನ್ನದ ನಾಣ್ಯವನ್ನು ಮಾರಾಟ ಮಾಡುತ್ತಾರೆ. 

ಸರಕಾರವು, ಒಂದು ಬದಿಯಲ್ಲಿ ಅಶೋಕ ಚಕ್ರದ ರಾಷ್ಟ್ರೀಯ ಲಾಂಛನವಿರುವ ಹಾಗೂ ಇನ್ನೊಂದು ಬದಿಯಲ್ಲಿ ಮಹಾತ್ಮ ಗಾಂಧಿ ಇರುವ ಚಿನ್ನದ ನಾಣ್ಯಗಳನ್ನು ಪರಿಚಯಿಸಿದ್ದಾರೆ. 

ನಾಣ್ಯಗಳು 5 ಮತ್ತು 10 ಗ್ರಾಮ್ ಡಿನಾಮಿನೇಷನ್ ಗಳಲ್ಲಿ ಲಭ್ಯವಿದೆ ಹಾಗೂ ಬಿಲ್ಲೆಗಳು 20 ಗ್ರಾಮ್ ನಲ್ಲಿ.

ಭಾರತೀಯ ಚಿನ್ನದ ನಾಣ್ಯ ಹಾಗೂ ಬಿಲ್ಲೆಗಳು 24ಕ್ಯಾರೆಟ್ ಶುದ್ಧತೆ ಹಾಗೂ 999 ಉತ್ಕೃಷ್ಟತೆಯನ್ನು ಹೊಂದಿವೆ, ಇದರ ಜೊತೆ ಉನ್ನತ ನಕಲಿ ವಿರೋಧಿ ತಂತ್ರಜ್ಞಾನ ಹಾಗೂ ಹಾನಿಯಾಗದಂತಹ ಪ್ಯಾಕೇಜಿಂಗ್ ಅನ್ನೂ ಹೊಂದಿದೆ.

ಎಲ್ಲಾ ನಾಣ್ಯ ಹಾಗೂ ಬಿಲ್ಲೆಗಳನ್ನು BIS ಮಾರ್ಗಸೂಚಿಗಳೊಂದಿಗೆ ಹಾಲ್ಮಾರ್ಕ್ ಮಾಡಲಾಗಿದ್ದು ಅಧಿಕೃತ MMTC ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತದೆ, ಕೆಲ ಬ್ಯಾಂಕ್ ಶಾಖೆ ಹಾಗೂ ಅಂಚೆ ಕಛೇರಿಗಳಲ್ಲೂ ಕೂಡಾ. 

ಪುನಃ, ಇಲ್ಲಿ ಸುರಕ್ಷತಾ ಸಮಸ್ಯೆಗಳಿವೆ. ಇದಕ್ಕೆ 10 ವರ್ಷಗಳ ನಂತರ ಪಾಲಿಷಿಂಗ್ ಬೇಕಾಗುವುದರಿಂದ ಅದರ ಬೆಲೆ ಇನ್ನೂ ಹೆಚ್ಚುತ್ತದೆ.

3. ಚಿನ್ನದ ವಿನಿಮಯ - ಟ್ರೇಡೆಡ್ ಫಂಡ್ ಗಳು (ETF)

ಕಾಗದ ಚಿನ್ನವನ್ನು ಖರೀದಿಸುವ ಒಂದು ಕಡಿಮೆ ಬೆಲೆಯ ವಿಧಾನವಾಗಿದೆ ಚಿನ್ನದ ವಿನಿಮಯ - ಟ್ರೇಡೆಡ್ ಫಂಡ್ ಗಳು (ETF) ‍ Gold Exchange-Traded Funds(ETF). 

ಚಿನ್ನವು ಒಂದು ಆಧಾರ ನೀಡುವ ಸ್ವತ್ತಾಗಿದೆ ಹಾಗೂ ಇದರ ವಿನಿಮಯಗಳು(ಮಾರಾಟ ಹಾಗೂ ಖರೀದಿ) ಸ್ಟಾಕ್ ಎಕ್ಸ್ಚೇಂಜ್ ನಲ್ಲಿ ನಡೆಯುತ್ತದೆ(NSE ಅಥವಾ BSE).  ‍

ಇದರೊಂದಿಗೆ, ಆಭರಣ, ಚಿನ್ನದ ನಾಣ್ಯ ಅಥವಾ ಬಿಲ್ಲೆಗಳ ಆರಂಭಿಕ ಖರೀದಿ ಹಾಗೂ ಮಾರಾಟ ಹೆಚ್ಚಿನ ಬೆಲೆಗೆ ಹೋಲಿಸಿದರೆ, ಕಡಿಮೆ ಬೆಲೆಯ ಚಿನ್ನದ ETF ಲಾಭದಾಯಕವಾಗಿರುತ್ತದೆ.

ಇನ್ನೊಂದು ಲಾಭವೆಂದರೆ ಬೆಲೆಯ ಪಾರದರ್ಶಕತೆ. ಭೌತಿಕ ಚಿನ್ನದ ಬೆಲೆಯು ಮಾನದಂಡವಾಗಿರುತ್ತದೆ ಏಕೆಂದರೆ ಅದನ್ನು ಖರೀದಿಸಿದ ಬೆಲೆಯು ನಿಜವಾದ ಚಿನ್ನದ ಬೆಲೆಗೆ ಅತೀ ಹತ್ತಿರವಾಗಿರುತ್ತದೆ.

ನಿಮಗೆ ಇಲ್ಲಿ ಬೇಕಾಗುವುದು ಕೇವಲ ಟ್ರೇಡಿಂಗ್ ಖಾತೆ, ಸ್ಟಾಕ್ ಬ್ರೋಕರ್ ಹಾಗೂ ಡಿಮ್ಯಾಟ್ ಖಾತೆ.

ನೀವು ಇದನ್ನು ಭಾರೀ ಮೊತ್ತ ನೀಡಿ ಒಂದೇ ಸಾರಿ ಖರೀದಿಸಬಹುದು ಅಥವಾ ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ (SIP) ಮೂಲಕ ಖರೀದಿಸಬಹುದು. ನೀವು ಒಂದು ಗ್ರಾಮ್ ಚಿನ್ನ ಕೂಡಾ ಖರೀದಿಸಬಹುದು.

ಪ್ರವೇಶ ಹಾಗೂ ನಿರ್ಗಮನ ಶುಲ್ಕವಿಲ್ಲದಿದ್ದರೂ, ಇಲ್ಲಿ ಕೆಲವು ಖರ್ಚುಗಳಿವೆ: 

  1. ವೆಚ್ಚದ ಅನುಪಾತ (ನಿಧಿಯನ್ನು ನಿರ್ವಹಿಸಲು), ಇದು ಸುಮಾರು 1% ಆಗಿದ್ದು ಬೇರೆ ಮ್ಯೂಚುವಲ್ ಫಂಡ್ ಗಳಿಗೆ ಹೋಲಿಸಿದರೆ ಸಾಮಾನ್ಯವಾಗಿ ಕಡಿಮೆ ಬೆಲೆಯದಾಗಿರುತ್ತದೆ.
  2. ನೀವು ಪ್ರತೀ ಬಾರಿ ಚಿನ್ನದ  ETF ಯೂನಿಟ್ ಗಳನ್ನು ಖರೀದಿಸುವ ಅಥವಾ ಮಾರಾಟ ಮಾಡುವ ಸಮಯದಲ್ಲಿ ತಗಲುವ ಬ್ರೋಕರ್ ಶುಲ್ಕ.
  3. ಟ್ರಾಕಿಂಗ್ ನಲ್ಲಿ ತಪ್ಪುಗಳು, ಇದು ಶುಲ್ಕವಾಗದೇ ಇದ್ದರೂ ಇದರ ಪರಿಣಾಮ ರಿಫಂಡ್ ಗಳ ಮೇಲೆ ಬೀಳುತ್ತದೆ. ಇದು ಫಂಡ್ ನ ವೆಚ್ಚಗಳು ಹಾಗೂ ನಗದು ಹೋಲ್ಡಿಂಗ್ ಗಳಿಂದಾಗಿ ಆಗುತ್ತದೆ, ಹಾಗೂ ಇದು ಪ್ರಸ್ತುತ ಚಿನ್ನದ ಬೆಲೆಕ್ಕಿಂತ ಭಿನ್ನವಿರುತ್ತದೆ.

4. ಸಾವರಿನ್ ಚಿನ್ನದ ಬಾಂಡ್ ಗಳು

ಕಾಗದ ಚಿನ್ನವನ್ನು ಹೊಂದುವ ಇನ್ನೊಂದು ವಿಧಾನವೆಂದರೆ ಸಾವರಿನ್ ಚಿನ್ನದ ಬಾಂಡ್ ಗಳನ್ನು ಖರೀದಿಸುವುದು.

ಇದು ನಿಮಗೆ ಚಿನ್ನದ ಗ್ರಾಮ್ ಗಳಿಗಾಗಿ ನೀಡುವ RBI ನಿಯೋಜಿಸಿರುವ ಪ್ರಮಾಣಪತ್ರಗಳಾಗಿವೆ, ಇದು ನಿಮ್ಮ ಭೌತಿಕ ಸ್ವತ್ತುಗಳ ಬಗ್ಗೆ ಚಿಂತೆ ಮಾಡದೆಯೇ ನಿಮಗೆ ಚಿನ್ನದಲ್ಲಿ ಹೂಡಿಕೆ ಮಾಡುವ ಅವಕಾಶ ನೀಡುತ್ತದೆ.

ಇವುಗಳನ್ನು ಸರಕಾರ ಬಿಡುಗಡೆ ಮಾಡಿದರೂ, ಇದು ಸಿದ್ಧವಾಗಿ ಲಭ್ಯವಿರುವುದಿಲ್ಲ. ಬದಲಾಗಿ,  SGB ಗಳನ್ನು ಖರೀದಿಸಲು ಸರಕಾರವು ನಿಯಮಿತವಾಗಿ ಒಂದು ಅವಧಿಯನ್ನು ತೆರವುಗೊಳಿಸುತ್ತದೆ.

ಇದು ಸರಾಸರಿ 2-3 ಬಾರಿ ಆಗುತ್ತದೆ, ಹಾಗೂ ಈ ಅವಕಾಶವು ಸುಮಾರು ಒಂದು ವಾರ ತೆರೆದಿರುತ್ತದೆ.

SGBಯ ಅವಧಿ 8 ವರ್ಷಗಳಾಗಿದ್ದರೂ ಇದರ ನಗದೀಕರಣ/ಹಿಂಪಡೆಯುವಿಕೆಯನ್ನು ಇದನ್ನು ಪಡೆದ ದಿನಾಂಕದ ಐದನೇ ವರ್ಷದಿಂದ ಮಾತ್ರ ಮಾಡಬಹುದು.

ನೀವು ಮೊದಲನೇ ಬಾರಿ ಹೂಡಿಕೆ ಮಾಡುತ್ತಿದ್ದೀರಾ? ಆರ್ಥಿಕ ತಿಳುವಳಿಕೆಯಿಲ್ಲವೇ? ಒಂದೇ ಬಾರಿಯಲ್ಲಿ ಭಾರೀ ಮೊತ್ತದ ಹೂಡಿಕೆ ಮಾಡಲು ಹಿಂಜರಿಯುತ್ತಿದ್ದೀರಾ?

ಸಣ್ಣ ಹೂಡಿಕೆ ಯೋಜನೆಗಳೊಂದಿಗೆ ಪ್ರತಿದಿನ ಡಿಜಿಟಲ್ ಗೋಲ್ಡ್ ನಲ್ಲಿ  ಹೂಡಿಕೆ ಮಾಡುವುದು ನಿಮಗಾಗಿ ಉತ್ತಮ ಆಯ್ಕೆಯಾಗಿದೆ. 

5.ಡಿಜಿಟಲ್ ಗೋಲ್ಡ್ 

ಡಿಜಿಟಲ್ ಗೋಲ್ಡ್ ಅತ್ಯಂತ ಸರಳ, ಪಾರದರ್ಷಕ, ಹಾಗೂ ಸುರಕ್ಷಿತ ರೀತಿಯ ಚಿನ್ನದ ಹೂಡಿಕೆಯಾಗಿದೆ.

ಇದು ವಿನಿಮಯ ದರದ ಗೊಂದಲಗಳು ಹಾಗೂ ಬದಲಾವಣೆಗಳಿಂದ ಮುಕ್ತವಾಗಿದ್ದು, ಹೂಡಿಕೆದಾರರಿಗೆ ನಿಜವಾಗಿ ಭೌತಿಕ ಚಿನ್ನವನ್ನು ಮುಟ್ಟದೆಯೇ ವಿಶ್ವದಾದ್ಯಂತ ವ್ಯಾಪಾರ ಮಾಡುವ ಅವಕಾಶವನ್ನು ಒದಗಿಸುತ್ತದೆ. 

ಡಿಜಿಟಲ್ ಗೋಲ್ಡ್ ಅನ್ನು ನೀವು ಹಲವು ಆಪ್ ಹಾಗೂ ವೆಬ್ಸೈಟ್ ಗಳ ಮೂಲಕ ಖರೀದಿಸಬಹುದು; ಆದರೆ ಕೇವಲ ಮೂರು ಚಿನ್ನದ ಕಂಪನಿಗಳು ನಿಮ್ಮ ಚಿನ್ನವನ್ನು ಇಟ್ಟುಕೊಳ್ಳುತ್ತವೆ; ಔಗ್ಮಂಟ್ ಗೋಲ್ಡ್ ಲೀ, ಡಿಜಿಟಲ್ ಗೋಲ್ಡ್ ಇಂಡಿಯಾ ಪ್ರೈ ಲಿ - ಸೇಫ್ ಗೋಲ್ಡ್ ಮತ್ತು MMTC-PAMP ಇಂಡಿಯಾ ಪ್ರೈ ಲಿ. 

ಇದು ಆನ್ಲೈನ್ ಆಗಿ ಚಿನ್ನ ಖರೀದಿಸುವ ಅತ್ಯಂತ ಸುರಕ್ಷಿತ, ಅನುಕೂಲಕರ ಹಾಗೂ ಕಡಿಮೆ ಬೆಲೆಯ ವಿಧಾನವಾಗಿದ್ದು ಇದಕ್ಕಾಗಿ ಹೆಚ್ಚುವರಿ ಸಂಗ್ರಹಣಾ ಸ್ಥಳ ಹಾಗೂ ಸಾಗಾಣಿಕೆಯ ವೆಚ್ಚವಿರುವುದಿಲ್ಲ.

ನೀವು ಬಯಸಿದಾಗಲೆಲ್ಲಾ ಇದನ್ನು ಭೌತಿಕ ರೂಪದಲ್ಲಿ ನೀವು ಹೋಮ್ ಡೆಲಿವರಿ ಮಾಡಿಸಿಕೊಳ್ಳಬಹುದು. ಆದರೆ ಉತ್ತಮ ಭಾಗವೇನು ಗೊತ್ತೇ? ನೀವು ರೂ 1 ರ ಕಡಿಮೆ ಬೆಲೆಯಿಂದಲೂ ಹೂಡಿಕೆ ಆರಂಭಿಸಬಹುದು. 

ಇದರಲ್ಲಿ ನೀವು ಪ್ರತಿದಿನ ಹೂಡಿಕೆ ಹೇಗೆ ಮಾಡಬಹುದು? ಜಾರ್ ಆಪ್ ಮೂಲಕ ಮಾಡಿ.

ಜಾರ್ ಒಂದು ಸ್ವಯಂಚಾಲಿತ ಹೂಡಿಕೆಯ ಆಪ್ ಆಗಿದ್ದು ನಿಮ್ಮ ಆನ್ಲೈನ್ ವಿನಿಮಯಗಳಿಂದ ಬರುವ ಬಿಡಿ ಚಿಲ್ಲರೆಗಳನ್ನು, ಸ್ವಯಂಚಾಲಿತವಾಗಿಯೇ, ಉಳಿಸಿ ಡಿಜಿಟಲ್ ಗೋಲ್ಡ್ ನಲ್ಲಿ ಹೂಡಿಕೆ ಮಾಡುವ ಅವಕಾಶವನ್ನು ನಿಮಗೆ ನೀಡುತ್ತದೆ.

ಅದ್ಭುತವಲ್ಲವೇ? ಇದು ಅಪಾಯದ ಹೂಡಿಕೆಯಲ್ಲ ಹಾಗೂ ಇದರಿಂದ ನಿಮ್ಮ ಜೇಬಿಗೂ ಭಾರವೆನಿಸುವುದಿಲ್ಲ.

ಇಂದೇ ಆಪ್ ಡೌನ್ಲೋಡ್ ಮಾಡಿ ಹಾಗೂ ನಿಮ್ಮ ಹೂಡಿಕೆಯ ಪಯಣವನ್ನು ಆರಂಭಿಸಿ.

Subscribe to our newsletter
Thank you! Your submission has been received!
Oops! Something went wrong while submitting the form.