Playstore Icon
Download Jar App
Financial Education

ಭಾರತದಲ್ಲಿ ಕ್ರೆಡಿಟ್ ಕಾರ್ಡ್ ಅನ್ನು ಎಚ್ಚರಿಕೆಯಿಂದ ಉಪಯೋಗಿಸುವುದಕ್ಕಾಗಿ ಒಂದು ಆರಂಭಿಕ ಮಾರ್ಗದರ್ಶಿ - ಜಾರ್

December 27, 2022

ಕ್ರೆಡಿಟ್ ಕಾರ್ಡ್ ಗಳ ಬಗ್ಗೆ ನೀವು ತಿಳಿಯಬೇಕಾಗಿರುವುದೆಲ್ಲವನ್ನೂ ವಿವರಿಸುವ ಒಂದು ಮಾರ್ಗದರ್ಶಿ - ಇವು ಹೇಗೆ ಕೆಲಸ ಮಾಡುತ್ತವೆ ಎಂದು ತಿಳಿಯುವುದರಿಂದ ಹಿಡಿದು ಜವಾಬ್ದಾರಿಯುತ ಕ್ರೆಡಿಟ್ ಕಾರ್ಡ್ ನಡುವಳಿಕೆಯ ವರೆಗೆ.

ನಮಗೆ ಅರ್ಥವಾಗುತ್ತದೆ, ಶಾಲೆ ಅಥವಾ ಕಾಲೇಜು ಮುಗಿದ ತಕ್ಷಣವೇ ದೊಡ್ಡವರ ಹಾಗೆ ನಡೆದುಕೊಳ್ಳುವುದಕ್ಕೆ ನೀವು ತಯಾರಾಗಿದ್ದರೂ ಇರದಿದ್ದರೂ -ಇದು ಭಯಹುಟ್ಟಿಸಬಹುದು.

ಇತರ ವಿಷಯಗಳ ಜೊತೆ, ನೀವು ನಿಮ್ಮ ಹಣಕಾಸನ್ನು ನಿರ್ವಹಿಸಬೇಕಾಗುತ್ತದೆ. ಅಯ್ಯೋ!ವೈಯಕ್ತಿಕ ಆರ್ಥಿಕತೆಯನ್ನು ಸರಳೀಕರಿಸುವ ತಂತ್ರಜ್ಞಾನಗಳು ಇಲ್ಲಿ ನೋಡಿ.

ಹಾಗೂ ಈಗ ನೀವು ಕ್ರೆಡಿಟ್ ಕಾರ್ಡ್ ಅನ್ನು ಪಡೆಯುವ ನಿರ್ಧಾರ ಮಾಡಿದ್ದೀರಿ - ಒಳ್ಳೆಯ ನಿರ್ಧಾರ. ನಿಮ್ಮ ಹಣಕಾಸಿನ ಹಾದಿಯಲ್ಲೊಂದು ಮಹತ್ವದ ಮೈಲಿಗಲ್ಲು. ಆದರೆ, ನೀವು ಎಚ್ಚರಿಕೆಯಿಂದಿರಬೇಕಾಗುತ್ತದೆ.

ನೀವು ಜನರು ಸಾಲಗಾರರಾಗಿರುವ ಅಥವಾ ತಮ್ಮ ಕ್ರೆಡಿಟ್ ರೇಟಿಂಗ್ ಗಳಿಗೆ ತೀವ್ರ ಹಾನಿ ಮಾಡಿರುವ ಬಗ್ಗೆ ಕೇಳಿರಬಹುದು.

ಹೀಗಾಗಿ ಹೌದು, ನೀವು ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಸಮಯಕ್ಕೆ ಸರಿಯಾಗಿ ಕಟ್ಟದೇ ಹೋದರೆ, ಕ್ರೆಡಿಟ್ ನ ಸಾಲನ್ನು ಪಡೆಯುವುದು ಲಾಭಕ್ಕಿಂತ ಹೆಚ್ಚು ಹಾನಿಯನ್ನೇ ಮಾಡಬಹುದು.

ಆದ್ದರಿಂದಲೇ, ಜಾರ್ ನಲ್ಲಿ ನಾವು ನಿಮಗಾಗು ಒಟ್ಟುಗೂಡಿಸಿದ್ದೇವೆ ‘ಕ್ರೆಡಿಟ್ ಕಾರ್ಡ್ ಅನ್ನು ಉಪಯೋಗಿಸುವುದಕ್ಕಾಗಿ ಒಂದು ಆರಂಭಿಕ ಮಾರ್ಗದರ್ಶಿ’ ನೀವು ಕ್ರೆಡಿಟ್ ಕಾರ್ಡಿನ ಒಳ ಹಾಗೂ ಹೊರಗಿನ ಅಂಶಗಳನ್ನು ತಿಳಿದು ಪರಿಣಿತರಾಗಲು.

ಅರ್ಥಮಾಡಿಕೊಳ್ಳಲು ಓದುವುದನ್ನು ಮುಂದುವರಿಸಿ:

  • ಕ್ರೆಡಿಟ್ ಕಾರ್ಡ್ ಗಳು ಹೇಗೆ ಕೆಲಸ ಮಾಡುತ್ತವೆ?
  • ಕ್ರೆಡಿಟ್ ಕಾರ್ಡ್ ಗಳ ಮೂಲ ವಿಧಗಳು ಯಾವುವು?
  • ಕ್ರೆಡಿಟ್ ಕಾರ್ಡ್ ಅನ್ನು ಆಯ್ಕೆ ಮಾಡುವುದು ಹೇಗೆ?
  • ಕ್ರೆಡಿಟ್ ಕಾರ್ಡ್ ಅನ್ನು ಜವಾಬ್ದಾರಿಯುತವಾಗಿ ಬಳಸುವುದು ಹೇಗೆ?
  • ನಿಮಗೆ ನಿಜವಾಗಿಯೂ ಕ್ರೆಡಿಟ್ ಕಾರ್ಡಿನ ಅಗತ್ಯವಿದೆಯೇ?

ಆರಂಭಿಸೋಣ

ಕ್ರೆಡಿಟ್ ಕಾರ್ಡ್ ಗಳು ಹೇಗೆ ಕೆಲಸ ಮಾಡುತ್ತವೆ?

ಸರಳ ಶಬ್ದಗಳಲ್ಲಿ, ನಿಮ್ಮ ಬ್ಯಾಂಕ್ ಖಾತೆಯಿಂದ ತ್ವರಿತವಾಗಿ ಹಣ ಹೊರತೆಗೆಯದೆಯೇ ಕ್ರೆಡಿಟ್ ಕಾರ್ಡ್ ನಿಮಗೆ ಖರೀದಿ ಮಾಡುವ ಅನುಮತಿಯನ್ನು ನೀಡುತ್ತದೆ. (ಸಾಲದ ಹಾಗೆಯೇ).

ಬದಲಿಗೆ, ನೀವು ಬಹುತೇಕವಾಗಿ ನಿಮ್ಮ ಖರೀದಿಗಳಿಗೆ ತಿಂಗಳಿಗೊಮ್ಮೆ ಪಾವತಿ ಮಾಡುತ್ತೀರಿ. ನೀವು ಈ ಬಿಲ್ ಅನ್ನು ಪಾವತಿಸದೇ ಇದ್ದರೆ ನಿಮಗೆ ಬಡ್ಡಿಯನ್ನೂ ತೆರಬೇಕಾಗುವುದು(ನಿಮ್ಮ ಸಾಲಕ್ಕಾಗಿ ಬೆಲೆ).

ಇವುಗಳು ನಿಮ್ಮ ಹಣಕಾಸಿನ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿರುವುದಿಲ್ಲ. ಇವುಗಳನ್ನು ನೀವು ಅಂಗಡಿಗಳಲ್ಲಿ, ಫೋನಿನಲ್ಲಿ, ಅಂತರ್ಜಾಲದಲ್ಲಿ ಬಳಸಬಹುದು, ಡೆಬಿಟ್ ಕಾರ್ಡಿನ ಹಾಗೆಯೇ.

ಬ್ಯಾಂಕಿನ ಎಟಿಎಂ ನಿಂದ ನಗದು ಹಣವನ್ನೂ ನೀವಿದರೊಂದಿಗೆ ಪಡೆಯಬಹುದು.

ಜನರು ಭವಿಷ್ಯದಲ್ಲಿ ಹೆಚ್ಚು ಅನುಕೂಲಕರ ಸಾಲಗಳನ್ನು ಪಡೆಯಬೇಕೆಂಬ ದೃಷ್ಟಿಯಿಂದ ಅವರಿಗೆ ಇದನ್ನು 

ನೀಡಲಾಗುತ್ತದೆ. 

ನೀವು ಕ್ರೆಡಿಟ್ ಕಾರ್ಡ್ ಅನ್ನು ಪಡೆದು ನಿಮ್ಮ ಬಿಲ್ಲುಗಳನ್ನು ಸರಿಯಾದ ಸಮಯದಲ್ಲಿ ಪಾವತಿಸಿದರೆ, ಬ್ಯಾಂಕ್ ಗಳು ನಿಮ್ಮನ್ನು ಜವಾಬ್ದಾರಿಯುತ ಸಾಲಗಾರ ಎಂದು ಪರಿಗಣಿಸುತ್ತವೆ (ಒಳ್ಳೆಯ ಕ್ರೆಡಿಟ್ ಸ್ಕೋರ್ ಜೊತೆ).

ಭವಿಷ್ಯದಲ್ಲಿ ಅವರು ನಿಮಗೆ ಕಡಿಮೆ ಬಡ್ಡಿ ಹೊಂದಿರುವ ಸಾಲವನ್ನು ನೀಡಬಹುದು(ಗೃಹ ಸಾಲ). ಕ್ಯಾಶ್ಬ್ಯಾಕ್ ಹಾಗೂ ಏರ್ಲೈನ್ ಮೈಲ್ಸ್ ಗಳಂತಹ ಲಾಭಗಳನ್ನು ಪಡೆಯಲೂ ಕ್ರೆಡಿಟ್ ಕಾರ್ಡ್ ಅನ್ನು ಬಳಸಬಹುದು. 

ಪ್ರತೀ ತಿಂಗಳು, ಕ್ರೆಡಿಟ್ ಕಾರ್ಡ್ ಬಳಕೆದಾರನಿಗೆ, ಕರ್ಡಿನ ಮೂಲಕ ಮಾಡಿದ ಖರೀದಿಗಳ ವಿವರ, ಯಾವುದೇ ಹೆಚ್ಚುವರಿ ಶುಲ್ಕ, ಬಾಕಿಯಿರುವ ಒಟ್ಟು ಮೊತ್ತದ ಒಂದು ಸ್ಟೇಟ್ಮೆಂಟ್ ಅನ್ನು ಕಳಿಸಲಾಗುತ್ತದೆ.

ಸ್ಟೇಟ್ಮೆಂಟ್ ಸಿಕ್ಕಿದ ಮೇಲೆ ಕಾರ್ಡುದಾರನಿಗೆ ಯಾವುದೇ ಶುಲ್ಕ ಸರಿಯಿಲ್ಲ ಎಂದೆನಿಸಿದರೆ ಅದನ್ನು ಪ್ರಶ್ನಿಸಬಹುದಾಗಿದೆ.

ಇಲ್ಲವಾದರೆ, ಒಂದು ನಿರ್ದಿಷ್ಟ ಅವಧಿಯೊಳಗೆ ಮೊತ್ತದ ಒಂದು ನಿರ್ದಿಷ್ಟ ಕನಿಷ್ಟ ಭಾಗವನ್ನು ಪಾವತಿಸಬೇಕಾಗುತ್ತದೆ, ಅಥವಾ ಹೆಚ್ಚಿನ ಭಾಗ ಅಥವಾ ಪೂರ್ತಿ ಶುಲ್ಕವನ್ನೇ ಪಾವತಿಸಬಹುದು.

ಪೂರ್ತಿ ಹಣ ಪಾವತಿ ಆಗದೇ ಇದ್ದಲ್ಲಿ, ಕ್ರೆಡಿಟ್ ನೀಡುವವರು ಬಿಲ್ ಆದ ಮೊತ್ತದ ಮೇಲೆ ಬಡ್ಡಿಯನ್ನು ಕೇಳುತ್ತಾರೆ. 

ಕಾರ್ಡುದಾರನು ಬೇಕಾದಷ್ಟು ಹಣ ಹೊಂದಿರುವಷ್ಟು ಸಮಯ, ಬಹುತೇಕ ಆರ್ಥಿಕ ಸಂಸ್ಥೆಗಳು ಮತ್ತು ಬ್ಯಾಂಕ್ ಗಳು ಸ್ವಯಂಚಾಲಿತ ಪಾವತಿ ಅಥವಾ ಆಟೋ ಪೇ ಅನ್ನು ಸೆಟ್ ಮಾಡಿ ಸಾಲಗಾರನ ಬ್ಯಾಂಕ್ ಖಾತೆಯಿಂದ ಹಣವನ್ನು ಪಡೆಯುತ್ತಾರೆ ಹಾಗೂ ಇದರಿಂದ ತಡ ಪಾವತಿ ತಪ್ಪುತ್ತದೆ.

ಇದನ್ನು ಇನ್ನೂ ಉತ್ತಮವಾಗಿ ತಿಳಿಯಲು ಒಂದು ಉದಾಹರಣೆಯನ್ನು ನೋಡೋಣ;

ಆಕಾಶ್ ಅನ್ನು ಭೇಟಿಯಾಗಿ. ಆಕಾಶ್ ಬಳಿ ರೂ 1 ಲಕ್ಷ ಮಿತಿಯಿರುವ ಕ್ರೆಡಿಟ್ ಕಾರ್ಡ್ ಇದೆ. ಅವನು ಪ್ರತೀ ತಿಂಗಳ 19 ರಂದು ಅವನ ಸ್ಟೇಟ್ಮೆಂಟ್ ಅನ್ನು ಪಡೆಯುತ್ತಾನೆ.

ಅವನು ಮುಂದಿನ ತಿಂಗಳ 9 ನೇ ತಾರೀಕಿನಂದು ಬಿಲ್ ಪಾವತಿ ಮಾಡತಕ್ಕದ್ದು, 3.35 ಪ್ರತಿಶತ ಮಾಸಿಕ ಬಡ್ಡಿ ದರದೊಂದಿಗೆ. 

ಅವನ ಕ್ರೆಡಿಟ್ ಕಾರ್ಡ್ ಬಾಕಿ ರೂ 3,200 ಆಗಿದ್ದು,5 ಅಕ್ಟೋಬರ್, 2020 ರಂದು ಅವನು ಅದರ ಪೂರ್ತಿ ಪಾವತಿಯನ್ನು ಮಾಡಿದ್ದಾನೆ. ಅವನು ಈ ಕೆಳಗೆ ಪಟ್ಟಿ ಮಾಡಿದ ವಸ್ತುಗಳನ್ನು ಖರೀದಿಸಿದ್ದ:

 

  

ಅವನ ಕ್ರೆಡಿಟ್ ಕಾರ್ಡ್ ಮೇಲಿನ ಬಡ್ಡಿಯನ್ನು ಈ ರೀತಿ ಲೆಕ್ಕಹಾಕಲಾಗುತ್ತದೆ:

21 ದಿನಗಳಿಗೆ 3,200 (9ನೇ ಸೆಪ್ಟ್ಂಬರ್ ನಿಂದ 5 ಅಕ್ಟೋಬರ್ ವರೆಗೆ)ಪ್ರತಿ ತಿಂಗಳು 3.35 ಪ್ರತಿಶತದಲ್ಲಿ = ರೂ. 75.04

10 ದಿನಗಳಿಗೆ 2,500 (25ನೇ ಸೆಪ್ಟ್ಂಬರ್ ನಿಂದ 5 ಅಕ್ಟೋಬರ್ ವರೆಗೆ)ಪ್ರತಿ ತಿಂಗಳು 3.35 ಪ್ರತಿಶತದಲ್ಲಿ = ರೂ. 27.92

ಹೀಗಾಗಿ ಆಕಾಶ್ ಒಟ್ಟಾಗಿ, ರೂ 102.96 ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಬಾಕಿಯಿದ್ದ ಹಣ 5 ಅಕ್ಟೋಬರ್ ರಂದು ಪಾವತಿ ಮಾಡಿದ ಕಾರಣ ಅವನ ಇಂಧನ, ಶಾಪಿಂಗ್ ಹಾಗೂ ಊಟ ತಿಂಡಿಗಳ ಖರ್ಚುಗಳಿಗೆ ದಂಡದಿಂದ ವಿನಾಯಿತಿ ದೊರೆಯುತ್ತದೆ. 

ಕ್ರೆಡಿಟ್ ಕಾರ್ಡ್ ನ ವಿಭಿನ್ನ ವಿಧಗಳು ಯಾವುವು?

ನಿಮಗೆ ಉತ್ತಮ ನಿರ್ಧಾರ ಮಾಡಲು ಸಹಾಯ ಮಾಡಲು, ಬ್ಯಾಂಕ್ ಹಾಗೂ ಆರ್ಥಿಕ ಸಂಸ್ಥೆಗಳು ನಿಮ್ಮ ನಿರ್ದಿಷ್ಟ ಅಗತ್ಯಗಳಿಗೆ ಹೊಂದುವಂತೆ ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ಕಸ್ಟಮೈಜ್ ಮಾಡುವ ಆಯ್ಕೆಯನ್ನು ನೀಡುತ್ತದೆ. ಇದು ನೀವು ಅತಿಯಾಗಿ ಖರ್ಚು ಮಾಡಿ ಸಾಲ ಬಾಧೆಗೆ ಬೀಳದಂತೆ ನೋಡಿಕೊಳ್ಳುತ್ತದೆ. 

ನೀವು ಈ ಕಾರ್ಡ್ ಅನ್ನು ಹೊಂದಿದ್ದರೆ, ನೀವು ಹಲವು ವಿಧಗಳ ಆರ್ಥಿಕ ಬಹುಮಾನಗಳಿಂದ ಆಯ್ಕೆ ಮಾಡಬಹುದು. ನೀವು ಭಾರತಲ್ಲಿ ವಾಸಿಸುತ್ತಿದ್ದರೆ ನಿಮ್ಮ ಕ್ರೆಡಿಟ್ ಕಾರ್ಡ್ ಆಯ್ಕೆಗಳು ಈ ರೀತಿ ಇರುತ್ತವೆ:

  1. ಬೇಸಿಕ್ ಕ್ರೆಡಿಟ್ ಕಾರ್ಡ್
  2. ಬಿಸ್ನೆಸ್ ಕ್ರೆಡಿಟ್ ಕಾರ್ಡ್
  3. ಸ್ಟುಡೆಂಟ್ ಕ್ರೆಡಿಟ್ ಕಾರ್ಡ್
  4. ಕೋ - ಬ್ರ್ಯಾಂಡೆಡ್ ಕ್ರೆಡಿಟ್ ಕಾರ್ಡ್
  5. ಬ್ಲಾಲೆನ್ಸ್ ಟ್ರಾನ್ಫರ್ ಕ್ರೆಡಿಟ್ ಕಾರ್ಡ್
  6. ಟ್ರಾವೆಲ್ ಕ್ರೆಡಿಟ್ ಕಾರ್ಡ್
  7. ಕ್ಯಾಶ್ ಬ್ಯಾಕ್ ಕ್ರೆಡಿಟ್ ಕಾರ್ಡ್
  8. ಫ಼್ಯುಯೆಲ್ ಕ್ರೆಡಿಟ್ ಕಾರ್ಡ್
  9. ಪ್ಲಾಟಿನಂ ಕ್ರೆಡಿಟ್ ಕಾರ್ಡ್
  10. ಗೋಲ್ಡ್ ಕ್ರೆಡಿಟ್ ಕಾರ್ಡ್
  11. ಸಿಲ್ವರ್ ಕ್ರೆಡಿಟ್ ಕಾರ್ಡ್

1. ಬೇಸಿಕ್ ಕ್ರೆಡಿಟ್ ಕಾರ್ಡ್

ನೀವು ಈಗಷ್ಟೇ ಆರಂಭಿಸುತ್ತಿದ್ದು ಕೇವಲ ಕ್ರೆಡಿಟ್ ಕಾರ್ಡಿನ ಕಾರ್ಯನಿರ್ವಹಣೆಯನ್ನು ಪರಿಶೀಲಿಸಲು ಬಯಸಿದರೆ, ಈ ಕ್ರೆಡಿಟ್ ಕಾರ್ಡ್ ನಿಮಗಾಗಿ ಉತ್ತಮವಾಗಿದೆ.

ಈ ಕಾರ್ಡಿನೊಂದಿಗೆ, ನಿಮ್ಮ ಮಾಸಿಕ ಆದಾಯದ ಮೇಲೆ ನಿಮಗೆ ಕನಿಷ್ಠ ಮಿತಿಯನ್ನು ನೀಡಲಾಗುತ್ತದೆ ಹಾಗೂ ಇದರಿಂದ ನೀವು ನಿಮ್ಮ ಹೊಸ ಕ್ರೆಡಿಟ್ ಕಾರ್ಡ್ ಅನ್ನು ಬಳಸುವಾಗ ಸಾಲದ ಬಲೆಗೆ ಬೀಳುವುದು ತಪ್ಪುತ್ತದೆ.

ಈ ಕ್ರೆಡಿಟ್ ಕಾರ್ಡ್ ಖರ್ಚಾದ ಮೊತ್ತದ ಮೇಲೆ ಯಾವುದೇ ಹೆಚ್ಚಿನ ಕೊಡುಗೆಗಳನ್ನು ನೀಡುವುದಿಲ್ಲ.

2. ಬಿಸ್ನೆಸ್(ಉದ್ಯಮ)ಕ್ರೆಡಿಟ್ ಕಾರ್ಡ್

ಬಿಸ್ನೆಸ್ ಕ್ರೆಡಿಟ್ ಕಾರ್ಡ್ ಸಾಮಾನ್ಯ ಕ್ರೆಡಿಟ್ ಕಾರ್ಡಿನಂತೆಯೇ ಆಗಿದೆ - ಆದರೆ ಇದನ್ನು ಕೇವಲ ಉದ್ಯಮದ ಉದ್ದೇಶಕ್ಕಾಗಿ ಬಳಸಲಾಗುತ್ತದೆ.

ವಯಕ್ತಿಕ ಕಾರ್ಡ್ ಇದ್ದಂತೆಯೇ, ನೀವು ನಿಮ್ಮ ಸಂಸ್ಥೆಯ ಹೆಸರಿನಲ್ಲಿ ಈ ಕ್ರೆಡಿಟ್ ಕಾರ್ಡ್ ಅನ್ನು ಪಡೆಯಬಹುದು. 

ಇದು ನಿಮ್ಮ ದೈನಂದಿನದ ವ್ಯವಾಹಾರದ ವೆಚ್ಚಗಳನ್ನು ಕವರ್ ಮಾಡುವ ಅನುಕೂಲಕರ ಹಾಗೂ ಹೊಂದಾಣಿಕೆಯ ವಿಧಾನವಾಗಿದ್ದು ನಿಮ್ಮವೈಯಕ್ತಿಕ ಹಾಗೂ ವ್ಯವಹಾರದ ಹಣವನ್ನು ಪ್ರತ್ಯೇಕವಾಗಿಡುತ್ತದೆ.

ಒಬ್ಬವೈಯಕ್ತಿಕ ಕ್ರೆಡಿಟ್ ಕಾರ್ಡ್ ಹೋಲ್ಡರ್ ಗೆ ಸಿಗುವ ಸೌಲಭ್ಯಗಳ ಜೊತೆ ಇದರಲ್ಲಿ ಹೆಚ್ಚುವರಿ ಉದ್ಯಮ ಬಹುಮಾನಗಳು ಹಾಗೂ ಉಳಿತಾಯದ ಅವಕಾಶಗಳು ದೊರೆಯುತ್ತವೆ.

ಬಿಸ್ನೆಸ್ ಕ್ರೆಡಿಟ್ ಕಾರ್ಡ್ ಅನ್ನು ಉದ್ಯಮ ಮಾಲೀಕರು ತಮ್ಮ ಸಂಸ್ಥೆಗಾಗಿ ಖರೀದಿಗಳನ್ನು ಮಾಡುವುದಕ್ಕಾಗಿ ಬಳಸಲಾಗುತ್ತದೆ.

ಇದು ಪ್ರಿಂಟರ್ ಕಾಗದದಿಂದ ಹಿಡಿದು ಕಛೇರಿಯ ಕಾಫಿ ವರೆಗೆ ಯಾವುದೇ ಇತರ ವಸ್ತುಗಳು ಆಗಿರಬಹುದು.

ಇವುಗಳು ಮುಖ್ಯವಾಗಿ, ನಿಮ್ಮವೈಯಕ್ತಿಕ ಕ್ರೆಡಿಟ್ ಕಾರ್ಡ್ ಅನ್ನು ಬಳಸದೆ, ನಿಮ್ಮ ಸ್ವಂತ ಹಣವನ್ನು ಖರ್ಚು ಮಾಡದೆ, ಅಥವಾ ಉದ್ಯಮ ಸಾಲ ತೆಗೆದುಕೊಳ್ಳದೆಯೇ ಸಂಸ್ಥೆಯ ವಿನಿಮಯಗಳನ್ನು ಮಾಡುವ ಸುಗಮ ರೀತಿಯಾಗಿದೆ.

3. ಸ್ಟೂಡೆಂಟ್(ವಿದ್ಯಾರ್ಥಿ) ಕ್ರೆಡಿಟ್ ಕಾರ್ಡ್

ಇದು ಕಾಲೇಜು ವಿದ್ಯಾರ್ಥಿಗಳಿಗಾಗಿ ಲಭ್ಯವಿರುವ ಕ್ರೆಡಿಟ್ ಕಾರ್ಡ್ ಆಗಿದೆ. ಆದಾಯ ಅರ್ಹತೆ ಇಲ್ಲದಿರುವ ಕಾರಣ, 18 ವರ್ಷ ಮೇಲ್ಪಟ್ಟ ಯಾವುದೇ ವಿದ್ಯಾರ್ಥಿಯು ಈ ಕಾರ್ಡಿಗಾಗಿ ಅರ್ಜಿ ಸಲ್ಲಿಸಬಹುದು.

ಈ ಕ್ರೆಡಿಟ್ ಕಾರ್ಡ್ ಗಳಿಗೆ ಕನಿಷ್ಠ ಮಾನ್ಯತೆಯ ಅವಧಿ ಇದ್ದು ಇದರ ಬಡ್ಡಿ ದರಗಳೂ ಕಡಿಮೆ ಇರುತ್ತದೆ. ಇದು ನಿಮ್ಮ ಖರ್ಚುಗಳು ಹತೋಟಿಯಲ್ಲಿರುವುದನ್ನು ಖಚಿತಪಡಿಸುತ್ತದೆ.

 

4. ಕೋ(ಸಹ)ಬ್ರ್ಯಾಂಡೆಡ್ ಕ್ರೆಡಿಟ್ ಕಾರ್ಡ್

ಕೋ ಬ್ರ್ಯಾಂಡೆಡ್ ಕ್ರೆಡಿಟ್ ಕಾರ್ಡ್ ಸಾಮಾನ್ಯವಾಗಿ ಒಬ್ಬ ನಿರ್ದಿಷ್ಟ ವ್ಯಾಪಾರಿ ನೀಡುವ ಸ್ಟೋರ್ ಕಾರ್ಡ್ ಆಗಿದೆ. ಆದರೆ ಕೇವಲ ಒಂದು ವ್ಯಾಪಾರ ಕಾರ್ಡ್ ಆಗಿರದೆ, ಇದು ದೊಡ್ಡ ಕ್ರೆಡಿಟ್ ಕಾರ್ಡ್ ಗಳಾದ ವೀಸಾ, ಮಾಸ್ಟರ್ಕಾರ್ಡ್ ಅಥವಾ ಅಮೇರಿಕನ್ ಎಕ್ಸ್ಪ್ರೆಸ್ ಜೊತೆ ಜಂಟಿಯಾಗಿದೆ.

ಕೋ ಬ್ರ್ಯಾಂಡೆಡ್ ಕ್ರೆಡಿಟ್ ಕಾರ್ಡ್ ಜೊತೆ ನೀವು ಒಂದು ನಿರ್ದಿಷ್ಟ ಬ್ರ್ಯಾಂಡಿನಿಂದ ಮಾಡಿದ ಖರೀದಿ ಮೇಲೆ ಹೆಚ್ಚುವರಿ ರಿಯಾಯಿತಿ, ಮರುಪಾವತಿ ಕಡಿತಗಳನ್ನು ಪಡೆಯಬಹುದು.

ಇವುಗಳು ಸಾಂಪ್ರಾದಾಯಿಕವಾದ ರಿಟೇಲ್ ಖಾಸಗಿ ಲೇಬಲ್ ಕಾರ್ಡ್ ಗಳಿಂದ ಕಡಿಮೆ ದುಬಾರಿಯಾಗಿದ್ದು, ಹೊಸ ಗ್ರಾಹಕರನ್ನು ಸ್ವೀಕರಿಸಲು ಇವುಗಳು ಸಂಸ್ಥೆಗಳಿಗೆ ಇವುಗಳನ್ನು ನೀಡುವ ಅನುಮತಿ ನೀಡುತ್ತವೆ.

5. ಬ್ಯಾಲೆನ್ಸ್ ಟ್ರಾನ್ಸ್ಫರ್(ಬಾಕಿ ವರ್ಗಾವಣೆ) ಕ್ರೆಡಿಟ್ ಕಾರ್ಡ್

ಬ್ಯಾಲೆನ್ಸ್ ಟ್ರಾನ್ಸ್ಫರ್ ಕ್ರೆಡಿಟ್ ಕಾರ್ಡ್ ನಿಮಗೆ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ಒಂದು ಕಾರ್ಡಿನಿಂದ ಇನ್ನೊಂದಕ್ಕೆ ವರ್ಗಾಯಿಸುವ ಅನುಮತಿಯನ್ನು ನೀಡುತ್ತದೆ.

ಬಾಕಿ ವರ್ಗಾವಣೆಗಳಲ್ಲಿ, ಹಲವು ಕ್ರೆಡಿಟ್ ಕಾರ್ಡ್ ಕಂಪನಿಗಳು 0% ಆರಂಭಿಕ ಎಪಿಆರ್ ಅಥವಾ ಕಡಿಮೆ ಎಪಿಆರ್ ಅನ್ನು ನೀಡುತ್ತವೆ.

0% ಎಪಿಆರ್ ನೊಂದಿಗೆ, ಬಡ್ಡಿಗಳು ಸೇರಿಕೊಳ್ಳುವ ಬದಲು, ನಿಮ್ಮ ಸಂಪೂರ್ಣ ಮಾಸಿಕ ಪಾವತಿಯು ಸಂಗ್ರಹವಾದ ಸಾಲದ ಕಡೆ ಹೋಗುತ್ತದೆ, ಇದರಿಂದ ನಿಮ್ಮ ಮೂಲ ಕಾರ್ಡಿಗೆ ಹೋಲಿಸಿದರೆ ನಿಮ್ಮ ಸಾಲಗಳು ಬೇಗನೇ ತೀರುತ್ತವೆ.

6. ಟ್ರಾವೆಲ್(ಪ್ರಯಾಣ) ಕ್ರೆಡಿಟ್ ಕಾರ್ಡ್

ನೀವು ಪ್ರಯಾಣವನ್ನು ಇಷ್ಟಪಡುತ್ತೀರಾ? ನೀವು ಪ್ರತೀ ಸಲ ನಿಮ್ಮ ಟ್ರಾವೆಲ್ ಕ್ರೆಡಿಟ್ ಕಾರ್ಡ್ ಅನ್ನು ವಿಮಾನದ ಟಿಕೆಟ್ ಗಳಿಗೆ, ಹೋಟೆಲ್ ಮೀಸಲಾತಿಗಳಿಗೆ, ಹಾಗೂ ಇತರ ಪ್ರಯಾಣ ಸಂಬಂಧೀ ಖರೀದಿಗಳಿಗೆ ಬಳಸಿದಾಗ ನಿಮಗೆ ಬಹುಮಾನ ಪಾಯಿಂಟ್ ಗಳು ದೊರೆಯುತ್ತವೆ.

ಈ ಪಾಯಿಂಟ್ ಗಳನ್ನು ನೀವು ಹೊಸ ಪ್ರಯಾಣದ ಬುಕಿಂಗ್ ಗಾಗಿ ಬಳಸಬಹುದು.

7. ಕ್ಯಾಶ್ ಬ್ಯಾಕ್ ಕ್ರೆಡಿಟ್ ಕಾರ್ಡ್

ಹಲವಾರು ಕ್ರೆಡಿಟ್ ಕಾರ್ಡ್ ಗಳು ಇಂದು ಅವರ ಕಾರ್ಡ್ ಅನ್ನು ಬಳಸಿದ್ದಕ್ಕಾಗಿ ಕ್ಯಾಶ್ ಬ್ಯಾಕ್ ಬಹುಮಾನಗಳನ್ನು ನೀಡುತ್ತಿವೆ.

ನಿಮ್ಮ ಸಾಲದ ಪ್ರಮಾಣ ಹಾಗೂ ನೀವು ಕ್ರೆಡಿಟ್ ಕಾರ್ಡ್ ಅನ್ನು ಎಷ್ಟು ಬಾರಿ ಬಳಸುತ್ತೀರಿ, ಇದನ್ನು ಅವಲಂಬಿಸಿ ನಿಮ್ಮ ಖರೀದಿಗಳಿಗೆ ನಿಮಗೆ ಕ್ಯಾಶ್ಬ್ಯಾಕ್ ದೊರೆಯುತ್ತದೆ.

8. ಫ್ಯೂಯೆಲ್(ಇಂಧನ) ಕ್ರೆಡಿಟ್ ಕಾರ್ಡ್

ಫ್ಯೂಯೆಲ್ ಕ್ರೆಡಿಟ್ ಕಾರ್ಡ್ ಗಳು ಸಾಗಿಸುವ ವಾಹನಗಳಿಗೆ ಹೆಚ್ಚು ಉಪಯುಕ್ತವಾಗುತ್ತವೆ. ಇವು ನಿಮಗೆ ಪೆಟ್ರೋಲ್ ಶುಲ್ಕದ ಮನ್ನಾದ ಲಾಭ ಪಡೆಯಲು ಹಾಗೂ ಇಂಧನದ ಮೇಲೆ ಹಣ ಉಳಿತಾಯ ಮಾಡಿ ನಿಮ್ಮ ದೈನಂದಿನದ ಪ್ರಯಾಣದ ವೆಚ್ಚವನ್ನು ಕಡಿಮೆ ಮಾಡುತ್ತದೆ.

ನೀವು ಬಹುಮಾನ ಪಾಯಿಂಟ್ ಗಳನ್ನು ಸಂಗ್ರಹಿಸಿ  ವರ್ಷವಿಡೀ ನಿಮ್ಮ ಇಂಧನದ ಮೇಲೆ ಹಣ ಉಳಿತಾಯ ಮಾಡಬಹುದು.

9.ಪ್ಲಾಟಿನಂ ಕ್ರೆಡಿಟ್ ಕಾರ್ಡ್

ಪ್ಲಾಟಿನಂ ಕಾರ್ಡ್ ಅನ್ನು ಹೆಚ್ಚಾಗಿ ಉತ್ತಮ ಕ್ರೆಡಿಟ್ ಹಾಗೂ ಹೆಚ್ಚಿನ ಆದಾಯ ಇರುವವರಿಗೆ ನೀಡಲಾಗುತ್ತದೆ. ಸಿಲ್ವರ್ ಅಥವಾ ಗೋಲ್ಡ್ ಕ್ರೆಡಿಟ್ ಕಾರ್ಡ್ ಗೆ ಹೋಲಿಸಿದರೆ, ಪ್ಲಾಟಿನಂ ಕಾರ್ಡ್ ಗಳು ಲಾಭ ಹಾಗೂ ಕೊಡುಗೆಗಳ ಮಹಾಪೂರವನ್ನೇ ಹೊಂದಿದೆ.

ರೂಢಿ ತಿಳುವಳಿಕೆಯ ಪ್ರಕಾರ, ಪ್ಲಾಟಿನಂ ಕ್ರೆಡಿಟ್ ಕಾರ್ಡ್ ಗಳು, ಸ್ಟೇಟಸ್ ನ ಸಂಕೇತವಾಗಿವೆ. ಆದರೆ, ಸಡಿಲವಾದ ನಿಯಮಗಳು ಹಾಗೂ ಹೆಚ್ಚಿನ ಮಿತಿಯಿಂದಾಗಿ ಇದೀಗ ಸಾಮಾನ್ಯ ವ್ಯಕ್ತಿಯ ಕೈಗೆಟಕುವುದೂ ಸಾಧ್ಯವಾಗಿದೆ. 

10. ಗೋಲ್ಡ್ ಕ್ರೆಡಿಟ್ ಕಾರ್ಡ್

ಸಾಧಾರಣಕ್ಕಿಂತ ಹೆಚ್ಚಿನ ಆದಾಯದ ಗ್ರಾಹಕರಿಗೆ ನೀಡಲಾಗುವ ಈ ಚಿನ್ನದ ಬಣ್ಣದ ಕಾರ್ಡ್, ಕಡಿಮೆ ಬಡ್ಡಿ ದರದಲ್ಲಿ ಹೆಚ್ಚಿನ ಹಣ ತೆಗೆಯುವುದು ಹಾಗೂ ವಾರ್ಷಿಕ ಶುಲ್ಕದಂತಹ ಹೆಚ್ಚುವರಿ ಲಾಭಗಳಿಂದ ಕೂಡಿರುತ್ತದೆ.

11. ಸಿಲ್ವರ್ ಕ್ರೆಡಿಟ್ ಕಾರ್ಡ್

ಸಿಲ್ವರ್ ಕ್ರೆಡಿಟ್ ಕಾರ್ಡ್ ಗಳು ಇವುಗಳು ಮೊದಲು ಪರಿಚಯಿಸಲಾದ ಕಾಲ ಎಂದರೆ ಮಧ್ಯ 1950 ಇಂದಲೇ ಅಸ್ಥಿತ್ವದಲ್ಲಿವೆ. 

ಇಂದು, ಪ್ರತಿಷ್ಠೆಯಲ್ಲಿ ಗೋಲ್ಡ್ ಮತ್ತು ಪ್ಲಾಟಿನಂ ಕಾರ್ಡ್ ಗಳು ಇವುಗಳನ್ನು ಮೀರಿರುವುದರಿಂದ, ಇವುಗಳನ್ನು ಸ್ಟಾಂಡರ್ಡ್ ಅಥವಾ ಮೂಲಭೂತ ಕಾರ್ಡ್ ಗಳು ಎಂದು ಕರೆಯಲಾಗುತ್ತದೆ.

ಕ್ರೆಡಿಟ್ ಕಾರ್ಡ್ ಗಳ ಸಾಧಕ ಭಾದಕಗಳು

ಕ್ರೆಡಿಟ್ ಕಾರ್ಡ್ ಬಳಕೆಯಿಂದ ಜೀವನ ಸರಳವಾದರೂ, ಇದು ಖರ್ಚುದಾರನ ಮೇಲೆ ಸಾಕಷ್ಟು ಜವಾಬ್ದಾರಿಯನ್ನು ಹೇರುತ್ತದೆ.

ಜಾಣ್ಮೆಯಿಂದ ಇದನ್ನು ಬಳಸದೇ ಇದ್ದರೆ, ಇದು ನಿಮ್ಮನ್ನು ಸಾಲ ಹಾಗೂ ಕಳಪೆ ಕ್ರೆಡಿಟ್ ಸ್ಕೋರ್ ಗೆ ತಳ್ಳಬಹುದು. ಇದರ ಗರಿಷ್ಠ ಲಾಭಗಳನ್ನು ಪಡೆಯುವುದಕ್ಕಾಗಿ ಇದರ ಸಾಧಕ ಭಾದಕಗಳನ್ನು ಅರಿಯುವುದು ಒಂದು ಮುಖ್ಯ ಹೆಜ್ಜೆಯಾಗಿದೆ.

ಸಾಧಕಗಳು

  1. ಕೊಂಡೊಯ್ಯಲು ಹಾಗೂ ಬಳಸಲು ಸುಲಭ (Easy to Carry and Use) : ಕ್ರೆಡಿಟ್ ಕಾರ್ಡ್ ಅನ್ನು ಚಾರ್ಜ್ ಕಾರ್ಡ್ ಗಳು ಹಾಗೂ ಪ್ರಿಪೇಡ್ ಕಾರ್ಡ್ ಗಳಿಗಿಂತ ಹೆಚ್ಚಾಗಿ ಸ್ವೀಕರಿಸಲಾಗುತ್ತದೆ ಕಾರಣ ಇವುಗಳನ್ನು ಕೊಂಡೊಯ್ಯುವುದು ಹಾಗೂ ಬಳಸುವುದು ಸುಲಭವಾಗಿದೆ.
  2. ನಗದಿಗಿಂತ ಹೆಚ್ಚು ಭದ್ರ (More Secure than Cash) : ನಿಮ್ಮ ಕಾರ್ಡ್ ಕಳೆದುಹೋದರೆ ಅಥವಾ ಕಳ್ಳತನವಾದರೆ, ಕೇವಲ ನಿಮ್ಮ ಬ್ಯಾಂಕಿಗೆ ಕರೆ ಮಾಡಿ ಅದನ್ನು ರದ್ದುಗೊಳಿಸಿ. ನಿಮ್ಮ ಬಳಿ ಕ್ರೆಡಿಟ್ ಕಾರ್ಡ್ ಇದ್ದರೆ, ಕಳ್ಳತನ ಅಥವಾ ಮೋಸದ ಸಮಯದಲ್ಲಿ ನಿಮಗೆ ನಿಮ್ಮ ಹಣವನ್ನು ಪಡೆಯುವ ಹೆಚ್ಚು ಸಂಭಾವನೆ ಇರುತ್ತದೆ.
  3. ಹೆಚ್ಚು ಸುರಕ್ಷಿತ (Much Safer) : ಇವುಗಳು ಹೆಚ್ಚು ಸುರಕ್ಷಿತವಾಗಿವೆ ಏಕೆಂದರೆ ಕ್ರೆಡಿಟ್ ಕಾರ್ಡ್ ವಂಚನೆಯ ಸಂದರ್ಭದಲ್ಲಿ ಬಳಕೆದಾರ ಮಾತ್ರ ಬಾಧ್ಯನಾಗಿರುತ್ತಾನೆ.
  4. ತುರ್ತು ಪರಿಸ್ತಿತಿಯಲ್ಲಿ ಉತ್ತಮ ಆಯ್ಕೆ(Go-to option in Emergencies) : ಕ್ರೆಡಿಟ್ ಕಾರ್ಡ್ ನಿಮಗೆ ಹೆಚ್ಚುವರಿ ಆರ್ಥಿಕ ದಿಂಬನ್ನು ಒದಗಿಸುತ್ತದೆ. ನಿಮಗೆ ತುರ್ತು ಪರಿಸ್ಥಿತಿ ಎದುರಾದರೆ ಅಥವಾ ಹಣದ ಕೊರತೆಯಿದ್ದರೆ ನೀವಿದರ ಮೊರೆ ಹೋಗಬಹುದು.
  5. ಉಚಿತಗಳು(Freebies) : ಏರ್ ಮೈಲ್ ಗಳು, ಬಹುಮಾನ ಪಾಯಿಂಟ್ ಗಳು ಕ್ಯಾಶ್ಬ್ಯಾಕ್ ಗಳು, ಇವೆಲ್ಲಾ ಕ್ರೆಡಿಟ್ ಕಾರ್ಡ್ ಜೊತೆಯಲ್ಲಿ ಬರುವ ಸಾಮಾನ್ಯ ಸವಲತ್ತುಗಳಾಗಿವೆ. ಆದರೆ, ನೀವು ಕೇವಲ ಈ ಸವಲತ್ತುಗಳ ಆಧಾರದ ಮೇಲೆ ಕ್ರೆಡಿಟ್ ಕಾರ್ಡ್ ಅನ್ನು ಪಡೆಯದೇ ಇರುವುದು ಬಹಳ ಮುಖ್ಯ.
  6. ಕ್ರೆಡಿಟ್ ಸ್ಕೋರ್ ಬೆಳೆಸಲು ಸಹಾಯ ಮಾಡುತ್ತದೆ (Can help Build Credit Score) : ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿಯನ್ನು ಮೀರದೆ ಪ್ರತೀ ತಿಂಗಳು ನಿಮ್ಮ ಕ್ರೆಡಿಟ್ ಕಾರ್ಡ್ ಬಾಕಿಯನ್ನು ಪೂರ್ತಿಯಾಗಿ ಪಾವತಿಸುವುದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಗೆ ಸಹಾಯ ಸಿಗುತ್ತದೆ. ಆದರೆ, ಒಂದೇ ಒಂದು ಪಾವತಿ ನಿಮ್ಮಿಂದ ತಪ್ಪಿ ಹೋದರೂ ನಿಮ್ಮ ಕ್ರೆಡಿಟ್ ಸ್ಕೋರ್ ಗೆ ಹಾನಿಯಾಗುತ್ತದೆ. ಆದ್ದರಿಂದ ನೀವು ಪಾವತಿಗಳನ್ನು ಎಂದಿಗೂ ತಪ್ಪಿಸಬಾರದು.

ಬಾಧಕಗಳು

  1. ಹೆಚ್ಚಿನ ಬಡ್ಡಿ ದರಗಳು : ನೀವು ಪ್ರತೀ ತಿಂಗಳ ಕೊನೆಯಲ್ಲಿ ನಿಮ್ಮ ಬಾಕಿಯನ್ನು ಪಾವತಿಸದಿದ್ದರೆ (ಹಾಗೂ ನೀವು 0% ಪ್ರೊಗ್ರಾಮ್ ನಲ್ಲಿ ಇಲ್ಲದಿದ್ದರೆ), ನಿಮ್ಮ ಬಾಕಿ ಇರುವ ಹಣದ ಮೇಲೆ ನೀವು ಬಡ್ಡಿಯನ್ನು ತೆರಬೇಕಾಗುತ್ತದೆ. ಇದು ಇತರ ಸಾಲಗಳಿಗಿಂತ ತುಂಬಾ ಹೆಚ್ಚು ಇರುತ್ತದೆ. ಕ್ರೆಡಿಟ್ ಕಾರ್ಡ್ ನ ಬಡ್ಡಿ ದರಗಳು ಹೆಚ್ಚು ಇರುತ್ತವೆ, ಪ್ರತೀ ವರ್ಷಕ್ಕೆ 25% ಇಂದ 45% ವರೆಗೆ.
  2. ಹೆಚ್ಚುವರಿ ಶುಲ್ಕಗಳು  : ಬಡ್ಡಿಯ ಜೊತೆ, ನೀವು ನಿಮ್ಮ ಕ್ರೆಡಿಟ್ ಮಿತಿಯನ್ನು ಮೀರಿದರೆ ಅಥವಾ ಒಂದು ಪಾವತಿಯನ್ನು ತಪ್ಪಿಸಿದರೆ ಹೆಚ್ಚುವರಿ  ಶುಲ್ಕ ಅಥವಾ ದಂಡವನ್ನು ತೆರಬೇಕಾಗುತ್ತದೆ. ಕ್ಯಾಶ್ ಹೊರತೆಗೆಯಲು ಸಾಮಾನ್ಯವಾಗಿ ಹೆಚ್ಚಿನ ಬಡ್ಡಿ ಅನ್ವಯಿಸುತ್ತದೆ, ಹಾಗೂ ಕೆಲವು ಕ್ರೆಡಿಟ್ ಕಾರ್ಡ್ ಗಳು ವರ್ಷಿಕ ಅಥವಾ ಮಾಸಿಕ ಶುಲ್ಕವನ್ನು ಹೇರುತ್ತವೆ.
  3. ಸಾಲದ ಸುಳಿಯಾಲಿ ಸಿಲುಕುವ ಸಂಭಾವನೆ(Chances of falling in Debt Spiral) : ಸಾಲದ ಸುಳಿಯಿಂದ ಎಚ್ಚರಿಯಿಕೆಯಿಂದಿರಿ; ಒಂದು ಪಾವತಿ ತಪ್ಪಿ ಹೋದರೂ ಸಹ ಬಡ್ಡಿಯಲ್ಲಿ ಗಣನೀಯ ಏರಿಕೆಯಾಗುತ್ತದೆ. ಪ್ರತೀ ತಿಂಗಳು ನೀವು ನಿಮ್ಮ ಪಾವತಿಗಳನ್ನು ಮಾಡದಿದ್ದರೆ ನೀವು ಶೀಘ್ರವೇ ಸಾಲಕ್ಕೊಳಗಾಗುತ್ತೀರಿ, ವಿಶೇಷವಾಗಿ ನೀವು ನಿಮ್ಮ ಕ್ರೆಡಿಟ್ ಕಾರ್ಡ್ ಬಳಕೆಯನ್ನು ಮುಂದುವರಿಸಿದರೆ.
  4. ನಿಮ್ಮ ಕ್ರೆಡಿಟ್ ಕಾರ್ಡ್ ಗೆ ಹಾನಿಯಾಗಬಹುದು  : ಒಂದು ಪಾವತಿ ನಿಮ್ಮಿಂದ ತಪ್ಪಿ ಹೋದರೆ ಅಥವಾ ನೀವು ನಿಮ್ಮ ಕ್ರೆಡಿಟ್ ಮಿತಿಯನ್ನು ಮೀರಿದರೆ ನಿಮ್ಮ ಕ್ರೆಡಿಟ್ ಸ್ಕೋರ್ ಗೆ ಗಣನೀಯವಾದ ಹಾನಿಯಾಗುತ್ತದೆ. ಇದು ಭವಿಷ್ಯದಲ್ಲಿ ನಿಮ್ಮ ಹಣದ ಸಾಲ ಪಡೆಯುವ ಸಂಭಾವನೆಯ ಮೇಲೆ ಪರಿಣಾಮ ಬೀರುತ್ತದೆ.
  5. ಠೇವಣಿಗಳು ಅಥವಾ ಪೂರ್ವಭಾವಿ ಅಧಿಕಾರಗಳು ನಿಮ್ಮ ಕ್ರೆಡಿಟ್ ಮಿತಿಯನ್ನು ಕಡಿಮೆ ಮಾಡಬಹುದು (Deposits and Pre-Authorizations might Reduce your Credit Limit) : ಹೋಟೆಲ್ ಗಳು ಹಾಗೂ ವಾಹನ ಬಾಡಿಗೆ ನೀಡುವ ಕಂಪನಿಗಳಂತಹ ಕೆಲವು ಉದ್ಯಮಗಳು, ನಿಮ್ಮ ಕ್ರೆಡಿಟ್ ಕಾರ್ಡ್ ನ ಮೇಲೆ  ಪೂರ್ವಭಾವಿ ಅಧಿಕಾರವನ್ನು ತೆಗೆದುಕೊಳ್ಳಬಹುದು.ಇದು, ನೀವು ಮಿನಿ ಬಾರ್ ನಂತಹ ಕೆಲ ಸೌಲಭ್ಯಗಳಿಗೆ ಪಾವತಿ ಮಾಡದಿದ್ದರೆ, ನಿಮ್ಮಿಂದ ಪಾವತಿಯನ್ನು ಪಡೆಯುವ ಸಲುವಾಗಿ ಆಗಿರುತ್ತದೆ. ಅವರು ನಿಮ್ಮ ಕ್ರೆಡಿಟ್ ಮಿತಿಯ ಒಂದು ಭಾಗವನ್ನು ಹಿಡಿದಿಟ್ಟುಕೊಳ್ಳುತ್ತಾರೆ ಹಾಗೂ ಆ ಸಮಯದಲ್ಲಿ ನೀವು ಕ್ರೆಡಿಟ್ ನ ಮೊತ್ತವನ್ನು ಬಳಸಲಾಗುವುದಿಲ್ಲ. ಹೋಲ್ಡ್ ಕೊನೆಯಾದ ಮೇಲೂ, ನಿಮ್ಮ ಕ್ರೆಡಿಟ್ ಮಿತಿ ಸಾಮಾನ್ಯ ಸ್ಥಿತಿಗೆ ಮರಳಲು ಸ್ವಲ್ಪ ದಿನಗಳು ಬೇಕಾಗಬಹುದು.
  6. ವಿದೇಶ ಪ್ರಾಯಣದ ಸಮಾಯದಲ್ಲಿ ದುಬಾರಿಯಾಗುತ್ತದೆ : ನಿಮ್ಮ ಕಾರ್ಡ್ ಅನ್ನು ಅವಲಂಬಿಸಿ, ವಿದೇಶದಲ್ಲಿ ಕ್ರೆಡಿಟ್ ಕಾರ್ಡ್ ಅನ್ನು ಬಳಸುವುದು ದುಬಾರಿಯಾಗಬಹುದು. ಕೆಲವನ್ನು ಪ್ರಯಾಣಿಕರಿಗೆಂದೇ ಸಿದ್ಧಪಡಿಸಲಾಗಿದ್ದರೆ, ಇನ್ನೂ ಕೆಲವು ಶುಲ್ಕ ಹಾಗೂ ಇತರ ದರಗಳಿಗೆ ಸಂಬಂಧಿಸಿದಓತೆ ದುಬಾರಿಯಾಗಿ ಪರಿಣಮಿಸಬಹುದು. ನೀವಿದನ್ನು ಖರೀದಿಗೆ ಪಯೋಗಿಸುತ್ತಿರೋ ಅಥವಾ ಹಣ ಹೊರತೆಗೆಯಲು ಉಪಯೋಗಿಸುತ್ತೀರೋ ಆದನ್ನು ಆಧರಿಸುತ್ತದೆ. ವಿದೇಶ ಪ್ರಯಾಣದ ಸಮ್ಯದಲ್ಲಿ ಉತ್ತಮ ರೇಟ್ ಕಾರ್ಡ್ ಗಳಿಗಾಗಿ ಪರಿಶೀಲಿಸಿ.

ಸರಿಯಾದ ಕ್ರೆಡಿಟ್ ಕಾರ್ಡ್ ಅನ್ನು ಆಯ್ಕೆ ಮಾಡುವುದು ಹೇಗೆ?

ಪ್ರತೀ ಉದ್ದೇಶಕ್ಕೂ ಕ್ರೆಡಿಟ್ ಕಾರ್ಡ್ ಗಳಿವೆ - ಒಳ್ಳೆಯ ಬಹುಮಾನಗಳನ್ನು ಸಂಗ್ರಹಿಸುವುದರಿಂದ ಹಿಡಿದು ಪ್ರಯಾಣದ ಸವಲತ್ತುಗಳನ್ನು ಪಡೆಯುವವರೆಗೆ.

ನಿಮಗೆ ಬೇಕಾಗಿರುವ ಲಾಭಗಳನ್ನು ಅವಲಂಬಿಸಿ ನೀವು ಸೂಕ್ತ ಕಾರ್ಡ್ ಅನ್ನು ಆಯ್ಕೆ ಮಾಡಬಲ್ಲಿರಿ. ಇದಕ್ಕಾಗಿ, ನಿಮ್ಮ ಕ್ರೆಡಿಟ್ ಕಾರ್ಡ್ ನ ಲಕ್ಷ್ಯಗಳನ್ನು ನಿರ್ಧರಿಸುವುದು ನಿಮ್ಮ ಮೊದಲ ಹೆಜ್ಜೆಯಾಗಿರಬೇಕು 

ಉತ್ತಮ ಕ್ರೆಡಿಟ್ ಕಾರ್ಡಿಗಾಗಿ ನಿಮ್ಮ ಹುಡುಕಾಟದ ಆರಂಭಕ್ಕಾಗಿ ಸಹಾಯಮಾಡಲು ಕೆಲವು ಸಲಹೆಗಳು ಇಲ್ಲಿವೆ:

  • ನಿಮ್ಮ ಖರ್ಚುಗಳನ್ನು ಪರಿಶೀಲಿಸಿ ನೀವು ಎಲ್ಲಿ ಹೆಚ್ಚು ಹಾಗೂ ಕಡಿಮೆ ಖರ್ಚು ಮಾಡುತ್ತೀರಿ ಎಂದು ನೋಡಿ.
  • ನಿಮ್ಮ ಖರ್ಚಿನ ಮಾದರಿಯ ಬಗ್ಗೆ ನಿಮ್ಮೊಂದಿಗೆ ನೀವೇ ಪ್ರಾಮಾಣಿಕವಾಗಿರಿ
  • ಕ್ರೆಡಿಟ್ ಕಾರ್ಡ್ ಗಳ ಬಗ್ಗೆ ಓದಿ ನೀವು ಲಾಭ್ ಪಡೆಯಲು ಬಯಸುವ ಪ್ರಮುಖ ಸವಲತ್ತುಗಳನ್ನು ಗುರುತಿಸಿ.
  • ನಿಮ್ಮ ಆರ್ಥಿಕ ಸ್ಥಿತಿಯನ್ನು ಅರಿತು ನೀವು ಇಎಂಐ ಗಳ ಮೇಲೆ ಹೆಚ್ಚುವರಿಯಾಗಿ ಎಷ್ಟು ಖರ್ಚು ಮಾಡಾಬಹುದು ಎಂದು ತಿಳಿಯಿರಿ.
  • ನಿಮಗೆ ಕ್ರೆಡಿಟ್ ಕಾರ್ಡ್ ಗಳ ಮೇಲೆ ವಾರ್ಷಿಕ ಶುಲ್ಕ ಪಾವತಿ ಮಾಡಬೇಕೋ ಬೇಡವೋ ಎಂದು ನಿರ್ಧರಿಸಿ.
  • ಜಾಹೀರಾತಿನ ಕೊಡುಗೆಗಳಿಂದ ಮೋಸಹೋಗಬೇಡಿ; ಬದಲಾಗಿ, ನಿಮ್ಮದೇ ಆದ ಸಂಶೋಧನೆಯನ್ನು ನಡೆಸಿ.

ನಿಮ್ಮ ಸಂಶೋಧನೆ ಹಾಗೂ ಮೇಲೆ ನೀಡಿರುವ ಸಲಹೆಗಳ ಆಧಾರದ ಮೇಲೆ ನೀವು ಕೆಲವು ಕ್ರೆಡಿಟ್ ಕಾರ್ಡ್ ಗಳನ್ನು ಆಯ್ಕೆ ಮಾಡಬಹುದು, ಅವುಗಳಿಗಾಗಿ ನಿಮ್ಮ ಅರ್ಹತೆಯನ್ನು ಖಚಿತಪಡಿಸಿ, ಅರ್ಜಿಯನ್ನು ಸಲ್ಲಿಸಿ.

ಕ್ರೆಡಿಟ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸುವುದು ಹೇಗೆ  

ನೀವೊಂದು ಕ್ರೆಡಿಟ್ ಕಾರ್ಡ್ ನ ಆಯ್ಕೆಯನ್ನು ಮಾಡಿದ ಮೇಲೆ, ಅದಕ್ಕಾಗಿ ಅರ್ಜಿ ಸಲ್ಲಿಸುವುದು ಹೇಗೆ ಎಂದು ನೀವು ನೋಡಬೇಕಾಗುತ್ತದೆ. ಕ್ರೆಡಿಟ್ ಕಾರ್ಡ್ ಗಾಗಿ ಅರ್ಜಿಯನ್ನು ಹಲವು ರೀತಿಯಲ್ಲಿ ಸಲ್ಲಿಸಬಹುದು.

  • ಬ್ಯಾಂಕ್ ವೆಬ್ಸೈಟ್

ನೀವು ಈಗಾಗಲೇ ಒಂದು  ಕ್ರೆಡಿಟ್ ಕಾರ್ಡ್ ನ ಆಯ್ಕೆಯನ್ನು ಮಾಡಿದ್ದರೆ, ನೇರವಾಗಿ ಬ್ಯಾಂಕ್ ವೆಬ್ಸೈಟ್ ನಲ್ಲಿ ನೀವು ಇದಕ್ಕಾಗಿ ಅರ್ಜಿಯನ್ನು ಸಲ್ಲಿಸಬಹುದು.

ನಿಮಗೆ ಈಗಾಗಲೇ ತಿಳಿದಿರುವ ಬ್ಯಾಂಕಿನೊಂದಿಗೆ ನೀವು ನಿಮ್ಮ ಕ್ರೆಡಿಟ್ ಕಾರ್ಡ್ ಸಾಹಸವನ್ನು ಆರಂಭಿಸಲು ಹೊರಟಿದ್ದರೆ, ಇದೊಂದು ಉತ್ತಮ ಮಾರ್ಗವಾಗುತ್ತದೆ.

ನೀವು ಉಳಿತಾಯ ಹಾಗೂ ಪಾವತಿ ಖಾತೆಯನ್ನು ಹೊಂದಿರುವ ಆರ್ಥಿಕ ಸಂಸ್ಥೆಯೂ ಆಗಿರಬಹುದು.

ಬ್ಯಾಂಕಿನ ವೆಬ್ಸೈಟ್ ನ ಕ್ರೆಡಿಟ್ ಕಾರ್ಡ್ ವಿಭಾಗದಲ್ಲಿ ನೀವು ಕ್ರೆಡಿಟ್ ಕಾರ್ಡ್ ಗಾಗಿ ಅರ್ಜಿಯನ್ನು ಸಲ್ಲಿಸಬಹುದು. ಆನ್ಲೈನ್ ಬ್ಯಾಂಕ್ ಪೋರ್ಟಲ್ ನಲ್ಲಿ ನೀವು ತಕ್ಷಣವೇ ಅರ್ಜಿ ಸಲ್ಲಿಸಬಹುದು.

  • ಶಾಖೆಗೆ ಭೇಟಿ ನೀಡಿ

ನಿಮ್ಮ ಯೋಚನೆಯಲ್ಲಿ ಒಂದು ನಿರ್ದಿಷ್ಟ ಬ್ಯಾಂಕ್ ಇದ್ದರೆ, ನೀವು ಅದರ ಶಾಖೆಯವರೆಗೆ ಹೋಗಿ ಕ್ರೆಡಿಟ್ ಕಾರ್ಡ್ ಗಾಗಿ ಅರ್ಜಿಯನ್ನು ಸಲ್ಲಿಸಬಹುದು.

ಮುಖ್ಯ ದಾಖಲೆಗಳಾದ ಐಡೆಂಟಿಟಿ ಪ್ರೂಫ್, ವಿಳಾಸದ ಪ್ರೂಫ್ ಹಾಗೂ ಆದಾಯದ ಪ್ರೂಫ್ ನ ನಕಲು ಪ್ರತಿಗಳ ಜೊತೆ ಮೂಲ ಪತ್ರಗಳನ್ನು ತೆಗೆದುಕೊಂಡು ಹೋಗಲು ಮರೆಯದಿರಿ.

ಒಂದು ಯಶಸ್ವೀ ಅರ್ಜಿ ಸಲ್ಲಿಕೆಗಾಗಿ, ಇವೆಲ್ಲವೂ ಬೇಕಾಗುತ್ತವೆ. ಒಬ್ಬ ಬ್ಯಾಂಕ್ ನೌಕರ ನಿಮ್ಮ ಸ್ಥಳಕ್ಕೆ ಬಂದು ನಿಮಗೆ ಅರ್ಜಿ ಪ್ರಕ್ರಿಯಯಲ್ಲಿ ಸಹಾಯ ಮಾಡುವರು.

ಕ್ರೆಡಿಟ್ ಕಾರ್ಡ್ ಅನ್ನು ಜವಾಬ್ದಾರಿಯುತವಾಗಿ ಉಪಯೋಗಿಸುವುದು ಹೇಗೆ

ಎಲ್ಲಾ ವಸ್ತುಗಳಿಗೂ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡುವ ಅಭ್ಯಾಸಕ್ಕೆ ಬೀಳುವುದು ಸುಲಭವಾಗಿದೆ. ನಿಮ್ಮ ಆದ್ಯತೆ ಕ್ಯಾಶ್  ಒಯ್ಯದೇ ಇರುವುದು ಆಗಿರಲಿ ಅಥವಾ ಖರ್ಚಿನ ಸಮಯದಲ್ಲಿ ಸಿಗುವ ಬಹುಮಾನಗಳು ಆಗಿರಲಿ, ಇದೊಂದು ಪಾವತಿಯ ಶೀಘ್ರ ಹಾಗೂ ಸರಳ ವಿಧಾನವಾಗಿದೆ.

ಆದರೆ ನಿಮ್ಮ ಇತರ ಕ್ರೆಡಿಟ್ ಕಾರ್ಡ್ ಬಳಕೆಯ ನಡವಳಿಕೆಯ ಬಗ್ಗೆ ಏನು? ನಿಮ್ಮ ಕ್ರೆಡಿಟ್ ಕಾರ್ಡ್ ನ ಬಳಕೆ ಹೇಗೆ ಆಗುತ್ತಿದೆ ಸಹಾಯವಾಗುವಂತೆಯೇ ಅಥವಾ ನಿಮ್ಮ ಕ್ರೆಡಿಟ್ ಗೆ ಹಾನಿಯಾಗುವಂತೆಯೇ?

ಕ್ರೆಡಿಟ್ ಕಾರ್ಡ್ ಅನ್ನು ಜವಾಬ್ದಾರಿಯುತವಾಗಿ ಉಪಯೋಗಿಸಲು ಇಲ್ಲಿ ಕೆಲವು ಸಲಹೆಗಳಿವೆ:

  • ನಿಮ್ಮ ಬಿಲ್ ಗಳನ್ನು ಸಮಯದಲ್ಲಿ ಪಾವತಿಸಿ

ಕ್ರೆಡಿಟ್ ಕಾರ್ಡ್ ಹೊಂದಿರುವ ಪ್ರಮುಖ ಅಂಶವು ನಿಯಮಿತ ಪಾವತಿ ಮಾಡುವುದಾಗಿದೆ. ಇದರಿಂದ ನೀವು ನಿಮ್ಮ ಕ್ರೆಡಿಟ್ ಸ್ಕೋರ್ ಗೆ ಹಾನಿ ಮಾಡುವ, ದಂಡಗಳನ್ನು ಹಾಗೂ ಪೆನಲ್ಟೀ ಎಪಿಆರ್ ಗಳನ್ನು ತಪ್ಪಿಸಬಹುದು. ನಿಮ್ಮ ಬಿಲ್ ಸರಿಯಾದ ಸಮಯದಲ್ಲಿ ಪಾವತಿಯಾಗಿದೆ ಎಂದು ಖಚಿತಪಡಿಸಲು ನೀವು ಆಟೋಪೇ ಅನ್ನು ಬಳಸಬಹುದು ಅಥವಾ ರಿಮೈಂಡರ್ ಸೆಟ್ ಮಾಡಬಹುದು.

  • ಮಿತಿ ಮೀರಿ ಖರ್ಚು ಮಾಡಬೇಡಿ

ಅವರ ಕ್ರೆಡಿಟ್ ಕಾರ್ಡನ್ನು ಸರಿಯಾಗಿ ನಿರ್ವಹಿಸದೆ ಜನರು ಹೆಚ್ಚು ಖರ್ಚು ಮಾಡುವ ಕಡೆಗೆ ಆಕರ್ಷಕವಾಗುವುದು ಸ್ವಾಭಾವಿಕವೇ, ಆದರೆ ಸರಿಯಾದ ಬಜೆಟಿಂಗ್ ನಿಂದ ನೀವು ಸಾಲವನ್ನು ತಪ್ಪಿಸಬಹುದು. ಖರೀದಿಯ ಸಮಯದಲ್ಲಿ ನಿಮ್ಮ ಕೈಗೆಟಕುವಂತದ್ದು ಏನಿರತ್ತದೆಯೋ ಅದರ ಮೇಲೆ ಮಾತ್ರ ಖರ್ಚು ಮಾಡಿ- ಹೀಗೆ ಮಾಡಿದರೆ, ನಿಮ್ಮ ಬಾಕಿಯನ್ನು ನೀವು ಪಾವತಿಸಬಹುದು ಎಂಬ ಅರಿವು ನಿಮಗಿರುತ್ತದೆ. ಹಾಗೂ, ನಿಮ್ಮ ಬಳಿ ಬಹುಮಾನದ ಕಾರ್ಡ್ ಇದ್ದರೆ, ಕೇವಲ ಪಾಯಿಂಟ್ ಗಳಿಕೆಗಾಗಿ ಅತಿಯಾಗಿ ಖರ್ಚು ಮಾಡಬೇಡಿ- ನಿಮ್ಮ ಬೆಳೆಯುತ್ತಿರುವ ಸಾಲ ನಿಮ್ಮ ಎಲ್ಲಾ ಪಾಯಿಂಟ್ ಗಳನ್ನು ರದ್ದುಗೊಳಿಸುತ್ತದೆ.

  • ನಿಮ್ಮ ಕ್ರೆಡಿಟ್ ವರದಿ ಹಾಗೂ ಸ್ಕೋರ್ ಅನ್ನು ಪರಿಶೀಲಿಸಿ

ನಿಯಮಿತವಾಗಿ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸುವುದು ಒಂದು ಉತ್ತಮ ಅಭ್ಯಾಸವಾಗಿದ್ದು, ಇದರಿಂದ ಆರೋಗ್ಯಕರ ಕ್ರೆಡಿಟ್ ಅಭ್ಯಾಸಗಳನ್ನು ಬೆಳೆಸಬಹುದು. ಎಲ್ಲವೂ ಸರಿಯಾಗಿದೆ ಹಾಗೂ ನಿಮ್ಮ ಹೆಸರಿನಲ್ಲಿ ಯಾವುದೇ ಅನಧಿಕೃತ ಖಾತೆಯಿಲ್ಲ ಎಂದು ಖಚಿತ ಪಡಿಸಲು ಕೆಲ ತಿಂಗಳಿಗೊಮ್ಮೆ ನಿಮ್ಮ ಕ್ರೆಡಿಟ್ ವರದಿಯನ್ನು ಪರಿಶೀಲಿಸುತ್ತಿರಿ.

  • ನಿಮ್ಮ ಲೆಕ್ಕದ ಪೂರ್ತಿ ಪಾವತಿಯನ್ನು ಮಾಡಿ

ನಿಮ್ಮ ಲೆಕ್ಕವನ್ನು ಯಾವತ್ತಿಗೂ ಪೂರ್ತಿಯಾಗಿ ಪಾವತಿ ಮಾಡಿ ಯಾವುದೇ ಬಾಕಿಯನ್ನು ಇಡದೇ ಇರುವುದು ಉತ್ತಮ ವಿಧಾನವಾಗಿದೆ. ನೀವು ನಿಮ್ಮ ಬಾಕಿ ಪಾವತಿ ಮಾಡದಿದ್ದರೆ, ನಿಮಗೆ ಬಡ್ಡಿ ವಿಧಿಸಲಾಗುತ್ತದೆ(ಪ್ರಚಾರದ ಭಾಗವಾಗದೇ ಹೋದರೆ) ಹಾಗೂ ನೀವು ಸಾಲದಲ್ಲಿ ಬೀಳುತ್ತೀರಿ. ಇದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೂ ಕೆಟ್ಟ ಪರಿಣಾಮವನ್ನು ಬೀರುತ್ತದೆ. 

  • ನಿಮ್ಮ ಕಾರ್ಡ್ ಅನ್ನು ಸುರಕ್ಷಿತವಾಗಿಡಿ

 ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ಎಲ್ಲೆಂದೆಲ್ಲಿ ಬಿಟ್ಟುಬಿಡಬೇಡಿ ಅಥವಾ ಗೆಳೆಯರಿಗೆ ನೀಡಬೇಡಿ; ಇವೆಲ್ಲಾ ನಿಮ್ಮ ಯಾವ ಸಹಾಯಕ್ಕೂ ಬರುವುದಿಲ್ಲ. ನಿಮ್ಮ ಕಾರ್ಡ್ ನಿಮ್ಮ ಜವಾಬ್ದಾರಿಯಾಗಿದೆ ಹಾಗೂ ನೀವದನ್ನು ಎಚ್ಚರಿಕೆಯೊಂದಿಗೆ ಬಳಸಬೇಕು. ನಿಮ್ಮ ಕಾರ್ಡ್ ಕಳೆದುಹೋದರೆ ಅಥವಾ ಕಳ್ಳತನವಾದರೆ, ತಕ್ಷಣ ನಿಮ್ಮ ಕಾರ್ಡ್ ಪ್ರೊವೈಡರ್ ಗೆ ತಿಳಿಸಿ ಅದು ಸಿಗುವವರೆಗೆ ನಿಮ್ಮ ಖಾತೆಯನ್ನು ಹೋಲ್ಡ್ ನಲ್ಲಿಡಿ.

  • ಬಳಕೆಯ ದರವನ್ನು ಕಡಿಮೆ ಇರಿಸಿ

ನಿಮ್ಮ ಬಳಿ ಇರುವ ಕ್ರೆಡಿಟ್ ಅನ್ನು ಉಪಯೋಗಿಸುವ ಪರ್ಸಂಟೇಜ್, ಅದರ ಬಳಕೆಯಾಗಿದ್ದು, ಇದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ. ಕಡಿಮೆ ಬಳಕೆ ದರವನ್ನು ಕಾಪಾಡುವುದು ಮುಖ್ಯವಾಗಿದೆ. ಇಲ್ಲವಾದರೆ ನಿಮಗೆ ಕ್ರೆಡಿಟ್ ಕಾರ್ಡ್ ನೀಡಿದವರು ಅಪಾಯವನ್ನು ಗ್ರಹಿಸುತ್ತಾರೆ. ನೀವು ಹೆಚ್ಚಿನ ಬಳಕೆಯನ್ನು ಮುಂದುವರಿಸಿದರೆ ಸಾಲಕ್ಕೆ ಸಿಲುಕುತ್ತೀರಿ ಎಂದು ಅವರು ಚಿಂತಿಸುತ್ತಾರೆ.

  • ಮಾಸಿಕ ಸ್ಟೇಟ್ಮೆಂಟ್ ಗಳ ಮೇಲೆ ಗಮನವಿಡಿ

ಕೇವಲ ನಿಮ್ಮ ಮಾಸಿಕ ಸ್ಟೇಟ್ಮೆಂಟ್ ಗಳನ್ನು ಪರಿಶೀಲಿಸುವುದರಿಂದ, ನಿಮ್ಮ ಕ್ರೆಡಿಟ್ ಕಾರ್ಡ್ ಕಂಪನಿಯು ಪತ್ತೆ ಹಚ್ಚದ ವಂಚನೆಯನ್ನು ನೀವು ಕಂಡುಹಿಡಿಯಬಹುದು.  ನಿಮ್ಮ ಖಾತೆಯು ಮೋಸದಿಂದ ಬಳಕೆಯಾಗುತ್ತಿರುವ ಸಂಶಯ ಮೂಡಿದ್ದಲ್ಲಿ ಬಹುತೇಕ ಸಂಸ್ಥೆಗಳು ನಿಮಗೆ ಸೂಚಿಸುತ್ತವೆ. ಆದರೆ ಪ್ರಶ್ನಾಹ ಚಟುವಟಿಕೆಯ ಪ್ರತೀ ಕ್ಷಣವನ್ನು ಅವರು ಹಿಡಿಯಲಾರರು.

  • ಮುಂಗಡ ಕ್ಯಾಶ್ ಗಾಗಿ ಮನವಿ ಸಲ್ಲಿಸುವುದು ಒಳ್ಳೆಯ ವಿಚಾರವಲ್ಲ

ಕ್ಯಾಶ್ ಅಡ್ವಾನ್ಸ್ ಗಳು ಭಾರೀ ಶುಲ್ಕ ಹಾಗೂ ಅಸ್ಪಷ್ಟ ನಿಯಮಗಳನ್ನು ಒಳಗೊಂಡಿದ್ದು, ಇದು ಸಾಲಕ್ಕೆ ಎಡೆ ಮಾಡಿಕೊಡುವುದರಿಂದ ಇದನ್ನೂ ಎಲ್ಲಾ ಸಮಯದಲ್ಲೂ ತಪ್ಪಿಸಬೇಕು. ನಿಮಗೆ ಹಣ ಬೇಕಾಗಿದ್ದರೆ,ವೈಯಕ್ತಿಕ ಸಾಲ ಒಳ್ಳೆಯ ಆಯ್ಕೆಯಾಗಿದೆ

 

ನನಗೆ ಕ್ರೆಡಿಟ್ ಕಾರ್ಡ್ ನ ಅಗತ್ಯವಿದೆಯೇ?

ಕ್ರೆಡಿಟ್ ಕಾರ್ಡ್ ಗೆ ಅರ್ಜಿ ಸಲ್ಲಿಸುವಾಗ ನಿಮಗೆ ಆತಂಕವಾಗಬಹುದು ಎಂದು ನಮಗೆ ಅರ್ಥವಾಗುತ್ತದೆ. ಸತ್ಯವೇನೆಂದರೆ ನೀವು ಕಾರ್ಡ್ ಕೊಳ್ಳಲು ಒಂದು ಸಮಯವಿರುತ್ತದೆ ಹಾಗೂ ಕಾರ್ಡ್ ಕೊಳ್ಳದೇ ಇರಲು ಒಂದು ಸಮಯವಿರುತ್ತದೆ.

ಈ ಎರಡು ಅಂಶಗಳ ಪರವಾಗಿಯೂ ಇಲ್ಲಿ ಕೆಲ ಸಲಹೆಗಳನ್ನು ನೀಡಲಾಗಿದೆ, ನಿಮ್ಮ ನಿರ್ಧಾರಕ್ಕೆ ನೆರವಾಗಲು.

ಯಾವಾಗ ನಾನು ಕ್ರೆಡಿಟ್ ಕಾರ್ಡ್ ಅನ್ನು ಕೊಳ್ಳಬೇಕು?

ಕ್ರೆಡಿಟ್ ಕಾರ್ಡ್ ಹೇಗೆ ಲಾಭದಾಯಕ ಎನ್ನಲು ಇಲ್ಲಿ ಕೆಲವು ಕಾರಣಗಳಿವೆ:

  • ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಮರುಸ್ಥಾಪಿಸಲು ಅಥವಾ ವೃದ್ಧಿಸಲು

ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ವೃದ್ಧಿಸಲು ಕ್ರೆಡಿಟ್ ಕಾರ್ಡ್ ಏಕೈಕ ವಿಧಾನವಾಗದೇ ಇದ್ದರೂ ಒಳ್ಳೆಯ ವಿಧಾನವಾಗಿದೆ. ನೀವು ನಿಮ್ಮ ಕಾರ್ಡನ್ನು ಆಗಾಗ ಬಳಸುತ್ತಾ ಸರಿಯಾದ ಸಮಯದಲ್ಲಿ ಪಾವತಿಗಳನ್ನು ಮಾಡಿದರೆ, ನಿಮ್ಮ ಕ್ರೆಡಿಟ್ ಸ್ಕೋರ್ ನಲ್ಲಿ ವೃದ್ಧಿಯಾಗುತ್ತದೆ.

  • ದೊಡ್ಡದೇನಾದರೊಂದನ್ನು ಖರೀದಿಸಿ ಸಮಯದೊಂದಿಗೆ ಅದರ ಪಾವತಿಯನ್ನು ಮಾಡಿ

ಖರೀದಿ ನಿಮ್ಮ ಕ್ರೆಡಿಟ್ ಕಾರ್ಡ್ ಹೊಂದಿರುವುದಕ್ಕೆ ಮುಖ್ಯ ಕಾರಣವಾಗಿದ್ದರೆ, ಅದು ಅಗತ್ಯವೇ ಎಂದು ಪರಿಗಣಿಸಿ. ಹಾಗೂ, ಸರಿಯಾದ ಸಮಯದಲ್ಲಿ ನೀವು ಅದರ ಪಾವತಿಯನ್ನು ಮಾಡಬೆಲ್ಲಿರೇ ಎಂದು ಖಚಿತಪಡಿಸಿ. ಪಾಯಿಂಟ್ ಗಳನ್ನು ಸಂಗ್ರಹಿಸಿ. ನೀವು ನಿಮ್ಮ ಕ್ರೆಡಿಟ್ ಕಾರ್ಡ್ ಖರೀದಿಗಳ ಮೇಲೆ ಕ್ಯಾಶ್ ಬ್ಯಾಕ್ ಅನ್ನು ಗಳಿಸಬಹುದು, ಇದನ್ನು ನೀವು ಬ್ಯಾಂಕ್ ಠೇವಣಿ ಅಥವಾ ಸ್ಟೇಟ್ಮೆಂಟ್ ಕ್ರೆಡಿಟ್ ಗಳೊಂದಿಗೆ ವಿನಿಮಯ ಮಾಡಬಹುದು. ನೀವು ಪಾಯಿಂಟ್ ಗಳು ಹಾಗೂ ಮೈಲ್ ಗಳನ್ನೂ ಸಂಪಾದಿಸಿ, ಪ್ರಯಾಣ, ಗಿಫ್ಟ್ ಕಾರ್ಡ್ ಹಾಗೂ ಇತರ ವಿಷಯಗಳಿಗಾಗಿ ಬಿಡಿಸಿಕೊಳ್ಳಬಹುದು.

  • ಹೆಚ್ಚಿನ ಭದ್ರತೆಯ ವಿಧಾನದೊಂದಿಗೆ ಪಾವತಿ ಮಾಡಿ

ನೀವು ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ ಅನ್ನು ಪಾವತಿಸಿದಾಗ ಮಾತ್ರ ನಿಮ್ಮ ಹಣ ನಿಮ್ಮ ಬ್ಯಾಂಕ್ ಖಾತೆಯನ್ನು ಬಿಡುತ್ತದೆ. ಆದ್ದರಿಂದಲೇ, ಕ್ರೆಡಿಟ್ ಕಾರ್ಡ್ ಬಳಕೆಯು ಡೆಬಿಟ್ ಕಾರ್ಡ್ ಬಳಕೆಯಿಂದ ಹೆಚ್ಚು ಭದ್ರವಾಗಿದೆ. ನೀವು ಡೆಬಿಟ್ ಕಾರ್ಡ್ ಅನ್ನು ಬಳಸಿದಾಗ ಹಣವನ್ನು ತಕ್ಷಣವೇ ತೆಗೆಯಲಾಗುತ್ತದೆ. 

ಮತ್ತೊಂದೆಡೆ, ಕ್ರೆಡಿಟ್ ಕಾರ್ಡ್ ಪಡೆಯುವುದನ್ನು ಮುಂದೂಡಿ, ನೀವು

  • ನಿಮ್ಮ ಖರ್ಚುಗಳನ್ನು ಪತ್ತೆಹಚ್ಚುವುದರಲ್ಲಿ ನೀವು ಕಷ್ಟಪಡುತ್ತಿದ್ದರೆ.

ನಿಮಗೆ ಅತಿಯಾಗಿ ಖರ್ಚು ಮಾಡುವ ಅಭ್ಯಾಸವಿದ್ದರೆ, ಕ್ರೆಡಿಟ್ ಕಾರ್ಡ್ ಬಳಕೆಯನ್ನು ಮಾಡದಿರಿ. ಪಾವತಿಸಲು ಸಾಧ್ಯವಾಗದ ದೊಡ್ಡ ಸಾಲಕ್ಕೆ ನೀವು ಸಿಲುಕಬಹುದು. ಡೆಬಿಟ್ ಕಾರ್ಡ್ ಬಳಕೆ ಮಾಡಿ ಅಥವಾ ನಿಮ್ಮ ಖರ್ಚಿನ ಸಮಸ್ಯೆಯನ್ನು ಬಗೆಹರಿಸಿ.

  • ನಿಮ್ಮ ಮಾಸಿಕ ಸಾಲಗಳ ಮೇಲೆ ದೊಡ್ಡ ಪಾವತಿಗಳನ್ನು ಮಾಡುವಲ್ಲಿ ನೀವು ಅಸಮರ್ಥರಾಗಿದ್ದರೆ

ನಿಮ್ಮ ಬಾಕಿ ಎಷ್ಟು ಸಮಯ ತೆರೆದಿರುತ್ತದೆಯೋ, ಅಷ್ಟೇ ಬಡ್ಡಿ ಸೇರಿಕೊಳ್ಳುತ್ತದೆ. ದೀರ್ಘಾವಧಿಯಲ್ಲಿ, ಬಡ್ಡಿಯೂ ಬಲು ದುಬಾರಿಯಾಗಬಹುದು.

  • ನೀವು ಉತ್ತಮ ಕ್ರೆಡಿಟ್ ಸ್ಕೋರ್ ಅನ್ನು ಹೊಂದದೇ ಇದ್ದರೆ.

ನೀವು ಕಾರ್ಡ್ ಗಾಗಿ ಅರ್ಜಿ ಸಲ್ಲಿಸುವ ಮುಂಚೆ, ನಿಮ್ಮ ಕ್ರೆಡಿಟ್ ಸ್ಸ್ಕೋರ್ ಅನ್ನು ಪರಿಶೀಲಿಸಿ; ನಾಮಂಜೂರಾಗುವುದು ಅಷ್ಟೇನು ಮೋಜಿನ ವಿಷಯವಲ್ಲ. ಇದರ ಜೊತೆ, ಹಲವು ಕ್ರೆಡಿಟ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸುವುದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

ಮುಖ್ಯ ವಿಷಯ

ನಿಮ್ಮ ಮೊದಲ ಕ್ರೆಡಿಟ್ ಕಾರ್ಡ್ ಅನ್ನು ಪಡೆಯುವುದು ಒಂದು ರೋಚಕ ಅನುಭವವಾಗಿದೆ. ಆದರೆ ಒಮ್ಮೆ ಒಂದನ್ನು ನೀವು ಪಡೆದ ಮೇಲೆ ಉತ್ತಮ ಆರ್ಥಿಕ ಅಭ್ಯಾಸಗಳನ್ನು ಹೊಂದುವ ಸಂಕಲ್ಪವನ್ನು ಮಾಡಬೇಕಾಗಿದೆ. 

ನಿಮ್ಮ ಖರ್ಚಿನ ಮೇಲೆ ಗಮನವಿಡಿ, ಪ್ರತೀ ತಿಂಗಳು ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಪೂರ್ತಿಯಾಗಿ ಪಾವತಿಸಿ ಹೆಚ್ಚುವರಿ ಕ್ರೆಡಿಟ್ ಕಾರ್ಡ್ ಪ್ರಮಾದಗಳನ್ನು ತಪ್ಪಿಸಿ.

ಕ್ರೆಡಿಟ್ ಕಾರ್ಡ್ ಬಳಕೆಯಲ್ಲಿ ಪರಿಣತಿಯನ್ನು ಹೊಂದುವ ರಹಸ್ಯಗಳು ಇದಾಗಿದ್ದವು, ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಹೆಚ್ಚಿಸುವುದು ಹಾಗೂ ನಿಮ್ಮ ಆರ್ಥಿಕ ಆಯ್ಕೆಗಳನ್ನು ವಿಸ್ತರಿಸುವುದು.

Subscribe to our newsletter
Thank you! Your submission has been received!
Oops! Something went wrong while submitting the form.