Playstore Icon
Download Jar App

ಅಕ್ಷಯ ತೃತೀಯ ಹಾಗೂ ಚಿನ್ನ : ಸಂಬಂಧವೇನು?

October 27, 2022

ಅಕ್ಷಯ ತೃತೀಯದಂದು ಜನರು ಚಿನ್ನವನ್ನೇಕೆ ಖರೀದಿಸುತ್ತರೆ ಹಾಗೂ ಹೆಚ್ಚಿನ ಜನರು ಈ ದಿನದಂದು ಹೊಸ ವ್ಯವಹಾರಗಳನ್ನೇಕೆ ಆರಂಭಿಸುತ್ತಾರೆ? ಇದೊಂದು ಶುಭ ದಿನ ಎಂದು ಎಲ್ಲರಿಗೂ ತಿಳಿದಿದೆ ಆದರೆ ಕಾರಣ ಗೊತ್ತೇ? ಅನ್ವೇಷಣೆ ಮಾಡೋಣ. 

ಅಕ್ಷಯ ತೃತೀಯ, ಅಥವಾ ಅಕ್ಖಾ ತೀಜ್ ನ ಇನ್ನೊಂದು ಅರ್ಥವೇ ಚಿನ್ನದ ಖರೀದಿಯಾಗಿದೆ.

ಇದನ್ನು ಭಾರತೀಯ ವೈಷಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಆಚರಿಸಲಾಗುತ್ತದೆ. 

ಇದನ್ನು, ಹಿಂದೂ ಮನೆಮಂದಿಗಳಲ್ಲಿ ಆನಂದದಿಂದ ಕೂಡಿದ ಶುಭದಿನಗಳಲ್ಲಿ ಒಂದಾಗಿ ಪರಿಗಣಿಸಲಾಗುತ್ತದೆ. ನೀವು ಇದನ್ನು ಉಲ್ಲಾಸದಿಂದ ಆಚರಿಸುತ್ತಿರಬಹುದು ಅಥವಾ ಈ ಹಬ್ಬದ ಸಮಯದಲ್ಲಿ ಜಾಲತಾಣಗಳಲ್ಲಿ ಹರಿದಾಡುವ ಚಿನ್ನದ ಜಾಹೀರಾತುಗಳಿಂದಾಗಿ ಇದರ ಬಗ್ಗೆ ತಿಳಿದುಕೊಂಡಿರಬಹುದು.

ಈ ದಿನವನ್ನು ಹೊಸ ಅರಂಭಗಳಿಗೆ ಮೀಸಲಾಗಿಡಲಾಗುತ್ತದೆ ಎಂಬ ನಂಬಿಕೆ ಇದೆ - ಹೊಸ ಸಮಾರಂಭ, ನಿರ್ಮಾಣ ಅಥವಾ ಉದ್ಯಮ ಇತ್ಯಾದಿ. 

ಅಂದು ಆರಂಭವಾದದ್ದು ಪ್ರತಿದಿನವೂ ಅಭಿವೃದ್ಧಿ ಹೊಂದಿ ಕನಿಷ್ಠ ವಿಘ್ನಗಳಿಂದ ಕೂಡಿರುತ್ತದೆ.

ಅಕ್ಷಯ ತೃತೀಯದ ಮಹತ್ವ :

ಈ ಶುಭದಿನದಂದು : 

  • ಭಗವಂತ ಪರಷುರಾಮ(ಭಗವಾನ್ ವಿಷ್ಣುವಿನ ಆರನೇ ಅವತಾರ) ನ ಜನ್ಮವಾಯಿತು.
  • ಭಗವಂತ ಗಣೇಶ ಹಾಗೂ ವೇದವ್ಯಾಸರು “ಮಹಾಭಾರತ”ವನ್ನು ಬರೆಯಲು ಆರಂಭಿಸಿದರು.
  • ಶ್ರೀ ಕೃಷ್ಣ ಪಾಂಡವರಿಗೆ “ಅಕ್ಷಯ ತೃತೀಯ” ಎಂಬ ಪಾತ್ರೆಯನ್ನು ನೀಡಿದ್ದರು, ಇದು ವನವಾಸದ ಸಮಯದಲ್ಲಿ ಎಂದಿಗೂ ಬರಿದಾಗದೆ ಕೇಳಿದಷ್ಟು ಭೋಜನವನ್ನು ನೀಡುತ್ತಿತ್ತು.
  • ಗಂಗಾನದಿಯು ಸ್ವರ್ಗದಿಂದ ಇಳಿಯಿತು ಹಾಗೂ ದೇವಿ ಅನ್ನಪೂರ್ಣೆಯ ಜನನವಾಯಿತು.
  • ಭಗವಂತ ಶಿವನನ್ನು ಪ್ರಾರ್ಥಿಸಿದ ಕುಬೇರ ಹಾಗೂ ದೇವಿ ಲಕ್ಷ್ಮಿಗೆ ಅವರ ಸಂಪತ್ತು ಹಾಗೂ ಅದರ ಪಾಲಕ ಸ್ಥಾನ ದೊರೆಯಿತು.
  • ಜೈನರಿಗೆ, ತೀರ್ಥಂಕರ ರಿಶಭರ ಒಂದು ವರ್ಷ ಕಬ್ಬಿನ ರಸ ಕುಡಿದು ಮಾಡಿದ್ದ ಉಪವಾಸವು ಕೊನೆಯಾದ ದಿನ.

“ಅಕ್ಷಯ” ಪದದ ಅರ್ಥ “ಅಮರ” ಎಂದು ಆಗಿರುವ ಕಾರಣಕ್ಕಾಗಿ, ಈ ಹಬ್ಬದ ದಿನ ಖರೀದಿಸಿದ ಚಿನ್ನವು ಅದೃಷ್ಟ ತಂದು ಅವರಿಗೆ ಅಪಾರ ಸಂಪತ್ತನ್ನು ನೀಡುತ್ತದೆ ಎಂದು ಜನರ ನಂಬಿಕೆಯಾಗಿದೆ.

ಈ ದಿನದಂದು ಜನರು ಚಿನ್ನ, ಬೆಳ್ಳಿ  ಹಾಗೂ ಬೆಲೆಬಾಳುವ ಆಭರಣಗಳನ್ನು ಕೊಳ್ಳಲು ಆಭರಣ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಲ್ಲುವುದನ್ನು ನೀವು ನೋಡಿರಬೇಕು.

ದೇಶದಾದ್ಯಂತ ಚಿನ್ನದ ಮಾರಾಟ ದರವು ಈ ಸಮಯದಲ್ಲಿ ವರ್ಷದ ತುದಿಯಲ್ಲಿರುತ್ತದೆ.

ಒಂದು ಹೂಡಿಕೆಯಾಗಿ ಚಿನ್ನ ಹೇಗಿರುತ್ತದೆ?

ಆರ್ಥಿಕ ದೃಷ್ಟಿಯಿಂದ ನೋಡುವುದಾದರೆ, ಚಿನ್ನವನ್ನು ಭದ್ರತೆ ಮತ್ತು ಆಪತ್ಕಾಲವನ್ನು ತಪ್ಪಿಸುವ ಸಂಕೇತವಾಗಿ ಹಾಗೂ ಜಾಣ್ಮೆಯ ಹೂಡಿಕೆಯಾಗಿ ಪರಿಗಣಿಸಲಾಗುತ್ತದೆ.

ಈ ಹಬ್ಬವು ವರ್ಷದಲ್ಲಿ ಒಂದು ಬಾರಿ ಆಚರಿಸುವುದರಿಂದ, ಅಕ್ಷಯ ತೃತೀಯವು ಚಿನ್ನದಲ್ಲಿ ಹೂಡಿಕೆ ಮಾಡಲು ಒಂದು ಒಳ್ಳೆಯ ಸಮಯವಾಗಿದೆ.

ಇದರ ರಿಟರ್ನ್ಸ್ ಹೆಚ್ಚಾಗಿ ವರ್ಷದಲ್ಲಿ 5% ಇರುತ್ತದೆ, ಹಾಗೂ ಕೆಲವು ವರ್ಷಗಳಲ್ಲಿ ಇದು ಹೆಚ್ಚಾಗಬಹುದು ಅಥವಾ ಕಡಿಮೆಯಾಗಬಹುದು.

ಭಾರತದ ಎಲ್ಲಾ ಹೂಡಿಕೆ ಕ್ಷೇತ್ರದಲ್ಲೂ ಚಿನ್ನವು ಹೊಂದಿರಲೇಬೇಕಾದ ಸ್ವತ್ತಾಗಿದೆ. ಇದರಲ್ಲಿ ಹೂಡಿಕೆ ಮಾಡಲು ಸರಿಯಾದ ಸಮಯವೆಂಬುವುದೇ ಇಲ್ಲ.

ನೀವು ವರ್ಷದ ಯಾವ ದಿನ ಬೇಕಾದರೂ ಇದನ್ನು ಮಾಡಬಹುದು. ಇದು ಹಣದುಬ್ಬರ ಹಾಗೂ ಇತರ ಹೆಚ್ಚಿನ ಅಪಾಯವಿರುವ ಹೂಡಿಕೆಗಳಾದ ಮ್ಯೂಚುವಲ್ ಫಂಡ್ಸ್ ಹಾಗೂ ಷೇರುಗಳ ಪರಿಣಾಮಗಳನ್ನು ಸರಿಪಡಿಸುತ್ತದೆ.

ಅಸ್ಥಿರ ಮಾರುಕಟ್ಟೆಗಳಲ್ಲೂ ಇದು ಚೆನ್ನಾಗಿ ನಿರ್ವಹಿಸಿ ಅಪಾಯದ ಅಂಶಗಳನ್ನು ಉತ್ತಮಗೊಳಿಸುವ ಸಾಮರ್ಥ್ಯವನ್ನೂ ಹೊಂದಿದೆ. ಬೇರೆ ಸ್ವತ್ತುಗಳು ಇಳಿಮುಖವಾಗುವಾಗ, ಚಿನ್ನ ಒಂದೇ ಬೆಳೆಯುತ್ತಿರುತ್ತದೆ.

ಈಗ, ನೀವು ಚಿನ್ನವನ್ನು ಹೇಗೆ ಖರೀದಿಸುವುದು ಎಂದು ಯೋಚಿಸುತ್ತಿದ್ದರೆ, ವಿಶೇಷವಾಗಿ ಹೊರಗಡೆ ಜನಸಂದಣಿ ಇರುವ ಸ್ಥಳಗಳಿಗೆ ಹೋಗಿ ಖರೀದಿಮಾಡಲು ಭಯವಾಗುವ ಈ ಪಿಡುಗಿನ ಸಮಯದಲ್ಲಿ, ನಮ್ಮ ಬಳಿ ನಿಮಗಾಗಿ ಒಂದು ಉತ್ತಮ ಸಲಹೆ ಇದೆ. ಚಿನ್ನ ಚಿನ್ನವೇ ಆಗಿರುತ್ತದೆ, ಒಪ್ಪಿಗೆಯೇ?

ಹಿಂದಿನ ಕಾಲದಲ್ಲಿ ನೀವು ಕೇವಲ ಚಿನ್ನವನ್ನು ಅದರ ಭೌತಿಕ ರೂಪದಲ್ಲಿ(ಆಭರಣ, ನಾಣ್ಯಗಳು, ಚಿನ್ನದ ಬಿಲ್ಲೆಗಳು) ಮಾತ್ರ ಖರೀದಿಸಬಹುದಿತ್ತು, ಈಗ ನಿಮಗೆ ಡಿಜಿಟಲ್ ಗೋಲ್ಡ್ ಕೊಳ್ಳುವ ಸೌಲಭ್ಯವಿದೆ.

ಹೌದು. ಹಾಗಾದರೆ ಅದನ್ನೇ ಏಕೆ ಮಾಡಬರದು? ನಿಜ ಹೇಳಬೇಕೆಂದರೆ, ಡಿಜಿಟಲ್ ಗೋಲ್ಡ್ ನಿಮ್ಮ ಮೊದಲ ಆಯ್ಕೆಯಾಗಿರಬೇಕು, ಭೌತಿಕ ಚಿನ್ನವಲ್ಲ , ಏಕೆ? ತಿಳಿದುಕೊಳ್ಳಿ.

ಡಿಜಿಟಲ್ ಗೋಲ್ಡ್ ಎಂದರೇನು?

ಡಿಜಿಟಲ್ ಗೋಲ್ಡ್ ಭೌತಿಕ ಚಿನ್ನಕ್ಕೆ ಒಂದು ಪರ್ಯಾಯವಾಗಿದೆ ಅಷ್ಟೇ. ಇದು ವಿನಿಮಯ ದರದ ಗೊಂದಲಗಳು ಮತ್ತು ಬದಲಾವಣೆಗಳಿಂದ ಮುಕ್ತವಾಗಿದ್ದು ಹೂಡಿಕೆದಾರರಿಗೆ ವಿಶ್ವದಾದ್ಯಂತ ಭೌತಿಕ ಚಿನ್ನವನ್ನು ಮುಟ್ಟದೆಯೇ ಸುಲಭವಾಗಿ ವ್ಯಾಪಾರ ಮಾಡಲು ಅನುಕೂಲ ಮಾಡಿಕೊಡುತ್ತದೆ.

ಭಾರತದಲ್ಲಿ ನೀವು ಡಿಜಿಟಲ್ ಗೋಲ್ಡ್ ಅನ್ನು ಹಲವಾರು ಆಪ್ ಹಾಗೂ ವೆಬ್ಸೈಟ್ ಗಳಿಂದ ಖರೀದಿಸಬಹುದು; ಆದರೆ ಕೇವಲ  3 ಚಿನ್ನದ ಕಂಪನಿಗಳು ನಿಮ್ಮ ಚಿನ್ನವನ್ನು ಇಟ್ಟುಕೊಳ್ಳುತ್ತವೆ, ಔಗ್ಮಂಟ್ ಗೋಲ್ಡ್ ಲೀ.., ಡಿಜಿಟಲ್ ಗೋಲ್ಡ್ ಇಂಡಿಯಾ ಪ್ರೈ ಲೀ..-ಸೇಫ್ ಗೋಲ್ಡ್ ಮತ್ತು ಎಮ್ ಎಮ್ ಟಿ ಸಿ - ಪಿ ಎ ಎಂ ಪಿ ಇಂಡಿಯಾ ಪ್ರೈ ಲೀ..

 ಇದು ಚಿನ್ನದಲ್ಲಿ ಆನ್ಲೈನ್ ಆಗಿ ಹೂಡಿಕೆ ಮಾಡುವ ಭದ್ರ, ಅನುಕೂಲಕರ ಹಾಗೂ ಕಡಿಮೆ ದರದ ವಿಧಾನವಾಗಿದ್ದು, ಇದಕ್ಕೆ ಹೆಚ್ಚುವರಿ ಸಂಗ್ರಹಣಾ ಸ್ಥಳ ಹಾಗೂ ಸಾಗಾಣಿಕೆಯ ದರದ ಅಗತ್ಯವೂ ಇರುವುದಿಲ್ಲ.

ನಿಮ್ಮ ಖಾತೆಯಲ್ಲಿ ಜಮೆಯಾಗುವ ಪ್ರತೀ ಚಿನ್ನದ ಗ್ರಾಮಿಗೂ ನಿಮ್ಮ ಹೆಸರಿರುವ ಭೌತಿಕ ಚಿನ್ನವಿರುತ್ತದೆ ಹಾಗೂ ಇದನ್ನು ನಿಮ್ಮ ಮಾರಾಟದಾರನು ಭದ್ರಕೋಣೆಯಲ್ಲಿ ಸಂರಕ್ಷಿಸುತ್ತಾರೆ. 

ಇದರರ್ಥ ನಿಮಗೆ ಯಾವುದೇ ಸಮಯದಲ್ಲಿ ಯಾವುದೇ ಅಪಾಯವಿರುವುದಿಲ್ಲ. ನೀವು ಇನ್ವೆಸ್ಟ್ ಮಾಡಿದ್ದ ಆಪ್ ಮಾಯವಾದರೂ ನಿಮ್ಮ ಚಿನ್ನ ಸುರಕ್ಷಿತವಾಗಿಯೇ ಇರುತ್ತದೆ! ನಿಮಗೆ ಬೇಕಾದಾಗ ನೀವು ಹೊರನಡೆಯಬಹುದು ಕೂಡಾ, ನಿರಾಳವೆನಿಸುತ್ತದೆ ಅಲ್ಲವೇ?

ಚಿನ್ನ ಖರೀದಿಸಲು ಅಕ್ಷಯ ತೃತೀಯ ಶುಭ ಸಂದರ್ಭವಾದರೂ, ಈ ಧಾತುವನ್ನು ಖರೀದಿಸಲು ಸರಿಯಾದ ಸಮಯವೆಂಬುವುದೇ ಇಲ್ಲ. 

ಚಿನ್ನವು, ವರ್ಷದ ಯಾವುದೇ ಸಮಯದಲ್ಲಿ, ಒಂದು ಒಳ್ಳೆಯ ದೀರ್ಘಾವಧಿ ಹೂಡಿಕೆಯಾಗಿದೆ. ಹಾಗಾದರೆ ತಡಮಾಡದೆ ಇಂದೆ ನಿಮ್ಮ ಖರೀದಿ ಆರಂಭಿಸಿ ಇಲ್ಲಿರುವ ಜಾರ್ ಆಪ್ ನೊಂದಿಗೆ.

Subscribe to our newsletter
Thank you! Your submission has been received!
Oops! Something went wrong while submitting the form.