Playstore Icon
Download Jar App
Digital Gold

ಡಿಜಿಟಲ್ ಗೋಲ್ಡ್ ಬಗೆಗಿನ 9 ಸಾಮಾನ್ಯ ತಪ್ಪು ಕಲ್ಪನೆಗಳು – ಜಾರ್ ಆ್ಯಪ್

October 27, 2022

ಡಿಜಿಟಲ್ ಗೋಲ್ಡ್” ಚಿನ್ನದಲ್ಲಿ ಹೂಡಿಕೆ ಮಾಡುವ ಹೊಸ ಮಾರ್ಗವಾಗಿದೆ. ಆದ್ದರಿಂದ ಇದರ ಬಗ್ಗೆ ಹಲವು ಕಟ್ಟು ಕಥೆಗಳಿದ್ದು, ಸತ್ಯವನ್ನು ಕಂಡುಹಿಡಿಯೋಣ.

ಅನಾದಿ ಕಾಲದಿಂದಲೂ ಚಿನ್ನವು ತನ್ನದೇ ವಿಶಿಷ್ಟ ಸಾಮರ್ಥ್ಯದಿಂದ ವಯಸ್ಸೆನ್ನದೆ ಎಲ್ಲರಲ್ಲಿಯೂ ವ್ಯಾಮೋಹ ಮೂಡಿಸಿರುವುದು ನಮಗೆ ತಿಳಿದಿರುವ ಸಂಗತಿ.  ಇದು ಎಂದಿಗೂ ತನ್ನ ಬೆಡಗಿನಿಂದ ಹೊರಗುಳಿಯುವುದೇ ಇಲ್ಲ.   

ಮತ್ತು ಈಗ, ನಾವು ಚಿನ್ನವನ್ನು ಖರೀದಿಸುವ ಹೊಸ ಮಾರ್ಗವನ್ನು ಕಂಡುಕೊಂಡಿದ್ದೇವೆ : ಡಿಜಿಟಲ್ ಗೋಲ್ಡ್. 

ನೀವು ಚಿನ್ನವನ್ನು ಖರೀದಿಸಲು ಬಯಸಿದರೆ ಇದು ಸುರಕ್ಷಿತ, ಅತ್ಯಂತ ಅನುಕೂಲಕರ ಮತ್ತು ಪರಿಣಾಮಕಾರಿ ವೆಚ್ಚದ ಆಯ್ಕೆಯಾಗಿದೆ. 

ನಿಖರವಾದ 24K 99.9% ಶುದ್ಧ ಚಿನ್ನವನ್ನು ಭಾರತದ ಮೂರು ಚಿನ್ನದ ಬ್ಯಾಂಕುಗಳಾದ Augmont, MMTC - PAMP ಮತ್ತು SafeGold ನಲ್ಲಿ ನಿಮ್ಮ ಹೆಸರಿನಲ್ಲಿರುವ ವಾಲ್ಟ್ ನಲ್ಲಿ ನೀವು ಖರೀದಿಸುವ ಪ್ರತಿ ಗ್ರಾಂ ಚಿನ್ನವನ್ನು, ಸುರಕ್ಷಿತವಾಗಿ ಇಡಲಾಗುತ್ತದೆ.  

ಅಪ್ಲಿಕೇಶನ್ ನಲ್ಲಿರುವ ಬಟನ್‌ನನ್ನು ಒಂದು ಬಾರಿ ಕ್ಲಿಕ್ ಮಾಡುವುದರ ಮೂಲಕ ನೀವು ಚಿನ್ನವನ್ನು ಖರೀದಿಸಬಹುದು, ಮಾರಾಟ ಮಾಡಬಹುದು ಅಥವಾ ನಿಮ್ಮ ಮನೆಗೆ ತಲುಪಿಸಲು ವಿನಂತಿಸಬಹುದು.  

ಇದಲ್ಲದೆ ಡಿಜಿಟಲ್ ಗೋಲ್ಡ್ ಗೆ ಕನಿಷ್ಠ ಖರೀದಿಯ ಅಗತ್ಯವಿಲ್ಲ.  1 ರೂಪಾಯಿಯಿಂದ ಪ್ರಾರಂಭಿಸಬಹುದಾದ್ದರಿಂದ,   ಈಗ ಎಲ್ಲರೂ ಚಿನ್ನವನ್ನು ಖರೀದಿಸಬಹುದಾಗಿದೆ.  

ಆದರೆ ಜನರು ಈ ರೀತಿಯ ಖರೀದಿಗೆ ಹೊಸಬರಾಗಿರುವುದರಿಂದ ಡಿಜಿಟಲ್ ಗೋಲ್ಡ್ ಬಗ್ಗೆ ಅನೇಕ ತಪ್ಪು ಕಲ್ಪನೆಗಳು ಮತ್ತು ಅನುಮಾನಗಳು ಸುಳಿದಾಡುತ್ತಿವೆ.  

ಹಾಗಾಗಿ ನೀವು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಸಹಾಯ ಮಾಡಲು ಈ ಎಲ್ಲ ತಪ್ಪು ಕಲ್ಪನೆಗಳನ್ನು  ಒಂದೊಂದಾಗಿ  ಪರಿಹರಿಸೋಣ. 

1. ಚಿನ್ನ ದುಬಾರಿ ವಸ್ತುವಾಗಿದೆ.  ಚಿನ್ನದ ಹೂಡಿಕೆಗೆ ನೀವು ಶ್ರೀಮಂತರಾಗಿರಬೇಕು(Gold is an expensive commodity. You have to be wealthy to save in Gold)

ಸತ್ಯಾಂಶ:

  ಕನಿಷ್ಠ ಅಲ್ಲ!  ಜಾರ್ ಆ್ಯಪ್ ಅನ್ನು ಬಳಸಿ ಡಿಜಿಟಲ್ ಗೋಲ್ಡ್ ಅನ್ನು 1 ರೂಪಾಯಿಯ ಕಡಿಮೆ ಬೆಲೆಗೆ ಖರೀದಿಸಬಹುದು.  ಹೌದು, ನೀವು ಸರಿಯಾಗಿ ಓದಿದ್ದೀರಿ.  

ಅನೇಕ ಜನರು ಚಿನ್ನವನ್ನು ಅಂತಸ್ತಿನ ಸಂಕೇತವೆಂದು ಪರಿಗಣಿಸುತ್ತಾರೆ.  ಆದರೂ ಊಹೆಗೆ ವಿರುದ್ಧವಾಗಿ ನಿಮಗೆ ಬೇಕಾದಷ್ಟು ಹಣವನ್ನು ನೀವು ಹೂಡಿಕೆ ಮಾಡಬಹುದು. 

ಚಿನ್ನವನ್ನು ಕಡಿಮೆ ವೆಚ್ಚದಲ್ಲಿ ಪಡೆಯಬಹುದು ಮತ್ತು ಪರಿಣಾಮಕಾರಿ ವೆಚ್ಚದ ಹೂಡಿಕೆಯಾಗಿದೆ.  ಒಂದು ಕಾಲದಲ್ಲಿ ಕೈಗೆಟುಕದ ಅಮೂಲ್ಯ ಲೋಹವಾಗಿದ್ದ ಚಿನ್ನವು ಈಗ ಎಲ್ಲರಿಗೂ ಮತ್ತು ಎಲ್ಲೆಡೆಯೂ ವ್ಯಾಪಕವಾಗಿ ಲಭ್ಯವಿದೆ.  

2. ಆನಲೈನ್ ಚಿನ್ನ ಶುದ್ಧ ಚಿನ್ನವಲ್ಲ. ( Online Gold isn't pure Gold)

ಸತ್ಯಾಂಶ: 

ಜಾರ್ ನಲ್ಲಿ ಡಿಜಿಟಲ್ ಗೋಲ್ಡ್ 99.5% 24 ಕ್ಯಾರಟ್ ಶುದ್ಧತೆಯಿಂದ ಕೂಡಿದೆ.  ನೀವು ಡಿಜಿಟಲ್ ಗೋಲ್ಡ್ ಅನ್ನು ಖರೀದಿಸುವಾಗ Augmont, SafeGold ಮತ್ತು MMTC - PAMP  ಇಂಡಿಯಾ ಪ್ರೈವೆಟ್ ಲಿಮಿಟೆಡ್ ನಂತಹ ಪ್ರತಿಷ್ಠಿತ ಕಂಪನಿಗಳ ಚಿನ್ನವನ್ನು ಪಡೆಯಲು ಸಹಾಯ ಮಾಡುವ ಮಧ್ಯವರ್ತಿಗಳಿಂದ ಖರೀದಿಸುವಿರಿ. ಆದ್ದರಿಂದ ಇದು ನೈಜ, ಸುರಕ್ಷಿತ ಮತ್ತು ಶುದ್ಧವಾಗಿದೆ. 

3. ಚಿನ್ನದ ಹೂಡಿಕೆ ಅಪಾಯಕಾರಿ(Gold investing is too risky)

ಸತ್ಯಾಂಶ:

ಪ್ರತಿಯೊಂದು ಹೂಡಿಕೆಯಲ್ಲಿಯೂ ಅಪಾಯವೆನ್ನುವುದು ಸಾಮಾನ್ಯ ಮತ್ತು ಅವು ಅದರದೇ ಆದ ಅನುಕೂಲಗಳು ಮತ್ತು ಅನಾನುಕೂಲಗಳನ್ನೂ ಹೊಂದಿರುತ್ತದೆ.  ಇದು ಚಿನ್ನಕ್ಕೂ ಅನ್ವಯಿಸುತ್ತದೆ.  ವಾಸ್ತವದಲ್ಲಿ ಚಿನ್ನವು ಷೇರು ಮತ್ತು ಈಕ್ವಿಟಿಗಳಂತಹ ಹೆಚ್ಚು ಬಾಷ್ಪಶೀಲ ಹೂಡಿಕೆಗಳಂತಹ ಕಡಿಮೆ ಅಪಾಯದ ಅಂಶವನ್ನು ಹೊಂದಿದೆ.  

ಚಿನ್ನವು ಯಾವಾಗಲೂ ಬೇಡಿಕೆಯಲ್ಲಿರುವ ಅಮೂಲ್ಯವಾದ ನೈಸರ್ಗಿಕ ಸಂಪನ್ಮೂಲವಾಗಿರುವುದರಿಂದ, ಇದು ಒಂದು ಅಪೇಕ್ಷಣೀಯ ಹೂಡಿಕೆಯಾಗಿದೆ.  ಹಣದುಬ್ಬರ ಮತ್ತು ಅಪಾಯಕಾರಿ ಹೂಡಿಕೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಇದು ಒಂದು ಉತ್ತಮ ಮಾರ್ಗವಾಗಿದೆ.  

4.  ಚಿನ್ನವು ಚಿನ್ನದ ಮಾಲೀಕತ್ವದ ಕಾಗದದ ಪ್ರಮಾಣೀಕರಣವಾಗಿದೆ(Gold is a paper certification of Gold ownership)  

ಸತ್ಯಾಂಶ:

ಅದು ನಿಜವಲ್ಲ.  ನೀವು ನೋಡಲು ಸಾಧ್ಯವಾಗದಿದ್ದರೂ ನೀವು ನಿಜವಾಗಿಯೂ ಚಿನ್ನವನ್ನು ಹೊಂದಬಹುದು.  ಯಾವುದೇ ಮೊತ್ತವನ್ನು ಲೆಕ್ಕಿಸದೆ ಖರೀದಿಸಿದ ಪ್ರತೀ ಚಿನ್ನವನ್ನು ಸುರಕ್ಷಿತ ಮತ್ತು ವಿಮೆ ಮಾಡಿದ ವಾಲ್ಟ್ ನಲ್ಲಿ ಇಡಲಾಗುತ್ತದೆ.   ಗ್ರಾಹಕರು ಖರೀದಿಸಿದ ಚಿನ್ನವನ್ನು ಯಾವುದೇ ಕ್ಷಣದಲ್ಲಿ ಪಡೆದುಕೊಂಡು, ಅದರ ವಿತರಣೆಯನ್ನು ತೆಗೆದುಕೊಳ್ಳಬಹುದು. 

5. ಚಿನ್ನವು ಕೆಟ್ಟ ಹೂಡಿಕೆಯಾಗಿದ್ದು, ಇದರಿಂದ ಯಾವುದೇ ಲಾಭವಿಲ್ಲ(Gold is a bad investment. It doesn't bear any interest)

ಸತ್ಯಾಂಶ:

ಸತ್ಯಕ್ಕೆ ಇದು ವಿರುದ್ಧವಾಗಿದೆ.  ನಿಜವಾಗಿಯೂ ಉತ್ತಮವಾಗಿ ಯೋಜಿಸಿಲಾದ ಚಿನ್ನದ ಹೂಡಿಕೆಗಳು ಉತ್ತಮ ಪಾವತಿಯನ್ನೊಳಗೊಂಡಿರುತ್ತದೆ.  

ಚಿನ್ನದ ಖರೀದಿ ಎಂದರೆ ಒಂದು ರೀತಿಯ ಹಣವನ್ನು ಇಟ್ಟುಕೊಂಡ ಹಾಗೆ.   ಇದು ಅಪಾಯಕಾರಿ ಷೇರು ಖರೀದಿಗಳಿಗೆ ಹೋಲಿಸಿದರೆ ಇದು ಭದ್ರತೆಯನ್ನು ಹೆಚ್ಚಿಸುತ್ತದೆ.  ಚಿನ್ನವು ನಿಮ್ಮ ಬಂಡವಾಳವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ, ಹಣದುಬ್ಬರಕ್ಕೆ ಬೇಲಿಯಂತಿರುತ್ತದೆ ಮತ್ತು ಅತ್ಯುತ್ತಮ ದೀರ್ಘಾವಧಿಯ ಬಂಡವಾಳ ಆದಾಯವನ್ನು ಒದಗಿಸುತ್ತದೆ.  

ಸರಕುಗಳಿಗೆ ಹೆಚ್ಚುವರಿ ಸವಲತ್ತುಗಳೊಂದಿಗೆ 20% ನಷ್ಟು ತೆರಿಗೆಯನ್ನು ವಿಧಿಸಲಾದ ನಂತರ ಧೀರ್ಘಾವಧಿಯ ಬಂಡವಾಳದ ಲಾಭಗಳು ದೊರೆಯುತ್ತದೆ.  (ಅವರು ಮೂರು ವರ್ಷದ ವಯಸ್ಸಿನವರಾಗಿದ್ದರೂ ಸಹ).

ಕಳೆದ 92 ವರ್ಷಗಳಿಂದ, ಚಿನ್ನದ ಬೆಲೆ ನಿರಂತರವಾಗಿ ಏರುತ್ತಲೇ ಇದೆ.   ಚಿನ್ನವು ಸ್ವಾಭಾವಿಕ ಮೌಲ್ಯವಾಗಿದ್ದು, ಭಾರತದಲ್ಲಿ ಹೆಚ್ಚು ಆದಾಯವುಳ್ಳ ಒಂದು ಅಮೂಲ್ಯ ವಸ್ತುವಾಗಿದೆ.  

ಚಿನ್ನದಂತೆಯೇ ಮರುಮಾರಾಟದ ಮೌಲ್ಯವನ್ನು ಹೊಂದಿರದ ವಜ್ರಗಳು ಅಥವಾ ಪ್ಲಾಟಿನಂಗೆ ಹೋಲಿಸಿದರೆ ಚಿನ್ನವು ಸಾಂಪ್ರದಾಯಿಕವಾಗಿ ಘನ ಹೂಡಿಕೆಗೆ  ಪರ್ಯಾಯವಾಗಿದೆ.   

6. ಚಿನ್ನ ಖರೀದಿ ಜಟಿಲ ಮತ್ತು ಸಾಕಷ್ಟು ದಾಖಲೆಗಳನ್ನು ಒದಗಿಸಬೇಕಾಗುತ್ತದೆ(Purchasing Gold is complicated and takes a lot of paperwork)

ಸತ್ಯಾಂಶ: 

ಡಿಜಿಟಲ್ ಗೋಲ್ಡ್ ತುಂಬಾ ಸರಳ ಮತ್ತು ಅನುಕೂಲಕರವಾಗಿದೆ. ಇದನ್ನು ಪ್ರಾರಂಭಿಸಲು ಬೇಕಾಗಿರುವುದು ಫೋನ್, ಇಂಟರ್ನೆಟ್ ಮತ್ತು ಬ್ಯಾಂಕ್ ಖಾತೆ ಅಥವಾ UPI ಮಾತ್ರ!

ಯಾವುದೇ ಸಮಯದಲ್ಲಿ ಚಿನ್ನವು ನಿಮ್ಮ ಬಳಿಗೆ ಬರಬಹುದು. ನೀವು ಜಾರ್ ಆ್ಯಪ್‌ನಲ್ಲಿ KYC ಇಲ್ಲದೆಯೇ 30  ಗ್ರಾಂ ಡಿಜಿಟಲ್ ಗೋಲ್ಡ್ ಅನ್ನು ಖರೀದಿಸಬಹುದು.  

ಇದು ಆನ್‌ಲೈನ್ ನಲ್ಲಿ ಬೇರೆ ಯಾವುದನ್ನಾದರೂ ಖರೀದಿಸಿದ ಹಾಗೆ.  ವಹಿವಾಟು ರೂ.2 ಲಕ್ಷ ಮೀರಿದ ಸಂದರ್ಭದಲ್ಲಿ ಮಾತ್ರ ಪ್ಯಾನ್ ಕಾರ್ಡ್ನ ಮಾಹಿತಿಯ ಅಗತ್ಯವಿರುತ್ತದೆ. 

7. ಭೌತಿಕ ಚಿನ್ನದಂತಲ್ಲ ಡಿಜಿಟಲ್ ಗೋಲ್ಡ್ (Digital Gold isn't the same as physical Gold)

ಸತ್ಯಾಂಶ:  

ಹೌದು, ಇದು ಸತ್ಯ! 0.5 ಗ್ರಾಂ ತಲುಪುತ್ತಿದ್ದಂತೆ ನೀವು ನಿಮ್ಮ ಚಿನ್ನದ ಬ್ಯಾಲೆನ್ಸ್ ಅನ್ನು ಭೌತಿಕ ಚಿನ್ನಕ್ಕೆ ಪರಿವರ್ತಿಸಬಹುದು (ನಾಣ್ಯಗಳು ಅಥವಾ ಆಭರಣಗಳು). 

ಜಾರ್ ಆ್ಯಪ್ ಅನ್ನು ಬಳಸಿಕೊಂಡು ನೀವು ಹಣವನ್ನು ಹಿಂಪಡೆಯಬಹುದು ಅಥವಾ ಭೌತಿಕ ಚಿನ್ನಕ್ಕೆ ಪರಿವರ್ತಿಸಿ ಅದನ್ನು ಯಾವುದೇ ಸಮಯದಲ್ಲಿ ನಿಮ್ಮ ಮನೆಗೆ ತಲುಪಿಸಿಕೊಳ್ಳಬಹುದು.  

ವಾಸ್ತವವಾಗಿ,  ಇದು ಭೌತಿಕ ಚಿನ್ನಕ್ಕಿಂತ ಉತ್ತಮವಾಗಿದ್ದು, ನಿಮ್ಮ ಖರ್ಚಿಗೆ ಅನುಗುಣವಾಗಿ ಇದನ್ನು ಹಲವು ಬಗೆಯಲ್ಲಿ ಉಳಿಸಬಹುದಾಗಿದೆ.  

ನೀವು ಒಂದೇ ಬಾರಿಗೆ ದುಬಾರಿ ಆಭರಣಗಳು ಅಥವಾ ನಾಣ್ಯಗಳೊಂದಿಗೆ ಬ್ಯಾಂಕ್ ನಲ್ಲಿನ ಉಳಿತಾಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲಾಗುವುದಿಲ್ಲ. ಏಕೆಂದರೆ ನಿಮ್ಮ ಚಿನ್ನವನ್ನು ಚಿನ್ನದ ಬ್ಯಾಂಕುಗಳೊಂದಿಗೆ ವಾಲ್ಟ್ ಗಳಲ್ಲಿ ಸಂಗ್ರಹಿಸಿಡಲಾಗಿರುತ್ತದೆ ಹಾಗೂ ಅದನ್ನು ಸಂಪೂರ್ಣವಾಗಿ ವಿಮೆ ಮಾಡಲಾಗಿರುತ್ತದೆ.  ಆದ್ದರಿಂದ ಕಳ್ಳತನದ ಅಪಾಯವಿರುವುದಿಲ್ಲ.  

8. ಈಕ್ವಿಟಿಗಳಲ್ಲಿ ಧೀರ್ಘಾವಧಿಯ ಆದಾಯವು ಉತ್ತಮವಾಗಿರುತ್ತದೆ(Long-term returns are best in equities)

ಸತ್ಯಾಂಶ:

  ಇದು ಯಾವಾಗಲೂ ಅಲ್ಲ.  ಚಿನ್ನವು ಆಗಾಗ್ಗೆ ಇತರ ಸ್ವತ್ತುಗಳನ್ನು ಮೀರಿಸುತ್ತಿರುತ್ತದೆ.  ಕಳೆದ 5 ಮತ್ತು 10  ವರ್ಷಗಳಲ್ಲಿ ನೀವು ಡೇಟಾವನ್ನು ಪರಿಶೀಲಿಸಿದರೆ, ಆದಾಯವು ನಿಯಮಿತವಾಗಿ ಈಕ್ವಿಟಿಗಳಿಗಿಂತ ಉತ್ತಮವಾಗಿರುವುದನ್ನು ನೋಡಬಹುದು. 

ವಾಸ್ತವದಲ್ಲಿ ಚಿನ್ನದಲ್ಲಿನ ಉಳಿತಾಯವು ಷೇರು ಮಾರುಕಟ್ಟೆಯಲ್ಲಿನ ಭಾರಿ ಏರಿಳಿತಗಳಿಂದ  ನಿಮ್ಮನ್ನು ರಕ್ಷಿಸುತ್ತದೆ.  

9. ಇಲ್ಲಿ ಹೆಚ್ಚುವರಿ ಗುಪ್ತ ಶುಲ್ಕಗಳು ಮತ್ತು ಹೆಚ್ಚಿನ ಶೇಖರಣಾ ಬೆಲೆಗಳಿವೆ (There are additional hidden charges and high storage prices)

ಸತ್ಯಾಂಶ:

 ಜಾರ್ ಪಾರದರ್ಶಕತೆಯಲ್ಲಿ ದೃಢ ನಂಬಿಕೆಯನ್ನು ಹೊಂದಿದೆ.  ನೀವು ಜಾರ್ ಆ್ಯಪ್ ಅನ್ನು ಬಳಸಿ ಹೂಡಿಕೆ ಮಾಡಿದಾಗ, ನೀವು 24 ಕ್ಯಾರೆಟ್ ಶುದ್ಧ ಚಿನ್ನವನ್ನು ಮಾತ್ರ ವ್ಯಾಪಾರ ಮಾಡುತ್ತೀರಿ. 

ನೀವು ಖರ್ಚು ಮಾಡುವ ಎಲ್ಲಾ ಮೊತ್ತವನ್ನೂ ಚಿನ್ನದಲ್ಲಿ ಹೂಡಿಕೆ ಮಾಡಲಾಗುತ್ತದೆ.  ಖರೀದಿಯ ಸಮಯದಲ್ಲಿ ನಿಮಗೆ ಕೇವಲ 3 % ನಷ್ಟು GST ವಿಧಿಸಲಾಗುತ್ತದೆ.  

ಇಲ್ಲಿ ಯಾವುದೇ ಹೆಚ್ಚುವರಿ ಶುಲ್ಕಗಳು ಅಥವಾ ಶೇಖರಣಾ ಶುಲ್ಕಗಳಿರುವುದಿಲ್ಲ.  ಎಲ್ಲಾ ಡಿಜಿಟಲ್ ಗೋಲ್ಡ್ ನಲ್ಲಿ ಹೆಚ್ಚುವರಿ ಸೆಕ್ಯುರಿಟಿ ವಾಲ್ಟ್ ಗಳಲ್ಲಿ ಉಚಿತವಾಗಿ ಸಂಗ್ರಹಿಸಲಾಗುತ್ತದೆ ಮತ್ತು ಸಂಪೂರ್ಣವಾಗಿ ವಿಮೆ ಮಾಡಲಾಗಿರುತ್ತದೆ.  

ಡಿಜಿಟಲ್ ಗೋಲ್ಡ್ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಇಲ್ಲಿ ಓದಿ. ಭೌತಿಕ ಚಿನ್ನಕ್ಕಿಂತ ಡಿಜಿಟಲ್ ಗೋಲ್ಡ್  ಹೇಗೆ ಉತ್ತಮವಾಗಿದೆ ಎಂಬುದನ್ನು ಇಲ್ಲಿ ಅನ್ವೇಷಿಸಿ. 

ಈಗ ನಾವು ಗಾಳಿಸುದ್ದಿಗಳಿಗೆ ಉತ್ತರಿಸಿ, ನಿಜಾಂಶವನ್ನು ತಿಳಿಸಿದ್ದೇವೆ.  ಡಿಜಿಟಲ್ ಗೋಲ್ಡ್ ಒಂದು ಉತ್ತಮ ಪ್ರಯತ್ನವಾಗಿದೆ ಎಂದು ನೀವು ಈಗ ಒಪ್ಪುತ್ತೀರಲ್ಲವೇ?  ಈ ಅವಕಾಶದಿಂದ ವಂಚಿತರಾಗಬೇಡಿ.  ಇದು ಕೇವಲ 45 ಸೆಕೆಂಡುಗಳನ್ನು ಮತ್ತು 1 ರೂಪಾಯಿಯನ್ನು ಮಾತ್ರ ತೆಗೆದುಕೊಗಳ್ಳುತ್ತದೆ. 

ಜಾರ್ ಡಿಜಿಟಲ್ ಹೂಡಿಕೆ ಆ್ಯಪ್ ಗಿಂತ ಹೆಚ್ಚು.  ಇದು ಬ್ಯಾಂಕ್ ಖಾತೆಯನ್ನು ಖಾಲಿ ಮಾಡದೆಯೇ ಹಣವನ್ನು ಉಳಿಸುವ ಸ್ವಯಂಚಾಲಿತ ಹೂಡಿಕೆಯ ಸಾಧನವಾಗಿದೆ.  ಹಾಗಾದರೆ ನಿಮ್ಮ ಉಳಿತಾಯವನ್ನು ಹೆಚ್ಚಿಸಿ.  

ಜಾರ್ ಆ್ಯಪ್ ನೊಂದಿಗೆ ಈಗಿನಿಂದಲೇ ಡಿಜಿಟಲ್ ಗೋಲ್ಡ್ ನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿ!

 

Subscribe to our newsletter
Thank you! Your submission has been received!
Oops! Something went wrong while submitting the form.