ಡಿಜಿಟಲ್ ಗೋಲ್ಡ್ ಬಗ್ಗೆ ಪದೇ ಪದೇ ಕೇಳಲಾದ 8 ಪ್ರಶ್ನೆಗಳಿಗೆ ಉತ್ತರಗಳು

Author Team Jar
Date Aug 25, 2025
Read Time Calculating...
ಡಿಜಿಟಲ್ ಗೋಲ್ಡ್ ಬಗ್ಗೆ ಪದೇ ಪದೇ ಕೇಳಲಾದ 8 ಪ್ರಶ್ನೆಗಳಿಗೆ ಉತ್ತರಗಳು

ಡಿಜಿಟಲ್ ಗೋಲ್ಡ್ ಖರೀದಿಸಬೇಕೇ? ಇದರ ಬಗ್ಗೆ ಪ್ರಶ್ನೆಗಳು ಮತ್ತು ಸಂಶಯಗಳಿವೆಯೇ? ಡಿಜಿಟಲ್ ಗೋಲ್ಡ್ ನ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳಿಗೆ ಜಾರ್ ನ ಉತ್ತರಗಳಿಗಾಗಿ ಮುಂದೆ ಓದಿ.

₹1 ರಲ್ಲಿ  ಚಿನ್ನದ ಖರೀದಿ ಸಾಧ್ಯವೇ? ಸಾಧಾರಣ ಆಭರಣ ಅಂಗಡಿಗಳಲ್ಲಂತೂ ಸಾಧ್ಯವಿಲ್ಲ. ಆದರೆ ನೀವೀಗ ಚಿನ್ನವನ್ನು ಡಿಜಿಟಲ್ ರೂಪದಲ್ಲಿ ಖರೀದಿಸಬಹುದು, ₹1 ಯಷ್ಟು ಕಡಿಮೆ ಬೆಲೆಯಲ್ಲಿ. ರೋಚಕ, ಅಲ್ಲವೇ?

ಇತ್ತೀಚಿನ ವರ್ಷಗಳಲ್ಲಿ, ಚಿನ್ನದ ಮಾರುಕಟ್ಟೆಗೆ ಡಿಜಿಟಲ್ ಕ್ರಾಂತಿ ಹರಡಿರುವುದರಿಂದ, ಈ ರೀತಿಯ ಹೂಡಿಕೆಯನ್ನು ಪರಿಚಯಿಸಲಾಗಿದೆ - ಡಿಜಿಟಲ್ ಗೋಲ್ಡ್.

ಭಾರತದಲ್ಲಿ, ಡಿಜಿಟಲ್ ಗೋಲ್ಡ್ ಒಂದು ಹೊಸ ಪರಿಕಲ್ಪನೆಯಾಗಿದೆ. ಆದ್ದರಿಂದಲೇ, ಹಲವಾರು ಪ್ರಶ್ನೆಗಳು ಮತ್ತು ಸಂಶಯಗಳು ಗಾಳಿಯಲ್ಲಿ ಹರಿದಾಡುತ್ತಿವೆ.

ಜಾರ್ ನಲ್ಲಿ ನಾವು, ನೀವು ಡಿಜಿಟಲ್ ಗೋಲ್ಡ್ ಬಗ್ಗೆ ಪದೇ ಪದೇ ಕೇಳಿದ 8 ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಲು ನಿಮ್ಮೊಂದಿಗಿದ್ದೇವೆ;

ಡಿಜಿಟಲ್ ಗೋಲ್ಡ್ ಎಂದರೇನು?

  ಡಿಜಿಟಲ್ ಗೋಲ್ಡ್ ಎಂದರೆ ಭೌತಿಕವಾಗಿ ಚಿನ್ನವನ್ನು ಮುಟ್ಟದೆಯೇ ಆನ್ಲೈನ್ ವಾಹಿನಿಗಳ ಮೂಲಕ ಚಿನ್ನವನ್ನು ಖರೀದಿಸುವ ಆಧುನಿಕ ವಿಧವಾಗಿದೆ. 

ಆದ್ದರಿಂದ ನೀವು ಚಿನ್ನ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, ಇದು ಹೆಚ್ಚು ಅನುಕೂಲಕರ, ಸುರಕ್ಷಿತ ಹಾಗೂ ಕಡಿಮೆ ಬೆಲೆಯ ಆಯ್ಕೆಯಾಗಿದೆ.

ನೀವು ಖರೀದಿಸುವ ಪ್ರತಿಯೊಂದು ಗ್ರಾಮ್ ಚಿನ್ನಕ್ಕೂ, ಭಾರತದ ಮೂರು ಗೋಲ್ಡ್ ಬ್ಯಾಂಕ್ ಗಳಾದ ಔಗ್ಮಂಟ್, ಎಂ ಎಂ ಟಿ ಸಿ - ಪಿ ಎ ಎಂ ಪಿ ಮತ್ತು ಸೇಫ್ ಗೋಲ್ಡ್ ರಲ್ಲಿ ಒಂದರಲ್ಲಿ ನಿಮ್ಮ ಹೆಸರಿನ ಲಾಕರಿನಲ್ಲಿ 24 ಕೆ ಯ ನೈಜ ಚಿನ್ನವನ್ನು ಸುರಕ್ಷಿತವಾಗಿ ಇಡಲಾಗುತ್ತದೆ. 

ಅಪ್ ಬಟನ್ ನ ಒಂದು ಕ್ಲಿಕ್ಕಿನಲ್ಲಿಯೇ, ನೀವು ಭೌತಿಕ ಚಿನ್ನವನ್ನು ಖರೀದಿಸಬಹುದು, ಮಾರಾಟ ಮಾಡಬಹುದು ಅಥವಾ ಹೋಮ್ ಡೆಲಿವರಿಯ ಮನವಿಯನ್ನು ಮಾಡಬಹುದು.

ಇಲ್ಲಿ ಉತ್ತಮ ವಿಷಯವೇನೆಂದರೆ, ಡಿಜಿಟಲ್ ಗೋಲ್ಡ್ ಗೆ ಕನಿಷ್ಟ ಖರೀದಿಯ ಮಿತಿಯಿಲ್ಲ. ನೀವು ₹1 ಯಷ್ಟು ಕಡಿಮೆ ಬೆಲೆಯಿಂದ ಆರಂಭಿಸಿ ಮೇಲೆ ಏರಬಹುದು.

ಡಿಜಿಟಲ್ ಗೋಲ್ಡ್ ಅನ್ನು ಖರೀದಿಸುವುದು ಎಲ್ಲಿ?

ನೀವು ಡಿಜಿಟಲ್ ಗೋಲ್ಡ್ ಅನ್ನು ಯಾವುದೇ ನೋಂದಾಯಿತ ಆಪ್ ನಿಂದ ಅಥವಾ ಮಧ್ಯಸ್ಥರಿಂದ ಖರೀದಿಸಬಹುದು. ಇದಾಹರಣೆಗೆ ಪೇಟಿಎಂ, ಫೋನ್ ಪೇ, ಗೂಗಲ್ ಪೇ ಇತ್ಯಾದಿ. ಇದನ್ನು ಜಾರ್ ನಿಂದಲೂ ಖರೀದಿಸಬಹುದು ₹1 ರಷ್ಟು ಕಡಿಮೆ ಬೆಲೆಯಲ್ಲಿ.

ಎನ್ ಸಿ ಪಿ ಐ ಮತ್ತು ಮಾರುಕಟ್ಟೆಯ ಮುಂಚೂಣಿಯ ಯುಪಿಐ ಸರ್ವಿಸ್ ಪ್ರೊವೈಡರ್ ಗಳ ಬೆಂಬಲ ಹೊಂದಿರುವ ಜಾರ್ ಆಪ್, ನಿಮ್ಮ ಹಣವನ್ನು ಸ್ವಯಂಚಾಲಿತವಾಗಿಯೇ ಡಿಜಿಟಲ್ ಗೋಲ್ಡ್ ನಲ್ಲಿ  ಹೂಡಿಕೆ ಮಾಡುತ್ತದೆ. ಇದರಿಂದ ನಿಮಗೆ ಪ್ರತಿದಿನ ಉಳಿತಾಯ ಮಾಡಲು ಪ್ರೋತ್ಸಾಹನೆ ದೊರೆಯುತ್ತದೆ. ಜಾರ್ ಆಪ್ ನ ಲಾಭವನ್ನು ಹೇಗೆ ಪಡೆದುಕೊಳ್ಳುವುದು ಎಂಬುವುದರ ಬಗ್ಗೆ ತಿಳಿಯಿರಿ.

ಕೆ ವೈ ಸಿ ಇಲ್ಲದೆಯೇ, ಡಿಜಿಟಲ್ ಗೋಲ್ಡ್ ಅನ್ನು ಖರೀದಿಸಬಹುದು, ಆದರೆ ಒಂದು ನಿರ್ದಿಷ್ಟ ಪ್ರಮಾಣದವರೆಗೆ ಮಾತ್ರ, ಇದು ವೇದಿಕೆಯನ್ನು ಅವಲಂಬಿಸಿದೆ.

ಕೆಲ ಜನಪ್ರಿಯ ಆಪ್ ಗಳು ನಿಮಗೆ ಕೆ ವೈ ಸಿ ಪ್ರಕ್ರಿಯೆಯಿಲ್ಲದೆಯೇ ₹50,000 ದಷ್ಟು ಚಿನ್ನವನ್ನು ಖರೀದಿಸುವ ಅನುಮತಿಯನ್ನು ನೀಡುತ್ತದೆ, ಜಾರ್ ನಂತೆಯೇ. 

ಡಿಜಿಟಲ್ ಗೋಲ್ಡ್ ನ ಅನುಕೂಲಗಳು ಹಾಗೂ ಅನಾನುಕೂಲಗಳು?

ಡಿಜಿಟಲ್ ಗೋಲ್ಡ್ ನಲ್ಲಿ ಹೂಡಿಕೆ ಮಾಡುವ ಅನೂಕೂಲಗಳು:

  • ಡಿಜಿಟಲ್ ಗೋಲ್ಡ್ ನ ಲೆಕ್ಕವಿಡುವುದು ಸುಲಭವಾಗಿದ್ದು, ಎಲ್ಲಾ ಸಮಯದಲ್ಲಿ ಇದು ಲಭ್ಯವಿರುತ್ತದೆ.
  • ಇದರ ದ್ರವ್ಯತೆಯ ಪ್ರಮಾಣ ಹೆಚ್ಚಿದ್ದು ಇದು ಖರೀದಿಗಾಗಿ ದಿನದ 24 ಘಂಟೆ, ವಾರದ 7 ದಿನಗಳು,ವರ್ಷದ 365  ದಿನಗಳಲ್ಲೂ ಲಭ್ಯವಿದೆ, ರಜೆಗಳನ್ನೂ ಸೇರಿ.
  • ಚಿನ್ನವನ್ನು ಹಣದುಬ್ಬರಕ್ಕೆ ತಡೆಯಾಗಿ ಹಾಗೂ ಸಾಲಗಳಿಗೆ ಮೇಲಾಧಾರವಾಗಿಯೂ ಕಾಣಲಾಗುತ್ತದೆ.
  •  ಕಳೆದ 92 ವರ್ಷಗಳಿಂದ, ಚಿನ್ನದ ದರವು ವರ್ಷದಿಂದ ವರ್ಷಕ್ಕೆ ಏರುತ್ತಿದೆ. ಚಿನ್ನಕ್ಕೆ ಆಂತರಿಕ ಮೌಲ್ಯವಿದ್ದು, ಭಾರತದಲ್ಲಿ ಇದು ಸಾಂಸ್ಕೃತಿಕ ಮಹತ್ವವನ್ನು ಹೊರತುಪಡಿಸಿ, ಉತ್ತಮ ರಿಟರ್ನ್ ಗಳಿರುವ ಅದ್ಭುತ ಆಸ್ತಿಯೂ ಆಗಿದೆ.

ಡಿಜಿಟಲ್ ಗೋಲ್ಡ್ ನಲ್ಲಿ ಹೂಡಿಕೆ ಮಾಡುವ ಅನಾನುಕೂಲಗಳು:

  • ಇದು ನಿಮಗೆ ಯಾವುದೇ ರೀತಿಯ ನಿಷ್ಕ್ರಿಯ ಆದಾಯವನ್ನು ನೀಡುವುದಿಲ್ಲ ಅಂದರೆ ನಿಮ್ಮ ಹೂಡಿಕೆ ಮೇಲೆ ನಿಮಗೆ ಯಾವುದೇ ಬಡ್ಡಿ ದೊರೆಯುವುದಿಲ್ಲ.
  • ಇನ್ನೊಂದು ಕೊರತೆ ಏನೆಂದರೆ ಡಿಜಿಟಲ್ ಗೋಲ್ಡ್ SBI ಅಥವಾ SEBI ನಿಯಮಗಳಿಗೆ ಬಾಧ್ಯವಲ್ಲ.
  • ಹಲವು ಪಾಲುದಾರ ಸೈಟ್ ಗಳಲ್ಲಿ, ಹೂಡಿಕೆ ಮಾಡಬಹುದಾದ ಗರಿಷ್ಟ ಚಿನ್ನದ ಮೊತ್ತವು ರೂ 2 ಲಕ್ಷವಾಗಿದೆ, ಇದರಿಂದ ಕೆಲವು ಹೂಡಿಕೆದಾರರಿಗೆ ತೊಡಕಾಗಬಹುದು.
  • ಹೋಲ್ಡಿಂಗ್ ಉದ್ಯಮಗಳು ಡೆಲಿವರಿಯ ಸಮಯದಲ್ಲಿ ನಿಮ್ಮ ಡಿಜಿಟಲ್ ಗೋಲ್ಡ್ ಅನ್ನು ಹಿಡಿದಿಟ್ಟಿರುವುದಕ್ಕಾಗಿ ಚಿಕ್ಕ ನಿರ್ವಹಣಾ ಶುಲ್ಕವನ್ನು ವಿಧಿಸುತ್ತಾರೆ.

  

 ಡಿಜಿಟಲ್ ಗೋಲ್ಡ್ ಅನ್ನು ಖರೀದಿಸುವುದು ಹೇಗೆ?

ಇದರ ಖರೀದಿಯ ಸರಳತೆ ಹಾಗೂ ಅನುಕೂಲಗಳಿಂದಾಗಿ ಇತರ ಹೂಡಿಕೆಗಳಿಗೆ ಹೋಲಿಸಿದಾಗ ಡಿಜಿಟಲ್ ಗೋಲ್ಡ್ ಉತ್ತಮ ಆಯ್ಕೆಯಾಗುತ್ತದೆ.

ಇದು ಒಂದು ಪಿಜಾ ಅಥವಾ ಒಂದು ಟಾಪ್ ಆರ್ಡರ್ ಮಾಡಿದಂತೆಯೇ ಆಗಿದೆ. ನಿಮಗೆ ಬೇಕಾಗಿರುವುದು ಇಷ್ಟೇ:

  • ಜಾರ್, ಪೇಟಿಎಂ, ಕಲ್ಯಾಣ್ ಜ್ಯುವೆಲ್ಲರ್ಸ್, ಫೋನ್ ಪೇ, ಗೂಗಲ್ ಪೇ ಇತ್ಯಾದಿಯಂತಹ ಯಾವುದೇ ಚಿನ್ನದ ಹೂಡಿಕೆಯೆ ವೇದಿಕೆಗೆ ಹೋಗಿ.
  • ‘ಗೋಲ್ಡ್ ಲಾಕರ್/ವಾಲ್ಟ್’ ಆಪ್ಷನ್ ಅನ್ನು ಆಯ್ಕೆ ಮಾಡಿ.
  • ನೀವು ಡಿಜಿಟಲ್ ಗೋಲ್ಡ್ ನಲ್ಲಿ ಹೂಡಿಕೆ ಮಾಡಲು ಬಯಸುವ ಮೊತ್ತವನ್ನು ನಮೂದಿಸಿ. ಡಿಜಿಟಲ್ ಗೋಲ್ಡ್ ನ ದರವು ಮಾರುಕಟ್ಟೆಯ ಏರುಪೇರುಗಳಿಂದ ಸ್ವತಂತ್ರವಾಗಿರುವುದರಿಂದ, ನೀವು ಮಧ್ಯಸ್ಥರು ನಿಗದಿ ಪಡಿಸಿದ ದರದಲ್ಲಿ ಅಥವಾ ತೂಕದ ಪ್ರಕಾರ ಇದನ್ನು ಖರೀದಿಸಬಹುದು.
  • ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ ನಿಮ್ಮ ವಾಲೆಟ್ ನಿಂದಲೇ ನೀವು ಪಾವತಿಯನ್ನು ಮಾಡಬಹುದು.  
  • ತದನಂತರ ಕ್ರೆಡಿಟ್ ಆದ ಗೋಲ್ಡ್ ನ ಮೊತ್ತವು ತಕ್ಷಣವೇ ಅಪ್ಡೇಟ್ ಆಗುತ್ತದೆ, ಹಾಗೂ ನಿಮ್ಮ ಡಿಜಿಟಲ್ ಗೋಲ್ಡ್ ಅನ್ನು 100% ಸುರಕ್ಷಿತವಾಗಿರುವ ವಾಲ್ಟ್ ನಲ್ಲಿ ಇಡಲಾಗುತ್ತೆದೆ.
  • ಡಿಜಿಟಲ್ ಗೋಲ್ಡ್ ಅನ್ನು ತಕ್ಷಣವೇ ಖರೀದಿ ಅಥವಾ ಮಾರಾಟ ಮಾಡಬಹುದು. ಹೂಡಿಕೆದಾರರು ಡಿಜಿಟಲ್ ಗೋಲ್ಡ್ ಅನ್ನು ಆದ್ಯತೆಯ ಪ್ರಕಾರ ಗಟ್ಟಿ ಅಥವಾ ನಾಣ್ಯಗಳ ರೂಪದದಲ್ಲಿ ಪಡೆಯಬಹುದು. ಹಲವು ಡಿಜಿಟಲ್ ಗೋಲ್ಡ್ ಮಧ್ಯಸ್ಥರು ಡೆಲಿವರಿ ಮಿತಿಯನ್ನು ಹೊಂದಿದ್ದು, ಅದು ಮೀರಿದರೆ ಶುಲ್ಕವನ್ನು ವಿಧಿಸುತ್ತಾರೆ.

 ನಾನು ಡಿಜಿಟಲ್ ಗೋಲ್ಡ್ ನಲ್ಲಿ ಏಕೆ ಹೂಡಿಕೆ ಮಾಡಬೇಕು?

ಡಿಜಿಟಲ್ ಗೋಲ್ಡ್ ಒಂದು ಉತ್ತಮ ಹೂಡಿಕೆಯ ಆಯ್ಕೆ ಎನ್ನಲು ಹಲವಾರು ಕಾರಣಗಳಿವೆ.

  • ಹೂಡಿಕೆಯ ಗಾತ್ರ (Investment Size) : ಡಿಜಿಟಲ್ ಗೋಲ್ದ್ ನಲ್ಲಿ ಹೂಡಿಕೆ ಮಾಡುವುದು ನಿಭಾಯಿಸಬಲ್ಲ ಆಯ್ಕೆಯಾಗಿದೆ, ಹಾಗೂ ನೀವು ₹1 ರಷ್ಟು ಕಡಿಮೆ ಬೆಲೆಗೆ ಇದರ ಖರೀದಿ ಅಥವಾ ಮಾರಾಟ ಮಾಡಬಹುದು.
  • ಸಂಗ್ರಹಣೆ ಹಾಗೂ ಸುರಕ್ಷತೆ(Storage and Safety) : ಡಿಜಿಟಲ್ ಗೋಲ್ಡ್ ನಲ್ಲಿ ಸಂಗ್ರಹಣೆ ಹಾಗೂ ಸುರಕ್ಷತೆಯ ಸಮಸ್ಯೆಯಿಲ್ಲ. ನಿಮ್ಮ ಖಾತೆಯಲ್ಲಿರುವ ಪ್ರತಿಯೊಂದು ಗ್ರಾಮ್ ಚಿನ್ನಕ್ಕೂ,ಮಾರಾಟಗಾರರು ನಿಮ್ಮ ಹೆಸರಿನ ಲಾಕರಿನಲ್ಲಿ 24 ಕೆ ಯ ನೈಜ ಚಿನ್ನವನ್ನು ಸುರಕ್ಷಿತವಾಗಿ ಇಡುತ್ತಾರೆ. ಇದರರ್ಥ ನೀವು ಯಾವತ್ತೂ ಅಪಾಯದಲ್ಲಿರುವುದಿಲ್ಲ.
  • ಹೆಚ್ಚಿನ ದ್ರವ್ಯತೆ(‍High Liquidity ): ಚಿನ್ನವು ಅತ್ಯಂತ ದ್ರವ್ಯತೆಯುಳ್ಳ ವಸ್ತುವಾಗಿದೆ. ಡಿಜಿಟಲ್ ಗೋಲ್ಡ್ ಅನ್ನು ಎಲ್ಲಿ ಬೇಕಾದರೂ ಯಾವಾಗ ಬೇಕಾದರೂ ಖರೀದಿ ಅಥವಾ ಮಾರಾಟ ಮಾಡಬಹುದು.  ಭವಿಷ್ಯದಲ್ಲಿ ಚಿನ್ನಕ್ಕೆ ಪೂರ್ತಿ ರೇಸೇಲ್ ಮೌಲ್ಯ ಪಡೆಯುವುದಕ್ಕಾಗಿ ನೀವು ವರ್ಷಾನುಗಟ್ಟಲೆ ಒಂದು ಬಧ್ರ ಚಿನ್ನದ ಖರೀದಿಯ ಖಾತೆಯನ್ನುನಿರ್ವಹಿಸುವ ಅಗತ್ಯವಿಲ್ಲ.
  • ವ್ಯಾಪಾರ(Trading) :  ಡಿಜಿಟಲ್ ಗೋಲ್ಡ್ ಅನ್ನು ಎಲ್ಲಿ ಬೇಕಾದರೂ ಯಾವಾಗ ಬೇಕಾದರೂ ಸರಳ ಹೆಜ್ಜೆಗಳಲ್ಲಿ ಖರೀದಿ ಅಥವಾ ಮಾರಾಟ ಮಾಡಬಹುದು. ಹಣವು ನೇರವಾಗಿ ನಿಮ್ಮ ಬ್ಯಾಂಕ್ ಖಾತೆ ಅಥವಾ ನೋಂದಾಯಿತ ವಾಲೆಟ್ ನಲ್ಲಿ ಠೇವಣಿ ಮಾಡಲಾಗುತ್ತದೆ.
  • ಗುಪ್ತ ಶುಲ್ಕವಿಲ್ಲದ ಶುದ್ಧ ಚಿನ್ನ(‍ Pure Gold with No Hidden Fees) : ಡಿಜಿಟಲ್ ಗೋಲ್ಡ್ ನಿಮಗೆ ಕೇವಲ ಶುದ್ಧ ಚಿನ್ನ ಎಂದರೆ 24 ಕ್ಯಾರೆಟ್ ಚಿನ್ನದ ವ್ಯವಹಾರ ಮಾಡುವ ಅನುಮತಿ ನೀಡುತ್ತದೆ. ನೀವು ಖರ್ಚು ಮಾಡುವ ಸಂಪೂರ್ಣ ಮೊತ್ತವನ್ನು ಚಿನ್ನದ ಹೂಡಿಕೆಗೆಂದೇ ಬಳಸಲಾಗುತ್ತದೆ. ನೀವು ಒಂದು ಖರೀದಿ ಮಾಡುವಾಗ, ಕೇವಲ  3% ಜಿ ಎಸ್ ಟಿ ಅನ್ನು ನೀಡಬೇಕಾಗುತ್ತದೆ.
  • ಭದ್ರತೆ (Security) :  ನೀವು ಖರೀದಿಸುವ ಪ್ರತಿಯೊಂದು ಗ್ರಾಮ್ ಚಿನ್ನಕ್ಕೂ, ಭಾರತದ ಮೂರು ಗೋಲ್ಡ್ ಬ್ಯಾಂಕ್ ಗಳಾದ ಔಗ್ಮಂಟ್, ಎಂ ಎಂ ಟಿ ಸಿ - ಪಿ ಎ ಎಂ ಪಿ ಮತ್ತು ಸೇಫ್ ಗೋಲ್ಡ್ ರಲ್ಲಿ ಒಂದರಲ್ಲಿ ನಿಮ್ಮ ಹೆಸರಿನ ಲಾಕರಿನಲ್ಲಿ 24 ಕೆ ಯ ನೈಜ ಚಿನ್ನವನ್ನು ಸುರಕ್ಷಿತವಾಗಿ ಇಡಲಾಗುತ್ತದೆ. ಇದರರ್ಥ ನೀವು ಯಾವತ್ತೂ ಅಪಾಯದಲ್ಲಿರುವುದಿಲ್ಲ.

ನಾನು ನನ್ನ ಸ್ಮಾರ್ಟ್ಫೋನ್ ಅನ್ನು ಕಳೆದುಕೊಂಡರೆ, ನನ್ನ ಚಿನ್ನ ಕಣ್ಮರೆಯಾಗುವುದೇ?

ಇಲ್ಲ! ಸ್ಟಾಕ್ ಎಕ್ಸ್ಚೇಂಜ್ ನಲ್ಲಿರುವ ಸ್ಟಾಕ್ ನ ರೀತಿಯಲ್ಲೇ ಡಿಜಿಟಲ್ ಗೋಲ್ಡ್ ಅನ್ನು ನಿಮ್ಮ ಹೆಸರಿನಲ್ಲಿ ನೋಂದಾಯಿಸಲಾಗುತ್ತದೆ.

ಇದನ್ನು ವಾಲ್ಟ್ ನಲ್ಲಿ ಸುರಕ್ಷಿತವಾಗಿಡಲಾಗಿದ್ದು, ಇದರ ಥರ್ಡ್ ಪಾರ್ಟೀ ಟ್ರಸ್ಟೀ ಮೂಲಕ ಇನ್ಶೂರ್ ಮಾಡಲಾಗುತ್ತದೆ ಹಾಗೂ ನಿಗಾ ಇಡಲಾಗುತ್ತದೆ.

ಇದರರ್ಥ, ನಿಮ್ಮ ಆಪ್ ಇಲ್ಲದೇ ಇದ್ದರೂ ಅಥವಾ ನಿಮ್ಮ ಸ್ಮಾರ್ಟ್ಫೋನ್ ಕಳೆದುಹೋದರೂ ನಿಮ್ಮ ಚಿನ್ನ ಸುರಕ್ಷಿತವಾಗಿದೆ ಎಂದು ನೀವು ನಿಶ್ಚಿಂತೆಂಯಿಂದಿರಬಹುದು. 

ಡಿಜಿಟಲ್ ಗೋಲ್ಡ್ ಅನ್ನು ಯಾರು ಖರೀದಿಸಬೇಕು?

ಭೌತಿಕ ಚಿನ್ನವನ್ನು ಖರೀದಿಸಲು ಸಾಧ್ಯವಿಲ್ಲದವರಿಗೆ ಅಥವಾ ಈ ಹಳದಿ ಧಾತು ಮೇಲೆ ಒಂದೇ ಸಮಯದಲ್ಲಿ ದೊಡ್ಡ ಮೊತ್ತದ ಹೂಡಿಕೆ ಮಾಡಲು ಆಗದೇ ಇರುವವರಿಗೆ ಡಿಜಿಟಲ್ ಗೋಲ್ಡ್ ಒಂದು ಆಯ್ಕೆಯಾಗಿದೆ.

ಡಿಜಿಟಲ್ ಗೋಲ್ಡ್ ನ ಶುದ್ಧತೆ 99.9% ಇದ್ದು, ಜಾರ್ ಆಪ್ ಮೂಲಕ ನೀವಿದನ್ನು 1 ರಷ್ಟು ಕಡಿಮೆ ಬೆಲೆಗೂ ಖರೀದಿಸಬಹುದು, ಇದರಿಂದ ಇದನ್ನು ಸುರಕ್ಷಿತವಾಗಿ ಸಂಗ್ರಹಿಸಿಡುವ ಅಗತ್ಯ ಬೀಳುವುದಿಲ್ಲ. 

ಆರಂಭಿಸಲು ನಿಮಗೆ ಬೇಕಾಗಿರುವುದು ಕೇವಲ ನಿಮ್ಮ ಫೋನ್ ಮತ್ತ್ ಜಾರ್ ಆಪ್. ಜಾತ್ ನಿಮಗೆ ಆಟೋ ಇನ್ವೆಸ್ಟಿಂಗ್ ಸೆಟ್ ಮಾಡಲು ಅನುಮತಿ ನೀಡುತ್ತದೆ.

ಡಿಜಿಟಲ್ ಗೋಲ್ಡ್ ನ ಮಾರಾಟದ ಮೇಲೆ ನಾನು ಎಷ್ಟು ತೆರಿಗೆ ಪಾವತಿಸಬೇಕಾಗುತ್ತದೆ?

 ನೀವು ನಿಮ್ಮ ಚಿನ್ನದ ಖರೀದಿಯ ದಿನಾಂಕದಿಂದ ಮೂರು ವರ್ಷಗಳ ಒಳಗಾಗಿ ಮಾಡಿದ ಚಿನ್ನದ ಆಸ್ತಿಯ ಮಾರಾಟದಿಂದ ಬಂದ ಯಾವುದೇ ಸಂಪಾದನೆಯನ್ನು(ಚಿನ್ನದ ಆಭರಣ, ಡಿಜಿಟಲ್ ಗೋಲ್ಡ್ ಅಥವಾ ಕಾಯಿನ್ ಗಳನ್ನು ಸೇರಿಸಿ) ಶಾರ್ಟ್ ಟರ್ಮ್ ಕ್ಯಾಪಿಟಲ್ ಗೈನ್ಸ್ (STCG) ಅಥವಾ ಅಲ್ಪಾವಧಿ ಬಂಡವಾಳ ಲಾಭ ಎನ್ನಲಾಗುತ್ತದೆ. 

ಇದನ್ನು ನಿಮ್ಮ ವಾರ್ಷಿಕ ಆದಾಯಕ್ಕೆ ಸೇರಿಸಲಾಗುತ್ತದೆ, ಹಾಗೂ ನಿಮ್ಮ ಆದಾಯ ಬರುವ ಅತೀ ಹೆಚ್ಚಿನ ತೆರಿಗೆ ಆವರಣದಲ್ಲಿ ಇದಕ್ಕೆ ನೀವು ತೆರಿಗೆಯನ್ನು ತೆರಬೇಕಾಗುತ್ತದೆ.

ಖರೀದಿಯ ಮೂರು ವರ್ಷ ಅಥವಾ ಅದಕ್ಕಿಂತಲೂ ಹೆಚ್ಚಿನ ಅವಧಿಯ ನಂತರ ನೀವು ನಿಮ್ಮ ಆಭರಣ, ಚಿನ್ನದ ನಾಣ್ಯಗಳು ಅಥವಾ ಡಿಜಿಟಲ್ ಗೋಲ್ಡ್ ನ ಮಾರಾಟದಿಂದ ಸಂಪಾದಿಸಿದರೆ , ಮತ್ತೊಂದೆಡೆ, ಇದನ್ನು (LTCG) ಅಥವಾ ದೀರ್ಘಾವಧಿ ಬಂಡವಾಳ ಲಾಭ ಎನ್ನಲಾಗುತ್ತದೆ.

ಇಂತಹ ದೀರ್ಘಾವಧಿ ಬಂಡವಾಳ ಲಾಭಗಳಿಗೆ 20% ತೆರಿಗೆಯನ್ನು ವಿಧಿಸಲಾಗುತ್ತದೆ, ಪ್ಲಸ್ ಹೆಚ್ಚುವರಿ ಹಾಗೂ ಶಿಕ್ಷಣ ಸೆಸ್, ಅನ್ವಯಿಸಿದಲ್ಲಿ.

ಚಿನ್ನವನ್ನು ಭವಿಷ್ಯದ ಬಳಕೆಗಾಗಿ ಚಿನ್ನವನ್ನು ಉಳಿಸಲು ಬಯಸುವವರಿಗಾಗಿ ಇದೊಂದು ಅದ್ಭುತ ಪರ್ಯಾಯವಾಗಿದೆ, ಡಿಲಿವರಿ ಕೂಡಾ ಸರಳ.

ಡಿಜಿಟಲ್ ಗೋಲ್ಡ್ ಖರೀದಿಸಲು ಹಲವಾರು ವಿಧಾನಗಳಿವೆ, ಇವುಗಳಲ್ಲಿ ಒಂದಾಗಿದೆ ಜಾರ್ ಆಪ್, ಇದು ನಿಮಗೆ ಈ ಹಳದಿ ಧಾತುವಿನ ಮೇಲೆ ಸ್ವಯಾಂಚಾಲಿತವಾಗಿಯೇ ಹೂಡಿಕೆ ಮಾಡುವ ಆಯ್ಕೆ ನೀಡುತ್ತದೆ.

ನಿಮ್ಮ ವ್ಯವಹಾರಗಳಿಂದ ಪ್ರತಿದಿನ ಹಣ ಉಳಿಸುವಂತೆ ಮಾಡುವುದರಿಂದ ಜಾರ್ ಆಪ್ ನಿಮ್ಮ ಆರ್ಥಿಕ ಗುರಿಗಳನ್ನು ತಲುಪುವಲ್ಲಿ ನಿಮಗೆ ಸಹಾಯ ಮಾಡುತ್ತದೆ.

ನೀವು ಆಟೋ ಪೇ ವೈಶಿಷ್ಟ್ಯ್ವನ್ನು ಸೆಟ್ ಮಾಡಬಹುದು ಅಥವಾ ನೀವಾಗಿಯೇ ಹೂಡಿಕೆ ಮಾಡಬಹುದು, ₹1 ಇಂದ ಆರಂಭಿಸಿ. ಈ ಆಪ್ ಅನ್ನು ಸೆಟಪ್ ಮಾಡಾಲು ಕೇವಲ 45 ಸೆಕೆಂಡುಗಳು ಹಿಡಿಯುತ್ತವೆ.

ಜಾರ್ ಆಪ್ ಸ್ವಯಂಚಾಲಿತವಾಗಿಯೇ ನಿಮ್ಮ ಬಿಡಿ ಚಿಲ್ಲರೆಗಳನ್ನು ಡಿಜಿಟಲ್ ಗೋಲ್ಡ್ ನಲ್ಲಿ ಹೂಡಿಕೆ ಮಾಡಿ, ನಿಮ್ಮ ಭವಿಷ್ಯಕ್ಕಾಗಿ ಒಂದು ಡಿಜಿಟಲ್ ಗೋಲ್ಡ್ ಪೋರ್ಟ್ಫೋಲಿಯೋ ಅನ್ನು ಬೆಳೆಸುತ್ತದೆ.

ಇಂದೇ ಜಾರ್ ಆಪ್ ನೊಂದಿಗೆ ನಿಮ್ಮ ದೈನಂದಿನ ಉಳಿತಾಯಗಳನ್ನು ಆರಂಭಿಸಿ ಹಾಗೂ ಅದನ್ನು ಡಿಜಿಟಲ್ ಗೋಲ್ಡ್ ಹೂಡಿಕೆಯೊಂದಿಗೆ ಬೆಳೆಯಲು ಬಿಡಿ.

Team Jar

Author

Team Jar

The Jar Team is a dedicated collective of financial content specialists, editors, and investment experts. We are committed to delivering high-impact insights, market updates, and comprehensive guides on micro-savings, digital gold, and the evolving landscape of personal finance. Through clear, data-driven content, we help you navigate Change Jar’s suite of automated savings tools and investment features. Our mission is to provide you with reliable, actionable intelligence that empowers you to build lasting wealth, effortlessly and securely.

download-nudge

Save Money In Digital Gold

Join 4 Cr+ Indians on Jar, India’s Most Trusted Savings App.

Download App Now